ಮುನಿಸ್ವಾಮಿಯ ದಶಾವತಾರಗಳು

‘ಸತ್ಯ ಹರಿಶ್ಚಂದ್ರನಂತೆ ತನ್ನನ್ನು ತಾನೇ ಮಾರಿಕೊಂಡ ಶಾಸಕ, ಅವನ್ನ ಎಳಕೊಂಡು ಸೇರಿಸಿಕೊಂಡ ಪಕ್ಷ, ನಿಯತ್ತು ಸತ್ತಿರೋ ವಿರೋಧ ಪಕ್ಷ -ಇವರಲ್ಲಿ ಯಾರು ಅತೀ ಭ್ರಷ್ಟರು?’ ಮುನಿಸ್ವಾಮಿ ಯಕ್ಷಪ್ರಶ್ನೆ ಎದುರಿಗಿಟ್ಟ. ಶಿಷ್ಯ ತಲೆಕೆರೆದುಕೊಳ್ಳುತ್ತಾ ‘ಮತದಾರ’ ಅಲ್ವೇನಣ್ಣಾ ಎಂದ.

ಭಾಗ 1

ಮುನಿಸ್ವಾಮಿ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚಿನ ಮುಂದೆ ನಿಂಬೆಹಣ್ಣು, ಹಾರ, ತುರಾಯಿ, ಮೈಸೂರು ಪೇಟ, ಒಂದು ಬೆಳ್ಳಿ ರೇಖಿನ ಖಡ್ಗ, ಒಂದು ಅಲ್ಯೂಮಿನಿಯಂ ಗದೆ ಹಿಡಿದುಕೊಂಡು ನಿಂತಿದ್ದ.

ಶಿಷ್ಯೋತ್ತಮ ಬಂದು, ‘ಅಣ್ಣೋ! ಯಾರಿಗಾಗಿ ಇಲ್ಲಿ ಕಾಯ್ಕೊಂಡು ನಿಂತೆ?’ ಅಂತ ಪ್ರಶ್ನಿಸಿದ.

‘ಇನ್ಯಾರಿಗೆ ಕಲಾ? ನಮ್ಮ ಟ್ರಬಲ್ ಶೂಟರ್ ಬಂಡೆ ಅಣ್ಣನಿಗೆ ಕಾಯ್ತಿದ್ದೀನಿ’.

‘ಅವಯ್ಯಾಕಣ್ಣಾ ಚರ್ಚಿಗೆ ಬಂದಾರು?’

‘ಮೊದಲು ಹೋಗಿ ಶ್ರೀರಂಗ ಪಟ್ಟಣದ ನಿಮಿಷಾಂಬೆ ದರ್ಶನ ಪಡೆದವ್ರೆ. ಆಮೇಲೆ ದರಿಯಾ ದೌಲತ್‍ಗೆ ಹೋಗಿ ಟಿಪ್ಪು ಸಮಾಧಿಗೆ ವಂದನೆ ಅರ್ಪಿಸಿದ್ದಾರೆ. ನೆಕ್ಸ್ಟ್ ವಿಸಿಟ್ ಇಲ್ಲಿಗೇ ಅಲ್ವೇನ್ಲಾ?’

‘ಅದಕ್ಕೆ ಈ ಗದೆ, ಖಡ್ಗ ಎಲ್ಲಾ ಯಾಕಣ್ಣಾ?’

‘ಏನ್ಲಾ ಹಿಂಗನ್ಬುಟ್ಟೆ? ತಿಹಾರ್ ಸೆರೆಮನೆಗೆ ಹೋಗಿ ಯಶಸ್ವಿಯಾಗಿ ಬಂದ ಮೊದಲ ಕನ್ನಡಿಗರಲ್ಲವೇನ್ಲಾ?’

‘ಹಂಗಂತಾ ಜೈಲಿಗೋದವರಿಗೆ ಸನ್ಮಾನವೇನಣ್ಣಾ?’

‘ಮಹಾತ್ಮಾ ಗಾಂಧಿ ಕೂಡ ಜೈಲಿಗೋಗಿರಲಿಲ್ಲವೇನ್ಲಾ?’ ಮುನಿಸ್ವಾಮಿ ಅಬ್ಬರಿಸಿದ.

