ಭಾರತದಲ್ಲಿ ಗ್ರಾಹಕರ ದನಿ ಗಟ್ಟಿಗೊಳ್ಳಬೇಕಿದೆ

ಭಾರತದ ಆರೋಗ್ಯ ವ್ಯವಸ್ಥೆಯ ಚುಕ್ಕಾಣಿ ಹಿಡಿದು ನಡೆಸುವವರು, ಅದರ ವಿನ್ಯಾಸಕರು ಮತ್ತು ಅದರಿಂದ ಲಾಭ ಪಡೆಯುವ ಸಕಲರೂ ಈ ವ್ಯವಸ್ಥೆಯ ಬಗ್ಗೆ ಸತತ ಪ್ರಯತ್ನ ಮಾಡಿ ‘ಪಾಲ್ಗೊಳ್ಳುವಿಕೆ’ ಕಡೆಗೆ ಸಾಗಬೇಕಾಗಿದೆ.

ಪ್ರತಿ ಬಾರಿಯೂ “ಆರೋಗ್ಯ ಭಾಗ್ಯ” ಎಂಬ ಮಾತನ್ನು ಕೇಳಿದಾಗ ‘ಇಂಥ ಭಾಗ್ಯ ನಮಗೆ ಹೇಗೆ ದೊರೆಯಲು ಸಾಧ್ಯ?’ ಎಂಬ ವಿಚಾರ ಮನಸ್ಸಿನಲ್ಲಿ ಮೂಡುತ್ತದೆ. ಆರೋಗ್ಯ ಅಥವಾ ಸ್ವಾಸ್ಥ್ಯ ಜನರ ದೈಹಿಕ ಮತ್ತು ಮಾನಸಿಕ ಸ್ಥಿತಿಯಾಗಿದ್ದು, ಅದನ್ನು ಕೇವಲ ಔಷಧಿ ಮತ್ತು ಸೇವೆಗಳಿಂದ ಮಾತ್ರ ಸಾಧಿಸಲಾಗದು. ಸಾಮಾನ್ಯವಾಗಿ ಕಾಣುವ ಒಂದು ನೋಟವೆಂದರೆ, ಒಳ್ಳೆಯ ಆಹಾರ ಸೇವನೆ ಮಾಡುತ್ತಾ ಇದ್ದರೂ ಚಟುವಟಿಕೆಯ ಕೊರತೆಯಿಂದಾಗಿ ದೇಹದಲ್ಲಿ ಕೊಬ್ಬು ಹೆಚ್ಚಾಗಿ ಸಂಗ್ರಹವಾಗಿ ಜನರ ತೂಕ ಹೆಚ್ಚಾಗಿ ಅನಾರೋಗ್ಯ ಉಂಟಾಗುತ್ತದೆ.

ಮುಂದುವರಿದ ದೇಶಗಳಾದ ಆಸ್ಟ್ರೇಲಿಯಾ, ಅಮೆರಿಕ ಮತ್ತು ಜರ್ಮನಿಯಲ್ಲಿ ಆರೋಗ್ಯ ವ್ಯವಸ್ಥೆ ಕೇವಲ ಆಸ್ಪತ್ರೆ ಹಾಗೂ ಚಿಕಿತ್ಸಾಲಯವಲ್ಲದೆ ಜೀವನಶೈಲಿಯ ಬಗ್ಗೆಯೂ ನಿಗಾ ವಹಿಸುತ್ತದೆ. ಜನರ ಆರೋಗ್ಯಕ್ಕಾಗಿ ಒಳ್ಳೆಯ ವಾತಾವರಣ, ಚಟುವಟಿಕೆಯ ತಾಣಗಳು ಮತ್ತು ಆಹಾರದ ಸಮತೋಲನದ ಬಗ್ಗೆ ತಿಳುವಳಿಕೆ ಕಲ್ಪಿಸಿಕೊಡಲಾಗುತ್ತದೆ. ಆದರೆ ಅಂತಹ ಕಾರ್ಯಕ್ರಮಗಳು ಸರ್ಕಾರಕ್ಕೆ ಮತ್ತು ಜನರಿಗೆ ಹೆಚ್ಚಿನ ಹಣಕಾಸಿನ ಭಾರವನ್ನು ನಿರ್ಮಿಸುತ್ತವೆ.

