ಭಾರತೀಯ ಮುಸಲ್ಮಾನರು ಉದಾರವಾದ ಬಯಸುವುದು ಏಕೆ?

ಮುಸ್ತಫಾ ಅಕ್ಯೋಲ್

ಸ್ವಾಮಿನಾಥನ್ ಅಯ್ಯರ್

ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳನ್ನು ಧಾರ್ಮಿಕ ಅಲ್ಪಸಂಖ್ಯಾತರಿಗಿಂತಹೆಚ್ಚು ಸಮಾನರನ್ನಾಗಿಮಾಡಲು ಹೊರಟಾಗ, ಮುಸ್ಲಿಮರು ಧರ್ಮನಿರಪೇಕ್ಷ ಸಂವಿಧಾನದಿಂದ ಸಮಾನತೆಯನ್ನು ಕೇಳುತ್ತಾರೆಯೇ ಹೊರತು ಶರಿಯಾದಿಂದಲ್ಲ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹಿಂದೂ ಪಾರಮ್ಯವಾದಿ ಪಕ್ಷವಾದ ಭಾರತೀಯ ಜನತಾ ಪಕ್ಷವು (ಬಿಜೆಪಿ), ಭಾರತೀಯ ಸಂವಿಧಾನದ ಉದಾರವಾದಿ ತತ್ವಗಳನ್ನು ದುರ್ಬಲಗೊಳಿಸಿದ್ದಾರೆ ಮತ್ತು ದೇಶವನ್ನು ಹೆಚ್ಚು ಹೆಚ್ಚಾಗಿ ಒಂದು ಉದಾರವಾದಿಯಲ್ಲದ ಜನತಂತ್ರವಾಗಿ ಪರಿವರ್ತಿಸಿದ್ದಾರೆ ಎಂಬುದು ಇಷ್ಟು ಹೊತ್ತಿಗೆ ಇಡೀ ಜಗತ್ತಿಗೇ ಗೊತ್ತಾಗಿ ಹೋಗಿದೆ. ಭಯದಲ್ಲೇ ಬದುಕುತ್ತಿರುವ ಅಲ್ಪಸಂಖ್ಯಾತರ ವಿರುದ್ಧ ಸವಲತ್ತುಳ್ಳ ಬಹುಸಂಖ್ಯಾತರನ್ನು ಎತ್ತಿಕಟ್ಟುವಂಥ ಮೌಢ್ಯಗಳ ಮೇಲೆ, ಅಸಮಾಧಾನಗಳ ಮೇಲೆ ಶ್ರೀಮಾನ್ ಮೋದಿ ತಮ್ಮ ಏಳಿಗೆಯನ್ನು ಸಾಧಿಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಬಹಳ ಜನರಿಗೆ ಗೊತ್ತಿಲ್ಲದ ಆದರೆ ಬಹಳ ಹೆಚ್ಚು ಭರವಸೆಯನ್ನು ಹುಟ್ಟಿಸುವ ವಿದ್ಯಮಾನವೆಂದರೆ, ಬಹುಸಂಖ್ಯಾತ ದಾಳಿಗೆ ಮುಖ್ಯ ಗುರಿಯಾದ ಭಾರತೀಯ ಮುಸ್ಲಿಂ ಅಲ್ಪಸಂಖ್ಯಾತರ ಪ್ರತಿಕ್ರಿಯೆ. ಭಾರತದ ನೂರ ಮೂವತ್ತೆರೆಡು ಕೋಟಿ ಜನಸಂಖ್ಯೆಯಲ್ಲಿ ಇವರು ಸುಮಾರು ಹದಿನೇಳು ಕೋಟಿ ಎಂದರೆ 14.2 ಶತಾಂಶ ಇದ್ದಾರೆ, ಮತ್ತೆ ಸರಿಸುಮಾರು 79.2 ಶತಾಂಶದಷ್ಟು ಜನ ಹಿಂದೂಗಳಿದ್ದಾರೆ.

