ಭಾರತದಲ್ಲಿ ಲಾಕ್ಡೌನ್ ಅಗತ್ಯವಿತ್ತೇ..?

ಸುರ್ಜಿತ್ ಎಸ್. ಭಲ್ಲಾ

ಕರನ್ ಭಾಸಿನ್

ಕೋವಿಡ್ ವಿರುದ್ಧದ ಹೋರಾಟದ ಯಶಸ್ಸಿನಲ್ಲಿ ಲಾಕ್‌ಡೌನ್ ಕಡ್ಡಾಯವಾಗಿ ಅತ್ಯಗತ್ಯವಾದ ಕ್ರಮವೇನಲ್ಲ ಎಂಬುದು ಲಭ್ಯವಿರುವ ಸಂಗತಿಗಳಿOದ ತಿಳಿಯುತ್ತದೆ. ನೂರಕ್ಕೂ ಹೆಚ್ಚು ರಾಷ್ಟçಗಳು ಲಾಕ್‌ಡೌನ್ ವಿಧಿಸಿದರೂ ಕೆಲವು ಮಾತ್ರ ಯಶಸ್ಸು ಕಂಡವು.

ಚೀನಾದಿಂದ ಹೊರಗೆ ಕೋವಿಡ್-19 ವೈರಾಣು ಕಾಲಿಟ್ಟು ಒಂದು ವರುಷವೇ ಕಳೆದಿದೆ. ಈ ವೈರಸ್ ಕೊನೆಯಾಗುವ ಬಗ್ಗೆ ಹಲವಾರು ಊಹಾಪೋಹಗಳು ಇದ್ದರೂ, ಅದರ ಉಪಟಳ ಸದ್ಯಕ್ಕೆ ಇನ್ನೂ ಮುಂದುವರೆದಿದೆ. ಜುಲೈ 2020ರ ನಂತರ, ವಿಶ್ವದ ಹಲವೆಡೆ ಕಾಣಿಸಿಕೊಂಡಿರುವ ಎರಡನೇ ಅಲೆಯು ಮೊದಲಿಗಿಂತಲೂ ಹೆಚ್ಚು ಹಾನಿಮಾಡುತ್ತಿದೆ. ಈ ನಡುವೆ ಲಸಿಕೆಗಳ ಅಭಿವೃದ್ಧಿ ಮತ್ತು ವಿತರಣೆಯು ಕೊಂಚ ಉಪಶಮನವನ್ನು ನೀಡುತ್ತಿದ್ದು, 2021ರ ಮಧ್ಯಭಾಗದ ಹೊತ್ತಿಗೆ ಪ್ರಪಂಚವು ಸಹಜಸ್ಥಿತಿಗೆ ಮರಳಬಹುದು.

ನೈಸರ್ಗಿಕ ಪ್ರಯೋಗಗಳನ್ನು ಒಪ್ಪುವ ಅರ್ಥಶಾಸ್ತçಜ್ಞರಿಗೆ (ಮತ್ತು ಕಾರ್ಯಾಂಗಕ್ಕೆ), ಹಲವಾರು ಪ್ರಯೋಗಗಳನ್ನು ಪ್ರಸ್ತುತಪಡಿಸಲಾಯಿತು. ವಿಶ್ವದ ಹಲವು ದೇಶಗಳು ಇತಿಹಾಸದಲ್ಲೇ ಮೊದಲ ಬಾರಿಗೆ, ವೈರಾಣು ಸೋಂಕನ್ನು ಹತೋಟಿಯಲ್ಲಿಡುವ ತಂತ್ರಗಾರಿಕೆಯ ಸಲುವಾಗಿ ಉದ್ದೇಶಪೂರ್ವಕ ಲಾಕ್‌ಡೌನಿನ ಮೊರೆಹೋದವು. ವೈರಾಣು ಗೋಚರಿಸಿದ ಮೂಲ ಜಾಗ ಚೀನಾದ ವುಹಾನ್‌ನಿಂದಲೆ, ಈ ತಂತ್ರಗಾರಿಕೆಯು ಶುರುವಾಯಿತು. ಜಗತ್ತಿನ ಎಲ್ಲ ಅಂಗಡಿಗಳು ಮುಚ್ಚಿದಾಗ, ವೈರಾಣು ಕೂಡಾ ಹತೋಟಿಗೆ ಬಂತು. ಆದರೆ ಅದು ತಾತ್ಕಾಲಿಕ ಎಂದು ಈಗ ಬೆಳಕಿಗೆ ಬರುತ್ತಿದೆ.

