ಬೆಂಕಿಯಿಂದ ಹೊರಬಂದ ಬರಸಿಡಿಲು (ಪರಶುರಾಮನ ಗಾಥೆಯನ್ನು ಅರ್ಥೈಸುವ ನಿಟ್ಟಿನಲ್ಲಿ)

“ಭಾರತದಂತಹ ಸಂಸ್ಕೃತಿಯಲ್ಲಿ, ಭೂತವು ಹಿಂದೆ ಸರಿಯುವುದಿಲ್ಲ. ಅದು ವರ್ತಮಾನಕ್ಕೆ ಬೇರೆಬೇರೆ ಚೌಕಟ್ಟುಗಳನ್ನು ಅಥವಾ ವ್ಯಂಗ್ಯಗಳನ್ನು ನೀಡುತ್ತಾ ಹೋಗುತ್ತದೆ ಅಥವಾ ನಮಗೆ ಹಾಗೆನ್ನಿಸುತ್ತದೆ”
-ಎ.ಕೆ.ರಾಮಾನುಜನ್

ಪ್ರಾರಂಭಿಕ

ಪುರಾಣ ಹಾಗೂ ದಂತಕಥೆಗಳು ಜನಾಂಗವೊಂದರ ಅಮೂರ್ತದ್ರವ್ಯದ ಮೇಲೆ ಕಟ್ಟಲಾದ ಕಲಾಕೃತಿಗಳು. ಅವು ಭಾವಗಮ್ಯ ತಿಳಿವು ಹಾಗೂ ತಾರ್ಕಿಕ ಅರಿವುಗಳ ನಡುವಿನ ಬಿಂದುವಿನ ಹಿನ್ನೆಲೆಯಲ್ಲಿ ಕಾಲ ದೇಶಗಳನ್ನು ಮೀರಿ ಅಂಟಿಕೊಂಡಿರಬಲ್ಲ ಪ್ರತಿಮೆಗಳನ್ನು, ರೂಪಕಗಳನ್ನು ಸೃಷ್ಟಿಸುತ್ತವೆ. ಹಾಗೆಂದೇ, ಜನಾಂಗದ ಸಾಮಾಜಿಕ-ಸಾಂಸ್ಕೃತಿಕ ಜೀವನದ ಅನೇಕ ಮುಖಗಳನ್ನು ಪುರಾಣಗಳು ಮೈಗೂಡಿಸಿಕೊಂಡಿರುತ್ತವೆ. ಒಂದು ಸಮುದಾಯ ಅಥವಾ ರಾಷ್ಟ್ರವು ಕಾಲದಲ್ಲಿ ಮುಂದಕ್ಕೆ ಸಾಗುತ್ತಿದ್ದಂತೆ, ಆ ಸಮುದಾಯದ ಸಮಷ್ಟಿ ಸುಪ್ತ ಪ್ರಜ್ಞೆಯನ್ನರಿಯಲು ಉಪಯುಕ್ತವಾಗುವ ಸಂಜ್ಞೆಗಳನ್ನು ಪುರಾಣಗಳು ತಮ್ಮಲ್ಲಿರಿಸಿಕೊಳ್ಳುತ್ತವೆ. ನಮ್ಮ ಸಾಮಾಜಿಕ ಸಾಂಸ್ಕೃತಿಕ ಪರಿಸರದ ಸನ್ನಿವೇಶದಲ್ಲಿ, ಕುತೂಹಲಪೂರ್ಣ ಪುರಾಣವೊಂದರ (ಪರಶುರಾಮನಿಗೆ ಸಂಬಂಧಿಸಿದ) ಪ್ರಸ್ತುತತೆಯ ಅರ್ಥಗ್ರಹಣವೇ ಈ ಅಧ್ಯಯನದ ವಸ್ತು.

(ಈ ಕೃತಿಯನ್ನು ಗೆಳೆಯ ರಾಜ್‍ಪಾಲ್‍ಗೆ ಅರ್ಪಿಸುವೆ. ಅವರ ಒಲವಿನ ಒಡನಾಟವಿಲ್ಲದಿದ್ದರೆ ಬಹುಶಃ ನನ್ನ ಪರಾ-ದೈವಿಕ ಒಲವುಗಳನ್ನು ಮರೆತು ಬಿಡುತ್ತಿದ್ದೆನೇನೋ)

-ಹೊ.ಮ.ಮಂಜುನಾಥ-ಬಸರೀಕಟ್ಟೆ, ಪೋಸ್ಟ್, ಚಿಕ್ಕಮಗಳೂರು-577114.

ಬೆಂಕಿಯಿಂದ ಹೊರಬಂದ ಬರಸಿಡಿಲು

ಬೇರೆ ಬೇರೆ ಪುರಾಣಗಳಲ್ಲಿ ಹಾಗೂ ದಂತ ಕಥೆಗಳಲ್ಲಿ ಬರುವ ಪರಶುರಾಮನ ಕಥೆಯನ್ನು ಈ ಕೆಳಗೆ ಸಂಗ್ರಹಿಸಲಾಗಿದೆ. “ಪರಶುರಾಮ (ಕೊಡಲಿಯನ್ನು ಹಿಡಿದ ರಾಮ)ನು ವಿಷ್ಣುವಿನ ಆರನೆಯ ಅವತಾರ. ನರ್ಮದಾ ನದಿಯ ತೀರದಲ್ಲಿ ತಮ್ಮ ಆಶ್ರಮವನ್ನು ಕಟ್ಟಿಕೊಂಡಿದ್ದ ಜಮದಗ್ನಿ ಹಾಗೂ ರೇಣುಕೆಯರಿಗೆ ಜನಿಸಿದಾತನು ಅವನು. ಪ್ರಸಿದ್ಧ ಋಷಿಯಾದ ಭೃಗುವಿನ ವಂಶದಲ್ಲಿ ರಾಮನು ಜನಿಸಿದನೆಂದು ಹೇಳಲಾಗುತ್ತದೆ.

“ಹೈಹಯ ವಂಶದ ಕ್ಷತ್ರಿಯರು ಪ್ರಬಲರಾಗಿದ್ದು, ಭೂಮಿಯನ್ನಾಳುತ್ತಿದ್ದ ಕಾಲವದು. ಒಂದು ದಿನ ಅಗ್ನಿ ದೇವನು ಹೈಹಯರಾಜ ಕಾರ್ತವೀರ್ಯ ಅರ್ಜುನನ ಬಳಿಗೆ ಬಂದು ಆಹಾರ ಬೇಕೆಂದು ಸೂಚಿಸಿದನು. ಅರ್ಜುನನು ಅಗ್ನಿಯನ್ನು ತನ್ನ ಬಾಣದಲ್ಲಿ ಆಹ್ವಾನಿಸಿ, ಕಾಡು-ಪರ್ವತಗಳತ್ತ ಬಾಣವನ್ನು ಎಸೆದನು. ಅಗ್ನಿಯು ಕಾಡು ಮೇಡುಗಳನ್ನು ಭಕ್ಷಿಸುತ್ತಾ ಸಾಗುತ್ತಿರಲು, ಆಪವನೆಂಬ ಮುನಿಯ ಆಶ್ರಮವೂ ಬೆಂಕಿಗೆ ತುತ್ತಾಯಿತು. ಕ್ರೋಧಾವಿಷ್ಟನಾದ ಆಪವನು, ಇಂತಹ ದುಷ್ಕ್ರುತೆಗಳಿಗೆ ಕಾರಣರಾದ ಕ್ಷತ್ರಿಯರನ್ನು ವಿಷ್ಣುವು ಪರಶುರಾಮನಾಗಿ ಅವತರಿಸಿ ಸಂಹರಿಸಲಿ ಎಂದು ಶಪಿಸಿದನು.

“ಭಾರ್ಗವ ಕುಲದ ಋಚೀಕನು ಕುಶಿಕ ರಾಜನ ಮಗಳಾದ ಸತ್ಯವತಿಯನ್ನು ಮದುವೆಯಾಗಿದ್ದನು. ಆತನು ಹೋಮ ಪ್ರಸಾದವುಳ್ಳ ಎರಡು ಚಮಸ್ ಪಾತ್ರೆಗಳನ್ನು ಸತ್ಯವತಿಗೂ, ಅವಳ ತಾಯಿಗೂ ನೀಡಿದನು. ಅವರಿಬ್ಬರೂ ಕ್ರಮವಾಗಿ ಅಶ್ವತ್ಥ ಹಾಗೂ ಔದುಂಬರದ ಮರಗಳನ್ನು ಆಲಿಂಗಿಸಿ, ಪಾತ್ರೆಯಲ್ಲಿದ್ದ ಪ್ರಸಾದವನ್ನು ಭುಂಜಿಸಿದರೆ ಗಂಡು ಮಕ್ಕಳ ತಾಯಿಯಾಗುವರೆಂದು ಆತನು ಹೇಳಿದನು. ಆದರೆ, ಸ್ತ್ರೀಯರಿಬ್ಬರೂ ತಪ್ಪು ಮರಗಳನ್ನು ಆಲಿಂಗಿಸಿ, ಪಾತ್ರೆಗಳನ್ನು ಅದಲು ಬದಲಾಗಿಸಿಕೊಂಡರು. ವಿಷಯ ತಿಳಿದ ಋಚೀಕನು, ಸತ್ಯವತಿಗೆ ಕ್ಷತ್ರಿಯ ಗುಣಗಳುಳ್ಳ ಪುತ್ರನು ಜನಿಸುವನೆಂದೂ, ಅವಳ ತಾಯಿಗೆ ಬ್ರಾಹ್ಮಣನು ಜನಿಸುವನೆಂದೂ ಭವಿಷ್ಯ ನುಡಿದನು. ಸತ್ಯವತಿಯು ತನಗೆ ಕ್ಷತ್ರಿಯ ಪುತ್ರನು ಜನಿಸದಂತೆ ಮಾಡಬೇಕೆಂದು ಋಚೀಕನಲ್ಲಿ ಪ್ರಾರ್ಥಿಸಿದಳು. ಋಚೀಕನ ಮಾತುಗಳು ಹುಸಿಯಾಗುವಂತಿರಲಿಲ್ಲ. ಉಪಶಮನದಂತೆ, ಸತ್ಯವತಿಯ ಮೊಮ್ಮಗನು ಕ್ಷತ್ರಿಯನಾಗಲೆಂದು ಋಚೀಕನು ಆಶೀರ್ವದಿಸಿದನು.

“ಹೀಗೆ, ಮಹಾತಪಸ್ವಿಯಾದ ಜಮದಗ್ನಿಯು ಸತ್ಯವತಿಗೆ ಜನಿಸಿದನು. ಅವನು ಕ್ಷತ್ರಿಯರಾಜನಾದ ಪ್ರಸೇನಜಿತ್‍ನ ಪುತ್ರಿ ರೇಣುಕೆಯನ್ನು ವರಿಸಿ, ಐದು ಮಕ್ಕಳನ್ನು ಪಡೆದನು. ಐದನೆಯ ಮಗನೇ ಕ್ಷತ್ರ ಗುಣೋಪೇತನಾದ ರಾಮ. ರಾಮನು ಮಹಾ ಪರಾಕ್ರಮಿಯೂ, ಪಿತೃಭಕ್ತನೂ, ತಪಸ್ವಿಯೂ ಆಗಿದ್ದ, ಬಾಲ್ಯದಲ್ಲಿಯೇ ಶಿವನನ್ನು ಮೆಚ್ಚಿಸಿದನು. ಶಿವನು ರಾಮನಿಗೆ ಯುದ್ಧ, ವಿದ್ಯೆಯನ್ನು ಕಲಿಸಿದ್ದಲ್ಲದೇ, ಶಕ್ತಿಶಾಲಿಯಾದ ಕೊಡಲಿಯನ್ನು (ಪರಶುವನ್ನು) ಅನುಗ್ರಹಿಸಿದನು (ಹಾಗೆಯೇ ಆತನ ಹೆಸರು ಪರಶುರಾಮನೆಂದಾಯಿತು).

“ಒಂದು ದಿನ, ಸರೋವರವೊಂದರಲ್ಲಿ ತಮ್ಮ ಪತ್ನಿಯರೊಡನೆ ಜಲಕ್ರೀಡೆಯಾಡುತ್ತಿದ್ದ ಚಿತ್ರರಥನೆಂಬ ಗಂಧರ್ವನನ್ನು ರೇಣುಕೆಯು ನೋಡಿ, ಮನೋ ಚಾಂಚಲ್ಯಕ್ಕೆ ಒಳಗಾದಳು. ಅವಳು ತನ್ನ ಗಾಂಭೀರ್ಯವನ್ನು ಕಳಕೊಂಡಿದ್ದನ್ನು ಗುರುತಿಸಿದ ಜಮದಗ್ನಿಯು ಏನಾಯಿತೆಂಬುದನ್ನು ಅರಿತನು. ಕೋಪಗೊಂಡು ಆತನು ರೇಣುಕೆಯ ಶಿರವನ್ನು ಕತ್ತರಿಸುವಂತೆ ತನ್ನ ಮಕ್ಕಳಿಗೆ ಆಜ್ಞೆ ಮಾಡಿದನು. ಆದರೆ, ಹಿರಿಯರಾದ ನಾಲ್ಕು ಮಕ್ಕಳೂ ತಂದೆಯ ಆಜ್ಞೆಯನ್ನು ಪಾಲಿಸಲು ಹಿಂಜರಿದರು. ಪರಶುರಾಮನು ತಂದೆಯ ಅಪೇಕ್ಷೆಯಂತೆ, ತನ್ನ ತಾಯಿಯ ಶಿರವನ್ನು ಚಂಡಾಡಿದನು. ನಂತರ, ಸಂಪ್ರೀತನಾದ ಜಮದಗ್ನಿಯಲ್ಲಿ ತಾಯಿಯ ಪುನರುಜ್ಜೀವನದ ವರ ಬೇಡಿದನು. ರೇಣುಕೆಯು ಈ ಹಿಂದೆ ನಡೆದುದನ್ನೆಲ್ಲಾ ಮರೆತು ಮತ್ತೆ ಬದುಕಿ ಬಂದಳು.

“ದತ್ತಾತ್ರೇಯನ ಅನುಗ್ರಹದಿಂದಾಗಿ ಕಾರ್ತವೀರ್ಯ ಅರ್ಜುನನ ಸಾವಿರ ಬಾಹುಗಳನ್ನು, ಮಾಂತ್ರಿಕ ರಥವನ್ನು ಹೊಂದಿದ್ದನು. ಒಮ್ಮೆ ರಾವಣಾಸುರನನ್ನು ಬಂಧಿಸಿ ಹಿಡಿದಿದ್ದ ಅವನು ಪುಲಸ್ತ್ಯನು ಬೇಡಿಕೊಂಡಾಗಲೇ ಅವನು ಬಿಡುಗಡೆ ಮಾಡಿದನು. ಅರ್ಜುನನು ಧೀರನೂ, ಚಿತ್ತಾಕರ್ಷಕನೂ ಆಗಿದ್ದನು. ಒಂದು ಬಾರಿ ಆತನು ಜಮದಗ್ನಿಯ ಆಶ್ರಮವನ್ನು ಪ್ರವೇಶಿಸಿ ರಾಜೋಚಿತ ಆತಿಥ್ಯವನ್ನು ಸ್ವೀಕರಿಸಿದನು.

“ಅರ್ಜುನನು ಆಶ್ರಯದ ನಿವಾಸಿಗಳೊಡನೆ ಅಸಭ್ಯತೆಯಿಂದ ವರ್ತಿಸಿದ್ದಲ್ಲದೇ ಹೋಮ ಧೇನುವನ್ನು ಬಲಾತ್ಕಾರವಾಗಿ ಕೊಂಡೊಯ್ದನು (ಈ ಹೋಮಧೇನುವು ಬಯಸಿದ್ದನ್ನು ನೀಡಬಲ್ಲ ಕಾಮಧೇನುವೆಂದು ಕೆಲವೆಡೆಯಲ್ಲಿ ಹೇಳಲಾಗಿದೆ).

ಈ ಗಲಾಟೆಯ ನಡುವೆ ಜಮದಗ್ನಿಗೆ ಪೆಟ್ಟಾಯಿತು. ಪರಶುರಾಮನು ಪ್ರಸ್ತುತ ಘಟನೆ ನಡೆದಾಗ ಆಶ್ರಮದಲ್ಲಿರಲಿಲ್ಲವಾದರೂ, ನಂತರ ವಿಷಯ ತಿಳಿದು ಕೋಪೋದ್ರಿಕ್ತನಾದನು. ಅರ್ಜುನನನ್ನು ಅವನ ರಾಜಧಾನಿಯ ತನಕವೂ ಹಿಂಬಾಲಿಸಿ, ಯುದ್ಧಕ್ಕೆ ಆಹ್ವಾನಿಸಿದನು.

ಹೋ.ಮ.ಮಂಜುನಾಥ್: ಒಂದು ನೆನಪು

ಯಾರಾದರೂ ಸತ್ತರೆ ಅವರ ಸಾವು ನಮಗೆ ‘ತುಂಬಲಾರದ ನಷ್ಟ’ವೆಂದು ನಾವು ಹೇಳುತ್ತೇವೆ. ಜೀವನ ಪೂರ್ತಿ ಬಾಳಿ ಬದುಕಿದವರ ಸಾವು ತುಂಬಲಾರದ ನಷ್ಟವಾಗಲಾರದು. ಆದರೆ ಪ್ರಾಯದಲ್ಲಿನ ಸಾವು ಸತ್ತವರ ಆಪ್ತರಿಗೆ ಭರಿಸಲಾಗದ ನಷ್ಟವಾಗಬಹುದು. ಮೂವತ್ತರ ಹರೆಯದಲ್ಲಿಯೇ ಬದುಕು ಸಾಕೆಂದು ಹೊರಟುಹೋದ ನನ್ನ ಗೆಳೆಯನ ಸಾವು ನನ್ನ ಜೀವನದುದ್ದಕ್ಕೂ ತುಂಬಲಾರದ ನಷ್ಟವೇ ಆಗಿ ಉಳಿದಿದೆ. ಅದಕ್ಕೆ ಕಾರಣಗಳಿವೆ.

ಹೆಚ್.ಎಂ.ಮಂಜುನಾಥ್ ಚಿಕ್ಕಮಗಳೂರಿನ ಜಯಪುರ-ಬಾಳೇಹೊನ್ನೂರಿನ ರಸ್ತೆಯ ಬಳಿಯಿರುವ ಹೊಸಕೊಪ್ಪ ಗ್ರಾಮದ ಮಹಾಬಲಯ್ಯನವರ ಮಗ. ಮನೆಯಲ್ಲಿ ಮೊದಲಿನಿಂದಲೂ ಸಾಹಿತ್ಯದ ವಾತಾವರಣ. ಮಹಾಬಲಯ್ಯನವರು ಶಿವರಾಮ ಕಾರಂತರ ಒಡನಾಡಿ. ಬ್ರಾಹ್ಮಣರಾದರೂ ಹಳ್ಳಿಯ ಸಾಮಾನ್ಯ ರೈತಾಪಿ ಕುಟುಂಬ. ಮಂಜುನಾಥ್ ಅರ್ಥಶಾಸ್ತ್ರ ಓದಿದ್ದು ಮಂಗಳೂರು ಮತ್ತು ಪುಣೆಯಲ್ಲಿ. ನಂತರ ಇಂಡಿಯನ್ ಎಕನಾಮಿಕ್ ಸರ್ವಿಸ್‍ಗೆ ಸೇರ್ಪಡೆ. ದೆಹಲಿಯ ಪ್ಲಾನಿಂಗ್ ಕಮಿಶನ್‍ನಲ್ಲಿ ಕೆಲಸ.

ಮಂಜುನಾಥ್‍ರನ್ನು ನಾನು ಮೊದಲು ನೋಡಿದ್ದು ದೆಹಲಿಯಲ್ಲಿ. 1988ರಲ್ಲಿ ಜೆಎನ್‍ಯು ಸೇರಲು ಹೋದ ಸಂದರ್ಭದಲ್ಲಿ. ನಮ್ಮ ಕಾಮನ್ ಫ್ರೆಂಡ್ ಕೆ.ವಿ.ರಾಮಸ್ವಾಮಿಯವರೊಡನೆ ಮೊದಲ ಭೇಟಿಯಲ್ಲಿಯೇ ಮಂಜುನಾಥ್ ವ್ಯಕ್ತಿತ್ವಕ್ಕೆ ನಾನು ಮಾರುಹೋದೆ. ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ, ಸಂಸ್ಕøತ ಕೃತಿಗಳ ಸಾರ, ಎಕನಾಮಿಕ್ಸ್, ದೆಹಲಿ, ಬ್ಯೂರೊಕ್ರಸಿ, ಜೆಎನ್‍ಯು, ತೇಜಸ್ವಿ, ಕಾರಂತ, ರಾಜ್‍ಕುಮಾರ್, ಮಂಡಿ ಹೌಸ್ ಹೀಗೆಯೇ ಹತ್ತುಹಲವು ಸಮಾನ ಆಸಕ್ತಿಯ ವಿಷಯಗಳು. ಜೊತೆಗೆ ಏನಾದರೂ ಮಾಡಬೇಕೆಂಬ ತುಡಿತ. ಪ್ರಸ್ತುತ ಸನ್ನಿವೇಶವನ್ನು ಒಪ್ಪದ ಆಶಾವಾದ. ಅದರೆ ಬರಡು ಮಾತಲ್ಲ. ನಿರರ್ಗಳವಾಗಿ ಮಂಜುನಾಥ್ ಎರಡು-ಮೂರು ಗಂಟೆ ಜೋಕ್ಸ್ ಹೇಳಬಲ್ಲವರಾಗಿದ್ದರು. ಅವರೊಡನೆ ಕಳೆದ ಸಮಯದ ಲೆಕ್ಕವೇ ಸಿಗದ ತಲ್ಲೀನತೆ.

ಮುಂದೆ 1992ರಲ್ಲಿ ನನಗೂ ಕೆಲಸ. ಮೊದಲ ಪೋಸ್ಟಿಂಗ್ ಮಂಗಳೂರಿನಲ್ಲಿ. 94ರಲ್ಲಿ ಯಾವುದೋ ಒಂದು ಡೆಪ್ಯುಟೇಶನ್ ತೆಗೆದುಕೊಂಡು ಮಂಜುನಾಥ್ ಬೆಂಗಳೂರಿಗೆ ಬಂದರು. ನಾವಿಬ್ಬರೂ ಸೇರಿYATNA (Young Amateur Theatricians Noetic Assemble) ಎಂಬ ಎನ್‍ಜಿಓ ಕಟ್ಟಿದ್ದೆವು. ಜೊತೆಗೆ ಗೆಳೆಯ ಬ್ಯಾಸ್‍ದೇಬ್ ದಾಸ್‍ಗುಪ್ತ ಮತ್ತು ಚಂದ್ರಶೇಖರ ಬೆಳಗೆರೆಯೊಡನೆ ಹಲವು ಸಾಹಸ. ಮೊದಲು ಜಯನಗರ ನಂತರ ದೊಮ್ಮಲೂರಿನಲ್ಲಿ ನಮ್ಮ ಕಛೇರಿ. ಕರ್ನಾಟಕದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಧ್ಯಯನ ಕೇಂದ್ರವೊಂದನ್ನು ತೆರೆಯುವ ಧಾವಂತ. ಹಲವಾರು ಸಂಶೋಧನಾ ಪ್ರಬಂಧಗಳ ಪ್ರಕಾಶನ ಇತ್ಯಾದಿ. ಹಲವು ಕನಸಿನ ಯೋಜನೆಗಳೊಡನೆ ನಮ್ಮ ದಿನಚರಿ.

ಸ್ವರ್ಗಕ್ಕೆ ಕಿಚ್ಚು ಹತ್ತಬೇಕಿದ್ದ ಸಂದರ್ಭದಲ್ಲಿ ಮಂಜುನಾಥ್ ಮನೆಯ ಒಲೆಯಲ್ಲಿಯೇ ತೂತು. ಇದ್ದ ಒಬ್ಬ ಮಗಳನ್ನು ಆಡಿಸಿ ಖುಷಿಪಡಲೂ ಆಗದ ಸಂಕಟ. ಮಡದಿಯ ಕ್ರೌರ್ಯಕ್ಕೆ ಹೂಮನಸ್ಸಿನ ಮಂಜುನಾಥ್ ನಲುಗಿಹೋಗಿದ್ದರು. ಗಳಿಸಿದ ಎಲ್ಲ ಸುಖ ಸಂಪತ್ತಿನ ಮುಂದೆ ಆಗಬಾರದ ಈ ಕೌಟುಂಬಿಕ ಕದನ. ಕಡೆಗೆ ಇದಾವುದೂ ನಶ್ವರವೆಂದೋ ಏನೋ ಮಂಜುನಾಥ್ ಸಾವು. 96ರ ಫೆಬ್ರವರಿಯಲ್ಲಿ ಪಯಣ ಅಂತ್ಯ.

ಮಂಜುನಾಥ್ ಸಾವಿನ ಆಘಾತದಿಂದ ನಾನಿನ್ನೂ ಹೊರಬಂದಿಲ್ಲ. ಆ ಪ್ರಮಾಣದ ಸಮಾನಮನಸ್ಕ ಗೆಳೆಯ ನನಗಿನ್ನೂ ಸಿಕ್ಕಿಲ್ಲ. ಇನ್ನು ಮೇಲೆ ಸಿಗುವುದೂ ಅನುಮಾನ. ಯಾರಾದರೂ ‘ತುಂಬಲಾರದ ನಷ್ಟ’ವೆಂದರೆ ನನಗೆ ಮಂಜುನಾಥ್ ನೆನಪು.

ನೇಣಿಗೆ ಕೊರಳು ನೀಡುವ ಮುನ್ನ ಬರೆದ ಪತ್ರದಲ್ಲಿ ಮಂಜುನಾಥ್ ತಮ್ಮೆಲ್ಲಾ ಪುಸ್ತಕಗಳನ್ನು ನನಗೆ ಬರೆದುಹೋಗಿದ್ದರು. ಆದರೆ ಆ ಹೆಂಗಸಿನ ಮುಂದೆ ನಿಂತು ಪುಸ್ತಕ ಕೇಳುವ ದಾಷ್ಟ್ರ್ಯ ನನಗೆ ಬರಲಿಲ್ಲ. ಸಾಯುವ ಕೆಲವು ದಿನ ಮೊದಲು ಮಂಜುನಾಥ್ ನೀಡಿದ್ದ ಎರಡು ಹಸ್ತಪ್ರತಿಗಳು ನನ್ನ ಬಳಿಯಿವೆ. ಒಂದನ್ನು ಇಲ್ಲಿ ಪ್ರಕಾಶನಕ್ಕೆ ನೀಡಿರುವೆ.
-ಜಯರಾಮ್ ರಾಯಪುರ

“ಒಬ್ಬಂಟಿಗನಾಗಿ ಸಮಸ್ತ ಸೇನೆಯನ್ನು ಹುಡಿಗಟ್ಟಿದ್ದಲ್ಲದೇ ರಾಮನು ಕಾರ್ತವೀರ್ಯನಿಗೆ ಸರಿಸಮನಾಗಿ ಹೋರಾಡಿದನು. ಅರ್ಜುನ ಸಹಸ್ರ ಬಾಹುಗಳನ್ನೂ ಪಂಕ್ತಿಯಲ್ಲಿ ಕಡಿದೊಗೆದು, ಅವನನ್ನು ಸಂಹರಿಸಿದನು. ಹೋಮಧೇನುವು ಬಂಧನದಿಂದ ವಿಮುಕ್ತಿಗೊಂಡಿತು. ಆದರೆ, ನಂತರ ಕಾರ್ತವೀರ್ಯನ ಮಕ್ಕಳು ರಾಮನಿಲ್ಲದಾಗ ಜಮದಗ್ನಿಯ ಆಶ್ರಮವನ್ನು ಆಕ್ರಮಿಸಿದನು. ತಪಸ್ಸಿನಲ್ಲಿ ನಿರತನಾಗಿದ್ದ ಜಮದಗ್ನಿಯನ್ನು ಸುತ್ತುವರಿದು, ಬಾಣಗಳನ್ನೆಸೆದು ಸಂಹರಿಸಿದರು.

“ಆಶ್ರಮಕ್ಕೆ ಹಿಂದಿರುಗಿದ ರಾಮನು ಮರಣ ಹೊಂದಿದ ತಂದೆಯ ಶರೀರವನ್ನೂ, ದುಃಖದಿಂದ ಎದೆ ಬಡಿದುಕೊಳ್ಳುತ್ತಿದ್ದ ತಾಯಿಯನ್ನೂ ಕಂಡನು. ಇಪ್ಪತ್ತೊಂದು ಬಾರಿ ಭೂಮಿಯನ್ನು ಸುತ್ತುವರಿದು, ಕ್ಷತ್ರಿಯಕುಲವನ್ನೇ ಇಲ್ಲವಾಗಿಸುವೆನೆಂದು ಪ್ರತೀಕಾರಾಗ್ನಿಯಿಂದ ಕುದಿಯುತ್ತಿದ್ದ ಪರಶುರಾಮನು ಶಪಥ ಮಾಡಿದನು. ಹಾಗೂ ಕಾರ್ತವೀರ್ಯನ ಪುತ್ರರನ್ನು ಸಂಹರಿಸಿ, ತಪಸ್ಸಿಗೆಂದು ತೆರಳಿದನು. ಆದರೆ, ರೈಭ್ಯನೆಂಬ ಮುನಿ ಕುಮಾರನ ಮಾತುಗಳಿಂದ ಮತ್ತೆ ಕೆರಳಿದವನಾಗಿ, ಶಪಥವನ್ನು ಪೂರ್ಣಗೊಳಿಸಲು ಸನ್ನದ್ಧನಾದನು.

