ಮೂರೂ ಬಿಟ್ಟವರ ರಾಜಕೀಯ ಪ್ರಹಸನ

-ಡಾ.ಎನ್.ಜಗದೀಶ್ ಕೊಪ್ಪ

ಇತ್ತೀಚೆಗೆ ಹುಟ್ಟಿಕೊಂಡ ಮಠಾಧೀಶರ ವರ್ತನೆಗಳು ಮತ್ತು ಅವರ ಮಾತುಗಳು ನಗರದ ಪುಡಿ ರೌಡಿಗಳನ್ನು ಮೀರಿಸುವಂತಿವೆ. ಇವರ ಕಾಳಜಿ ತಮ್ಮನ್ನು ಪೋಷಿಸುವ ರಾಜಕಾರಣಿ ಮತ್ತು ಜಾತಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ.

ಪ್ರಸಕ್ತ ಭಾರತದ ರಾಜಕಾರಣ ಕುರಿತು ಮಾತನಾಡುವುದು ಅಥವಾ ಚಿಂತಿಸುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇಂತಹ ಭಾವನೆಯನ್ನು ಹುಟ್ಟು ಹಾಕಿರುವ ವರ್ತಮಾನದ ರಾಜಕೀಯದ ಬಗ್ಗೆ ಮಾತನಾಡದಿರುವುದೇ ಲೇಸು ಎಂಬುದು ನನ್ನ ದೃಢ ನಂಬಿಕೆ. ಏಕೆಂದರೆ, ದುರಸ್ತಿಯಾಗಲಾರದಷ್ಟು ಕೆಟ್ಟು ಕೆರಹಿಡಿದಿರುವ ಇಂದಿನ ರಾಜಕೀಯ ವ್ಯವಸ್ಥೆಗೆ ಸಹಜ ಸಾವೊಂದೇ ಮದ್ದು ಎಂಬ ನಂಬಿಕೆ ಇತ್ತೀಚೆಗಿನ ದೃಢವಾಗತೊಡಗಿದೆ. ಸಾರ್ವಜನಿಕ ಜೀವನಕ್ಕೆ ಇರಬೇಕಾದ ಲಜ್ಜೆ ಅಥವಾ ಘನತೆ ಇವರೆಡೂ ಇಲ್ಲದ ಲಫಂಗರಿAದ, ದಳ್ಳಾಳಿಗಳಿಂದ, ಹುಸಿ ಸಮಾಜ ಸೇವಕರಿಂದÀ ತುಂಬಿ ತುಳುಕಾಡುತ್ತಿರುವ ಭಾರತದ ರಾಜಕೀಯದಲ್ಲಿ ಸಜ್ಜನರನ್ನು ಹುಡುಕುವುದೆಂದರೆ ಹುಲ್ಲಿನಮೆದೆಯೊಳಗೆ ಸೂಜಿ ಹುಡುಕಿದಂತೆ.

ಅದೊಂದು ಕಾಲವಿತ್ತು. ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಪರಿಭಾವಿಸುವ ಹಾಗೂ ಆ ನೋವಿಗೆ ಪರಿಹಾರ ಹುಡುಕಲು ಇಡೀ ಬದುಕನ್ನು ಸೆವೆಸಿದ ಮಹಾತ್ಮರ ಕಾಲ. ಇಂತಹ ಕಾಲಘಟ್ಟದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರಂತಹ ಅನೇಕ ದಾರ್ಶನಿಕ ಮನೋಭಾವದ ಮಹಾನೀಯರು ಹುಟ್ಟಿಬಂದರು. ತಮ್ಮ ವೈಯಕ್ತಿಕ ಬದುಕನ್ನು ಕಡೆಗಡಿಸಿ ತಾವು ಬದುಕಿದ ವರ್ತಮಾನದ ಸಮಾಜದ ಶ್ರೇಯಸ್ಸಿಗಾಗಿ ತಮ್ಮನ್ನು ತಾವು ಗಂಧದAತೆ ತೇಯ್ದುಕೊಂಡರು. ಆ ಕಾಲದಲ್ಲಿ ಒಬ್ಬ ಜನ ನಾಯಕ ಸಮಾಜದ ನಡುವೆ ಹೋರಾಟ, ತ್ಯಾಗ ಮತ್ತು ಬಲಿದಾನದ ನಡುವೆ ಹುಟ್ಟಿ ಬರುತ್ತಿದ್ದ. ಇಂದಿನ ರೀತಿಯಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಮೂಲಕ ಹುಟ್ಟುತ್ತಿರಲಿಲ್ಲ. ಹಾಗಾಗಿ ಅವರಿಗೆ ಸಮಾಜದ ನಾಡಿಮಿಡಿತದ ಅರಿವಿತ್ತು.

