ಬೆಲೆ ಏರಿಕೆಯ ಲಾಭ ರೈತರಿಗೇಕೆ ಸಿಗಬಾರದು?

ಕೇವಲ ಈರುಳ್ಳಿ ವಿಚಾರದಲ್ಲಷ್ಟೇ ಅಲ್ಲ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದರೆ 16 ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದು. ಇದು ಭಾರತದ ಮಾರುಕಟ್ಟೆಗೆ ಕಡಿಮೆ ಅಗ್ಗದ ಹಾಲಿನ ಹುಡಿ, ಬೆಣ್ಣೆಕೊಬ್ಬು ಮುಂತಾದ ಉತ್ಪನ್ನಗಳನ್ನು ನ್ಯೂಜಿಲಾಂಡ್ ಮತ್ತು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

‘ಹಣಕಾಸಿನ ಪರಿಸ್ಥಿತಿ ಹದಗೆಟ್ಟಾಗ ಜನರು ಅದರ ಸುಧಾರಣೆ ಬಯಸುತ್ತಾರೆ. ಹಣ ಹೆಚ್ಚು ಇದ್ದಾಗ ಅವರು ಇತರ ವಿಷಯಗಳ ಕಡೆ ಗಮನ ಹರಿಸುತ್ತಾರೆ’

ಜಾನ್ ಕೆನ್ನೆತ್ ಗಾಲ್‍ಬ್ರೈತ್ ಅವರ ಮೇಲಿನ ಮಾತಿನ ಪ್ರಸ್ತುತತೆಯನ್ನು ಮನದಟ್ಟಾಗಿಸಲು ‘ಹಣ’ದ ಸ್ಥಾನಕ್ಕೆ ‘ಈರುಳ್ಳಿ’ಯನ್ನು ತಂದಿಡಬೇಕು. ಈರುಳ್ಳಿ ಬೆಲೆ ಕೆಜಿಗೆ ರೂ.55-60ಕ್ಕೆ ಮಾರಾಟವಾಗುತ್ತಿರುವ ಹೊತ್ತಿನಲ್ಲಿ, ಟ್ವಿಟ್ಟರ್, ವಾಟ್ಸಾಪ್‍ಗಳಲ್ಲಿ, ಕಣ್ಣೀರು ತರಿಸಿದ, ಜನರನ್ನು ಅಳುವಂತೆ ಮಾಡಿದ ಬಗೆಗಿನ ಸಂದೇಶಗಳೇ ರಾಶಿಬೀಳುತ್ತಿವೆ. ಆದರೆ ವರ್ಷದ ಹಿಂದೆ ಈರುಳ್ಳಿ ಬೆಲೆ ಕೆಜಿಗೆ ರೂ.3 ಆಗಿದ್ದುದನ್ನು ಬೆಳೆಗಾರರು ಅರ್ಥಮಾಡಿಕೊಂಡಿದ್ದಾಗ, ಜನರ ಗಮನ ಮಾತ್ರ ಬೇರೆ ವಿಷಯಗಳ ಕಡೆಗೆ ಇತ್ತು.

