ಮುಸ್ಲಿಮ್ ಸಾಮಾಜಿಕ ಸುಧಾರಣೆ: ಹಿಂದೇನು..? ಮುಂದೇನು..?

ಬಿಜೆಪಿ ಸರ್ಕಾರಗಳ ಅಬ್ಬರದಲ್ಲಿ ಭಾರತೀಯ ಮುಸಲ್ಮಾನ ಸಮುದಾಯ ಇನ್ನಿಲ್ಲದಷ್ಟು ಅವಗಣನೆಗೆ ಮತ್ತು ಮೂಲೆಗೆ ತಳ್ಳಲ್ಪಟ್ಟಂತೆ ಕಾಣಿಸುತ್ತಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಘೆಟ್ಟೋಕರಣಕ್ಕೆ ಒಳಗಾದಂತೆ ಕಾಣಿಸುತ್ತಿದೆ. ಚುನಾವಣೆಗಳ ಸಮಯದಲ್ಲಷ್ಟೇಮುಸ್ಲಿಮ್ ಮತಬ್ಯಾಂಕ್ಮತ್ತಿತರ ವಿಷಯಗಳು ಚರ್ಚೆಗೆ ಒಳಪಟ್ಟು ಉಳಿದ ಸಮಯದಲ್ಲಿ ಇತರ ಭಾರತೀಯ ಸಮಾಜ ಮುಸ್ಲಿಮ್ ಸಮುದಾಯ ನಮ್ಮ ಮಧ್ಯೆ ಇಲ್ಲವೇನೋ ಎಂಬಂತೆ ವರ್ತಿಸುತ್ತಿದೆ. ವಾತಾವರಣದಲ್ಲಿ ಸಮುದಾಯದ ಹಳೆಯ ವಿವಾದಗಳಾದ ಸಾಮಾಜಿಕ ಸುಧಾರಣೆ ಮತ್ತು ಉದಾರವಾದಿ ಮುಸಲ್ಮಾನರು ನೆಲೆ ಕಂಡುಕೊಳ್ಳುವಿಕೆಯ ವಿಷಯಗಳು ತೆರೆಮರೆಗೆ ಸರಿದಂತೆ ಕಾಣುತ್ತಿದೆ.

  • ರಾಜಕೀಯದ ಅಂಚಿಗೆ ದೂಡಲ್ಪಟ್ಟಿರುವ ಮುಸ್ಲಿಮ್ ಸಮುದಾಯದಲ್ಲಿ ಇಂದಿಗೂ ಸಾಮಾಜಿಕ ಸುಧಾರಣೆಯ ಚರ್ಚೆ ಪ್ರಸ್ತುತ ಮತ್ತು ಆವಶ್ಯಕವಾಗಿದೆಯೇ..?

  • ಮುಸ್ಲಿಮ್ ಸಾಮಾಜಿಕ ಸುಧಾರಣೆ ನಿಂತಿದೆಯೇ..? ಉದಾರವಾದಿ / ಸುಧಾರಣೆವಾದಿಗಳು ನೇಪಥ್ಯಕ್ಕೆ ಸರಿದಿದ್ದಾರೆಯೇ..?

  • ಸಾಮಾಜಿಕ ಸುಧಾರಣೆ ಮುಸ್ಲಿಮ್ ಸಮುದಾಯದ ಒಳಗಿನಿಂದಲೇ ಆಗಬೇಕಿದೆಯೇ..? ಹೊರಗಿನ ಪ್ರೇರಕ ವಾಸ್ತವಗಳು ಯಾವ ಪರಿಣಾಮ ಬೀರಬಲ್ಲುವು..?

  • ಸಾಮಾಜಿಕ ಸುಧಾರಣೆ ಮತ್ತು ಆಧುನಿಕತೆ ಇಲ್ಲದೇ ಹೋದರೆ ಮುಸ್ಲಿಮ್ ಸಮುದಾಯ ಇನ್ನಷ್ಟು ಅವಗಣನೆಗೆ ಮತ್ತು ಘೆಟ್ಟೋಕರಣಕ್ಕೆ ಒಳಗಾಗುವುದೇ..?

  • ಭಾರತೀಯ ಮುಸ್ಲಿಮ್ ಸಮುದಾಯದ ಭವಿಷ್ಯವೇನು..? ಸಮುದಾಯಕ್ಕೆ ಸಂವಿಧಾನದತ್ತ ಹಕ್ಕುಸ್ವಾತಂತ್ರ್ಯಸಮಾನ ಅವಕಾಶ ಪಡೆಯುವ ದಾರಿಗಳೇನು..?

ಕಳೆದ ನೂರು ವರ್ಷಗಳಲ್ಲಿನ ಮುಸ್ಲಿಮ್ ಸಾಮಾಜಿಕ ಸುಧಾರಣೆಯ ವಿಷಯಗಳನ್ನು ನೆನಪಿಸಿಕೊಳ್ಳುವ ಮತ್ತು ಹಿನ್ನೆಲೆಯಲ್ಲಿ ಮುಸಲ್ಮಾನ ಸಮುದಾಯದ ವರ್ತಮಾನ ಮತ್ತು ಭವಿಷ್ಯ ವಿಶ್ಲೇಷಿಸುವ ಚರ್ಚೆ.

Leave a Reply

Your email address will not be published.