ಭಾರತದ ರಾಜಕೀಯ ಚರಿತ್ರೆ ಬದಲಿಸಿದ ವಿವಾದ!

ಈ ಸಂಕಷ್ಟದ ಅತ್ಯಂತ ಆಶಾದಾಯಕ ಸಂಗತಿಯೆಂದರೆ; ನಮ್ಮ ವಿದ್ಯಾರ್ಥಿಗಳು ಪ್ರಜಾಪ್ರಭುತ್ವವನ್ನು ನಮಗೆ ತಿಳಿಹೇಳಿಕೊಡುತ್ತಿರುವುದು, ಅಂಂ ವಿರೋಧಿಸುವ ಮುಸ್ಲಿಮ್‍ರು ದೇಶಭಕ್ತಿ ಹಾಗೂ ಸೌಹಾರ್ದದ ಪರವಾಗಿ ಗಟ್ಟಿಯಾದ ನಿಲುವನ್ನು ತೆಗೆದುಕೊಂಡಿರುವುದು ಮತ್ತು ಭಾರತೀಯ ಮಹಿಳೆಯರು ಚಳವಳಿಯ ಮುಂಚೂಣಿಯಲ್ಲಿರುವುದು.

ರಾಜೇಂದ್ರ ಚೆನ್ನಿ

ಚರ್ಚೆಗೆ ಹಿನ್ನೆಲೆಯಾಗಿ ಒಂದಿಷ್ಟು ಹಿಂದೆ ಹೋಗಿ ವಸಾಹತುಶಾಹಿ ಕಾಲದಲ್ಲಿ ರಾಷ್ಟ್ರೀಯತೆ ಹಾಗೂ ನಾಗರಿಕತ್ವದ ವಿವಿಧ ಮಾದರಿಗಳ ಚರ್ಚೆಯನ್ನು ಹಾಗೂ ಆ ಮಾದರಿಗಳ ಹಿಂದೆ ಇದ್ದ ರಾಜಕೀಯ ಚಿಂತನೆಗಳನ್ನು ಅವಲೋಕಿಸಬೇಕಾಗಿದೆ. ದೇಶ, ನಾಡು ಸಾಮ್ರಾಜ್ಯ ಇವುಗಳ ಪರಿಕಲ್ಪನೆಗಳು ಮೊದಲಿನಿಂದಲೇ ಇದ್ದರೂ ರಾಷ್ಟ್ರದ ಕಲ್ಪನೆ ಇತಿಹಾಸದಲ್ಲಿ ಹೊಸದು. ಪಶ್ಚಿಮದಲ್ಲಿ ಕೂಡ 15ನೇ ಶತಮಾನದ ನಂತರದ್ದು. ದೇಶದ ನಾಗರಿಕನಾಗುವುದೆಂದರೆ ಏನು ಹೇಗೆ ಎನ್ನುವ ಪರಿಕಲ್ಪನೆಗಳು ಮೊದಲಿನಿಂದಲೇ ಇದ್ದರೂ ರಾಷ್ಟ್ರದ ಕಲ್ಪನೆ ಇತಿಹಾಸದಲ್ಲಿ ಹೊಸದು.

ಇಂದಿನ ಭಾಷೇಯಲ್ಲಿ ಹೇಳುವುದಾದರೆ ಇವು ಹಿಂದೆ fuzzy ಆಗಿದ್ದವು. ಆದರೆ ಆಧುನಿಕತೆ, ಮುದ್ರಣ ಸಂಸ್ಕೃತಿ, ಜ್ಞಾನಪರ್ವದ ತರ್ಕಕೇಂದ್ರಿತ ಚಿಂತನೆ ಮತ್ತು ಈ ಎಲ್ಲಾ ವಿದ್ಯಮಾನಗಳಿಂದಾಗಿ ಬೆಳೆಯತೊಡಗಿದ ಭಾಷೇ, ರಾಷ್ಟ್ರ, ಪ್ರಭುತ್ವ ಇವು ನಿರ್ದಿಷ್ಟವಾದ ರೂಪವನ್ನು ಪಡೆಯತೊಡಗಿದವು. ಅಲ್ಲದೆ ಯೂರೋಪಿನ ಪ್ರಮುಖ ದೇಶಗಳಲ್ಲಿ ಒಂದು ಭಾಷೇ, ಒಂದು ಧರ್ಮ, ಒಂದು ಸಂಸ್ಕೃತಿ ಎಂದು ಹೇಳಬಹುದಾದ ಸಂದರ್ಭವಿದ್ದುದರಿಂದ ಅಲ್ಲಿ ರಾಷ್ಟ್ರದ ಕಲ್ಪನೆಯು ಏಕಾಕೃತಿಯದಾಗಿತ್ತು. ಅಂದರೆ ಹಾಗೆಂದು ಸಮರ್ಥಿಸುವ ಅನೇಕ ಸಂಕಥನಗಳು ಹುಟ್ಟಿಕೊಂಡವು.