ಹಾಗಂತ ಜನರನ್ನು ದೂರಲೂ ಆಗುವುದಿಲ್ಲ. 1974ರ ಕಿಶೋರ್ ಕುಮಾರ್ ಹಾಡಿಗೆ ತದ್ವಿರುದ್ಧದ ಹಾಗೆ, ಜನತೆಗೆ ಎಲ್ಲವೂ ಗೊತ್ತಿರುವುದಿಲ್ಲ. ಆದರೆ ಸರ್ಕಾರವೂ ಕೂಡಾ ಮೇಲ್ನೋಟದ ಕ್ರಮವಷ್ಟೇ ಕೈಗೊಂಡಾಗ ಸಮಸ್ಯೆ ಎದುರಾಗುತ್ತದೆ. 2016ರ ಜನವರಿಯಿಂದ 2019ರ ಮೇ ತಿಂಗಳವರೆಗೆ ಮಹಾರಾಷ್ಟ್ರದ ಲಾಸಲ್‍ಗಾಂವ್ ಮಾರುಕಟ್ಟೆಯಲ್ಲಿ ಈರುಳ್ಳಿಯ ಸರಾಸರಿ ಬೆಲೆ ರೂ.9.92/ಕೆಜಿ ಆಗಿದ್ದು, ಅದು ಕೇವಲ ಮೂಲಕೃಷಿಯ ರೂ.8 ಅಥವಾ ಅದಕ್ಕಿಂತ ಹೆಚ್ಚನ್ನು ಭರಿಸಲಿಕ್ಕಷ್ಟೇ ಶಕ್ತವಾಗಿತ್ತು. ಬಳಿಕ ಕ್ರಮವಾಗಿ ಜೂನ್‍ನಲ್ಲಿ ರೂ.12.22/ಕೆಜಿ, ಜುಲೈನಲ್ಲಿ ರೂ.12.52/ಕೆಜಿ, ಆಗಸ್ಟ್‍ನಲ್ಲಿ ರೂ.18.80/ಕೆಜಿ ಹಾಗೂ ಸೆಪ್ಟೆಂಬರ್‍ನಲ್ಲಿ 33.15/ಕೆಜಿಗೆ ಏರಿಕೆಯಾಗಿದೆ.

ಸೆಪ್ಟೆಂಬರ್ 13ರಂದು ಈರುಳ್ಳಿ ಹೊರದೇಶಕ್ಕೆ ಲಭ್ಯವಾಗದ ಹಾಗೆ ಫ್ರೀ ಆನ್ ಬೋರ್ಡ್‍ನ ಕನಿಷ್ಠ ಬೆಲೆ ಪ್ರತಿ ಟನ್‍ಗೆ 850 ಡಾಲರ್ (ರೂ.60/ಕೆಜಿ) ವಿಧಿಸಿ ಸರ್ಕಾರ ವಾಸ್ತವಿಕವಾಗಿ ರಫ್ತು ನಿಷೇಧ ಮಾಡಿತು.

ಆದರೆ ಜೂನ್‍ನಲ್ಲಿಯೇ, ಫ್ರೀ-ಆನ್ ಬೋರ್ಡ್ (ಎಫ್‍ಒಬಿ) ಮೌಲ್ಯದ ಮೇಲಿನ ಶೇಕಡಾ 10ರಷ್ಟು ರಫ್ತು ಪ್ರೋತ್ಸಾಹವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂತೆಗೆದುಕೊಂಡಿತು. ಸೆಪ್ಟೆಂಬರ್ 13ರಂದು ಈರುಳ್ಳಿ ಹೊರದೇಶಕ್ಕೆ ಲಭ್ಯವಾಗದ ಹಾಗೆ ಫ್ರೀ ಆನ್ ಬೋರ್ಡ್‍ನ ಕನಿಷ್ಠ ಬೆಲೆ ಪ್ರತಿ ಟನ್‍ಗೆ 850 ಡಾಲರ್ (ರೂ.60/ಕೆಜಿ) ವಿಧಿಸಿ ಸರ್ಕಾರ ವಾಸ್ತವಿಕವಾಗಿ ರಫ್ತು ನಿಷೇಧ ಮಾಡಿತು. ಅಲ್ಲದೆ, ಅಗತ್ಯವಿದ್ದರೆ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವಂತೆ ಸರ್ಕಾರಿ ಸ್ವಾಮ್ಯದ ಎಂಎಂಟಿಸಿ (ಲೋಹ ಮತ್ತು ಖನಿಜಗಳ ವ್ಯಾಪಾರ ನಿಗಮ) ಬಳಿ ಕೇಳಿಕೊಂಡಿತ್ತು.

