ಬೆಂಗಳೂರಿನಲ್ಲಿ ತೊಗಲುಬೊಂಬೆ ಪ್ರದರ್ಶನ

ಸಮಾಜಮುಖಿ ಮಾಸಪತ್ರಿಕೆ ಬಳಗ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ಸಹಯೋಗದಲ್ಲಿ ಜನೆವರಿ 17 ರಂದು ಬೆಂಗಳೂರಿನಲ್ಲಿ ‘ಪಂಚವಟಿ ಪ್ರಸಂಗ’ ತೊಗಲುಬೊಂಬೆ ಪ್ರದರ್ಶನ ಏರ್ಪಡಿಸಲಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಹಾಸನದ ಕಲಾವಿದ ಗುಂಡುರಾಜು ಅವರ ತಂಡ ಈ ಪ್ರದರ್ಶನ ನಡೆಸಿಕೊಟ್ಟಿತು.

ಜಯರಾಮ್ ರಾಯಪುರ ಅವರ ‘ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ’ ನಾಟಕ ಕೃತಿಯನ್ನು ರಂಗ ಚಿಂತಕ ಎಚ್.ಎಸ್.ಉಮೇಶ್ ಮೈಸೂರಿನಲ್ಲಿ ಲೋಕಾರ್ಪಣೆ ಮಾಡಿದರು.

ಚಿತ್ರಗಳು: ಎಸ್.ಅನಿಕೇತನ

 

 

 

 

ಚಿತ್ರಕೂಟದಿಂದ ಪಂಚವಟಿಗೆ ಬರುವ ರಾಮ, ಲಕ್ಷ್ಮಣ ಹಾಗೂ ಸೀತೆಗೆ ಸವಾಲಾಗುವ ಶೂರ್ಪನಖಿ, ವಾಲಿ, ರಾವಣರ ಸಂಹಾರದ ಕತೆಯನ್ನು ಪಂಚವಟಿ ಪ್ರಸಂಗ ಒಳಗೊಂಡಿದ್ದು, ಎರಡು ಗಂಟೆಗಳ ಅವಧಿಯ ಪ್ರದರ್ಶನವಾಗಿತ್ತು.

ಕರ್ನಾಟಕದ ಗ್ರಾಮೀಣ ಭಾಗದ ವಿವಿಧ ಜನಪದ ಕಲೆ ಮತ್ತು ಕಲಾವಿದರನ್ನು ಬೆಂಗಳೂರಿನ ಕಲಾಸಕ್ತರಿಗೆ ಪರಿಚಯಿಸುವ ಆಶಯದಿಂದ ನಾಲ್ಕು ತಿಂಗಳಿಗೊಮ್ಮೆ ಹಮ್ಮಿಕೊಳ್ಳುವ ‘ಜನಪದ forever’ ಯೋಜನೆಯ ಭಾಗವಿದು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡರು ಮಾತನಾಡಿ, ‘ತೊಗಲುಬೊಂಬೆ ಆಟದಂತಹ ಜಾನಪದ ಕಲೆಗಳಿಗೆ ಇಂದು ವೇದಿಕೆ ಸಿಗುವುದು ಕಷ್ಟ. ಆ ನಿಟ್ಟಿನಲ್ಲಿ ಸಾಂಪ್ರದಾಯಿ ಕಲೆಗಳನ್ನು ಉಳಿಸಲು ಶ್ರಮ ವಹಿಸುತ್ತಿರುವ ಸಮಾಜಮುಖಿ ಬಳಗದ ಕಾರ್ಯ ಶ್ಲಾಘನೀಯ’ ಎಂದರು. ಲೇಖಕ ಜಯರಾಮ್ ರಾಯಪುರ ಅವರು ಕಲಾವಿದರನ್ನು ಗೌರವಿಸಿದರು. ರಂಗ ಸಂಘಟಕ ಶಶಿಧರ ಭಾರಿಘಾಟ್ ನಿರೂಪಿಸಿದರು.

Leave a Reply

Your email address will not be published.