ವಾಸ್ತವವಾಗಿ ನಮಗೆ ಗೊತ್ತಿರುವ ಪ್ರತಿಯೊಂದು ನಾಗರಿಕತೆಯಲ್ಲಿ ‘ನಾವು’ ಮತ್ತು ‘ಅನ್ಯರು’ ಈ ವಿರುದ್ಧ ಪರಿಕಲ್ಪನೆಗಳು ಆರಂಭದಿಂದಲೇ ಇದ್ದವು. ಇವುಗಳಿಂದಾಗಿ ಆರ್ಥಿಕವಾಗಿ, ರಾಜಕೀಯವಾಗಿ ಅಥವಾ ಸಾಂಸ್ಕೃತಿಕವಾಗಿ ‘ನಾವು’ ಪ್ರಬಲವಾಗಿದ್ದು ‘ಅನ್ಯ’ರನ್ನು ಅಂಚಿಗೆ ತಳ್ಳುವುದು ಸಹಜವಾಗಿ, ಅನೂಚಾನವಾಗಿ ನಡೆದುಕೊಂಡು ಬಂದಿದೆ. ಹೀಗಾಗಿ ಸಂಸ್ಕೃತಿಗಳು, ನಾಗರಿಕತೆಗಳು ತಮ್ಮ ಅನನ್ಯತೆಯನ್ನು ಗುರುತಿಸುವಾಗ ‘ಅನ್ಯ’ರಿಂದ ತಾವು ಹೇಗೆ ಭಿನ್ನ ಎನ್ನುವುದನ್ನು ಅವಲಂಬಿಸಿರುತ್ತವೆ. ಆಧುನಿಕ ಕಾಲದಲ್ಲಿ ರಾಷ್ಟ್ರದ ಕಲ್ಪನೆಯ ಜೊತೆಗೆ ಈ ಅನ್ಯರನ್ನು ಗುರುತಿಸುವುದು ಮುಖ್ಯವಾಗುತ್ತದೆ. ಈ ಅನ್ಯರು ದೇಶದ ಗಡಿಗಳ ಆಚೆಗೆ ಇರುವವರು ಆಗಿರಬಹುದು; ಅಥವಾ ದೇಶದೊಳಗಿದ್ದೂ ಪೂರ್ಣಪ್ರಮಾಣದ ನಾಗರಿಕತ್ವಕ್ಕೆ ಅರ್ಹರಲ್ಲದವರೂ ಇರಬಹುದು. ಉದಾಹರಣೆಗೆ ಪ್ಲೇಟೋನ ಆದರ್ಶ ಪ್ರಜಾಪ್ರಭುತ್ವದಲ್ಲಿ ಗುಲಾಮರು ಮತ್ತು ಹೆಂಗಸರು ಪೂರ್ಣಪ್ರಮಾಣದ ನಾಗರಿಕರಲ್ಲ. ಆದರೂ ಅವರು ಗ್ರೀಕರು. ಆದರೆ ಗಡಿಯಾಚೆಗಿನ ಪಾರಸಿಕರು ಸಂಪೂರ್ಣವಾಗಿ ಅನ್ಯರು. ಆಧುನಿಕ ರಾಷ್ಟ್ರದ ಪರಿಕಲ್ಪನೆಯು ಜರ್ಮನ್ ಚಿಂತಕರಲ್ಲಿ (ವಿಶೇಷವಾಗಿ header ನಲ್ಲಿ) ತಾತ್ವಿಕ ಸಮರ್ಥನೆ ಪಡೆಯಿತು.

ಭೂಮಿಯ ಸರ್ವೆ, ಗ್ಯಾಜೆಟೀಯರ್‍ಗಳ ಮೂಲಕ ಭೂಗೋಳ, ಸಮಾಜ, ಸಂಸ್ಕೃತಿಗಳ ವರ್ಣನೆ, ಕಾಯಿದೆ, ಕಾನೂನು, ಕಂದಾಯ, ಭೂ ಒಡೆತನ ಇವುಗಳ ಮೂಲಕ ಶ್ರೇಣೀಕೃತ ಆದರೆ ಖಚಿತ ರಚನೆಯುಳ್ಳ ಸಮಾಜ ಇವೆಲ್ಲವೂ ಈ ವಿದ್ಯಮಾನದಲ್ಲಿ ಒಳಗೊಂಡಿದ್ದವು.

ವಸಾಹತುಶಾಹಿಯು ಅದು ತನ್ನ ಉದ್ದೇಶವಾಗಿರದಿದ್ದರೂ ಭಾರತರಾಷ್ಟ್ರವೆನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕಿತು ಮತ್ತು ಪ್ರಬಲಗೊಳಿಸಿತು. ಜಗತ್ತಿನಲ್ಲಿಯೆ ಪ್ರಬಲ ಸಾಮ್ರಾಜ್ಯಶಾಹಿಯಾಗಿದ್ದ ಇಂಗ್ಲೆಂಡ್ ತನ್ನ ಆಡಳಿತಾತ್ಮಕ ಅನುಕೂಲಕ್ಕಾಗಿ ಭಾರತ ಭೂಖಂಡದ ಬಹುಪಾಲು ಭಾಗವನ್ನು ಒಂದು ವಸಾಹತುಶಾಹಿ ರಾಷ್ಟ್ರವನ್ನಾಗಿ ಪರಿವರ್ತಿಸಿತು. ಈ ವಿದ್ಯಮಾನವು ಅತ್ಯಂತ ಬಹುಮುಖಿಯಾದುದು ಮತ್ತು ಸಂಕೀರ್ಣವಾದುದು. ಭೂಮಿಯ ಸರ್ವೆ, ಗ್ಯಾಜೆಟೀಯರ್‍ಗಳ ಮೂಲಕ ಭೂಗೋಳ, ಸಮಾಜ, ಸಂಸ್ಕೃತಿಗಳ ವರ್ಣನೆ, ಕಾಯಿದೆ, ಕಾನೂನು, ಕಂದಾಯ, ಭೂ ಒಡೆತನ ಇವುಗಳ ಮೂಲಕ ಶ್ರೇಣೀಕೃತ ಆದರೆ ಖಚಿತ ರಚನೆಯುಳ್ಳ ಸಮಾಜ ಇವೆಲ್ಲವೂ ಈ ವಿದ್ಯಮಾನದಲ್ಲಿ ಒಳಗೊಂಡಿದ್ದವು.

ಪಶ್ಚಿಮ ಮಾದರಿಯ, ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಮೂಲಕ ಹುಟ್ಟಿಕೊಂಡ ಭಾರತದ ಸ್ಥಳೀಯ ಮುಂಚೂಣಿ ವರ್ಗವು (ಶಿಕ್ಷಿತ ಮಧ್ಯಮ ವರ್ಗ) ಈ ವಸಾಹತು ರಾಷ್ಟ್ರದ ಹಂದರವನ್ನು ಬಳಸಿಕೊಂಡು ಆಧುನಿಕ, ರಾಜಕೀಯ ವ್ಯವಸ್ಥೆಯಾದ ರಾಷ್ಟ್ರದ ಪರಿಕಲ್ಪನೆಯನ್ನು ಕಟ್ಟಿಕೊಳ್ಳುವುದು ತಡವಾಗಲಿಲ್ಲ, ಸ್ವರಾಜ್ಯ, ಹೋಮ್ ರೂಲ್, ಸ್ವಾಯತ್ತ ಆಡಳಿತ ಇವೇ ಮುಂತಾದ ಪರಿಕಲ್ಪನೆಗಳು ರಾಷ್ಟ್ರೀಯತೆಯ ಪರಿಕಲ್ಪನೆಗೆ ಆಧಾರವಾದವು. ರಾಷ್ಟ್ರ, ರಾಷ್ಟ್ರೀಯತೆಗಳ ಅಗಾಧವಾದ ಬೆಳವಣಿಗೆಯಲ್ಲಿ ಮೂರು-ನಾಲ್ಕು ಮಾದರಿಗಳು ಮುನ್ನೆಲೆಗೆ ಬಂದವು.