ವೈಯಕ್ತಿಕ ನೋವನ್ನು ಒಂದು ಸಮುದಾಯದ ನೋವೆಂದು ಅಥವಾ ತನಗಾದ ಅವಮಾನವನ್ನು ತನ್ನ ಸಮುದಾಯಕ್ಕೆ ಮಾಡಿದ ಅವಮಾನವೆಂದು ಹೇಳುತ್ತಾ ಜಾತಿಯ ಗುರಾಣಿಯನ್ನು ಬಳಸಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಇಂದಿನ ರಾಜಕೀಯರಂಗದ ನಾಯಕರನ್ನು ನೋಡಿದಾಗ ಇವರೆಲ್ಲಾ ಜಾತಿಯೆಂಬ ಮಲದ ಗುಂಡಿಯಲ್ಲಿ ಹೊರಳಾಡುವ ಕ್ಷÄದ್ರ ಜೀವಿಗಳಂತೆ ಗೋಚರಿಸುತ್ತಾರೆ. ಜಾತಿ ಅಥವಾ ಧರ್ಮ ಕುರಿತು ಮಾತನಾಡುವುದು ಅಪಮಾನಕಾರಿ ಸಂಗತಿ ಎಂಬ ಪ್ರಜ್ಞೆಯಲ್ಲಿ ಹಾಗೂ ಕುವೆಂಪು ವಿಚಾರಧಾರೆಯಲ್ಲಿ ಬೆಳೆದ ನನ್ನ ತಲೆಮಾರಿಗೆ ಪ್ರಸಕ್ತ ರಾಜಕಾರಣ ಮತ್ತು ಮೀಸಲಾತಿಯ ದೊಂಬರಾಟ ಇವೆಲ್ಲವೂ ಜುಗುಪ್ಸೆ ಮತ್ತು ಅಸಹ್ಯ ಭಾವನೆಯನ್ನು ಹುಟ್ಟು ಹಾಕಿವೆ.

ಗಾಂಧೀಜಿ ಕನಸಿದ್ದ ಸ್ವಾತಂತ್ರೊö್ಯÃತ್ತರ ಭಾರತದ ಸಮಾಜ ಇದಾಗಿರಲಿಲ್ಲ. ಗಾಂಧೀಜಿಯಾಗಲಿ ಅಥವಾ ಅಂಬೇಡ್ಕರ್ ಅವರಾಗಲಿ ಈಗ ಬದುಕಿದ್ದರೆ ಇಂದಿನ ಜಾತಿಯಾಧಾರಿತ ಮತ್ತು ಧರ್ಮ ಆಧಾರಿತ ರಾಜಕಾರಣವನ್ನು ನೋಡಿದ್ದರೆ ಖಂಡಿತಾ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ನಾವು ನಂಬಲಾಗದಷ್ಟು ವೇಗದಲ್ಲಿ ಜಗತ್ತು ಬದಲಾವಣೆ ಹೊಂದುತ್ತಿದೆ ನಿಜ. ಆದರೆ, ಸಾಮಾಜಿಕ ಮೌಲ್ಯಗಳು ಇಷ್ಟು ವೇಗದಲ್ಲಿ ಪಲ್ಲಟಗೊಳ್ಳುತ್ತವೆ ಎಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ.