ದೊಡ್ಡಸಂಖ್ಯೆಯ ಮುಸ್ಲಿಂ ಅಲ್ಪಸಂಖ್ಯಾತರು ಇತ್ತೀಚಿನ ವರ್ಷಗಳಲ್ಲಿ, ಹಿಂದೂ ಪಾರಮ್ಯವಾದಿಗಳ ಕೈಯಲ್ಲಿ ಕಷ್ಟದ ದಿನಗಳ ಮೂಲಕ ಸಾಗಿ ಬಂದಿದ್ದಾರೆ: ದೊಂಬಿ ಹತ್ಯೆ, ಮಾರಣಾಂತಿಕ ದಂಗೆಗಳು, ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳ ಹರಣದಂತಹ ಕಿರುಕುಳಗಳನ್ನು ಅನುಭವಿಸಿದ್ದಾರೆ.

ಅಲ್ಪಸಂಖ್ಯಾತರನ್ನು ಹೀಗೆ ಪ್ರಪಾತದತ್ತ ತಳ್ಳುತ್ತಾ ಹೋದರೆ, ಅವರು ತೀವ್ರವಾದಕ್ಕೆ ಕಾರಣವಾಗುವಂಥ ಮುತ್ತಿಗೆ ಮನಸ್ಥಿತಿಗೆ, ಭೀತಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದರೆ ಭಾರತೀಯ ಮುಸ್ಲಿಮರು ಮಾತ್ರ ಹಿಂಸಾತ್ಮಕ ಧರ್ಮಯುದ್ಧಕ್ಕೆ ಕರೆಕೊಡುವುದಕ್ಕಾಗಲೀ (ಜಿಹಾದ್), ಶರಿಯಾ ಕಾನೂನಿನ ಪರವಾದ ಆರ್ಭಟಕ್ಕಾಗಲೀ ಶುರುಮಾಡಿಕೊಂಡಿಲ್ಲ. ಬದಲಿಗೆ ಅವರು ಭಾರತದ ಸಂವಿಧಾನದಲ್ಲಿ ವಿಶ್ವಾಸವಿಟ್ಟು, ನಾಗರಿಕರಾಗಿ ತಮ್ಮ ಸಂವಿಧಾನದತ್ತ ಹಕ್ಕುಗಳಿಗಾಗಿ ಆಗ್ರಹಿಸುತ್ತಾ ಉದಾರವಾದಿ ಜನತಂತ್ರದ ಆಶಯಗಳನ್ನೇ ಒತ್ತಿ ಹೇಳಿ ಅದನ್ನೇ ಆತುಕೊಂಡಿದ್ದಾರೆ.

ನಾಗರಿಕತೆ ತಿದ್ದುಪಡಿ ಕಾಯಿದೆಯ ವಿರುದ್ಧ 2019 ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿ ಮೂರು ತಿಂಗಳುಗಳ ಕಾಲ ನಡೆದ ಸಮೂಹ ಪ್ರತಿಭಟನೆಗಳಲ್ಲಿ ಬದಲಾದ ಹಾದಿ ಸ್ಪಷ್ಟವಾಗಿ ಕಾಣುತ್ತಿತ್ತು. ಕಾಯಿದೆಯು ಸರ್ಕಾರವು ರೂಪಿಸಿದ ಅತ್ಯಂತ ನಿರ್ಲಜ್ಜ ತಾರತಮ್ಯದ ಶಾಸನ. ಅದು ನೆರೆಹೊರೆಯ ರಾಷ್ಟ್ರಗಳಿಂದ ಬರುವ ಹಿಂದೂ, ಸಿಖ್ ಮತ್ತು ಬೌದ್ಧ ವಲಸಿಗರಿಗೆ ನಾಗರಿಕತೆಯನ್ನು ತ್ವರಿತವಾಗಿ ಕೊಡುವಂತೆ ಮಾಡಿತು. ಇನ್ನೊಂದು ಕಡೆ ಕಾಯಿದೆಯು ಗೃಹಮಂತ್ರಿಗಳಾದ ಅಮಿತ್ ಶಾ, ‘ಗೆದ್ದಲು ಹುಳುಗಳುಎಂದು ಅಮಾನವೀಕರಿಸಿದ ಮುಸ್ಲಿಮರಿಗೆ ಅದೇ ಕಾನೂನಾತ್ಮಕ ಸೌಲಭ್ಯವನ್ನು ನಿರಾಕರಿಸಿತು.