ಗಾಂಧಿಯವರು ಹಿಂದ್ ಸ್ವರಾಜ್ (1909) ಕೃತಿಯ ಆರಂಭದಲ್ಲಿ ಚರ್ಚಿಸುವ ಉಗ್ರರಾಷ್ಟ್ರವಾದಿಗಳ ಸೈದ್ಧಾಂತಿಕ ಮಾದರಿ. ರಾಷ್ಟ್ರದ ಈ ಮಾದರಿಯನ್ನು ಗಾಂಧಿ ಇಂಗ್ಲೆಂಡ್‍ನಲ್ಲಿ ಭೇಟಿಯಾದ ವಿ.ಡಿ.ಸಾವರ್ಕರ್ ಮತ್ತು ಅವರನ್ನು ಬೆಂಬಲಿಸಿದ ಶ್ಯಾಮ್‍ಜಿ ಕೃಷ್ಣ ವರ್ಮಾರು ಚಾಲ್ತಿಗೆ ತರುತ್ತಿದ್ದ ಮಾದರಿ. ಗಾಂಧಿ ಹೇಳುವಂತೆ ಈ ಗುಂಪು ಮೂಲತಃ ಇಂಗ್ಲೆಂಡ್ ಹಾಗೂ ಪಶ್ಚಿಮವು ಒಪ್ಪಿಕೊಂಡ ಮಾದರಿ. ವ್ಯತ್ಯಾಸವೆಂದರೆ ಆಳ್ವಿಕೆಯು ಕೈಯಲ್ಲಿರುವ ಬ್ರಿಟಿಷ್ರನ್ನು ಹಿಂಸಾತ್ಮಕ ಹೋರಾಟದ ಮೂಲಕ ಹೊರಹಾಕಿ ನಾವು ಆಳ್ವಿಕೆ ನಡೆಸುವುದು. ಇದು ಬಹುಮುಖ್ಯವಾದ ಒಳನೋಟವಾಗಿದೆ. ಇಂದಿಗೂ ಬಲಪಂಥೀಯ ಚಿಂತನೆಯಲ್ಲಿ ರಾಷ್ಟ್ರದ ಪರಿಕಲ್ಪನೆಯು ಮೂಲದಲ್ಲಿ ಪಶ್ಚಿಮದ ಪರಿಕಲ್ಪನೆಯನ್ನೇ ಒಪ್ಪಿಕೊಳ್ಳುತ್ತದೆ. ಅಂದರೆ ಒಂದು ಧರ್ಮ, ಒಂದು ಭಾಷೆ, ಒಂದು ಸoಸ್ಕೃತಿಯನ್ನು ಬಯಸುವ ಪರಿಕಲ್ಪನೆ ಇದಾಗಿದೆ. ಆದರೆ ಭಾರತವು ಈಗಾಗಲೇ ಚರಿತ್ರೆಯಿಂದಾಗಿ ಬಹುಭಾಷಿಕ, ಬಹುಧರ್ಮೀಯ, ಬಹುಸಂಸ್ಕೃತಿಯ
ದೇಶವಾಗಿದೆ. ಅದನ್ನು ಒಂದು ರಾಷ್ಟ್ರವನ್ನಾಗಿ ಹೇಗೆ ಮಾಡುವುದು?

ಭಾರತವೆನ್ನುವ ಭೂಪ್ರದೇಶದ ನಿವಾಸಿಗಳಾಗಿದ್ದರು. ಈ ಸಂದಿಗ್ಧಕ್ಕೆ ಪರಿಹಾರವೆಂದರೆ ಅವರಿಗೆ ಈ ಹಿಂದೂ ರಾಷ್ಟ್ರದಲ್ಲಿ ಪೂರ್ಣಪ್ರಮಾಣದ ನಾಗರಿಕತ್ವವನ್ನು ಕೊಡಬಾರದು. ಅವರಿಗೆ ಭಾರತವು ಪಿತೃಭೂಮಿ ಮತ್ತು ಪುಣ್ಯಭೂಮಿ ಎರಡೂ ಆಗಿಲ್ಲವಾದ್ದರಿಂದ ಅವರು ಇಲ್ಲಿ ಕೇವಲ ಅತಿಥಿಗಳು, ಮತ್ತು ದ್ವಿತೀಯ ದರ್ಜೆಯ ನಾಗರಿಕರು.

ಈ ದೇಶದ ಮೂಲ ಸ್ವಭಾವವಾದ ಬಹುಮುಖತೆಯನ್ನು ಸೈದ್ಧಾಂತಿಕವಾಗಿ ತಿರಸ್ಕರಿಸಿ ಒಂದು ಭಾಷೆ -ಸಂಸ್ಕೃತ, ಒಂದು ಸಂಸ್ಕೃತಿ -ಭಾರತೀಯ ಸಂಸ್ಕೃತಿ, ಒಂದು ಧರ್ಮ -ಹಿಂದೂ ಧರ್ಮವೆಂದು ವಾದಿಸುವುದು. ವಿವರಿಸಿ ಹೇಳುವುದಾದರೆ ಸಾವರ್ಕರ್ ಅವರ ಸಮಸ್ಯೆಯೆಂದರೆ ಅವರು ಪ್ರತಿಪಾದಿಸುವ ರಾಷ್ಟ್ರದ ಪರಿಕಲ್ಪನೆಗೆ ಅವಶ್ಯಕವಾದ ಒಂದು ಧವರ್i ಇಲ್ಲಿರಲಿಲ್ಲ. ಅಪಾರ ಸಂಖ್ಯೆಯ ಮುಸ್ಲಿಮ್ ಧರ್ಮೀಯರು ಮತ್ತು ಕ್ರಿಶ್ಚಿಯನ್ ಧರ್ಮೀಯರು ಇಲ್ಲಿದ್ದರು. ಅವರು ಸಾವರ್ಕರ್ ರಾಷ್ಟ್ರಕ್ಕೆ ಅನ್ಯರಾಗಿದ್ದರು. ಹೀಗಾಗಿ ಅವರು ರಾಷ್ಟ್ರದ ಒಂದು ಧರ್ಮಕ್ಕೆ (ಹಿಂದೂ) ಅನ್ಯರು ಆಗಿದ್ದರು. ಆದರೆ ಭಾರತವೆನ್ನುವ ಭೂಪ್ರದೇಶದ ನಿವಾಸಿಗಳಾಗಿದ್ದರು. ಈ ಸಂದಿಗ್ಧಕ್ಕೆ ಪರಿಹಾರವೆಂದರೆ ಅವರಿಗೆ ಈ ಹಿಂದೂ ರಾಷ್ಟ್ರದಲ್ಲಿ ಪೂರ್ಣಪ್ರಮಾಣದ ನಾಗರಿಕತ್ವವನ್ನು ಕೊಡಬಾರದು. ಅವರಿಗೆ ಭಾರತವು ಪಿತೃಭೂಮಿ ಮತ್ತು ಪುಣ್ಯಭೂಮಿ ಎರಡೂ ಆಗಿಲ್ಲವಾದ್ದರಿಂದ ಅವರು ಇಲ್ಲಿ ಕೇವಲ ಅತಿಥಿಗಳು, ಮತ್ತು ದ್ವಿತೀಯ ದರ್ಜೆಯ ನಾಗರಿಕರು. ಅವರು ಬಹುಸಂಖ್ಯಾತ ಹಿಂದೂಗಳ ತಹಬಂದಿಯಲ್ಲಿ ಇರಬೇಕು ಅಲ್ಲದೆ ತಮ್ಮ ಧರ್ಮದ ಅನನ್ಯತೆಯನ್ನು ತೊರೆಯಬೇಕು. ಇಂದು ಭಾರತದಲ್ಲಿ ಪರ ವಿರೋಧದ ಅಲೆಗಳಲ್ಲಿ ಸಿಕ್ಕಿರುವ NRC,CAA ಇತ್ಯಾದಿಗಳ ಮೂಲ ಇರುವುದು ಈ ಸಾವರ್ಕರ್ ಪ್ರಣೀತ ರಾಷ್ಟ್ರವಾದದಲ್ಲಿ.

