ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆಗೆ ನಿರ್ದಿಷ್ಟ ಕ್ರಮಗಳು

ಜನ-ವಾಹನಗಳ ಸಂಖ್ಯೆಯ ಹೆಚ್ಚಳ ಹಾಗೂ ವಿಸ್ತಾರವಾಗುತ್ತಿರುವ ನಗರದ ಗಾತ್ರ ಬೆಂಗಳೂರಿನ ಆರ್ಥಿಕ ಬೆಳವಣಿಗೆಯ ಸ್ಪಷ್ಟ ಸೂಚನೆಗಳಾಗಿವೆ. ಆದರೆ ಅದೇ ಹೊತ್ತಿನಲ್ಲಿ ರಸ್ತೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸೃಷ್ಟಿಸುವಲ್ಲಿ ಉಂಟಾದ ನಿರಂತರ ವಿಳಂಬದ ಪರಿಣಾಮವನ್ನು ತೀವ್ರತರದ ಸಂಚಾರ ದಟ್ಟಣೆ ಹಾಗೂ ರಸ್ತೆ ಅಪಘಾತಗಳ ಹೆಚ್ಚಳವೇ ತೋರಿಸಿಕೊಟ್ಟಿವೆ.

ಜಗತ್ತಿನಲ್ಲಿ ಕೆಲವೇ ಕೆಲವು ನಗರಗಳು ಅಲ್ಲಿಗೆ ಭೇಟಿ ನೀಡುವ ಜನಸಾಮಾನ್ಯರನ್ನು ಸೆಳೆಯುವ, ಅಲ್ಲಿಯೇ ಉಳಿದುಕೊಳ್ಳುವಂತೆ ಆಕರ್ಷಿಸುವ ಶಕ್ತಿ ಹೊಂದಿವೆ. ಅಂತಹ ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. ಬೆಂಗಳೂರಿಗೆ ಬರುವ ಹೊಸಬರು ತಮ್ಮನ್ನು ತಾವು ಬೆಂಗಳೂರಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಲ್ಲಿನ ವಾತಾವರಣ, ಹವಾಮಾನದಿಂದಾಗಿ ಬೆಂಗಳೂರು ಈಗಾಗಲೇ ‘ನಿವೃತ್ತರ ಸ್ವರ್ಗ’ (Pensioners’ Paradise) ಎನಿಸಿದೆ. ಸುಸಜ್ಜಿತ ವಸತಿ ಸಮುಚ್ಚಯ, ವಿಶಾಲ ರಸ್ತೆಗಳು, ರಸ್ತೆ ಬದಿಗಳಲ್ಲಿ ಎತ್ತರದ ಮರಗಳ ಸಾಲು, ದೊಡ್ಡ ದೊಡ್ಡ ಮಾಲ್‍ಗಳು ಜನರನ್ನು ಇಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿವೆ.

ಹಿತವಾದ ಹವಾಮಾನದಿಂದಾಗಿ ಬೆಂಗಳೂರು, ದೇಶದ ಉದ್ಯಾನ ನಗರಿ ಎಂಬ ಖ್ಯಾತಿ ಗಳಿಸಿಕೊಂಡಿದೆ. 9 ರಸ್ತೆ ಕಾರಿಡಾರ್ ಹಾಗೂ ಪ್ರಮುಖ ರೇಡಿಯಲ್ ಅಸ್ತ್ರಗಳೊಂದಿಗೆ, ಏಕಕೇಂದ್ರ ಕಕ್ಷೀಯ ಕಾರಿಡಾರ್‍ಗಳನ್ನು ಒಳಗೊಂಡು ‘ರೇಡಿಯಲ್ ಸಿಟಿ’ ಆಗಿ ಬೆಂಗಳೂರು ಬೆಳೆಯುತ್ತಿದೆ. ನಗರದ ರಸ್ತೆಯ ಒಟ್ಟು ಉದ್ದ 4200 ಕಿ.ಮೀ. ಇದ್ದು, ಹೊರವಲಯದ ರಸ್ತೆಗಳ ಉದ್ದ 500ಕಿ.ಮೀ. ಇದೆ. ಇಲ್ಲಿನ ಬಹುತೇಕ ರಸ್ತೆಗಳಲ್ಲಿ ಅವುಗಳ ಸಾಮಥ್ರ್ಯಕ್ಕಿಂತ ಹೆಚ್ಚಿನ ಸಂಚಾರದಟ್ಟಣೆ ಇರುತ್ತದೆ.

