ಮುಖ್ಯಚರ್ಚೆಗೆ ಪ್ರವೇಶ

ಕರ್ನಾಟಕದ ದಲಿತ ಚಳವಳಿ ದಿಕ್ಕು ತಪ್ಪಿದ್ದೆಲ್ಲಿ?

ಮಹಾರಾಷ್ಟ್ರದ ನಂತರ ದಲಿತ ಸಂಘಟನೆಯಲ್ಲಿ ಮುಂಚೂಣಿ ಯಲ್ಲಿದ್ದ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು. ಕಳೆದ ಐದು ದಶಕಗಳಲ್ಲಿ ಕರ್ನಾಟಕದ ದಲಿತ ಚಳವಳಿ ನೂರಾರು ಚಿಂತಕರನ್ನು, ಸಾಹಿತಿಗಳನ್ನು ಹಾಗೂ ನಾಯಕರನ್ನು ಹುಟ್ಟುಹಾಕಿದೆ. ಆದರೆ ದಲಿತ ಸಂಘಟನೆ ಇನ್ನಿಲ್ಲದಂತೆ ಛಿದ್ರಗೊಂಡು ಸ್ವಹಿತಾಸಕ್ತಿಯ ಹೊರತಾಗಿ ಬೇರಾವುದೇ ಗೊತ್ತುಗುರಿ ಯಿಲ್ಲದಂತಾಗಿದೆ. 21ನೇ ಶತಮಾನದ ದಲಿತ ಪೀಳಿಗೆಗೆ ಯಾವುದೇ ಮುಂದಾಳತ್ವ ನೀಡದಂತಾಗಿದೆ. ಈ ಸಂದರ್ಭದಲ್ಲಿ ಸಮಾಜಮುಖಿ ಪತ್ರಿಕೆ ಎತ್ತಿದ ಪ್ರಶ್ನೆಗಳು:

  • ದಲಿತ ಚಿಂತಕರು ಅಂಬೇಡ್ಕರ್ ಚಿಂತನೆಯನ್ನು ಅರಿಯಲು ಹಾಗೂ ಇಂದಿನ ಕಾಲಘಟ್ಟಕ್ಕೆ ಅಳವಡಿಸಿಕೊಳ್ಳಲು ಸಾಮಥ್ರ್ಯ ತೋರಿದ್ದಾರೆಯೇ?
  • ಮೀಸಲಾತಿ ಹಾಗೂ ಸರ್ಕಾರಿ ಸವಲತ್ತನ್ನು ಕೇಳುವ ಹೊರತಾಗಿ ದಲಿತರ ಅಭಿವೃದ್ಧಿಗೆ ಚಳವಳಿಯ ಕೊಡುಗೆಯೇನು?
  • ಬೇಕುಬೇಡವೆಂದರೂ ನಮ್ಮನ್ನು ಆವರಿಸಿಕೊಂಡಿರುವ ಜಾಗತೀಕರಣದ ಪರಿಸರದಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಗಾಂಧೀವಾದಗಳು ದಲಿತರ ಏಳ್ಗೆಗೆ ಪೂರಕವಾಗಿವೆಯೇ?
  • ದಲಿತ ಚಳವಳಿಯ ಅಂತಿಮ ಉದ್ದೇಶದ ಪುನರ್ ವಿಮರ್ಶೆಯ ಅಗತ್ಯವಿದೆಯೇ? ದಲಿತ ಚಳವಳಿ ಮತ್ತು ಸಂಘಟನೆಗೆ ಬೇಕಿರುವ ಹೊಸ ಸಾಧ್ಯತೆ ಹಾಗೂ ಆಯಾಮಗಳೇನು?
    ಈ ಪ್ರಶ್ನೆಗಳ ಸುತ್ತಮುತ್ತ ತಮ್ಮ ಅರಿವನ್ನು ಹರಿಯಲು ಬಿಟ್ಟ ಚಿಂತಕರು, ಹೋರಾಟಗಾರರು, ಚಳವಳಿಯ ಪಾಲುದಾರರು ಈ ಚರ್ಚೆಯಲ್ಲಿ ತಮ್ಮ ಒಳನೋಟ-ಹೊರನೋಟ ಬೀರಿದ್ದಾರೆ.

*ಈ ಚರ್ಚೆಯ ಲೇಖನಗಳಲ್ಲಿ ವ್ಯಕ್ತವಾದ ಅಭಿಪ್ರಾಯ, ಆರೋಪ, ವಿಶ್ಲೇಷಣೆಗಳಿಗೆ ಆಯಾ ಲೇಖಕರು ಹೊಣೆ.

Leave a Reply

Your email address will not be published.