“ಹೀಗೆ ಹಲವು ವರ್ಷಗಳ ಕಾಲ ಕ್ಷತ್ರಿಯ ಕುಲದ ಮಾರಣಯಜ್ಞ ನಡೆಯಿತು. ಗರ್ಭಸ್ಥ ಶಿಶುಗಳನ್ನು ಬಿಡದಂತೆ ಕ್ಷತ್ರಿಯರೆಲ್ಲರನ್ನು ಸಂಹರಿಸುತ್ತಾ ಭೂಮಿಯನ್ನು 21 ಬಾರಿ ಸುತ್ತುವರಿದು, ಪರಶುರಾಮನು ಮಹಾ ರುದ್ರತಾಂಡವವನ್ನೇ ಆರಂಭಿಸಿದನು. ಪಿತೃಲೋಕದಿಂದ ಸ್ವಯಂ ಋಚೀಕನೇ ಧರೆಗಿಳಿದು ರಾಮನಿಂದ ಈ ಅರ್ಥಹೀನ ಮಾರಣ ಹೋಮವನ್ನು ತಡೆಯಬೇಕಾಯಿತು

“ಸ್ಯಮಂತ ಪಂಚಕದಲ್ಲಿ ತನ್ನ ಪರಶುವನ್ನು ತೊಳೆದು, ಐದು ರಕ್ತದ ಕೊಳಗಳನ್ನೇ ಉಂಟು ಮಾಡಿದನು ಪರಶುರಾಮ. ತನ್ನ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಮಹಾಯಾಗವೊಂದನ್ನು ಸಂಕಲ್ಪಿಸಿದ ಆತನು, ಐದು ಅಡಿ ಉದ್ದ ಹಾಗೂ ಒಂಭತ್ತು ಅಡಿ ಅಗಲದ ಸ್ವರ್ಣ ಯಜ್ಞ ವೇದಿಯನ್ನು ರಚಿಸಿದನು. ಯಜ್ಞದ ನಂತರ ವೇದಿಯನ್ನು ಋತ್ವಿಜರಿಗೆ ದಕ್ಷಿಣೆಯಾಗಿ ನೀಡಿದನು. ಅಲ್ಲದೇ ತಾನು ಜಯಿಸಿದ ಎಲ್ಲ ಭೂಮಿಯನ್ನು ಕಶ್ಯಪ ಋಷಿಗೆ ದಾನ ಮಾಡಿದನು.

ಹೀಗೆ ಉಂಟಾದ ಭೂಭಾಗವೇ ಶೂರ್ಪಾರಕವೆಂದು ಪ್ರಸಿದ್ಧವಾಯಿತು. (ಈಗಿನ ಕೇರಳ). ಪರಶುರಾಮನು ಶೂರ್ಪಾರಕದಲ್ಲಿ ತಪಸ್ಸು ಮಾಡಿದನೆಂದು ಹೇಳುವುದು ತಾರ್ಕಿಕವಾದರೂ, ಆತನು ಮಹೇಂದ್ರ ಪರ್ವತ (ಒರಿಸ್ಸಾ ರಾಜ್ಯ)ದಲ್ಲಿ ವಿರಮಿಸಿದನೆಂಬಂತೆ ಅನೇಕ ಉಲ್ಲೇಖಗಳಿವೆ.

“ಎಲ್ಲ ಭೂಮಿಯನ್ನು ದಾನವಾಗಿ ಕೊಟ್ಟಿದುದರಿಂದ, ತಪಸ್ಸಿಗೆಂದು ರಾಮನಲ್ಲಿ ಭೂಮಿ ಉಳಿಯಲಿಲ್ಲ. ತನಗೆ ಸ್ವಲ್ಪ ಭೂಮಿಯನ್ನು ನೀಡಬೇಕೆಂದು ಸಾಗರವನ್ನು ಪ್ರಾರ್ಥಿಸಿ, ಪರಶುವನ್ನು ಸಮುದ್ರಕ್ಕೆಸೆದನು. ಅವನ ಕೊಡಲಿಯು (ಶೂರ್ಪವು) ಬಿದ್ದಲ್ಲಿಯ ತನಕ ಸಮುದ್ರವು ಹಿಂದೆಸರಿಯಿತು. ಹೀಗೆ ಉಂಟಾದ ಭೂಭಾಗವೇ ಶೂರ್ಪಾರಕವೆಂದು ಪ್ರಸಿದ್ಧವಾಯಿತು. (ಈಗಿನ ಕೇರಳ). ಪರಶುರಾಮನು ಶೂರ್ಪಾರಕದಲ್ಲಿ ತಪಸ್ಸು ಮಾಡಿದನೆಂದು ಹೇಳುವುದು ತಾರ್ಕಿಕವಾದರೂ, ಆತನು ಮಹೇಂದ್ರ ಪರ್ವತ (ಒರಿಸ್ಸಾ ರಾಜ್ಯ)ದಲ್ಲಿ ವಿರಮಿಸಿದನೆಂಬಂತೆ ಅನೇಕ ಉಲ್ಲೇಖಗಳಿವೆ.

“ರಾಮಾಯಣದಲ್ಲಿ ಪರಶುರಾಮನು ದಾಶರಥಿ ರಾಮನನ್ನು ಆತನ ಮದುವೆಯ ನಂತರ ಸಂಧಿಸುತ್ತಾನೆ. ಶಿವಧನುಸ್ಸಿಗಿಂತಲೂ ಬಲಿಷ್ಠನೂ ಶ್ರೇಷ್ಠವೂ ಆದ ವೈಷ್ಣವ ಧನುಸ್ಸಿಗೆ ಹೆದೆಯೇರಿಸೆಂದು ಅವನು ದಾಶರಥಿ ರಾಮನಿಗೆ ಸವಾಲೆಸೆಯುತ್ತಾನೆ. ರಾಮನಾದರೋ, ಲೀಲಾಜಾಲವಾಗಿ ಆ ಕಾರ್ಯವನ್ನು ನೆರವೇರಿಸಿ, ಪರಶುರಾಮನ ಆದರಕ್ಕೆ ಪಾತ್ರನಾಗುತ್ತಾನೆ. ನಂತರ ಪರಶುರಾಮನು ಮಹೇಂದ್ರ ಪರ್ವತದತ್ತ ತೆರಳುತ್ತಾನೆ.

“ಮಹಾಭಾರತದಲ್ಲಿ ಪರಶುರಾಮನು ಭೀಷ್ಮ ಹಾಗೂ ಕರ್ಣರಿಗೆ ಧನುರ್ವಿದ್ಯೆಯನ್ನು ಬೋಧಿಸುತ್ತಾನೆ. ದರಿದ್ರನಾದ ದ್ರೋಣನು ಧನವನ್ನು ಯಾಚಿಸುತ್ತಾ ಆತನ ಬಳಿ ಬಂದನೆಂದೂ, ಈಗಾಗಲೇ ತನ್ನೆಲ್ಲ ಧನ-ಭೂಮಿಗಳನ್ನು ದಾನ ಮಾಡಿ ಬಿಟ್ಟಿದ್ದನಾದುದರಿಂದ ಪರಶುರಾಮನು ಅವನಿಗೆ ತನ್ನ ಅಸ್ತ್ರಗಳನ್ನೇ ಧಾರೆ ಎರೆದು ನೀಡಿದನೆಂದೂ ಹೇಳಲಾಗಿದೆ.

“ಘಟನೆಗಳ ನಾಟಕೀಯ ತಿರುವು ಮುರುವಿನಿಂದಾಗಿ ತನ್ನ ಶಿಷ್ಯನಾದ ಭೀಷ್ಮನನ್ನೇ ಪರಶುರಾಮನು ಇದುರಿಸಬೇಕಾಗಿ ಬಂದಿತು. ಸಾಳ್ವ ರಾಜನಿಂದ ತಿರಸ್ಕತಳಾದ ಅಂಬೆಯನ್ನು ಭೀಷ್ಮನು ಮದುವೆಯಾಗಲು ಒಪ್ಪಬೇಕೆಂದು ರಾಮನು ಅಭಿಪ್ರಾಯಪಟ್ಟು, ತನ್ನ ಪ್ರತಿಜ್ಞೆಯ ಕಾರಣದಿಂದಾಗಿ ಭೀಷ್ಮನು ಅಂಬೆಯನ್ನು ವರಿಸಲು ಒಪ್ಪಲಿಲ್ಲ. ಭೀಷ್ಮನಿಗೆ ಪಾಠ ಕಲಿಸಲೆಂದೇ ಪರಶುರಾಮನು ಅವನನ್ನು ಧ್ವಂದ್ವಕ್ಕೆ ಕರೆದನು. ಭೀಷ್ಮನು ಯುದ್ಧದಲ್ಲಿ ತನ್ನ ಗುರುವಿಗೆ ಸರಿಸಮವಾಗಿ ಕಾಡಿದನು. ಜಮದಗ್ನಿ ಹಾಗೂ ಗಂಗೆಯರು ಮಧ್ಯೆ ಪ್ರವೇಶಿಸಿ, ಗುರು-ಶಿಷ್ಯರ ನಡುವಿನ ಯುದ್ಧವನ್ನು ನಿಲ್ಲಿಸಿದರು. ಭೀಷ್ಮನ ಸದಾಚಾರವನ್ನು ಕಂಡು ಮೆಚ್ಚಿದ ಪರಶುರಾಮನು, ಅವನನ್ನು ಆಶೀರ್ವದಿಸಿ ಮಹೇಂದ್ರಗಿರಿಯತ್ತ ನಿಷ್ಕ್ರಮಿಸಿದನು.

ಈ ಎಲ್ಲ ಉಪಘಟನೆಗಳು ಪರಶುರಾಮನ ವ್ಯಕ್ತಿತ್ವಕ್ಕೆ ಹೆಚ್ಚಿನದೇನನ್ನೂ ಸೇರಿಸುವುದಿಲ್ಲ. ಬ್ರಹ್ಮಾಂಡ ಪುರಾಣದಲ್ಲಿ ಪರಶುರಾಮ ಹಾಗೂ ವಿಘ್ನೇಶ್ವರರ ನಡುವಿನ ಕುತೂಹಲ ಪೂರ್ಣ ಕಲಹ/ ಪೈಪೋಟಿಯೊಂದರ ಚಿತ್ರಣವಿದೆ.

“ಇದಾದ ನಂತರ, ಹಲಕೆಲವು ಪೌರಾಣಿಕ ಕಥಾನಕದ ಅಂಗವಾಗಿ ಪರಶುರಾಮನು ಕಾಣಿಸಿಕೊಳ್ಳುತ್ತಾನೆ. ವಿಷ್ಣುವಿನ ಎಂಟನೇ ಅವತಾರವಾದ ಶ್ರೀ ಕೃಷ್ಣನನ್ನು ಆತನು ಎರಡು ಬಾರಿ ಸಂಧಿಸುತ್ತಾನೆ (ಮಹಾ ಭಾರತದಲ್ಲಿ). ಅಂತೂ ಈ ಎಲ್ಲ ಉಪಘಟನೆಗಳು ಪರಶುರಾಮನ ವ್ಯಕ್ತಿತ್ವಕ್ಕೆ ಹೆಚ್ಚಿನದೇನನ್ನೂ ಸೇರಿಸುವುದಿಲ್ಲ. ಬ್ರಹ್ಮಾಂಡ ಪುರಾಣದಲ್ಲಿ ಪರಶುರಾಮ ಹಾಗೂ ವಿಘ್ನೇಶ್ವರರ ನಡುವಿನ ಕುತೂಹಲ ಪೂರ್ಣ ಕಲಹ/ ಪೈಪೋಟಿಯೊಂದರ ಚಿತ್ರಣವಿದೆ.

ಸನ್ನಿವೇಶ

ಪರಶುರಾಮನ ಗಾಥೆಯನ್ನು ಅರ್ಥಮಾಡಿಕೊಳ್ಳಬಯಸುವ ಯಾವುದೇ ಪ್ರಯತ್ನವೂ ನಮ್ಮ ಸಮಾಜೋ- ಸಾಂಸ್ಕೃತಿಕ ಪ್ರಜ್ಞೆಯ ಆಂತರಿಕ ಅರಿವನ್ನು ಅಪೇಕ್ಷಿಸುತ್ತದೆ. ವಿಷ್ಣುವಿನ ಆರನೇ ಅವತಾರದ ಸುತ್ತ ಹೆಣೆಯಲಾದ ಪುರಾಣವು ಬೆರಗುಗೊಳಿಸುವ ಸಂಕೀರ್ಣತೆಯಿಂದ ತುಂಬಿದ್ದು, ಮೊದಲ ನೋಟಕ್ಕೆ ಕಂಡುಬರುವ ಅರ್ಥಗಳು ಅಂತರ್ವಿಸಂಗತಿ ಪೂರ್ಣವೂ, ನಿರ್ವಿಶೇಷಯುಕ್ತವೂ ಆಗಿರುತ್ತವೆ. ಈ ಕತೆಯು ಒಂದೇ ಬಾರಿಗೆ ತೋರಿಕೆಯ ಐತಿಹಾಸಿಕ ಘಟನೆಯಾಗಿಯೂ, ವರ್ಣರಂಜಿತ ಗೋಜಲು ಪುರಾಣವಾಗಿಯೂ, ರಹಸ್ಯ ಆಧ್ಯಾತ್ಮಿಕ ಸತ್ಯಗಳ ಭಂಡಾರವಾಗಿಯೂ ಪ್ರಾಮುಖ್ಯತೆ ಪಡೆಯುತ್ತದೆ. ಭಾರತೀಯ ಪೌರಾಣಿಕ ಪರಂಪರೆಯಲ್ಲಿ ಇದು ಪಡೆದಿರುವ ವಿಶಿಷ್ಟ ಸ್ಥಾನಕ್ಕೆ ಪ್ರಾಯಶಃ ಅದರಲ್ಲಿರುವ ಅಸಂಪ್ರದಾಯಕ ಹಾಗೂ ಅನಿರೀಕ್ಷಿತ ಘಟನಾವಳಿಗಳೇ ಕಾರಣ.

ಪರಶುರಾಮನ ಬಗೆಗಿನ ಪ್ರಥಮ ಅಭಿಪ್ರಾಯವು ಅವನನ್ನು ಕ್ಷತ್ರಿಯರ ನಿರಂಕುಶತೆಯ ವಿರುದ್ಧ ಹೋರಾಡಿದ ಬ್ರಾಹ್ಮಣನೆಂದೂ, ಪ್ರಾಗ್ ಐತಿಹಾಸಿಕ ಅನಾರ್ಕಿಸ್ಟನೆಂದೂ ಕಂಡೀತು. ಆದರೆ ಆತನ ವ್ಯಕ್ತಿತ್ವದ ಒಳಗೆ ಇಳಿಯುತ್ತಿದ್ದಂತೆ ಹೊಸ ಸತ್ಯದ ಪದರುಗಳು ಬಿಡಿಸಿಕೊಳ್ಳಲಾರಂಭಿಸುತ್ತವೆ. ಪರಶುರಾಮನ ಪುರಾಣಕ್ಕೆ ಕನಸಿನ ಗುಣವಿದೆ. ಕಾಲ-ದೇಶಗಳ ಅಂಕುಡೊಂಕಿನ ಮಾರ್ಗದಲ್ಲಿ ಅದು ಚಲಿಸುತ್ತಿದ್ದಂತೆ, ನವೀನ ಅರ್ಥಗಳ ಹೊಂಗಿರಣಗಳು ಪ್ರಜ್ಞೆಯ ದಿಗಂತದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಗಾಥೆಯ ಅಂತರ್ವಾಹಿನಿಯು ತಂದೆ-ಮಗನ ಸಂಬಂಧದ ವಿವಿಧ ಮುಖಗಳನ್ನು ಪರಿಚಯಿಸುತ್ತದೆ; ತಾಯಿ ಹಾಗೂ ಮಗುವಿನ ನಡುವಿನ ಬಾಂಧವ್ಯವನ್ನು ಅರ್ಥೈಸುತ್ತದೆ. ಲೈಂಗಿಕ ಪ್ರಸ್ವಪ್ನಗಳ ಮಂದಬೆಳಕಿನ ವಲಯಗಳನ್ನು ಪ್ರದೀಪ್ತಗೊಳಿಸುತ್ತದೆ. ಈ ಪುರಾಣವು ತನ್ನ ತಾತ್ತ್ವಿಕ ಪಾತಳಿಯಲ್ಲಿ ‘ಗುಣ’ಗಳ ಆದಿದೈವಿಕ ಪರಿಕಲ್ಪನೆಗಳನ್ನು ತಬ್ಬಿಕೊಂಡಿದ್ದು, ತನ್ನ ವಿಶಾಲ ಮಡಿಲಿನಲ್ಲಿ ಶಾಕ್ತ ರೂಪಕಗಳ ನಿರ್ಭೀತ ಧಾರಣೆಗಳನ್ನು ಮೈಗೂಡಿಸಿಕೊಂಡಿದೆ. ಕತೆಯಲ್ಲಿ ಹಾಸು-ಹೊಕ್ಕಾಗಿ ಬರುವ ‘ಋಷಿ ಹಾಗೂ ‘ಗೋತ್ರ’ಗಳ ಉಪ ವ್ಯವಸ್ಥೆಗಳು ನಮ್ಮ ಚಾರಿತ್ರಿಕ ಹಿನ್ನೆಲೆಗೆ ಹಿಡಿದ ದಾರಿದೀಪಗಳಾಗಿವೆ.

ಪರಶುರಾಮನ ಕತೆಯ ಉಲ್ಲೇಖ ಮೊದಲಿಗೆ ಬರುವುದು ರಾಮಾಯಣದಲ್ಲಿ. ಆದರೆ ಈ ಪುರಾಣದ ಮೂಲವನ್ನು ಇದಕ್ಕೂ ಪುರಾತನವಾದ ಗ್ರಂಥಗಳಲ್ಲಿ ಕಾಣಬಹುದಾಗಿದೆ. ಪರಶುರಾಮನ ತಂದೆಯಾದ ಜಮದಗ್ನಿಯ ಹೆಸರನ್ನು ಋಗ್ವೇದದಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ಉಲ್ಲೇಖಿಸಲಾಗಿದೆ. ಸಪ್ತರ್ಷಿಮಂಡಲವನ್ನು ಅಲಂಕರಿಸಿದ ಋಷಿಗಳಲ್ಲಿ ಒಬ್ಬನಾಗಿ ಆತನ ಹೆಸರು ನಂತರದ ಕೃತಿಗಳಲ್ಲಿಯೂ ಬಂದಿದೆ. ಅವನು ವಿಶ್ವಾಮಿತ್ರನನ್ನು ವಸಿಷ್ಠನ ಮಂತ್ರಪ್ರಯೋಗಗಳಿಂದ ಬದುಕಿಸಿದನು. ಅವನು ವಸಿಷ್ಠನನ್ನು ಯಶಸ್ವಿಯಾಗಿ ಎದುರಿಸಿ ಸೋಲಿಸಿದನು (ಬೃಹದ್ದೇವತಾ). ಬೃಹದಾರಣ್ಯಕ ಉಪನಿಷತ್ತಿನಲ್ಲಿ ಅವನನ್ನು ಹಾಗೂ ವಿಶ್ವಾಮಿತ್ರನನ್ನು ಮಾನವನ ಕಣ್ಣುಗಳೊಂದಿಗೆ ಸಮೀಕರಿಸಲಾಗಿದೆ.

ಆದರೆ ಋಷಿಗಳಲ್ಲಿ ಶ್ರೇಷ್ಠನಾಗಿಯೂ, ಸಾಮಾಜಿಕ ಶ್ರೇಣಿಗಳಲ್ಲಿ ಗಣನೀಯನಾಗಿಯೂ ಇದ್ದ ಜಮದಗ್ನಿಯ ಪ್ರಾಮುಖ್ಯತೆ ನಂತರದ ಕೃತಿಗಳಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ. ರಾಮಾಯಣದಲ್ಲಿ ಅವನ ಹೆಸರು ಕೇವಲ ಒಂದು ಬಾರಿ ಅದೂ ಕೂಡಾ ಪರಶುರಾಮನ ತಂದೆಯೆಂದು, ಉಲ್ಲೇಖಿತವಾಗಿದೆ. ನಂತರದ ಕೃತಿಗಳಾದ ಮಹಾಭಾರತ ಹಾಗೂ ಪುರಾಣಗಳಲ್ಲಿ ಜಮದಗ್ನಿಯು ಪರಶುರಾಮನ ತಂದೆಯಾಗಿ ವಿವರಿಸಲ್ಪಡುತ್ತಾನೆಯೇ ಹೊರತು ತನ್ನ ಸ್ವಂತ ವ್ಯಕ್ತಿತ್ವದಿಂದಾಗಿ ಅಲ್ಲ. ಅದಕ್ಕೆ ಸಮಾನಾಂತರವಾಗಿ, ಪರಶುರಾಮನ ಕತೆಯು ಹೆಚ್ಚು ವಿವರಗಳನ್ನೂ, ಸೂಕ್ಷ್ಮ ವಿವರಣೆಗಳನ್ನೂ ಮಹಾಭಾರತ ಹಾಗೂ ಪುರಾಣಗಳಲ್ಲಿ ಪಡೆಯಿತು. ಮಹಾಭಾರತದಲ್ಲಿಯೇ ಕತೆಯು ಹಲವು ಎಡೆಗಳಲ್ಲಿ ಕೆಲವು ಬಾರಿ ಪರಸ್ಪರ ವಿರುದ್ಧ ವಿವರಗಳಿಂದ ಕೂಡಿ ಕಾಣಿಸಿಕೊಂಡಿದೆ. (ಉದಾಹರಣೆಗೆ ವನಪರ್ವದಲ್ಲಿ ಬರುವ ಕತೆಯ ಪ್ರಕಾರ ಭೃಗುವು ಹಾಲು ಹಾಗೂ ಅನ್ನವಿರುವ ಚಮಸ್ ಪಾತ್ರೆಗಳನ್ನು ಸತ್ಯವತಿಗೂ ಅವಳ ತಾಯಿಗೂ ಗಂಡು ಮಕ್ಕಳ ಜನನಕ್ಕೆ ಕಾರಣವಾಗಲೆಂದು ನೀಡುತ್ತಾನೆ. ಆದರೆ ಶಾಂತಿಪರ್ವದಲ್ಲಿ ಬರುವ ವರ್ಣನೆಯಲ್ಲಿ ಭೃಗುವಿನ ಸ್ಥಾನವನ್ನು ಋಚೀಕನು ಆಕ್ರಮಿಸಿಕೊಂಡಿದ್ದಾನೆ!) ಪುರಾಣಗಳು ಗಾಥೆಗೆ ಇನ್ನಷ್ಟು ವಿವರಗಳನ್ನು, ಸೂಕ್ಷ್ಮ ಬದಲಾವಣೆಗಳನ್ನು ಸೇರಿಸಿ ಅದನ್ನು ವೈಭವೀಕರಿಸಿದವು. ಪರಶುರಾಮನ ಕತೆಯು ಪದ್ಮ, ವಾಯು, ವಿಷ್ಣು, ಭಾಗವತ, ಅಗ್ನಿ, ಮತ್ಸ್ಯ, ಸ್ಕಂದ, ಕಾಲಿಕಾ, ಬ್ರಹ್ಮ ವೈವರ್ತ ಹಾಗೂ ದೇವಿ ಭಾಗವತಗಳಲ್ಲೆಲ್ಲ ಬರುತ್ತದಾದರೂ, ಅತಿ ಹೆಚ್ಚು ವಿವರಗಳಿಂದ ತುಂಬಿದ ಆವೃತ್ತಿ (ಹಾಗೇ ಬಹುಶಃ ಅತಿ ಈಚೆಗಿನ ಆವೃತ್ತಿ) ಬರುವುದು ಬ್ರಹ್ಮಾಂಡ ಪುರಾಣದಲ್ಲಿ. ಅಂತೂ ಪುರಾಣದ ಮೂಲ ತಿರುಳು ಈ ಎಲ್ಲ ಆವೃತ್ತಿಗಳಲ್ಲಿಯೂ ಹಾಗೇ ಉಳಿದಿದೆ.

ಸಮಾನಾಂತರಗಳು ಎಷ್ಟು ವ್ಯಂಗ್ಯಪೂರ್ಣವಾಗಿವೆ! ಕೃಷ್ಣನು ಈ ಕತೆಯನ್ನು ಮಹಾಯುದ್ಧದ ಕೊನೆಯಲ್ಲಿ ಹೇಳುತ್ತಾನೆ; ಆತನು ಅದನ್ನು ಸ್ಯಮಂತಪಂಚಕದಲ್ಲಿ ಹೇಳುತ್ತಾನೆ. ಕುರು- ಪಾಂಚಾಲರು ರಾಮನು ನಿಲ್ಲಿಸಿದಲ್ಲಿಂದಲೇ ರುದ್ರ ಮಾರಣ ಕೃತ್ಯವನ್ನು ಆರಂಭಿಸಬೇಕಾಗಿ ಬಂದದ್ದು ಕ್ರೂರ ವಿಧಿ.

ಮಹಾಭಾರತದ ಶಾಂತಿಪರ್ವದಲ್ಲಿ ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ರಣಭೂಮಿಯಲ್ಲಿ ಸಾಗುತ್ತಾ, ಪಾಂಡವರಿಗೆ ಪರಶುರಾಮನ ಕಥೆಯನ್ನು ಹೇಳುತ್ತಾನೆ. ಈ ಘಟನೆಯು ಕಾಲ ದೇಶಗಳೆರಡರಿಂದಲೂ ಬಾಧಿತವಾದ ಕ್ರೂರ ವ್ಯಂಗ್ಯದಿಂದ ಕೂಡಿದೆ. ಕೃಷ್ಣನು ಹೇಗೆ ಪರಶುರಾಮನು ಸ್ಯಮಂತಪಂಚಕದಲ್ಲಿ ತನ್ನ ಕೊಡಲಿಯನ್ನು ತೊಳೆದು, ಮೂರು ರಕ್ತದ ಕೊಳಗಳನ್ನು ನಿರ್ಮಿಸಿ ತಾನು ಪ್ರಾರಂಭಿಸಿದ ಮಹಾರಣಹೋಮಕ್ಕೆ ವಿದಾಯ ಹೇಳಿದನೆಂದು ವಿವರಿಸುತ್ತಾನೆ.

ಇಪ್ಪತ್ತೊಂದು ಬಾರಿ ಕ್ಷತ್ರಿಯರಿಂದ ಭೂಮಿಯನ್ನು ಮುಕ್ತವಾಗಿಸಿದ ತರುವಾಯ, ಇಲ್ಲಿಯೇ ರಾಮನು ತನ್ನ ಕೃತ್ಯಕ್ಕೆ ವಿದಾಯ ಹೇಳಿದನು. (ಮ.ಭಾ. 12.48.9) ಇದರ ಸಮಾನಾಂತರಗಳು ಎಷ್ಟು ವ್ಯಂಗ್ಯಪೂರ್ಣವಾಗಿವೆ! ಕೃಷ್ಣನು ಈ ಕತೆಯನ್ನು ಮಹಾಯುದ್ಧದ ಕೊನೆಯಲ್ಲಿ ಹೇಳುತ್ತಾನೆ; ಆತನು ಅದನ್ನು ಸ್ಯಮಂತಪಂಚಕದಲ್ಲಿ ಹೇಳುತ್ತಾನೆ. ಕುರು- ಪಾಂಚಾಲರು ರಾಮನು ನಿಲ್ಲಿಸಿದಲ್ಲಿಂದಲೇ ರುದ್ರ ಮಾರಣ ಕೃತ್ಯವನ್ನು ಆರಂಭಿಸಬೇಕಾಗಿ ಬಂದದ್ದು ಕ್ರೂರ ವಿಧಿ. ಅಲ್ಲದೇ ನಾವು ಇತಿಹಾಸದಿಂದ ಪಾಠ ಕಲಿಯೋದು ಹೋಗಲಿ, ನಮ್ಮ ಪುರಾಣ ಕತೆಗಳೂ ಹಿಂದಿನ ಪುರಾಣ ಕತೆಗಳಿಂದ ಕಲಿಯುವುದಿಲ್ಲವಲ್ಲ ಎಂಬ ಸತ್ಯವೂ ನಮ್ಮನ್ನು ಕಲಕುತ್ತದೆ.

ತನ್ನ ತಂದೆಯ ಪಡಿಯಚ್ಚಿನಲ್ಲಿ ಪರಶುರಾಮ

ಈಗಾಗಲೇ ಹೇಳಿರುವಂತೆ, ರಾಮಾಯಣದ ನಂತರದ ಕೃತಿಗಳಲ್ಲಿ ಜಮದಗ್ನಿಯ ವ್ಯಕ್ತಿತ್ವ ನಿಧಾನವಾಗಿ ಗೌಣವಾಗುತ್ತಾ ಹೋಗಿದೆ. ಪುರಾಣಗಳಲ್ಲಿ ಅವನ ಹೆಸರು ಸಪ್ತರ್ಷಿಗಳ ಪಟ್ಟಿಯಲ್ಲಿ ಬರುವುದಿಲ್ಲ. ಅವನ ಬದಲು ಆಂಗೀರಸನ ಹೆಸರು ಉಲ್ಲೇಖಿತವಾಗಿದೆ. ಹಾಗೆ ನೋಡಿದರೆ, ಪುರಾಣಗಳಲ್ಲಿ ಬರುವ ಸಪ್ತ ಋಷಿಗಳು ಅದಕ್ಕೂ ಹಿಂದಿನ ಕೃತಿಗಳಲ್ಲಿ ಕಂಡುಬರುವ ಸಪ್ತ ಋಷಿಗಳಿಗಿಂತ ಭಿನ್ನವಾಗಿದ್ದಾರೆ. ಈ ರೀತಿಯ ಎರಡು ವಿಭಿನ್ನ ಸಪ್ತ ಋಷಿಗಳ ಸಂಪ್ರದಾಯಗಳ ಅಸ್ತಿತ್ವದ ಬಗ್ಗೆ ವಿವರವಾದ ಅಧ್ಯಯನ ಈಗಾಗಲೇ ನಡೆದಿದೆ (ಮಿಚ್‍ನರ್, 1982). ವೇದಗಳಿಂದ ತೊಡಗಿ, ರಾಮಾಯಣದ ತನಕ ಬರುವ ಸಪ್ತಋಷಿಗಳ ಪಟ್ಟಿಯಲ್ಲಿ ಬರುವ ಋಷಿಗಳೆಂದರೆ ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೋತಮ, ಅತ್ರಿ, ವಸಿಷ್ಠ ಹಾಗೂ ಕಶ್ಯಪ. ಸಮಯ ಸರಿದಂತೆ, ಈ ಪಟ್ಟಿಯಲ್ಲಿ ಮಾರ್ಪಾಟುಗಳಾದವು. ಕೊನೆಗೆ, ಈ ಹೆಸರುಗಳ ಬದಲು ಹೊಸ ಹೆಸರುಗಳ ಪಟ್ಟಿಯೇ ಅಸ್ತಿತ್ವಕ್ಕೆ ಬಂದಿತು. ಮಹಾಭಾರತ ಹಾಗೂ ಪುರಾಣಗಳಂತಹ ಈಚೆಗಿನ ಕೃತಿಗಳಲ್ಲಿ ಕಂಡುಬರುವ ಸಪ್ತಋಷಿಗಳು; ಮಾರೀಚ, ಅತ್ರಿ, ಆಂಗಿರಸ, ಪುಲಸ್ತ್ಯ, ಪುಲಹ, ಕ್ರತು ಹಾಗೂ ವಸಿಷ್ಠ. ಮಿಚ್‍ನರ್‍ನ ಪ್ರಕಾರ, ಮೌರ್ಯರ ಕಾಲದ ಕೊನೆಯ ಹಾಗೂ ಗುಪ್ತರ ಕಾಲದ ಆರಂಭದ ನಡುವಿನ ಸಮಯದಲ್ಲಿನ ಅವಕಾಶದಲ್ಲಿ ಸಪ್ತಋಷಿಗಳ ಹೊಸ ಯಾದಿಯು ಚಾಲ್ತಿಯಲ್ಲಿ ಬಂದಿತು. (ಅಂದರೆ ಸು. ಕ್ರಿ.ಪೂ 100 ಹಾಗೂ ಕ್ರಿ.ಶ. 200ರ ನಡುವೆ).