ಶಿಷ್ಯ ತೆಪ್ಪಗಾದ.

‘ವಿಸ್ಯಾ ಗೊತ್ತಾಯ್ತಾ ಅಣ್ಣೋ? ನಾಕ್ದಿನದಿಂದ ಊರಲ್ಲೆಲ್ಲಾ ಅದೇ ಸುದ್ದಿ’, ಶಿಷ್ಯ ಏದುಸಿರು ಬಿಡುತ್ತಾ ಹೇಳಿದ.

‘ಯಾವುದ್ಲಾ ಅದು? ಈ ಮುನಿಸ್ವಾಮಿ ಅನ್ನೋ ಬಿಬಿಸಿ ಕಿವಿಗೆ ಬೀಳದ ಸುದ್ದಿ?’ ಮುನಿಸ್ವಾಮಿ ನಿರಾಸಕ್ತನಾಗಿ ಕೇಳಿದ.

ಮುನಿಸ್ವಾಮಿ ಗಂಭೀರವಾಗಿ ಬರೆಯುತ್ತಾ ಕೂತಿದ್ದ. ಶಿಷ್ಯ ಬಂದು, ‘ಏನ್ ಬರೀತಿದ್ಯಣ್ಣೋ ನಮ್ಗೂ ಸ್ವಲ್ಪ ಹೇಳ್ಬಾರ್ದಾ?’ ಎಂದು ಕೇಳಿದ.

‘ನಮ್ಮ ಮುಖ್ಯಮಂತ್ರಿಯವರದ್ದು ಸಭೇಲಿ ಲೀಕ್ ಆಯ್ತಂತೆ. ಈ ತರಾ ಲೀಕ್ ಆಗಿದ್ದು ಕೈಗೆ ಸಿಕ್ತಂತೆ. ಕೈನೋರು ಸೀಎಮ್ಮೇ ಈ ತರಾ ಲೀಕ್ ಮಾಡ್ತಾರಂದ್ರೆ ಇನ್ನು ಹೆಂಗಿರಬೇಡಾ ನೋಡಿ ಅಂತಾ ಅದನ್ನ ತಗೊಂಡೋಗಿ ಕೋರ್ಟಿಗೆ ಕೊಟ್ರಂತೆ. ಕೋರ್ಟಿನವರು ನಾವು ಇನ್ನೇನು ತೀರ್ಪು ಕೊಡೋ ಟೈಮಲ್ಲಿ ನೀವು ಈ ಥರಾ ಲೀಕಾಗಿದ್ದನ್ನೆಲ್ಲಾ ತಂದ್ಕೊಟ್ಟರೆ ತಗಳಕ್ಕಾಗಾಕಿಲ್ಲ ಅಂತಂದ್ರಂತೆ. ಮೊದಲು ಸೀಯೆಮ್ಮು ಇದು ಲೀಕಾಗಲು ಕೈನವರ ಕುತಂತ್ರವೇ ಕಾರಣ ಅಂದರಂತೆ, ಅದಕ್ಕೆ ಕೈನೋರು, ನಾವಲ್ಲ ನಿಮ್ಮವರೇ ನಿಮ್ಮದನ್ನೇ ಲೀಕ್ ಮಾಡಿದ್ದಾರೆ ಅಂತ ತಿರುಗೇಟು ಕೊಟ್ರಂತೆ!’

‘ಏಥೂ, ಲೀಕಾಗಿದ್ದಾದ್ರೂ ಏನ್ಲಾ?’

‘ಆಡಿಯೋ!!’ ಶಿಷ್ಯ ಸಂಭಾಷಣೆಗೆ ತೆರೆಯೆಳೆದ.

ಮುನಿಸ್ವಾಮಿ ಗಂಭೀರವಾಗಿ ಬರೆಯುತ್ತಾ ಕೂತಿದ್ದ. ಶಿಷ್ಯ ಬಂದು, ‘ಏನ್ ಬರೀತಿದ್ಯಣ್ಣೋ ನಮ್ಗೂ ಸ್ವಲ್ಪ ಹೇಳ್ಬಾರ್ದಾ?’ ಎಂದು ಕೇಳಿದ.