ಅಮಿತ್ ಶಾ ರವರು ಇನ್ನೊಂದು ರಾಷ್ಟ್ರೀಯ ನಾಗರಿಕ ಪಟ್ಟಿಯನ್ನೂ ಯೋಜಿಸಿದರು. ಅದರ ಪ್ರಕಾರ ಸರ್ಕಾರದ ರಿಜಿಸ್ಟರ್ನಲ್ಲಿ ನಾಗರಿಕರೆಂದು ನೋಂದಾಯಿತರಾಗಲು ಪ್ರತಿಯೊಬ್ಬ ಭಾರತೀಯನಿಗೂ ಅವನು ಹುಟ್ಟಿದ ಸ್ಥಳ, ವಾಸಿಸುವ ಸ್ಥಳಗಳ ದಾಖಲೆ ಬೇಕು. ಅನೇಕ ಭಾರತೀಯರಿಗೆ ಅದರಲ್ಲೂ ಬಡವರಿಗೆ ಇದು ಲಭ್ಯವಿರುವುದಿಲ್ಲ. ಆದರೆ ಹೊಸ ನಾಗರಿಕತ್ವ ಕಾಯಿದೆಯಲ್ಲಿ ಇದರಿಂದ ತಪ್ಪಿಸಿಕೊಳ್ಳಲು ಮುಸ್ಲಿಮೇತರರಿಗೆ ಒಂದು ಅವಕಾಶವನ್ನು ಒದಗಿಸಲಾಗಿತ್ತು. ಆದರೆ ಮುಸ್ಲಿಮರು ಮಾತ್ರ ರಾಷ್ಟ್ರವೇ ಇಲ್ಲದಂತಾಗಿ ಬಂಧನದ ಶಿಬಿರಗಳಿಗೆ ತಳ್ಳಲ್ಪಡಲಾಗಬೇಕಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ ನವದೆಹಲಿಯ ಶಾಹೀನ್ ಬಾಗ್ ಎಂಬ ವಸತಿ ಪ್ರದೇಶದಲ್ಲಿ, ನಾಗರಿಕತೆ ಕಾಯಿದೆಯ ವಿರುದ್ಧ 101 ದಿನಗಳ ಧರಣಿಯೊಂದು ಆರಂಭವಾಯಿತು. ಇದಕ್ಕೆ ನೇತೃತ್ವ ನೀಡಿದವರು ಸಂಪ್ರದಾಯವಾದಿ ಮುಸ್ಲಿಂ ಧರ್ಮಗುರುಗಳಲ್ಲ, ಮುಸ್ಲಿಂ ಮಹಿಳೆಯರು. ಪ್ರತಿಭಟನಾ ಶಿಬಿರದಲ್ಲಿ ಹಗಲು ರಾತ್ರಿ ಸಾವಿರಾರು ಮಹಿಳೆಯರು ಪಾಳಿಯ ಮೇಲೆ ಬಂದು ಕೂರುತ್ತಿದ್ದರು. ಅವರು ಹಿಡಿದಿದ್ದ ಬ್ಯಾನರ್, “ನಮ್ಮ ಧ್ಯೇಯ ಶಾಂತಿ, ಸೌಹಾರ್ದ ಮತ್ತು ಸೋದರತ್ವ. ಜೊತೆಗೆ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೇತೃತ್ವ ನೀಡಿದ, ಹಿಂದೂ ಧರ್ಮದಲ್ಲಿ ಜನಸಿದ್ದ ನಾಯಕರ ಭಾವಚಿತ್ರಗಳನ್ನು ಪ್ರದರ್ಶಿಸಿದರು ಮತ್ತು ವೇದಿಕೆಯಲ್ಲಿ ಧರ್ಮನಿರಪೇಕ್ಷವಾದಂಥ ದೇಶದ ಸಂವಿಧಾನದ ಪೀಠಿಕೆಯನ್ನು ಸಹ ಪ್ರದರ್ಶಿಸಿದರು.