ಸೆಪ್ಟೆಂಬರ್ 29ರಂದು ವಾಸ್ತವಿಕ ರಫ್ತಿನ ನಿಷೇಧ ನ್ಯಾಯಸಮ್ಮತ ಎನಿಸುವುದರ ಜೊತೆಗೆ ಷೇರು ಮಿತಿಯನ್ನು ವ್ಯಾಪಾರದ ಮೇಲೆ ಹೇರಲಾಯಿತು. ಉತ್ಪಾದಕರ ಬೆಲೆಗಳು ವಿಸ್ತತ ಅವಧಿಗೆ ಕಡಿಮೆಯಾದಾಗ, ಗ್ರಾಹಕರ ತಾತ್ಕಾಲಿಕವಾದ ಹತಾಶೆಯ ಸಣ್ಣ ಎಳೆಯ ಎದುರು ಕ್ರಮಕ್ಕಿಳಿಯುವ ಈ ನೀತಿಯು, ರೈತನ ವಿರುದ್ಧದ ಏಕಪಕ್ಷೀಯ ಸವಾಲಾಗಿ ಕಾಣಿಸುತ್ತದೆ.

ಕಳೆದ ವರ್ಷದ ಏಪ್ರಿಲ್‍ನಲ್ಲಿ ನಾಶಿಕ್‍ನ ಬೆಳೆಗಾರ 3 ಎಕರೆ ಪ್ರದೇಶದಲ್ಲಿ 300 ಕ್ವಿಂಟಾಲ್ ರಾಬಿ ಈರುಳ್ಳಿ ಬೆಳೆದು ಕೊಯ್ಲು ಮಾಡಿ, ಬೇಸಿಗೆ ಅಥವಾ ಮಾನ್ಸೂನ್‍ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಯ ಕಂದ ಚಾಲ್ ಶೇಖರಣಾ ಕ್ರಮದಲ್ಲಿ ಇಟ್ಟುಕೊಂಡಿದ್ದಿದ್ದರೆ, ಆತ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತಿತ್ತು. ಏಪ್ರಿಲ್‍ನಲ್ಲಿ ರೂ.6.70/ಕೆಜಿ ಇದ್ದ ಲಾಸಲ್‍ಗಾಂವ್ ಮಾರುಕಟ್ಟೆಯ ಬೆಲೆಗಳು ಸೆಪ್ಟೆಂಬರ್‍ನಲ್ಲಿ ಸರಾಸರಿ ರೂ.7.67/ಕೆಜಿಗೆ ಏರಿದ್ದು ದೊಡ್ಡ ಸಂಗತಿಯಲ್ಲ. ಈ ಬಾರಿ ಮೂರು ವರ್ಷಕ್ಕೊಮ್ಮೆ ಬರುವ ಹೆಚ್ಚು ಹಣಗಳಿಕೆಯ ಅವಕಾಶವಿತ್ತು. ಸರ್ಕಾರದ ಕ್ರಮ ಹಾಗೂ ನಡೆ ಅಂತಹ ಸಾಧ್ಯತೆಯನ್ನು ಕೈತಪ್ಪಿಸಿದವು. ಸೆಪ್ಟೆಂಬರ್ 19ರಿಂದ ಈಗಾಗಲೇ ಲಾಸಲ್‍ಗಾಂವ್ ಮಾರುಕಟ್ಟೆ ಬೆಲೆ ರೂ.45/ಕೆಜಿಯಿಂದ ರೂ.36/ಕೆಜಿಗೆ ಕುಸಿತ ಕಂಡಿದೆ.