ನಗರದ ಆರ್ಥಿಕ ಅಭಿವೃದ್ಧಿಯ ಋಣಾತ್ಮಕ ಪರಿಣಾಮವು ಸಂಚಾರ ದಟ್ಟಣೆಯ ರೂಪದಲ್ಲಿ ಕಾಣಿಸುತ್ತದೆ. ನಗರದ ಕೈಗಾರಿಕಾ ಚಟುವಟಿಕೆಗಳು, ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಬೆಳೆಯುತ್ತಿದ್ದು, ದೊಡ್ಡಸಂಖ್ಯೆಯ ಜನರನ್ನೇ ನಗರದತ್ತ ಸೆಳೆಯುತ್ತಿವೆ. ನಗರದಲ್ಲಿ ತ್ವರಿತವಾಗಿ ಹೆಚ್ಚುತ್ತಿರುವ ಜನಸಂಖ್ಯೆಯ ಜತೆಗೆ ಸಾರಿಗೆ ಕ್ಷೇತ್ರದಲ್ಲಿನ ಕಡಿಮೆ ಹೂಡಿಕೆಯಿಂದಾಗಿ ಸಾರಿಗೆಯ ಬೇಡಿಕೆ ಹಾಗೂ ಪೂರೈಕೆಗಳ ನಡುವಿನ ಅಂತರ ಹೆಚ್ಚುತ್ತಿದೆ.

2007ರ ಅಕ್ಟೋಬರ್ ನಲ್ಲಿ 31 ಲಕ್ಷ ತಲುಪಿತ್ತು. ಅವುಗಳಲ್ಲಿ 22.32ಲಕ್ಷ ವಾಹನಗಳು ದ್ವಿಚಕ್ರ ವಾಹನಗಳಾಗಿದ್ದು, 4.9 ಲಕ್ಷ ಕಾರುಗಳಾಗಿವೆ. ಎಂದರೆ 88.17% ವಾಹನಗಳು ವೈಯಕ್ತಿಕ ವಾಹನಗಳು.

ಬೆಂಗಳೂರಿನ ನಗರ ಹಾಗೂ ಪುರಸಭೆಯ ಜನಸಂಖ್ಯೆ 1981ರಲ್ಲಿ 29 ಲಕ್ಷ ಹಾಗೂ 1991ರಲ್ಲಿ 42ಲಕ್ಷ ಆಗಿತ್ತು. 2007ರಲ್ಲಿ 90 ಲಕ್ಷಕ್ಕಿಂತಲೂ ಅಧಿಕವಾಗಿತ್ತು. ನಗರದ ಬಡಾವಣೆ ಪ್ರದೇಶಗಳ ವಿಸ್ತರಣೆಯೂ ಕೂಡಾ ಗಮನಾರ್ಹವಾಗಿ ಹೆಚ್ಚಿದೆ. 1971ರಲ್ಲಿ 174.7 ಚದರ ಕಿ.ಮೀ. ಇದ್ದ ಬೆಂಗಳೂರು ನಗರದ ವಿಸ್ತಾರ, ಇಂದು 800 ಚ.ಕಿ.ಮೀ. ಆಗಿದೆ.

1978ರಲ್ಲಿ ಬೆಂಗಳೂರಿನಲ್ಲಿ ನೋಂದಾವಣೆಗೊಂಡ ಮೋಟಾರು ವಾಹನಗಳ ಸಂಖ್ಯೆ 1,46000 ಆಗಿದ್ದು, 1992ರ ಹೊತ್ತಿಗೆ 6,84,497ಕ್ಕೆ ಏರಿತ್ತು. ಅಲ್ಲದೆ 2007ರ ಅಕ್ಟೋಬರ್ ನಲ್ಲಿ 31 ಲಕ್ಷ ತಲುಪಿತ್ತು. ಅವುಗಳಲ್ಲಿ 22.32ಲಕ್ಷ ವಾಹನಗಳು ದ್ವಿಚಕ್ರ ವಾಹನಗಳಾಗಿದ್ದು, 4.9 ಲಕ್ಷ ಕಾರುಗಳಾಗಿವೆ. ಎಂದರೆ 88.17% ವಾಹನಗಳು ವೈಯಕ್ತಿಕ ವಾಹನಗಳು.

ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರ ಜತೆಗೆ ವಿಸ್ತಾರವಾಗುತ್ತಿರುವ ನಗರದ ಗಾತ್ರ, ಬೆಂಗಳೂರಿನ ಆರ್ಥಿಕ ಬೆಳವಣಿಗೆಯ ಸ್ಪಷ್ಟ ಸೂಚನೆಗಳಾಗಿವೆ. ಆದರೆ ಅದೇ ಹೊತ್ತಿನಲ್ಲಿ ರಸ್ತೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸೃಷ್ಟಿಸುವಲ್ಲಿ ಉಂಟಾದ ನಿರಂತರ ವಿಳಂಬದ ಪರಿಣಾಮವನ್ನು ತೀವ್ರತರದ ಸಂಚಾರ ದಟ್ಟಣೆ ಹಾಗೂ ರಸ್ತೆ ಅಪಘಾತಗಳ ಹೆಚ್ಚಳವೇ ತೋರಿಸಿಕೊಟ್ಟಿವೆ.