ಬಿಜೆಪಿಯ ಪ್ರಚಾರದ ಯಂತ್ರವು ಮುಸ್ಲಿಂ ಪ್ರತಿಭಟನಾಕಾರರನ್ನುದೇಶದ್ರೋಹಿಗಳು, ‘ದೇಶ ವಿರೋಧಿಗಳುಎಂದು ಬಣ್ಣಿಸಿತು. ಆದರೆ ಪ್ರದರ್ಶನಕಾರರಾದರೋನಾನು ಭಾರತವನ್ನು ಪ್ರೇಮಿಸುತ್ತೇನೆಎಂಬ ಘೋಷಣೆಯ ಹಣೆಪಟ್ಟಿಗಳನ್ನು ಕಟ್ಟಿಕೊಂಡು, ಭಾರತದ ರಾಷ್ಟ್ರಧ್ವಜವನ್ನು ಹಿಡಿದು ಗಾಳಿಯಲ್ಲಿ ಬೀಸುತ್ತಾ ಮತ್ತೆ ಮತ್ತೆ ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು.

ಭಾರತೀಯ ಮುಸ್ಲಿಂ ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ಹಿಂದೂ ಪಾರಮ್ಯವಾದಕ್ಕೆ ಮಾತ್ರವಲ್ಲ ತಮ್ಮ ಸಮುದಾಯದೊಳಗಿನ ಪುರುಷ ಪ್ರಧಾನ ಮನೋಭಾವಕ್ಕೂ ಸವಾಲು ಹಾಕಿದ್ದಾರೆ. ಭಾರತದ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವ ಸರ್ವೋಚ್ಚ ನ್ಯಾಯಾಲಯಕ್ಕೆ ಪದೇ ಪದೇ ಮನವಿ ಸಲ್ಲಿಸುತ್ತಾ ಅವರು ಮುಸ್ಲಿಂ ಗಂಡಸರು ಇಷ್ಟ ಬಂದಾಗ ಪತ್ನಿಯರನ್ನು ಬಿಡುವ ಹಕ್ಕನ್ನು ನೀಡಿದ್ದ ಶರಿಯಾ ತೀರ್ಮಾನವಾದಹಠಾತ್ ವಿವಾಹ ವಿಚ್ಛೇದನವನ್ನು ನಿಷೇಧಿಸುವ ತೀರ್ಪನ್ನು 2017ರಲ್ಲಿ ಪಡೆದುಕೊಂಡರು. ಇನ್ನೊಂದು ಮುಸ್ಲಿಂ ಮಹಿಳೆಯರ ಗುಂಪು 2016ರಲ್ಲಿ, ಮುಂಬೈನ ಸೂಫಿ ಪೂಜಾಸ್ಥಳವೊಂದಕ್ಕೆ ಗಂಡಸರಿಗೆ ಸಮಾನವಾಗಿ ಪ್ರವೇಶಿಸಬಹುದು ಎಂಬ ಸಂವಿಧಾನದತ್ತ ಹಕ್ಕನ್ನು ಗಳಿಸಿಕೊಂಡಿತು.

