ಬಿಜೆಪಿಯ ಹಗಲುಗನಸು!

-ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಾಯಕರು.

ಬಿಜೆಪಿಯವರು ಕಾಂಗ್ರೆಸ್ ಪಕ್ಷ ಮುಕ್ತ ಭಾರತ ನಿರ್ಮಾಣ ಮಾಡುತ್ತೇನೆ ಎನ್ನುವ ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಎನ್ನುವುದು ಚಳವಳಿ ಹಿನ್ನೆಲೆಯಲ್ಲಿ ಬಂದಿರುವ ಸಂಘಟನೆ. ಸ್ವಾತಂತ್ರ್ಯ ನಂತರದ ರಾಜಕೀಯ ಪಕ್ಷವಾಗಿ ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದೆ.

ಕಳೆದ 135 ವರ್ಷಗಳ ಇತಿಹಾಸದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದೆ. ಇಂತಹ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂದು ಬಹಳಷ್ಟು ಜನ ಹೇಳಿ ಹೋಗಿದ್ದಾರೆ. ಆದರೆ ಯಾರಿಂದಲೂ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಸಾಧ್ಯವಾಗಿಲ್ಲ.

ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು? ಯಾವ ಪಕ್ಷವನ್ನು ನಿರ್ಮೂಲನೆ ಮಾಡಬೇಕು? ಎಂಬುದು ಜನತಾ ಜನಾರ್ದನರ ಕೈಲಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುವವರಿಗೆ ಪ್ರಜಾಪ್ರಭುತ್ವದ ತಿರುಳೇ ಗೊತ್ತಿಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ರಥದ ಎರಡು ಚಕ್ರಗಳಿದ್ದಂತೆ. ಒಂದು ಪರಿಣಾಮಕಾರಿಯಾದ ಆಡಳಿತ ಪಕ್ಷ ಮತ್ತು ಪರಿಣಾಮಕಾರಿಯಾದ ವಿರೋಧ ಪಕ್ಷವಿದ್ದಾಗ ಮಾತ್ರ ಪ್ರಜಾಪ್ರಭುತ್ವದ ತೇರು ಉತ್ತಮ ರೀತಿಯಲ್ಲಿ ಮುಂದೆ ಸಾಗಲು ಸಾಧ್ಯವಾಗುತ್ತದೆ. ಇದರ ಅರಿವಿಲ್ಲದ ಬಿಜೆಪಿಯವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಟೀಕಾಕಾರರೂ, ವಿರೋಧ ಪಕ್ಷವೂ ಇರಬೇಕಾಗುತ್ತದೆ. ಇದರ ಅರಿವಿಲ್ಲದೇ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳುವುದು ಬಾಲಿಶವಾಗಿದೆ. ಹೀಗೆ ಹೇಳುತ್ತಿರುವುದರ ಮಧ್ಯೆಯೇ, ಪಂಜಾಬ್, ಚತ್ತೀಸ್‌ಘಡ, ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಬಿಜೆಪಿಯವರು ವಾಮಮಾರ್ಗವನ್ನು ಬಳಸಿ ಅಧಿಕಾರಕ್ಕೆ ಬರುವುದನ್ನು ರೂಢಿಸಿಕೊಂಡಿದೆ. ಕರ್ನಾಟಕ, ಗೋವಾದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ. ಮಹಾರಾಷ್ಟçದಲ್ಲಿ ಇದೇ ಪ್ರಯತ್ನ ನಡೆಸಿ ಕೈಸುಟ್ಟುಕೊಂಡಿತು.

ದೇಶದ ಸರ್ವಾಂಗೀಣ ಅಭಿವೃದ್ಧಿ, ಜಾತ್ಯತೀತ ವ್ಯವಸ್ಥೆ ಉಳಿಯಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂಬುದು ಜನರಿಗೂ ಗೊತ್ತಿದೆ. ಸ್ವಾತಂತ್ರ್ಯ ತಂದು ಕೊಟ್ಟಿದ್ದು, ಸಂವಿಧಾನವನ್ನು ಅರ್ಪಣೆ ಮಾಡಿರುವುದು ಕಾಂಗ್ರೆಸ್, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನೀಡಿರುವುದು ಕಾಂಗ್ರೆಸ್, ದೇಶಕ್ಕೋಸ್ಕರ ತ್ಯಾಗ ಬಲಿದಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಹೀಗೆ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ.