ಸಪ್ತಋಷಿಗಳ ಪರಂಪರೆಯ ಬದಲಾವಣೆಯ ಜೊತೆಜೊತೆಗೆ, ಭೃಗು ಹಾಗೂ ಭಾರ್ಗವರ ಪ್ರಾಮುಖ್ಯತೆಯು ಲೌಕಿಕ-ಪಾರಲೌಕಿಕ ಕ್ಷೇತ್ರಗಳೆರಡರಲ್ಲಿಯೂ ಹೆಚ್ಚಿತು. ಬೆಳೆಯುತ್ತಿದ್ದ ಭಾರ್ಗವ ಗೋತ್ರದಲ್ಲಿ ಜಾಮದಗ್ನ್ಯ ಗೋತ್ರವು ವಿಲೀನಗೊಂಡಿತು. ಅನುಕ್ರಮವಾಗಿ ಹಲವು ಸಂಬಂಧಗಳು ಮತ್ತೆ ಹೆಣೆಯಲ್ಪಟ್ಟವು. ಹೊಸ ಸಂಬಂಧಗಳು ಸ್ಥಾಪಿತವಾದವು. ಜಮದಗ್ನಿಯು ಕೂಡಾ ಭಾರ್ಗವನೆಂದೂ, ಋಚೀಕನ ಮಗನೆಂದೂ ಹೇಳಲಾಗುತ್ತಿದ್ದ ಕಾಲದಲ್ಲಿ ಪರಶುರಾಮನ ದಂತಕಥೆಯ ರಚನೆಯಾಯಿತು. ಹೀಗೆ, ತನ್ನ ಆಂತರ್ಯದ ಅಸ್ತಿತ್ವವನ್ನು ಗುರುತಿಸಿ, ರೂಪಿಸಿಕೊಳ್ಳುವುದೇ ಪರಶುರಾಮನ ಮೂಲ ಕಾಳಜಿಯಾಗಿ ಕಂಡುಬಂದರೆ ಆಶ್ಚರ್ಯವೇನಲ್ಲ.

ಬ್ರಾಹ್ಮಣಗಳಲ್ಲಿ ಜಮದಗ್ನಿಯನ್ನು ವಿಭಿನ್ನ ಜೀವಜಂತುಗಳ ಜನಕನೆಂದು ಹೇಳಲಾಗಿದೆ.

“ಜಮದಗ್ನಿಯು ಬಯಸಿದನು: ‘ನಾನು ಪ್ರಜೆಗಳನ್ನೂ ಪಶುಗಳನ್ನೂ ಉಂಟುಮಾಡುವಂತಾಗಲಿ’,
ಅವನು ನಾಲ್ಕು ರಾತ್ರಿಗಳ ಯಜ್ಞವನ್ನು ಕಂಡನು; ಅದನ್ನು ತೆಗೆದುಕೊಂಡು ಹೋಮ ಮಾಡಿದನು.
ಆಗ ಬಹಳಷ್ಟು ಪ್ರಜೆಗಳೂ, ಪಶುಗಳೂ ಅವನಿಂದ ಸೃಷ್ಟಿಯಾದವು ಮತ್ತು ಅವನಿಂದ ಪ್ರಜನಿತರಾದವರಲ್ಲಿ ಯಾವುದೇ ಇಬ್ಬರೂ ಓರ್ವರೂ ಪರಸ್ಪರ ಗುರುತಿಸಲಾರದಾದರು”
(ಜೈಮಿನಿಯು ಬ್ರಾಹ್ಮಣ. 2.285, ಒತ್ತು ಲೇಖಕನದು).

ಔರ್ವ ಶಬ್ದವು ತೊಡೆ (ಊರು)ಯಿಂದ ಜನಿಸಿದವರನ್ನು ಸೂಚಿಸುತ್ತದೆ. ಸ್ತ್ರೀ ಸಂಸರ್ಗವಿಲ್ಲದೇ ತಾನೊಬ್ಬನೇ ಪ್ರಜೋತ್ಪತ್ತಿ ಮಾಡಬಲ್ಲ ಋಷಿಯ ಅಲೌಕಿಕ ಸಾಮಥ್ರ್ಯವು ಈ ಪರಿಕಲ್ಪನೆಯಲ್ಲಿ ಅಭಿಪ್ರೇತವಾಗಿದೆ. ಮಿಗಿಲಾಗಿ, ಔರ್ವನೆಂಬ ಆರ್ಕಿಟೈಪ್‍ಗೂ, ವ್ಯಕ್ತಿತ್ವದ ತನ್ನತನದ ಹುಡುಕಾಟಕ್ಕೂ ನಿಕಟತಮ ಸಂಬಂಧವಿರುವಂತೆ ಕಾಣಿಸುತ್ತದೆ. ಜೈಮಿನಿಯ ಬ್ರಾಹ್ಮಣದಲ್ಲಿಯೇ ಇಂದ್ರನ ಪುತ್ರರಾದ ಲುಸ ಹಾಗೂ ಕುತ್ಸರ ಬಗೆಗಿನ ಕುತೂಹಲಪೂರ್ಣ ಕಥೆಯೊಂದಿದೆ. ಆ ಕತೆಯ ಪ್ರಕಾರ ಲುಸನು ಮಹತ್ವವನ್ನೂ, ಕುತ್ಸನು ತನ್ನ ತಂದೆಯಾದ ಇಂದ್ರನ ಆತ್ಮವನ್ನು ಪಡೆಯತ್ತಾರೆ. ಆಸಕ್ತಿಯ ವಿಷಯವೆಂದರೆ ಇಲ್ಲಿ ಕುತ್ಸನು ಔರ್ವನಾಗಿದ್ದನೆಂದು ಹೇಳಲಾಗಿದೆ. ಈ ದೃಷ್ಟಾಂತಗಳು ಔರ್ವರ ಜೊತೆಗೆ ಸಂಲಗ್ನವಾಗಿರುವ ಸ್ವಸ್ವರೂಪ ಜ್ಞಾನದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಬಹುಶಃ ಪರಶುರಾಮನ ಕಥೆಯೂ ಅಂತಹ ಆರ್ಕಿಟೈಪ್‍ನ ಸುತ್ತ ಹೆಣೆಯಲ್ಪಟ್ಟುದಾಗಿದೆ. ಮೂಲತಃ ಔರ್ವರು ಜಮದಗ್ನಿಯ ಸಂತಾನವೆಂದು ಉಲ್ಲೇಖಿತವಾಗಿದ್ದರೂ, ಭಾರ್ಗವ ಗೋತ್ರವು ಪ್ರಾಬಲ್ಯಕ್ಕೆ ಬಂದನಂತರ, ಭಾರ್ಗವರಲ್ಲಿಯೂ ಔರ್ವರ ಸಂತತಿ ಕಾಣಿಸಿಕೊಳ್ಳಲಾರಂಭಿಸಿತು. (ಉದಾ: ದೇವೀ ಭಾಗವತ) ಬ್ರಹ್ಮಾಂಡ ಪುರಾಣದಲ್ಲಿಯಂತೂ ಋಚೀಕನ ತಂದೆಯೂ ಔರ್ವನೆಂದು ಹೇಳಲಾಗಿದೆ!

ಈ ಹಿನ್ನೆಲೆಯಲ್ಲಿ ಪರಶುರಾಮನ ವ್ಯಕ್ತಿತ್ವದ ವಿಕಾಸದ ಅಧ್ಯಯನವು ನುಗ್ಗಿಬರುವ ಅಡತಡೆಗಳ ನಡುವೆಯೂ ಅಸ್ತಿತ್ವಕ್ಕೆ ಬರುವ ಭಾರತೀಯ ಶಿಶುವಿನ ಸ್ವಸ್ವರೂಪ ಜ್ಞಾನದ ಮೂಲಭೂತ ಅಧ್ಯಯನವಾಗಿ ಪರಿಣಮಿಸುತ್ತದೆ. ಪರಶುರಾಮನ ಸ್ವಸ್ವರೂಪದ ಅರಿವಿನ ದಾರಿಯಲ್ಲಿ ಮೂರು ಪ್ರಮುಖ ಮಜಲುಗಳೆಂದರೆ, ಆತನು ಮುಖಾಮುಖಿಯಾಗಿ ಎದುರಿಸಿದ ಮೂರು ವ್ಯಕ್ತಿಗಳು. ಈ ಮೂರು ಭೇಟಿಗಳು ನಡೆದುದು ಕ್ರಮವಾಗಿ ಕಾರ್ತವೀರ್ಯ ಅರ್ಜುನನೊಡನೆ, ದಾಶರಥಿ ರಾಮನೊಡನೆ ಹಾಗೂ ಗಾಂಗೇಯ ಭೀಷ್ಮನೊಡನೆ. ಮೊದಲನೆಯ ಮುಖಾಮುಖಿಯಲ್ಲಿ (ಅಂದರೆ ಕಾರ್ತವೀರ್ಯನೊಡನೆ) ಈಡಿಪಸ್ ಕಾಂಪ್ಲೆಕ್ಸ್, ಅಥವಾ ತಾಯಿಯೊಡನೆ ತನ್ನತನವನ್ನು ಒಂದಾಗಿಸುವ ಗಂಭೀರ ಮನೋಪ್ರವೃತ್ತಿಯು ಗೋಚರವಾಗುತ್ತದೆ. ಪರಶುರಾಮನ ಗಾಥೆಯ ಕೆಲವು ಆವೃತ್ತಿಗಳ ಪ್ರಕಾರ, ರೇಣುಕೆಯು ಕಂಡು ಮನೋಚಂಚಲಗೊಂಡದ್ದು ಗಂಧರ್ವ ರಾಜನನ್ನಲ್ಲ; ಬದಲಾಗಿ ಕಾರ್ತವೀರ್ಯ ಅರ್ಜುನನನ್ನೇ. (ಈ ಘಟನೆಯ ತರುವಾಯ ರೇಣುಕೆಯ ಹತ್ಯೆ ಹಾಗೂ ಅವಳ ಪುನರುಜ್ಜೀವನವು ಬೇರೆಯೇ ವಿಶ್ಲೇಷಣೆಗೆ ವಸ್ತುವಾಗಿದ್ದು, ಅದನ್ನು ಮುಂದೆ ಚರ್ಚಿಸಲಾಗುತ್ತದೆ. ಜಮದಗ್ನಿ ಹಾಗೂ ಕಾರ್ತವೀರ್ಯರ ನಡುವೆ ಹಲವು ಸಾಮ್ಯಗಳನ್ನು, ಸಂವಾದಿಗಳನ್ನು ಗುರುತಿಸಬಹುದು. ‘ಜಮದಗ್ನಿ’ ಪದದ ವ್ಯುತ್ಪತ್ತಿಯು ಬೆಳೆಯುತ್ತಿರುವ ಮತ್ತು ಸರ್ವಭಕ್ಷಕನಾದ ಅಗ್ನಿಯನ್ನು ಸೂಚಿಸುತ್ತದೆ. (ಜಮತಃ ಅಗ್ನಿಃ ಅಥವಾ ಜಮತಃ ಜ್ವಲಂತಃ ಅಗ್ನಿಯೋ ಯಸ್ಯ ಸ ತಥೋಕ್ತಃ) ತನ್ನ ಎಲ್ಲೆಡೆಗೂ ಚಾಚಿದ ಸಾವಿರ ಬಾಹುಗಳಿಂದ ಹೈಹಯನೂ ಅಂತಹುದೇ ಪರಿಕಲ್ಪನೆಯನ್ನು ಧ್ವನಿಸುತ್ತಾನೆ. ಅವನ ವಧೆಯ ವಿವರಗಳು ಕತೆಯ ಎಲ್ಲ ಆವೃತ್ತಿಗಳಲ್ಲೂ ವಿಸ್ತಾರವಾಗಿ ಹೇಳಲ್ಪಟ್ಟಿವೆ. ಪರಶುರಾಮನು ಎರಡು ಭೀಕರ ಬ್ರಹ್ಮಾಸ್ತ್ರಗಳನ್ನು ನುಂಗಿದನೆಂದೂ ಹೇಳಲಾಗಿದೆ ಹಾಗೂ ಅವನು ಅರ್ಜುನನನ್ನು ಕೊಂದುದಾದರೂ ಹೇಗೆ? ಅವನ ತಲೆಯನ್ನು ಕತ್ತರಿಸುವ ಮೊದಲು, ರಾಮನು ಅವನೆಲ್ಲ ಬಾಹುಗಳನ್ನು ಪಂಕ್ತಿಯಲ್ಲಿ ಕಡಿದೊಗೆದನು. ತನ್ನ ತಾಯಿಯನ್ನೇ ಪೀಡಿಸುತ್ತಿದ್ದ ಲೈಂಗಿಕ ಪಶುವಿಗದು ಸರಿಯಾದ ಉತ್ತರ. ಬಾಹುಗಳು ಅಭಿಪ್ರೇತಿಸುವ ಫಾಲಿಕ್ ಸಂಕೇತಗಳ ಬಗ್ಗೆ ಹೆಚ್ಚು ಜನರು ಬರೆಯಬೇಕಾದ ಅಗತ್ಯವಿಲ್ಲ.

ಹೀಗೆ ಪರಶುರಾಮನ ಸ್ವಸ್ವರೂಪದ ಅರಿವಿನ ಪ್ರವಿಧಿಯು ಎರಡು ಮುಖ್ಯ ಸವಾಲುಗಳನ್ನು ಎದುರಿಸಬೇಕಾಯಿತು. ಒಂದು, ತನ್ನನ್ನು ತನ್ನ ತಂದೆಯ ಪಡಿಯಚ್ಚಿನಲ್ಲಿ ರೂಪೀಕೃತಗೊಳ್ಳಿಸುವುದು ಹಾಗೂ ಎರಡು, ತನ್ನ ಆಳದಲ್ಲಿ ಹುದುಗಿರುವ ಯೋಧನ ಸ್ಥಾಯೀಭಾವಗಳನ್ನು ಆಶ್ರಮವಾಸಿಯ ಶಾಂತಭಾವಗಳನ್ನಾಗಿ ಪರಿವರ್ತಿಸುವುದು.

ಆದರೆ, ಪರಶುರಾಮನ ಸ್ವಸ್ವಭಾವಜ್ಞಾನದ ಅಂತರಂಗಿಕ ಪ್ರಯಾಣವು ‘ಆರಂಭಿಕ ಅಲಗುವಿಕೆ’ಯ ನಂತರ ಹೊಸ ತಿರುವನ್ನು ಪಡೆಯುತ್ತದೆ. ಮಗುವೊಂದು ಬೆಳೆದು, ಈಡಿಪಸ್ ತುಮುಲವನ್ನು ಯಶಸ್ವಿಯಾಗಿ ದಾಟಿದ ಬಳಿಕ, ಅವನ/ಅವಳ ವ್ಯಕ್ತಿತ್ವವು ಸಾಮ್ಯ ಲಿಂಗದ ಪಿತೃಗಳೊಡನೆ ಸಂವಾದಿಯಾಗಿ ಗುರುತಿಸಲ್ಪಡುತ್ತದೆ. ನಮ್ಮ ಪ್ರಾಥಮಿಕ ಪ್ರಾಯ ಸಿದ್ಧಾಂತವು ಹೀಗಿದೆ: ತನ್ನ ತಂದೆಯ ಸಾರೂಪ್ಯದಲ್ಲಿ ತನ್ನ ಸ್ವಂತ ವ್ಯಕ್ತಿತ್ವವನ್ನು ರೂಪಿಸುವ ಒಳತೋಟಿಯೇ

ಪರಶುರಾಮನ ಜೀವನದ ಮುಖ್ಯ ಸ್ರೋತವಾಗಿತ್ತು. ಅವನದು ನಿರಾಕೃತವಾದ ಜನನ; ಅಥವಾ ಹೆಚ್ಚೆಂದರೆ ಮುಂದೂಡಲ್ಪಟ್ಟ ಜನನ. ಸತ್ಯವತಿಯು ಕ್ಷತ್ರಿಯನಾದ ಮಗುವನ್ನು ಪಡೆಯುವ ಭವಿಷ್ಯವನ್ನು ಬಯಸಿರಲಿಲ್ಲ. ಹಾಗೆಂದೇ ರಾಮನ ಜನನವು ಒಂದು ತಲೆಮಾರು ಮುಂದಕ್ಕೆ, ಸತ್ಯವತಿಯ ಮೊಮ್ಮಗನ ರೂಪದಲ್ಲಿ ಆಯಿತು. ಪೂರ್ಣವಾಗಿ ಬ್ರಾಹ್ಮಣ ಸತ್ವ ತುಂಬಿದ ಆಶ್ರಮದಲ್ಲಿ, ಕ್ಷಾತ್ರ ಸ್ವಭಾವದ ಪರಶುರಾಮನ ಜನನವಾಯಿತು. ಹೀಗೆ ಪರಶುರಾಮನ ಸ್ವಸ್ವರೂಪದ ಅರಿವಿನ ಪ್ರವಿಧಿಯು ಎರಡು ಮುಖ್ಯ ಸವಾಲುಗಳನ್ನು ಎದುರಿಸಬೇಕಾಯಿತು. ಒಂದು, ತನ್ನನ್ನು ತನ್ನ ತಂದೆಯ ಪಡಿಯಚ್ಚಿನಲ್ಲಿ ರೂಪೀಕೃತಗೊಳ್ಳಿಸುವುದು ಹಾಗೂ ಎರಡು, ತನ್ನ ಆಳದಲ್ಲಿ ಹುದುಗಿರುವ ಯೋಧನ ಸ್ಥಾಯೀಭಾವಗಳನ್ನು ಆಶ್ರಮವಾಸಿಯ ಶಾಂತಭಾವಗಳನ್ನಾಗಿ ಪರಿವರ್ತಿಸುವುದು. ಪರಶುರಾಮನು ಈ ಎರಡು ಸವಾಲುಗಳನ್ನು ಕ್ರಮವಾಗಿ ದಾಶರಥಿರಾಮನ ಹಾಗೂ ಭೀಷ್ಮನ ಜೊತೆಯಲ್ಲಿ ನಡೆದ ಮುಖಾಮುಖಿಯಲ್ಲಿ ಎದುರಿಸುತ್ತಾನೆ.

ಪರಶುರಾಮನು ದಾಶರಥಿ ರಾಮನಿದಿರು ಬರುತ್ತಿದ್ದಂತೆ ರಾಮಾಯಣದ ಕಥೆಯು ಬೀಭತ್ಸಕರ ತಿರುವನ್ನು ಪಡೆಯುತ್ತದೆ. ಅವನ ಆಗಮನವನ್ನು ಸೂರ್ಯಗ್ರಹಣ ಹಾಗೂ ಬಿರುಗಾಳಿಯಂತಹ ಭೀಕರ ಶಕುನಗಳು ಮುನ್ಸೂಚಿಸುತ್ತವೆ.

“ಕ್ಷತ್ರಿಯ ಧರ್ಮವನ್ನು ಎಲ್ಲಕ್ಕೂ ಹೆಚ್ಚಾಗಿ ಗೌರವಿಸುತ್ತಾ (ಪರಶುರಾಮನು ಗರ್ಜಿಸಿದನು)

“ಎಲೈ ರಾಮಾ ನನ್ನ ಪಿತಾಮಹನಿಂದ ನನ್ನ ತಂದೆಯು ಪಡೆದ
ಈ ವೈಷ್ಣವ ಧನುಸ್ಸನ್ನು ತೆಗೆದುಕೋ. ಎಲೈ ಕಾಕುತ್ಸಕುಲಮಣಿ ನಿನ್ನಲ್ಲಿ ಸಾಮಥ್ರ್ಯವಿದ್ದರೆ
ಈ ಧನುಸ್ಸಿಗೆ ಶತ್ರು ಸೇನಾಘಾತಕವಾದ ಬಾಣವನ್ನು ಹೂಡು.
ಹಾಗೆ ಮಾಡಿದರೆ (ಮಾತ್ರ) ನಾನು ನಿನ್ನೊಡನೆ ದ್ವಂದ್ವವನ್ನಾಡುವೆ”.

ರಾಮನಾದರೋ ನಿರಾಯಾಸವಾಗಿ ಹೆದೆಯೇರಿಸಿ, ಧನುಸ್ಸಿಗೆ ಸಾಯಕವನ್ನು ಹೂಡಿ ನುಡಿದನು;

‘ಪ್ರಸ್ತುತ ನಿನ್ನಲ್ಲಿರುವ (ತಡೆರಹಿತ) ಚಲನೆಯ ಶಕ್ತಿಯನ್ನು
ಅಥವಾ ನೀನು ಗಳಿಸಿದ ಪುಣ್ಯ ಲೋಕಗಳನ್ನು
ನನ್ನ ಬಾಣದ ಗುರಿಯಾಗಿಸಬೇಕೆಂಬುದು ನನ್ನ ನಿರ್ಧಾರ”.

ಪರಾಭವಗೊಂಡ ಪರಶುರಾಮನು, ತನ್ನ ಸವಾಲನ್ನು ಹಿಂತೆಗೆದುಕೊಂಡನು. (ಆಧ್ಯಾತ್ಮ ರಾಮಾಯಣದಲ್ಲಿ ಈ ಪರಾಭವ ಇನ್ನೂ ಕಹಿಯಾಗಿ ಚಿತ್ರಿತವಾಗಿದೆ. ಅಲ್ಲಿ ರಾಮನ ಬಾಣದ ಗುರಿ ಪರಶುರಾಮನ ಕಾಲುಗಳತ್ತ ಎಂದು ಹೇಳಲಾಗಿದೆ). ತಾನು ಅರ್ಜಿಸಿದ ಪುಣ್ಯಲೋಕಗಳನ್ನು, ದೈವಿಕ ಗೃಹಗಳನ್ನು ರಾಮನ ಬಾಣಕ್ಕೆ ಗುರಿ ಮಾಡಿದನು ಪರಶುರಾಮ. ಈ ಪ್ರಮುಖ ಮುಖಾಮುಖಿಯ ಉತ್ತಮ ವರ್ಣನೆ ಕಾಳಿದಾಸನ ರಘುವಂಶದಲ್ಲಿ ಬಂದಿದೆ. ಅಲ್ಲಿ, ಪರಾಭವಗೊಂಡ ಪರಶುರಾಮ ಹೀಗೆನ್ನುತ್ತಾನೆ;

“ತಾಯಿಯ ಕಡೆಯಿಂದ ನನಗೆ ಲಭಿಸಿದ ರಾಜಸ ಗುಣವನ್ನು
(ನೀನು) ಕಳೆದು, ತಂದೆಯಿಂದ ಪಡೆದ ಶಮಾ ಗುಣದತ್ತ ನಡೆದಂತೆ ಮಾಡಿದೆ.
ಈ ರೀತಿ ಲಭ್ಯವಾದ ಅನಿಂದಿತ ಫಲಸಂಧಿಯಿಂದಾಗಿ
ನಿನ್ನ ನಿಗ್ರಹವೇ ನನಗೆ ಅನುಗ್ರಹವಾಯಿತು”
(ರಘುವಂಶ, 11.90. ಒತ್ತು ಲೇಖಕನದು).

ಪ್ರಾಯಶಃ ಶ್ರೇಷ್ಠ ಮನೋವಿಜ್ಞಾನಿ ಎರಿಕ್ ಫ್ರಾಮ್‍ನ ಈ ಕೆಳಗಿನ ವಾಕ್ಯಗಳು ಮೇಲಿನ ಘಟನೆಯ ಸಾಂಕೇತಿಕ ಅರ್ಥಗ್ರಹಣಕ್ಕೆ ಸಹಕಾರಿಯಾದಾವು; “ತಾಯಿಯು ನಾವು ಬಂದ ಮನೆ, ಅವಳು ಪ್ರಕೃತಿ, ಮಣ್ಣು, ಸಮುದ್ರ. ಆದರೆ ತಂದೆಯು ನೈಸರ್ಗಿಕ ಜಗತ್ತನ್ನು ಪ್ರತಿನಿಧೀಕರಿಸುವುದಿಲ್ಲ. ಅವನು ಮಾನವನ ಅಸ್ತಿತ್ವದ ಇನ್ನೊಂದು ಧೃವವನ್ನು ಸಂಕೇತಿಸುತ್ತಾನೆ. ಅದು ಚಿಂತನೆಯ ಲೋಕ. ಶಿಸ್ತಿನ ಲೋಕ. ಪ್ರಯಾಣದ ಹಾಗೂ ಸಾಹಸದ ಲೋಕ” (ಫ್ರಾಮ್ 1971). ತಾನು ಅರ್ಜಿಸಿದ ಪುಣ್ಯಲೋಕಗಳನ್ನು ರಾಮನ ಬಾಣಕ್ಕೆ ಗುರಿಯಾಗಿ ನೀಡಿ, ಪರಶುರಾಮನು ತಂದೆಯ ಜಗತ್ತಾದ ಚಲನೆ, ಪ್ರಯಾಣ, ಸಾಹಸಗಳತ್ತ ತನ್ನ ಒಲವನ್ನು ಪ್ರಕಟಿಸಿದನು.

ಭೀಷ್ಮನೊಡನೆ ನಡೆದ ಮುಖಾಮುಖಿಯು ಇದೇ ಮೂಲವಸ್ತುವನ್ನು ಬಲಪಡಿಸುತ್ತದೆ. ಭೀಷ್ಮನು ಪರಶುರಾಮನ ಶಿಷ್ಯ; ಅವನಿಂದ ಧನುರ್ವಿದ್ಯೆಯನ್ನು ಪಡೆದಿದ್ದಾತ. ಘಟನೆಗಳ ತಿರುವು ಮುರುವಿನಿಂದಾಗಿ ಪರಶುರಾಮನು ಅವನನ್ನೇ ವಿರೋಧಿಸಬೇಕಾಗಿ ಬಂತು. ಅಂಬಾಳಿಗಾದ ಅನ್ಯಾಯವನ್ನರಿತು ಕನಲಿದ ರಾಮನು ಭೀಷ್ಮನಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದನು. ಅಪೂರ್ವವಾದ ಯುದ್ಧದಲ್ಲಿ ರಾಮನು ಭೀಷ್ಮನೊಡನೆ ಕಾದಾಡಿದ. ಮಹಾಭಾರತದ ಉದ್ಯೋಗ ಪರ್ವದಲ್ಲಿ ಈ ಮಹಾಯುದ್ಧದ ವಿಸ್ತತ ವರ್ಣನೆಯಿದೆ. ಕದನದುದ್ದಕ್ಕೂ ಭೀಷ್ಮನನ್ನು ಅಷ್ಟವಸಿಲಗಳೂ, ಗಂಗೆಯೂ ಸಂರಕ್ಷಿಸುತ್ತಿದ್ದರು. ಮತ್ತೆ, ಈ ಹಿಂದೆ ವರ್ಣಿಸಿದ ಘಟನೆಯಲ್ಲಾದಂತೆ, ಪರಶುರಾಮನು ಮೂರ್ಛಿತನಾದೊಡನೆ, ಸೂರ್ಯಗ್ರಹಣವಾಯಿತು. (ಆರ್ಕೇ ಚ ಸಹಸಾ ದೀಪ್ತಂ ಸ್ವರ್ಭಾನುರಭಿ ಸಂವೃಣೋತ್). ಮೂರ್ಛೆ ತಿಳಿದೆದ್ದು ರಾಮನು ದ್ವಿಗುಣ ಪರಾಕ್ರಮದಿಂದ ಕಾಡಿದನು. ಅವನನ್ನುದ್ದೇಶೀಸಿ ಭೀಷ್ಮನಾಡಿದ ಮಾತು;

“ನಿನ್ನ ಶರೀರದಲ್ಲಿರುವ ವೇದಗಳನ್ನು ನಿಮ್ಮಲ್ಲಿರುವ ಬ್ರಹ್ಮ ತೆಜವನ್ನು
ಹಾಗೂ ನಿಮ್ಮ ತಪಸ್ಸನ್ನು ನಾನು ಘಾತಿಸಲಾರೆ.
ನೀವು ಕ್ಷತ್ರ ಸ್ವಭಾವವನ್ನು ಅನುಕರಿಸಿದ್ದರಿಂದ, ನಿಮ್ಮಲ್ಲಿರುವ ಕ್ಷತ್ರಿಯತನಕ್ಕೇ ನನ್ನ ಪ್ರಹಾರ..” (ಮಹಾಭಾರತ..)