NRC ಗೆ ಸಂವಿಧಾನದಲ್ಲಿಯೇ ಅವಕಾಶವಿದೆ, ಆಸಾಮ್‍ನಲ್ಲಿ ಸರ್ವೋಚ್ಚ ನ್ಯಾಯಾಲಯವೇ NRC ಆದೇಶಿಸಿತು. ಈ ಮುಂತಾದ ವಾದಗಳೆಲ್ಲ ಅರ್ಥವಿಲ್ಲದ ವಾದಗಳು. ಸಾವರ್ಕರ್ ಅವರ ಮುಸ್ಲಿಮ್, ಕ್ರಿಶ್ಚಿಯನ್ ‘ಅನ್ಯ’ ದ್ವೇಷದ, ಹಿಂದೂ ಬಹುಸಂಖ್ಯಾತ ರಾಷ್ಟ್ರದ ಪರಿಕಲ್ಪನೆಯ ಅನುಷ್ಟನವೊಂದೇ NRC,CAACಗಳ ಹಿಂದೆ ಇರುವುದು. ನಾನು ಹೇಳಿದ್ದು ಸರಿಯಲ್ಲ ಎನ್ನುವುದಾದರೆ ಮೋದಿ, ಶಹಾ ಮತ್ತು ಬಿ.ಜೆ.ಪಿ., “ನಾವು ಸಾವರ್ಕರ್ ರಾಷ್ಟ್ರವಾದವನ್ನು ತಿರಸ್ಕರಿಸುತ್ತೇವೆ. ಆ ವಾದವು ಪ್ರಜಾಪ್ರಭುತ್ವ ವಿರೋಧಿ. ಅದನ್ನು ತ್ಯಜಿಸಿ NRC ಮಾಡುತ್ತೇವೆ” ಎಂದು ಹೇಳಿಕೆ ಕೊಡಲಿ. ಪ್ರಶ್ನೆ ಇರುವುದು ಇಲ್ಲಿಯೇ. ಸಾವರ್ಕರ್ ಅವರ ರಾಷ್ಟ್ರವಾದವನ್ನು ಯಾವುದೇ ಆಧುನಿಕ, ಪ್ರಜಾಪ್ರಭುತ್ವವಾದಿ ರಾಷ್ಟ್ರ ಒಪ್ಪಲು ಸಾಧ್ಯವೇ ಇಲ್ಲ. ಅದು ಧಾರ್ಮಿಕ ರಾಷ್ಟ್ರವಾದವೂ ಅಲ್ಲ; ಕೇವಲ ಒಂದು ಧರ್ಮದ ಸಾರ್ವಭೌಮತ್ವವನ್ನು ರಾಜಕೀಯವಾಗಿ ಬಳಸಿಕೊಳ್ಳುವ ರಾಷ್ಟ್ರವಾದವಾಗಿದೆ. ಇದನ್ನು ಅತ್ಯಂತ ಕರಾರುವಾಕ್ಕಾಗಿ ಅರ್ಥಮಾಡಿಕೊಂಡಿರುವವರು NRC,CAA ವಿರುದ್ಧ ಪ್ರತಿಭಟಿಸುತ್ತಿರುವ ಮುಸ್ಲಿಮ್‍ರು, ಪ್ರಗತಿಪರರು ಮತ್ತು ವಿದ್ಯಾರ್ಥಿಗಳು.

NAA ಯ ಯಾವ ಕಲಮು ಏನು ಹೇಳುತ್ತದೆಯೆನ್ನುವುದು ಚರ್ಚೆಯ ವಿಷಯವಲ್ಲ. ಅದಕ್ಕೆ ಆಧಾರವಾಗಿರುವ ರಾಷ್ಟ್ರ ಹಾಗೂ ಪೌರತ್ವದ ಪರಿಕಲ್ಪನೆಗಳನ್ನು ನಮ್ಮ ಸಂವಿಧಾನವಾಗಲೀ ಪ್ರಜಾಪ್ರಭುತ್ವಾಗಲೀ ಒಪ್ಪುವುದು ಸಾಧ್ಯವೇ ಇಲ್ಲ. ನನ್ನ ಈ ಮಾತು ನಿಜವೆನ್ನುವುದಕ್ಕೆ ಬಹುದೊಡ್ಡ ಸಾಕ್ಷಿಯೆಂದರೆ CAA ಪರವಾಗಿ ಭಾಷಣಮಾಡಿರುವ ಸೋಮಶೇಖರ ರೆಡ್ಡಿ. ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಉತ್ತರ ಪ್ರದೇಶದ ನೂರಾರು ಬಲಪಂಥೀಯರು ವ್ಯಕ್ತಪಡಿಸುತ್ತಿರುವ ಮುಸ್ಲಿಮ್ ದ್ವೇಷ. ಅವರು ಅತ್ಯಂತ ಪ್ರಾಮಾಣಿಕವಾಗಿ NRC ಯೆಂದರೆ ಮುಸ್ಲಿಮ್‍ರನ್ನು ಬಗ್ಗುಬಡಿಯುವುದು ಎಂದೇ ಸರಿಯಾಗಿ ವ್ಯಾಖ್ಯಾನ ಮಾಡಿದ್ದಾರೆ.