ಸರ್ಕಾರದ ನಿರ್ಲಕ್ಷ್ಯತನ ಉಂಟುಮಾಡಿರುವ ಪರಿಣಾಮವೇನೂ ಸಣ್ಣ ಮಟ್ಟಿನದ್ದಲ್ಲ. 2018-19ರಲ್ಲಿ ಭಾರತವು, ಉತ್ಪಾದನೆಯ ಹತ್ತನೇ ಒಂದು ಭಾಗವಾದ 21.83ಟನ್‍ಗಳಷ್ಟು ಈರುಳ್ಳಿಯನ್ನು ರೂ.3.467.36 ಕೋಟಿ ಬೆಲೆಗೆ ರಫ್ತು ಮಾಡಿತ್ತು. ವಿದೇಶಿ ವ್ಯಾಪಾರದ ಮುಖ್ಯ ನಿರ್ದೇಶನಾಲಯದ ಒಂದು ಅಧಿಸೂಚನೆ ಕೂಡಾ ರಫ್ತು ಮಾರುಕಟ್ಟೆಯನ್ನು ಪ್ರಭಾವಿಸುವ ಬಗ್ಗೆ ಅಥವಾ ರಫ್ತು ಮಾರುಕಟ್ಟೆಯನ್ನು ಗಟ್ಟಿಗೊಳಿಸುವ ವಿಚಾರಗಳ ಬಗ್ಗೆ ಅಧಿಕಾರಿ ವರ್ಗಕ್ಕೆ, ರಾಜಕಾರಣಿಗಳಿಗೆ ತಿಳಿದಿಲ್ಲ. ಉತ್ಪಾದಕರ ಆದಾಯ ಮತ್ತು ಪ್ರೋತ್ಸಾಹದ ದೃಷ್ಟಿಯಿಂದ, ಕಡಿಮೆ ಚಿಲ್ಲರೆ ಆಹಾರ ಹಣದುಬ್ಬರದ ಮಹತ್ವದ ಬಗ್ಗೆಯೂ ಅವರಿಗೆ ಗೊತ್ತಿಲ್ಲ. ಒಟ್ಟು ಗ್ರಾಹಕ ಹಣದುಬ್ಬರಕ್ಕೆ ಹೋಲಿಸಿದರೆ, ಆಹಾರ ಹಣದುಬ್ಬರವು ಸೆಪ್ಟೆಂಬರ್ 2016ರಿಂದ ಆಗಸ್ಟ್ 2019ರವರೆಗೆ ಪ್ರತಿ ವರ್ಷ ಸರಾಸರಿ ಶೇಕಡಾ 1.38 ಹೊಂದಿದೆ.

ಕೇವಲ ಈರುಳ್ಳಿ ವಿಚಾರದಲ್ಲಷ್ಟೇ ಅಲ್ಲ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದರೆ 16 ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದು. ಇದು ಭಾರತದ ಮಾರುಕಟ್ಟೆಗೆ ಕಡಿಮೆ ಅಗ್ಗದ ಹಾಲಿನ ಹುಡಿ, ಬೆಣ್ಣೆಕೊಬ್ಬು ಮುಂತಾದ ಉತ್ಪನ್ನಗಳನ್ನು ನ್ಯೂಜಿಲಾಂಡ್ ಮತ್ತು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಪ್ರಸ್ತುತ ಭಾರತವು ಶೇ.15 ಸುಂಕದೊಂದಿಗೆ ವರ್ಷಕ್ಕೆ 10ಸಾವಿರ ಟನ್‍ನಷ್ಟು ಪೌಡರ್ ಆಮದು ಮಾಡಿಕೊಳ್ಳುತ್ತದೆ. ರಿಯಾಯಿತಿ ಸುಂಕದಲ್ಲಿ ಆಮದು ಕೋಟಾವನ್ನು ಗಣನೀಯವಾಗಿ ಹೆಚ್ಚಿಸುವ ಬಗ್ಗೆ ಮೋದಿ ಸರ್ಕಾರ ಯೋಚಿಸುತ್ತಿದ್ದು, ಇತ್ತ ದರವನ್ನು ಈಗಿರುವ ಶೇ.15ಕ್ಕಿಂತ ಕಡಿಮೆಗೊಳಿಸಲಾಗಿದೆ. ನವೆಂಬರ್‍ನಲ್ಲಿ ಕೊನೆಗೊಳ್ಳಲಿರುವ ಆರ್‍ಸಿಇಪಿ ಒಪ್ಪಂದದಿಂದ ಹಿಂದೆ ಸರಿಯಲು ಭಾರತ ಬಯಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ವಾಣಿಜ್ಯ ಸಚಿವಾಲಯದ ವತಿಯಿಂದ ಸೆಪ್ಟೆಂಬರ್ 18ರಂದು ನಡೆದ ಪಾಲುದಾರರ ಸಮಾಲೋಚನಾ ಸಭೆಯಲ್ಲಿ ಪ್ರಸ್ತಾಪಿಸಲಾದ ಅಂಶವೊಂದು ಅಧಿಕೃತ ಮನಸ್ಥಿತಿಯನ್ನು ಸೂಚಿಸುತ್ತದೆ. ಭಾರತದ ಹಾಲು ಉತ್ಪಾದನೆಯು 2020-21ರ ಹೊತ್ತಿಗೆ 204ಲಕ್ಷ ಟನ್ ಬೇಡಿಕೆ ಇರುವಲ್ಲಿ 170.93 ಲಕ್ಷ ಟನ್ ಆಗಲಿದೆ ಎಂದು ಹೇಳಲಾಗಿದೆ. ಆದರೆ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆಯ ಅಂದಾಜಿನ ಪ್ರಕಾರ 2017-18 ರಲ್ಲಿಯೇ ಹಾಲು ಉತ್ಪಾದನೆ 176.35ಲಕ್ಷ ಟನ್ ಇತ್ತು.!