ವಾಹನಗಳ ಹೆಚ್ಚಳ ಮತ್ತು ಸಂಯೋಜನೆ

ದೇಶದ ನಗರದಲ್ಲಿ ವಾಹನಗಳ ಸಂಖ್ಯೆ ತ್ವರಿತಗತಿಯಲ್ಲಿ ಹೆಚ್ಚಾಗಲು ಶುರುವಾಗಿದ್ದು 1980ರ ಉತ್ತರಾರ್ಧದಲ್ಲಿ. ಬೆಂಗಳೂರು ಕೂಡಾ ಅದಕ್ಕೆ ಹೊರತಲ್ಲ. ಹೆಚ್ಚು ದ್ವಿಚಕ್ರ ವಾಹನ ಬಳಕೆದಾರರನ್ನು ಹೊಂದಿರುವ ಖ್ಯಾತಿಯನ್ನೂ ಈ ನಗರ ಹೊಂದಿದೆ. ಸರ್ಕಾರದ ಉದಾರೀಕರಣ ನೀತಿಯು ವಾಹನಗಳನ್ನಷ್ಟೇ ಅಲ್ಲ, ಅವುಗಳ ಖರೀದಿಗೆ ಸಾಲ ಪಡೆಯುವುದನ್ನು ಸುಲಭವಾಗಿಸಿತು. ಬೆಂಗಳೂರಿನಲ್ಲಿ ಐಟಿ ಕ್ಷೇತ್ರದ ತ್ವರಿತ ಬೆಳವಣಿಗೆಯೊಂದಿಗೆ, ವಾಹನದ ಮಾಲೀಕತ್ವ ಹೊಂದುವ, ವಿಶೇಷವಾಗಿ ದ್ವಿಚಕ್ರ ವಾಹನಗಳನ್ನು ಖರೀದಿಸುವ ಸಾಮಥ್ರ್ಯ ಬಹುಪಾಲು ಹೆಚ್ಚಿದೆ. ಆರಾಮದಾಯಕ ಮತ್ತು ಅನುಕೂಲಕರ ವ್ಯವಸ್ಥೆಯನ್ನು ಹೊಂದಿರುವ ಸಾರ್ವಜನಿಕ ಸಾರಿಗೆಯ ಅಸಮರ್ಪಕತೆಯೇ ಬಹುತೇಕ ಪ್ರಯಾಣಿಕರು ಇಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ಮೊರೆ ಹೋಗುವಂತೆ ಮಾಡಿದೆ.

ನೋಂದಾಯಿತ ವಾಹನಗಳ ಸಂಖ್ಯೆ ಈಗಾಗಲೇ 3 ಮಿಲಿಯನ್ ದಾಟಿದ್ದು, ವಾರ್ಷಿಕ 12% ದಂತೆ ಹೆಚ್ಚಳ ಕಾಣುತ್ತಿದೆ. ಒಟ್ಟು ನೋಂದಾಯಿತ ವಾಹನಗಳಲ್ಲಿ ಸುಮಾರು 72% ಇರುವ ದ್ವಿಚಕ್ರ ವಾಹನಗಳು ವಾರ್ಷಿಕ 13% ದರದಲ್ಲಿ ಬೆಳೆಯುತ್ತಿವೆ. ಇತ್ತೀಚೆಗೆ, ಕಾರುಗಳ ಸಂಖ್ಯೆ ದ್ವಿಚಕ್ರ ವಾಹನಗಳಿಗಿಂತ ವೇಗವಾಗಿ ಹೆಚ್ಚುತ್ತಿದೆ.

ಬೆಂಗಳೂರಿನಲ್ಲಿ ಮೋಟಾರು ವಾಹನಗಳ ಹೆಚ್ಚಳ (ಲಕ್ಷದಲ್ಲಿ)

ವರ್ಷ        ದ್ವಿಚಕ್ರ ವಾಹನಗಳು           ಕಾರುಗಳು       ಎ/ಆರ್          ಕ್ಯಾಬ್‍ಗಳು            ಇತರೆ                 ಒಟ್ಟು
2015         41.14                           11.59          1.59            0.57                4.59                 59.49
2016         46.16                           12.88          1.71            0.83                5.05                 66.65
2017         50.30                           14.04          1.82            1.02                5.39                 72.59
2018         54.53                           15.03         1.98             1.13                5.80                 78.49

ಮುಂಬೈಯನ್ನು ಹೊರತುಪಡಿಸಿ ಭಾರತದ ಪ್ರಮುಖ ನಗರಗಳ ಸಂಚಾರ ವ್ಯವಸ್ಥೆಯಲ್ಲಿ ಬಸ್ ಸಂಚಾರ ಅತ್ಯಂತ ಪ್ರಧಾನವಾದುದು. ಇತರ ನಾಲ್ಕು ಮೆಟ್ರೋ ನಗರಗಳಾದ ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿ, ಮತ್ತು ಹೈದರಾಬಾದ್ ಕೂಡಾ ಪ್ರಯಾಣಿಕರಿಗೆ ವಿವಿಧ ವಿಸ್ತಾರಗಳನ್ನು ಪೂರೈಸಲು ಇನ್ನೂ ಒಂದು ರೀತಿಯ ರೈಲು ಸಾರಿಗೆ ವ್ಯವಸ್ಥೆಯನ್ನು ಹೊಂದಿವೆ. ಆದರೆ ಬೆಂಗಳೂರು ಈವರೆಗೆ ಕೇವಲ ಬಸ್‍ಗಳನ್ನಷ್ಟೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಹೊಂದಿತ್ತು. ದೇಶದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಬಸ್ ಸಾರಿಗೆ ವ್ಯವಸ್ಥೆ ಇಲ್ಲಿನದ್ದು.