ಸರ್ಕಾರ ಮತ್ತು ವಿಮಾ ಯೋಜನೆಗಳಿಂದ ಅಷ್ಟಕ್ಕಷ್ಟೇ ಪ್ರಮಾಣದಲ್ಲಿ ಸಹಾಯ ಸಿಗುತ್ತದೆ. ಅಂಥ ಸಹಾಯ ಸೇವೆಗಳ ರೂಪದಲ್ಲಿ ಇದ್ದು, ಸರ್ಕಾರಿ ಆಸ್ಪತ್ರೆ ಅಥವಾ ವಿಮಾ ಯೋಜನೆಯಲ್ಲಿ ನಿರ್ದಿಷ್ಟ ಸೇವೆಗಳಿಗೆ ಮಾತ್ರ ಮೀಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ರೂಪುಗೊಳ್ಳುತ್ತಿರುವ ಹೊಸ ಚಳವಳಿ “ಸಹಕಾರಿ ಆರೋಗ್ಯ ರಕ್ಷಣೆ”. ಈ ಚಳವಳಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಮೊದಲು ಭಾರತದಲ್ಲಿನ ಸಮಕಾಲೀನ ಆರೋಗ್ಯ ವ್ಯವಸ್ಥೆಯತ್ತ ಗಮನ ನೀಡಬೇಕಾಗಿದೆ. ಇದುವರೆಗೆ ಭಾರತದಲ್ಲಿ ವ್ಯಕ್ತಿಗತ ಆರೋಗ್ಯದ ಆರ್ಥಿಕ ಜವಾಬ್ದಾರಿ ಕೇವಲ ಸ್ವಂತ ಖರ್ಚಿನಿಂದ ಮಾಡುವ ವ್ಯವಸ್ಥೆ ಇದೆ. ಸರ್ಕಾರ ಮತ್ತು ವಿಮಾ ಯೋಜನೆಗಳಿಂದ ಅಷ್ಟಕ್ಕಷ್ಟೇ ಪ್ರಮಾಣದಲ್ಲಿ ಸಹಾಯ ಸಿಗುತ್ತದೆ. ಅಂಥ ಸಹಾಯ ಸೇವೆಗಳ ರೂಪದಲ್ಲಿ ಇದ್ದು, ಸರ್ಕಾರಿ ಆಸ್ಪತ್ರೆ ಅಥವಾ ವಿಮಾ ಯೋಜನೆಯಲ್ಲಿ ನಿರ್ದಿಷ್ಟ ಸೇವೆಗಳಿಗೆ ಮಾತ್ರ ಮೀಸಲಾಗಿದೆ. ಮೊದಲಿಗೆ ಹೇಳಿದಂತೆ ಮುಂದುವರೆದ ದೇಶಗಳಲ್ಲಿ ಇರುವಂತೆ ಆರೋಗ್ಯ ಕಾಪಾಡುವ, ರೋಗ ತಡೆಗಟ್ಟುವ(ಪ್ರಿವೆಂಟಿವ್), ಮುನ್ಸೂಚಕ(ಪ್ರಿ-ಡಿಟೆಕ್ಟಿವ್) ಮತ್ತು ವೈಯಕ್ತಿಕಗೊಳಿಸಿದ ಪದ್ಧತಿಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಲಭ್ಯವಿಲ್ಲ.

ಇಂತಹ ವ್ಯವಸ್ಥೆ ಭಾರತದಲ್ಲಿ ಸಾಧ್ಯವೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಭಾರತದಲ್ಲಿನ ಆರೋಗ್ಯ ಸೇವೆಗಳ ಬಗ್ಗೆ ಚಾರಿತ್ರಿಕ ಬೆಳವಣಿಗೆಗಳನ್ನು ಗಮನಿಸಬೇಕಾಗಿದೆ. ಸನಾತನವಾದ ಆಯುರ್ವೇದದ ಉದಾಹರಣೆ ತೆಗೆದುಕೊಳ್ಳೋಣ. ಅದೊಂದು ಜೀವನಶೈಲಿಗೆ ನಿಕಟವಾದ ಆರೋಗ್ಯ ವ್ಯವಸ್ಥೆಯಾಗಿದ್ದು, ಶತಮಾನಗಳ ನಂತರ ಮೂಡಿಬಂದ ಅಲೋಪತಿಯಂಥ ರಾಸಾಯನಿಕ ಶಾಸ್ತ್ರ ಆಧಾರಿತ ವ್ಯವಸ್ಥೆಗೆ ಹೋಲಿಸಲಾಗದು. ಉದಾಹರಣೆ ದಿನಬಿಟ್ಟು ದಿನ ಅಥವಾ ವಾರದಲ್ಲಿ ಕೆಲದಿನ ಮಾತ್ರ ಉಪವಾಸ ಮಾಡುವ ಪದ್ಧತಿ ಭಾರತದಲ್ಲಿ ಬಹು ಹಿಂದಿನಿಂದಲೂ ಇದೆ. ಇತ್ತೀಚೆಗೆ ಮಾತ್ರ ಆಧುನಿಕ ವೈದ್ಯಶಾಸ್ತ್ರ ಉಪವಾಸದ ಮಹತ್ವ ಕಂಡುಕೊಂಡಿದೆ.

