ಮುಂದಿನದು ಬೋನಸ್ ಜೀವನ!

-ಡಾ.ಎನ್.ಸತೀಶ್ ಗೌಡ

ಆತ್ಮತೃಪ್ತಿ, ಆತ್ಮಗೌರವ ಹಾಗೂ ಆತ್ಮಾವಲೋಕನ, ಈ ಮೂರು ಅಂಶಗಳನ್ನು ಪ್ರತಿ ವರ್ಷ ಮೆಲುಕು ಹಾಕಬೇಕಾಗುತ್ತದೆ. ಹಳೆಯ ವರ್ಷಗಳಲ್ಲಿ ನಾವು ನಡೆಸಿದ ಜೀವನ ಶೈಲಿ, ಸಾಧನೆಗಳ ಲೆಕ್ಕಾಚಾರ, ಬೇರೆಯವರಿಗೆ ಹಾಗೂ ಸಮಾಜಕ್ಕೆ ನೀಡಿದ ಸೇವೆ, ತಂದೆ-ತಾಯಿ ಹಾಗೂ ಸ್ನೇಹಿತರ ಜೊತೆ ನಡೆದುಕೊಂಡ ಪರಿ ಹಾಗೂ ನಮ್ಮ ಉತ್ತಮ ಗುಣಗಳ ಅವಲೋಕನ ಮಾಡಿಕೊಂಡಾಗ ಮುಂದಿನ ವರ್ಷದಲ್ಲಿ ನಾವು ನಮ್ಮ ಗುರಿಗಳನ್ನು ಹೇಗೆ ಈಡೇರಿಸಿಕೊಳ್ಳಬೇಕು ಮತ್ತು ಮುಂದಿನ ಭವಿಷ್ಯದಲ್ಲಿ ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.

ಪ್ರತಿವರ್ಷವೂ ಎಷ್ಟೇ ಅವಘಡಗಳು ಉಂಟಾದರೂ, ದೇವರು ನನ್ನನ್ನು ಉಳಿಸಿಕೊಂಡಿದ್ದಾನೆ, ಹಾಗಾಗಿ ಮುಂದಿನ ಜೀವನ ನನಗೆ ಬೋನಸ್ ಆಗಿ ಲಭಿಸಿದ್ದು, ಏನಾದರೂ ಉತ್ತಮ ಕೆಲಸವನ್ನು ಮಾಡಿ, ಮುಂದಿನ ವರ್ಷಕ್ಕೆ ಬದುಕುವ ಅರ್ಹತೆಯನ್ನು ಪಡೆದುಕೊಂಡಾಗ, ವ್ಯಕ್ತಿತ್ವ ಹಾಗೂ ಜೀವನವನ್ನು ಇನ್ನೂ ಸುಂದರಗೊಳಿಸಬಹುದು. ಈ ದೇಹಕ್ಕೆ ಅಳಿವುಂಟು ನಾವು ಮಾಡಿದ ಸಾಧನೆಗೆ ಅಳಿವಿಲ್ಲ. ಪ್ರತಿವರ್ಷವೂ, ಇನ್ನೂ ಹೆಚ್ಚಿನ ಸಾಧನೆ ಮಾಡಿ, ನಾವು ಮಾಡಿದ ಸಾಧನೆಯನ್ನ ಮುರಿಯುತ್ತಾ ಹೋಗಬೇಕು.

ಆಕಳು ಹಾಲನ್ನು ಕೊಟ್ಟು, ತೆಂಗಿನ ಮರ ಫಲವನ್ನು ನೀಡಿ, ಅವುಗಳ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತವೆ. ಆದರೆ ಮನುಷ್ಯರಾದ ನಾವು ಅವುಗಳೆಲ್ಲವನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ ವಿನಾ ಅವುಗಳಂತೆ, ನಾವು ಸಮಾಜಕ್ಕೆ ಮಾಡುವ ಸಹಾಯವಾದರೂ ಏನು, ಎಂಬುದನ್ನು ಗಂಭೀರವಾಗಿ ಆಲೋಚಿಸುವುದಿಲ್ಲ. ಗುರು-ಹಿರಿಯರನ್ನು ಗೌರವಿಸಿ, ಮಕ್ಕಳ ಮುಗ್ಧತೆಯನ್ನು ಪ್ರೀತಿಸಿ, ಸರಳಜೀವನವನ್ನು ಮೈಗೂಡಿಸಿಕೊಂಡು, ಮಹಿಳೆಯರನ್ನು ಅಪಾರವಾಗಿ ಗೌರವಿಸಿ, ಉತ್ತಮ ನಡತೆ ಹಾಗೂ ಭ್ರಷ್ಟಾಚಾರರಹಿತ ಸೇವೆಯನ್ನು ದೇಶಕ್ಕೆ ನೀಡಿದ್ದೇ ಆದರೆ, ಅದು ದೊಡ್ಡ ಕೊಡುಗೆಯೇ ಹೌದು.