ಈ ಬಸ್ ಸಂಚಾರದ ಕಾರ್ಯಗಳನ್ನು ನೋಡಿಕೊಳ್ಳುತ್ತಿರುವ ಬೆಂಗಳೂರು ಮೆಟ್ರೊಪಾಲಿಟನ್ ಟ್ರಾನ್ಸ್‍ಪೋರ್ಟ್ ಕಾರ್ಪೊರೇಶನ್ (ಬಿಎಂಟಿಸಿ) ಸಂಸ್ಥೆ, ರಾಜ್ಯ ಸರ್ಕಾರದ ಅಧೀನದಲ್ಲಿದೆ.

ಪ್ರಸ್ತುತ ನಗರದಲ್ಲಿ 1726 ಮಾರ್ಗಗಳಲ್ಲಿ, 4100 ಬಿಎಂಟಿಸಿ ಬಸ್‍ಗಳು 3953 ವೇಳಾಪಟ್ಟಿಗಳ ಪ್ರಕಾರ ಓಡಾಡುತ್ತಿವೆ. ನಗರದ ಸುತ್ತಮುತ್ತ 24 ಡಿಪೊಗಳನ್ನು ಹೊಂದಿದ್ದು, 18,500 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಶಿವಾಜಿ ನಗರ ಹಾಗೂ ಶಾಂತಿ ನಗರದಲ್ಲಿ ಅತ್ಯಾಧುನಿಕ ಪ್ರಯಾಣಿಕ ಸ್ನೇಹಿ, ಬಸ್ ನಿಲ್ದಾಣವನ್ನು ನಿರ್ಮಿಸಿದೆ. ಸುಭಾಷನಗರದಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣವೂ ಆಧುನೀಕರಣಗೊಂಡು ಪ್ರಯಾಣಿಕರಿಗೆ ಅಗತ್ಯ ಅನುಕೂಲಗಳನ್ನು ಒದಗಸುತ್ತಿದೆ. ಜತೆಗೆ, ನಗರದ ವಿವಿಧ ಭಾಗಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಬ್ ನೋಡಲ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಸಂಸ್ಥೆಯು ದಿನಕ್ಕೆ 60 ಸಾವಿರ ಟ್ರಿಪ್‍ಗಳಲ್ಲಿ 35 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದು, 2002-2003 ರಲ್ಲಿ ಇದು ಗಮನಾರ್ಹ ಬೆಳವಣಿಗೆ ಕಂಡಿತ್ತು. ಸೇವೆಗಳ ಆವರ್ತನವನ್ನು ಹೆಚ್ಚಿಸಲು ಮತ್ತು ಪ್ರಸ್ತುತ ಗುರಿ-ಆಧಾರಿತ ಸೇವೆಗಳ ಬದಲಿಗೆ ನಿರ್ದೇಶನ-ಆಧಾರಿತ ಸೇವೆಗಳನ್ನು ಒದಗಿಸಲು, 27 ಹೆಚ್ಚಿನ ಸಾಂದ್ರತೆಯ ಟ್ರಂಕ್ಕಾ ರಿಡಾರ್‍ಗಳು (ಗ್ರಿಡ್ ಮಾರ್ಗಗಳು) ಪ್ರಾರಂಭಿಸಲಾಗಿವೆ.

ಬಹುತೇಕ ಆಟೋಗಳು ಶಾಲಾ ಮಕ್ಕಳನ್ನು ಸಾಗಿಸಲು ಮತ್ತು ಇತರ ಓಡಾಟಕ್ಕೆ ಬಳಕೆಯಾಗುತ್ತವೆ. ಅಲ್ಲದೆ ನಗರಕ್ಕೆ ಭೇಟಿ ನೀಡುವ ಜನರೂ ಸಾಮಾನ್ಯವಾಗಿ ಆಟೋದಲ್ಲಿಯೇ ಸುತ್ತಾಡುತ್ತಾರೆ.

