ಬೆಂಗಳೂರು-ಮಾಗಡಿ-ಸೋಮವಾರಪೇಟೆ ನೂತನ ಹೆದ್ದಾರಿ ಏಕೆ ಅಗತ್ಯವಿದೆ?

ದಕ್ಷಿಣ ಕರ್ನಾಟಕದಲ್ಲಿ ಸದ್ಯಕ್ಕೆ ನೆಲಮಂಗಲ-ಕುಣಿಗಲ್- ಚನ್ನರಾಯಪಟ್ಟಣ-ಹಾಸನ ರಾಷ್ಟ್ರೀಯ ಹೆದ್ದಾರಿ ಹಾಗೂ ಬಿಡದಿ-ರಾಮನಗರ-ಚನ್ನಪಟ್ಟಣ-ಮಂಡ್ಯ-ಮೈಸೂರು ರಾಷ್ಟ್ರೀಯ ಹೆದ್ದಾರಿಗಳಿವೆ. ಈ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡದಿ-ಮೈಸೂರು ಹೆದ್ದಾರಿ ಈಗಾಗಲೇ ತುಂಬಿ ತುಳುಕುತ್ತಿದ್ದರೆ ನೆಲಮಂಗಲ-ಹಾಸನ ಹೆದ್ದಾರಿ ಮುಂದಿನ ಕೆಲವೇ ವರ್ಷಗಳಲ್ಲಿ ದಟ್ಟಣೆಗೆ ಒಳಗಾಗಲಿದೆ.

ಹೆದ್ದಾರಿಗಳು ವಾಣಿಜ್ಯ-ಕೈಗಾರಿಕೆ-ಪ್ರವಾಸೋದ್ಯಮಗಳಿಗೆ ರಹದಾರಿಗಳಾಗುವುದಲ್ಲದೆ ಕೃಷಿ-ತೋಟಗಾರಿಕೆ -ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಬಲ್ಲವು.

ನೈಸ್ ರಸ್ತೆಯಲ್ಲಿನ ಗೊಲ್ಲರಹಟ್ಟಿ ಎಕ್ಸಿಟ್‌ನಿಂದ ಮಾಗಡಿ-ಹುಲಿಯೂರುದುರ್ಗ-ನೆಲಮಂಗಲ-ಕೆ.ಆರ್.ಪೇಟೆ-ಭೇರ್ಯ-ಕೇರಳಾಪುರ-ರಾಮನಾಥಪುರ-ಕೊಣನೂರು ಮಾರ್ಗವಾಗಿ ಸೋಮವಾರಪೇಟೆಗೆ ಹೆದ್ದಾರಿ ನಿರ್ಮಾಣವಾದರೆ ಸುಮಾರು ೨೩೦ ಕಿ.ಮೀ.ಗಳ ಈ ರಸ್ತೆಯಲ್ಲಿನ ಎಲ್ಲ ಹಿಂದುಳಿದ ತಾಲ್ಲೂಕುಗಳಲ್ಲಿ ಕೃಷಿಯೇತರ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ ಸಂಚಾರ ಸುಗಮವಾಗುವು-ದಲ್ಲದೆ ಅಪಾರ ಸಂಖ್ಯೆಯಲ್ಲಿ ಉದ್ದಿಮೆ ಸೃಷ್ಟಿಯಾಗುತ್ತದೆ. ಈ ಹಿಂದುಳಿದ ತಾಲ್ಲೂಕುಗಳ ಯುವಜನರು ನೌಕರಿ ಅರಸಿ ಬೆಂಗಳೂರು-ಮುಂಬಯಿಗೆ ಹೋಗುವುದರ ಬದಲಿಗೆ ಸ್ಥಳೀಯವಾಗಿ ಉದ್ಯೋಗ ಪಡೆಯುತ್ತಾರೆ. ಈ ಜಿಲ್ಲೆಗಳ ಶಾಸಕರು ಮತ್ತು ಸಂಸದರು ಈ ರಸ್ತೆಯ ಕನಸನ್ನು ಹೇಗೆ ನನಸು ಮಾಡುತ್ತಾರೆ ಎಂದು ನೋಡಬೇಕಿದೆ.

Leave a Reply

Your email address will not be published.