ಖಚಿತವಾಗಿಯೂ ನಿಜ; ಹಾಗೆಂದೇ ನಾನು ಈ ಮುಖಾಮುಖಿಯನ್ನು ಪರಶುರಾಮನ ಬಾಳಿನ ಅತ್ಯಂತ ಪ್ರಮುಖ ಘಟನೆಯೆಂದು ಪರಿಗಣಿಸುತ್ತೇನೆ. ಅನುಗುಣವಾಗಿ ಜಮದಗ್ನಿಯು ಯುದ್ಧಭೂಮಿಗೆ ಬಂದು ರಾಮ ಹಾಗೂ ಭೀಷ್ಮರಿಗೆ ತಿಳಿಹೇಳಿದ ಮೇಲೆಯೇ ಯುದ್ಧ ಕೊನೆಗೊಳ್ಳುತ್ತದೆ. ಜೊತೆಗೆ ಪರಶುರಾಮನ ಅಂತಃಸತ್ವವು ತನ್ನ ತಂದೆಯ ವ್ಯಕ್ತಿತ್ವದ ಎರಕದಲ್ಲಿ ಸಾರೂಪ್ಯವನ್ನು ಹೊಂದುತ್ತದೆ. ಔರ್ವನು ತನ್ನ ತಂದೆಯ ಆತ್ಮವನ್ನು ಪಡೆದನು. ಈಗ ಅವನ ಮುಂದೆ ಆಶ್ರಮವಾಸಿಯ ಸ್ವಭಾವ ಹಾಗೂ ಮುನಿಯ ಧ್ಯೇಯಗಳು ಮಾತ್ರ ಉಳಿದಿದ್ದವು.

ಅದು ಹೇಗಿದ್ದರೂ, ತನ್ನ ತಂದೆಯ ಅಂತಃಸತ್ವದೊಡನೆ ಸಾರೂಪ್ಯಗೊಂಡ ಸ್ವಸ್ವಭಾವದ ಅರಿವಿನ ಪ್ರವಿಧಿ ಪರಶುರಾಮನ ಪಾಲಿಗೆ ಸುಲಭದ್ದಾಗಿರಲಿಲ್ಲ. ಹಾಗೆಂದೇ ನಮಗಿಲ್ಲಿ ಭಾರತದಲ್ಲಿ ತಂದೆ ಮಕ್ಕಳ ನಡುವಿನ ಸಂಬಂಧದ ಬಗೆಗಿನ ಕುತೂಹಲಕರ ಅಂಶಗಳು ಸ್ಪಷ್ಟವಾಗುತ್ತವೆ. ತನ್ನ ಮನೋಲೈಂಗಿಕ ಬೆಳವಣಿಗೆಯ ಫಾಲಿಕ್ ಮಜಲಿನಲ್ಲಿ ಅಂದರೆ ಸುಮಾರು ಮೂರರಿಂದ ಐದು ವರ್ಷದ ತನಕ ಮಗುವು ತನ್ನ ಸುತ್ತಲೂ ಹಬ್ಬಿರುವ ಅಹಮಹಮಿಕೆಯ ನಾರ್ಸಿಸಿಸ್ಟ್ ವಾತಾವರಣದಿಂದ ಬೇರೆಯಾಗಿ, ಸ್ವತಂತ್ರ ಪ್ರಜ್ಞಾವಂತ ಜೀವಿಯಾಗಿ ರೂಪುಗೊಳ್ಳುತ್ತದೆ. ಹಾಗೆಯೇ ಮಗುವು ತನಗಿಂತಲೂ ಹಿರಿಯದಾದ ಸದಾ ಲಾಲನೆಯಿಂದ ಕೂಡಿದ ತಾಯಿಯೆಂಬ ಪ್ರಜ್ಞಾಪ್ರವಾಹದಿಂದ ತಾನು ಬೇರೆಯೇ ಆದ ಪ್ರಜ್ಞಾಪ್ರವಾಹವೆಂದೂ ಅರಿಯುತ್ತದೆ. ಈ ರೀತಿಯ ‘ಅಗಲುವಿಕೆ’ಯು ಭಾರತದಲ್ಲಿ ಬಹಳ ತಡವಾಗಿ ಬರುತ್ತದೆ. ಆದ್ದರಿಂದ ತಾಯಿ-ಮಗುವಿನ ಸಂಬಂಧ ಇಲ್ಲಿ ಬಹಳ ಕಾಲದ ತನಕ, ಕೆಲವು ಬಾರಿ ಎಂದೂ ಮುಗಿಯಲಾರದೇನೋ ಎಂಬಂತೆ, ಉಳಿದುಬರುತ್ತದೆ.

ವಿಶೇಷತಃ ಗಂಡು ಮಗು ಈ ಮಜಲಿನಲ್ಲಿ ಬೆಳವಣಿಗೆ ಹೊಂದಲು ಕ್ರಿಯಾ ಸಾಮಥ್ರ್ಯದ ವಿಶ್ವಾಸ ಗಳಿಸಲು ಹಾಗೂ ‘ಕೆಟ್ಟ’ ತಾಯಿಯ ಹಿಡಿತದಿಂದ ಪಾರಾಗಲು ಪ್ರಬಲನೂ, ಶಕ್ತಿಶಾಲಿಯೂ ಆದ ತಂದೆಯ ಅವಶ್ಯಕತೆಯಿದೆ. ಸುಧೀರ್ ಕಕರ್ ಹೇಳುವಂತೆ, ‘ಸಾಂಸ್ಕತಿಕವಾಗಿ ಸಂಪ್ರದಾಯವೆಂಬಂತೆ ಭಾರತದಲ್ಲಿ ತಂದೆ ಮತ್ತು ಮಗನ ನಡುವಿನ ಸಂಬಂಧವು ಬಹಳಷ್ಟು ಸಂಯಮದಿಂದ (ನಿಗ್ರಹದಿಂದ) ಕೂಡಿದೆ.

ಮನೋವಿಜ್ಞಾನಿಗಳ ಅಭಿಪ್ರಾಯದಲ್ಲಿ ಈ ರೀತಿಯ ಕಚ್ಚಾದ್ರವ್ಯವು ವ್ಯಕ್ತಿಯ ಸ್ವಭಾವ (ತನ್ನತನ)ಕ್ಕೆ ನೀಡಲಾದ ಗುಣಾತ್ಮಕ ಆದಾನವಾಗಿ ಪರಿಣಮಿಸುತ್ತದೆ. ಆದರೆ, ನಮ್ಮ ಸಮಾಜೋ-ಸಾಂಸ್ಕೃತಿಕ ಚೌಕಟ್ಟು ಫಾಲಿಕ್ ಮಜಲನ್ನು ದಾಟಿ ಬೆಳೆದ ಮಗುವಿಗೆ ಬೇಕಾದ ಭದ್ರ ನೆಲೆಯನ್ನು ಕಲ್ಪಿಸಿಕೊಡುವುದಿಲ್ಲ. ಫಾಲಿಕ್‍ನ ನಂತರದ ಮಜಲಾದ ಲೇಟನ್ಸಿ ಸ್ತರದಲ್ಲಿ ಸುಮಾರು ಆರು ವರ್ಷದಿಂದ ಹನ್ನೊಂದು ವರ್ಷದ ತನಕ ಅಥವಾ ಎರಿಕ್‍ಸನ್ ಹೇಳುವ ಪ್ರಕಾರ ‘ಸ್ಕೂಲ್’ ಸ್ತರದಲ್ಲಿ ಮಗು ತನ್ನ ಸಾಮ್ಯ ಲಿಂಗದ ಪಿತೃಗಳೊಡನೆ ಸಾರೂಪ್ಯಗೊಳ್ಳಲು ಯತ್ನಿಸುತ್ತದೆ. ವಿಶೇಷತಃ ಗಂಡು ಮಗು ಈ ಮಜಲಿನಲ್ಲಿ ಬೆಳವಣಿಗೆ ಹೊಂದಲು ಕ್ರಿಯಾ ಸಾಮಥ್ರ್ಯದ ವಿಶ್ವಾಸ ಗಳಿಸಲು ಹಾಗೂ ‘ಕೆಟ್ಟ’ ತಾಯಿಯ ಹಿಡಿತದಿಂದ ಪಾರಾಗಲು ಪ್ರಬಲನೂ, ಶಕ್ತಿಶಾಲಿಯೂ ಆದ ತಂದೆಯ ಅವಶ್ಯಕತೆಯಿದೆ. ಸುಧೀರ್ ಕಕರ್ ಹೇಳುವಂತೆ, ‘ಸಾಂಸ್ಕತಿಕವಾಗಿ ಸಂಪ್ರದಾಯವೆಂಬಂತೆ ಭಾರತದಲ್ಲಿ ತಂದೆ ಮತ್ತು ಮಗನ ನಡುವಿನ ಸಂಬಂಧವು ಬಹಳಷ್ಟು ಸಂಯಮದಿಂದ (ನಿಗ್ರಹದಿಂದ) ಕೂಡಿದೆ. ‘ಒಳ್ಳೆ’ಯ ತಾಯಿಯಿಂದ ಅಲಗಿದ ಹಾಗೂ ‘ಕೆಟ್ಟ’ ತಾಯಿಯಿಂದ ಬಿಡಿಸಿಕೊಳ್ಳಲಾರದ ಮಗು ಸಶಕ್ತ ಗಂಡಸುತನದ ಸಂಕೇತದೊಡನೆ ಸಾರೂಪ್ಯಹೊಂದಲು ಪ್ರಯತ್ನಿಸುತ್ತದೆ. ಆದರೆ, ಅಂತರ್‍ವಿರೋಧಿಯಾದ ಪ್ರೇಮ ಹಾಗೂ ನಿಗ್ರಹಗಳ ಗೊಂದಲಮಯ ಸಂದೇಶಗಳನ್ನು ತಂದೆಯ ವರ್ತನೆಯಲ್ಲಿ ಕಾಣುತ್ತದೆ’ (ಕಕರ್, 1981). ಕಕರ್ ಅವರ ಅಭಿಪ್ರಾಯದಲ್ಲಿ ಈ ರೀತಿಯ ಸನ್ನಿವೇಶವು ಭಾರತೀಯ ಗಂಡಸಿನ ‘ಪರಾ-ಅಹಂಕಾರ’ದ ಬೆಳವಣಿಗೆಯನ್ನು ಕುಂಠಿತಗೊಳಿಸೀತು; ಪರಿಣಾಮವಾಗಿ ಸಮಯದ ಬಗೆಗಿನ ಎಚ್ಚರವಿಲ್ಲದಿರುವಿಕೆ ಹಾಗೂ ನಿಷ್ಕ್ರಿಯತೆಯನ್ನು ಸಹಿಸುವ ಬೇಜವಾಬ್ದಾರಿಗಳು ಅವನ ವ್ಯಕ್ತಿತ್ವದ ಅಂಗಗಳಾಗಬಹುದು.

ಪರಶುರಾಮನ ಅಂತಃಸತ್ವವೂ ಕೂಡಾ ಮೇಲೆ ಹೇಳಿದ ಅಂಶಗಳಿಂದ ಪರಿಣಮಿತಗೊಂಡಿದೆ. ತಂದೆಯ ಪ್ರೇಮದಿಂದ ಅವನು ವಂಚಿತನಾಗಿಲ್ಲವಾದರೂ, ಜೀವನ್ಮರಣದ ಸವಾಲುಗಳು ಬಂದಾಗ ಸ್ವತಃ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದ ಬಲಹೀನ ತಂದೆಯ ನೆನಪು ಆತನ ಮನೋಭೂಮಿಕೆಯನ್ನು ಕಾಡುತ್ತಿತ್ತು. ಅವನ ಅನೇಕ ಅಂತರ್ಮುಖೀ ಮಾತುಗಳಲ್ಲಿ ಈ ಅಂಶವನ್ನು ಗುರುತಿಸಬಹುದು. ಉದಾಹರಣೆಗೆ ರಾಮಾಯಣದಲ್ಲಿ ಜಮದಗ್ನಿಯ ಸಾವಿನ ಬಗ್ಗೆ ಹೇಳುತ್ತಾ ಅವನೆನ್ನುತ್ತಾನೆ;

“ತಪೋಬಲ ಸಮನ್ವಿತನೂ, ಶಸ್ತ್ರಗಳನ್ನು ವಿಸರ್ಜಿಸಿದವನೂ ಆದ ನನ್ನ ತಂದೆಯು…… ಕೊಲ್ಲಲ್ಪಟ್ಟನು”
(ರಾಮಾಯಣ 1.75.23 ಒತ್ತು ಲೇಖಕನದು)

ವನಪರ್ವದಲ್ಲಿ ಬರುವ ಕತೆಯ ಪ್ರಕಾರದಲ್ಲಿ ಕೂಡಾ ಇದರದೇ ಪ್ರತಿಧ್ವನಿ;

“ಮಹಾವೀರನಾಗಿದ್ದರೂ ತಪಸ್ಸಿನಲ್ಲಿ ಮಗ್ನನಾಗಿದ್ದರಿಂದ ಯುದ್ಧ ಮಾಡದೇ ಇದ್ದ ಅವನನ್ನು ಕೊಂದರು”
(ಮಹಾಭಾರತ, 3.115.26, ಒತ್ತು ಲೇಖಕನದು)

ತಂದೆಯ ಅಸಹಾಯಕತೆಯೇ ಪರಶುರಾಮನ ಮಾನಸಿಕ ಅಳಲಾಗಿ ಅವನನ್ನು ಪೀಡಿಸುತ್ತಿತ್ತು. ಪದ್ಮಾಸನದಲ್ಲಿ ಧ್ಯಾನಮಗ್ನನಾಗಿ ಕುಳಿತಿದ್ದ ತಂದೆ ಹಾಗೂ ಅವನನ್ನು ಸುತ್ತುವರಿದು ನಿಂತ ಕಾರ್ತವೀರ್ಯನ ಮಕ್ಕಳು ಉಂಟುಮಾಡುವ ಸ್ತಬ್ಧಚಿತ್ರ ಅವನನ್ನು ಸದಾ ಕಾಡುತ್ತಿತ್ತು. ಕತೆಯ ಪ್ರಕಾರ, ಜಮದಗ್ನಿಯನ್ನು ಸುತ್ತಲಿಂದಲೂ ಎಸೆದ ಕ್ರೂರ ಅಂಬುಗಳಿಂದ ಕೊಲ್ಲಲಾಯಿತು. ಪರಶುರಾಮನ ಕ್ಷತ್ರಿಯ ಮಾರಣದ ಭೀಕರ ಕೃತ್ಯವು ಬಹುಪಾಲು ಜಮದಗ್ನಿಯ ಅಸಹಾಯಕತೆಯನ್ನು ಮೀರುವ ಪ್ರಯತ್ನವಾಗಿತ್ತು.

ಇದರೊಂದಿಗೆ ನಾವು ಗುರುತಿಸಬೇಕಾದ ವಿಷಯವೆಂದರೆ, ಮೂಲಭೂತವಾಗಿ ಪರಶುರಾಮನ ವ್ಯಕ್ತಿತ್ವವು ಮನೋಲೈಂಗಿಕ ಬೆಳವಣಿಗೆಯ ‘ಆನಲ್’ ಮಜಲಿನಲ್ಲಿ ಪ್ರಸ್ಥಿತವಾಗಿತ್ತು. ಆಜ್ಞೆ ಹಾಗೂ ಅದರ ಪಾಲನೆಯ ಬಗೆಗಿನ ಅತಿಹೆಚ್ಚು ಆಸ್ತಿಯು ಅವನ ಸ್ವಭಾವವಾಗಿತ್ತು. ಅಶಿಸ್ತನ್ನು ಸಹಿಸಲಾರದ ಅವನು, ಸದಾಚಾರದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದನು. ಇದಲ್ಲದೇ, ‘ಆನಲ್’ ಪ್ರಸ್ಥಿತಿಯು ಅವನ ವರ್ತನೆಗೆ ಅತೀವ ಭೀತಿಯ ಪ್ರತಿಕ್ರಿಯೆಯ ಆಯಾಮವನ್ನು ತಂದುಕೊಟ್ಟಿತ್ತು. ಅತೀವ ಭೀತಿ ಪ್ರತಿಕ್ರಿಯೆಯುಳ್ಳ ವ್ಯಕ್ತಿ ಮನಸ್ಸಿಗಂಟಿ ಬಂದ ವಿಷಯದ ಬಗ್ಗೆ ಮತ್ತೆ ಮತ್ತೆ ಯೋಚಿಸುತ್ತಲೇ ಇರುತ್ತಾನೆ. ಇಂತಹ ಯೋಚನೆಯಿಂದ ಮಾನಸಿಕ ರಕ್ಷಣೆ ಪಡೆಯಲೆಂದು ಭೀತಿ ವಿರೋಧಿಯಾದ ಹಾಗೂ ಒತ್ತಾಯದ ಕ್ರಿಯಾಕ್ರಮಗಳಿಂದ ಕೂಡಿದ ಚಟುವಟಿಕೆಗಳಲ್ಲಿ ಮಗ್ನನಾಗುತ್ತಾನೆ. (ಓ ಕೊನ್ನೆಲ್ ಮತ್ತು ಓ ಕೊನ್ನೆಲ್, 1980). ದುರದೃಷ್ಟವಶಾತ್, ಪರಶುರಾಮನು ತೊಡಗಿಕೊಂಡ ಕ್ರಿಯಾಕ್ರಮಗಳು ಕ್ಷತ್ರಿಯರ ವಂಶವನ್ನೇ ನಿರ್ಮೂಲನೆ ಮಾಡಬಲ್ಲ ಬರ್ಬರ ಚಟುವಟಿಕೆಗೆ ದಾರಿಮಾಡಿಕೊಟ್ಟವು.

ದಂತಕಥೆಯ ತುಂಬೆಲ್ಲ ಬರುವ ಮಾನವಶಾಸ್ತ್ರಿಕ ವಿವರಗಳು ಧ್ವನಿಸುವುದು ಕಥೆಯ ಬೆಳವಣಿಗೆಯಾದುದು ದನಗಾಹಿ ಜನಾಂಗದ ಸಮಾಜೋ-ಸಾಂಸ್ಕೃತಿಕ ಚೌಕಟ್ಟಿನಲ್ಲಿ ಎಂಬುದನ್ನು. ಬೇಟೆಯ ದೃಶ್ಯಗಳೇ ಮತ್ತೆ ಮತ್ತೆ ನೆರಳಿನಂತೆ ಈ ಪುರಾಣದ ಪ್ರತಿಮೆಗಳನ್ನು ಹಿಂಬಾಲಿಸುವುದು ತಾರ್ಕಿಕವೇ.

ವೃತ್ತದ ಮಧ್ಯೆ ಕುಳಿತ ತಂದೆ ಹಾಗೂ ಸುತ್ತಲಿಂದಲೂ ಹಾರಿಬರುವ ಬಾಣಗಳ ಮತ್ತೆ ಮತ್ತೆ ನೆನಪಿಗೆ ಬರುವ ರುದ್ರ ಪ್ರತಿಮೆಯು ನೋವಿನ ಗುಣವನ್ನು ಹಾಗೂ ಧಾರ್ಮಿಕ ಕ್ರಿಯಾಕ್ರಮದ ಗುಣವನ್ನು ಹೊಂದಿದೆ. ಪರಶುರಾಮನು ಸದಾ ಶಿಕಾರಿಗೆ ಗುರಿಯಾದ ಪಶುವಿನಂತೆ, ಕ್ಷಣಕ್ಷಣವೂ ಬೆಳೆದುಬರುತ್ತಿರುವ ಕ್ಷತ್ರಿಯರ ಬಾಹುಗಳಿಂದ ಸುತ್ತುವರಿಯಲ್ಪಟ್ಟವನಂತೆ ಚಿತ್ರಿತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಇನ್ನೂ ಕುತೂಹಲಕರವಾದ ಅಂಶವೆಂದರೆ, ಪಿತೃಸಮಾನವಾದ ಋಚೀಕನು ಭುವಿಗಿಳಿದು ಬಂದು ಹೇಳಿದ ನಂತರವೇ ಪರಶುರಾಮನು ತನ್ನ ಅರ್ಥಹೀನ ಕ್ರಿಯಾಕ್ರಮಕ್ಕೆ ವಿದಾಯ ಹೇಳಿದ ಎಂಬುದು.

ಜಮದಗ್ನಿಯ ಸಾವಿನ ಚಿತ್ರವು ಪುರಾತನ ಬೇಟೆಯ ಕ್ರಿಯಾವಿಧಿಯನ್ನು ಸೂಚಿಸುತ್ತದೆ. ದಂತಕಥೆಯ ತುಂಬೆಲ್ಲ ಬರುವ ಮಾನವಶಾಸ್ತ್ರಿಕ ವಿವರಗಳು ಧ್ವನಿಸುವುದು ಕಥೆಯ ಬೆಳವಣಿಗೆಯಾದುದು ದನಗಾಹಿ ಜನಾಂಗದ ಸಮಾಜೋ-ಸಾಂಸ್ಕೃತಿಕ ಚೌಕಟ್ಟಿನಲ್ಲಿ ಎಂಬುದನ್ನು. ಬೇಟೆಯ ದೃಶ್ಯಗಳೇ ಮತ್ತೆ ಮತ್ತೆ ನೆರಳಿನಂತೆ ಈ ಪುರಾಣದ ಪ್ರತಿಮೆಗಳನ್ನು ಹಿಂಬಾಲಿಸುವುದು ತಾರ್ಕಿಕವೇ. ಶಾಸ್ತ್ರಗಳಲ್ಲಿ ರೇಣುಕೆ ಶ್ರೇಷ್ಠ ಬೇಟೆಗಾರ್ತಿಯೆಂದು ವರ್ಣಿಸಲಾಗಿದೆ. (ಉದಾ: ಭಿಲ್ಲೀ ವೇಷಧಾರೀ ನಮಾಮಿ ಶಬರೀಂ…. ಇತ್ಯಾದಿ).

ಸಂಪ್ರದಾಯದ ಪ್ರಕಾರ ಪರಶುರಾಮನು ಏಳು ಜನ ಚಿರಂಜೀವಿಗಳಲ್ಲಿ ಒಬ್ಬ. (ಮಹಾಭಾರತದ ದ್ರೋಣ ಪರ್ವದಲ್ಲಿ ಈ ಬಗ್ಗೆ ಬೇರೆ ಅಭಿಪ್ರಾಯ ಕಂಡುಬರುತ್ತದೆ). ಈ ನಂಬಿಕೆಯ ಬೆಳಕಿನಲ್ಲಿ ರಾಮನನ್ನು ಉಳಿದ ಚಿರಂಜೀವಿಗಳೊಡನೆ ಹೋಲಿಸಬಹುದಾಗಿದೆ. ಈ ನಿಟ್ಟಿನಲ್ಲಿ ಥಟ್ಟನೆ ಹೊಳೆಯುವ ಮತ್ತೆರಡು ಆರ್ಕಿಟೈಪ್‍ಗಳೆಂದರೆ ಭೀಷ್ಮ ಹಾಗೂ ಮಾರ್ಕಾಂಡೇಯ. ಮೃಕುಂಡು ಋಷಿಯ ಮಗನಾದ ಮಾರ್ಕಾಂಡೇಯನು ಶಿವನ ಲಿಂಗವನ್ನು ಅಪ್ಪಿಕೊಂಡು ಮೃತ್ಯುವನ್ನು ಗೆಲ್ಲುತ್ತಾನೆ. ಈ ಪ್ರತಿಮೆಯ ಶ್ರೀಮಂತಿಕೆಯ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ. ಯಮನು ಬಳಿಸಾರಿ ಬರುತ್ತಿದ್ದಂತೆ ಮಾರ್ಕಾಂಡೇಯನು ಲಿಂಗಕ್ಕೆ ಅಂಟಿಕೊಳ್ಳುತ್ತಾನೆ; ಶಿವನು ಅವನನ್ನು ಸಾವಿನಿಂದ ರಕ್ಷಿಸಿ ಮೃತ್ಯುಂಜಯನೆನ್ನಿಸಿಕೊಳ್ಳುತ್ತಾನೆ. ಈ ಗಾಥೆಯು ಶೈಶವ ಮರಣದ ಭೀತಿಯ ಜೊತೆಗೆ ನಪುಂಸಕತ್ವದ ಭೀತಿಯನ್ನು ಪ್ರತಿನಿಧೀಕರಿಸುತ್ತದೆ. ಪರಶುರಾಮನ ಗಾಥೆಯಾದರೋ ಈ ಭೀತಿಗಳನ್ನು ಕ್ರಿಯೆಯಲ್ಲಿ ಪರಿಸಮಾಪ್ತಿಗೊಳಿಸುವ ಪ್ರತೀಕಗಳನ್ನು ಸೃಷ್ಟಿಸುತ್ತದೆ. ರಾಮನು ಲಿಂಗವನ್ನಪ್ಪಿಕೊಳ್ಳುವುದಿಲ್ಲ. ಬದಲಾಗಿ ಪರಶುವನ್ನು ನೆಗಹಿ ಹಿಡಿದಿರುತ್ತಾನೆ. ಅವನ ಅಂತಃಸತ್ವವು ಪ್ರತೀಕಾರಮಗ್ನನಾದ ತಂದೆಯ ಪಾತ್ರವನ್ನು ವಹಿಸುತ್ತಿದ್ದಂತೆ ತೋರುತ್ತಿದ್ದ ಅವನ ಪರಶುವಿನಿಂದ ಸ್ಫೂರ್ತಗೊಂಡಿದೆ.

ಪ್ರಮುಖವಾಗಿ ನಪುಂಸಕವಾದ ಶಿಖಂಡಿಯನ್ನು ಎದುರಿಸಲಾರದೇ, ಧನುಸ್ಸನ್ನು ಎಸೆದು ಯುದ್ಧದಿಂದ ಹಿಂದೆಗೆದು ಶರಶಯ್ಯೆಯಲ್ಲಿ ಪವಡಿಸಿದ ವ್ಯಕ್ತಿ ಭೀಷ್ಮ. ಪರಶುರಾಮನಾದರೋ ಪ್ರತ್ಯಕ್ಷವಾಗಿ ಸದಾ ಪ್ರಬಲ ಗಂಡಸಿನಂತೆ ಚಿತ್ರಿತವಾಗಿದ್ದಾನೆ. ಅಪ್ರತಿಹತವಾದ ಪ್ರಯತ್ನದಿಂದ ತಂದೆಯ ಅಚ್ಚಿನಲ್ಲಿ ಮೂಡಿಬರುವಲ್ಲಿ ಯಶಸ್ವಿಯಾಗಿದ್ದ.

ಭೀಷ್ಮನ ಅಂತಃಸತ್ವವೂ ರೂಪುಗೊಂಡಿದ್ದು ಪ್ರಬಲಳಾದ ತಾಯಿಯ ಹಾಗೂ ನಿರ್ಬಲನೂ, ವಿಷಯಾಸಕ್ತನೂ ಆದ ತಂದೆಯ ಸುತ್ತ. ‘ಮದರ್ ಕಾಂಪ್ಲೆಕ್ಸ್’ನ ದಟ್ಟ ನೆರಳಿನಲ್ಲಿ ಬೆಳೆದ ಅವನ ವ್ಯಕ್ತಿತ್ವ, ಸದಾಕಾಲ ಪರರ ಹಿತಕ್ಕಾಗಿಯೇ ಮುಡಿಪಾದುದು ಆಶ್ಚರ್ಯವಲ್ಲ. ತುಳಿತಕ್ಕೊಳಗಾದಾಗಲೆಲ್ಲ ತುಳಿಯುವವನನ್ನು ವಿರೋಧಿಸುವ ಬದಲು ಅವನೊಡನೆ ಸಾರೂಪ್ಯಗೊಳ್ಳುವ ಬಲಹೀನ ಒಡಂಬಡಿಕೆಗವನು ಪಕ್ಕಾದನು. ಪ್ರಮುಖವಾಗಿ ನಪುಂಸಕವಾದ ಶಿಖಂಡಿಯನ್ನು ಎದುರಿಸಲಾರದೇ, ಧನುಸ್ಸನ್ನು ಎಸೆದು ಯುದ್ಧದಿಂದ ಹಿಂದೆಗೆದು ಶರಶಯ್ಯೆಯಲ್ಲಿ ಪವಡಿಸಿದ ವ್ಯಕ್ತಿ ಭೀಷ್ಮ. ಪರಶುರಾಮನಾದರೋ ಪ್ರತ್ಯಕ್ಷವಾಗಿ ಸದಾ ಪ್ರಬಲ ಗಂಡಸಿನಂತೆ ಚಿತ್ರಿತವಾಗಿದ್ದಾನೆ. ಅಪ್ರತಿಹತವಾದ ಪ್ರಯತ್ನದಿಂದ ತಂದೆಯ ಅಚ್ಚಿನಲ್ಲಿ ಮೂಡಿಬರುವಲ್ಲಿ ಯಶಸ್ವಿಯಾಗಿದ್ದ. ಬಹುಶಃ ಅವನ ಜೀವನಕ್ಕೊಂದು ತಾರ್ಕಿಕ ಕೊನೆಯನ್ನು ನೀಡಲೆಂದೋ ಏನೋ, ಮನ್ವಂತರ ಸಂಪ್ರದಾಯದಲ್ಲಿ ಅವನನ್ನೂ ಕೂಡಾ ಸಪ್ತಋಷಿಗಳಲ್ಲಿ ಒಬ್ಬನನ್ನಾಗಿ ಮಾಡಲಾಯಿತು.

ಮನ್ವಂತರ ಸಂಪ್ರದಾಯದ ಪ್ರಕಾರ, 14 ರಲ್ಲಿ ಪ್ರತಿಯೊಂದು ಮನ್ವಂತರಕ್ಕೂ ಬೇರೆ ಬೇರೆ ಸಪ್ತಋಷಿಗಳಿದ್ದಾರೆ. ಜಮದಗ್ನಿಯು ವೈವಸ್ವತ ಮನ್ವಂತರದ ಸಪ್ತಋಷಿಗಳಲ್ಲಿ ಒಬ್ಬನಾದರೆ, ಪರಶುರಾಮನು ಸಾವರಣೀ ಮನ್ವಂತರದ ಸಪ್ತಋಷಿಗಳ ಗುಂಪಿಗೆ ಸೇರುತ್ತಾನೆ. ಆಸಕ್ತಿಯ ವಿಷಯವೆಂದರೆ, ದ್ರೋಣನ ಧೀರ ಪುತ್ರ ಅಶ್ವತ್ಥಾಮನೂ ಕೂಡಾ ಸಾವರಣಿ ಮನ್ವಂತರದ ಸಪ್ತಋಷಿಗಳಲ್ಲಿ ಒಬ್ಬ. ಅಶ್ವತ್ಥಾಮ ಹಾಗೂ ಪರಶುರಾಮರ ನಡುವಿನ ಹೋಲಿಕೆ ತುಂಬಾ ಕುತೂಹಲಕರವಾದರೂ, ಪ್ರಸಕ್ತ ಅಧ್ಯಯನದ ಪರಿಧಿಯ ಹೊರಗಿದೆ.