ಬೆಂಗಳೂರಿನಲ್ಲಿ ಆಟೋರಿಕ್ಷಾಗಳು ಹಾಗೂ ಟ್ಯಾಕ್ಸಿಗಳು ಮಧ್ಯಂತರ ಸಾರ್ವಜನಿಕ ಸಾರಿಗೆಗಳಾಗಿವೆ. ಭಾರತದ ನಗರ ಹಾಗೂ ಪಟ್ಟಣಗಳಲ್ಲಿ ಆಟೋಗಳು ಅತ್ಯಂತ ಜನಪ್ರಿಯವಾದ ಸಾರಿಗೆ ವ್ಯವಸ್ಥೆಯಾಗಿದ್ದು, ಜನಸಾಮಾನ್ಯನ ಟ್ಯಾಕ್ಸಿ ಎಂಬ ಖ್ಯಾತಿ ಗಳಿಸಿವೆ. 3 ಚಕ್ರ, 3 ಸೀಟುಗಳ ಸ್ವಲ್ಪ ತಗ್ಗಿನ ವಾಹನವಾಗಿರುವ ಆಟೋ, ಸುಲಭವಾಗಿ ನಿರ್ವಹಿಸಲಾಗುವ ಹಾಗೂ ವೇಗವಾಗಿ ತಲುಪಿಸಬಲ್ಲ ವಾಹನವೂ ಹೌದು. ಕಾರುಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಆಟೋಗಳಿಗೆ ಚಾಲಕರೇ ಮಾಲೀಕರು.

ಉಳಿದಂತೆ ಮಾರುತಿ ಓಮ್ನಿ, ವ್ಯಾನ್, ಇಂಡಿಕಾ ಡೀಸೆಲ್ ಕಾರುಗಳನ್ನು ಟ್ಯಾಕ್ಸಿ ರೂಪದಲ್ಲಿ ಬಳಸಲಾಗುತ್ತಿದ್ದು, ಅವೆಲ್ಲವೂ ನಗರ ಟ್ಯಾಕ್ಸಿ ಸೇವೆಯ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತವೆ. ಬೆಂಗಳೂರಿನಲ್ಲಿ ನೋಂದಾಯಿತ ಆಟೋ ಹಾಗೂ ಕಾಲ್ ಟ್ಯಾಕ್ಸಿಗಳ ಸಂಖ್ಯೆ 82,000 ಆಗಿದ್ದು, ವಾರ್ಷಿಕ 5-6% ಬೆಳವಣಿಗೆ ದರ ಹೊಂದಿದೆ. ಬಹುತೇಕ ಆಟೋಗಳು ಶಾಲಾ ಮಕ್ಕಳನ್ನು ಸಾಗಿಸಲು ಮತ್ತು ಇತರ ಓಡಾಟಕ್ಕೆ ಬಳಕೆಯಾಗುತ್ತವೆ. ಅಲ್ಲದೆ ನಗರಕ್ಕೆ ಭೇಟಿ ನೀಡುವ ಜನರೂ ಸಾಮಾನ್ಯವಾಗಿ ಆಟೋದಲ್ಲಿಯೇ ಸುತ್ತಾಡುತ್ತಾರೆ. ಆಟೋದ ಗಾತ್ರ ಹಾಗೂ ಸುಲಭ ನಿರ್ವಹಣೆಯನ್ನೇ ಲಾಭವಾಗಿಸಿಕೊಂಡ ಚಾಲಕರು, ಸಂಚಾರದಟ್ಟಣೆಯ ನಡುವೆ ಆಟೋ ನುಗ್ಗಿಸುತ್ತ, ಹಲವು ಅಪಘಾತಗಳಿಗೆ ಎಡೆಮಾಡಿಕೊಡುವುದಲ್ಲದೆ ಸುಲಭ ಸಂಚಾರಕ್ಕೆ ತೊಡಕುಂಟುಮಾಡುತ್ತಾರೆ.

ಸುಸ್ಥಿರ ಪರಿಹಾರಗಳ ಪ್ರಯತ್ನ

ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಯ ತ್ವರಿತ ಹೆಚ್ಚಳದಿಂದ ಭಾರತದ ನಗರಗಳ ರಸ್ತೆಗಳಲ್ಲಿ ಅಸಾಧಾರಣ ಸಂಚಾರದಟ್ಟಣೆಯಾಗುತ್ತಿವೆ. ಸಾಮಾಜಿಕ-ಆರ್ಥಿಕತೆಯ ಗಮನಾರ್ಹ ಬೆಳವಣಿಗೆಗಳ ನಡುವೆ, ಸಾರಿಗೆ ವ್ಯವಸ್ಥೆಯ ಯೋಜನೆಗಳನ್ನು ರೂಪಿಸುವವರಿಗೆ, ಜಾರಿಗೊಳಿಸುವವರಿಗೆ ಸಂಚಾರದಟ್ಟಣೆ ನಿರ್ವಹಣೆ ಹಲವು ಸವಾಲುಗಳನ್ನೇ ತಂದೊಡ್ಡಿದೆ. ಸಾಕಷ್ಟು ಅನುದಾನದ ಕೊರತೆ ಹಾಗೂ ಇತರ ಸಮಸ್ಯೆಗಳಿಂದಾಗಿ ಹೊಸ ಮೂಲಸೌಕರ್ಯಗಳನ್ನು ಒದಗಿಸುವುದು ಹಾಗೂ ಹೆಚ್ಚುತ್ತಿರುವ ಬೇಡಿಕೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ನಗರದ ಅಧಿಕಾರಿಗಳಿಗೆ ಕಷ್ಟವೆನಿಸಿದ್ದು, ಸಂಚಾರ ದಟ್ಟಣೆಯಲ್ಲಿ ಇವುಗಳ ಪರಿಣಾಮ ದಟ್ಟವಾಗಿ ಕಾಣುತ್ತಿದೆ.

ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆ

ಬೆಂಗಳೂರು ನಗರದಲ್ಲಿ ಸಂಚಾರ ಸಾರಿಗೆಯ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಮತ್ತು ಕರ್ನಾಟಕ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸಲು ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ 2006ರಲ್ಲಿ ಒಂದು ಅಧ್ಯಯನವನ್ನು ನಡೆಸಿತ್ತು.

ರೈಟ್ಸ್ ಲಿಮಿಟೆಡ್ ಈ ಅಧ್ಯಯನವನ್ನು ನಡೆಸಿದ್ದು, ವರದಿಯನ್ನು 2007ರಲ್ಲಿ ಸಲ್ಲಿಸಲಾಯಿತು. ಅಧ್ಯಯನದ ಕೆಲವು ಪ್ರಮುಖ ಆವಿಷ್ಕಾರಗಳನ್ನು ಕೆಳಕಂಡಂತೆ ವಿವರಿಸಲಾಗಿದೆ.

ಕಳೆದ ದಶಕದಲ್ಲಿ ಬೆಂಗಳೂರಿನ ಜನಸಂಖ್ಯೆಯು ವರ್ಷಕ್ಕೆ 3.25% ರಷ್ಟು ಹೆಚ್ಚಾಗಿದೆ. ಮೋಟಾರ್ ವಾಹನಗಳ ಸಂಖ್ಯೆಯು ಈಗಾಗಲೇ 28 ಲಕ್ಷವನ್ನು ದಾಟಿದೆ. ಸಾಕಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ, ಜನರು ಸೀಮಿತ ರಸ್ತೆ ಜಾಲದಲ್ಲಿ ದಟ್ಟಣೆಗೆ ಕಾರಣವಾದ ವೈಯಕ್ತಿಕಗೊಳಿಸಿದ ವಿಧಾನಗಳನ್ನು ಬಳಸುತ್ತಿದ್ದಾರೆ ಆದರೆ ಪರಿಸರ ಮಾಲಿನ್ಯವನ್ನು ಹೆಚ್ಚಿಸುತ್ತಿದ್ದಾರೆ. ಒಬ್ಬ ಬೆಂಗಳೂರಿಗ ಪ್ರತಿವರ್ಷ ಸರಾಸರಿ 240 ಗಂಟೆಗಳಿಗಿಂತ ಹೆಚ್ಚು ಸಮಯ ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಿರುತ್ತಾನೆ. ಇಂತಹ ವಿಳಂಬವು ಉತ್ಪಾದಕತೆಯ ನಷ್ಟ, ಗಾಳಿಯ ಗುಣಮಟ್ಟವನ್ನು ಕಡಿಮೆ ಮಾಡುವುದು, ಜೀವನದ ಗುಣಮಟ್ಟವನ್ನು ಕಡಿಮೆ ಮಾಡುವುದು ಮತ್ತು ಸೇವೆಗಳು ಮತ್ತು ಸರಕುಗಳ ವೆಚ್ಚವನ್ನು ಹೆಚ್ಚಿಸುತ್ತದೆ.

ಪ್ರಾಥಮಿಕ ಮತ್ತು ದ್ವಿತೀಯ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆಯು ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಪ್ರಮುಖ ಸಮಸ್ಯೆಗಳನ್ನು ಗುರುತಿಸಿದೆ.

• ರಸ್ತೆ ಸಂಪರ್ಕ ಸಾಮಥ್ರ್ಯವು ಅಸಮರ್ಪಕವಾಗಿದೆ. ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನವು ನಾಲ್ಕು ಪಥಗಳು ಅಥವಾ ಅದಕ್ಕಿಂತ ಕಡಿಮೆ ವಿಸ್ತಾರವನ್ನು ಹೊಂದಿವೆ. ಲಭ್ಯವಿರುವ ರಸ್ತೆ ಸ್ಥಳದ ಸಮರ್ಪಕ ಬಳಕೆಯ ಅಗತ್ಯವನ್ನು ಇದು ಸೂಚಿಸುತ್ತದೆ. ಜಂಕ್ಷನ್‍ಗಳು ಅನೇಕ ರಸ್ತೆಗಳಲ್ಲಿ ನಿಕಟ ಅಂತರದಲ್ಲಿವೆ. ಪ್ರಮುಖ ಪ್ರದೇಶಗಳ ಅನೇಕ ಜಂಕ್ಷನ್‍ಗಳು 5 ಆಧಾರಗಳನ್ನು ಹೊಂದಿವೆ. ಇದು ಸಂಚಾರ ಹರಿವನ್ನು ಕಷ್ಟಕರವಾಗಿಸುತ್ತದೆ. ಸಾರಿಗೆ ವ್ಯವಸ್ಥೆ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಜಾಣ್ಮೆಯ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಮೂಲಕ ಲಭ್ಯವಿರುವ ಸಾಮಥ್ರ್ಯವನ್ನು ಉತ್ತಮಗೊಳಿಸುವ ಅವಶ್ಯಕತೆಯಿದೆ.