 ಯಾವ ರಾಜಕೀಯ ಪಕ್ಷ, ನೇತಾರರು ಇಲ್ಲದೆ ಪ್ರತಿದಿನವೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರತಿಭಟಿಸುತ್ತಿರುವವರ ಗುಂಪು. ಇವರು ಅದ್ಭುತವಾದ ವಾಸ್ತವವಾದಿ ರಾಜಕೀಯ ತಿಳಿವಳಿಕೆಯಿಂದಾಗಿ NRC ಹಿಂದಿರುವ ಸಂವಿಧಾನ ವಿರೋಧಿ, ದ್ವೇಷದ ನೆಲೆಗಳನ್ನು ಅರ್ಥಮಾಡಿಕೊಂಡಿದ್ದಾರೆ.

ಹೀಗಾಗಿ ನನಗೆ NRC ಯ ತಾತ್ವಿಕ ಚರ್ಚೆಯ ಭಾಗಿಗಳಿಗಿಂತ ಈ ಎರಡು ಗುಂಪುಗಳು ಹೆಚ್ಚು ಪಾರದರ್ಶಕವಾಗಿ ಕಂಡಿವೆ. ಒಂದು, ಯೋಗಿ ಆದಿತ್ಯನಾಥ, ರೆಡ್ಡಿ ಹಾಗೂ ಭಟ್ ಅವರ ಗುಂಪು. NRCಯಲ್ಲಿ ಏನಾದರೂ ಒಳ್ಳೆಯದಿರಬಹುದು ಎನ್ನುವ ಭಾವನೆಯಿದ್ದವರಿಗೂ ಆ ತಪ್ಪು ಕಲ್ಪನೆಯನ್ನು ಇಟ್ಟುಕೊಳ್ಳಬೇಡಿ, NRC ಎಂದರೆ ಏನೆಂದು ತೋರಿಸುತ್ತಿದ್ದೇವೆ ನೋಡಿ ಎಂದು ಈ ಗುಂಪು ಪ್ರಾಮಾಣಿಕವಾಗಿ ತೋರಿಸುತ್ತಿದೆ. ಇನ್ನೊಂದು, ಯಾವ ರಾಜಕೀಯ ಪಕ್ಷ, ನೇತಾರರು ಇಲ್ಲದೆ ಪ್ರತಿದಿನವೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರತಿಭಟಿಸುತ್ತಿರುವವರ ಗುಂಪು. ಇವರು ಅದ್ಭುತವಾದ ವಾಸ್ತವವಾದಿ ರಾಜಕೀಯ ತಿಳಿವಳಿಕೆಯಿಂದಾಗಿ NRC ಹಿಂದಿರುವ ಸಂವಿಧಾನ ವಿರೋಧಿ, ದ್ವೇಷದ ನೆಲೆಗಳನ್ನು ಅರ್ಥಮಾಡಿಕೊಂಡಿದ್ದಾರೆ.

ಈಗ ಮತ್ತೆ ವಾಪಸ್ಸು ಹೋಗಿ ಸಾವರ್ಕರ್ ರಾಷ್ಟ್ರವಾದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ರಾಷ್ಟ್ರ ಹಾಗೂ ಪೌರತ್ವದ ಪರಿಕಲ್ಪನೆಗಳನ್ನು ಚರ್ಚಿಸೋಣ. ಇದರಲ್ಲಿ ಮುಖ್ಯವಾಗಿ ಎರಡು ಮಾದರಿಗಳು: ಒಂದು ಗಾಂಧಿ ಮಾದರಿ, ಇನ್ನೊಂದು ಅಂಬೇಡ್ಕರ್ ಮಾದರಿ. ಗಾಂಧಿ ಹಿಂದ್ ಸ್ವರಾಜ್‍ನಲ್ಲಿ ಮತ್ತು ಇತರ ಕೃತಿಗಳಲ್ಲಿ ರಾಷ್ಟ್ರವೆನ್ನುವ ಪರಿಕಲ್ಪನೆಯನ್ನು ಹೆಚ್ಚುಕಡಿಮೆ ಬಳಸುವುದೇ ಇಲ್ಲವೆನ್ನಬಹುದು. ಅವರು ‘ನಾಗರಿಕತೆ’ ಎನ್ನುವ ಪದವನ್ನು ಬಳಸುತ್ತಾರೆ. ಮೂಲ ಗುಜರಾತಿ ಭಾಷೆಯಲ್ಲಿ ‘ಸುಧಾರೋ’ ಎನ್ನುವ ಪದವಿದು. ತುಂಬಾ ಸೂಕ್ಷ್ಮವಾಗಿ ಗಾಂಧಿ ಈ ಆಯ್ಕೆಯನ್ನು ಮಾಡಿದ್ದಾರೆ. ಏಕೆಂದರೆ ನೀವು ಒಂದು ನಾಗರಿಕತೆಗೆ ಸೇರಬೇಕೆಂದರೆ ನಿಮಗೆ ನಾಗರಿಕತ್ವ ಬೇಕೆ ಇಲ್ಲ! ನೀವು ಒಂದು ರಾಷ್ಟ್ರಕ್ಕೆ ಸೇರಬೇಕೆಂದರೆ ನಿಮಗೆ ಪೌರತ್ವ ಬೇಕು!