‘ಏ.. ನಮ್ಮ ಸೀಯೆಂ ಸಾಯೇಬ್ರು ಇವತ್ತೊಂದು ಬುಕ್ ರಿಲೀಸ್ ಮಾಡವ್ರೆ. ಅದಕ್ಕೆ ವಿಮರ್ಶೆ ಬರೀತಿದ್ದೆ’ ಎಂದು ಆಯ್ದ ಕೆಲವು ಸಾಲುಗಳನ್ನು ಓದಿದ.

ಪುಸ್ತಕವು ಕಣ್ಮನ ಸೆಳೆಯುವ ಆಕರ್ಷಕ ವಿನ್ಯಾಸದಿಂದ ಕೂಡಿದ್ದು, ಮುದ್ರಣದೋಷಗಳಿಂದ ಮುಕ್ತವಾಗಿದೆ. ಪ್ರತಿಪುಟವೂ ವರ್ಣರಂಜಿತ ಚಿತ್ರಗಳಿಂದ ತುಂಬಿದೆ. ನೂರುದಿನಗಳ ಸಾಧನೆಯನ್ನು ವರ್ಣಿಸಲು ನೂರು ಪುಟಗಳನ್ನು ಮೀಸಲಾಗಿಡಲಾಗಿದ್ದು, ಪ್ರತೀ ಪುಟವೂ ಓದುಗನನ್ನು ರಂಜಿಸುತ್ತದೆ. ಪುಸ್ತಕದ ಮೊದಲ ಸಾಲಿನಲ್ಲೇ ‘ಜನತೆಯ ಆಶಯ ಮತ್ತು ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದೆ’ ಎಂಬ ಹೇಳಿಕೆ ಲೇಖಕರ ಹಾಸ್ಯಪ್ರಿಯತೆಯನ್ನು ಸ್ಪಷ್ಟೀಕರಿಸುತ್ತದೆ.

ವಾರ್ತಾ ಇಲಾಖೆಯ ಪ್ರಕಾಶನದಲ್ಲಿ ಹೊರಬಂದಿರುವ ಈ ಪುಸ್ತಕವನ್ನು ಖಾಸಗಿ ಮುದ್ರಣಾಲಯದಲ್ಲಿ ಮುದ್ರಿಸಲಾಗಿದೆ. ಇದು ಸರ್ಕಾರದ ಪಾರದರ್ಶಕತೆಗೆ ಹಿಡಿದ ಕೈಗನ್ನಡಿಯಾಗಿದೆ.
*
ಭಾಗ 2

‘ಆ ದೇವರೇ ಬಂದರೂ ನಮ್ಮ ರಾಜಕಾರಣಿಗಳನ್ನ ಉದ್ದಾರ ಮಾಡೋಕಾಗಲ್ಲ!’ ಮುನಿಸ್ವಾಮಿ ಘೋಷಿಸಿದ.

‘ದೇವರಿಗೇನು ಅಂತ ದರ್ದು ಬಿಡಣ್ಣಾ’ ಎಂದ ಶಿಷ್ಯ.

‘ಅದಕ್ಕಲ್ಲ ಕಣಲಾ, ಮೊನ್ನೆ ಗೌಡರು ಮಂಜುನಾಥಸ್ವಾಮಿ ಮೇಲೆ ಆಣೆ ಹಾಕುವಂತೆ ಸಿದ್ಧಣ್ಣನಿಗೆ ಸವಾಲು ಹಾಕಿದರು. ಆಮೇಲೆ ಚಿಕ್ಕಗೌಡರು ಇದೇ ಸವಾಲನ್ನು ಮುಖ್ಯಮಂತ್ರಿಗಳಿಗೆ ಹಾಕಿದರು. ಆಮೇಲೆ ಸೀಯೆಂ ಸಹ ಇದೇ ಸವಾಲನ್ನು ಅವರಿಬ್ಬರಿಗೂ ಹಾಕಿದರು. ಈ ಆಣೆ ಪ್ರಮಾಣದ ಸಾಂಕ್ರಾಮಿಕ ರೋಗ ಕ್ಯಾನ್ಸರಿನಂತೆ ಹರಡಿ ಈಗ ಬೈ ಎಲೆಕ್ಸನ್ ಅಂಗಳಕ್ಕೂ ಬಂದು ನಿಂತಿದೆ. ಎಲ್ಲರೂ ಒಮ್ಮೆ ಸರ್ಕಾರದ ಖರ್ಚಿನಲ್ಲಿ ಸಾಮೂಹಿಕವಾಗಿ ಧರ್ಮಸ್ಥಳಕ್ಕೆ ಹೋಗಿ ನಾವು ಪ್ರಾಮಾಣಿಕರು ಅಂತ ಯಾಕೆ ಆಣೆ ಮಾಡಿ ಹೇಳಬಾರದು,’ ಎಂದ ಮುನಿಸ್ವಾಮಿ.