ಭಾರತೀಯ ಮುಸ್ಲಿಂ ವಿಶ್ಲೇಷಕರಾದ ಶಾರಿಕ್ ಲಾಲಾವಾಲಾರವರು ಇಂತಹ ಎಲ್ಲಾ ಉದಾರವಾದಿ ನಡೆಗಳೂಮುಸ್ಲಿಂ ಸಮುದಾಯದ ರಾಜಕೀಯ ರಣನೀತಿಯಲ್ಲಿನ ಒಂದು ಮೂಲಭೂತ ರೂಪಾಂತರಎಂದು ಅಭಿಪ್ರಾಯ ಪಡುತ್ತಾರೆ. ಅವರ ಪ್ರಕಾರ ಭಾರತೀಯ ಮುಸ್ಲಿಮರು, “ಧಾರ್ಮಿಕ ಪರಿಕಲ್ಪನೆಗಳೊಂದಿಗೆ ಸ್ವಾತಂತ್ರ್ಯ, ನ್ಯಾಯ ಮತ್ತು ಸಮಾನತೆಯ ಕಲ್ಪನೆಗಳನ್ನು ಸಮ್ಮಿಲನಗೊಳಿಸುತ್ತಿದ್ದಾರೆ.

ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ನಲ್ಲಿ ಮಾನವಶಾಸ್ತ್ರಜ್ಞರಾಗಿರುವ ಇರ್ಫಾನ್ ಅಹ್ಮದ್ ರವರು. ಈಗ, ನಡೆಯುತ್ತಿರುವುದು ರೂಪಾಂತರವಲ್ಲ, ಬಹುತ್ವದ ಜೊತೆಯಲ್ಲಿ ಕೆಲವು ಕಲ್ಪನೆಗಳಿಗೆ ಹಿಂದಿನಿಂದಲೂ ಭಾರತೀಯ ಮುಸ್ಲಿಮರು ಆಶಿಸುತ್ತಿದ್ದು, ಈಗ ಅದಕ್ಕೆ ಹೊಸ ಒತ್ತು ನೀಡುತ್ತಿದ್ದಾರೆ ಎಂದು ವಾದಿಸುತ್ತಾರೆ. ಹಿಂದೂ ಬಹುಸಂಖ್ಯಾತರಿಂದ ಬಹುಸಂಖ್ಯಾತರಿಗಾಗಿ ಎಂಬಂತೆ ಬಿಜೆಪಿ ನಡೆಸುತ್ತಿರುವ ಆಳ್ವಿಕೆ ಮತ್ತು ಮುಸ್ಲಿಮರೂ ಸೇರಿದಂತೆ ಎಲ್ಲ ಭಾರತೀಯರ ಹಕ್ಕನ್ನೂ, ಘನತೆಯನ್ನೂ ಎತ್ತಿಹಿಡಿಯುವ ಜನತಂತ್ರದ ಕುರಿತಾದ ಒಂದು ಹೊಸ ಕಣ್ಣೋಟ, ಇವೆರಡಕ್ಕೂ ನಡುವಿನ ಕಂದರವನ್ನು ಶಾಹಿನ್ಬಾಗ್ ಪ್ರತಿಭಟನೆಗಳು ಎತ್ತಿ ತೋರಿಸುತ್ತವೆ ಎಂದೂ ಅವರು ಸೇರಿಸುತ್ತಾರೆ.

