ಮಹಿಳೆಯರ ಉದ್ಯಮಶೀಲತೆಗೆ ಬೆಂಬಲವೇ ಬೆಳಕು

ಒಂದು ಕಡೆ ಮನೆಯೊಡತಿ ಹೊರಗೆ ಹೋದರೆ ಮನೆ ನಿರ್ವಹಣೆಗೆ ತೊಂದರೆಯಾಗಬಹುದೇನೋ ಎಂಬ ಸಂಕುಚಿತ ಮನೋಭಾವ. ಮತ್ತೊಂದೆಡೆ ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಸಮಸ್ಯೆ. ಈ ಕಾರಣದಿಂದ ಮಹಿಳೆಯರ ಉದ್ಯಮಶೀಲತೆಗೆ ತೊಡಕಾಗಿರುವುದು ನಿಜ.

ನಮ್ಮಲ್ಲಿ ಕೆಲವರಿಗೆ ಯಾರಾದರೂ ಮುಂದೆ ಬರುತ್ತಾರೆ ಎಂದರೆ ಅವರ ಕಾಲೆಳೆಯುವ ಸ್ವಭಾವವೇ ಹೆಚ್ಚು. ಎಷ್ಟೋ ಉದ್ಯಮಿಗಳಾಗಿ ರೂಪುಗೊಳ್ಳಬೇಕಾದವರು ಇಂಥ ಚಟುವಟಿಕೆಯಿಂದ ತೀರಾ ಆರಂಭದಲ್ಲೇ ಹಿಂದೆ ಸರಿದುಬಿಟ್ಟಿಧಾರೆ. ಒಂದು ಕಡೆ ಅವರಿಗೆ ತಮ್ಮ ಉದ್ಯಮಕ್ಕೆ ಅಗತ್ಯವಾದ ಸೌಲಭ್ಯಗಳು, ನೈತಿಕ ಬೆಂಬಲ ಇಲ್ಲದೇ ಹೋಗಬಹುದು. ಕೆಲವರಂತು ಯಾರಾದರೂ ಏನಾದರೂ ಸ್ವಂತ ಕೆಲಸ ಮಾಡಿ ಮುಂದೆ ಬರುತ್ತೇನೆ ಎಂದರೆ, ಅವರು ಉತ್ತರಿಸಲಾಗದ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅವರನ್ನು ಗೊಂದಲಕ್ಕೆ ಸಿಲುಕಿಸಿ ಕಕ್ಕಾಬಿಕ್ಕಿಯಾಗುವಂತೆ ಮಾಡಿಬಿಡುತ್ತಾರೆ.

ಮನೆ, ಸ್ನೇಹಿತರ ವಲಯ, ಸುತ್ತಮುತ್ತಲ ವಾತಾವರಣವೇ ಈ ರೀತಿ ಆದರೆ, ಅವರು ಬೆಳೆಯುವುದು ಹೇಗೆ? ಅದರಲ್ಲೂ ಮಹಿಳೆ ಉದ್ಯಮದಲ್ಲಿ ತೊಡಗಿಕೊಳ್ಳುತ್ತಾಳೆ ಎಂದರೆ ಅವಳಿಗೆ ನೂರೆಂಟು ಸಮಸ್ಯೆ. ಏನೋ ಮಾಡಬೇಕು ಎಂದುಕೊಂಡಿರುವ ಅವಳು ಅದನ್ನು ತನ್ನ ಆಪ್ತರಲ್ಲಿ ಹೇಳಿದಾಗ ಮೊದಲೇ ಸಿದ್ಧಪಡಿಸಿಕೊಂಡಿರುವ ಸ್ಕ್ರಿಪ್ಟ್ ರೀತಿಯಲ್ಲಿ ಅವಳು ಪ್ರತಿಯೊಂದನ್ನೂ ವಿವರಿಸಬೇಕಾಗುತ್ತದೆ. ಅದು ಕಷ್ಟಸಾಧ್ಯ. ಎಷ್ಟೋ ದೊಡ್ಡ ದೊಡ್ಡ ಉದ್ಯಮಿಗಳೇ ಎದ್ದುಬಿದ್ದು ದೊಡ್ಡಮಟ್ಟಕ್ಕೆ ಬಂದಿರುತ್ತಾರೆ. ಅಂತಹದರಲ್ಲಿ ಹೀಗೇ ಆಗುತ್ತೆ, ತಾನು ಹೀಗೇ ಮಾಡುತ್ತೇನೆ ಎಂದು ಕರಾರುವಾಕ್ಕಾಗಿ ಹೇಳಲು ಯಾವ ಮಹಿಳೆಗೂ ಸಾಧ್ಯವಿಲ್ಲ. ತಾನು ಹೀಗೆ ಮಾಡಬಹುದು ಎಂದು ಸ್ಥೂಲವಾಗಿ ಹೇಳಬಹುದು. ಅದಕ್ಕೆ ಬೆಂಬಲ ದೊರೆತರೆ ಅದು ಉದ್ಯಮವಾಗುವುದರಲ್ಲಿ ಸಂಶಯವಿಲ್ಲ.

ಆಕೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದು ಆ ಕಲಾವಿದೆಗೆ ಸಲಹೆ ಕೊಟ್ಟಿದ್ದರು. ಕಲಾವಿದೆಗೂ ತಾನು ಆ ಕ್ಷೇತ್ರದಲ್ಲಿ ಮುಂದೆ ಬರುವ ವಿಶ್ವಾಸವಿತ್ತು. ಆದರೆ ಮನೆಯಲ್ಲಿ ಸಹಕಾರವಿರಲಿಲ್ಲ.

ಆಕೆ ಪ್ರತಿಭಾವಂತ ಕಲಾವಿದೆ. ಮಡಿಕೆ-ಕುಡಿಕೆಗಳ ಮೇಲೆ ಚಿತ್ತಾರಗಳನ್ನು ಮೂಡಿಸುವುದರಲ್ಲಿ ನಿಸ್ಸೀಮರು. ಅವರ ಮನೆಯಲ್ಲಿ ಕಣ್ಣಾಡಿಸಿದ ಕಡೆಯೆಲ್ಲೆಲ್ಲಾ ಒಂದೊಂದು ಕಲಾಕೃತಿ. ಅವರ ಮನೆಗೆ ಭೇಟಿಕೊಟ್ಟವರ್ಯಾರೂ ಸುಮ್ಮನೆ ಬರುತ್ತಿರಲಿಲ್ಲ, ಅವರಿಂದ ಏನಾದರೂ ವಸ್ತು ಕೊಂಡುಕೊಂಡೇ ಬರುತ್ತಿದ್ದರು; ಆಕೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದು ಆ ಕಲಾವಿದೆಗೆ ಸಲಹೆ ಕೊಟ್ಟಿದ್ದರು. ಕಲಾವಿದೆಗೂ ತಾನು ಆ ಕ್ಷೇತ್ರದಲ್ಲಿ ಮುಂದೆ ಬರುವ ವಿಶ್ವಾಸವಿತ್ತು. ಆದರೆ ಮನೆಯಲ್ಲಿ ಸಹಕಾರವಿರಲಿಲ್ಲ. ಅವರ ಬಗ್ಗೆ, ಅವರ ಕೆಲಸದ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರವಾದರೆ ಮನೆಯಲ್ಲಿ ಗಂಡ, ಅತ್ತೆ, ಮಾವನವರಿಗೆ ಇಷ್ಟವಾಗುವುದಿಲ್ಲ ಎಂದು ಅವರು ಆ ಪ್ರಚಾರಕ್ಕೂ ಒಪ್ಪದೇ, ಎಲೆಮರೆಯ ಕಾಯಿಯಾಗೇ ಉಳಿದುಬಿಟ್ಟರು.