ಹಾಲು ಉತ್ಪಾದನೆ (238.48 ಲ.ಟನ್) ಮತ್ತು ಬಳಕೆಯ (341 ಲ.ಟನ್) ನಡುವಿನ ಅಂತರವನ್ನು 2033-34ರ ವೇಳೆಗೆ ಕಡಿಮೆಗೊಳಿಸುವ ನಿರೀಕ್ಷೆ ಇದೆ. ಅಲ್ಲದೆ, ಉತ್ಪಾದನೆ (238.48 ಲ.ಟನ್) ಮತ್ತು ಬಳಕೆ (341 ಲ.ಟನ್)ಯ ನಡುವಿನ ಅಂತರವು 2033-34ರ ವೇಳೆಗೆ ವಿಸ್ತರಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದು ಆಮದಿನ ವಿಚಾರವನ್ನು ಗಟ್ಟಿಗೊಳಿಸುತ್ತದೆ. ಈ ಮುನ್ಸೂಚನೆಗಳನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ದತ್ತಾಂಶವನ್ನು ಬಳಸಿ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಮಂಡಳಿಯು ಇದನ್ನು ನಿರಾಕರಿಸಿದ್ದಲ್ಲದೆ, 2033ರಲ್ಲಿ ಭಾರತದ ಹಾಲಿನ ಉತ್ಪಾದನೆಯು 292ಲಕ್ಷ ಟನ್ ಬಳಕೆಯ ಪ್ರಮಾಣಕ್ಕೆ 330ಲಕ್ಷ ಟನ್ ತಲುಪಲಿದೆ ಎಂಬ ನೀತಿ ಆಯೋಗದ ವರದಿಯನ್ನೂ ಉಲ್ಲೇಖಿಸಿದೆ.

ರೂ.500ರಿಂದ 600ರವರೆಗೆ ಚಿಲ್ಲಿಂಗ್, ಸಾರಿಗೆ ಮತ್ತು ಸಂಸ್ಕರಣಾ ವೆಚ್ಚವನ್ನು ಕಡಿತಗೊಳಿಸಿದ ಬಳಿಕ, ರೈತರಿಗೆ ಸಿಗಬಹುದಾದ ಮೊತ್ತ ಗರಿಷ್ಠ ರೂ.1,800-1,900 ಅಥವಾ ಪ್ರತಿ ಲೀಟರ್‍ಗೆ ರೂ.18-19. ಆದರೆ ಇಂದು, ಕೆನೆರಹಿತ ಹಾಲಿನ ಹುಡಿ ಮತ್ತು ತುಪ್ಪದ ದರಗಳು ಕ್ರಮವಾಗಿ ರೂ.280 ಮತ್ತು ರೂ.390/ಕೆಜಿಗೆ ಚೇತರಿಸಿಕೊಂಡಿವೆ. ಈ ಕಾರಣದಿಂದ ರೈತರಿಗೆ ಪ್ರತಿ ಲೀಟರ್‍ಗೆ 29-30 ರೂ. ಸಿಗುತ್ತದೆ.

