ಮಿತ್ರದ್ರೋಹ ರಾಜಕೀಯದ ಫಲಿತಾಂಶ

ಮಂಡ್ಯ, ಮೈಸೂರು, ಹಾಸನ ಮತ್ತು ತುಮಕೂರು ಕ್ಷೇತ್ರಗಳು ಸಾಂಪ್ರದಾಯಿಕ ಲೆಕ್ಕಾಚಾರದಿಂದ ಭಿನ್ನವಾದ ಫಲಿತಾಂಶ ನೀಡಿವೆ. ಮೈತ್ರಿಯೆಂಬುದು ಎಷ್ಟು ನಾಜೂಕಾಗಿದೆ, ಅಪನಂಬಿಕೆ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ನಿರೂಪಿಸಿದ ನಿದರ್ಶನಗಳಿವು.

ಮೋದಿ ಅವರ (ಬಿ.ಜೆ.ಪಿ. ಅಲ್ಲ) ಅಭೂತಪೂರ್ವ ಯಶಸ್ಸು ಎಕ್ಸಿಟ್ ಪೋಲ್‍ನ ಫಲಿತಾಂಶಗಳು ಬರುವ ಮೊದಲೇ ನಿಚ್ಛಳವಾಗಿತ್ತು. ಆದರೆ ಎದ್ದು ಕಾಣುತ್ತಿದ್ದ ಈ ಗೋಡೆಬರಹವನ್ನು, ಅವರನ್ನು ವಿರೋಧಿಸಿದ ಪಕ್ಷಗಳು ಮತ್ತು ಪ್ರಗತಿಪರರು ಓದಿಕೊಳ್ಳಲು ಸಿದ್ಧರಾಗಿರಲಿಲ್ಲ. ಹಾಗೆ ನೋಡಿದರೆ ಯಾವುದೇ ಗಂಭೀರ ವಿಷಯಗಳನ್ನಾಧರಿಸದೆ, ಕೇವಲ ವ್ಯಕ್ತಿಯ ಆರಾಧನೆ, ಯುದ್ಧೊನ್ಮಾದ, ಹುಸಿರಾಷ್ಟ್ರೀಯತೆಯ ಭಾವಾವೇಶ, ಪಾಕಿಸ್ತಾನ (ಮುಸ್ಲಿಂ) ದ್ವೇಷ, ಚೋರ್, ಚೌಕೀದಾರ್ ಎಂಬ ಪದಗಳನ್ನೇ ಹಿಡಿದು ಜಾಲಾಡುವುದನ್ನು ಆಧರಿಸಿದ ಈ ಚುನಾವಣೆಯು ಘೋಷಣೆ, ಅರಚಾಟ ಮತ್ತು ಪರಸ್ಪರ ನಿಂದನೆಯ ಮಟ್ಟದಲ್ಲಿ ನಡೆಯಿತು. ಯಾರ ಧ್ವನಿ ಮತ್ತು ನಿಂದನೆಯ ಮಟ್ಟ ಹೆಚ್ಚಾಯಿತೋ ಅವರೇ ಗೆಲುವಿನ ಸರದಾರರರಾದರು. ದೇಶವನ್ನು ಕಟ್ಟಲು ವಿಚಾರ ಅಗತ್ಯವಿಲ್ಲ; ಭಾವನೆಗಳನ್ನು ಕೆರಳಿಸುವ ಆಟವೇ ಸಾಕು ಎಂಬುದು ಸಾಬೀತಾಯಿತು.

ಈ ಹಿನ್ನೆಲೆಯಲ್ಲಿ ನೋಡಿದರೆ ಮಂಡ್ಯ, ಮೈಸೂರು ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳ ಚುನಾವಣೆಗಳು ಇಂತಹ ವಿಷಯಗಳ ಆಧಾರದ ಮೇಲೆ ನಡೆಯಲಿಲ್ಲ. ಆದರೂ ಅಲ್ಲಿನ ಫಲಿತಾಂಶಗಳು ನಿರೀಕ್ಷೆಗಳನ್ನು ಹುಸಿಗೊಳಿಸುವುದರಲ್ಲಿ  ಅನುಮಾನವಿರಲಿಲ್ಲ. ನಿರೀಕ್ಷೆಯನ್ನು ನಿಜಗೊಳಿಸಿದ ಏಕೈಕ ಕ್ಷೇತ್ರವೆಂದರೆ, ಹಾಸನ ಮಾತ್ರ.