ಕೋವಿಡ್ ವೈರಾಣುವಿನ ವಿಕಾಸವನ್ನು ಅಭ್ಯಾಸ ಮಾಡಿದರೆ ಈ ಕೆಳಕಂಡ ಅಂಶಗಳನ್ನು ಸೂಚಿಸುತ್ತದೆ:

ಮೊದಲನೆಯದು, ವೈರಸ್ಸಿನ ಬಗೆಗೆ ನಾವು ಏನೆಲ್ಲ ವಿವರಗಳನ್ನು ತಿಳಿಸಬಹುದೋ, ಅದರ ಬಗ್ಗೆ ಹೇಳಲಾಗದ್ದೂ ಸಹ ಅಷ್ಟೇ ಇದೆ.

ಎರಡನೆಯದಾಗಿ, ಲಾಕ್‌ಡೌನ್ ಯಶಸ್ವಿಯಾಗಿ ಕೆಲಸ ಮಾಡುತ್ತದೆ ಮತ್ತು ಮಾಡುವುದಿಲ್ಲ, ಎಂಬ ಎರಡೂ ಮಾತುಗಳೂ ಸತ್ಯ. ಲಾಕ್‌ಡೌನ್ ಗಳು ಯಶಸ್ವಿಯಾದವು (ಕೋವಿಡ್ ಸೋಂಕನ್ನು ತಡೆಯುವಲ್ಲಿ ಲಾಕ್‌ಡೌನ್ ಬಹಳ ಸಮರ್ಥವಾಗಿ ಕೆಲಸ ಮಾಡಿತು ಎಂದು ನಂಬುವವರಿದ್ದಾರೆ) ಎಂಬ ಸಾಂಪ್ರದಾಯಿಕ ನಿರ್ಧಾರಕ್ಕೆ ಬರುವುದಾದರೆ, ಲಾಕ್‌ಡೌನ್ ನಂತರದ ವೈರಸ್ಸಿನ ಹರಡುವಿಕೆಯ ಆಳ ಮತ್ತು ಅಗಲವನ್ನು ವಿವರಿಸುವುದಾದರೂ ಹೇಗೆ? ತದ್ವಿರುದ್ಧವಾಗಿ ಅಂದಾಜಿನ ಪ್ರಕಾರ ಲಾಕ್‌ಡೌನ್ ತೆರವಾದ ನಂತರ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಬೇಕಿತ್ತು. ಆದರೆ ಲಾಕ್ ಡೌನ್ ಸಂದರ್ಭದಲ್ಲಿಯೇ ಗಣನೀಯವಾಗಿ ಹೆಚ್ಚಳ ಕಂಡಿದ್ದು ಏಕೆ?

ಇದಕ್ಕೆ ಒಂದು ಸರಳ, ನಂಬಬಹುದಾದ, ನೇರ ಉತ್ತರವೆಂದರೆ ಸೋಂಕು ಸಾಯುವ ಮುನ್ನವೇ ಲಾಕ್‌ಡೌನ್ ಅನ್ನು ತೆರವುಗೊಳಿಸಿದ್ದು ಸೋಂಕಿತರ ಸಂಖ್ಯೆ ಮತ್ತು ಸಾವುಗಳು ಸ್ಫೋಟಗೊಳ್ಳಲು ಕಾರಣವಾಯಿತು.