‘ಇವರಿಷ್ಟೆಲ್ಲಾ ಸಾಚಾಗಳಾಗಿದ್ರೆ ಆಣೆ ಪ್ರಮಾಣಕ್ಕೆ ಧರ್ಮಸ್ಥಳವೇ ಯಾಕಣ್ಣಾ, ಮನಸಾಕ್ಷಿ ಇಲ್ಲವಾ?’ ಶಿಷ್ಯ ಕೇಳಿದ.

‘ಅದು ಇದ್ದಿದ್ರೆ ಯಾಕೇಳು!’ ಮುನಿಸ್ವಾಮಿ ಉತ್ತರಿಸಿದ.
*
ಮುನಿಸ್ವಾಮಿ ಹಿತವಾಗಿ ಬಿಸಿಲು ಕಾಯಿಸುತ್ತಾ ತೂಕಡಿಸುತ್ತಿದ್ದ. ಟಿವಿ ನೋಡುತ್ತಿದ್ದ ಶಿಷ್ಯ, ‘ಅಣ್ಣೋ! ಬ್ರೇಕಿಂಗ್ ನ್ಯೂಸ್ ನೋಡಣ್ಣೋ!!’ ಎಂದು ಚೀತ್ಕಾರ ಮಾಡಿದ.

ಮುನಿಸ್ವಾಮಿ ಕಾಲಜ್ಞಾನ ಹೇಳುವವನಂತೆ ಕಣ್ಣುಮುಚ್ಚಿಕೊಂಡೇ, ‘ಅದೇನು ದೊಡ್ಡ ವಿಷ್ಯ ಬಿಡ್ಲಾ. ಮೆರವಣಿಗೆ ನಡೀತಾ ಐತೆ ತಾನೇ?’

‘ನಿಂಗೆ ಹೆಂಗಣ್ಣಾ ಗೊತ್ತು?’

‘ಇಬ್ಬರು ಬಳೆ ಒಡೆದುಕೊಂಡು ಗೋಳಾಡ್ತವ್ರಲ್ಲಾ ಅವ್ರು ನಮ್ಮ ಪ್ರತಿಪಕ್ಷದ ನಾಯಕರು. ಬೆಂಕಿಯ ಕೊಳ್ಳಿ ಹಿಡಿದಿರುವವರೇ ನಮ್ಮ ಮಾನ್ಯ ಸೀಯೆಮ್ಮು’.

‘ಸತ್ತೋಗಿರೋದು ಯಾರಣ್ಣಾ?’

‘ಪೂರ್ತಿ ಹೇಳ್ತೀನಿ ಕೇಳಿಸ್ಕೋ.. ಚಟ್ಟ ಹೊತ್ತಿರುವವರು ನಾಲ್ಕು ಜನ ಇದ್ದಾರೆ. ಬೆಂಕಿ ಮಡಕೆ ಹಿಡಿದೋರು ಒಬ್ರು. ತಮಟೆ ಬಾರಿಸ್ತಿರೋರು ಏಳು ಜನ ಅವ್ರೆ.ಚಟ್ಟದ ಮುಂದೆ ಡ್ಯಾನ್ಸ್ ಮಾಡ್ತಿರೋರು ಐದು ಜನ. ಒಟ್ಟು ಹದಿನೇಳು ಜನ’.

‘ಅಣ್ಣಾ! ಹೆಂಗಣ್ಣಾ ಇಷ್ಟು ಕರೆಕ್ಟಾಗಿ ಹೇಳ್ದೆ?’

