ಮುಖ್ಯಚರ್ಚೆಗೆ ಪ್ರವೇಶ

ಸಮ್ಮಿಶ್ರ ಸರ್ಕಾರ ಒಂದು ವರ್ಷ ಹೇಳಿದ್ದೇನು ಮಾಡಿದ್ದೇನು?

ಕರ್ನಾಟಕ ಸರ್ಕಾರದ ಮುಂದೆ ಸಮಸ್ಯೆ ಗಳ ಸರಮಾಲೆಯೇ ಇದೆ. ಕನ್ನಡಿಗರ ಶಿಕ್ಷಣ-ಆರೋಗ್ಯ ಉದ್ಯೋಗ ಗಳ ಸಮಸ್ಯೆಗಳು ಉಲ್ಬಣಗೊಳ್ಳುತ್ತಲೇ ಇವೆ. ರೈತರ ಗೋಳನ್ನು ಕೇಳುವವರು ಇಲ್ಲವಾಗಿದ್ದಾರೆ. ಕೈಗಾರಿಕೆ-ಉದ್ಯಮಗಳು ಭ್ರಷ್ಟಾಚಾರದ ಭಾರದಲ್ಲಿ ನಲುಗಿಹೋಗಿವೆ. ಸರ್ಕಾರಿ ಆಡಳಿತ ವ್ಯವಸ್ಥೆ ಕುಸಿದು ಹೋಗಿರುವ ಅನುಭವವಾಗುತ್ತಿದೆ. ರಾಜ ಕೀಯ ಪ್ರಾತಿನಿಧಿಕ ಪ್ರಕ್ರಿಯೆ ಪೊಳ್ಳಾಗಿದೆ. ಅಧಿಕಾರಿವರ್ಗ ನಿಷ್ಕ್ರಿಯವಾಗಿದೆ.

ರಾಜ್ಯದ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಈ ಸಮಯದಲ್ಲಿ ಈ ಎಲ್ಲಾ ವಿಷಯಗಳನ್ನು ನಾವು ಎತ್ತಲೇ ಬೇಕಾಗಿದೆ. ಒಂದು ವರ್ಷದ ಸಾಧನೆಯ ಲೆಕ್ಕ ಕೇಳಲೇ ಬೇಕಿದೆ. ಸರ್ಕಾರದ ಮೊದಲ ವರ್ಷದ ಗೊತ್ತುಗುರಿಗಳು ಮುಂದಿನ ನಾಲ್ಕು ವರ್ಷಗಳ ಪಯಣವನ್ನು ನಿರ್ಧರಿ ಸುತ್ತವೆ ಎಂಬುದನ್ನು ಅರಿಯಬೇಕಿದೆ.

ಹಾಗಾಗಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ವರ್ಷದ ಸಾಧನೆಯನ್ನು ವಿವಿಧ ಕೋನಗಳಲ್ಲಿ ಅಳೆಯುವ ಪ್ರಯತ್ನ ಇಲ್ಲಿದೆ.

Leave a Reply

Your email address will not be published.