ಮುಖ್ಯಚರ್ಚೆಗೆ-ಪ್ರವೇಶ

ಸ್ವಾವಲಂಬನೆ ಬೇಕೆ..? ಜಾಗತೀಕರಣ ಸಾಕೆ..?

ಸಾಂಕ್ರಾಮಿಕ ರೋಗಗಳಿಂದ ಗ್ರಸ್ತವಾಗಿರುವ ಭಾರತದ ಆರ್ಥಿಕತೆಯ ಪುನಶ್ಚೇತನಕ್ಕೆ ರೂ.20 ಲಕ್ಷ ಕೋಟಿಗಳ ‘ಪ್ಯಾಕೇಜ್’ ಘೋಷಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವು ಆತ್ಮನಿರ್ಭರತೆಯ (ಸ್ವಾವಲಂಬನೆಯ) ಹಾದಿಯಲ್ಲಿ ಸಾಗಬೇಕೆಂದು ಕರೆಕೊಟ್ಟಿದ್ದಾರೆ. 1950ರ ದಶಕದಿಂದಲೇ ಜವಾಹರಲಾಲ್ ನೆಹರೂ ಮುಂದಾಳತ್ವದಲ್ಲಿ ದೇಶವು ಸ್ವಾವಲಂಬನೆಯ ಹಾದಿ ಹಿಡಿದಿದೆ. ಇದರಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿರುವುದರ ಜೊತೆಗೆ ಯಾವ ಉತ್ಪಾದನೆ ಹಾಗೂ ಯಾವ ಸೇವೆಗಳಲ್ಲಿ ನಾವು ಇನ್ನೂ ಪರಾವಲಂಬಿಗಳಾಗಿದ್ದೇವೆ ಎಂಬುದರ ವಿಮರ್ಶೆಯೂ ನಡೆದಿದೆ.

ಸಾಂಕ್ರಾಮಿಕ ರೋಗದ ಕಾರಣದಿಂದ ಜಾಗತೀಕರಣಕ್ಕೆ ಆಗಿರುವ ಹಿನ್ನೆಡೆ ತಾತ್ಕಾಲಿಕವೇ ಅಥವಾ ಶಾಶ್ವತವೇ ಎನ್ನುವ ಚರ್ಚೆಯೂ ಬೇಕಿದೆ. ಈ ಸಂದರ್ಭದಲ್ಲಿ ಜಾಗತಿಕ ಅಸ್ಪೃಶ್ಯನಾಗಿರುವ ಚೀನಾ ದೇಶದಿಂದ ಬಹುದೇಶೀಯ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಹಿಂದೆಗೆಯುವ ಸಾಧ್ಯತೆಯಲ್ಲಿ ಭಾರತ ಮತ್ತಿತರ ದೇಶಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗಿದೆಯೇ ಎಂಬುದನ್ನೂ ಮನಗಾಣಬೇಕಿದೆ. ಇಂತಹ ಸಂದರ್ಭದಲ್ಲಿ…

  • ಕೋವಿಡ್ ಸಾಂಕ್ರಾಮಿಕದಿಂದ ಜಾಗತೀಕರಣದ ಯುಗ ಮುಗಿಯುವಂತೆ ಕಾಣುತ್ತಿದೆಯೇ..?
  • ಜಾಗತೀಕರಣ ವ್ಯವಸ್ಥೆಗೆ ತಡವಾಗಿ 90ರ ದಶಕದಲ್ಲಿ ನಿಧಾನವಾಗಿ ಪ್ರವೇಶ ಪಡೆದ ಭಾರತಕ್ಕೆ ನಿಜವಾಗಲೂ ಜಾಗತೀಕರಣ ಮಾರಕವಾಗಿದೆಯೇ..?
  • ಸ್ವಾವಲಂಬನೆಯ ಹಾದಿಯಲ್ಲಿ ಭಾರತದ ಬಡತನ ಮತ್ತು ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಾಧ್ಯವಿದೆಯೇ..?
  • ಈಗ ಪ್ರಧಾನಿಯವರು ಸ್ವಾವಲಂಬನೆಯ ಕರೆ ಕೊಡುವ ಅಗತ್ಯವಿತ್ತೇ..?

ಮುಂದಿನ ಕೆಲವು ಮಹತ್ವದ ವರುಷಗಳಲ್ಲಿ ಈ ಪ್ರಶ್ನೆಗಳು ಭಾರತದ ಆರ್ಥಿಕತೆಯನ್ನು ಕಾಡಲಿವೆ. ಅಂತೆಯೇ ಇದು ಈ ಸಂಚಿಕೆಯ ಮುಖ್ಯಚರ್ಚೆ.

 

 

 

 

 

Leave a Reply

Your email address will not be published.