‘ಇಬ್ಬರು ಬಳೆ ಒಡೆದುಕೊಂಡು ಗೋಳಾಡ್ತವ್ರಲ್ಲಾ ಅವ್ರು ನಮ್ಮ ಪ್ರತಿಪಕ್ಷದ ನಾಯಕರು. ಬೆಂಕಿಯ ಕೊಳ್ಳಿ ಹಿಡಿದಿರುವವರೇ ನಮ್ಮ ಮಾನ್ಯ ಸೀಯೆಮ್ಮು’.

‘ಸತ್ತೋಗಿರೋದು ಯಾರಣ್ಣಾ?’

‘ಪ್ರಜಾಪ್ರಭುತ್ವ ಕಣಲೇ!’ ಎಂದು ಮುನಿಸ್ವಾಮಿ ಎದೆಯೊಡೆದುಕೊಂಡು ಅಳತೊಡಗಿದ.
*
ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನು ಫ್ಯಾಮಿಲಿ ಸಮೇತನಾಗಿ ಮುನಿಸ್ವಾಮಿಯ ಕನಸಿನಲ್ಲಿ ಬಂದ.

ಮುನಿಸ್ವಾಮಿ ಸಾಷ್ಟಾಂಗ ಪ್ರಣಾವಂಗೈದು ಕೆನ್ನೆಗೆ ಬಡಿದುಕೊಂಡು ಬಿನ್ನಯಿಸಿದ…

‘ಪ್ರಭೂ… ಯಾಕಿಷ್ಟು ವೀಕಾಗಿದ್ಯಾ? ವನವಾಸ ಮುಗಿದು ಶಾನೇ ವರ್ಷಗಳಾಗಿರಬೇಕಲ್ಲವೇ? ಸೀತಮ್ಮ ಯಾಕಿಂಗೆ ಬಡವಾಗವಳೆ? ಲಕ್ಷ್ಮಣ ಬಸವಳಿದಂತೆ ಕಾಣಿಸ್ತೈತಲ್ಲಾ? ಹನುಮಂತನಂತೂ ಅಪೌಷ್ಟಿಕತೆಯಿಂದ ನರಳುತ್ತಿರುವಂತೆ ಕಾಣುತ್ತಿದೆ’.

‘ಬವುಸಃ ಮಂದಿರದ ಟೆನ್ಸನ್ನಿನಿಂದ ನೀನು ಇಂಗಾಗಿದ್ಯಾ ಅನ್ನಿಸುತ್ತೆ. ಡೋಂಟ್‍ವರೀ ಶ್ರೀರಾಮಚಂದ್ರ. ಇನ್ನಾರೇ ತಿಂಗಳಲ್ಲಿ ಸರ್ದಾರ್ ಪಟೇಲ್ ಮೂರ್ತಿಗಿಂತ ಅದ್ದೂರಿಯಾಗಿ ರಾಮಮಂದಿರ ರೆಡಿ ಮಾಡ್ತಾರೆ. ನಿನ್ನ ಜನ್ಮಭೂಮಿ ಇಂಟರ್‍ನ್ಯಾಸನಲ್ ಲೆವಲ್ ಟೂರಿಂಗ್ ಪ್ಲೇಸಾಗುವುದು. ನೀನೂ ಆರಾಮಾಗಿ ತ್ರೇತಾಯುಗದ ತಾಪತ್ರಯಗಳೆಲ್ಲಾ ಮರೆತು ಯೂಪಿಯಲ್ಲಿ ಸೆಟ್ಲಾಗಿಬಿಡು…’

ಶ್ರೀರಾಮನು ಮುನಿಸ್ವಾಮಿಯೆಡೆಗೆ ಕರುಣಾಭರಿತ ಸುಧಾದೃಷ್ಟಿಯನ್ನು ಬೀರಿ, “ವತ್ಸಾ, ರಾಮಮಂದಿರ ಕಟ್ಟುವ ಭರದಲ್ಲಿ ರಾಮನ ಆದರ್ಶಾಧಾರಿತ ರಾಮರಾಜ್ಯ ಕಟ್ಟುವುದು ಮರೆತಿದ್ದೀರಿ. ನನ್ನ ಕನಸಿನ ದೇಶ ಇದಲ್ಲ’ ಎಂದು ನಿಟ್ಟುಸಿರು ಬಿಟ್ಟ.