ಭಾರತೀಯ ನಾಗರಿಕತೆಗೆ ಸೇರಬೇಕೆಂದರೆ ನಿಮಗೆ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿ ಇದಾವುದೂ ಬೇಡ. ನಿಮ್ಮ ಭಾಷೆ, ಧರ್ಮಗಳು ಏನೇ ಆಗಿದ್ದರೂ ನೀವು ಭಾರತೀಯ ನಾಗರಿಕರೆ. ಬಹಳ ಮುಖ್ಯವೆಂದರೆ ನಿಮಗೆ ದಾಖಲೆಗಳು ಬೇಡ. ನನ್ನ ಹತ್ತಿರ ಜನ್ಮದಾಖಲೆ ಇಲ್ಲದಿದ್ದರೆ ನಾನು ಭಾರತೀಯ ನಾಗರಿಕತೆಗೆ ಸೇರಿದವನಲ್ಲವೆಂದು ಯಾರೂ ಹೇಳುವುದಿಲ್ಲ. ಸ್ಥೂಲವಾಗಿ ಭಾರತದಲ್ಲಿ ಇರುವ ಎಲ್ಲರೂ ಭಾರತೀಯ ನಾಗರಿಕತೆಗೆ ಸೇರಿದ್ದಾರೆ. ಆದರೆ NRC,CAA ಗಳಲ್ಲಿ ಪೌರತ್ವ, ನಾಗರಿಕತ್ವ (citizenship/citizen) ಪದಗಳಿದ್ದರು ಅವು ರಾಷ್ಟ್ರದ ಪರಿಕಲ್ಪನೆಗೆ ಸೇರಿವೆ. ಅಲ್ಲಿ ನಿಮಗೆ ದಾಖಲೆಗಳನ್ನು ಕೇಳಲಾಗುತ್ತದೆ. ದಾಖಲೆ ಇಲ್ಲದಿದ್ದರೆ ನೀವು ವಿದೇಶೀಯರಾಗುತ್ತೀರಿ.

ಸ್ವತಃ ನಾಥೂರಾಮ್ ಗೋಡ್ಸೆ ಹೇಳಿದ ಹಾಗೆ ಗಾಂಧಿಯವರ ಮುಸ್ಲಿಮ್ ಪ್ರೀತಿ ಅವನಿಗೆ ಹಿಂದೂ ವಿರೋಧಿಯಾಗಿ ಕಂಡಿತ್ತು. ದೇಶದ ವಿಭಜನೆಗೆ ಕಾರಣ ಗಾಂಧೀಜಿಯೇ ಎಂದು ಹೇಳುವವರು ವಿಭಜನೆಯ ಕಾಲದಲ್ಲಿ ಅವರು ಅನುಭವಿಸಿದ್ದನ್ನು ತಿಳಿದುಕೊಳ್ಳಬೇಕು.

ಗಾಂಧಿ ಮಾತನಾಡಿದ್ದು ಭಾರತೀಯ ನಾಗರಿಕತೆಯ ಬಗ್ಗೆ. ರಾಜಕೀಯವಾಗಿ ಹೋರಾಡಿದ್ದು ಇಂಗ್ಲೆಂಡ್ ದೇಶದ ವಿರುದ್ಧವಲ್ಲ; ಆಧುನಿಕ ಯಂತ್ರ ನಾಗರಿಕತೆಯ ವಿರುದ್ಧ. ಅವರಿಗೆ ಭಾರತವೆಂದರೆ ಎಲ್ಲಾ ಧರ್ಮಗಳನ್ನು ಒಳಗೊಂಡ ವಿದ್ಯಮಾನವಾಗಿತ್ತು. ಅವರು ಪರಧರ್ಮಗಳ ಬಗ್ಗೆ ತೋರಿದ ಪ್ರೀತಿಯು ಅಗಾಧವಾಗಿತ್ತು. ಸ್ವತಃ ನಾಥೂರಾಮ್ ಗೋಡ್ಸೆ ಹೇಳಿದ ಹಾಗೆ ಗಾಂಧಿಯವರ ಮುಸ್ಲಿಮ್ ಪ್ರೀತಿ ಅವನಿಗೆ ಹಿಂದೂ ವಿರೋಧಿಯಾಗಿ ಕಂಡಿತ್ತು. ದೇಶದ ವಿಭಜನೆಗೆ ಕಾರಣ ಗಾಂಧೀಜಿಯೇ ಎಂದು ಹೇಳುವವರು ವಿಭಜನೆಯ ಕಾಲದಲ್ಲಿ ಅವರು ಅನುಭವಿಸಿದ್ದನ್ನು ತಿಳಿದುಕೊಳ್ಳಬೇಕು.

ಇನ್ನೊಂದು ಪರ್ಯಾಯವೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರದು. ಹಿಂದೂ ಸಮಾಜದೊಳಗೆ ದಲಿತರಿಗೆ ಸ್ಥಾನವಿಲ್ಲ ಮತ್ತು ಹಿಂದೂ ಧರ್ಮದ ಮೂಲ ಆಧಾರವೇ ಜಾತಿ ವ್ಯವಸ್ಥೆ ಹಾಗೂ ಅಸೃಶ್ಯತೆಯೆಂದು ಅಂಬೇಡ್ಕರ್ ಅವರು ನಂಬಿದ್ದರು. ಗಾಂಧಿ ಜೊತೆಗಿನ ಅವರ ವಾಗ್ವಾದಕ್ಕೆ ಈ ನಂಬಿಕೆಯೆ ಕಾರಣವಾಗಿತ್ತು. ತಮ್ಮ ಈ ನಂಬಿಕೆಯಲ್ಲಿ ಅಂಬೇಡ್ಕರ್ ಅವರು ಎಂದಿಗೂ ಸಮಜಾಯಿಶಿ ಮಾಡಿಕೊಳ್ಳಲಿಲ್ಲ. ನಿಜವೆಂದರೆ ಅವರ ಕೊನೆಯ ಬರಹಗಳಲ್ಲಿ ಹಿಂದೂ ಧರ್ಮದ ಅತ್ಯಂತ ಕಟು ಟೀಕೆಯು ಬರುತ್ತದೆ. ಅವರು ಬೌದ್ಧ ಧರ್ಮಕ್ಕೆ ಸೇರಿದ್ದು ಸಹಜವೂ, ತಾರ್ಕಿಕವೂ ಆಗಿತ್ತು. ಆದರೆ ಒಬ್ಬ ಆಧುನಿಕರಾದ ಬಾಬಾಸಾಹೇಬರಿಗೆ ಪ್ರಜಾಪ್ರಭುತ್ವವೆನ್ನುವ ಒಂದು ಆಧುನಿಕ ರಾಜಕೀಯ ವ್ಯವಸ್ಥೆಯಲ್ಲಿ ದಲಿತರನ್ನೂ ಸಮಾನ ನಾಗರಿಕರನ್ನಾಗಿ ಮಾಡುವ ಒಂದು ಸಾಧ್ಯತೆಯು ಕಂಡಿತ್ತು. ಒಬ್ಬ ವ್ಯಕ್ತಿ, ಒಂದು ಮತವೆನ್ನುವ ರಾಜಕೀಯ ಸಮಾನತೆಯ ಮೂಲಕ ದಲಿತರೂ ಸಮಾನ ನಾಗರಿಕತ್ವ ಪಡೆಯುತ್ತಾರೆಂದು ಅವರು ನಂಬಿದ್ದರು.