ಮಾತೃಹವನದ ಭೂತಗಳು

ಭಾರತದಲ್ಲಿನ ಮಗುವಿನ ಅಂತಃಸತ್ವವನ್ನು ನಿರೂಪಿಸುವಲ್ಲಿ ತಾಯಿಯ ಕೊಡುಗೆ ಪ್ರಮುಖವಾದುದು. ಲಾಲನೆ ಹಾಗೂ ಪಾಲನೆಯ ಮಮತೆಯನ್ನು ನೀಡುವ ತಾಯಿಯ ಸಂಬಂಧ ಬಾಳಿನುದ್ದಕ್ಕೂ ಗುಣಾತ್ಮಕ ಸಹಕಾರವನ್ನು ಕೊಡಬಲ್ಲದು. ಆದರೆ, ಅತಿಯಾದ ಸಂರಕ್ಷಣೆ ಲೈಂಗಿಕವಾಗಿ ಆಕ್ರಮಣಶೀಲಳಾದ ತಾಯಿಯ ಇನ್ನೊಂದು ಮುಖ ಋಣಾತ್ಮಕವಾಗಿ ವ್ಯಕ್ತಿತ್ವವನ್ನು ಬಾಧಿಸುವ ಸಾಧ್ಯತೆಯೂ ಇದೆ. ಭಾರತದ ಪುರಾಣಗಳು, ಪುಣ್ಯಕಥೆಗಳು, ಜಾನಪದ ಗಾಥೆಗಳು ಹಾಗೂ ಧಾರ್ಮಿಕ ಪ್ರತೀಕಗಳು ತಾಯಿಯ ಈ ಎರಡು ಮುಖಗಳನ್ನು ಬಿಂಬಿಸಿವೆ. ಸುಧೀರ್ ಕಕರ್ ಅವರ ಮಾತುಗಳಲ್ಲಿ, ‘ಒಳ್ಳೆಯ ತಾಯಿಯ ಶ್ರಮ, ಭಾವನಾತ್ಮಕ ಜೀವಂತಿಕೆ, ರಕ್ಷಣೆ ಹಾಗೂ ಪಾಲನೆಗಳು ಶಿಶುವಿನ ಅಹಂಕಾರದೊಡನೆ ಸೇರಿ ಪ್ರತಿ ಭಾರತೀಯನ ಗುಣಾತ್ಮಕ ಅಂತಃಸತ್ವವಾಗಿ ಪರಿಣಮಿಸುತ್ತದೆ. ಈ ಗುಣಾತ್ಮಕ ಅಂತಃಸತ್ವದೊಡನೆ ಅದರ ಇನ್ನೊಂದು ಮಗ್ಗಲು ಕೂಡಾ ಹುದುಗಿರುತ್ತದೆ. ಅದೇ ಸದಾ ಬೇಡಿಕೆಯಿಂದ ತುಂಬಿದ, ಕಿಚಾಯಿಸುವ, ಸದಾ ಜೊತೆಯಲ್ಲಿಯೇ ಇರುವ ತಾಯಿಯದು. ಮಾನಸಿಕ ತುಮುಲ ಹಾಗೂ ಮನೋನ್ಮಾದದ ಕಾಲದಲ್ಲಿ ಅಂತಸತ್ವದ ಋಣಾತ್ಮಕ ಅಂಶಗಳು……. ಮಾನಸಿಕ ಸ್ವಲಿಂಗ ಹನನದಲ್ಲಿ ಅಥವಾ ತುಳಿಯುವವನ ಜೊತೆ ಸಾರೂಪ್ಯ ಹೊಂದುವುರದಲ್ಲಿ ಅಥವಾ ಪರಿಪೂರ್ಣ ನಿಷ್ಕ್ರಿಯೆಯ ಸ್ಥಿತಿಗಾಗಿ ಹಾತೊರೆಯುವುದರಲ್ಲಿ ಪರ್ಯಾಪ್ತಗೊಳ್ಳುತ್ತದೆ” (ಕಕರ್, 1981).

ಮನೋಲೈಂಗಿಕ ಬೆಳವಣಿಗೆಯ ಆರಂಭದ ಸ್ಥಿತಿಗಳಲ್ಲಿಯೇ ಅತಿಯಾದ ರಕ್ಷಣೆ ನೀಡುವ ಸದಾ ಎಡೆಬಿಡದೇ ಬಳಿಯಲ್ಲಿರುವ ತಾಯಿಯಿಂದ ಉಂಟಾಗುವ ‘ಉಸಿರುಗಟ್ಟಿಸುವ’ ಸ್ಥಿತಿಯಿಂದ ಬಿಡಿಸಿಕೊಳ್ಳಲು ಮಗು ಹೊಡೆದಾಡುತ್ತದೆ. ಅಂತಹ ತುಮುಲದ ಜೊತೆಗೆ ಅಪೂರ್ವ ರಕ್ಷಣಾ ಪ್ರವಿಧಿಯನ್ನು ಸೇರಿಸಿದರೆ ಉಂಟಾಗುವ ಕ್ರಿಯೆಗೆ ಮಾಡಲಾದ ರೂಪಕಾತ್ಮಕ ಟೀಕೆಯಂತಿದೆ ಪರಶುರಾಮನ ಕತೆ. ಇಲ್ಲಿ ಮಗು ‘ಕೆಟ್ಟ’ ತಾಯಿಯನ್ನು ಸ್ವೀಕರಿಸಿ, ನಿರ್ಬಲನಾಗುವ ಬದಲು, ಮಾತೃಹಂತಕವಾಗಿ ಮಾರ್ಪಡುತ್ತದೆ. ಎಡೆಬಿಡದೇ ಸುತ್ತಲೂ ಹಬ್ಬಿರುವ ತಾಯಿಯ ಪ್ರಜ್ಞೆಯಿಂದ ಸಿಡಿದು ದೂರಾಗಬಯಸುವ ಶಿಶುವಿನ ಆಕಾಂಕ್ಷೆಯ ಪ್ರತಿಧ್ವನಿ ಅಲ್ಲಿ ಅಡಗಿದೆ. ಪರಶುರಾಮನು ಜಮದಗ್ನಿಯ ಪುತ್ರರಲ್ಲಿ ಕಿರಿಯವನೆಂಬುದನ್ನು ಗಮನಿಸಬೇಕಾದ ಪ್ರಮುಖ ಅಂಶ. ಅವನೆಲ್ಲ ಅಣ್ಣಂದಿರೂ ತಾಯಿಯನ್ನು ಕೊಲ್ಲಲೊಪ್ಪದೇ ಜಮದಗ್ನಿಯ ಕೋಪಕ್ಕೆ ಪಾತ್ರರಾಗಿ, ಮೂರ್ಖರಾಗಿ ಹೋದರೆ, ಪರಶುರಾಮನೊಬ್ಬನೇ ಈ ಭೀಕರ ಕೃತ್ಯವನ್ನು ಮಾಡಲು ಒಪ್ಪಿದನು. ಆದರೆ ನಂತರ, ಸಂತೋಷಗೊಂಡ ಜಮದಗ್ನಿಯು ವರ ನೀಡಲು ಮುಂದಾದಾಗ, ರಾಮನು ತನ್ನ ರಕ್ಷಣಾ ಪ್ರವಿಧಿಯನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಾನೆ. ತಾಯಿಗೆ ಮರಳಿ ಜೀವ ಬರಬೇಕೆಂದೂ, ಮಾತೃ ಹನನದ ನೆನಪು ಅವನಲ್ಲಿಯೂ ಅವನ ತಾಯಿಯಲ್ಲಿಯೂ ಉಳಿಯಬಾರದೆಂದೂ, ವರವನ್ನು ಬೇಡುತ್ತಾನೆ. ಪರಶುರಾಮನ ತಂತ್ರವು ಅವನನ್ನು ಒಂದೇ ಉಸುರಿನಲ್ಲಿ ಮಾತೃಹಂತಕನೆಂದೂ, ಮಾತೃಜೀವಕನೆಂದೂ ಕರೆಯುತ್ತದೆ.

ಕತೆಯ ಬೇರೆ ಬೇರೆ ಆವೃತ್ತಿಗಳಲ್ಲಿ ಬರುವ ವಿವರಗಳ ಅಧ್ಯಯನದಿಂದ (ಸಾವಿರ ಬಾಹುಗಳುಳ್ಳ) ಕಾರ್ತವೀರ್ಯ ಅರ್ಜುನನಿಗೂ, ಮಾನವನ ಶಿರಸ್ಸಿಗೂ (ಸಹಸ್ರಾರು) ಸಂಬಂಧವಿರುವುದು ತಿಳಿಯುತ್ತದೆ. ಪರಶುರಾಮನು ಮಾತೃಹನನದ ನೆನಪನ್ನು ಮರೆಯಲು ಇಚ್ಛಿಸಿದ್ದ. ಹಲವು ಬಾರಿ ನೈಜ ಘಟನೆಯನ್ನು ಮರೆಯಲು ಕಾಲ್ಪನಿಕ ಫ್ಯಾಂಟಸಿಯನ್ನು ಸೃಷ್ಟಿಸಿಕೊಳ್ಳುವುದು ಮಾನವನಿಗೆ ಹೊಸದೇನೂ ಅಲ್ಲ.

ಈಗಾಗಲೇ ಹೇಳಿರುವಂತೆ ಪರಶುರಾಮನ ಕತೆಗೆ ಕನಸಿನಂತಹ ಗುಣವಿದೆ. ಸಂಪ್ರದಾಯವನ್ನು ಬಲ್ಲ ಶ್ರೀವಾಶಿಷ್ಠ ಗಣಪತಿ ಮುನಿಗಳು ರೇಣುಕೆಯ ಕತೆಯಲ್ಲಿ ಬರುವ ಗಂಧರ್ವನ ಘಟನೆ ಸುಳ್ಳೆಂದೂ, ರೇಣುಕೆಯನ್ನು ಕೊಲ್ಲಲು ಅವಳು ಅರ್ಜುನನ ಶಿಬಿರದಲ್ಲಿ ಸೆರೆಯಾಗಿದ್ದುದೇ ಕಾರಣವೆಂದೂ ಹೇಳುತ್ತಾರೆ. (ತಸ್ಯ ಹತೇಃ ಪರ ಗೃಹ ಸ್ಥಿತಿರ್‍ಹೇತು! ಗಂಧರ್ವದರ್ಶನ ಕಥಾರಿಪು ಕಲ್ಪಿ ತೇವ). ಗಾಥೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇಂತಹ ಅಪೂರ್ವ ಪುನವ್ರ್ಯಾಖ್ಯಾನವು ಬಹಳಷ್ಟು ಸಹಕಾರಿಯಾಗುತ್ತದೆ. ಕತೆಯ ಬೇರೆ ಬೇರೆ ಆವೃತ್ತಿಗಳಲ್ಲಿ ಬರುವ ವಿವರಗಳ ಅಧ್ಯಯನದಿಂದ (ಸಾವಿರ ಬಾಹುಗಳುಳ್ಳ) ಕಾರ್ತವೀರ್ಯ ಅರ್ಜುನನಿಗೂ, ಮಾನವನ ಶಿರಸ್ಸಿಗೂ (ಸಹಸ್ರಾರು) ಸಂಬಂಧವಿರುವುದು ತಿಳಿಯುತ್ತದೆ. ಪರಶುರಾಮನು ಮಾತೃಹನನದ ನೆನಪನ್ನು ಮರೆಯಲು ಇಚ್ಛಿಸಿದ್ದ. ಹಲವು ಬಾರಿ ನೈಜ ಘಟನೆಯನ್ನು ಮರೆಯಲು ಕಾಲ್ಪನಿಕ ಫ್ಯಾಂಟಸಿಯನ್ನು ಸೃಷ್ಟಿಸಿಕೊಳ್ಳುವುದು ಮಾನವನಿಗೆ ಹೊಸದೇನೂ ಅಲ್ಲ. ಹೀಗೆ ಅರ್ಜುನನ ವಧೆಯು ರೇಣುಕೆಯ ಹತ್ಯೆಯ ಸ್ವಪ್ನ ಬಿಂಬದಂತೆ ಪ್ರತಿಫಲಿಸುತ್ತದೆ. ರೇಣುಕೆಯನ್ನು ಅರ್ಜುನನು ಬಂಧಿಸಿ ಕೊಂಡೊಯ್ದನೆಂದು ನೇರವಾಗಿ ಹೇಳದಿದ್ದರೂ, ಪರ್ಯಾಯವಾಗಿ ಎಲ್ಲಾ ಕತೆಗಳಲ್ಲಿ ಹೋಮಧೇನುವನ್ನು ಬಲಾತ್ಕಾರವಾಗಿ ಎಳೆದೊಯ್ದುದರ ವೃತ್ತಾಂತವಿದೆ.

ಮಿಗಿಲಾಗಿ ರೇಣುಕೆಯ ಶಿರಚ್ಛೇದಕ್ಕೆ ಕಾರಣನಾದ ಪರಶುರಾಮನು ಅವಳ ದೈವೀಕರಣಕ್ಕೂ ಕಾರಣನಾದ. ಮರಣದ ತರುವಾಯ ಬದುಕಿ ಬಂದ ರೇಣುಕೆಯು ಶಿಷ್ಠ ಸಂಪ್ರದಾಯದ ರೇಣುಕಾಂಬೆಯಾದಳು. ಜನಪದರ ಎಲ್ಲಮ್ಮ ದೇವತೆಯಾದಳು. ಮಾತೃಪೂಜೆಯ ಸಾಂಸ್ಕೃತಿಕ ಆಯಾಮ ಈ ಕಥೆಗೆ ಒದಗಿ ಬರುವುದು ಇಲ್ಲಿಯೇ. ಹುಲ್ಲುಗಾವಲಿನ ಮೇಲೆ ತನ್ನ ಅಸ್ಥಿತ್ವವನ್ನು ರೂಪಿಸಿಕೊಂಡಿದ್ದ ಸಮಾಜೋ- ಸಾಂಸ್ಕೃತಿಕ ವ್ಯವಸ್ಥೆಯು ಪ್ರಕೃತಿಯ ಆರಾಧನೆಯತ್ತ ನೈಜವಾಗಿ ವಾಲಿರುವುದರಲ್ಲಿ ಸೋಜಿಗವಿಲ್ಲ. ತಂತ್ರದ ಸಂಪ್ರದಾಯವು ಮಾತೃದೇವತೆಯ ಉಪಾಸನೆಯನ್ನು ತನ್ನೊಡಲಿನಲ್ಲಿರಿಸಿಕೊಂಡು ಯುಗಯಾತ್ರಿಯಾಗಿದೆ. ಪರಶುರಾಮ ಹಾಗೂ ತಂತ್ರದ ಸಾಮೀಪ್ಯ ಎಷ್ಟು ಗಾಢವೆಂಬುದನ್ನು ಸೂಚಿಸುವಂತೆ “ಪರಶುರಾಮ ಕಲ್ಪ ಸೂತ್ರ” ದಂತಹ ತಾಂತ್ರಿಕ ಕೈಪಿಡಿಯನ್ನೂ ಅವನ ಕೃತಿಯೆಂದು ಹೇಳಲಾಗುತ್ತಿದೆ. ಈ ಕೃತಿಯು 12-13 ನೇ ಶತಕದಷ್ಟು ಅರ್ವಾಚೀನವಾದರೂ, ತಾಂತ್ರಿಕ ಆಚಾರಗಳ ಪ್ರಚಾರದಲ್ಲಿ ಕೆಲಸ ಮಾಡಿರುವ ಭಾರ್ಗವರ ಪಾತ್ರವನ್ನದು ಪುಷ್ಠೀಕರಿಸುತ್ತದೆ.

ರೇಣುಕೆಯು ಕೂಡಾ ವಿಭ್ರಮಳಾಗಲು ಕಾರಣ ಜಲಕ್ರೀಡೆಯಾಡುತ್ತಿದ್ದ ಚಿತ್ರರಥನೆಂಬ ಗಂಧರ್ವ. ಬ್ರಾಹ್ಮಣಗಳಲ್ಲಿ ಹಾಗೂ ಪುರಾಣಗಳಲ್ಲಿ ಗಂಧರ್ವರು ಶೃಂಗಾರವನ್ನೂ, ಫಲವತ್ತತೆಯನ್ನೂ ಪ್ರತಿನಿಧೀಕರಿಸುತ್ತಾರೆ. ಚಿತ್ರರಥನು ಮೂಲತಃ ಕಾರ್ತವೀರ್ಯನೇ ಇರಬಹುದೆಂಬ ಶಂಕೆಗೆ ಎಡೆ ಇಲ್ಲದಿಲ್ಲ.

ತಾಂತ್ರಿಕ ಪದ್ಧತಿಯಲ್ಲಿ ತಲೆಯಿಲ್ಲದ ದೇವಿಯೊಬ್ಬಳ ಉಲ್ಲೇಖವಿದೆ. ‘ಛಿನ್ನ ಮಸ್ತಾ’ ಎಂಬ ಹೆಸರಿನ ಈ ಶಕ್ತಿಯು ದಶಮಹಾವಿದ್ಯೆಗಳಲ್ಲಿ ಆರನೆಯದಾದ ವಿದ್ಯೆ. ಪರಶುರಾಮನದು ಕೂಡಾ ವಿಷ್ಣುವಿನ ಆರನೆಯ ಅವತಾರವೆಂಬುದನ್ನು ನೆನಪಿಸಿಕೊಂಡರೆ ಛಿನ್ನಮಸ್ತಾ ಹಾಗೂ ಪರಶುರಾಮರ ಸಾಮ್ಯ ಗೊತ್ತಾಗುತ್ತದೆ. ಅವಳು ಆರನೇ ಅವತಾರದ ಶಕ್ತಿ. ಛಿನ್ನಮಸ್ತಾ ಪ್ರತಿಮೆಯ ಸಾಂಕೇತಿಕ ಪ್ರಾಮುಖ್ಯತೆಯನ್ನು ಮುಂದಿನ ಭಾಗದಲ್ಲಿ ವಿವರಿಸಲಾಗಿದೆ.

ಭಾವೋನ್ಮಾದದ ವಲಯ

ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿನ ಹಲವು ಲೈಂಗಿಕ ಫ್ಯಾಂಟಸಿಗಳನ್ನು ಪ್ರಸ್ತುತ ಗಾಥೆಯ ಲೈಂಗಿಕ ಆಯಾಮಗಳು ಧ್ವನಿಸುತ್ತವೆ. ರಾಮಾಯಣದಲ್ಲಿ, ರಾವಣನು ಕಾರ್ತವೀರ್ಯನನ್ನು ಸಂಧಿಸಿದಾಗ, ಕಾರ್ತವೀರ್ಯನು ತನ್ನ ಪತ್ನಿಯರೊಡನೆ ನರ್ಮದಾ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದ. ರೇಣುಕೆಯು ಕೂಡಾ ವಿಭ್ರಮಳಾಗಲು ಕಾರಣ ಜಲಕ್ರೀಡೆಯಾಡುತ್ತಿದ್ದ ಚಿತ್ರರಥನೆಂಬ ಗಂಧರ್ವ. ಬ್ರಾಹ್ಮಣಗಳಲ್ಲಿ ಹಾಗೂ ಪುರಾಣಗಳಲ್ಲಿ ಗಂಧರ್ವರು ಶೃಂಗಾರವನ್ನೂ, ಫಲವತ್ತತೆಯನ್ನೂ ಪ್ರತಿನಿಧೀಕರಿಸುತ್ತಾರೆ. ಚಿತ್ರರಥನು ಮೂಲತಃ ಕಾರ್ತವೀರ್ಯನೇ ಇರಬಹುದೆಂಬ ಶಂಕೆಗೆ ಎಡೆ ಇಲ್ಲದಿಲ್ಲ. (ಅರ್ಜುನನಲ್ಲಿ ಮಾಂತ್ರಿಕ ರಥವಿತ್ತೆಂದೂ ಅದರ ಸಹಾಯದಿಂದ ಅವನು ಬೇಕೆಂದಲ್ಲಿ ಹೋಗಬಹುದಿತ್ತೆಂದೂ ಮಹಾಭಾರತದಲ್ಲಿ ಹೇಳಲಾಗಿದೆ). ಅಲ್ಲದೇ ಕಾರ್ತವೀರ್ಯನಿಗೂ ದೇವೇಂದ್ರನಿಗೂ ಅನೇಕ ಸಾಮ್ಯಗಳಿರುವುದನ್ನು ಗುರುತಿಸಬಹುದಾಗಿದೆ.

ರಾಮಾಯಣದಲ್ಲಿ ಒಂದು ಉಪಮೆಯ ಮೂಲಕ ಅರ್ಜುನನನ್ನು ಇಂದ್ರನಿಗೆ ಹೋಲಿಸಲಾಗಿದೆ. (ಬಲಂನಿಗ್ರಹೇವ ಸಹಸ್ರಲೋಚನ: 7.32.73 ಹಾಗೂ ಇದಂ ಅಸೀತ್ ತಯೋರ್ಯುದ್ಧಂ ಯಥಾಪೂರ್ವಂ ಬಲೀಂದ್ರಯೋ). ಇಂದ್ರನ ಶೃಂಗಾರಲೀಲೆಗಳು ಪುರಾಣಗಳ ತುಂಬೆಲ್ಲ ಹರಡಿವೆ. ಅಹಲ್ಯೆಯ ವೃತ್ತಾಂತವನ್ನು ಇಲ್ಲಿ ಸ್ಮರಿಸಿದರೆ ವಿಷಯಾಂತರವಾಗಲಾರದು. ಇಂದ್ರನ ಸಾವಿರ ಕಣ್ಣುಗಳು ಕಾರ್ತವೀರ್ಯನ ಸಹಸ್ರಬಾಹುಗಳಾಗಿ ಇನ್ನೂ ಹೆಚ್ಚು ಫಾಲಿಕ್ ಆಗಿ ಚಿತ್ರಿತವಾಗಿವೆ.

ರೇಣುಕಾ ಹಾಗೂ ಛಿನ್ನಮಸ್ತಾ ದೇವಿಯರ ಚಿತ್ರಣವನ್ನೂ ಕೂಡಾ ಶಾಸ್ತ್ರಗಳಲ್ಲಿ ವಿವರಿತ ಲೈಂಗಿಕ ಹಿನ್ನೆಲೆಯಲ್ಲಿ ಮಾಡಲಾಗಿದೆ. ರೇಣುಕಾಳನ್ನು ಭೋಗವತೀ, ಕಾಮಾ, ಕಾಮಾಚಾರಪ್ರಿಯಾ, ಕಾಮಾಚಾರ ಪರಾಯಣಾ, ಕಾಮದಾಯಿನೀ, ಸರ್ವರೋಕ್ಷಿ ಶಿರೋಮುಖಾ ಎಂದೆಲ್ಲ ವರ್ಣಿಸಲಾಗಿದೆ. (ರೇಣುಕಾ ಸಹಸ್ರನಾಮ). ಛಿನ್ನಮಸ್ತಾಳ ಧ್ಯಾನದ ಬಗ್ಗೆ ಹೀಗೆ ಹೇಳಲಾಗಿದೆ; ‘ಎಡಗೈಯಲ್ಲಿ ತಾನೇ ಕಡಿದ ತನ್ನ ಶಿರಸ್ಸನ್ನು ಹಿಡಿದಿರುವ, ಬಲಗೈಯಲ್ಲಿ ಕತ್ತಿಯನ್ನು ಹಿಡಿದಿರುವ, ಬಲಗಾಲನ್ನು ಮುಂದೆ ಇರಿಸಿ ಎಡಗಾಲನ್ನು ಬಾಗಿಸಿರುವ, ಬತ್ತಲೆಯಾಗಿರುವ ಛಿನ್ನಮಸ್ತಾಳನ್ನು ಧ್ಯಾನಿಸಬೇಕು. ಅವಳ ಕೊರಳಿನಿಂದ ರಕ್ತವು ಮೂರು ವಾಹಿನಿಗಳಲ್ಲಿ ಹರಿಯುತ್ತದೆ. ಮಧ್ಯದ ಧಾರೆಯು ಅವಳ ಸ್ವಂತ (ಕಡಿದ ಶಿರದಲ್ಲಿರುವ) ಬಾಯಿಯೊಳಕ್ಕೆ ಪ್ರವಹಿಸುತ್ತಿದ್ದರೆ, ಉಳಿದೆರಡು ಪ್ರವಾಹಗಳು ಇಬ್ಬದಿಯಲ್ಲಿರುವ ಯೋಗಿನಿಯರ ಬಾಯಿಯೊಳಕ್ಕೆ ಹೋಗುತ್ತಿರುವುದು……. ಅವಳ ಪಾದದ ಬಳಿಯಿರುವ ಪದ್ಮದ ಮೇಲೆ ಮನ್ಮಥನೊಡನೆ ಕಾಮಕೇಳಿಯಲ್ಲಿ ನಿರತಳಾದ ರತಿಯು ಮನ್ಮಥನ ಮೇಲೆ ಆಸೀನಳಾಗಿದ್ದಾಳೆ. ಹಿನ್ನೆಲೆಯಲ್ಲಿ ರುದ್ರಭೂಮಿಯಿ. ಅವಳನ್ನು ಇಂದ್ರ ಪತ್ನಿಯಾದ ಶಚಿಯೆಂದೂ, ಇಂದ್ರಯೋನಿಯೆಂದೂ ಕರೆಯಲಾಗುತ್ತದೆ.

ಕೊನೆಗೆ ಇಂದ್ರನ ವಜ್ರಾಯುಧದ ಹೊಡೆತದಿಂದ ದೀರ್ಘಜಿಹ್ವಿಯ ಹಿಡಿತವು ಸಡಿಲವಾಗುತ್ತದೆ. ಇದೇ ಕಥೆಯನ್ನೇ ಮತ್ತೆ ರೇಣುಕಾ ಕಾರ್ತವೀರ್ಯರ ಕಥೆಯನ್ನಾಗಿ ಹೇಳಲಾಗಿದೆ.

ಹಿಂದೂ ಪುರಾಣಗಳಿಗೆ ಮತ್ತೆ ಮತ್ತೆ ಮರುಕಳಿಸಿ ಬರುವ ಗುಣವಿದೆ. ಅವೇ ಪ್ರತಿಮೆಗಳು ಬದಲಾದ ಅಲಂಕಾರಗಳೊಡನೆ ತಿರುಗಿ ಬರುತ್ತವೆ. ಬೇರೆ ಬೇರೆ ಎಡೆಗಳಲ್ಲಿ ವಿವರಗಳು ಬದಲಾದರೂ, ಆಂತರ್ಯವು ಸೋಜಿಗವೆಂಬಂತೆ ಹಾಗೇ ಉಳಿದಿರುತ್ತದೆ. ಜೈಮಿನೀಯ ಬ್ರಾಹ್ಮಣದಲ್ಲಿ ದೀರ್ಘಜಿಹ್ವಿ ಎಂಬ ರಾಕ್ಷಸಿಯು ಇಂದ್ರನ ಮೊಮ್ಮಗನಾದ ಸುಮಿತ್ರನನ್ನು ತನ್ನತ್ತ ಸೆಳೆಯುತ್ತಾಳೆ. ಅವಳ ಮೈತುಂಬಾ ಇರುವ ಲೈಂಗಿಕಾಂಗಗಳಲ್ಲಿ ಸುಮಿತ್ರ ಹೊರಬರಲಾರದಂತೆ ಸಿಕ್ಕಿಕೊಳ್ಳುತ್ತಾನೆ. ಕೊನೆಗೆ ಇಂದ್ರನ ವಜ್ರಾಯುಧದ ಹೊಡೆತದಿಂದ ದೀರ್ಘಜಿಹ್ವಿಯ ಹಿಡಿತವು ಸಡಿಲವಾಗುತ್ತದೆ. ಇದೇ ಕಥೆಯನ್ನೇ ಮತ್ತೆ ರೇಣುಕಾ ಕಾರ್ತವೀರ್ಯರ ಕಥೆಯನ್ನಾಗಿ ಹೇಳಲಾಗಿದೆ. ತನ್ನ ದೇಹದಾದ್ಯಂತ ಫಾಲಿಕ್ ಸಂಕೇತಗಳನ್ನು ಹೊಂದಿದ್ದ ಅರ್ಜುನನನ್ನು ಪರಶುರಾಮನು ಕೊಡಲಿಯಿಂದ ಹೊಡೆಯುತ್ತಾನೆ. ಪರಶುರಾಮನ ಶಕ್ತಿಯೇ ಅವನ ಕೊಡಲಿಯ ಪೆಟ್ಟೇ- ಛಿನ್ನಮಸ್ತ. ಅವಳನ್ನು ವಜ್ರವೈರೋಚನೀಯಾ ಎಂದು ಕರೆದಿದ್ದಾರೆ. ಅಂದರೆ ಅಗ್ನಿಯಿಂದ ಹೊರಬರುವ ಸಿಡಿಲು, ಕಾಮಕೇಳಿಯಲ್ಲಿ ನಿರತರಾದವರನ್ನು ಪ್ರತಿಘಾತದ ಮೂಲಕ ಬೇರೆಯಾಗಿಸುವ ಉನ್ಮಾದದ ತುತ್ತ ತುದಿಯೇ ಛಿನ್ನಮಸ್ತ. ಒಂದರ್ಥದಲ್ಲಿ ಅವಳು ರತಿಕೇಳಿಯ ತುತ್ತತುದಿಯಲ್ಲಿ ತಲೆಯೊಡೆವಂತೆ ನುಗ್ಗಿಬರುವ, ಆದರೆ ಆತ್ಯಂತಿಕ ಆನಂದ ನೀಡುವ ಅಗಲುವಿಕೆಯಲ್ಲಿ ಯಶಸ್ಸು ಪಡೆಯುವ ವಿಪರೀತ ಭಾವೋನ್ಮಾದ.