ಮೊನ್ನೆ ಬೆಳಗ್ಗೆ ಬಿಜೆಪಿ ಬಗ್ಗೆ ಅದೆಂತದೋ ಸಾಫ್ಟ್ ಕಾರ್ನರ್ ಇದೇ ಅಂದ್ರು, ನಿನ್ನೆ ಮಧ್ಯಾಹ್ನ ಇಲ್ಲ ಅಂದ್ರು, ಮತ್ತೆ ನಿನ್ನೆ ರಾತ್ರಿ ಬದಲಾಯಿಸಿ ಕೊಟ್ಟಿದ್ದ ಹೇಳಿಕೆಯನ್ನು ಇಂದು ಬೆಳಗ್ಗೆ ಬದಲಾಯಿದ್ದಾರೆ’.

ಮುನಿಸ್ವಾಮಿ ಥಟ್ಟಂತ ಮೇಲೆದ್ದ.
*
‘ಮೀನಿನ ಹೆಜ್ಜೆ, ಹೆಣ್ಣಿನ ಮನಸು ಜೊತೆಗೆ ನಮ್ಮ ದೊಡ್ಡ ಗೌಡರ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ’ ಎಂದು ಮುನಿಸ್ವಾಮಿ ಘೋಷಿಸಿದ.

‘ಯಾಕಣ್ಣಾ?’ ಶಿಷ್ಯ ಪ್ರಶ್ನಿಸಿದ.

‘ಮತ್ತೇನ್ಲಾ… ಇದು ನನ್ನ ಕೊನೆ ಚುನಾವಣೆ ಅಂತ ಮೂರೂವರೆ ಸಾವಿರ ಬಾರಿ ಹೇಳಿದ್ದಾರೆ. ನಮ್ಮ ಕುಟುಂಬಕ್ಕೆ ಅಧಿಕಾರದ ಆಸೆಯಿಲ್ಲ ಅಂತಾ ಐದೂವರೆ ಸಾವಿರ ಬಾರಿ ಹೇಳಿದ್ದಾರೆ. ನೀವು ಸೋಲಿಸೋ ಬದಲು ಒಂದು ತೊಟ್ಟು ವಿಷ ಕೊಡಿ ಎಂಬ ಹೇಳಿಕೆ ಎಷ್ಟು ಬಾರಿ ನೀಡಿದ್ದಾರೋ ಅವರಿಗೂ ಲೆಕ್ಕ ಇಲ್ಲ, ನಮಗೂ ಇಲ್ಲ. ಮೊನ್ನೆ ಬೆಳಗ್ಗೆ ಬಿಜೆಪಿ ಬಗ್ಗೆ ಅದೆಂತದೋ ಸಾಫ್ಟ್ ಕಾರ್ನರ್ ಇದೇ ಅಂದ್ರು, ನಿನ್ನೆ ಮಧ್ಯಾಹ್ನ ಇಲ್ಲ ಅಂದ್ರು, ಮತ್ತೆ ನಿನ್ನೆ ರಾತ್ರಿ ಬದಲಾಯಿಸಿ ಕೊಟ್ಟಿದ್ದ ಹೇಳಿಕೆಯನ್ನು ಇಂದು ಬೆಳಗ್ಗೆ ಬದಲಾಯಿದ್ದಾರೆ’.

ಶಿಷ್ಯ ಪರಪರ ತಲೆ ಕೆರೆದುಕೊಂಡ

ಭಾಗ 3

ಮುನಿಸ್ವಾಮಿ ಕಂಟೋನ್ಮೆಂಟಿನ ರೈಲ್ವೇ ನಿಲ್ದಾಣದಲ್ಲಿ ನಿಂತು ಭಾಷಣ ಮಾಡುತ್ತಿದ್ದ.

