ಮಗನ ಶಿಕ್ಷಣಕ್ಕೆ ಹಣದ ಕೊರತೆ

ತಂದೆಯ ಆಸ್ಪತ್ರೆಯ ಖರ್ಚಿಗೆ ಉಳಿತಾಯದ ಹಣ ಸಾಲದೇ ಕೆಲ ಚರಾಸ್ತಿಗಳನ್ನು ಮಾರಾಟ ಮಾಡಬೇಕಾಯಿತು. ಇಷ್ಟು ಹಣ ವೆಚ್ಚ ಮಾಡಿದರೂ ತಂದೆ ಉಳಿಯಲಿಲ್ಲ.

ಮಧುಗಿರಿಯ 44 ವರ್ಷದ ಎಂ.ಎಸ್.ರಘುನಾಥ್ ಈ ಮನೆಯ ಯಜಮಾನ. ಇವರ ತಂದೆ 68 ವರ್ಷದ ಎಂ.ಸತ್ಯನಾರಾಯಣ ಶೆಟ್ಟಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತಾಯಿ 60 ವರ್ಷದ ವಿಶಾಲಾಕ್ಷಮ್ಮ, ಪತ್ನಿ 38 ವರ್ಷದ ಎಂ.ಆರ್.ಗಾಯಿತ್ರಿ, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗ ಅಂಕಿತ್ ಅವರನ್ನು ಒಳಗೊಂಡ ಕುಟುಂಬ ಇವರದು.

ಮಧುಗಿರಿಯೇ ಇವರ ಮೂಲಸ್ಥಾನವಾಗಿದೆ. ಹಿಂದೂ ಧರ್ಮದವರಾದ ಇವರ ಉಪ ಜಾತಿ ಆರ್ಯ ವೈಶ್ಯ. ವ್ಯಾಪಾರ ಇವರ ವೃತ್ತಿಯಾಗಿದ್ದು, ವಾಸವಿರುವ ಮನೆ ಸ್ವಂತದ್ದಾಗಿದೆ. ಮನೆಯ ಅಂದಾಜು ಮೌಲ್ಯ 30 ಲಕ್ಷ ಇರಬಹುದು. ಮಾಸಿಕ 25 ಸಾವಿರ ಆದಾಯ ಹೊಂದಿರುವ ರಘುನಾಥ್ ಯಾವುದೇ ಉಳಿತಾಯಗಳನ್ನು ಹೊಂದಿಲ್ಲ. ಆದರೆ ವ್ಯಾಪಾರದ ಮೇಲೆ 4-5 ಲಕ್ಷ ಹೂಡಿಕೆ ಮಾಡಿದ್ದು, ಅದೇ ಇವರ ಜೀವನಾಧಾರವಾಗಿದೆ.

ಪತ್ನಿ ಎಂ.ಅರ್.ಗಾಯಿತ್ರಿ ಗೃಹಿಣಿಯಾಗಿದ್ದಾರೆ. ಹಾಗಾಗಿ ಅವರಿಂದ ಯಾವುದೇ ಅದಾಯವಿಲ್ಲ. ಅನಾರೋಗ್ಯ ಪೀಡಿತರಾಗಿದ್ದ ತಂದೆ-ತಾಯಿ ಆರೈಕೆ ಮತ್ತು ಮನೆಗೆಲಸದಲ್ಲೇ ಅವರ ಸಮಯ ಕಳೆಯುತ್ತದೆ. ಮಗ ಅಂಕಿತ್ ಪಟ್ಟಣದ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ. ಇದಕ್ಕಾಗಿ ವರ್ಷಕ್ಕೆ 50 ಸಾವಿರದ ಖರ್ಚು ಬರುತ್ತದೆ. ಅಂಗಡಿಯ ಮೇಲೆ 2 ಲಕ್ಷ ಸಾಲವಿದೆ. ಡಿಸಿಸಿ ಬ್ಯಾಂಕಿನ ಸ್ಥಳೀಯ ಶಾಖೆಯಲ್ಲಿ ಸಾಲ ತೆಗೆದು ಬಂಡವಾಳ ಹಾಕಿದ್ದಾರೆ. ಜೀವನಕ್ಕಾಗಿ ಹೆಚ್ಚುವರಿಯಾಗಿ ತಿಂಗಳಿಗೆ ನಾಲ್ಕೈದು ಸಾವಿರ ವ್ಯಯವಾಗುತ್ತದೆ. ಇವರು ಸಸ್ಯಾಹಾರಿಗಳಾಗಿದ್ದು, ಹಾಲು-ಹಣ್ಣು ಇವರ ಪೌಷ್ಟಿಕ ಆಹಾರಗಳಾಗಿವೆ.