ಪಾಕಪ್ರವೀಣೆಯಾದ ಮತ್ತೊಬ್ಬ ಮಹಿಳೆಯಂತೂ ಈಗ ಹಬ್ಬ-ಹರಿದಿನ, ವಿವಿಧ ಸಮಾರಂಭಗಳಿಗೆ ಸಿಹಿ ಪದಾಥಗಳನ್ನು ಮಾಡಿಕೊಡುವಷ್ಟಲ್ಲಿ ತೃಪ್ತಿಪಟ್ಟುಕೊಂಡಿದ್ಧಾರೆ. ಯಾವುದೇ ಅಡುಗೆಯಾದರೂ ರುಚಿಯಾಗಿ ಮಾಡುವುದರಲ್ಲಿ ಸೈ ಎನಿಸಿಕೊಂಡಿದ್ದ ಆಕೆ ಹೊಸ ರುಚಿಗಳ ಬಗ್ಗೆ ಎಲ್ಲೇ ತರಬೇತಿ ನೀಡುತ್ತಿದ್ದರೂ ಅಲ್ಲಿಗೆ ಹೋಗಿ ಕಲಿತುಕೊಂಡಿದ್ಧಾರೆ, ಟಿ.ವಿ. ಚಾನೆಲ್‍ಗಳ ಅಡುಗೆ ಕಾರ್ಯಕ್ರಮಗಳನ್ನು ತಪ್ಪದೇ ನೋಡಿ ವಿವಿಧ ಬಗೆಯ ಅಡುಗೆಗಳನ್ನು ಕರಗತ ಮಾಡಿಕೊಂಡಿದ್ಧಾರೆ. ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನೂ ಪಡೆದಿದ್ಧಾರೆ. ಅವರಿಗೆ ಶುಚಿಯಾದ, ಮನೆ ರುಚಿಯಂತಿರುವ ದುಬಾರಿಯಲ್ಲದ ಹೋಟಲ್ ತೆರೆಯಬೇಕೆಂಬ ಮಹಾದಾಸೆ. ಆದರೆ ಅದು ಅವರ ಮನೆಯವರಗೆ ರುಚಿಸಲಿಲ್ಲ. ಹಾಗಾಗಿ ಅವರ ರುಚಿ ಜನರಿಗೆ ತಲುಪಲಿಲ್ಲ.

ಒಂದು ಕಡೆ ಮನೆಯೊಡತಿ ಹೊರಗೆ ಹೋದರೆ ಮನೆ ನಿರ್ವಹಣೆಗೆ ತೊಂದರೆಯಾಗಬಹುದೇನೋ ಎಂಬ ಸಂಕುಚಿತ ಮನೋಭಾವ. ಮತ್ತೊಂದೆಡೆ ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಸಮಸ್ಯೆ. ಈ ಕಾರಣದಿಂದ ಮಹಿಳೆಯರ ಉದ್ಯಮಶೀಲತೆಗೆ ತೊಡಕಾಗಿರುವುದು ನಿಜ.

ಕಾಲೇಜುಮಟ್ಟದಲ್ಲೇ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಅಪಾರ ಜ್ಞಾನ ಹೊಂದಿದ್ದ ಯುವತಿಗೆ ಮನೆಯಲ್ಲಿ ಬಡತನ. ಕಂಪ್ಯೂಟರ್ ಕ್ಷೇತ್ರದಲ್ಲಿ ತಾನು ಏನಾದರೂ ಸಾಧನೆ ಮಾಡಬೇಕು, ತಾನು ದೊಡ್ಡ ಕಂಪೆನಿಯ ಒಡತಿ ಆಗಬೇಕು ಎಂಬ ಕನಸು ಆಕೆಯದು. ತನ್ನ ಮದುವೆಗೆ ಎಂದು ತೆಗೆದಿಟ್ಟಿದ್ದ ಹಣವನ್ನು ಕೊಟ್ಟರೆ ತಾನು ಆ ಹಣದಿಂದ ಏನಾದರೂ ಸಾಧನೆ ಮಾಡುತ್ತೇನೆ ಎಂದು ಆಕೆ ಅವರಪ್ಪನನ್ನು ಕೇಳಿದಾಗ ನೀನು ದೊಡ್ಡ ಕಂಪೆನಿಯ ಒಡತಿಯಾಗುವುದೇನೂ ಬೇಡ, ಮನೆಯೊಡತಿಯಾಗಿ ಸಂಸಾರ ನಡೆಸಿದರೆ ಸಾಕು ಎಂದರು.