ಕಳೆದ ವರ್ಷ ಇದೇ ಹೊತ್ತಿನಲ್ಲಿ ಡೈರಿಗಳಲ್ಲಿ ಕೆನೆರಹಿತ ಹಾಲಿನ ಹುಡಿಯನ್ನು (ಎಸ್‍ಎಂಪಿ) ರೂ.140/ಕೆಜಿ ಮತ್ತು ತುಪ್ಪವನ್ನು ರೂ.320/ಕೆಜಿಗೆ ಮಾರಾಟ ಮಾಡಲಾಗುತ್ತಿತ್ತು. ಶೇ.3.5 ಕೊಬ್ಬು (ತುಪ್ಪ) ಮತ್ತು ಶೇ.8.5 ಕೆನೆರಹಿತವಾದ 100 ಲೀಟರ್ (103ಕೆಜಿ) ಹಸುವಿನ ಹಾಲಿನ ಒಟ್ಟು ಆದಾಯವು ಅಂದಾಜು ರೂ.2,380 ಆಗಿತ್ತು. ರೂ.500ರಿಂದ 600ರವರೆಗೆ ಚಿಲ್ಲಿಂಗ್, ಸಾರಿಗೆ ಮತ್ತು ಸಂಸ್ಕರಣಾ ವೆಚ್ಚವನ್ನು ಕಡಿತಗೊಳಿಸಿದ ಬಳಿಕ, ರೈತರಿಗೆ ಸಿಗಬಹುದಾದ ಮೊತ್ತ ಗರಿಷ್ಠ ರೂ.1,800-1,900 ಅಥವಾ ಪ್ರತಿ ಲೀಟರ್‍ಗೆ ರೂ.18-19. ಆದರೆ ಇಂದು, ಕೆನೆರಹಿತ ಹಾಲಿನ ಹುಡಿ ಮತ್ತು ತುಪ್ಪದ ದರಗಳು ಕ್ರಮವಾಗಿ ರೂ.280 ಮತ್ತು ರೂ.390/ಕೆಜಿಗೆ ಚೇತರಿಸಿಕೊಂಡಿವೆ. ಈ ಕಾರಣದಿಂದ ರೈತರಿಗೆ ಪ್ರತಿ ಲೀಟರ್‍ಗೆ 29-30 ರೂ. ಸಿಗುತ್ತದೆ.

ಆರ್‍ಸಿಇಪಿ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ತರುವುದರ ಪರಿಣಾಮವೇನು? ಭಾರತದ ಕೆನೆರಹಿತ ಹಾಲಿನ ವಾರ್ಷಿಕ ಉತ್ಪಾದನೆಯು 5 ರಿಂದ 4.5 ಲ.ಲೀಟರ್ ಆಗಿದ್ದು, ಅದರಲ್ಲಿ 2-2.5 ಲ.ಲೀಟರ್ ಅನ್ನು ಡೈರಿಗಳು ಅಲ್ಪಕಾಲದ ಬೇಸಿಗೆಯಲ್ಲಿ ಹಾಲನ್ನಾಗಿ ಮರುಪರಿವರ್ತಿಸಲು ಬಳಸುತ್ತಾರೆ. ಒಂದು ವೇಳೆ ನ್ಯೂಜಿಲಾಂಡ್‍ನಿಂದ 1 ಲ.ಲೀಟರ್ ಹಾಲಿನ ಹುಡಿ ಇಲ್ಲಿನ ಮಾರುಕಟ್ಟೆ ತಲುಪಿದರೆ, ಅದು ಮಾರುಕಟ್ಟೆಯನ್ನು ಕುಗ್ಗಿಸುತ್ತದೆ. ಪೂರ್ತಿ ಚಳಿಗಾಲ ಬರುವಷ್ಟರ ಹೊತ್ತಿಗೆ, ಒಪ್ಪಂದದ ನಿರೀಕ್ಷೆಯು ನಕಾರಾತ್ಮಕ ಭಾವ ಹುಟ್ಟಿಸುವುದಂತೂ ವಾಸ್ತವ. ಈರುಳ್ಳಿ ಬೆಳೆಗಾರರಂತೆ ಹಾಲು ಉತ್ಪಾದಕರೂ ಕಳೆದ 3-4 ವರ್ಷಗಳಿಂದ ಬೆಲೆ ಇಳಿಕೆಯ ಸಮಸ್ಯೆಯನ್ನು ಅನುಭವಿಸಿದ್ದಾರೆ. ಇದು ಅವರನ್ನು ಒತ್ತಾಯವಾಗಿ, ಹಿಂಡಿನ ಗಾತ್ರವನ್ನು ಕಡಿಮೆಗೊಳಿಸುವಂತೆ, ಹಸುಗಳಿಗೆ ಕಡಿಮೆ ಆಹಾರ ನೀಡುವಂತೆ ಮಾಡಿದೆ.