ನಮ್ಮದು ಕೃಷಿಪ್ರಧಾನ ದೇಶ. ರೈತನೇ ದೇಶದ ಬೆನ್ನುನೋವು… ಅಲ್ಲಲ್ಲ ಬೆನ್ನೆಲುಬು. ಅಂತಹಾ ರೈತ ಹೈನುಗಾರಿಕೆಯಿಂದ ನಷ್ಟ ಹೊಂದುತ್ತಿದ್ದಾನೆ. ಅಲ್ಲದೆ ಹಸು ನಮ್ಮ ದೇಶದಲ್ಲಿ ತುಂಬಾ ಪವಿತ್ರವಾದ ಪ್ರಾಣಿ. ಹಸುವಿನ ಶಕ್ತಿ ಎಷ್ಟು ಅಗಾಧವಾದದ್ದು ಎಂದರೆ ಕೇವಲ ಹಸುವಿನ ಹೆಸರು ಜಪ ಮಾಡಿಕೊಂಡು ನೀವು ಚುನಾವಣೆ ಬೇಕಾದರೂ ಗೆಲ್ಲಬಹುದು. ಇಂತಹಾ ಪರಮಪವಿತ್ರ ಹಸುವನ್ನು ನಾವು ದಿನವೂ ಹಾಲು ಹಿಂಡಿ ಹಿಂಸಿಸುತ್ತಿದ್ದೇವೆ. ಹಾಲಿನ ಉತ್ಪನ್ನಗಳಿಗಾಗಿ ಹಸುಗಳನ್ನು ಕ್ರೂರವಾಗಿ ಸೋಸಣೆ ಮಾಡುತ್ತಿದ್ದೇವೆ. ಇದನ್ನು ತಡೆಯಲು ನಮ್ಮ ಘನಸರ್ಕಾರವು, ಹೊರದೇಶಗಳಿಂದ ಹಾಲು, ಮೊಸರು, ಮಜ್ಜಿಗೆ, ತುಪ್ಪ ತರೆಸಿಕೊಳ್ಳಲು ಮುಂದಾಗಿದೆ. ಇನ್ನುಮುಂದೆ ಹುಲಿಯ ಬದಲಾಗಿ ಹಸುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ, ಪೋಟೋದಲ್ಲಿ ಪೂಜಿಸತಕ್ಕದ್ದು.

ಎಷ್ಟೋ ವರ್ಷಗಳಿಂದ ಕೂಳು ಕಾಣದೇ ಬರಗೆಟ್ಟ ನಮ್ಮ ಜನ ವೋಗಿ ವೊಟ್ತುಂಬಾ ಉಣ್ಕಂಡು ಬಂದು ಆಮೇಲೆ ತಮ್ಮ ಅಮೂಲ್ಯ ಮತವನ್ನು ಚಲಾಯಿಸುತ್ತಾರೆ.

ಭಾಷಣ ಕೇಳುತ್ತಿದ್ದವರೆಲ್ಲಾ ಕೊಳೆತ ಟೋಮೆಟೋ ಎಸೆಯುತ್ತಿದ್ದಂತೆ ಮುನಿಸ್ವಾಮಿ ಓಡಿಹೋದ.
*

‘ಎಣ್ಣೆ ನಮ್ದು, ಓಟು ನಿಮ್ದು. ಇಲ್ಲ ಓಟು ನಿಮ್ದು, ಊಟ ನಮ್ದು…’ ಮುನಿಸ್ವಾಮಿ ಹಾಡೇಳುತ್ತಿದ್ದ.

‘ಯೇನಣ್ಣಾ ಇದು? ವೊಸಾ ರಿಮಿಕ್ಸು’ ಶಿಷ್ಯ ಕೊಚ್ಚನ್ನಾಕಿದ.

‘ಬೈ ಎಲೆಕ್ಷನ್ ಹತ್ರಾ ಬರ್ತಿದ್ದ ಹಾಗೇ ಎಲ್ಲಾ ಪುಡಾರಿಗಳ ಮನೇಲೂ ಫಂಕ್ಷನ್ನೋ ಫಂಕ್ಷನ್ನು. ಒಬ್ಬ ಪಿತೃಪಕ್ಸದ ಎಡೆ ಅಂದ್ರೆ, ಮತ್ತೊಬ್ಬ ಊರಹಬ್ಬ ಅಂತಾ, ಮಗದೊಬ್ಬ ಮಗನ ಬರ್ತಡೇ ಅಂತಾ ಸಾವಿರಾರು ಜನಕ್ಕೆ ಸಾಮೂಹಿಕ ಬಾಡೂಟ. ಅದರ ಜೊತೆ ತೀರ್ಥ ಸರಂಜಾಮುಗಳು ಉಚಿತ. ಎಷ್ಟೋ ವರ್ಷಗಳಿಂದ ಕೂಳು ಕಾಣದೇ ಬರಗೆಟ್ಟ ನಮ್ಮ ಜನ ವೋಗಿ ವೊಟ್ತುಂಬಾ ಉಣ್ಕಂಡು ಬಂದು ಆಮೇಲೆ ತಮ್ಮ ಅಮೂಲ್ಯ ಮತವನ್ನು ಚಲಾಯಿಸುತ್ತಾರೆ. ಯಾರ ಬಾಡೂಟದಲ್ಲಿ ಜಾಸ್ತಿ ಮಾಂಸವಿತ್ತೋ ಆ ಅಭ್ಯರ್ಥಿ ಗೆಲ್ತಾನೆ. ನಮ್ಮ ಜನ ಆಮೇಲೆ ಕ್ಷೇತ್ರ ಅಭಿವೃದ್ದಿಯೇ ಆಗಿಲ್ಲಾ ಅಂತ ಗೊಳೋ ಅಂತ…’