ಈ ತರ್ಕದ ಪ್ರಕಾರ ಹೇಳುವುದಾದರೆ, ವೈರಾಣು ಮತ್ತೆ ಕಾಣಿಸಿಕೊಂಡಿಲ್ಲ ಎಂದರೆ, ಸರಿಯಾದ ಸಮಯಕ್ಕೆ ಲಾಕ್‌ಡೌನ್ ತೆರವು ಮಾಡಲಾಗಿದೆ ಎಂದರ್ಥ (ಉದಾ: ನ್ಯೂಜಿಲೆಂಡ್, ತೈವಾನ್, ಥೈಲ್ಯಾಂಡ್). ಪಶ್ಚಿಮ ಯೂರೋಪು, ಅಮೆರಿಕ ಮತ್ತು ಭಾರತ (ಪಟ್ಟಿ ನೋಡಿ) ದೇಶಗಳಲ್ಲಿ ವೈರಾಣು ಮತ್ತೆ ಗೋಚರಿಸಿದೆ ಎಂದರೆ, ನಿಸ್ಸಂಶಯವಾಗಿ ಲಾಕ್‌ಡೌನಿನ ತೆರವು ಬೇಗನೆ ಆಗಿದೆ ಎಂದರ್ಥ.

ಲಾಕ್‌ಡೌನ್ ನಂತರದ ದತ್ತಾಂಶವು ನಂಬಬಹುದಾದ ತೀರ್ಮಾನಗಳಿಗೆ ನಮ್ಮನ್ನು ದೂಡುತ್ತವೆ. ಎಲ್ಲ ಯಶಸ್ಸಿನ ಕಥೆಗಳಲ್ಲಿಯೂ ಒಂದು ಸಾಮಾನ್ಯವಾದ ಮಾದರಿಯಿದೆ. ಎಲ್ಲರೂ ಲಾಕ್ಡೌನ್ ಹೇರಿದರೂ ಯಶಸ್ವಿಯಾದವರು, 3ಖಿ (Testing ,Tracing and Treatment) ಸೂತ್ರವನ್ನು ಕಡ್ಡಾಯವಾಗಿ ಪಾಲಿಸಿದವರು ಮಾತ್ರ. 3-ಖಿ ಸೂತ್ರದ ಪ್ರಕಾರ ಸರಕಾರಗಳು ತಮ್ಮ ವೈದ್ಯಕೀಯ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ಮೊದಲು ಜನರಿಗೆ ಸೋಂಕು ಇದೆಯೇ ಎಂದು ಪರೀಕ್ಷಿಸಿ, ಪಾಸಿಟಿವ್ ಬಂದವರನ್ನು ಸೋಂಕು ಪಸರಿಸದಂತೆ ಆರೋಗ್ಯವಂತರಿAದ ಪ್ರತ್ಯೇಕಿಸಬೇಕು. ನಂತರ, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ, ತಪಾಸಣೆ ಮಾಡಿ; ಸೋಂಕಿತರಿಗೆ ವೈದ್ಯಕೀಯ ಶಿಷ್ಟಾಚಾರಗಳ ಪ್ರಕಾರ ಚಿಕಿತ್ಸೆ ನೀಡಬೇಕು.

ಕೋವಿಡ್ ವಿರುದ್ಧದ ಹೋರಾಟದ ಯಶಸ್ಸಿನಲ್ಲಿ ಲಾಕ್‌ಡೌನ್ ಕಡ್ಡಾಯವಾಗಿ ಅತ್ಯಗತ್ಯವಾದ ಕ್ರಮವೇನಲ್ಲ ಎಂಬುದು ಲಭ್ಯವಿರುವ ಸಂಗತಿಗಳಿAದ ತಿಳಿಯುತ್ತದೆ. ನೂರಕ್ಕೂ ಹೆಚ್ಚು ರಾಷ್ಟçಗಳು ಲಾಕ್‌ಡೌನ್ ವಿಧಿಸಿದರೂ ಕೆಲವು ಮಾತ್ರ

ಯಶಸ್ಸು ಕಂಡವು. ಆದರೆ ಗೆಲುವು ಸಾಧಿಸಿದ ಎಲ್ಲ ದೇಶಗಳೂ 3-ಖಿ ಸೂತ್ರದಲ್ಲಿ ಅಡಗಿರುವ ಪುರಾತನ ಜ್ಞಾನವನ್ನು ಕಡ್ಡಾಯವಾಗಿ ಅನುಸರಿಸಿದ್ದವು. ಈ ಸಂಗತಿಗೆ ಹೆಚ್ಚಿನ ಪ್ರಾಮುಖ್ಯ ದೊರೆಯಬೇಕು.