ದೇಶದಲ್ಲಿ ಸಂಸತ್ತು ನ್ಯಾಯಾಂಗ ಹಾಗೂ ಕಾರ್ಯಾಂಗ ಇವೆಲ್ಲಾ ಸಂಸ್ಥೆಗಳಿಗಿAತ ಅತ್ಯಂತ ದೊಡ್ಡ ಸಂಸ್ಥೆಯೆAದರೆ ಅದು “ಕುಟುಂಬ”. ಕುಟುಂಬದಲ್ಲಿ ಅತ್ಯಂತ ಜವಾಬ್ದಾರಿಯುತವಾದ ಪಾತ್ರವನ್ನು ತಂದೆ-ತಾಯಿಗಳು ವಹಿಸಿಕೊಂಡು, ತಮ್ಮ ಮಕ್ಕಳಿಗೆ, ಮೌಲ್ಯಯುತವಾದ ಜೀವನ, ಉತ್ತಮ ಸಂಸ್ಕಾರ ಹಾಗೂ ಸರಳ ಜೀವನದ ಸೂತ್ರಗಳ ಬಗ್ಗೆ ತಿಳಿಸಿಕೊಟ್ಟರೆ, ದೇಶದಲ್ಲಿ ಹಾಗೂ ಪ್ರಪಂಚದಲ್ಲಿ ದುರಾಸೆಯ ಚಟದಿಂದ ನಡೆಯುವ ಎಲ್ಲಾ ಅಪರಾಧಗಳನ್ನು ಮುಕ್ತಗೊಳಿಸಿ ಉತ್ತಮ ಸ್ವಾಸ್ಥ÷್ಯ ಸಮಾಜವನ್ನು ನಿರ್ಮಿಸಬಹುದು.

ಪಾಶ್ಚಾತ್ಯ ಸಂಸ್ಕöÈತಿಯ ಪರಿಣಾಮ-ಪ್ರಭಾವದಿಂದ ಭಾರತದಲ್ಲಿ ಕುಟುಂಬದ ಪರಿಕಲ್ಪನೆ ಹಾಗೂ ಮಹತ್ವ ದಿನೇದಿನೇ ಕಡಿಮೆಯಾಗುತ್ತಾ ಬರುತ್ತಿರುವುದು ನೋವಿನ ಸಂಗತಿ. ಪ್ರತಿ ವರ್ಷದ ಕೊನೆಯ ದಿನಾಚರಣೆ, ಬಹಳ ಅವೈಜ್ಞಾನಿಕವಾಗಿ ಆಚರಿಸುವ ಬದಲಾಗಿ, ಕುಟುಂಬದವರೊಡನೆ ಒಡಗೂಡಿ, ಪ್ರತಿಯೊಬ್ಬರೂ ಆ ಪ್ರಸ್ತುತ ವರ್ಷದಲ್ಲಿ ತಾವು ಏನೇನು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ ಹಾಗೂ ಎಲ್ಲೆಲ್ಲಿ ಎಡವಿದ್ದೀರಿ ಎಂಬುದರ ವಿಚಾರಮಂಥನ ಮಾಡಿಕೊಳ್ಳಬೇಕು. ಸರ್ಕಾರಗಳು ಹೇಗೆ ಪ್ರತಿವರ್ಷ ಬಜೆಟ್ ಸಿದ್ಧಪಡಿಸುತ್ತವೋ ಹಾಗೆಯೇ, ಮುಂದಿನ ಹೊಸವರ್ಷದ ಭವಿಷ್ಯದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಧನಾತ್ಮಕ ನಿರ್ಧಾರಗಳನ್ನು ಕೈಗೊಂಡು ಸರಳತೆಯನ್ನು ಮೈಗೂಡಿಸಿಕೊಂಡಾಗ ಕುಟುಂಬದ ಅಭಿವೃದ್ಧಿಯ ಜೊತೆ ಸಮಾಜದ ಅಭಿವೃದ್ಧಿಯನ್ನು ಕಾಣಬಹುದು.

 

Leave a Reply

Your email address will not be published.