ಇವೊತ್ತಿನ ಅಸಮಾನತೆಯ ಭಾರತವನ್ನು ಮತ್ತು ಅಭದ್ರತೆಯ ಭಾರತವನ್ನು ಗಮನಿಸಿದಾಗ ಸಂಕಟ ಮತ್ತು ಸಿಟ್ಟು ಒಟ್ಟಾಗಿ ಉಮ್ಮಳಿಸಿ ಬರುತ್ತವೆ. ಬಡತನದ, ಅನಕ್ಷರತೆಯ ಮತ್ತು ಮೌಢ್ಯದ ಹಾಗೂ ಜಾತಿಯಾಧಾರಿತ ಶ್ರೇಣೀಕೃತ ಸಮಾಜವನ್ನು ಕತ್ತಲೆಯ ಕೂಪದಿಂದ ಮೇಲೆತ್ತಲು ಈ ನೆಲದ ಹಿರಿಯ ಜೀವಿಗಳು ಸ್ವಾತಂತ್ರö್ಯ ಹೋರಾಟದ ನೆಪದಲ್ಲಿ ತಮ್ಮ ಬದುಕನ್ನು ಬಲಿದಾನ ಮಾಡಿದ್ದು ವ್ಯರ್ಥವಾಯಿತು ಎಂಬ ನೋವಿನ ಭಾವನೆ ಮನದಲ್ಲಿ ಮೂಡುತ್ತಿದೆ.

ಭಾರತದ ಸ್ವಾತಂತ್ರö್ಯ ಹೋರಾಟದ ಹಿನ್ನಲೆಯಲ್ಲಿ ಗಾಂಧೀಜಿ ಅಹಿಂಸಾತ್ಮಕ ಹೋರಾಟದ ಮೂಲಕ ಇಂಗ್ಲಿಷರಿAದ ಭಾರತವನ್ನು ಬಿಡುಗಡೆಗೊಳಿಸಿದರು ಎಂದು ಹೇಳಿಕೊಳ್ಳುತ್ತಾ, ಒಂದು ಮಗ್ಗುಲಿನ ಇತಿಹಾಸವನ್ನು ಸೃಷ್ಟಿಸುತ್ತಾ ಬಂದಿದ್ದೇವೆ. ಇದು ಆಂಶಿಕ ಸತ್ಯ ಮಾತ್ರ. ಗಾಂಧೀಜಿ ಓರ್ವ ಸ್ವಾತಂತ್ರö್ಯ ಹೋರಾಟಗಾರ ಮಾತ್ರವಲ್ಲದೆ, ಅವರೊಳಗೊಬ್ಬ ಸಮಾಜ ಸುಧಾರಕನೂ ಇದ್ದ. ಭಾರತದಲ್ಲಿ ತಾಂಡವವಾಡುತ್ತಿದ್ದ ಬಡತನ, ಅನಕ್ಷರತೆ, ಅಸ್ಪೃಶ್ಯತೆ, ಸಾಮಾಜಿಕ ಮೌಢ್ಯಗಳನ್ನು ಹೋಗಲಾಡಿಸುವ ಸಾಮಾಜಿಕ ಕ್ರಾಂತಿಕಾರಿಯ ಕನಸುಗಳು ಅವರ ಹೋರಾಟದ ಜೊತೆಯಲ್ಲಿಯೇ ಸಾಗಿಬಂದಿದ್ದವು. ಆದರೆ, ನಾವು ಅವರ ಇತರೆ ಮುಖಗಳನ್ನು ಬದಿಗೊತ್ತಿ ಕೇವಲ ಸ್ವಾತಂತ್ರö್ಯ ಹೋರಾಟಕ್ಕೆ ಮನ್ನಣೆ ನೀಡಿದೆವು. ಈ ಕಾರಣಕ್ಕಾಗಿ ಗಾಂಧೀಜಿಯ ಸಮಗ್ರ ವ್ಯಕ್ತಿತ್ವ ನಮಗಿನ್ನೂ ಪೂರ್ಣವಾಗಿ ದಕ್ಕಿಲ್ಲ ಎಂದರೆ ಅತಿಶಯೋಕ್ತಿಯ ಮಾತಾಗಲಾರದು.