2020ಕ್ಕಿಂತಲೂ ಮುನ್ನ ವಿಶ್ವವು ಹಲವು ವೈರಸ್ಸುಗಳನ್ನು, ಸಾಂಕ್ರಾಮಿಕ ರೋಗಗಳನ್ನು ಯಶಸ್ವಿಯಾಗಿ ನಿಭಾಯಿಸಿ ಹತೋಟಿಗೆ ತಂದಿದೆ. ಆದರೆ ಯಾವ ದೇಶವೂ ಈ ಹಿಂದೆ ಲಾಕ್‌ಡೌನ್ ಹೇರಿದ್ದ ಬಗ್ಗೆ ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗಿಲ್ಲ. ಅಂದ ಮಾತ್ರಕ್ಕೆ ಆ ವೈರಾಣುಗಳೆಲ್ಲ ಕಡಿಮೆ ಸಾಮರ್ಥ್ಯದವೆಂದು ಅರ್ಥವಲ್ಲ.

1957-58ರ ಸಮಯದಲ್ಲಿ ಅಮೆರಿಕೆಯಲ್ಲಿ ಕಾಣಿಸಿಕೊಂಡ ಪ್ಲೂ ಸೋಂಕನ್ನು ನಿಭಾಯಿಸುವಲ್ಲಿ ತಗೆದುಕೊಂಡಿದ್ದ ಉಪಕ್ರಮಗಳನ್ನು ಕೋವಿಡ್-19 ಬಂದಾಗ ಚರ್ಚಿಸಲಾಯಿತು. ಆ ದಿನಗಳನ್ನು ಅಲ್ಲಿಯವರೆಗೂ ಅಮೆರಿಕ ಕಂಡ ಅತ್ಯಂತ ದುರ್ಭರ ದಿನಗಳೆಂದು ಕರೆಯಲಾಗಿದೆ. ಆದರೂ, ಡಿ.ಎ.ಹೆಂಡರ್ಸನ್‌ರವರ ಸಮರ್ಥ ನೇತೃತ್ವದಲ್ಲಿ ಅಲ್ಲಿನ ಸ್ಥಳೀಯ ಪ್ರಾಧಿಕಾರಗಳು ಲಾಕ್‌ಡೌನ್ ಮಾಡದೆಯೇ ಫ್ಲೂ ವನ್ನು ಯಶಸ್ವಿಯಾಗಿ ನಿರ್ವಹಿಸಿದುವು.

ಹಾಗಾದರೆ ಅವರು ಅನುಸರಿಸಿದ ತಂತ್ರಗಳೇನು? ಸಾಂಕ್ರಾಮಿಕ ರೋಗಗಳ ವಿಚಾರದಲ್ಲಿ ಸಾವಿರಾರು ವರ್ಷಗಳಿಂದ ಅನುಸರಿಸುತ್ತ ಬಂದ ಅದೇ ಪುರಾತನ ಅಭ್ಯಾಸವೇ- ಸೋಂಕಿತ ವ್ಯಕ್ತಿಯನ್ನು ಆರೋಗ್ಯವಂತರಿAದ ಪ್ರತ್ಯೇಕಿಸುವುದು, ರೋಗಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಫ್ಲೂ ರೋಗವು ಉಚ್ಛಾçಯ ಸ್ಥಿತಿಯಲ್ಲಿದ್ದ 1957-58ರ ಸಮಯದಲ್ಲಿಯೂ ಸಹ ಕೆಲವು ಶಾಲೆಗಳನ್ನು ಮುಚ್ಚಿ, ಕೆಲವನ್ನು ತೆರೆಯಲಾಗಿತ್ತು; ಕಚೇರಿ-ಸಾರ್ವಜನಿಕ ಸ್ಥಳಗಳನ್ನೂ ಸಹ. ಆದರೆ ಲಾಕ್‌ಡೌನ್ ಮಾತ್ರ ಮಾಡಿರಲಿಲ್ಲ. 3-ಖಿ ಸೂತ್ರವು ಇದರ ಆಧುನಿಕ ಅವತರಣಿಕೆ ಅಷ್ಟೇ.