ಒಟ್ಟಾರೆ ಸರಾಸರಿ ಸಂಚಾರ ವೇಗವು ಗರಿಷ್ಠ ಸಮಯದಲ್ಲಿ ಸುಮಾರು 13.5 ಕಿ.ಮೀ. ಇದು ರಸ್ತೆ ಸಾಮಥ್ರ್ಯವನ್ನು ಹೆಚ್ಚಿಸುವ ಅಗತ್ಯವನ್ನು ಸೂಚಿಸುತ್ತದೆ.

• ರಸ್ತೆಗಳಲ್ಲಿ ಸಂಚಾರ ಸಂಯೋಜನೆಯು ದ್ವಿಚಕ್ರ ವಾಹನಗಳ ಹೆಚ್ಚಿನ ಪಾಲನ್ನು ಸೂಚಿಸುತ್ತದೆ. ಕಾರುಗಳ ಪಾಲು ಕೂಡ ಬೆಳೆಯುತ್ತಿದೆ. ಇದು ಅಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸೂಚಿಸುತ್ತದೆ. ಹೆಚ್ಚಿನ ರಸ್ತೆಗಳಲ್ಲಿ ಪರಿಮಾಣ ಸಾಮಥ್ರ್ಯ ಅನುಪಾತಗಳು (ಗಿ/ಅ) 1ಕ್ಕಿಂತ ಹೆಚ್ಚಿವೆ. ಒಟ್ಟಾರೆ ಸರಾಸರಿ ಸಂಚಾರ ವೇಗವು ಗರಿಷ್ಠ ಸಮಯದಲ್ಲಿ ಸುಮಾರು 13.5 ಕಿ.ಮೀ. ಇದು ರಸ್ತೆ ಸಾಮಥ್ರ್ಯವನ್ನು ಹೆಚ್ಚಿಸುವ ಅಗತ್ಯವನ್ನು ಸೂಚಿಸುತ್ತದೆ. ಆದರೆ ಹೆಚ್ಚಿನ ಸಾಮಥ್ರ್ಯವನ್ನು ಯೋಜಿಸುವುದು ಮಾತ್ರವಲ್ಲದೆ ಬಹುತೇಕ ಕಾರಿಡಾರ್‍ಗಳಲ್ಲಿ ಹೆಚ್ಚಿನ ಸಾಮಥ್ರ್ಯದ ಸಾಮೂಹಿಕ ಸಾರಿಗೆ ವ್ಯವಸ್ಥೆಗಳನ್ನು ಯೋಜಿಸುವುದು ಕೂಡ ಅಗತ್ಯವಿದೆ.

• ಹೊರಗಿನ ಕಾರ್ಡನ್ ಸಮೀಕ್ಷೆಗಳು ನಗರದಲ್ಲಿರುವ ಹೆಚ್ಚಿನ ದಟ್ಟಣೆಯನ್ನು ಸೂಚಿಸುತ್ತವೆ. ಇದು ಬೆಂಗಳೂರು ಮೆಟ್ರೋಪಾಲಿಟನ್ ವಲಯಕ್ಕೆ ಮಾತ್ರವಲ್ಲದೆ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶಕ್ಕೂ ರಸ್ತೆ ಬೈಪಾಸ್‍ಗಳ ಅಗತ್ಯವನ್ನು ಸೂಚಿಸುತ್ತದೆ. ಹೆಚ್ಚಿನ ಸರಕುಗಳ ಸಂಚಾರವು ನಗರದ ಪರಿಧಿಯಲ್ಲಿ ಸರಕು ಸಾಗಣೆ ಟರ್ಮಿನಲ್‍ಗಳ ಅಗತ್ಯವನ್ನು ಸೂಚಿಸುತ್ತದೆ.

• ಕುಟುಂಬಗಳ ಪ್ರಯಾಣ ಸಮೀಕ್ಷೆಗಳು ಕೆಲಸದ ಪ್ರಯಾಣಗಳ ಹೆಚ್ಚಿನ ಪಾಲನ್ನು ಸೂಚಿಸುತ್ತವೆ. ಪ್ರಯಾಣದ ಈ ವಿಭಾಗವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಹೆಚ್ಚಾಗಿ ತೃಪ್ತಿಪಡಬೇಕಾಗಿದೆ. ಬೆಂಗಳೂರು ಮಹಾನಗರ ಪ್ರದೇಶದಲ್ಲಿ ದೊಡ್ಡ ಉದ್ಯೋಗ ಕೇಂದ್ರಗಳ ಸ್ಥಾಪನೆಯ ಯೋಜನೆಗಳನ್ನು ಪರಿಗಣಿಸಿ, ಸಾರ್ವಜನಿಕ/ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ನವೀಕರಿಸಬೇಕು ಹಾಗೂ ಗಣನೀಯವಾಗಿ ವಿಸ್ತರಿಸಬೇಕಿದೆ.