ಸಾಂಪ್ರದಾಯಿಕ ಹಿಂದೂ ಕುಟುಂಬಗಳಲ್ಲಿ ಲೈಂಗಿಕ ಸಂಭೋಗವೆಂಬುದು ಪುರುಷ ಪ್ರಧಾನವಾದ ಕ್ರಿಯೆಯಾಗಿದ್ದು, ಸ್ತ್ರೀಯ ಸುಖ ಹಾಗೂ ಅನುಕೂಲತೆಗಳಿಗೆ ಅದರಲ್ಲಿ ಅವಕಾಶ ಕಡಿಮೆ. ಪುರುಷ ಪ್ರಾಧಾನ್ಯವು ಲೈಂಗಿಕ ಕ್ರಿಯೆಯನ್ನು ಕೇವಲ ಒಮ್ಮುಖದ ಕ್ರೀಡೆಯನ್ನಾಗಿಸಿದೆ. ಆ ದಿನಗಳಲ್ಲೂ ಕೂಡಾ ತಮ್ಮ ಜಾಗೃತ ಲೈಂಗಿಕ ಜೀವನದಲ್ಲಿ ಕಾಮೋನ್ಮಾದದ ತುತ್ತತುದಿಯನ್ನು ತಲುಪದ ಹೆಂಗಸರು ಅಪರೂಪವೇನಲ್ಲ. ಆದ್ದರಿಂದಲೇ ಸುಪ್ತವಾಗಿರುವ ಲೈಂಗಿಕ ವಿಪರೀತ ಉನ್ಮಾದಗಳನ್ನು ಸಂಕೇತಿಸುವ ಅನೇಕ ಪ್ರತಿಮೆಗಳು ನಮ್ಮ ಸಾಂಸ್ಕೃತಿಕ ಗಾಢ ಪ್ರಜ್ಞೆಯಲ್ಲಿ ಅಡಗಿವೆ. ಛಿನ್ನಮಸ್ತಾದಂತಹ ಶಕ್ತಿಶಾಲೀ ಲೈಂಗಿಕ ಪ್ರತಿಮೆಗಳು ನಮ್ಮ ಸಮಾಜದಲ್ಲಿನ ಹೆಂಗಳೆಯರ ದುಃಸ್ಥಿತಿಗೆ ದ್ಯೋತಕವಾಗಿವೆ. ಛಿನ್ನಮಸ್ತಾಳನ್ನು ‘ಏಕವೀರಾ’ ಎಂದು ಕರೆದಿರುವುದು ಸುಮ್ಮನೇ ಅಲ್ಲ.

ಛಿನ್ನಮಸ್ತಾಳ ಸಂಕೇತವು ಲೈಂಗಿಕಾನುಭವದ ಭಾವೋನ್ಮೇಶದ ತುತ್ತತುದಿಯನ್ನು, ಶಿರಛೇದಗೊಂಡ ‘ಕೆಟ್ಟ’ ತಾಯಿಯನ್ನು ಸೂಚಿಸುತ್ತದೆ. ಹಾಗೆಂದೇ ತಂತ್ರ ಗ್ರಂಥಗಳಲ್ಲಿ ಕಾಳಿಯನ್ನು ಚಂಡಿಯೆಂದೂ, ‘ಕಾಳರಾತ್ರಿ’ ಎಂದೂ ಸಂಭೋದಿಸಿದ್ದರೆ ಛಿನ್ನಮಸ್ತಾಳನ್ನು ‘ಪ್ರಚಂಡಚಂಡಿ’ ಎಂದೂ ‘ವೀರರಾತ್ರಿ’ ಯೆಂದೂ ಸ್ತುತಿಸಲಾಗಿದೆ.

ಪ್ರಾಯಶಃ ಜೈಮಿನೀಯ ಬ್ರಾಹ್ಮಣದ ದೀರ್ಘಜಿಹ್ವಿಯೇ ಮುಂದಿನ ಪುರಾಣಾದಿಗಳಲ್ಲಿ ಕಾಳಿ (ಅಥವಾ ಚಂಡಿ) ಆಗಿದ್ದರಬೇಕೆಂದು ಶ್ರೀಮತಿ ಓ’ಫ್ಲಾಹರ್ಟಿ ಅಭಿಪ್ರಾಯಪಡುತ್ತಾರೆ. ಖಚಿತವಾಗಿ ಹೌದು. ಮೌಖಿಕ ಲೈಂಗಿಕತೆಯನ್ನು ಅಭಿವ್ಯಕ್ತಿಸುವ ಕಾಳಿಯು ಆಕ್ರಮಣಕಾರೀ ಕಾಮೋನ್ಮಾದಯುಕ್ತ ‘ಕೆಟ್ಟ’ ತಾಯಿಯನ್ನು ಪ್ರತಿನಿಧಿಸಿದರೆ, ಛಿನ್ನಮಸ್ತಾಳ ಸಂಕೇತವು ಲೈಂಗಿಕಾನುಭವದ ಭಾವೋನ್ಮೇಶದ ತುತ್ತತುದಿಯನ್ನು, ಶಿರಛೇದಗೊಂಡ ‘ಕೆಟ್ಟ’ ತಾಯಿಯನ್ನು ಸೂಚಿಸುತ್ತದೆ. ಹಾಗೆಂದೇ ತಂತ್ರ ಗ್ರಂಥಗಳಲ್ಲಿ ಕಾಳಿಯನ್ನು ಚಂಡಿಯೆಂದೂ, ‘ಕಾಳರಾತ್ರಿ’ ಎಂದೂ ಸಂಭೋದಿಸಿದ್ದರೆ ಛಿನ್ನಮಸ್ತಾಳನ್ನು ‘ಪ್ರಚಂಡಚಂಡಿ’ ಎಂದೂ ‘ವೀರರಾತ್ರಿ’ ಯೆಂದೂ ಸ್ತುತಿಸಲಾಗಿದೆ.

ಛಿನ್ನಮಸ್ತಾ ದೈವೀಪ್ರತೀಕದ ಸುತ್ತ ಧಾರ್ಮಿಕ, ಆದಿದೈವಿಕ ಹಾಗೂ ಕ್ರಿಯಾಕ್ರಮಾತ್ಮಿಕ ಸಾಹಿತ್ಯವು ಸಾಕಷ್ಟು ರಚಿಸಲ್ಪಟ್ಟಿದೆ. ಶಕ್ತಿಸಂಗಮ ತಂತ್ರದಲ್ಲಿ ‘ಛಿನ್ನಮಸ್ತಾ ಕಾಂಡ’ವೆಂಬ ವಿಭಾಗವಿದೆ. ವಿಶ್ವಸಾರತಂತ್ರದಲ್ಲಿ ಛಿನ್ನಮಸ್ತಾಳ ಸಹಸ್ರನಾಮಗಳು ನಿರೂಪಣೆ ಬರುತ್ತದೆ. ದಶಮಹಾವಿದ್ಯೆಯ ಉಳಿದ ಒಂಬತ್ತು ಶಕ್ತಿಗಳೊಡನೆ ಸಮಷ್ಟಿಯಾಗಿ ವರ್ಣಿಸಲ್ಪಡುವುದಲ್ಲದೆ, ಪ್ರತ್ಯೇಕವಾಗಿ ಛಿನ್ನಮಸ್ತಾಳ ಬಗೆಗಿನ ವಿವರಗಳು ಶಾಕ್ತ ಪ್ರಮೋದ, ಭೈರವ ತಂತ್ರ, ಹಾಗೂ ನಂದಾವರ್ತಗಳಲ್ಲಿ ಸಿಗುತ್ತವೆ. ಗೋರಕ್ಷೆ ಪದ್ಧತಿಯಂತಹ ಗ್ರಂಥಗಳಲ್ಲಿ ಛಿನ್ನಮಸ್ತಾ ಸಂಕೇತದ ಯೋಗಿಕ ಅರ್ಥವು ವಿವರಿಸಲ್ಪಟ್ಟಿದೆ. ಇದಲ್ಲದೇ ಈ ಶತಮಾನದ ಋಷಿ/ಕವಿಯಾದ ಶ್ರೀ ವಾಶಿಷ್ಟ ಗಣಪತಿ ಮುನಿಯವರು ತಮ್ಮ ‘ಪ್ರಪಂಡ ಚಂಡಾ ತ್ರಿಶತಿ’ ಹಾಗೂ ‘ಉಮಾಸಹಸ್ರ’ಗಳಲ್ಲಿ ಈ ದೇವತೆಯ ಬಗ್ಗೆ ವಿಸ್ತತವಾಗಿ ಬರೆದಿದ್ದಾರೆ. ಮಿಗಿಲಾಗಿ ರೇಣುಕಾದೇವಿಯ ಬಗ್ಗೆ ವಾಯುಪುರಾಣ, ಪದ್ಮ ಪುರಾಣ, ರುದ್ರ ಯಾಮಲ ಹಾಗೂ ಡಾಮರೇಶ್ವರ ತಂತ್ರಗಳಲ್ಲಿ ವಿವರಗಳು ಸಿಗುತ್ತವೆ.

ಛಿನ್ನಮಸ್ತಾ ಅರ್ಕಿಟೈಪ್‍ಗೆ ಅಂಟಿಕೊಂಡಿರುವ ಲೈಂಗಿಕ ಆಯಾಮಗಳಲ್ಲಿ ಸ್ಪಷ್ಟವೂ, ಪ್ರಮುಖವೂ ಆಗಿವೆ. ಈ ದೈವತ್ವದ ಹುಟ್ಟಿನ ಬಗೆಗಿನ ವೃತ್ತಾಂತವು ಶಕ್ತಿ ಸಂಗ್ ತಂತ್ರದಲ್ಲಿ ಬಂದಿದ್ದು, ಅದನ್ನಿಲ್ಲಿ ಸಂಗ್ರಹಿಸಿ ಹೇಳಲಾಗಿದೆ.

“ಒಮ್ಮೆ ಮಹಾಮಾಯಾ ಹಾಗೂ ಮಹಾದೇವರು ರತ್ಯಾಸಕ್ತರಾಗಿದ್ದಾಗ, ಮಹಾಮಾಯೆ ಆಕ್ರಮಣಶೀಲಳಾದಳು (ಚಂಡಮೂರ್ತಿರಭೂತ್). ಶುಕ್ರವಿಸರ್ಜನೆಯ ತರುವಾಯ ಬಹಿರ್ದೆಸೆಗೆಂದು ಹೊರಗೆ ಬಂದ ಅವಳ ದೇಹದಿಂದ ಡಾಕಿನಿ ಹಾಗೂ ವರ್ಣಿನಿಯರೆಂಬ ಇಬ್ಬರು ಯೋಗಿನಿಯರು ಉದ್ಭವಿಸಿದರು. ಮುಂಜಾನೆಯ ಹೊತ್ತು ಮಹಾಮಾಯೆಯು ತನ್ನ ಇಬ್ಬರು ಸಖಿಯರೊಡನೆ ಮಜ್ಜನಕ್ಕೆಂದು ಪುಷ್ಪಭದ್ರಾ ನದಿಗೆ ತೆರಳಿದಳು. ಸ್ನಾನಾನಂತರ ಮಧ್ಯಾಹ್ನವಾದುದರಿಂದ ಯೋಗಿನಿಯರು ಆಹಾರವನ್ನು ಕಲ್ಪಿಸಬೇಕೆಂದು ಯಾಚಿಸಿದರು. ಚಂಡಿಕೆಯು ನಸುನಕ್ಕು ತನ್ನ ಶಿರವನ್ನೇ ಕತ್ತರಿಸಿ, ರಕ್ತವು ಕಂಠದಿಂದ ಪ್ರವಹಿಸುವಂತೆ ಮಾಡಿದಳು. ಡಾಕಿನಿಯು ಎಡಭಾಗದ ಪ್ರವಾಹವನ್ನು, ವರ್ಣಿನಿಯು ಬಲಭಾಗದ ಧಾರೆಯನ್ನು ಕುಡಿಯುತ್ತಿರಲು, ಕಂಠಮಧ್ಯದಿಂದ ಧುಮುಕುತ್ತಿದ್ದ ಪ್ರವಾಹವು ಅವಳ ಮುಖವನ್ನೇ ಪ್ರವೇಶಿಸಿತು. ಈ ಕ್ರೀಡೆಯನ್ನು ಮುಗಿಸಿ ತನ್ನ ತಲೆಯನ್ನು ಮತ್ತೆ ಯಥಾಸ್ಥಾನದಲ್ಲಿರಿಸಿ, ಪಾರ್ವತಿಯು ಮನೆಗೆ ಹಿಂದಿರುಗಿದಳು. ಅವಳು ವಿವರ್ಣಳೂ, ಪೇಲವಳೂ ಆದುದನ್ನು ಕಂಡು ಶಿವನು ಅವಳು ತಡವಾದುದೇಕೆಂದು ಕೇಳಿದನು. ಬ್ರಹ್ಮ, ವಿಷ್ಣು, ದೇವತೆಗಳು ಅಥವಾ ಗಂಧರ್ವರು ಅವಳನ್ನು ಅಪಹರಿಸಿದ್ದರೇ ಎಂದು ಪ್ರಶ್ನಿಸಿದನು. ಮಹಾಮಾಯೆಯು ನಡೆದ ವಿಷಯವನ್ನು ಅರುಹಿದಳು……”
(ಶಕ್ತಿಸಂಗಮ ತಂತ್ರ, 5 152 ರಿಂದ 173).

ಈವರೆಗಿನ ಬಿಡಿಬಿಡಿಯಾಗಿ ಬಂದ ವಿಚಾರಗಳನ್ನು ಸಮಗ್ರವಾಗಿ ನೋಡೋಣ. ಛಿನ್ನಮಸ್ತಾ ಹಾಗೂ ರೇಣುಕಾರ ಗಾಥೆಗಳ ಕೇಂದ್ರಪ್ರತೀಕವಾಗಿ ನೀರು ಉಲ್ಲೇಖಿಸಲ್ಪಟ್ಟಿದೆ. ಜೀವನದ, ಜನನಶಕ್ತಿಯ, ಶೃಂಗಾರಾಭಿಲಾಷೆಯ ಪ್ರತೀಕವಾದ ಜಲವು ದೇವಿಯ ಲೈಂಗಿಕ ಮೂಲಕ್ಕೆ ಸಂವಾದಿಯಾಗಿದೆ. ರಾಮಾಯಣದ ಪ್ರಕಾರ, ರಾವಣನು ಕಾರ್ತವೀರ್ಯನನ್ನು ಕಂಡುದು ನರ್ಮದೆಯ ಜಲದಲ್ಲಿ ರೇಣುಕೆಯೂ ಕೂಡಾ ಗಂಧರ್ವನನ್ನು ಕಂಡುದು ಸರೋವರದ ನೀರಿನಲ್ಲಿ. ಛಿನ್ನಮಸ್ತಾಳ ಜನನವೂ ಪುಷ್ಪಭದ್ರಾದ ಜಲದಲ್ಲಿ ಆಯಿತು. ವಿಶ್ವಸಾರ ತಂತ್ರದಲ್ಲಿ ಛಿನ್ನಮಸ್ತಾಳನ್ನು ‘ನರ್ಮದಾ’ ಎಂದು ಕರೆದಿರುವುದು ಔಚಿತ್ಯಪೂರ್ಣವೇ.

ಕೇವಲ ಛಿನ್ನಮಸ್ತಾಳ ಜನನ ಮಾತ್ರ ನೀರಿನಲ್ಲಾದುದಲ್ಲ; ಅವಳ ಪೂರ್ಣದೇಹವೇ ಒಂದು ಪ್ರವಾಹವೆಂಬಂತೆ ವಿವರಿಸಲ್ಪಟ್ಟಿದೆ. ರಕ್ತದ ಮೂರು ಅನಂತ ಪ್ರವಾಹಗಳು ಅವಳ ದೇಹದಿಂದ ಹೊರಹೊಮ್ಮುತ್ತವೆ. ಈ ರೂಪದಲ್ಲಿ ಕಾಣುವ ಅವಳ ಭೀಕರಸ್ವರೂಪವೇ ಅವಳಿಗೆ ‘ವೀರರಾತ್ರಿ’ ಎಂಬ ಹೆಸರನ್ನು ನೀಡಿದೆ. ಕಪ್ಪಾದ ನೀರು ತುಂಬಿದ ಮೋಡಗಳಿಂದ ಪ್ರಜ್ವಲಿಸಿ ಬರುವ ಮಿಂಚಿನಂತೆ ಅವಳನ್ನು ಪರಿಕಲ್ಪಿಸಬಹುದಾಗಿದೆ. ‘ಸ್ವರ್’ ಲೋಕದ ಒಡೆಯನಾದ ದೇವೇಂದ್ರನ ವಜ್ರಾಯುಧವೇ ಅವಳು. ಉಮಾಸಹಸ್ರದಲ್ಲಿ ಹೇಳುವಂತೆ ‘ಪ್ರಪಂಚಲಯಕರಿಯಾದ ಚಂಡಿಯು ರುದ್ರಪತ್ನಿಯಾದರೆ, ಶತ್ರು ಸಂಹಾರಕಳಾದ ಪ್ರಚಂಡಚಂಡಿಯು ಇಂದ್ರನ ಮಡದಿ’.

‘ಖಗೋಳದ ತಾರೆ-ನೀಹಾರಿಕೆಗಳ ಧೂಳೇ ಉಪಾಧಿಯಾಗಿ ಉಳ್ಳವಳು ಅವಳು. ಅವಳೇ ಇಂದ್ರಯೋನಿ ಹಾಗೂ ವಜ್ರವೈರೋಚನೀಯಾ, ಹೀಗೆ ತಾಂತ್ರಿಕ ಪ್ರತೀಕಗಳಲ್ಲಿ ಛಿನ್ನಮಸ್ತಾಳು ಲೈಂಗಿಕ ಭಾವೋನ್ಮಾದ ಸರೋವರದಲ್ಲಿ ಜನಿಸಿ, ‘ಸ್ವರ್’ ಲೋಕದ ಪ್ರಜ್ಞಾ ಪಾತಳಿಯ ಅಸ್ತಿತ್ವದವರೆಗೆ ಬೆಳೆದು ನಿಲ್ಲುತ್ತಾಳೆ. ಈ ಪಾತಳಿಯು ಭಾವಗಮ್ಯ ತಿಳಿವಿನಿಂದ ಕಲ್ಪನಾ ಶ್ರೀಮಂತಿಕೆಯಿಂದ ಕೂಡಿದ, ಅಖಂಡ ಪ್ರತಿಭೆಯ ಲೋಕ.

ಬೃಹದೇವತಾದ ಪ್ರಕಾರ, ‘ಇಂದ್ರನು ಎಲ್ಲ ಲೋಕಕ್ಕಿಂತಲೂ ಅತ್ಯಧಿಕನು ಎಂಬ ಮಂತ್ರದಲ್ಲಿ ಕಂದು ಬಣ್ಣದ ವೃಷಭವಾಗಿ ಅವನು ಯಜ್ಞ ಭೂಮಿಯನ್ನೇರುವುದರಿಂದ ಅವನು ವೃಷಾಕಪಿ; ಅಥವಾ ಈ ಶ್ರೇಷ್ಠ ವೃಷಭವು ಹೋದಲ್ಲೆಲ್ಲ ತನ್ನ ಕಿರಣಗಳಿಂದ ನಡುಕವನ್ನುಂಟು ಮಾಡುತ್ತದೆ’.

ಋಗ್ವೇದದ ಹತ್ತನೇ ಮಂಡಲದಲ್ಲಿ, ಇಂದ್ರನಿಗೆಂದು ಸಿದ್ಧಪಡಿಸಿದ ಹವಿಸ್ಸನ್ನು ವೃಷಾಕಪಿಯು ತಿಂದನೆಂಬ ವೃತ್ತಾಂತವಿದೆ. ವೃಷಾಕಪಿ ಹಾಗೂ ಇಂದ್ರಪತ್ನಿ (ಇಂದ್ರಾಣಿ)ಯರ ನಡುವಿನ ಸಂಭಾಷಣೆಯಿಂದ, ವೃಷಾಕಪಿಯು ಇಂದ್ರನ ಸ್ನೇಹಿತನೆಂದು ತಿಳಿದುಬರುತ್ತದೆ. ವೃಷಾಕಪಿ ಶಬ್ದಕ್ಕೆ ಹಲವು ಅರ್ಥಗಳನ್ನು ಹೇಳಲಾಗುತ್ತಿದೆ. ಬೃಹದೇವತಾದ ಪ್ರಕಾರ, ‘ಇಂದ್ರನು ಎಲ್ಲ ಲೋಕಕ್ಕಿಂತಲೂ ಅತ್ಯಧಿಕನು ಎಂಬ ಮಂತ್ರದಲ್ಲಿ ಕಂದು ಬಣ್ಣದ ವೃಷಭವಾಗಿ ಅವನು ಯಜ್ಞ ಭೂಮಿಯನ್ನೇರುವುದರಿಂದ ಅವನು ವೃಷಾಕಪಿ; ಅಥವಾ ಈ ಶ್ರೇಷ್ಠ ವೃಷಭವು ಹೋದಲ್ಲೆಲ್ಲ ತನ್ನ ಕಿರಣಗಳಿಂದ ನಡುಕವನ್ನುಂಟು ಮಾಡುತ್ತದೆ’. ಇಂದ್ರನು ಎಲ್ಲ ಲೋಕಕ್ಕಿಂತಲೂ ಅತ್ಯಧಿಕನು ಎಂಬ ಮಂತ್ರವೇ ಮೇಲೆ ಉದಾಹರಿಸಿರುವ 10ನೇ ಮಂಡಲದ 86ನೇ ಋಕ್. ಯಾಸ್ಯರು ಕೂಡಾ ಅಲ್ಲಾಡುವ ಅಥವಾ ಬಾಗುವ ಕಿರಣಗಳನ್ನೇ ವೃಷಾಕಪಿಯೆಂದು ಕರೆದಿದ್ದಾರೆ. “ಯದ್‍ರಶ್ಮಿ ಭಿರಭಿಪ್ರಕಂಪಯನ್ ಇತಿ ತದ್ ವೃಷಾಕಪಿರ್ಭವತಿ ವೃಷಾಕಂಪನ (ನಿರುಕ್ತ 12.28)’ ಸಂಗ್ರಹವಾಗಿ, ವೃಷಾಕಪಿಯು ಮುಸ್ಸಂಜೆಯಲ್ಲಿ ಕಂಡುಬರುವ ಸೂರ್ಯನ ಕಂಪಿಸುವ ರಶ್ಮಿ.

ಪರಶುರಾಮನ ಕತೆಯ ವಿವಿಧ ಆವೃತ್ತಿಗಳ ಪ್ರಕಾರ ಆತನು ಕೊಡಲಿಯೊಡನೆ ತಾಯಿಯನ್ನು ವಧಿಸಲು ಅವಳ ಬಳಿ ಸಾರಿದಾಗ ರೇಣುಕೆಯ ಶಿರವು ಭಯದಿಂದ ಕಂಪಿಸುತ್ತಿತ್ತು ಅಥವಾ ಕಾಳಿದಾಸನ ನುಡಿಗಳಲ್ಲಿ ಹೇಳಬೇಕೆಂದರೆ;

“ರೋಷಕರ್ಕಶವಾದ ಮನದಿಂದ ಎಲ್ಲ ಸಭ್ಯತೆಯನ್ನು ಮೀರಿದಂತಹ ಆಜ್ಞೆಯನ್ನು ತಂದೆ ನೀಡಿದಾಗ ಅದನ್ನು ಪಾಲಿಸಿದ ಮಗನು ಅವನು; ಕಂಪಿಸುತ್ತಿದ್ದ ತಾಯಿಯ ಶಿರವನ್ನು ಛೇದಿಸಿದವನು………”
(ರಘುವಂಶ, 11.90, ಒತ್ತು ಲೇಖಕನದು).

ಋಗ್ವೇದದಲ್ಲಿ ಬರುವ ವೃಷಾಕಪಿಯ ವೃತ್ತಾಂತದೊಡನೆ ಇದನ್ನು ಹೋಲಿಸಬಹುದು. ತಂತ್ರಗಳ ಛಿನ್ನಮಸ್ತಾ (ಅಥವಾ ವೇದದ ಇಂದ್ರಾಣಿ)ಳು ತಾನು ಹೆಚ್ಚು ಧೀರಳೆಂದು ಎಲ್ಲರಿಗಿಂತಲೂ ಮುಂದೆ ನುಗ್ಗುವವಳೆಂದೂ ಹೇಳಿಕೊಳ್ಳುತ್ತಾಳೆ.

‘ಸತ್ಯದ ನಿರ್ಮಾಪಕಳೂ, ವೀರಪುತ್ರರುಳ್ಳವಳೂ, ಇಂದ್ರಭಾರ್ಯೆಯೂ ಆದ ಇಂದ್ರಾಣಿಯು ಉತ್ತಮ ಯಜ್ಞಕ್ಕಾಗಲೀ ಸಂಗ್ರಾಮಕ್ಕಾಗಲೀ ಎಲ್ಲರಿಗಿಂತಲೂ ಮೊದಲೇ ಹೋಗುತ್ತಾಳೆ. ಅಲ್ಲಿ ಸ್ತುತಿಕರ್ತರಿಂದ ಪ್ರಶಂಸಿಸಲ್ಪಡುತ್ತಾಳೆ. ಇಂದ್ರನು ಎಲ್ಲ ಲೋಕಕ್ಕಿಂತಲೂ ಅತ್ಯಧಿಕನು” (ಋಗ್ವೇದ 10.86.10)

“ಕಾಳಿಯು ಪ್ರಬಲ ಭಾವಗಳ ಹಾಗೂ ಚುರುಕು ಕ್ರಿಯೆಗಳ ಶಕ್ತಿಯಾದರೆ, ಛಿನ್ನಮಸ್ತಾಳು ಇಚ್ಛೆ ಹಾಗೂ ದರ್ಶನಗಳ ಶಕ್ತಿ” (ಶಂಕರನಾರಾಯಣನ್, 1972). ಹೀಗೆ ಕಂಪಿಸುವ ರೇಣುಕೆಯು ಬೆಳೆದು ವಜ್ರವೈರೋಚನೀಯಳಾಗುತ್ತಾಳೆ. ಸಂಜೆಯ ಬಾಗಿದ ಕಿರಣಗಳು ಸಾಗಿ ಹೋಗಿ ವೀರರಾತ್ರಿಯಲ್ಲಿ ಪರಿಣಮಿಸುತ್ತವೆ.

ತ್ರಿಗುಣಗಳ ಆಯಾಮ

ಪರಶುರಾಮನ ಪುರಾಣಕಥೆಯು ತ್ರಿಗುಣಗಳ ಬಗೆಗಿನ ಆಸಕ್ತಿಪೂರ್ಣ ಆಯಾಮವನ್ನು ಹೊಂದಿದೆಯೆಂದು ಪ್ರಾರಂಭದಲ್ಲಿಯೇ ಹೇಳಿದ್ದೇವೆ. ನಮ್ಮ ಜಗತ್ತನ್ನು ರಚಿಸಿರುವ ವಸ್ತು ಹಾಗೂ ಚೈತನ್ಯಗಳ ಮೂಲ ಸ್ವಭಾವಗಳೇ ಗುಣಗಳು. ಅವು ಸಾಂಖ್ಯ ಹಾಗೂ ಯೋಗದರ್ಶನಗಳ ಅಡಿಪಾಯವಾಗಿವೆ. ಪ್ರಕೃತಿಯ ಮೂಲದಲ್ಲಿರುವ ಅಸಂಖ್ಯಾತ ಗುಣಗಳನ್ನು ಮೂರು ಪ್ರಮುಖ ಗುಣಗಳ ಕೆಳಗೆ ವರ್ಗೀಕರಿಸಲಾಗಿದೆ. ಅವೇ ಸತ್ತ್ವ, ರಜಸ್ ಹಾಗೂ ತಮೋ ಗುಣಗಳು. ಪ್ರಾರಂಭದಲ್ಲಿ ಅವನ್ನು ಪರಿಭಾವನಾತ್ಮಕ, ಕ್ರಿಯಾತ್ಮಕ ಹಾಗೂ ಜಡಾತ್ಮಕ ಸ್ವಭಾವಗಳ ಜೊತೆ ಸಮೀಕರಿಸಲಾಗಿತ್ತು. ಸಮಯ ಕಳೆದಂತೆ ಗುಣಗಳ ಆದಿದೈವಿಕ ವಲಯವನ್ನು ಬ್ರಾಹ್ಮಣರ ಮನೋಭೂಮಿಕೆಗೆ ಸರಿಕಂಡ ಸ್ವಭಾವ ಶ್ರೇಣಿಗನುಸಾರವಾಗಿ ಬದಲಾಯಿಸಲಾಯಿತು. ಹೀಗೆ ಸತ್ವವನ್ನು ಪುರೋಹಿತಶಾಯಿ ಕ್ರಿಯೆಗಳ ಜೊತೆಗೂ ರಜೋಗುಣವನ್ನು ಕ್ಷತ್ರಿಯರ ಕ್ರಿಯೆಗಳೊಡನೆಯೂ ಸಮೀಕರಿಸಲಾಯಿತು. ಮಹಾಭಾರತದ ಸಮಯಕ್ಕೆ ಈ ಪರಿವರ್ತನೆ ಸಂಪೂರ್ಣವಾಗಿತ್ತು. ಭಗವದ್ ಗೀತೆಯ ಪರಾಭೌತಿಕ ಸಂವಾದಗಳಲ್ಲಿ ಈ ಮಾತಿನ ಸ್ಪಷ್ಟನೆ ದೊರೆಯುತ್ತದೆ.

ತ್ರಿಗುಣಗಳ ಉಪವ್ಯವಸ್ಥೆಯು ಗೀತೆಯ ಎಲ್ಲ ಅಧ್ಯಾಯಗಳ ಭೂಮಿಕೆಯಲ್ಲಿರುವುದಲ್ಲದೇ ಗುಣತ್ರಯ ವಿಭಾಗ ಯೋಗವೆಂಬ ಪ್ರತ್ಯೇಕ (14ನೇ) ಅಧ್ಯಾಯವೇ ಗೀತೆಯಲ್ಲಿದೆ. ಶ್ರೀಕೃಷ್ಣನು ಅರ್ಜುನನನ್ನು ನಿಸ್ರೈಗುಣ್ಯನಾಗೆಂದೂ (2ನೇ ಅಧ್ಯಾಯ) ಗುಣಗಳಿಗಿಂತಲೂ ಮೇಲಿರುವುದನ್ನು ತಿಳಿದು ನನ್ನನ್ನು ಹೊಂದು(14 ನೇ ಅಧ್ಯಾಯ) ಎಂದೂ ಹೇಳುತ್ತಾನೆ. ಶ್ರೀಕೃಷ್ಣನ ಉದ್ದೇಶವು ಅಪೇಕ್ಷಿತ ಕರ್ಮಫಲವು ಕರ್ಮತತ್ಪರತೆಯ ನಡುವೆ ಪ್ರವೇಶಿಸಬಾರದೆಂಬುದಾಗಿತ್ತು. ಕರ್ತವ್ಯದತ್ತ ಫಲಾಪೇಕ್ಷೆಯಿಲ್ಲದ, ನಿರಾಸಕ್ತ ಗಮನವನ್ನುಂಟು ಮಾಡುವುದು ಅವನ ಗುರಿಯಾಗಿತ್ತು. ಬಹುಶಃ ಗುಣಗಳನ್ನು ಮೀರುವ ಮೂಲಕ ಅವು ಪ್ರತಿನಿಧಿಸುವ ಸಾಮಾಜಿಕ ಶ್ರೇಣಿಗಳನ್ನು ಮೀರುವುದು ಅವನ ನಿಶ್ಚಯವಾಗಿತ್ತು.