ಇಷ್ಟಾಗಿ ಬಿಜೆಪಿಯ ನಿರ್ದಯ ಗುಣದಿಂದಾಗಿ ಮುಸ್ಲಿಮರು ಒಂದು ಹಿಮ್ಮುಖ ಚಲನೆಗೆ ತುತ್ತಾಗಿ ಉಗ್ರವಾದಕ್ಕೆ ಸೆಳೆಯಲ್ಪಡುವ ಅಪಾಯ ಇದ್ದೇ ಇದೆ. ಸೆಪ್ಟೆಂಬರ್ನಲ್ಲಿ ಧರ್ಮನಿರಪೇಕ್ಷ, ಎಡಪಂಥೀಯ ವಿದ್ಯಾರ್ಥಿ ನಾಯಕನಾದ, ಮುಸ್ಲಿಮನೂ ಆದ ಉಮರ್ ಖಾಲಿದ್ನನ್ನು ಬಂಧಿಸಲಾಯಿತು. ಆತನ ಮೇಲಿರುವುದು, ಬಹುತೇಕ ಮುಸ್ಲಿಮರೇ ಬಲಿಪಶುಗಳಾದ ದೆಹಲಿಯಲ್ಲಿ 2020 ಫೆಬ್ರವರಿಯಲ್ಲಿ ನಡೆದ ಹಿಂದೂ ಮುಸ್ಲಿಂ ಕೋಮು ದಂಗೆಯನ್ನು ಪ್ರಚೋದಿಸಿದನೆಂಬ ಅತ್ಯಂತ ವಿವಾದಾಸ್ಪದ ಆಪಾದನೆಗಳು.

ಎಲ್ಲ ಬೆಳವಣಿಗೆಗಳ ಅರ್ಥವೇನೆಂದರೆ ಭಾರತವು ತಪ್ಪಾದ ದಾರಿಯನ್ನು ಹಿಡಿದಿದೆ. ತನ್ನಲ್ಲಿನ ಅಲ್ಪಸಂಖ್ಯಾತರನ್ನು ಸಮಾನರಾದ ಮನುಷ್ಯರು ಎಂದು ನೋಡಿಕೊಳ್ಳಲಾಗದ ದೇಶವು ಜಗತ್ತಿನ ಅತಿದೊಡ್ಡ ಜನತಂತ್ರವಾಗುವುದಿಲ್ಲ, ಬದಲಿಗೆ ಬಹುಸಂಖ್ಯಾತರ ದಬ್ಬಾಳಿಕೆಯಿರುವ ನಾಡಾಗುತ್ತದೆ.

ಇದರ ಫಲಿತಾಂಶಗಳೆಂದರೆ ಸಾಮಾಜಿಕ ಕ್ಷೋಭೆ, ಉಗ್ರವಾದ, ಆರ್ಥಿಕ ಪ್ರಗತಿಯ ಹಿನ್ನಡೆ ಮತ್ತು ಹೊರದೇಶದಲ್ಲಿ ಭಾರತಕ್ಕಿರುವ ಒಳ್ಳೆಯ ಹೆಸರಿಗೆ ಕುಂದುಂಟಾಗುವುದು. ಈಗಾಗಲೇ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮತ್ತು ತೀರಾ ಇತ್ತೀಚೆಗೆ ಭಾರತದಲ್ಲಿನ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ಕಛೇರಿಯನ್ನು ಮುಚ್ಚಿಸಿದ್ದಕ್ಕಾಗಿ, ಮಾನವ ಹಕ್ಕು ಸಂಘಟನೆಗಳು ಭಾರತವನ್ನು ಟೀಕಿಸಿವೆ.

ಬೇರೆಡೆ ಇರುವ ಮುಸ್ಲಿಮರಿಗೂ ಭಾರತದ ಕಥೆಯಲ್ಲಿ ಪಾಠಗಳಿವೆ. ಬಹಳ ಕಾಲದ ಹಿಂದೆಯೇ ಗಡಿಯಾಚೆ ಇರುವ ಪಾಕಿಸ್ತಾನದಲ್ಲಿ ಭಾರತದಲ್ಲಿ ಬೆಜೆಪಿ ಇಚ್ಛಿಸುವಂತಹ, ಬಹುಸಂಖ್ಯಾತರ ಪ್ರಾಬಲ್ಯವಿರುವ ಜನಾಂಗೀಯಧಾರ್ಮಿಕ ಪ್ರಭುತ್ವವನ್ನು ಸ್ಥಾಪಿಸಲಾಯಿತು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಶಿಯಾ ಮುಸ್ಲಿಮರು, ಅಹ್ಮದಿಗಳು ಮತ್ತು ಕ್ರಿಶ್ಚಿಯನ್ನರನ್ನು ಬದಿಗೆ ಸರಿಸಿ ಸುನ್ನಿ ಮುಸಲ್ಮಾನರ ಪ್ರಾಬಲ್ಯವನ್ನು ಹೇರಲಾಯಿತು.