ಅಪಹಾಸ್ಯಕ್ಕೀಡಾದ ಚುನಾವಣಾ ಮೈತ್ರಿ, ನಾಯಕರ ಸ್ವಜನ ಪಕ್ಷಪಾತ, ಸ್ವಪ್ರತಿಷ್ಠೆ, ತಮ್ಮದೇ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಹೆಣೆದ ರಹಸ್ಯ ಕಾರ್ಯತಂತ್ರಗಳು, ಪಾಳೇಗಾರಿಕೆ ವರ್ತನೆ, ಇವೆಲ್ಲವೂ ಒಟ್ಟಾಗಿ ಸೇರಿ ಈ ಫಲಿತಾಂಶವನ್ನು ತಂದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದ ಪಕ್ಷದ ನಾಯಕನನ್ನು ಬೇಷರತ್ತಾಗಿ ಮುಖ್ಯಮಂತ್ರಿಯಾಗಿಸಲು ಕಾಂಗ್ರೆಸ್ ಮುಂದೆ ಬಂದದ್ದು ಔದಾರ್ಯದಿಂದಲ್ಲ; ರಾಜಕೀಯ ಮುತ್ಸದ್ದಿತನದಿಂದಲ್ಲ. ಸಂದರ್ಭದ ಒತ್ತಡದಿಂದ. ಅದು ಮೇಲೆ ಕೂತವರ ಆದೇಶದಿಂದ ಕೂಡಿಬಂದ ಕಂಕಣ; ಒಲ್ಲದ ಮದುವೆ. ಆಗಲೇ ಕಾಂಗ್ರೆಸ್‍ನಲ್ಲಿ ಒಳಬೇಗುದಿಗಳಿದ್ದವು.

ಅಧಿಕಾರ ಹಿಡಿದು ಒಂದು ವರ್ಷವಾದರು ಪಕ್ಷಗಳ ನಡುವೆ ಸಮನ್ವಯತೆಯಿಲ್ಲ. ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳ ರೂಪುರೇಶೆಯೂ ಸಿದ್ಧವಾಗಿಲ್ಲ. ಇಂಥ ಸಂದರ್ಭದಲ್ಲಿ ಮೈತ್ರಿ ಎಂಬುದು ಆಚರಣೆಗೆ ಬಾರದ ತತ್ವ.

ಜೆ.ಡಿ.ಎಸ್. ಗೆಲ್ಲಬಹುದಾಗಿದ್ದ ಮೈಸೂರು ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ತಂದುಕೂರಿಸುವಲ್ಲಿ ಯಶಸ್ಸು ಕಂಡಿತು. ಕಾಂಗ್ರೆಸ್‍ನ ಮುದ್ದಹನುಮೇಗೌಡರು ಗೆಲ್ಲಬಹುದಾಗಿದ್ದ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ತಮ್ಮ ಹಳೆಯ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ವಕ್ಕರಿಸಿದರು. ಅವರು ಸ್ಥಾನಪಲ್ಲಟ ಮಾಡಿದ್ದು ಒಬ್ಬ ಸುಸಂಸ್ಕತ ರಾಜಕಾರಣಿಯನ್ನು.

ಮೈಸೂರು ಕ್ಷೇತ್ರದಲ್ಲಿ ಜೆ.ಡಿ.ಎಸ್. ಮತದಾರರು, ಕಾಂಗ್ರೆಸ್‍ನ ಒಕ್ಕಲಿಗರು ಕೈಕೊಡುವುದು ಸ್ಪಷ್ಟವಾಗಿ ತ್ತು. ಹಾಗೆಯೇ ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ‘ನಿಷ್ಠಾವಂತ’ ಕಾರ್ಯಕರ್ತರು ದೇವೇಗೌಡರಿಗೆ ಬುದ್ಧಿ ಕಲಿಸಲು ಸಜ್ಜಾಗಿದ್ದರು. ಅನೇಕ ಕಾರಣಗಳಿಂದ ಜೆ.ಡಿ.ಎಸ್. ಪಕ್ಷದಿಂದ ಕುರುಬರೂ ಸೇರಿದಂತೆ ಹಲವು ಓ.ಬಿ.ಸಿ. ಮತದಾರರು ದೂರವಾಗಿರುವುದನ್ನು ಆ ಪಕ್ಷ ಗಮನಿಸಿದರೂ ಗಣನೆಗೆ ತಂದುಕೊಂಡಂತಿಲ್ಲ! ಇವೆಲ್ಲವೂ ನಿರೀಕ್ಷಿತ ಫಲಿತಾಂಶ ಬಾರದಿರಲು ಕಾರಣ. ದೇವೇಗೌಡರು ಕಡಿಮೆ ಅಂತರದಿಂದ ಸೋತಿದ್ದಾರೆಂಬುದೊಂದೇ ಸಮಾಧಾನ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕೇವಲ ಮಂಡ್ಯ.

ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿದೆಯೇನೋ ಎಂಬಷ್ಟರ ಮಟ್ಟಿಗೆ ಅಲ್ಲಿ ಚುನಾವಣೆಯ ಕಾವು, ಪ್ರಚಾರ, ಆರ್ಭಟ ನಡೆಯಿತು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೊದಲೇ ಜೆ.ಡಿ.ಎಸ್. ನಾಯಕರು ತಮ್ಮ ಸೋಲಿಗೆ ಮುನ್ನುಡಿ ಬರೆದರು. ರೇವಣ್ಣ, ಸಿ.ಎಸ್.ಪುಟ್ಟರಾಜು, ಶ್ರೀಕಂಠೇಗೌಡ, ಡಿ.ಸಿ.ತಮ್ಮಣ್ಣ ಒಬ್ಬ ಮಹಿಳೆಯ ವಿರುದ್ಧ ನಿರ್ದಯ ದಾಳಿ ನಡೆಸಿದರು. ಪಾಳೇಗಾ ರಿಕೆಯ ವರ್ತನೆಯನ್ನು ಮೆರೆದರು. ವಿಧಾನಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್. ಸಾಧಿಸಿದ ಯಶಸ್ಸು ಆ ಪಕ್ಷದ ಜನನಾಯಕರ ಪಿತ್ತ ನೆತ್ತಿಗೇರಿಸಿತ್ತು.

ವರ್ತನೆಯಲ್ಲಿ ಪಾಳೇಗಾರಿಕೆಯ ಚಹರೆ ಉಳಿಸಿಕೊಂಡಿದ್ದರೂ, ಪಾಳೇಗಾರಿಕೆಯ ವಿರುದ್ಧ ತಿರುಗಿಬೀಳುವ ಸ್ವಭಾವವನ್ನು ಮಂಡ್ಯದ ಜನರು ಈ ಬಾರಿ ದೇವೇಗೌಡರ ಕುಟುಂಬದ ವಿರುದ್ಧವೂ ಪ್ರಯೋಗಿಸಿದರು.

ಸುಮಲತಾ ಅವರಿಗೆ ಜನರ ಸಹಾನುಭೂತಿ, ಜನನಾಯಕರ ದರ್ಪ, ನಿಖಿಲ್ ಕುಮಾರಸ್ವಾಮಿಯ ಅಭ್ಯರ್ಥಿತನ ಮತ್ತು ತೀವ್ರ ಸಂಕಷ್ಟ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತಾಳ್ಮೆಗೆಡದೆ, ಸಭ್ಯತೆಯ ಮಟ್ಟದಲ್ಲಿ ಚುನಾವಣೆಯನ್ನು ನಿರ್ವಹಿಸಿದ್ದು ಗೆಲುವನ್ನು ಸಾಧಿಸಲು ಕಾರಣವಾಯಿತು. ಮಂಡ್ಯ ಜನತೆ ಪ್ರಜಾಪ್ರಭುತ್ವದ ಗೆಲುವು ಏನೆಂದು ತೋರಿಸಿಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್‍ನ ನಾಯಕರಿಂದ ಮತ್ತು ಬಿಜೆಪಿಯ ಬೆಂಬಲದಿಂದ ಗೆಲುವು ಪಡೆದ ಸುಮಲತಾ ಅವರು ಮುಂದೆ ಕಾಂಗ್ರೆಸ್‍ಗೆ ಆಗಮಿಸುವರೋ, ಬಿಜೆಪಿಗೆ ಒಲಿಯುವರೋ ಎಂಬುದು ಕುತೂಹಲಕಾರಿ. 