ಅದೇನೇ ಇದ್ದರೂ, ಗುಣಗಳನ್ನು ಮೀರುವುದು ಭಾರತೀಯರ ಪಾಲಿಗೆ ಸಾಂಸ್ಕೃತಿಕ ಮೌಲ್ಯವಾಗಿ ಬಂದಿದೆ. ನಮ್ಮ ಸಂಸ್ಕೃತಿಯು ವೈರಾಗ್ಯವನ್ನು, ನಿರಾಸಕ್ತಿಯನ್ನು ನಿರಪೇಕ್ಷ ಕರ್ತವ್ಯ ಪಾಲನೆಯನ್ನು ಮುಕ್ತಕಂಠದಿಂದ ಹೊಗಳುತ್ತದೆ. ಅಂತಃಸತ್ವದ ನಿರ್ಮಾಣದ ಮೊದಲ ಹಂತಗಳಲ್ಲಿಯೇ ಇಂತಹ ಜೀವನ ದೃಷ್ಟಿಯನ್ನು ಹೊಂದಿದರೆ, ಎರಡು ಗಂಭೀರ ಗೊಂದಲಗಳು ಉದ್ಭವಿಸುತ್ತವೆ. ಒಂದು, ಗುಣಗಳ ಮೂಲ ಪ್ರಕೃತಿಯ ಬಗೆಗೇ ಗೊಂದಲವಿದೆ.

ಗುಣಗಳನ್ನು ಮೀರುವ ಅವಸರದಲ್ಲಿ ಕೇವಲ ಬ್ರಾಹ್ಮಣರು ವಿಧಿಸಿದ ಸಾಮಾಜಿಕ ಶ್ರೇಣಿಗಳನ್ನು ಮೀರುವುದಲ್ಲದೇ, ವಸ್ತು- ಚೈತನ್ಯಗಳ ಮೂಲ ಪ್ರಕೃತಿಯನ್ನೂ ಕೂಡಾ ಮೀರಬೇಕೆಂಬ ಕಲ್ಪನೆ ಬಂದುಬಿಟ್ಟಿದೆ. ಇಂತಹ ಸಾಂಸ್ಕೃತಿಕ ಧಾರಣೆಯ ಕಾರಣದಿಂದಲೇ, ‘ಎಲ್ಲಾ ಮನುಷ್ಯರೂ ಸ್ವಭಾವತಃ ಒಂದೇ’, ‘ಯಾವ ಸಂಬಂಧಕ್ಕೂ ಅರ್ಥವಿಲ್ಲ’ ಹಾಗೂ ‘ಎಲ್ಲ ಸರಕಾರಗಳೂ ಭ್ರಷ್ಟವಾಗಿವೆ’ ಇತ್ಯಾದಿ ಸರಳೀಕರಣಗಳು ಕೇಳಿಬರುತ್ತವೆ. ಎರಡನೆಯದಾಗಿ, ಗುಣಗಳನ್ನು ಯಾವಾಗ ಮೀರಬೇಕೆಂಬುದರ ಬಗೆಗೂ ಗೊಂದಲವಿದೆ. ಪ್ರತಿ ಮಾನವನೂ ತನ್ನ ಜೀವನವನ್ನು ವೈರಾಗ್ಯದಿಂದಲೇ ಪ್ರಾರಂಭಿಸಬೇಕೆಂದೂ, ಆತನು ತಾವರೆಯ ಎಲೆಯಂತೆ ಸಂಸಾರದ ಜಲದಲ್ಲಿ ನಿರ್ಲಿಪ್ತನಾಗಿರಬೇಕೆಂದೂ ಹೇಳಲಾಗುತ್ತದೆ. ಈ ರೀತಿಯ ದೃಷ್ಟಿಕೋನದಿಂದಾಗಿ ಜೀವನೋದ್ದೇಶ್ಯಗಳತ್ತ ಉತ್ಸಾಹಯುತವಾಗಿ ಧಾವಿಸದ, ಪರಿಶ್ರಮವಿಹೀನವಾದ, ಸದಾ ವಿಧಿಗೆ ಶರಣಾಗುವ ವಾತಾವರಣ ಉಂಟಾಗುತ್ತಿದೆ. ಬಹುಶಃ ಈ ಎರಡು ಗೊಂದಲಗಳೇ ನೈತಿಕ ಸರಿ- ತಪ್ಪುಗಳ, ಪಾಪ- ಪುಣ್ಯಗಳ ಬಗೆಗಿನ ದೈವಿಕ ನಿರ್ಲಕ್ಷಕ್ಕೂ ಕಾರಣ. ಸಾಮಾನ್ಯವಾಗಿ ಈ ಬಗೆಯ ನಿರಾಸಕ್ತಿಯು ನೈತಿಕ ವಿಷಯಗಳತ್ತ ಹಿಂದೂ ಜನಸಮೂಹಕ್ಕೆ ಯಾವುದೇ ಭಾವನಾತ್ಮಕ ಸಾಮೀಪ್ಯವಿಲ್ಲದಂತೆ ಮಾಡಿದೆ. ಆದರ್ಶ ಮಾನವನು ಇವೆಲ್ಲವನ್ನೂ ಮೀರಿದವನು ಎಂಬ ಧಾರಣೆಯು ಸರ್ವತ್ರ ಸ್ವೀಕೃತವಾಗಿದೆ.

ಜೀವನದ ಬಗೆಗಿನ ಇಂತಹ ಧೋರಣೆಯು ಸಮಾಜದಲ್ಲಿನ ಗಂಭೀರ ಬಲಹೀನತೆಗಳಿಗೆ ಕಾರಣವಾದೀತು. (ನನ್ನ ಭಯವೆಂದರೆ, ಇಂತಹ ಬಲಹೀನತೆಗಳು ಈಗಾಗಲೇ ನಮ್ಮ ಸಮಾಜದಲ್ಲಿ ಕಾಣಿಸಿಕೊಂಡಿವೆ). ಈ ರೀತಿಯ ದೃಷ್ಟಿಕೋನದಲ್ಲಿ, ವ್ಯಕ್ತಿಯು ತನ್ನ ಕ್ರಿಯೆಗಳಿಗೆ ತಾನೇ ಜವಾಬ್ದಾರನಾಗಿರಲಾರ. ಸಂಸಾರದ ಕಾರ್ಯಗಳನ್ನು ಯಾವುದೇ ಆಸಕ್ತಿಯಿಲ್ಲದೇ, ಕರ್ತವ್ಯವೆಂಬಂತೆ ಎಸಗುತ್ತಾನೆ. ಸ್ವಂತ ಕ್ರಿಯೆಗಳ ಬಗೆಗೆ ವ್ಯಕ್ತಿಯು ನೇರವಾಗಿ ಜವಾಬ್ದಾರನಾಗದಿರುವುದರಿಂದ, ಸಾಂಸ್ಕೃತಿಕವಾಗಿ ನಿಷೇಧಿಸಲ್ಪಟ್ಟ ಪ್ರಾಪಂಚಿಕ ಸುಖಗಳತ್ತ ವ್ಯಕ್ತಿಯ ಗಾಢಮನಸ್ಸು ತುಯ್ಯುತ್ತದೆ. ಹೀಗೆ ಅಪರಾಧಿ ಪ್ರಜ್ಞೆ ತುಂಬಿರುವ ಆತ್ಮವಂಚನೆಯು ಜೀವನದ ಕೇಂದ್ರ ಕಾಳಜಿಯಾಗಿ ರೂಪುಗೊಳ್ಳುತ್ತದೆ.

ಸಂಬಂಧಪಟ್ಟ ಪುರಾಣ ಕಥೆಯೊಂದರ ಉಲ್ಲೇಖ ವಿಷಯಾಂತರವಾಗಲಾರದು. ಸಪ್ತಋಷಿಗಳಲ್ಲೊಬ್ಬನಾದ ಅತ್ರಿಗೆ ಸುಂದರಿಯಾದ ಅನುಸೂಯಾಳೆಂಬ ಮಡದಿ. ತ್ರಿಮೂರ್ತಿಗಳು ಒಮ್ಮೆ ಅತ್ರಿಯಿಲ್ಲದ ಸಮಯ ನೋಡಿ ಅನಸೂಯಾಳ ಪಾತಿವೃತ್ಯವನ್ನು ಪರೀಕ್ಷಿಸಲೆಂದು ಅವಳ ಮನೆಗೆ ಬಂದರು. ಅವಳು ಬತ್ತಲೆಯಾಗಿ ಆತಿಥ್ಯವನ್ನು ನೀಡಿದರೆ ಮಾತ್ರ ಸ್ವೀಕರಿಸುವುದಾಗಿ ಹೇಳಿದರು. ಸದ್ಗಹಿಣಿಯಾದ ಅನಸೂಯಾ ಹಾಗೆ ಮಾಡಲು ಒಪ್ಪಿದಳು. ಕ್ಷಣದೊಳಗೆ ಅವಳು ತ್ರಿಮೂರ್ತಿಗಳನ್ನು ಮೂರು ಮಕ್ಕಳನ್ನಾಗಿ ಪರಿವರ್ತಿಸಿ, ಬತ್ತಲೆಯಾಗಿ ಬಂದು ಅವರಿಗೆ ಉಣಬಡಿಸಿದಳು. ಮೂರು ಶಿಶುಗಳು ಮೂರು ಶಿರವುಳ್ಳ ಒಂದೇ ಶಿಶುವಾದವು. ಈ ಶಿಶುವೇ ದತ್ತಾತ್ರೇಯ (ದತ್ತ+ಅತ್ರೇಯ). ಈ ಕಥೆಯಲ್ಲಿ ಬರುವ ಅತ್ರಿ(ಅ+ತ್ರಿ)ಯು ತ್ರಿಗುಣಗಳನ್ನು ಮೀರಿದಾತ. ತ್ರಿಮೂರ್ತಿಗಳು ಮೂರು ಗುಣಗಳನ್ನು ಪ್ರತಿನಿಧಿಸುತ್ತಾರೆ. ಅಸೂಯೆಯಿಲ್ಲದ (ಅನಸೂಯಾ) ಹೃದಯದಲ್ಲಿ ಮಾತ್ರ ಮೂರು ಗುಣಗಳು ಏಕೀಕೃತವಾಗುತ್ತವೆ. ಹೀಗೆ ದತ್ತಾತ್ರೇಯನು ಪೇಲವವಾದ, ಯಾವ ನಿರ್ದಿಷ್ಟ ಗುಣವೂ ಇಲ್ಲದ ದೇವತೆಯಾಗಿ ರೂಪತಳೆಯುತ್ತಾನೆ.

ಕ್ಷತ್ರಿಯ ತೇಜಸ್ಸಿನಿಂದ ಜನಿಸಿದ ಆತನನ್ನು, ರಜೋಗುಣಾನ್ವಿತ ಮೂರ್ತಿಯೆಂದು ಕರೆಯಲಾಗಿದೆ. ಆದರೆ ಆತನು ತನ್ನ ಮೂಲಭೂತ ಸ್ಥಾಯೀಗುಣಗಳಾದ ಕ್ರೋಧ, ಪ್ರತೀಕಾರ ಹಾಗೂ ಮುಂಗೋಪಗಳನ್ನು ಮೀರಿನಿಂತ- ಜೀವನದಿಂದ ವಿಮುಖನಾಗಿ ಅಲ್ಲ.

ಪರಶುರಾಮನ ಕಥೆಯಲ್ಲೂ ದತ್ತಾತ್ರೇಯನ ಪ್ರಭಾವ ಕೆಲಸ ಮಾಡಿದೆ. ಕಾರ್ತವೀರ್ಯನು ದತ್ತಾತ್ರೇಯನ ಭಕ್ತನಾಗಿದ್ದು, ಅವನಿಂದಲೇ ಸಹಸ್ರ ಬಾಹುಗಳನ್ನು ಪಡೆದಿದ್ದನು. ಪುರಾಣಗಳ ಪ್ರಕಾರ ಅರ್ಜುನನು ಸುಗುಣಿಯೂ, ಸದಾಚಾರಿಯೂ ಆಗಿದ್ದ. ಜಮದಗ್ನಿಯಂತಹ ಋಷಿಗಳಿಗೆ ಕೇಡೆಸಗುವಂತಹ ಸ್ವಭಾವದ್ರವ್ಯವು ಅವನಲ್ಲಿ ಕಾಣಿಸುವುದಿಲ್ಲ. ಆದರೆ ಅವನೆಲ್ಲ ಕ್ರಿಯೆಗಳು ಬೇರೆಯವರ ಪ್ರಭಾವದಿಂದ ಆದುವು. ಅವನು ಆಪವನ ಆಶ್ರಮವನ್ನು ಸುಟ್ಟು, ಅವನ ಶಾಪಕ್ಕೆ ತುತ್ತಾದ (ಮತ್ಸ್ಯ ಪುರಾಣ). ಆದರೆ ಇದು ಅಗ್ನಿದೇವನ ಬೇಡಿಕೆಯಂತೆ ನಡೆದ ಕಾರ್ಯ. ಅವನು ಜಮದಗ್ನಿಯ ಹೋಮಧೇನುವನ್ನು ಬಲಾತ್ಕಾರವಾಗಿ ಎಳೆದೊಯ್ದ. ಆದರೆ, ಅದು ಮಂತ್ರಿಯಾದ ಚಂದ್ರಗುಪ್ತನ ಒತ್ತಾಯದಿಂದ (ಬ್ರಹ್ಮಾಂಡ ಪುರಾಣ). ಹೀಗೆ ದತ್ತಾತ್ರೇಯನ ಭಕ್ತನಾದ ಆತನು, ನಿರಾಸಕ್ತನೂ, ನಿರಪೇಕ್ಷ ಕರ್ತವ್ಯ ಪಾಲಕನೂ ಆಗಿ ಬಿಟ್ಟಿದ್ದನು.

ಪರಶುರಾಮನಾದರೋ ಪ್ರಬಲ ಇಚ್ಛೆ ಹಾಗೂ ಆಕಾಂಕ್ಷೆಗಳ ವ್ಯಕ್ತಿ. ಅವನು ತನ್ನ ಜೀವನದ ಪ್ರತಿ ಕ್ಷಣವನ್ನೂ ಪ್ರತೀಕಾರದಲ್ಲಿ, ಸಾಹಸದಲ್ಲಿ, ಸ್ಪರ್ಧೆಯಲ್ಲಿ ಹಾಗೂ ಪ್ರಯಾಣದಲ್ಲಿ ಜೀವಂತವಾಗಿ ಕಳೆದ. ಕ್ಷತ್ರಿಯ ತೇಜಸ್ಸಿನಿಂದ ಜನಿಸಿದ ಆತನನ್ನು, ರಜೋಗುಣಾನ್ವಿತ ಮೂರ್ತಿಯೆಂದು ಕರೆಯಲಾಗಿದೆ. ಆದರೆ ಆತನು ತನ್ನ ಮೂಲಭೂತ ಸ್ಥಾಯೀಗುಣಗಳಾದ ಕ್ರೋಧ, ಪ್ರತೀಕಾರ ಹಾಗೂ ಮುಂಗೋಪಗಳನ್ನು ಮೀರಿನಿಂತ- ಜೀವನದಿಂದ ವಿಮುಖನಾಗಿ ಅಲ್ಲ. ಜೀವನ ಸ್ವೀಕಾರದಿಂದ ಪ್ರೇರಿತವಾದ ಕರ್ಮದಿಂದ. ಜೀವನವನ್ನು ತನ್ನ ಭಾವನೋನ್ಮಾದದ ಗರಿಷ್ಟ ಮೇರೆಯ ತನಕವೂ ಬದುಕಿ, ಪ್ರಬಲವಾದ ಇಚ್ಛೆಯಿಂದ ಅವನ್ನು ಮೀರಿನಿಂತ. ರೇಣುಕಾಳನ್ನು “ಧೂಳನ್ನು ಉಪಾಧಿಯಾಗಿ ಉಳ್ಳವಳೆಂದು” ಕರೆದಿರುವುದು ಯುಕ್ತವಾಗಿದೆ. ಸಂಸ್ಕತದಲ್ಲಿ ಧೂಳಿಗೆ ‘ರಜ’ವೆಂಬ ಪರ್ಯಾಯವಿರುವುದನ್ನು ಇಲ್ಲಿ ಸ್ಮರಿಸಬಹುದು. ಅವಳು ರಜೋಗುಣಸಮನ್ವಿತಳು. ಹಾಗೆಂದೇ ಸಾವನ್ನು ಮೀರಿ ಛಿನ್ನಮಸ್ತಳಾಗಿ ಮತ್ತೆ ಜನಿಸಿದಳು. ಜಮದಗ್ನಿಯೂ ಕೂಡ ರೇಣುಕೆಯು ಎಸೆದ ಸವಾಲುಗಳನ್ನು ನಿರಾಸಕ್ತಿಯಿಂದಲ್ಲದೇ, ಪ್ರಜ್ಞಾಪೂರ್ವಕ ಕ್ರಿಯೆಗಳಿಂದ ಎದುರಿಸುತ್ತಾನೆ.

ಮನಸ್ಸಿನ ಗೂಢ ಗಾಢ ಫ್ಯಾಂಟಸಿಗಳಿಗೆ ಕ್ರಿಯೆಯ ರೂಪಕೊಟ್ಟು, ಇಂದೀಗಿನ ಕ್ಷಣಗಳಲ್ಲಿ ಬದುಕುವುದು ತಂತ್ರ ನೀಡಿದ ಸಂದೇಶ. ಮನೋ ವೃತ್ತಿಗಳನ್ನೇ ಉದಾತ್ತೀಕರಿಸಿರುವುದು ಭಾವಸಾಂದ್ರತೆಯಿಂದಲೇ ಹೊರತು, ನಿರಪೇಕ್ಷ ನೀರಸ ವೈರಾಗ್ಯದಿಂದ ಅಲ್ಲ. ವ್ಯಕ್ತಿಯೇ ಸ್ವತಃ ತನ್ನೆಲ್ಲ ಕೃತ್ಯಗಳಿಗೂ ಜವಾಬ್ದಾರನಾಗುವುದರಿಂದ, ಅಪರಾಧವು ಶಿಕ್ಷೆಯೊಡನೆ ಜೋಡಿಸಿಕೊಂಡಿರುತ್ತದೆ.

ಹೀಗೆ ಪರಶುರಾಮನ ಕಥೆಯು ಮಣ್ಣಿನ ವಾಸನೆಯಿಂದ ಕೂಡಿದ, ಭಾವಸಾಂದ್ರತೆಯ, ಜೀವನಪರವಾದ ಹೊಸ ಬಾಳದೃಷ್ಟಿಯ ಬೀಜಗಳನ್ನು ತನ್ನೊಳಗೆ ಇರಿಸಿಕೊಂಡಿದೆ. ಆಧ್ಯಾತ್ಮಕ ಸಾಧನೆಯ ದಾರಿಯಲ್ಲಿ ಬರುವ ವಿಘ್ನಗಳನ್ನೇ, ದುರ್ಬಲತೆಗಳನ್ನೇ ಯಶಸ್ಸಿನ ಮೆಟ್ಟಿಲುಗಳಾಗಿ ಮಾರ್ಪಡಿಸಬಲ್ಲ ತಂತ್ರದ ಜೀವನದೃಷ್ಟಿ ಇದು. ಮನಸ್ಸಿನ ಗೂಢ ಗಾಢ ಫ್ಯಾಂಟಸಿಗಳಿಗೆ ಕ್ರಿಯೆಯ ರೂಪಕೊಟ್ಟು, ಇಂದೀಗಿನ ಕ್ಷಣಗಳಲ್ಲಿ ಬದುಕುವುದು ತಂತ್ರ ನೀಡಿದ ಸಂದೇಶ. ಮನೋ ವೃತ್ತಿಗಳನ್ನೇ ಉದಾತ್ತೀಕರಿಸಿರುವುದು ಭಾವಸಾಂದ್ರತೆಯಿಂದಲೇ ಹೊರತು, ನಿರಪೇಕ್ಷ ನೀರಸ ವೈರಾಗ್ಯದಿಂದ ಅಲ್ಲ. ವ್ಯಕ್ತಿಯೇ ಸ್ವತಃ ತನ್ನೆಲ್ಲ ಕೃತ್ಯಗಳಿಗೂ ಜವಾಬ್ದಾರನಾಗುವುದರಿಂದ, ಅಪರಾಧವು ಶಿಕ್ಷೆಯೊಡನೆ ಜೋಡಿಸಿಕೊಂಡಿರುತ್ತದೆ. ಈ ರೀತಿಯ ದೃಷ್ಟಿಕೋನದ ಆಳದಲ್ಲಿ ನೈಸರ್ಗಿಕ ದರ್ಶನವಿದೆ. ಮಾತೃದೇವತೆಯ ಆರಾಧನೆಯಿದೆ.

ನಮ್ಮ ಸಾಂಸ್ಕೃತಿಕ ಇತಿಹಾಸದ ವ್ಯಂಗ್ಯವೆಂದರೆ, ಎಲ್ಲ ದೊಡ್ಡ ವಿಚಾರ ಕ್ರಾಂತಿಗಳಂತೆ, ಪರಶುರಾಮನ ಕಥೆಯು ಒದಗಿಸಿದ ಕ್ರಾಂತಿ ಕೂಡ ಸಾಂಪ್ರದಾಯಿಕ ಸಮನ್ವಯದ ನಿಗೂಢ ಪಾತಾಳಗಳಲ್ಲಿ ಗುರುತೇ ಸಿಗದಂತೆ ವಿಫಲವಾಯಿತು. ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬನನ್ನಾಗಿ ಮಾಡಿ ಕ್ಷತ್ರಿಯರೊಡನೆ ವಿನಾಕಾರಣ ಹೋರಾಡಿದ ಬ್ರಾಹ್ಮಣನೆಂದು ಚಿತ್ರಿಸಿ, ಪರಶುರಾಮನನ್ನು ನಿರ್ಲಕ್ಷಿಸಲಾಯಿತು. ರೇಣುಕೆಯ ಪರಿಸ್ಥಿತಿ ಇನ್ನೂ ಶೋಚನೀಯ. ನಿರಾಸಕ್ತ, ಆತ್ಮವಂಚನೆಯ ಸದಾಚಾರದಿಂದ ಕೂಡಿದ ಸಮಾಜದ ಒಪ್ಪಿಗೆಯನ್ನು ಪಡೆದಿರುವ ಸ್ತ್ರೀಯರ ಸಂಪೂರ್ಣ ದಬ್ಬಾಳಿಕೆಗೆ ಕುರುಹಾಗಿರುವ ದೇವದಾಸಿಯರ ದೇವಿಯಾಗಿ ರೇಣುಕೆ ಉಳಿದಿರುವುದು ಇತಿಹಾಸದ ಕ್ರೂರ ವ್ಯಂಗವಲ್ಲದೇ ಬೇರೇನು?

ಅನುಭಾವದ ದಿಗಂತಗಳು

ತಂತ್ರದ (ಹಾಗೂ ಸಂಬಂಧಿತ ವಲಯಗಳ) ಸಾಂಕೇತಿಕತೆಯ ವಿದ್ಯಾರ್ಥಿಗಳೆಲ್ಲರಿಗೂ ಕಂಡುಬರುವ ಸಾಮಾನ್ಯ ಒಗಟೆಂದರೆ ಈ ಸಂಕೇತಗಳ ನೇರ ಲೈಂಗಿಕ ಆಯಾಮ. ಶ್ರೀ ಕಕರ್ ಹಾಗೂ ಶ್ರೀಮತಿ ಓ ಫ್ಲಾಹರ್ಟಿ ಈ ಬಗ್ಗೆ ಬರೆದಿದ್ದುದಿದೆ (ಕಕರ್, 1982 ಹಾಗೂ ಓ ಫ್ಲಾಹರ್ಟಿ, 1987). ಸರಳವಾಗಿ, ಈ ಒಗಟು ಹೀಗಿದೆ: ಸಾದಾ ಸಂಕೇತಗಳು ಲೈಂಗಿಕ ಅರ್ಥವನ್ನು ಹೊರಸೂಸುತ್ತವಾದರೆ, ಸ್ವತಃ ಲೈಂಗಿಕ ಸಂಕೇತಗಳು ಏನನ್ನು ಸೂಚಿಸುತ್ತವೆ? ಅಥವಾ, ಉದಾಹರಣೆಗೆ, ಪುರಾತನ ಕಥೆಯೊಂದರಲ್ಲಿ ಹೆಬ್ಬೆರಳು ಫಾಲಸ್ ಅನ್ನು ಪ್ರತಿನಿಧಿಸುತ್ತದಾದರೆ, ಅದೇ ಕಥೆಯಲ್ಲಿ ಬರುವ ಫಾಲಸ್ ಸ್ವತಃ ಏನನ್ನು ಸಂಕೇತಿಸುತ್ತದೆ? ಮೂಲತಃ, ಈ ಲೈಂಗಿಕ ಸಂಕೇತಗಳು ಪ್ರಾಯಶಃ ಲೈಂಗಿಕವಲ್ಲದ್ದೇನನ್ನೋ ಹೇಳಲು ಯತ್ನಿಸುತ್ತಿರಬೇಕಲ್ಲವೇ? ಈ ಹಿನ್ನೆಲೆಯಲ್ಲಿ ಪರಶುರಾಮನ ಗಾಥೆಯ ಲೈಂಗಿಕ ಮಗ್ಗಲುಗಳನ್ನು ಪರಿಶೀಲಿಸಬೇಕು.

ಗಾಥೆಯ ಮೂಲದಲ್ಲಿರುವ ನೀರಿನ ಸಂಕೇತ, ವರ್ಣ ರಂಜಿತನಾಗಿ ಕಲ್ಪಿತನಾಗಿರುವ ಸಹಸ್ರಬಾಹುಗಳ ಅರ್ಜುನ, ಕಾಮುಕ ತಾಯಿಯ ಶಿರಚ್ಛೇದನ… ಇವೆಲ್ಲವುಗಳಿಗೆ ಅನುಭಾವದ ಬೇರೊಂದು ಮುಖವಿದೆ. ಅನುಭಾವಿಯ ದೃಷ್ಟಿಯಿಂದ, ಯೋಗಿಯ ಕಣ್ಣುಗಳಿಂದ ನೋಡಿದಾಗ ಇಡಿಯಾಗಿ ಕಥೆಯು ಸುಸಂಗತವಾಗಿ ತೋರುತ್ತದೆ.

ಯೋಗ ಸಂಪ್ರದಾಯವು ತನ್ನದೇ ಆದ ಶ್ರೀಮಂತ ಸಂಕೇತಗಳನ್ನು ಹೊಂದಿದೆ. ಪತಂಜಲಿಯು ಬರೆದ ಯೋಗ ಸೂತ್ರಗಳು ಯೋಗದ ಮೊಟ್ಟಮೊದಲಿನ ಸಂಕಲಿತ ಜ್ಞಾನ ಭಂಡಾರವೆನ್ನಬಹುದು. ಬರಬರುತ್ತ ಯೋಗವು, ವೇದಾಂತದ ನೇತಾತ್ಮಕತೆಯನ್ನು, ತಂತ್ರದ ರಹಸ್ಯಾತ್ಮಕತೆಯನ್ನು ಮೈಗೂಡಿಸಿಕೊಂಡಿತು. ಒಂದು ಕಾಲದಲ್ಲಿ, ತಂತ್ರವೂ ಕೂಡ ಹತ್ತು ಹಲವು ಸಂಪ್ರದಾಯಗಳನ್ನು ಸಮೀಕರಿಸಿ ಸಮಗ್ರ ದೃಷಿ ನೀಡುವ ಯತ್ನ ನಡೆಸಿತ್ತು. ಅಂತೂ ಭಾರತದ ಅನುಭಾವಕ್ಕೆ ಯೋಗದ ಕೊಡುಗೆ ತುಂಬಾ ಮಹತ್ವದ್ದೆಂಬುದರಲ್ಲಿ ಅನುಮಾನವಿಲ್ಲ. ಏಕೆಂದರೆ ಭಾರತದ ಅನುಭಾವಿಯು ಮೂಲತಃ ಯೋಗಿಯಾಗಿದ್ದಾನೆ.

ರಾಜಯೋಗದ ಆದಿಭೌತಿಕ ವ್ಯವಸ್ಥೆಯು ಮಾನವನ ಬೆನ್ನೆಲುಬಿನಲ್ಲಿ ಆರು ದೈವಿಕ ಚಕ್ರಗಳನ್ನು ಪರಿಕಲ್ಪಿಸುತ್ತದೆ. ಪತಂಜಲಿ ಈ ಚಕ್ರಗಳನ್ನು ಕಾಲ್ಪನಿಕವೆಂದು ಹೇಳಿದ್ದರೂ, ನಂತರದ ಕೃತಿಗಳಾದ ಹಠಯೋಗ ಪ್ರದೀಪಿಕಾ, ಷಟ್‍ಚಕ್ರ ನಿರೂಪಣಾ, ಗೋರಕ್ಷ ಪದ್ಧತಿ ಹಾಗೂ ಯೋಗಿನಿಹೃದಯಗಳಲ್ಲಿ ಆರೂ ಚಕ್ರಗಳ ವಿಸ್ತತವಾದ ವರ್ಣನೆ ಬರುತ್ತದೆ.