ಇನ್ನು ಪೂರ್ವದಲ್ಲಿ ಮಲೇಶಿಯದಲ್ಲಿ 1957ರಲ್ಲಿ ಬಹುಧರ್ಮೀಯ ರಾಷ್ಟ್ರವು ಜನ್ಮ ತಳೆದಾಗಿನಿಂದ ಮಲಯ್ಮುಸ್ಲಿಂ ಪಾರಮ್ಯವೇ ಅಧಿಕೃತ ವೈಚಾರಿಕತೆಯಾಗಿದೆ. ಅತ್ತ ಟರ್ಕಿಯಲ್ಲಿ ಅಧ್ಯಕ್ಷ ಎರ್ಡೊಗನ್ ಇಸ್ಲಾಂ ಮಿಶ್ರಿತ ಅಗ್ಗದ ಜನಪ್ರಿಯತೆಯಲ್ಲಿ ಅಡಕವಾಗಿರುವುದುದ್ರೋಹಿಗಳುಮತ್ತುದೇಶ ವಿರೋಧಿಗಳ ವಿರುದ್ಧದ ಇಂಗದ ರೋಷ. ಅದಕ್ಕೂ ಮೋದಿಯವರ ಜನಪ್ರಿಯತೆಗೂ ಬಲವಾದ ಸಾಮ್ಯಗಳಿವೆ ಮತ್ತು ಎಲ್ಲೆಡೆ ಇಸ್ಲಾಂವಾದಿ ಚಳವಳಿಗಳಲ್ಲಿಉದಾರವಾದಮತ್ತುಧರ್ಮನಿರಪೇಕ್ಷ ಪ್ರಭುತ್ವಎಂಬುದು, ನಿಷಿದ್ಧ ಪದ ಅಲ್ಲದಿದ್ದರೂ ಕೊಳಕುಪದ.

ನೋವಿನ ಸಂಗತಿಯೆಂದರೆ ಭಾರತವನ್ನು ಬಿಟ್ಟು ಉಳಿದೆಡೆ ಮುಸಲ್ಮಾನರು ತಾವೇ ಬಹುಸಂಖ್ಯಾತರಾಗಿರುವ ಕಡೆ ಹಾಗೂ ಪ್ರಭುತ್ವವನ್ನು ನಿಯಂತ್ರಿಸುತ್ತಿರುವ ಕಡೆ ಬಹುಸಂಖ್ಯಾತ ದಬ್ಬಾಳಿಕೆಯನ್ನು ಸಂತೋಷವಾಗಿ ಅನುಭವಿಸಿಕೊಂಡಿರುತ್ತಾರೆ. ಉಳಿದಂತೆ ಅಲ್ಪಸಂಖ್ಯಾತರಾಗಿದ್ದಾಗ ಉದಾರವಾದದ ಉಡುಗೊರೆಗಳ ಮಹತ್ವವನ್ನು ಮನವರಿಕೆ ಮಾಡಿಕೊಳ್ಳುತ್ತಾರೆ. ಇಂತಹ ಇಬ್ಬಂದಿತನ ಒಳ್ಳೆಯದೂ ಅಲ್ಲ, ಸಮರ್ಥನೀಯವೂ ಇಲ್ಲ.