ವಿಶ್ವದ ಆಯ್ದ ದೇಶಗಳಲ್ಲಿ ಕೋವಿಡ್-19 ಸೋಂಕಿನಿAದಾದ ಸಾವುಗಳ ಸಂಖ್ಯೆಯ ಅಂಕಿ ಅಂಶವನ್ನು ಪಟ್ಟಿಯಲ್ಲಿ ನೀಡಲಾಗಿದೆ. ಇಲ್ಲಿ ಮುಖ್ಯವಾಗಿ ಮೂರು ದಿನಾಂಕಗಳನ್ನು ಆಯ್ದುಕೊಳ್ಳಲಾಗಿದೆ. ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ಅಂತ್ಯ ಹಾಗೂ 11 ಜನೆವರಿ 2021. ಓದುಗರು ಬಿಡುವಿನ ಸಮಯದಲ್ಲಿ ಹೋಲಿಕೆಗಳನ್ನು ಗಮನಿಸಿಕೊಳ್ಳಬಹುದು. ನಾವು ಸೆಪ್ಟೆಂಬರ್‌ನಿAದ ಇಲ್ಲಿಯವರೆಗಿನ ಭಾರತದ ಮಾದರಿಯನ್ನು ಮಾತ್ರ ಚರ್ಚೆಗೆ ಎತ್ತುಕೊಂಡಿದ್ದೇವೆ.

ಸೆಪ್ಟೆAಬರ್ ತಿಂಗಳ ಕೊನೆಯಂತೂ ಚಿಂತಾಜನಕವಾಗಿತ್ತು. ಮಾಧ್ಯಮಗಳು ಮತ್ತು ತಜ್ಞರು ಭಾರತದ ಕೋವಿಡ್-19ನ ಕೆಟ್ಟ ನಿರ್ವಹಣೆಯ ಬೆನ್ನುಬಿದ್ದಿದ್ದರು. ಈ ವೈಫಲ್ಯಗಳ ಬಗ್ಗೆಯೇ ಹೊಸ ಹೊಸ ಸಿದ್ಧಾಂತಗಳು ಹುಟ್ಟಿದವು. ನಿಜವಾಗಿಯೂ ಏನು ಸಂಭವಿಸುತ್ತಿದೆ ಎಂದು ಅಂದಾಜಿಸಿದವರು ತುಂಬಾ ವಿರಳ, ಯಾರೂ ಇಲ್ಲವೆಂದೇ ಹೇಳಬಹುದು.

ಸೆಪ್ಟೆಂಬರ್ ತಿಂಗಳ ಕೊನೆಯ ಹೊತ್ತಿಗೆ ಪ್ರತಿ ಹತ್ತು ಲಕ್ಷ ಜನರಲ್ಲಿ 4712 ಜನರಿಗೆ ಸೋಂಕು ತಗುಲಿತ್ತು (ಜಾಗತಿಕ ಹಾಗೂ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ದೇಶಗಳ ಒiಜಜಟe ಇಚಿsಣ ಚಿಟಿಜ ಓoಡಿಣh ಂಜಿಡಿiಛಿಚಿ -ಒಇಓಂ ಸರಾಸರಿ 4486). ಜನವರಿ 11ರ ಹೊತ್ತಿಗೆ, ಒಇಓಂ ಮತ್ತು ಜಾಗತಿಕ ಸರಾಸರಿಯು 12398 ಮತ್ತು 12526 ಇದ್ದರೆ, ಭಾರತದ ಸರಾಸರಿಯು ಇದರ 1/3 ರಷ್ಟಿದೆ.