ಅವರು ಪದೇ ಪದೇ ಹೇಳುತ್ತಿದ್ದಂತೆ ಆರ್ಥಿಕ ಹಾಗೂ ಸಾಂಸ್ಕೃತಿಕ ಸಮಾನತೆ, ಭ್ರಾತೃತ್ವ ಸಹಕಾರಗಳ ಮೂಲಗಳಲ್ಲಿ ನೈಜ ನಂಬಿಕೆ ಇರದಿದ್ದರೆ ಈ ರಾಜಕೀಯ ಸಮಾನತೆಗೆ ಬೆಲೆಯೇ ಇಲ್ಲ. ಈ ಚಿಂತನೆಯು ಅವರು ಬರೆದ ಸಂವಿಧಾನದ ಜೀವಾಳವೂ ಆಗಿದೆ. “ನಾವು ಭಾರತದ ಜನರು…” ಎಂದು ಆರಂಭವಾಗುವ ಸಂವಿಧಾನವು NRC,CAA ಗಳಿಗೆ ಯಾವ ಆಸ್ಪದವನ್ನೂ ಕೊಡುವುದಿಲ್ಲ. ಅದು ಸಂಪೂರ್ಣವಾಗಿ ಧರ್ಮಾಧಾರಿತ ಪೌರತ್ವವನ್ನು ತಿರಸ್ಕರಿಸುತ್ತದೆ. (ಹಾಗಿದ್ದರೆ ಬಿಡಿ, NRC ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀರ್ಮಾನಿಸಲಿ ಎನ್ನುವ ವಿತಂಡವಾದವನ್ನು ನಾನು ಒಪ್ಪುವುದಿಲ್ಲ. ಅಯೋಧ್ಯೆಯ ಬಗೆಗಿನ ತೀರ್ಪನ್ನು ಓದಿದ ಮೇಲೆ ಜನ ಹೋರಾಟಗಳನ್ನು ನೆಚ್ಚಿಕೊಳ್ಳುವುದು ಕ್ಷೇಮಕರವೆಂದು ಅನ್ನಿಸಿದೆ).

ಸಂಕಷ್ಟದ ಅತ್ಯಂತ ಆಶಾದಾಯಕ ಸಂಗತಿಯೆಂದರೆ ನಮ್ಮ ವಿದ್ಯಾರ್ಥಿಗಳು ಪ್ರಜಾಪ್ರಭುತ್ವವನ್ನು ನಮಗೆ ತಿಳಿಹೇಳಿಕೊಡುತ್ತಿರುವುದು. ಅದೇ ರೀತಿ NRC ವಿರೋಧಿಸುವ ಮುಸ್ಲಿಮ್‍ರು ದೇಶಭಕ್ತಿ ಹಾಗೂ ಸೌಹಾರ್ದದ ಪರವಾಗಿ ಗಟ್ಟಿಯಾದ ನಿಲುವನ್ನು ತೆಗೆದುಕೊಂಡಿರುವುದು.

ಪ್ರಶ್ನೆ ಇರುವುದು ಮುಂದೇನು ಎನ್ನುವುದು. ಈಗ ನಡೆಯುತ್ತಿರುವುದು ಏನೆಂದರೆNRC ಬಳಸಿಕೊಂಡು ದೇಶದ ವಿಭಜನೆಯನ್ನು ಮಾಡಲಾಗುತ್ತಿದೆ. NRC ಪರವಾಗಿರುವುದೆಂದರೆ ಹಿಂದೂ ಪರವಾಗಿರುವುದು, NRC ವಿರುದ್ಧವಾಗಿದ್ದರೆ ಹಿಂದೂ ಹಾಗೂ ರಾಷ್ಟ್ರವಿರೋಧಿಯಾಗಿರುವುದು ಎನ್ನುವ ಧ್ರುವೀಕರಣವನ್ನು ಅಪಾಯಕಾರಿಯಾಗಿ ಹಿಂಸೆಯ ಮೂಲಕ ಮಾಡಲಾಗುತ್ತಿದೆ. ಈ ಕೆಲಸದಲ್ಲಿ ಕಾಲಾಳುಗಳೆಂದರೆ ಪೊಲೀಸರು. ಈ ಸಂಕಷ್ಟದ ಅತ್ಯಂತ ಆಶಾದಾಯಕ ಸಂಗತಿಯೆಂದರೆ ನಮ್ಮ ವಿದ್ಯಾರ್ಥಿಗಳು ಪ್ರಜಾಪ್ರಭುತ್ವವನ್ನು ನಮಗೆ ತಿಳಿಹೇಳಿಕೊಡುತ್ತಿರುವುದು. ಅದೇ ರೀತಿ NRC ವಿರೋಧಿಸುವ ಮುಸ್ಲಿಮ್‍ರು ದೇಶಭಕ್ತಿ ಹಾಗೂ ಸೌಹಾರ್ದದ ಪರವಾಗಿ ಗಟ್ಟಿಯಾದ ನಿಲುವನ್ನು ತೆಗೆದುಕೊಂಡಿರುವುದು. ಮತ್ತು ಭಾರತೀಯ ಮಹಿಳೆಯರು ಚಳವಳಿಯ ಮುಂಚೂಣಿಯಲ್ಲಿರುವುದು.