ರಾಜಕೀಯದ ಕುರಿತು ಇನ್ನೂ ಹೆಚ್ಚು ತತ್ವನಿಷ್ಠವಾದ ಮುಸ್ಲಿಂ ನಿಲುವು ಅಗತ್ಯ. ಅದಕ್ಕೆ, ಮುಸ್ಲಿಂ ಅಭಿಪ್ರಾಯವನ್ನು ರೂಪಿಸಬಲ್ಲ ನಾಯಕರು ಭಾರತದಲ್ಲಿನ ಇತರ ಧರ್ಮದವರ ಅನುಭವವನ್ನು ಗಮನಿಸಬೇಕು. ಜಗತ್ತಿನ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಹೇಳಲಿಕ್ಕೆ ಪಾಠವೊಂದು ಅಡಕವಾಗಿರುವ ಒಂದು ಕತೆಯಿದೆ. ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಎಲ್ಲ ರಾಷ್ಟ್ರಗಳಲ್ಲೂ, ಎಲ್ಲ ನಾಗರಿಕತೆಗಳಲ್ಲೂ ರಕ್ಷಿಸಬೇಕು. ಇಲ್ಲದಿದ್ದರೆ ಕೇವಲ ಶಕ್ತಿಯು ಅಧಿಕಾರವನ್ನು ನಡೆಸುತ್ತದೆ. ಗೆಲ್ಲಬಹುದಾದ ಅಥವಾ ಸೋಲಬಹುದಾದ ಅಧಿಕಾರದ ಮೇಲೆ ಒತ್ತು ನೀಡುವ ಬದಲು ಅವರು ಎಲ್ಲೆಡೆ ಅದಕ್ಕೆ ಅಂಕುಶ ಹಾಕಲು ಯತ್ನಿಸಬೇಕು. ಯಾವ ಗುಂಪೂ ತುಳಿತಕ್ಕೆ ಒಳಗಾಗಬಾರದು ಮತ್ತು ಎಲ್ಲರೂ ಸ್ವತಂತ್ರರಾಗಿರಬೇಕು.

ಮೂಲ: ನ್ಯೂ ಯಾರ್ಕ್ ಟೈಮ್ಸ್ ಅನು: ಡಾ.ಬಿ.ಆರ್.ಮಂಜುನಾಥ

*ಮುಸ್ತ ಅಕ್ಯೋಲ್ರವರು ಕೇಟೊ ಇನ್ಸ್ಟಿಟ್ಯೂಟ್ನಲ್ಲಿ ಇಸ್ಲಾಂ ಮತ್ತು ಆಧುನಿಕತೆಯ ವಿಷಯದಲ್ಲಿ ಹಿರಿಯ ಲೊ ಆಗಿದ್ದು ಬರಹಗಾರರೂ ಆಗಿದ್ದಾರೆ. ಅವರ ಬರಲಿರುವ ಪುಸ್ತಕದ ಹೆಸರುರಿ ಓಪನಿಂಗ್ ಮುಸ್ಲಿಂ ಮೈಂಡ್; ರಿಟರ್ನ್ ಟು ರೀಸನ್, ಫ್ರೀಡಂ ಅಂಡ್ ಟಾಲರೆನ್ಸ್.

ಸ್ವಾಮಿನಾಥನ್ ಎಸ್. ಅಂಕ್ಲೇಸಾರಿಯ ಅಯ್ಯರ್ರವರು, ಕೇಟೂ ಇನ್ಸ್ಟಿಟ್ಯೂಟ್ನಲ್ಲಿ ಸಂಶೋಧನಾ ಫೆಲೋ ಆಗಿದ್ದು, ಟೈಂಸ್ ಆಫ್ ಇಂಡಿಯಾಗೆ ಅಂಕಣಕಾರರಾಗಿದ್ದಾರೆ ಹಾಗೂ ಭಾರತದ ಟೆಲಿವಿಷನ್ನಲ್ಲಿ ವಿಶ್ಲೇಷಕರು.

Leave a Reply

Your email address will not be published.