ಕುಂಡಲಿನಿಯು ಪ್ರತಿಚಕ್ರವನ್ನು ಹಾದು ದಾಟುತ್ತಿದ್ದಂತೆ ಯೋಗಿಯ ಮನೋ-ಆಧ್ಯಾತ್ಮಿಕ ಸ್ತರಗಳಲ್ಲಿ, ಮಹತ್ತರ ಮಾರ್ಪಾಡುಗಳಾಗುತ್ತವೆ. ಈ ಚಕ್ರಗಳನ್ನು ದಾಟುತ್ತಲೇ ಕುಂಡಲಿನಿಯು ಮಾರ್ಗದಲ್ಲಿ ಬ್ರಹ್ಮಗ್ರಂಥಿ, ವಿಷ್ಣುಗ್ರಂಥಿ ಹಾಗು ರುದ್ರಗ್ರಂಥಿ ಎಂಬ ಮೂರು ಗ್ರಂಥಿಗಳನ್ನು ಕ್ರಮವಾಗಿ ಭೇದಿಸಬೇಕು.

ಅಂತರಾಳದಲ್ಲಿರುವ ಶಕ್ತಿಯಾದ ಕುಂಡಲಿನಿಯು ಸಮಸ್ತ ಪ್ರಕೃತಿಯ ಕಾರಣೀಭೂತವಾಗಿದ್ದು, ಮೊದಲನೆ ಚಕ್ರವಾದ ಮೂಲಾಧಾರದಲ್ಲಿ ಸರ್ಪಾಕಾರದಲ್ಲಿ ಸುತ್ತುವರಿದು ಮಲಗಿರುತ್ತದೆ. ಸುಪ್ತಸ್ಥಿತಿಯಲ್ಲಿದ್ದ ಕುಂಡಲಿನಿಯನ್ನು ಜಾಗೃತಗೊಳಿಸಿ, ಸುಷುಮ್ನನಾಡಿಯ ಮೂಲಕ ಊಧ್ರ್ವ ಮುಖವಾಗಿ ಚಲಿಸುವಂತೆ ಮಾಡುವುದು ಯೋಗಿಯ ಗುರಿ. ಬೆನ್ನೆಲುಬಿನ ಗುಂಟ, ಸೂಕ್ಷ್ಮಶರೀರದಲ್ಲಿ, ಸಾಗುವ ಸುಷುಮ್ನೆಯ ಎಡಕ್ಕೆ “ಇಡಾ” ನಾಡಿಯೂ, ಬಲಕ್ಕೆ “ಪಿಂಗಲಾ” ನಾಡಿಯೂ ಇರುತ್ತವೆ. ಮೂಲಾಧಾರದಿಂದ ಆರಂಭಿಸಿ ಕುಂಡಲಿನಿಯು, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ ಹಾಗೂ ಆಜ್ಞಾ ಎಂಬ ಐದು ಚಕ್ರಗಳನ್ನು ದಾಟಬೇಕು. ಇವುಗಳ ಕೊನೆಗೆ ಶಿರದೊಳಗೆ ಸಹಸ್ರದಲಪದ್ಮದಲ್ಲಿರುವ ಶಿವತತ್ತ್ವವೇ ಕುಂಡಲಿನಿಯ ಗುರಿ. ಕುಂಡಲಿನಿಯು ಪ್ರತಿಚಕ್ರವನ್ನು ಹಾದು ದಾಟುತ್ತಿದ್ದಂತೆ ಯೋಗಿಯ ಮನೋ-ಆಧ್ಯಾತ್ಮಿಕ ಸ್ತರಗಳಲ್ಲಿ, ಮಹತ್ತರ ಮಾರ್ಪಾಡುಗಳಾಗುತ್ತವೆ. ಈ ಚಕ್ರಗಳನ್ನು ದಾಟುತ್ತಲೇ ಕುಂಡಲಿನಿಯು ಮಾರ್ಗದಲ್ಲಿ ಬ್ರಹ್ಮಗ್ರಂಥಿ, ವಿಷ್ಣುಗ್ರಂಥಿ ಹಾಗು ರುದ್ರಗ್ರಂಥಿ ಎಂಬ ಮೂರು ಗ್ರಂಥಿಗಳನ್ನು ಕ್ರಮವಾಗಿ ಭೇದಿಸಬೇಕು. ಶಾಸ್ತ್ರಗಳಲ್ಲಿ ಈ ಚಕ್ರಗಳನ್ನು ಬೇರೆ ಬೇರೆ ಸಂಖ್ಯೆಯ ದಳಗಳುಳ್ಳ, ವಿವಿಧ ಬೀಜಾಕ್ಷರಗಳನ್ನು, ಆದಿ ದೈವತೆಗಳನ್ನು ಹೊಂದಿರುವ ಪದ್ಮಗಳೆಂದು ಪರಿಕಲ್ಪಿಸಲಾಗಿದೆ. ಸಂಗ್ರಹವಾಗಿ ಇದು ಷಟ್‍ಚಕ್ರಗಳ ಶಾಸ್ತ್ರೋಕ್ತ ವಿವರಣೆ. ಇವುಗಳ ಬಗೆಗಿನ ವಿಸ್ತತ ವಿವರಗಳೇ ಬೇರೊಂದು ಸ್ವತಂತ್ರ ಅಧ್ಯಯನದ ವಸ್ತುವಾಗಬಲ್ಲವು.

ಕುತೂಹಲಕಾರಿಯಾದ ವಿಷಯವೆಂದರೆ, ಕುಂಡಲಿನಿಯು ಕಣ್ಣುಹುಬ್ಬುಗಳ ನಡುವೆ ಇದೆಯೆಂದು ಹೇಳಲಾದ ಆಜ್ಞಾ ಚಕ್ರವನ್ನು ಹಾಯ್ದು, ರುದ್ರಗ್ರಂಥೀಯನ್ನು ಭೇದಿಸಿದಾಗ ಯೋಗಿಯು ತನ್ನ ಶರೀರದ ಮೇಲಿನ ಹತೋಟಿಯನ್ನು ಕಳಕೊಳ್ಳುತ್ತಾನೆಂದು ಹೇಳಲಾಗಿದೆ. ಈ ಪ್ರವಿಧಿಗೆ “ಕಪಾಲಭೇದನ”ವೆಂಬ ಪಾರಿಭಾಷಿಕ ಹೆಸರಿದೆ. ತೈತ್ತೀರಿಯ ಉಪನಿಷತ್ತಿನ ಶಿಕ್ಷಾವಲ್ಲಿಯಲ್ಲಿ ಕಪಾಲಭೇದನದ ವರ್ಣನೆ ಈ ಕೆಳಗಿನಂತಿದೆ:

“ಹೃದಯದೊಳಗೆ ಯಾವ ಆಕಾಶವಿದೆಯೋ ಅದರಲ್ಲಿ ಆ ಈ ಮನೋಮಯನಾದ, ಅಮೃತನಾದ, ಹಿರಣ್ಮಯನಾದ ಪುರುಷ(ನಿರುವನು). ಎರಡು ದವಡೆಗಳ ನಡುವೆ, ಯಾವ ಇದು ಸ್ತನದಂತೆ ನೇತಾಡುತ್ತಿರುವುದೋ, ಇದರ ನಡುವೆ, ಎಲ್ಲಿ ಈ ಕೂದಲುಗಳು ಕೊನೆ ಇಬ್ಬಗೆಯಾಗಿರುವುದೋ (ಅಲ್ಲಿ), ತಲೆ ಬುರುಡೆಯ ಕಪಾಲಗಳನ್ನು ಒಡೆದುಕೊಂಡು (ಹೊರಟಿರುವುದಲ್ಲ) ಅದೇ ಇಂದ್ರನಯೋನಿಯು (ಅಲ್ಲಿಂದ ಹೊರಟ ಆತ್ಮನು). ಭೂಃ ಎಂಬ ಅಗ್ನಿಯಲ್ಲಿ ನಿಲ್ಲುವನು, ಭುವಃ ಎಂಬ ವಾಯುವಿನಲ್ಲಿ; ಸುವಃ ಎಂಬ ಆದಿತ್ಯನಲ್ಲಿ ಹಾಗೂ ಮಹಃ ಎಂಬ ಬ್ರಹ್ಮನಲ್ಲಿ…”
(ತೈತ್ತೀರಿಯ ಉಪನಿಷತ್, ಶಿಕ್ಷಾವಲ್ಲಿ, 6, ಅನುವಾಕ ಒತ್ತು ಲೇಖನದು)”

ಪರಶುರಾಮನು ಆಜ್ಞಾಚಕ್ರದಲ್ಲಿ ಪ್ರತಿಷ್ಠಿತನಾಗಿದ್ದಾನೆ. ಎರಡೇ ದಳಗಳಿರುವ ಆಜ್ಞಾದ ಅಧಿದೈವತೆಯು ಮನಸ್ಸಿನ ಅಧಿನಾಯಕಿಯಾದ ಹಾಕಿನೀ, ರೇಣುಕೆಯ ಶಿರಚ್ಛೇದವು ಮೇಲೆ ವಿವರಿಸಿದ ಕಪಾಲ ಭೇದನದ ರೂಪಕ ಪ್ರಕ್ರಿಯೆ. ರುದ್ರಗ್ರಂಥಿಯಿಂದ ಹೀಗೆ ಉದ್ಭವವಾಗುವ ಛಿನ್ನಮಸ್ತಾಳ ದೇಹದಿಂದ ಶಕ್ತಿಪಾತವಾಗಿ ಇಡಾ ಹಾಗೂ ಪಿಂಗಳಾ ನಾಡಿಗಳಲ್ಲಿ ಪ್ರವಹಿಸುತ್ತದೆ. ನಡುವೆ ಹರಿಯುವ, ಕಂಡಲಿನೀ ಗಮನದ, ಮಧ್ಯನಾಡಿಯಾದ ಸುಷುಮ್ನವೆ ಛಿನ್ನಮಸ್ತಾ. ಈ ವಿಶಿಷ್ಟ ವರ್ಣರಂಜಿತ ರೂಪಕವನ್ನು ಶ್ರೀ ವಾಶಿಷ್ಟ ಗಣಪತಿ ಮುನಿ ಈ ಕೆಳಗಿನಂತೆ ಚಿತ್ರಿಸಿರುತ್ತಾರೆ.

“ಬಹು ವರ್ಷಗಳ ತಪಸ್ಸಿನ ಬಳಿಕ ಸುಷುಮ್ನೆಯು ‘ಹೊರಗಿನ’ ಶಕ್ತಿಯೊಡನೆ ಸಂಸರ್ಗಗೊಂಡಾಗ, ಮನುಷ್ಯನ ಶಿರವು ಇಂದ್ರಿಯಗಳೊಡನೆ ಇರುವ ಹತೋಟಿಯನ್ನು ಕಳೆದುಕೊಳ್ಳುತ್ತದೆ. ಯೋಗಿಯು ಸಾವನ್ನು ಗೆಲ್ಲುತ್ತಾನೆ. ಆಗಮಗಳನ್ನು ತಿಳಿದವರು, ಈ ಪ್ರಕ್ರಿಯೆಯನ್ನೇ ನಿನ್ನ ಕತ್ತರಿಸಲ್ಪಟ್ಟ ಶಿರಸ್ಸೆಂದು ಕರೆಯುವರು” (ಉಮಾ ಸಹಸ್ರಮ್)

ರುದ್ರಗ್ರಂಥಿಯನ್ನು ಬೇಧಿಸುವ ಛಿನ್ನಮಸ್ತಾಳನ್ನೇ “ಛಿನ್ನಗ್ರಂಥಿನಿ”ಯೆಂದು ಕೂಡಾ ಕರೆಯಲಾಗಿದೆ. ಈ ಕಾರಣದಿಂದಲೇ ಅವಳು ಇಂದ್ರನ ವಜ್ರಾಯುಧದ ಶಕ್ತಿ ಕೂಡಾ. ಇಂದ್ರನ ಶಕ್ತಿ ಮಾತ್ರವೇ ಕಪಾಲಭೇದನ ಸಮರ್ಥವಾಗಿದೆ. ಸಾಂಕೇತಿಕ ಭಾಷೆಯಲ್ಲಿ ಅವಳನ್ನು ಛಿನ್ನಮಸ್ತಾ ಎಂದು ಕರೆಯಲಾಗುತ್ತದೆ (ಉಮಾ ಸಹಸ್ರಮ್). ಆಜ್ಞಾ ಚಕ್ರದ ಬಣ್ಣ ಬಿಳುಪು. ರುಧಿರವನ್ನು ಕಳೆದುಕೊಂಡ ಮಹಾಮಾಯೆಯ ಮುಖ ಪೇಲವವಾಗಿತ್ತೆಂದು ಶಕ್ತಿ ಸಂಗಮ ತಂತ್ರದಲ್ಲಿ ಹೇಳಲಾಗಿದೆ.

ಮಹಾಭಾರತದಲ್ಲಿ, ಅಕೃತವೃಣನೆಂಬುವನನ್ನು ಪರಶುರಾಮನ ಪ್ರಮುಖ ಶಿಷ್ಯನೆಂದು ಕರೆಯಲಾಗಿದೆ. ಹಲವು ಬಾರಿ ಆತನು ಪರಶುರಾಮನ ಆಗಮನದ ಮೊದಲೇ ಬರುತ್ತಾನೆ (ದ್ರೋಣಪರ್ವ ಹಾಗೂ ವನಪರ್ವ) ಅವನು ತನ್ನ ಗುರುವಿನ ಬರವನ್ನು ಸಾರಿಹೇಳುವ ಶಿಷ್ಯ, ಅವನ ರಥದ ಸಾರಥಿ; ಮಹಾಪೂರದ ಮೊದಲು ಸಾಗಿ ಬರುವ ತಂಗಾಳಿ. ಬ್ರಹ್ಮಾಂಡ ಪುರಾಣದಲ್ಲಿ ಪರಶುರಾಮನು ಅಕೃತವೃಣನನ್ನು ಹುಲಿಯ ಬಾಯಿಯಿಂದ ರಕ್ಷಿಸಿದ ವೃತ್ತಾಂತವಿದೆ. ‘ವೃಣ’ದಿಂದ ಪಾರಾಗಿ ಬದುಕಿದುದರಿಂದಲೇ ಆತ ‘ಅಕೃತವೃಣ’. ನಾಲ್ಕನೇಯ ಚಕ್ರವಾದ ‘ಅನಾಹತ’ದ ಪದಾರ್ಥವು “ಪೆಟ್ಟಾಗದಿರುವುದು” (ಅನ್+ಅಹತ) ಎಂಬುದಾಗಿದೆ. ಅನಾಹತವು, ಅಕೃತವೃಣನಂತೆಯೇ, ಆಜ್ಞಾಚಕ್ರಕ್ಕಿಂತಲೂ ಮೊದಲು ಬರುತ್ತದೆಂಬುದು ಗಮನಾರ್ಹ.

ಶಾಸ್ತ್ರಗಳ ಪ್ರಕಾರ ಪರಶುರಾಮ ಹಾಗೂ ಛಿನ್ನಮಸ್ತಾರನ್ನು ನಾಭಿಪ್ರದೇಶದಲ್ಲಿ ಧ್ಯಾನಿಸಬೇಕು. ನಾಭಿಪ್ರದೇಶದಲ್ಲಿ ಹತ್ತು ದಳಗಳ ಕಮಲವುಳ್ಳ ಮಣಿಪೂರಕ ಚಕ್ರವಿದೆ. ಜಲತತ್ತ್ವದ ಪ್ರತಿನಿಧಿಯಾದ ಮಣಿಪೂರಕದ ಅಧಿದೈವತೆಯು, ವಜ್ರಾಯುಧವನ್ನು ಹಿಡಿದ ಲಾಕಿನಿ. ಲೈಂಗಿಕ ಭಾವೋನ್ಮಾದದ ಮೂಲವಾದ ಈ ಚಕ್ರವೇ ಛಿನ್ನಮಸ್ತಾ ಕಲಾಕೃತಿಯ ಉಗಮಸ್ಥಾನ. ಇಲ್ಲಿಯೇ ಕಾಮದೇವನಾದ ಮನ್ಮಥನು ರತಿಯೊಡನೆ ಕಾಮಕೇಳಿಯಲ್ಲಿ ನಿರತನಾಗಿದ್ದಾನೆ. ಛಿನ್ನಮಸ್ತಾಳ ಪ್ರತಿಮೆಯು ಹೀಗೆ ಮಣಿಪೂರಕದಲ್ಲಿ ಹುಟ್ಟಿ, ಅನಾಹತವನ್ನು ಮೀರಿ, ರುದ್ರ ಭೂಮಿಯ ಹಿನ್ನೆಲೆಯಲ್ಲಿ, ಕಪಾಲಭೇದನದ ಮೂಲಕ ರುದ್ರಗ್ರಂಥಿಯನ್ನು ಭೇದಿಸುತ್ತದೆ. ಅವಳನ್ನು ಏಕವೀರಾ ಎಂದೂ ವಜ್ರವೈರೋಚಿನೀಯ ಎಂದೂ ಕರೆದಿರುವುದು ಯುಕ್ತವಾಗಿದೆ.

ಯೋಗದ ಸಂಕೇತಗಳ ಅನುಭಾವಾತ್ಮಕ ಪರಿಕಲ್ಪನೆಗಳಿಗೆ, ರೂಪಕದ ಬಣ್ಣವನ್ನು ಪರಶುರಾಮನ ಗಾಥೆಯಲ್ಲಿ ತಂತ್ರಾಗಮಗಳು ನೀಡಿವೆ.

ಹರಿದ್ವರ್ಣದ ದಿಗಂತಗಳು

ಪರಶುರಾಮನ ಬಾಹ್ಯ ಶರೀರವು ನೀಡುವ ಪ್ರಾಥಮಿಕ ಕಲ್ಪನೆ, ಆ ಕಥೆಯು ರೂಪುಗೊಳ್ಳುವ ವಿಶಿಷ್ಟ ಆಶ್ರಮಿಕ ಪರಿಸರ- ಹಾಗೂ, ಅಷ್ಟು ಪ್ರಮುಖವಲ್ಲದಿದ್ದರೂ, ಇತರ ವಿವರಗಳು ಚಿತ್ರಿಸುವುದು ಮೂಲಭೂತವಾಗಿ ದನಗಾಹಿಗಳಾದ, ಹುಲ್ಲುಗಾವಲಿನ ಜನರ ಜೀವನವನ್ನು ಇಂತಹ ಸಮಾಜದ ಪರಿಸರ ಪ್ರಜ್ಞೆಯು- ಹೆಚ್ಚೆಂದರೆ- ಭಾವನಾತ್ಮಕವಾಗಿರುತ್ತದೆ. ಹಾಗಿದ್ದರೂ, ತಮ್ಮ ಅಸ್ತಿತ್ವಕ್ಕೆ ಕಾರಣವಾದ ಹುಲ್ಲುಗಾವಲಿನ, ಕಾಡುಗಳ ಬಗೆಗೆ ರಕ್ಷಣಾತ್ಮಕ ದೃಷ್ಟಿಯು ಈ ಜನಾಂಗದ ಕೇಂದ್ರ ಕಾಳಜಿಗಳಲ್ಲೊಂದು. ವಿಶೇಷವಾಗಿ, ಯಜ್ಞಧೇನುವನ್ನು ಬಲಾತ್ಕಾರವಾಗಿ ಕೊಂಡೊಯ್ಯುವುದೇ ಕಾರ್ತವೀರ್ಯ ಅರ್ಜುನನ ಪ್ರಮುಖ ಅಪರಾಧ. ಕತೆಯ ನಂತರದ ಆವೃತ್ತಿಗಳಲ್ಲಿ ಈ ಧೇನುವು ಕಾಮಧೇನುವಾಗಿ ಪರಿವರ್ತಿತವಾಗಿದೆ. ಎರಡೂ ರೀತಿಯಲ್ಲಿ ತನ್ನ ಜೀವನದ ಮೂಲಸ್ರೋತವನ್ನು ಕದ್ದೊಯ್ದನೆಂಬುದೇ ಜಮದಗ್ನಿಯ ಕೋಪಕ್ಕೆ ಕಾರಣ. ಕಾರ್ತವೀರ್ಯನ ಹಿಂಸಾಚಾರದ ವಿವರಗಳನ್ನು ವಿಸ್ತøತಗೊಳಿಸಲೋ ಎಂಬಂತೆ ಮಹಾಭಾರತದ ವನಪರ್ವದಲ್ಲಿ ಹೆಚ್ಚಿನ ವರ್ಣನೆ ಸಿಗುತ್ತದೆ. ಅಲ್ಲಿ ಹೇಳಿದ ಪ್ರಕಾರ ಅರ್ಜುನನು ಧೇನುವಿನೊಡನೆ ಆಶ್ರಮದಿಂದ ಹೊರಗೆ ಹೋಗುವ ಮೊದಲು, ಆಶ್ರಮದ ಮಹಾದ್ವಾರದಲ್ಲಿ ದೊಡ್ಡ ಮರಗಳನ್ನು ಬೀಳಿಸುತ್ತಾನೆ (ಬಭಂಜಚ ಮಹಾದ್ರುಮಾನ್, ಮಹಾಭಾರತ, 3.116-2). ಪರಿಸರದ ಸಾತತ್ಯವನ್ನ ನಿಕಟವಾಗಿ ಅವಲಂಬಿಸಿರುವ ಮನುಕುಲದ ಸಾತತ್ಯದ ಬಗೆಗಿನ ಕಾಳಜಿಯನ್ನಿಲ್ಲಿ ಗುರುತಿಸಲಾಗಿದೆ. ಇದಲ್ಲದೇ, ಪರಶುರಾಮನ ಜನ್ಮ ವೃತ್ತಾಂತವು ತರು-ಲತೆಗಳ ಟೋಟೆಂನ ಸುತ್ತ ರಚಿತವಾಗಿರುವುದನ್ನು ನೆನಪಿಸಬಹುದು.

ಛಿನ್ನಮಸ್ತಾ ಗಾಥೆಯ ರೂಪಕಗಳ ಬಗ್ಗೆ ಗಮನಹರಿಸಿದರೆ, ಕತ್ತರಿಸಲ್ಪಟ್ಟ ಶಿರಸ್ಸಿನಿಂದ ಹರಿಯುತ್ತಿರುವ ರಕ್ತದ ಪ್ರವಾಹ ಹಾಗೂ ಅದು ಹಸಿದ ಯೋಗಿನಿಯರ ಬಾಯೊಳಕ್ಕೆ ಹೋಗಿ ಬೀಳುವ ವರಸೆಗಳು, ತುದಿಯಲ್ಲಿ ಕತ್ತರಿಸಲ್ಪಟ್ಟ ವೃಕ್ಷದ ಕಲ್ಪನೆಯನ್ನು ನೀಡುತ್ತವೆ. ಕಡಿದ ಮರದ ತುದಿಯ ಹಸಿರೆಲೆಗಳು ನೀರು-ಮಣ್ಣುಗಳೊಂದಿಗೆ ಬೆರೆತು, ನೆಲವತ್ತು ಫಲವತ್ತಾಗಿಸಿ, ಬೇರೆ ಮರಗಳ ಬೆಳವಣಿಗೆಗೂ ಸಹಾಯ ಮಾಡುವುದು ಸರ್ವಶೃತ. ಈಗಾಗಲೇ ವಿವರಿಸಿದ ‘ನೈಸರ್ಗಿಕ ದೃಷ್ಟಿಕೋನ’ದ ಕೇಂದ್ರದಲ್ಲಿ ಈ ಪರಿಯ ಸೃಜನಾತ್ಮಕ ವಿನಾಶವಿದೆ.

ಇಂತಹ, ಗಾಳಿಯಲ್ಲಿ ಬೇರು ಬಿಡುವ ದೃಷ್ಟಿಕೋನವು, ನಂತರದ ದಾರ್ಶನಿಕ ಪದ್ಧತಿಗಳ ಮೂಲಸೆಲೆಯಾಯಿತು. ಈ ನಂಬಿಕೆಯು, ಅವತಾರಗಳ ಹಾಗೂ ಸ್ವರ್ಗಮೂಲದಲ್ಲಿ ಉಂಟಾಗುವ ಪವಾಡಗಳ ಬಗೆಗಿನ ಶ್ರದ್ಧೆಯ ಅಡಿಪಾಯ.

ಈ ವರ್ಣರಂಜಿತ ರೂಪಕವನ್ನು ಭಗವದ್ಗೀತೆಯಲ್ಲಿ ಬರುವ ವೃಕ್ಷದ ಪರಿಕಲ್ಪನೆಯೊಡನೆ ಹೋಲಿಸಬಹುದು. ಗೀತೆಯು ಆಕಾಶದತ್ತ ಬೇರಿರುವ, ಭೂಮಿಯಲ್ಲಿ ಕೊಂಬೆರೆಂಬೆಗಳಿರುವ ಮರದ ಬಗ್ಗೆ ವಿವರವಾಗಿ ಹೇಳುತ್ತದೆ. ಇಂತಹ, ಗಾಳಿಯಲ್ಲಿ ಬೇರು ಬಿಡುವ ದೃಷ್ಟಿಕೋನವು, ನಂತರದ ದಾರ್ಶನಿಕ ಪದ್ಧತಿಗಳ ಮೂಲಸೆಲೆಯಾಯಿತು. ಈ ನಂಬಿಕೆಯು, ಅವತಾರಗಳ ಹಾಗೂ ಸ್ವರ್ಗಮೂಲದಲ್ಲಿ ಉಂಟಾಗುವ ಪವಾಡಗಳ ಬಗೆಗಿನ ಶ್ರದ್ಧೆಯ ಅಡಿಪಾಯ.

ಇದನ್ನು ತಾರ್ಕಿಕವಾಗಿ ಮುಂದುವರೆಸಿದರೆ, ಬಾರದ ಪೈಗಂಬರನಿಗಾಗಿ ಮಾಡುವ ಅನಂತಕಾಲದ ನಿರೀಕ್ಷೆಯಲ್ಲಿ ಪರ್ಯವಸಾನ ಹೊಂದಬಹುದು. ಪರ್ಯಾಯವಾಗಿ, ಮಣ್ಣಿನಲ್ಲಿ ಹುದುಗಿದ ಬೇರುಗಳುಳ್ಳ ಮರವು, ಅಸ್ತಿತ್ವದ ಅಂತಃಸತ್ವದಿಂದಲೇ ಅಸ್ತಿತ್ವದ ಅರ್ಥಗಳನ್ನು ಹುಡುಕುವ ಪ್ರಯತ್ನವನ್ನು ಸೂಚಿಸುತ್ತದೆ. ಸಮಸ್ಯೆಗಳ ಪರಿಹಾರಗಳು (ಮಾಂತ್ರಿಕ ಪರಿಹಾರಗಳೂ ಕೂಡಾ) ಅಸ್ತಿತ್ವದ ಬೇರುಗಳಿಂದಲೇ ಹುಟ್ಟಬೇಕೇ ಹೊರತು, ಗಗನದಾಚೆಯ ಲೋಕಗಳಿಂದ ಇಳಿದು ಬರುವುದಲ್ಲ. ಯೋಗದಲ್ಲಿನ ಊಧ್ರ್ವಕುಂಡಲಿನಿಯಂತೆ, ಈ ಬಗೆಯ ರೂಪಕವು ವ್ಯಕ್ತಿಯು ಬೆಳೆದು ಭೌಮವನ್ನು ತಲುಪಬಲ್ಲನೆಂಬ ವಿಶ್ವಾಸಕ್ಕೆ ಇಂಬುಕೊಡುತ್ತದೆ.

ಉಪಸಂಹಾರ

ಭಾರತದ ಅತೀತದ ನಂಬಿಕೆಗಳನ್ನು ಶ್ರೀಮಂತಗೊಳಿಸುವ ಪರಶುರಾಮನ ಕತೆಯು ಕಾಮನಬಿಲ್ಲಿನ ರಂಗುಗಳಿಂದ ಕೂಡಿದೆ. ನಮ್ಮ ಸಮಾಜ-ಸಂಸ್ಕೃತಿಗಳ ಬಗೆಗೆ ಅದು ನೀಡುವ ಆಳ ಅರಿವು, ಭಾರತೀಯ ಗಂಡಸಿನ ಬಾಲ್ಯ ಹಾಗೂ ಕೌಮಾರ್ಯದ ಬಗೆಗೆ ಒಳನೋಟವನ್ನು ನೀಡುತ್ತದೆ. ಪರಶುರಾಮನು ಚಿರಂಜೀವಿಯೆಂಬ ನಂಬಿಕೆಯು, ಬಹುಶಃ ಈ ಗಾಥೆಯ ಚಿರಂತನ ಪ್ರಸ್ತುತತೆಯನ್ನು ವ್ಯಂಜಿಸುತ್ತದೆ. ಸದಾಕಾಲ ಪ್ರಸ್ತುತವಾಗಿ ಉಳಿಯುವ ಪುರಾಣ ಕಥೆಗಳಂತೆ ಇದೂ ಕೂಡಾ ಇಂದಿನ ಸಾಮಾಜಿಕ ಸಂಬಂಧಗಳ ಮೇಲಿನ ಮುಕ್ತ ವ್ಯಾಖ್ಯಾನವಾಗಬಲ್ಲುದು. ಗಾಥೆಯು ನೀಡುವ ಶೃಂಗಾರಮಯ ವರ್ಣನೆಗಳು ಹಿಂದೂ ಮನೋಭಾವದ ಆಳದಲ್ಲಿರುವ ಫ್ಯಾಂಟಸಿಗಳ ನಕ್ಷತ್ರಲೋಕಕ್ಕೆ ಹಿಡಿದ ಕನ್ನಡಿ. ಅನುಭಾವದ ರಹಸ್ಯ ಗನಿಯಾದ ಈ ಕಥೆಯು, ವಿಸ್ತತವೂ, ವರ್ಣರಂಜಿತವೂ ಆದ ಆಧ್ಯಾತ್ಮಕ ಸತ್ಯಗಳನ್ನೊಳಗೊಂಡಿದೆ. ಪರಶುರಾಮನ ಕಥೆಯೊಂದು ಸ್ವಪ್ನ; ಅಥವಾ ಶ್ರೀಮಂತ ಸಂಕೇತಗಳುಳ್ಳ ದುಸ್ವಪ್ನ. ಇದರ ಪ್ರತೀಕ-ಪ್ರತಿಮಾ ಯೋಜನೆಗಳ ಇನ್ನೂ ಆಳವಾದ ಅಧ್ಯಯನ ಪ್ರಾಯಶಃ ನಮ್ಮ ಭವಿಷ್ಯ ದೃಷ್ಟಿಕೋನವನ್ನು ಗುಣಾತ್ಮಕವಾಗಿ ಎತ್ತರಿಸೀತು.

Leave a Reply

Your email address will not be published.