ಕ್ರಿಸ್ತಪೂರ್ವ ನಾಲ್ಕರಿಂದ ಎಂಟನೇ ಶತಮಾನದಲ್ಲಿ ಅಗ್ನಿವೇಶ ಮತ್ತು ಚರಕರಿಂದ ನಿರೂಪಿಸಲ್ಪಟ್ಟ “ರೋಗ ತಡೆಗಟ್ಟುವ” ವಿಧಿವಿಧಾನಗಳನ್ನು ಕ್ರಿ.ಶ.6ನೇ ಶತಮಾನದ ಗುಪ್ತರ ಕಾಲದ ದಾಖಲೆಗಳಲ್ಲಿ ಕಾಣಬಹುದಾಗಿದೆ. ರೋಗಗಳನ್ನು ತಡೆಗಟ್ಟುವಿಕೆ ಮೊಟ್ಟಮೊದಲ ಸೂತ್ರವಾಗಿ ಕಂಡುಬರುತ್ತದೆ.

ಆಧುನಿಕ ಆರೋಗ್ಯಶಾಸ್ತ್ರದಲ್ಲಿ ಈ ಹಿಂದೆ ಹೇಳಿದಂತೆ ಮೂರು ‘ಪಿ’-ಗಳು ಪ್ರಿವೆಂಟಿವ್ (ತಡೆಗಟ್ಟುವ) ಪ್ರಿಡಿಟೆಕ್ಟಿವ್ (ಮುನ್ಸೂಚಕ) ಮತ್ತು ಪರ್ಸನಲೈಸ್ಡ್ (ವೈಯಕ್ತಿಕ) ವೈದ್ಯಕೀಯ ಉಪಯೋಗದಿಂದ ಕಳೆದೆರಡು ದಶಕಗಳಲ್ಲಿ ಅಪಾರ ಉನ್ನತಿಯನ್ನು ಸಾಧಿಸಲಾಗಿದೆ.

ಆಧುನಿಕ ವೈದ್ಯಶಾಸ್ತ್ರ ಬೆಳೆದಂತೆ ನೈಸರ್ಗಿಕವಾದ ಆರೋಗ್ಯ ಪ್ರಕ್ರಿಯೆಯಲ್ಲಿ ಮಾನವರ ಹಸ್ತಕ್ಷೇಪ ಹೆಚ್ಚಾಗಿದ್ದು ಕಂಡುಬರುತ್ತದೆ. 20 ಮತ್ತು 21ನೇ ಶತಮಾನದಲ್ಲಿ ಮಾನವ ಶರೀರದ ಅಣು-ಪರಮಾಣುಗಳ ರೂಪುರೇಷೆಗಳನ್ನು ಅರಿತು ಅದರಲ್ಲಿ ವೈದ್ಯಕೀಯ ಮಧ್ಯಪ್ರವೇಶ ಮಾಡಲಾಗಿದೆ. ಲಸಿಕೆಶಾಸ್ತ್ರ (ವ್ಯಾಕ್ಸಿನೇಷನ್ಸ್) ಮತ್ತು ಪ್ರತಿಜೀವಕ (ಆಂಟಿಬಯಾಟಿಕ್) ಉಪಯೋಗ ಲಕ್ಷಾಂತರ ಜೀವಗಳನ್ನು ಉಳಿಸಿದ್ದು ದಾಖಲೆಯಾಗಿದೆ. ಆದರೆ ಸಾಮಾಜಿಕ ಮಾಧ್ಯಮ ಮತ್ತು ಅಸಮಂಜಸ ಅಂತರ್ಜಾಲ ಮಾಹಿತಿ ಹರಿಯುವಿಕೆಯಿಂದ ಈಗ ಆರೋಗ್ಯ ಮತ್ತು ವೈದ್ಯಕೀಯದ ವಿಚಾರದಲ್ಲಿ ಹಲವಾರು ತಪ್ಪು ಗ್ರಹಿಕೆಗಳು ಆಧಾರರಹಿತ ಮೂಢ ನಂಬಿಕೆಗಳು ಮತ್ತು ವಿವಾದಗಳು ಮೂಡಿವೆ. ಜ್ಞಾನ ವಿಜ್ಞಾನದ ಸಮರ್ಪಕ ಉಪಯೋಗ ಅಂತರ್ಜಾಲದಲ್ಲಿ ಇನ್ನೂ ಆಗಬೇಕಾಗಿದೆ. ಆಧುನಿಕ ಆರೋಗ್ಯಶಾಸ್ತ್ರದಲ್ಲಿ ಈ ಹಿಂದೆ ಹೇಳಿದಂತೆ ಮೂರು ‘ಪಿ’-ಗಳು ಪ್ರಿವೆಂಟಿವ್ (ತಡೆಗಟ್ಟುವ) ಪ್ರಿಡಿಟೆಕ್ಟಿವ್ (ಮುನ್ಸೂಚಕ) ಮತ್ತು ಪರ್ಸನಲೈಸ್ಡ್ (ವೈಯಕ್ತಿಕ) ವೈದ್ಯಕೀಯ ಉಪಯೋಗದಿಂದ ಕಳೆದೆರಡು ದಶಕಗಳಲ್ಲಿ ಅಪಾರ ಉನ್ನತಿಯನ್ನು ಸಾಧಿಸಲಾಗಿದೆ.