ಇತ್ತೀಚೆಗೆ ತಂದೆ ಸತ್ಯನಾರಾಯಣಶೆಟ್ಟಿಯವರ ಆರೋಗ್ಯದಲ್ಲಿ ಏರುಪೇರಾಗಿ ಬೆಂಗಳೂರಿನ ಆಸ್ಪತ್ರೆಗೆ ನಿಯಮಿತವಾಗಿ ತೋರಿಸಬೇಕಿತ್ತು. ಇದಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ 7-8 ಲಕ್ಷ ರೂಪಾಯಿ ಖರ್ಚು ಮಾಡಬೇಕಾಯಿತು. ಕೈ ಸಾಲದ ಮೂಲಕ ಹಣ ಹೊಂಚಿ ಆಸ್ಪತ್ರೆಗೆ ತೋರಿಸಿದರು. ದುಡಿದ ಉಳಿತಾಯದ ಹಣ ಸಾಲದೇ ಕೆಲ ಚರಾಸ್ತಿಗಳನ್ನು ಅದಕ್ಕಾಗಿ ಮಾರಾಟ ಮಾಡಬೇಕಾಯಿತು. ಇಷ್ಟು ಹಣ ವೆಚ್ಚ ಮಾಡಿ ಆಸ್ಪತ್ರೆಗೆ ತೋರಿಸಿದರೂ ತಂದೆ ಉಳಿಯಲಿಲ್ಲ.

ಕೆಲವೇ ದಿನಗಳ ಹಿಂದೆ ಅವರು ಮೃತರಾದರು. ಅರ್ಯವೈಶ್ಯ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳಿಗೂ ಸಾಕಷ್ಟು ವ್ಯಯವಾಯಿತು. ಟಿವಿ, ಪತ್ರಿಕೆಗಳ ಮೂಲಕ, ವಾಟ್ಸಾಪ್, ಫೇಸ್ ಬುಕ್ ಮೂಲಕ ಇವರು ಮಾಧ್ಯಮಗಳ ಸಂಪರ್ಕ ಹೊಂದಿದ್ದಾರೆ. ಇವರಿಗೆ ಸರ್ಕಾರದಿಂದ ಯಾವ ಸವಲತ್ತು ಸಿಕ್ಕಿಲ್ಲ.

ಮಗನ ಕಾಲೇಜು ಶಿಕ್ಷಣಕ್ಕೆ ಹಾಗೂ ತಾಯಿಯ ಅರೋಗ್ಯಕ್ಕೆ ಇವರಿಗೆ ನೆರವು ಬೇಕಿದೆ. ಮಗನಿಗೆ ಉತ್ತಮ ಶಿಕ್ಷಣ ಕೊಡಿಸುವುದು ಮತ್ತು ಉನ್ನತ ವ್ಯಾಸಂಗ ಮಾಡಿಸಿ ಉತ್ತಮ ಉದ್ಯೋಗ ದೊರಕಿಸಿಕೊಡುವುದು ಈ ಕುಟುಂಬದ ಆಶಯವಾಗಿದೆ. ಅದಕ್ಕೆ ಹಣಕಾಸಿನ ಅಡೆತಡೆಗಳಿವೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲದ ಕಾರಣ ಖಾಸಗಿ ಶಾಲೆಗೆ ಕಳುಹಿಸುವುದು ಅನಿವಾರ್ಯ ಎಂಬುದು ಅವರ ಭಾವನೆ. ಮುಂದಿನ ವರ್ಷ ಎಸೆಸ್ಸೆಲ್ಸಿಗೆ ಹೋಗುವ ಮಗನ ಓದಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಅದೇ ಇವರ ಸದ್ಯದ ಸಮಸ್ಯೆ.

ಎಂ.ಎಸ್.ಎಸ್. ಸ್ಟೋರ್ಸ್, ಹೈಸ್ಕೂಲ್ ಸರ್ಕಲ್, ಎಸ್.ಬಿ.ಐ. ಬ್ಯಾಂಕ್ ಎದುರು. ಮಧುಗಿರಿ- 572132 ವಿಳಾಸದಲ್ಲಿ ಇವರು ವಾಸವಾಗಿದ್ದಾರೆ. ಮೊಬೈಲ್: 9901724088.

Leave a Reply

Your email address will not be published.