ಜನರನ್ನು ಕೆರಳಿಸುವುದರಲ್ಲಿಯೇ ತಮ್ಮ ಸಂಸತ್ ಸದಸ್ಯತ್ವದ ಹೆಚ್ಚು ಅವಧಿಯನ್ನು ಕಳೆದ ಪ್ರತಾಪಸಿಂಹ ಚುನಾವಣೆಯ ಪೂರ್ವದಲ್ಲಿ ಗೆಲ್ಲುವ ಅಭ್ಯರ್ಥಿಯಾಗಿರಲಿಲ್ಲ. ತಮ್ಮ ಹಿಡಿತ ಮೈಸೂರಿನಲ್ಲಿ ಇನ್ನೂ ಇದೆಯೆಂದು ಸಾಬೀತುಪಡಿಸಲು, ಪ್ರತಿಷ್ಠೆಯಗಿ ಸ್ವೀಕರಿಸಿದ ಸಿದ್ದರಾಮಯ್ಯನವರು ವಿಜಯಶಂಕರ್ ಅವರನ್ನು ಅಭ್ಯರ್ಥಿ ಮಾಡಿದಾಗಲೇ ಸೋಲು ನಿಚ್ಛಳವಾಗಿ ತ್ತು. ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ಸರಿದಾರಿಗೆ ತರಲು ಸಿದ್ದರಾಮಯ್ಯನವರು ಸೋತಿದ್ದರು. ಇದರಿಂ ದಾಗಿಯೇ ಮೈಸೂರು ಲೋಕಸಭಾ ಕ್ಷೇತ್ರದ ಒಕ್ಕ ಲಿಗರು ಬಿಜೆಪಿಗೆ ಒಲಿದರು. ಅವರಲ್ಲಿ ಬಹುತೇಕ ಜೆ.ಡಿ.ಎಸ್. ಪಕ್ಷದ ಸಾಂಪ್ರದಾಯಿಕ ಮತದಾರರೇ! ಎದುರಾಳಿಯನ್ನು ಹಣಿಯುವುದಕ್ಕಿಂತ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುವ ತಂತ್ರದಿಂದ ಮೈಸೂರು ಕ್ಷೇತ್ರ ಬಿ.ಜೆ.ಪಿ. ಪಾಲಾಗಲು ಹೆಚ್ಚಿನ ಕಾರಣ.

ಅವರು ಬಿ.ಜೆ.ಪಿ.ಗೆ ಪಕ್ಷಾಂತರ ಮಾಡಿದ್ದು ಅವರಿಗೆ ವರವೇ ಆಯಿತು. ಜೊತೆಗೆ ಜೆ.ಡಿ.ಎಸ್.ನ ಸಾಂಪ್ರದಾಯಿಕ ಗಟ್ಟಿ ಮತಗಳು ಅವರ ಕಕ್ಷೆಯಿಂದ ಆಚೆಗೆ ಜಿಗಿಯಲಿಲ್ಲ.

ನೋಡಲು ಪಾಳೇಗಾರನಂತೆ ವರ್ತಿಸುವ ರೇವಣ್ಣ ತಮ್ಮ ಮಗನ ಗೆಲುವಿಗೆ ಹಾಸನದಲ್ಲಿ ನಯದ ರಾಜ ಕಾರಣ ಮಾಡಿದರು. ಸ್ವಪ್ರತಿಷ್ಠೆ ತೊರೆದು ಮೈತ್ರಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ನಾಯಕರನ್ನು ಭೇಟಿಯಾದರು. ಆ ತನಕ ಕಾಂಗ್ರೆಸ್‍ನಲ್ಲಿದ್ದ ಎ.ಮಂಜು ಅವರು ಬಿ.ಜೆ.ಪಿ.ಗೆ ಪಕ್ಷಾಂತರ ಮಾಡಿದ್ದು ಅವರಿಗೆ ವರವೇ ಆಯಿತು. ಜೊತೆಗೆ ಜೆ.ಡಿ.ಎಸ್.ನ ಸಾಂಪ್ರದಾಯಿಕ ಗಟ್ಟಿ ಮತಗಳು ಅವರ ಕಕ್ಷೆಯಿಂದ ಆಚೆಗೆ ಜಿಗಿಯಲಿಲ್ಲ. ಹೀಗಾಗಿ ಹಾಸನ ಜೆ.ಡಿ.ಎಸ್. ನಲ್ಲೇ ಉಳಿಯಿತು.

ವಿಚಾರಶೂನ್ಯವಾದ, ವ್ಯಕ್ತಿಯ ಆರಾಧನೆಯೇ ಪ್ರಮುಖವಾಗಿ ಮೆರೆದ ಈ ಚುನಾವಣೆಯಲ್ಲಿನ ಈ ನಾಲ್ಕು ಕ್ಷೇತ್ರಗಳ ಫಲಿತಾಂಶಗಳು ಸಾಂಪ್ರದಾಯಿಕ ಲೆಕ್ಕಾಚಾರದಿಂದ ಭಿನ್ನವಾದ ತೀರ್ಪು ನೀಡಿವೆ. ಮೈತ್ರಿಯೆಂಬುದು ಎಷ್ಟು ನಾಜೂಕಾಗಿದೆ, ಅಪನಂಬಿಕೆ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ನಿರೂಪಿಸಿದ ಫಲಿತಾಂಶಗಳಿವು.

Leave a Reply

Your email address will not be published.