• ಪ್ರಸ್ತುತ, ಸಾರ್ವಜನಿಕ ಸಾರಿಗೆಯ ಪರವಾಗಿ ಮೋಡಲ್ ವಿಭಜನೆಯು ಸುಮಾರು 46% ಆಗಿದೆ (ನಡೆದಾಟದ ಪ್ರಯಾಣಗಳನ್ನು ಹೊರತುಪಡಿಸಿ). ಈ ಪ್ರವೃತ್ತಿಗಳು ಕಳೆದ ಎರಡು ದಶಕಗಳಲ್ಲಿ ಈ ಪಾಲಿನ ಕುಸಿತವನ್ನು ತೋರಿಸುತ್ತವೆ. ಬೆಂಗಳೂರಿನ ಜನರಿಗೆ ಸಮರ್ಪಕ ಮತ್ತು ಗುಣಮಟ್ಟದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸದ ಹೊರತು ಇದು ಮತ್ತಷ್ಟು ಕುಸಿಯುವ ನಿರೀಕ್ಷೆಯಿದೆ. ಪ್ರಯಾಣದ ಬೇಡಿಕೆಯಲ್ಲಿ ದ್ವಿಚಕ್ರ ಮತ್ತು ಕಾರುಗಳ ಪಾಲು ಗೊಂದಲಮಯವಾಗಿದೆ. ಈ ಪ್ರವೃತ್ತಿಯನ್ನು ಪ್ರತಿಬಂಧಿಸಬೇಕಾಗಿದೆ.

• ಜನಸಮುದಾಯ ಇರುವ ಪ್ರದೇಶಗಳು ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಪಾದಚಾರಿ ಸಂಚಾರವಿದೆ. ಫುಟ್‍ಪಾತ್ ಸೌಲಭ್ಯಗಳು ಸಾಮಾನ್ಯವಾಗಿ ಅಸಮರ್ಪಕವಾಗಿದ್ದು, ಅವುಗಳ ಸ್ಥಿತಿ ಹದಗೆಡುತ್ತಿದೆ. ಹಾಗಾಗಿ ಅವುಗಳ ಸೌಲಭ್ಯಗಳ ನವೀಕರಣ ಬಹಳ ಮುಖ್ಯ.

• ವಾಹನಗಳ ನಿಲುಗಡೆಯು ಬೆಂಗಳೂರಿನಲ್ಲಿ ನಿರ್ಣಾಯಕ ಆಯಾಮಗಳನ್ನು ಹೊಂದಿದೆ. ಪಾರ್ಕಿಂಗ್ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಬೇಕಿದೆ. ದೀರ್ಘಾವಧಿಯಲ್ಲಿ, ನಗರದಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು, ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಪಾರ್ಕಿಂಗ್ ಬೇಡಿಕೆಯನ್ನು ಕಡಿಮೆ ಮಾಡಲು ಕೂಡಾ ಪ್ರಯತ್ನಿಸಬೇಕಾಗಿದೆ.

• ಪರಿಷ್ಕತ ಮಾಸ್ಟರ್ ಪ್ಲ್ಯಾನ್ 1015ರ ಪ್ರಕಾರ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚಿಸಲಾಗಿದೆ. ಈ ಯೋಜನೆಯು ನಗರದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿರುವ ಪ್ರದೇಶಗಳು, ರೂಪಾಂತರ ಕಾರಿಡಾರ್‍ಗಳು, ಹೈಟೆಕ್ ಪ್ರದೇಶಗಳು ಇತ್ಯಾದಿಗಳಿಗೆ ಸಾಂದ್ರತೆಯನ್ನು ಒದಗಿಸಿದೆ. ಇದು ಸಂಚಾರ ಬೇಡಿಕೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಉದ್ದೇಶಿತ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡು ಸಾಮೂಹಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ವರ್ಗಾವಣೆ ಜಾಲವನ್ನು ಯೋಜಿಸಬೇಕಾಗಿದೆ.

ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶದ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಇಲ್ಲಿನ ಉಪನಗರ ಪಟ್ಟಣಗಳಲ್ಲಿ ಪ್ರಮುಖ ಬೆಳವಣಿಗೆಗಳನ್ನು ಪ್ರಸ್ತಾಪಿಸಿದೆ. ಇದು ಬೆಂಗಳೂರು ಮತ್ತು ಈ ಉಪನಗರ ಪಟ್ಟಣಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲಿದ್ದು, ಬೆಂಗಳೂರಿನಿಂದ ಪಟ್ಟಣಗಳಿಗೆ ರೈಲು ಸೇವೆಗಳನ್ನು ಒದಗಿಸುವ ಅವಶ್ಯಕತೆಯಿದೆ.

(ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರ ‘ಮೆಟ್ರೋಪಾಲಿಟನ್ ನಗರಗಳಲ್ಲಿ ಸಂಚಾರ ನಿರ್ವಹಣೆ’ ಕೃತಿಯಿಂದ ಆಯ್ದ ಭಾಗಗಳು)

Leave a Reply

Your email address will not be published.