ಭಾರತದ ಆರೋಗ್ಯ ವ್ಯವಸ್ಥೆಯ ಚುಕ್ಕಾಣಿ ಹಿಡಿದು ನಡೆಸುವವರು, ಅದರ ವಿನ್ಯಾಸಕರು ಮತ್ತು ಅದರಿಂದ ಲಾಭ ಪಡೆಯುವ ಸಕಲರೂ ಈ ವ್ಯವಸ್ಥೆಯ ಬಗ್ಗೆ ಸತತ ಪ್ರಯತ್ನ ಮಾಡಿ ‘ಪಿ’4 ಅಂದರೆ “ಪಾಲ್ಗೊಳ್ಳುವಿಕೆ” ಕಡೆಗೆ ಸಾಗಬೇಕಾಗಿದೆ. ಭಾರತದ ಮತ್ತು ಇತರ ದೇಶಗಳ ಆರೋಗ್ಯ ವ್ಯವಸ್ಥೆಗಳಲ್ಲಿ ಇರುವ ಇನ್ನೊಂದು ಮುಖ್ಯ ವ್ಯತ್ಯಾಸವೆಂದರೆ, ಹಣಕಾಸಿನ ಬೆಂಬಲ(ಫಂಡಿಂಗ್) ನೀಡುವ ಪದ್ಧತಿಗಳು. ಅಮೆರಿಕದ ಮತ್ತು ಇತರ ಮುಂದುವರೆದ ದೇಶಗಳ ಆರೋಗ್ಯ ವ್ಯವಸ್ಥೆಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆ ಮತ್ತು ಇನ್ಶುರೆನ್ಸ್ ಕಂಪನಿಗಳಿಂದ ಹಣಕಾಸು ವ್ಯವಸ್ಥೆ ಇತ್ಯಾದಿಗಳನ್ನು ಸಿಸ್ಟಮ್ಸ್ ಔಷಧ ರೀತಿಯಲ್ಲಿ ಮತ್ತು ದೊಡ್ಡ ಡೇಟಾದೊಂದಿಗೆ ನಿಕಟ ಏಕೀಕರಣದಿಂದ ಮಾಡಲಾಗುತ್ತದೆ. ಇದರಿಂದಾಗಿ ನೇರವಾಗಿ ಗ್ರಾಹಕರಿಗೆ ವೈಯಕ್ತೀಕರಿಸಿದ ಸೇವೆ ನೀಡಲು ಸಾಧ್ಯವಾಗುತ್ತದೆ.

ಅಂತಹ ವೈಯಕ್ತೀಕರಿಸಿದ ಸೇವೆ ನೀಡಲು ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಏಕೀಕರಣಗೊಂಡ ಗ್ರಾಹಕರ ಧ್ವನಿ (ವಾಯ್ಸ್ ಆಫ್ ಕಸ್ಟಮರ್) ಇನ್ನೂ ಮೂಡಿ ಬರಬೇಕಾಗಿದೆ. ಸರಕಾರದಿಂದ ಮೂಡಿಬರುವ ಕಾರ್ಯಕ್ರಮದಲ್ಲಿ “ಮೇಲಿನಿಂದ-ಕೆಳಗಿನವರೆಗೆ” (ಟಾಪ್-ಡೌನ್) ಧೋರಣೆ ಇರುತ್ತದೆ. ಸಹಕಾರದಿಂದ ಮಾಡಿದ ಕಾರ್ಯಕ್ರಮದಲ್ಲಿ “ಕೆಳಗಿನಿಂದ-ಮೇಲಿನವರೆಗೆ” (ಬಾಟಮ್-ಅಪ್) ಧೋರಣೆ ಸಾಧ್ಯವಿದೆ.

*ಲೇಖಕರು ಹರಿಹರದವರು; ಬಯೋಮೆಡಿಕಲ್ ಇಂಜಿನಿಯರಿಂಗ್ ಪದವೀಧರರು, ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ವೃತ್ತಿ ನಿರತರು.

Leave a Reply

Your email address will not be published.