ಆದರೆ ಸದ್ಯಕ್ಕೆ ಮನವೊಲಿಸುವ ಮತ್ತು ಬೆದರಿಸುವ ಹಂತದಲ್ಲಿರುವ ಆಡಳಿತವು ಮುಂದಿನ ಹಂತದಲ್ಲಿ ದೇಶವನ್ನೇ ಚಿಡಿಣiಛಿಟe 370 ನಂತರದ ಕಾಶ್ಮೀರವನ್ನಾಗಿಸುವ ಪ್ರಯೋಗವನ್ನು ಮಾಡುವುದು ಖಂಡಿತವೆಂದು ನನ್ನ ಭಾವನೆ. ಅದಕ್ಕೆ ಇನ್ನೊಂದು ಕಾರಣವೆಂದರೆ ಸತತವಾಗಿ ಚುನಾವಣೆಗಳಲ್ಲಿ ಸೋಲುತ್ತಿರುವ ಸಂದರ್ಭದಲ್ಲಿ ಪ್ರಭುತ್ವಕ್ಕೆ ಹಿಂಸೆಯನ್ನು ಬಿಟ್ಟು ಬೇರೆ ಮಾರ್ಗಗಳು ಇದ್ದಂತೆ ಕಾಣುವುದಿಲ್ಲ. ಯಾವ ಕಾರಣದಿಂದಲೂ ಓಖಅ ಇಂದಿನ ಸಂದರ್ಭದಲ್ಲಿ ಬೇಕಿರಲಿಲ್ಲ. ಅಂಥ ತುರ್ತು ಇರಲೇ ಇಲ್ಲ, ಬಲ ಪ್ರದರ್ಶನ ಮತ್ತು ದುರಭಿಮಾನವನ್ನು ಬಿಟ್ಟರೆ.

ನೆರೆರಾಷ್ಟ್ರಗಳ ಮುಸ್ಲಿಮ್‍ರನ್ನು ಹೊರಗಿಡುವುದಕ್ಕಾಗಿ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿ ಈಗ ದೇಶವು ವಾದ ವಿವಾದದಲ್ಲಿ ಮುಳುಗಿದೆ. ಅಷ್ಟು ಮಾತ್ರವಲ್ಲ ಭಾರತದ ರಾಜಕೀಯ ಚರಿತ್ರೆಯು ಬದಲಾಗಿದೆ. ಜನಮಾನಸದ ಆಳದಲ್ಲಿ ಆಗಿರುವ ಈ ಚಿಂತನಮಂಥನವನ್ನು ಪ್ರಭುತ್ವದ ಒತ್ತಾಯ ಹಾಗೂ ಹಿಂಸೆಗಳ ಮೂಲಕ ಬದಲಾಯಿಸಬಹುದೇ? ಅಂದರೆ ಸಂವಿಧಾನ, ಪೌರತ್ವ ಹಾಗೂ ರಾಷ್ಟ್ರದ ಬಗ್ಗೆ ಅತ್ಯಂತ ಆರೋಗ್ಯಕರವಾದ ಮತ್ತು ಸಮರ್ಪಕವಾಗಿ ಚಿಂತನೆಯು ಈಗ ಗಟ್ಟಿಯಾಗಿದೆ. ಈ ಚಿಂತನೆಗೆ ಹಾಡು, ಬರಹ, ಮಾತು, ಸಂಭಾಷಣೆ, ಚಿತ್ರಗಳು ಇವುಗಳ ಮೂಲಕ ದೊರೆತಿರುವ ಅಭಿವ್ಯಕ್ತಿಯಂತೂ ಅಪೂರ್ವವಾಗಿದೆ. ಬಹಳ ವರ್ಷಗಳ ನಂತರ ದೇಶವು ಕ್ರಿಯಾಶೀಲವಾಗಿ ಮಾತನಾಡಿದೆ.

ಇನ್ನೊಂದು ಕಡೆಗೆ ದೇಶದ ಕೆಲವು ವರ್ಗಗಳು, ಜನರು NRC ನೆಪದಲ್ಲಿ ಮೊದಲಿಗಿಂತಲೂ ಅಪಾಯಕಾರಿ ಸ್ವರೂಪದಲ್ಲಿರುವ ಕೋಮುದ್ವೇಷ, ಹಿಂಸೆ, ಹಿಂಸಾರತಿಯಲ್ಲಿ ತೊಡಗಿದ್ದಾರೆ. ಗೆಳೆಯ ದೇವನೂರ ಮಹಾದೇವರು ‘ಸಾರ್ವಜನಿಕ ಬಯಲು ಶೌಚಾಲಯ’ ಎಂದು ಕರೆಯುವ ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಕೆಲವು ತಿಂಗಳುಗಳಿಂದ ಭಾಗಿಯಾಗಿದ್ದೇನೆ. ಈ ಶೌಚಾಲಯವನ್ನು ಹೊಗದಿದ್ದರೆ ನಮ್ಮ ‘ಸಾಮಾನ್ಯ’ ಜನರ ಹಾಗೂ ಶಿಕ್ಷಿತ ಅವಿವೇಕಿಗಳ ಹೃದಯದೊಳಗಿರುವ ದ್ವೇಷ ಹಾಗೂ ಹಿಂಸೆಯ ಸರಿಯಾದ ಪರಿಚಯವಾಗುವುದಿಲ್ಲ. ಇಂದು ಭಾರತದ ಚುನಾವಣಾ ರಾಜಕೀಯವನ್ನು ನಿರ್ಣಾಯಕವಾಗಿ ನಿಯಂತ್ರಿಸುತ್ತಿರುವುದು ಈ ದ್ವೇಷ ಮತ್ತು ಹಿಂಸೆಗಳೆ. ಇದನ್ನು ಡ್ರಾಯಿಂಗ್ ರೂಮ್‍ನ ಶೌಚಾಲಯಗಳಾದ ಟಿ.ವಿ. ಚಾನೆಲ್‍ಗಳಲ್ಲೂ ಕಾಣಬಹುದು. NRC,CAA ನೆಪದಲ್ಲಿ ಕ್ರಿಯಾಶೀಲವೂ, ನೈತಿಕವಾಗಿ ಗಟ್ಟಿಯಾಗಿಯೂ ಹೊಮ್ಮುತ್ತಿರುವ ವಿಶಾಲವಾದ ಜನಸಮುದಾಯಗಳನ್ನು ಈ ಎರಡು ಶೌಚಾಲಯಗಳು ಹಾಗೂ ಅವುಗಳ ಕಂಟ್ರ್ಯಾಕ್ಟು ಹಿಡಿದಿರುವ ನಮ್ಮ ಪ್ರಭುತ್ವವು ಮುಗಿಸುತ್ತವೆ ಎನ್ನುವುದೇ ವಾಸ್ತವವಾಗಿರಬಹುದು.

* ಲೇಖಕರು ಕನ್ನಡದ ಪ್ರಮುಖ ವಿಮರ್ಶಕರು, ಕಥೆಗಾರರು. ಹುಟ್ಟೂರು ಧಾರವಾಡ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಈಗ ಶಿವಮೊಗ್ಗೆಯ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರದ ನಿರ್ದೇಶಕರು.

Leave a Reply

Your email address will not be published.