‘ಸಾಕು ಬಿಡಣ್ಣಾ’ ಅಂತ ಶಿಷ್ಯ ಕಣ್ಣೊರಿಸಿಕೊಂಡ.
*

ಈಗೊಬ್ಬ ಶಾಸಕ ತನ್ನ ಕ್ಷೇತ್ರದ ಜನರಿಗೆ ಮೂಗಿಗೆ ತುಪ್ಪ ಹಚ್ಚಿ ಗೆದ್ದು ಬಂದಿರ್ತಾನೆ ಅಂದಿಟ್ಕೋ. ಆಮೇಲೆ ಡೀಲಿಂಗು, ಸೆಟ್ಲುಮೆಂಟು ವಿಷಯದಲ್ಲಿ ಲೀಡರ್ಸ್ ಜೊತೆ ಪೊರಪಾಟಾಗಿ ಪಕ್ಷ ಬಿಟ್ಟು ಹೋಯ್ತಾನೆ. ಇನ್ನೊಂದು ಪಕ್ಷದೋರು ಇವನ್ನ ಬಾಚಿ ತಬ್ಕೊಂಡು ಹಣೆಗೆ ಮುತ್ತಿಟ್ಟು ಪಕ್ಷಕ್ಕೆ ಸೇರಿಸ್ಕೋತಾರೆ. ಆಮೇಲೆ ಅತಂತ್ರ ಸರ್ಕಾರ ಎಂಬ ಗಾಯದ ಮೇಲೆ ಉಪಚುನಾವಣೆ ಎಂಬ ಬರೆ ಎಳೀತಾರೆ. ಈ ಪಕ್ಷಾಂತರಿಗೆ ಟಿಕೀಟು ತತ್ವ, ಸಿದ್ಧಾಂತ, ಪ್ರಾಮಾಣಿಕತೆ, ಪಾರದರ್ಶಕತೆ, ಮೂಲಂಗಿ, ಇಡ್ಲಿವಡೆ ಅಂತೆಲ್ಲಾ ಮಾತಾಡಿ ಪ್ರಚಾರ ಮಾಡ್ತಾರೆ. ಆ ಅಭ್ಯರ್ಥಿ ಗೆದ್ದೂ ಬಿಡ್ತಾನೆ.

‘ಸತ್ಯ ಹರಿಶ್ಚಂದ್ರನಂತೆ ತನ್ನನ್ನು ತಾನೇ ಮಾರಿಕೊಂಡ ಶಾಸಕ, ಅವನ್ನ ಎಳಕೊಂಡು ಸೇರಿಸಿಕೊಂಡ ಪಕ್ಷ, ನಿಯತ್ತು ಸತ್ತಿರೋ ವಿರೋಧ ಪಕ್ಷ -ಇವರಲ್ಲಿ ಯಾರು ಅತೀ ಭ್ರಷ್ಟರು?’ ಮುನಿಸ್ವಾಮಿ ಯಕ್ಷಪ್ರಶ್ನೆ ಎದುರಿಗಿಟ್ಟ.

ಶಿಷ್ಯ ತಲೆಕೆರೆದುಕೊಳ್ಳುತ್ತಾ ‘ಮತದಾರ’ ಅಲ್ವೇನಣ್ಣಾ ಎಂದ.

Leave a Reply

Your email address will not be published.