ಸಂವಿಧಾನದ ಆರ್ಟಿಕಲ್ 14ರ ಪ್ರಕಾರ ಕಾನೂನಿನಲ್ಲಿ ಎಲ್ಲರೂ ಸಮಾನರು. ಯಾರದ್ದೇ ಮಕ್ಕಳು ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ರಾಜಕಾರಣಿ ಮಕ್ಕಳು ರಾಜಕಾರಣಿಗಳು ಆಗಬಹುದು, ವೈದ್ಯರ ಮಕ್ಕಳು ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಯಾವುದೇ ವೃತ್ತಿಯನ್ನು ಅರ್ಥ ಮಾಡಿಕೊಂಡು, ಅದರಲ್ಲಿ ಕೃಷಿ ಮಾಡಿದ ಅನುಭವದೊಂದಿಗೆ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಏನನ್ನೂ ಮಾಡದೇ ಅಪ್ಪ-ಅಮ್ಮನ ಹೆಸರನ್ನು ಹೇಳಿಕೊಂಡು ರಾಜಕಾರಣಕ್ಕೆ ಅಥವಾ ಯಾವುದೇ ವೃತ್ತಿಗೆ ಇಳಿಯುವುದು ತಪ್ಪು.

ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿ.ಎಂ.ಉದಾಸಿಯOತಹ ನಾಯಕರ ಕುಟುಂಬಗಳು ಯಾವ ರೀತಿಯ ರಾಜಕಾರಣ ಮಾಡುತ್ತಿದ್ದಾರೆ? ಹೀಗಾಗಿ ಬಿಜೆಪಿಯವರಿಗೆ ವಂಶಪಾರOಪರ್ಯದ ವಿಚಾರದಲ್ಲಿ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ.

ಸೋನಿಯಾಜಿ ನಮ್ಮ ರಾಷ್ಟ್ರೀಯ ಅಧ್ಯಕ್ಷರು. ಅವರೇ ನಂಬರ್ ಒನ್ ನಾಯಕಿ. ಅವರನ್ನು ಒಪ್ಪಿಕೊಳ್ಳದಿದ್ದರೆ, ಅದು ಪಕ್ಷವಾಗಲು ಸಾಧ್ಯವಿಲ್ಲ. ಜೆ.ಪಿ.ನಡ್ಡಾ ಅವರು ಬಿಜೆಪಿ ಅಧ್ಯಕ್ಷರಾದರೂ ಅಮಿತ್ ಶಾ ಅವರ ಕೈಮೇಲಾಗಿದೆ. ಆದರೆ, ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶವಿದೆ. ದೇಶಕ್ಕಾಗಿ ನೆಹರೂ ಕುಟುಂಬವಿಡೀ ತ್ಯಾಗ ಬಲಿದಾನ ಮಾಡಿದೆ. ಹೀಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರು ಬಿಜೆಪಿಯಲ್ಲಿ ಯಾರಿದ್ದಾರೆ? ಹೀಗಾಗಿ ವಂಶಪಾರAಪರ್ಯ, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎಂಬ ಬಿಜೆಪಿ ಮಾತುಗಳು ಕೇವಲ ಬಾಲಿಶವಾದವು. ಜನರನ್ನು ತಪ್ಪುದಾರಿಗೆ ಎಳೆಯುವ

ನಿಟ್ಟಿನಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಿದೆ. ಆದರೆ, ಇದು ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ. ಮುಂದೊAದು ದಿನ ಜನ ಬಿಜೆಪಿಗೆ ಬುದ್ಧಿ ಕಲಿಸದೇ ಇರಲಾರರು.

 

Leave a Reply

Your email address will not be published.