ಮಹಿಳೆಯ ಸಾಧನೆಗೆ ಹೊರಗಿನಿಂದ ಪ್ರಶಂಸೆ ದೊರೆತರೂ ಮನೆಯಲ್ಲಿ ಯಾವುದೇ ಮೆಚ್ಚುಗೆ ವ್ಯಕ್ತವಾಗುವುದಿಲ್ಲ. ನಮ್ಮ ಸಮಾಜದಲ್ಲಿ ಗಂಡನ ಫೋಟೋ, ಮಾಹಿತಿ ಮಾಧ್ಯಮಗಳಲ್ಲಿ ಬಂದಾಗ ಹರ್ಷಿಸುವ ಹೆಂಡತಿಯರಷ್ಟು, ಹೆಂಡತಿಯರ ಸಾಧನೆಗೆ ಗಂಡಂದಿರು ಮೆಚ್ಚುಗೆ ಸೂಚಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾದ ಉದಾಹರಣೆಗಳೂ ಇವೆ. ಆದರೆ ಆ ಸಂಖ್ಯೆ ಕಡಿಮೆ.

ಒಂದು ಕಡೆ ಮನೆಯೊಡತಿ ಹೊರಗೆ ಹೋದರೆ ಮನೆ ನಿರ್ವಹಣೆಗೆ ತೊಂದರೆಯಾಗಬಹುದೇನೋ ಎಂಬ ಸಂಕುಚಿತ ಮನೋಭಾವ. ಮತ್ತೊಂದೆಡೆ ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಸಮಸ್ಯೆ. ಈ ಕಾರಣದಿಂದ ಮಹಿಳೆಯರ ಉದ್ಯಮಶೀಲತೆಗೆ ತೊಡಕಾಗಿರುವುದು ನಿಜ.

ಆದರೂ ಎಂತಹ ಕಷ್ಟದ ಪರಿಸ್ಥಿತಿ ಎದುರಾದರೂ ಅದನ್ನು ಮೀರಿ ದೊಡ್ಡ ಉದ್ಯಮಿಗಳಾಗಿ ಬೆಳೆದಿರುವಂತಹ ಮಹಿಳೆಯರೂ ಇದ್ಧಾರೆ. ಕರ್ನಾಟಕದಲ್ಲಿ ಅವೇಕ್ (ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘ) ನಂತಹ ಕೆಲ ಸಂಸ್ಥೆಗಳು ಮಹಿಳೆಯರನ್ನು ಉದ್ಯಮಿಗಳನ್ನಾಗಿ ಬೆಳೆಸುವಲ್ಲಿ ಹೆಚ್ಚಿನ ಸಹಕಾರ ನೀಡಿವೆ.

ಮನೆಯಲ್ಲಿ ಯಾರಾದರೂ ಒಬ್ಬರು ಸಾಧನೆ ಮಾಡಿದರೆ ಅದರ ಪ್ರತಿಫಲವನ್ನು ಎಲ್ಲರೂ ಅನುಭವಿಸುತ್ತಾರೆ. ಹಾಗೆಯೇ ಒಂದು ದೊಡ್ಡ ಉದ್ಯಮದಿಂದ ಹಲವಾರು ಜನರಿಗೆ ನೆರವಾಗುತ್ತದೆ. ಹಾಗಾಗಿ ಪ್ರತಿಯೊಂದು ಸಣ್ಣ ಕೆಲಸಕ್ಕೂ ಆರಂಭದಲ್ಲೇ ಸೂಕ್ತ ಬೆಂಬಲ, ನೆರವು ದೊರೆತರೆ ಅದು ದೊಡ್ಡ ಉದ್ಯಮವಾಗಲು ಸಾಧ್ಯ.

*ಪತ್ರಕರ್ತೆ, ಲೇಖಕಿ, ಆಪ್ತಸಮಾಲೋಚಕಿ.

Leave a Reply

Your email address will not be published.