ಸೋಂಕಿತರ ಅಂಕಿ ಸಂಖ್ಯೆಗಳಷ್ಟೇ ಸಾವಿನ ಪ್ರಮಾಣದಲ್ಲಿ ಸಾಮ್ಯತೆಯಿದ್ದರೂ, ಒಂದು ವ್ಯತ್ಯಾಸವಿದೆ. ಭಾರತದಲ್ಲಿ ಸಾವಿನ ಸಂಖ್ಯೆ ಬಹಳ ಕಡಿಮೆ. ಅದು ಪ್ರತಿ ದಶಲಕ್ಷಕ್ಕೆ 113 ಇದ್ದರೆ, ಜಾಗತಿಕವಾಗಿ 271 ಮತ್ತು ಒಇಓಂ ದೇಶಗಳಲ್ಲಿ 274 ಇದೆ. ಪೂರ್ವ ಏಷಿಯಾ ಮತ್ತು ಆಫ್ರಿಕಾದ ಉಪ ಸಹಾರನ್ ದೇಶಗಳಲ್ಲಿ ಸಾವುಗಳ ಸಂಖ್ಯೆಯAತೂ ತೀರಾ ವಿರಳ ಎಂಬುದನ್ನು ಗಮನಿಸಬೇಕು.

ಇದರಿಂದ ಎರಡು ನಿರ್ಧಾರಗಳಿಗೆ ಬರಬಹುದು. ಮೊದಲನೆಯದಾಗಿ ಬಡ ರಾಷ್ಟçಗಳಿಗಿಂತಲೂ ಶ್ರೀಮಂತ-ಮುAದುವರೆದ ರಾಷ್ಟçಗಳಲ್ಲಿ ಕೋವಿಡ್ ಬಹಳಷ್ಟು ಹಾನಿಮಾಡಿದೆ. ಲಭ್ಯವಿರುವ ವಿವರಣೆಗಳ ಪ್ರಕಾರ ಒಂದು ಸಾಧ್ಯತೆಯೆಂದರೆ; ಬಡ ದೇಶಗಳು ರೋಗಗಳು ಮತ್ತು ಕಳಪೆ ನೈರ್ಮಲ್ಯಗಳೊಂದಿಗೆ ಬಹುಕಾಲ ಜೀವಿಸುತ್ತಿರುವ ಕಾರಣ ಆ ಜನರಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಇದ್ದಿರಬಹುದು. ಎರಡನೆಯದಾಗಿ ಚೀನಾ ಹೊರತು ಪಡಿಸಿ ಪೂರ್ವ ಏಷಿಯಾ ದೇಶಗಳು ಅಷ್ಟಾಗಿ ತೊಂದರೆಗೊಳಗಾಗಿಲ್ಲ. ಹಕ್ಕಿ ರೋಗ ದಂತಹ `ಫ್ಲೂ’ ರೋಗಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಅವುಗಳಿಗೆ ಸಹಾಯ ಮಾಡಿರಬಹುದು.

ಭಾರತವು ಸಮೂಹ ರೋಗನಿರೋಧಕ ಶಕ್ತಿಯತ್ತ ದಾಪುಗಾಲು ಹಾಕುತ್ತಿರುವ ಬಗ್ಗೆಯೂ ಒಂದು ಟಿಪ್ಪಣಿಯನ್ನು ಮಾಡಬೇಕಾಗುತ್ತದೆ. ಡಿಸೆಂಬರಿನಲ್ಲಿ ನಡೆದ Iಖಂಆಇ ಸಮ್ಮೇಳನದಲ್ಲಿ ನಾವು ಮಂಡಿಸಿದ ಸಂಶೋಧನಾ ಪ್ರಬಂಧದ ಪ್ರಕಾರ, ಆಗಿದ್ದ 12 ಮಿಲಿಯನ್ ಸೋಂಕಿತರ ಸಂಖ್ಯೆಯು ಏಪ್ರಿಲ್‌ನ ಹೊತ್ತಿಗೆ ಕೊನೆಯಾಗಬಹುದು ಎಂಬುದು ನಮ್ಮ ಅಂದಾಜಾಗಿತ್ತು. ಆದರೆ ಈಗಿರುವ 10.5 ಮಿಲಿಯನ್ ಸೋಂಕಿತರ ಸಂಖ್ಯೆಯು ಮೇ ಅಥವಾ ಜೂನ್‌ತಿಂಗಳೊಳಗೆ ಕೊನೆಯಾಗುತ್ತದೆ. ಲಭ್ಯವಿರುವ ರಾಜ್ಯವಾರು ಮಾಹಿತಿಯ ಪ್ರಕಾರ, ಭಾರತದ ಹಲವು ರಾಜ್ಯಗಳು (ಆಂಧ್ರ ಪ್ರದೇಶ, ಗೋವಾ, ಅಸ್ಸಾಂ, ಬಿಹಾರ, ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರ) ಆಗಲೇ ಸಮೂಹ ರೋಗನಿರೋಧಕ ಶಕ್ತಿಯ ಹಂತವನ್ನು ತಲುಪಿದ್ದರೆ, ಮಹಾರಾಷ್ಟç ಮತ್ತು ಕರ್ನಾಟಕದಂತಹ ಇನ್ನುಳಿದ ರಾಜ್ಯಗಳು ಈ ಹಂತಕ್ಕೆ ದಾಪುಗಾಲು ಹಾಕುತ್ತಿವೆ.