ಒಪ್ಪಂದವನ್ನು ಉಳಿಸುವ ಉದ್ದೇಶದಿಂದ ಅಥವಾ ಅಲ್ಪಾವಧಿಯ ಗ್ರಾಹಕ ಹಿತಾಸಕ್ತಿಯನ್ನು ಪರಿಗಣಿಸಿ, ಬೆಲೆಗಳು ಕನಿಷ್ಠಮಟ್ಟದಿಂದ ಸುಧಾರಿಸುತ್ತಿರುವ ಹೊತ್ತಿನಲ್ಲಿ, ಕೃಷಿ ಆದಾಯದ ಏರಿಕೆಯನ್ನು ಸರ್ಕಾರ ತ್ಯಾಗಮಾಡುವುದಾದರೆ ಇದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ ಎನ್ನಬಹುದು.

ವಾಸ್ತವದಲ್ಲಿ ಪ್ರಸ್ತುತ ಕಂಡುಬರುತ್ತಿರುವ ಈರುಳ್ಳಿ, ಹಾಲು, ಮೆಕ್ಕೆಜೋಳ, ದ್ವಿದಳ ಧಾನ್ಯ ಹಾಗೂ ಸೋಯಾಬೀನ್‍ಗಳ ಬೆಲೆ ಚೇತರಿಕೆ ವಿಚಾರವನ್ನು ಮೋದಿ ಸರ್ಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಅಧಿಕ ಮಾನ್ಸೂನ್ ಜೊತೆಗೆ ಮಳೆಯು, ಖಾರಿಫ್ ಅಲ್ಲದಿದ್ದರೆ ರಾಬಿಯಲ್ಲಂತೂ ಅತ್ತುತ್ತಮ ಸುಗ್ಗಿಯನ್ನು ತರುವುದು ಖಚಿತ. ಈ ಮೂಲಕ ಕೃಷಿ ಆದಾಯವು ಆರ್ಥಿಕ ಪರಿಸ್ಥಿತಿಯ ಬದಲಾವಣೆಗೆ ಉತ್ತಮ ಭರವಸೆ ಒದಗಿಸುತ್ತದೆ. ಗ್ರಾಹಕನ ನಿಜವಾದ ಮಿತ್ರ ಎಂದರೆ ಉತ್ಪಾದಕ. ಆತ ಗಳಿಸಿ, ಖರ್ಚು ಮಾಡಲು ಮತ್ತೆ ಆರಂಭಿಸಿದರೆ ಮಾತ್ರ ನಮ್ಮ ಉದ್ಯೋಗವೂ ಉಳಿಯುತ್ತದೆ.

ಅನುವಾದ: ಉದಯ್ ಇಟಗಿ
ಕೃಪೆ: ಇಂಡಿಯನ್ ಎಕ್ಸ್‍ಪ್ರೆಸ್

Leave a Reply

Your email address will not be published.