ಕೊನೆಯದಾಗಿ, ಈಗ ಲಭ್ಯವಿರುವ ರಾಜ್ಯಗಳ ದತ್ತಾಂಶದ ಪ್ರಕಾರ ಭಾರತದಲ್ಲಿ ಲಸಿಕೆಗಳು ವಿಸ್ತöÈತವಾಗಿ ಲಭ್ಯವಾಗುವ ಮುನ್ನವೇ ಸಮೂಹ ರೋಗ ನಿರೋಧಕ ಶಕ್ತಿಯ ಹಂತವನ್ನು ತಲುಪುತ್ತದೆ ಎಂಬ ನಿರ್ಣಯಕ್ಕೆ ಬರಬಹುದೇ?

ಹಲವು ಪೂರ್ವ ಏಷ್ಯಾ ದೇಶಗಳು (ಉದಾ: ವಿಯೆಟ್ನಾಂ, ತೈವಾನ್, ಕೊಲಂಬಿಯಾ, ಲಾವೇಸ್, ಚೀನಾ ಇತ್ಯಾದಿ) ಮತ್ತು ಆಫ್ರಿಕಾದ ಉಪ ಸಹಾರನ್ ದೇಶಗಳು ಕೋವಿಡ್ ಸೋಂಕನ್ನು ಮೊದಲ ಹಂತದಲ್ಲೇ ನಿಯಂತ್ರಿಸಿದ ಕಾರಣ ಸಮೂಹ ರೋಗ ನಿರೋಧಕ ಶಕ್ತಿಯ ಮೇಲಿನ ಅವಲಂಬನೆಯ ಪ್ರಮೇಯವೇ ಉದ್ಭವಿಸಲಿಲ್ಲ.

ಆದರೆ ಈ ಮುಂಚೆ ಸೋಂಕು ಸ್ಫೋಟಗೊಂಡು ಈಗ ಇಳಿಮುಖವಾಗುತ್ತಿರುವ ದೇಶಗಳಿಗೆ ಹೋಲಿಸಿದರೆ ಭಾರತವು ಮೇಲುಗೈ ಸಾಧಿಸಿದೆ. ಲಾಕ್ಡೌನ್ ಮತ್ತು ಗಣನೀಯವಾಗಿ ತಗ್ಗುತ್ತಿರುವ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣಗಳು, ಖಂಡಿತವಾಗಿಯೂ ವಿಸ್ತöÈತ ಅಧ್ಯಯನದ ಅರ್ಹತೆಯನ್ನು ಹೊಂದಿವೆ.

ಮೂಲ: ದ ಇಂಡಿಯನ್ ಎಕ್ಸ್ಪ್ರೆಸ್

*ಸುರ್ಜಿತ್ ಭಲ್ಲಾ ಅವರು ಐ.ಎಂ.ಎಫ್. ಕಾರ್ಯನಿರ್ವಾಹಕ ನಿರ್ದೇಶಕರು; ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭೂತಾನ್ ಪ್ರತಿನಿಧಿ. ಕರನ್ ಭಾಸಿನ್ ಅವರು ನವದೆಹಲಿಯಲ್ಲಿ ನೆಲೆಸಿರುವ ನೀತಿನಿರೂಪಣೆ ಸಂಶೋಧಕರು.

Leave a Reply

Your email address will not be published.