ಭಾರತದ ಸಂದರ್ಭದಲ್ಲಿ ತಳಸಮುದಾಯದ ನೋವುಗಳ ಕುರಿತಾಗಿ ವಿಶೇಷವಾಗಿ ದಲಿತರ ಬಗ್ಗೆ ಅಂಬೇಡ್ಕರ್‌ರವರನ್ನು ಹೊರತು ಪಡಿಸಿದರೆ, ಅಸ್ಪೃಶ್ಯತೆ ಕುರಿತಂತೆ ಧ್ವನಿ ಎತ್ತಿದ ದಲಿತೇತರರಲ್ಲಿ ಗಾಂಧೀಜಿ ಪ್ರಮುಖರು. ದಲಿತ, ಹೊಲೆಯ, ಮಾದಿಗ, ಆದಿದ್ರಾವಡ, ಮುಟ್ಟಿಸಿಕೊಳ್ಳದವನು ಹೀಗೆ ಇಡೀ ಭಾರತದಾದ್ಯಂತ ಅನೇಕ ಹೆಸರಿನಲ್ಲಿ ಕರೆಯುತ್ತಿದ್ದ ಅಸ್ಪೃಶ್ಯರನ್ನು ಮೊದಲ ಬಾರಿಗೆ ಗಾಂಧೀಜಿ ದೇವರ ಮಕ್ಕಳೆಂದು ಕರೆದು ಅವರಿಗೆ ಹರಿಜನ ಎಂದು ಹೆಸರಿಟ್ಟರು. ಗಾಧೀಜಿಯ ಈ ನಡೆ ಇಂದಿನ ಸಮಾಜ ಸೇವಕರಂತೆ, ರಾಜಕಾರಣಿಗಳಂತೆ ಕೇವಲ ತುಟಿಸೇವೆಯ ಮಾತುಗಳಾಗಿರಲಿಲ್ಲ. ಅವರು ಇಡೀ ಬದುಕಿನುದ್ದಕ್ಕೂ ಹರಿಜನರ ಉದ್ಧಾರವನ್ನು ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡರು. ತಮ್ಮ ಈ ನಿಷ್ಕಲ್ಮಶ ನಡೆ ಮತ್ತು ನುಡಿಯ ಮೂಲಕ ತಮ್ಮ ಅನುಯಾಯಿಗಳಿಗೆ, ಶಿಷ್ಯರಿಗೆ ಮಾತ್ರವಲ್ಲದೆ, ಇತರೆ ಮೇಲ್ವರ್ಗದ ಸಮುದಾಯಕ್ಕೆ ಮಾದರಿಯಾದರು.

ಅಕ್ಷರ ಲೋಕವನ್ನು ಕಾಣದೆ ಮೂಕ ಪ್ರಾಣಿಗಳಂತೆ ಬದುಕಿದ್ದ ತಳ ಸಮುದಾಯಗಳ ಅಭಿವೃದ್ಧಿಗಾಗಿ ಅಂಬೇಡ್ಕರ್ ರಂತಹ ಚಾಣಾಕ್ಷಮತಿಯ ಮೂಸೆಯಲ್ಲಿÀ ರೂಪುಗೊಂಡ ಮೀಸಲಾತಿ ಎಂಬ ಪರಿಕಲ್ಪನೆ ಇಂದು ರಾಜಕೀಯ ದಾಳವಾಗುವುದರ ಜೊತೆಗೆ ಮೇಲ್ಜಾತಿ ಹಾಗೂ ಬಲಿಷ್ಠ ವರ್ಗಗಳ ಪಾಲಾಗುತ್ತಿರುವುದನ್ನು ಗಮನಿಸಿದರೆ, ಆತ್ಮಸಾಕ್ಷಿಯ ಪ್ರಜ್ಞೆಯಿಲ್ಲದ ಅನಾಗರಿಕ ಸಮಾಜದಲ್ಲಿ ನಾವು ಬದುಕುತ್ತಾ ಕ್ಷÄಲ್ಲಕ ಹಾಗೂ ಕುಬ್ಜ ರಾಜಕಾರಣಿಗಳ ನಡವಳಿಕೆಗಳಿಗೆ ನಾವು ಮೌನ ಸಾಕ್ಷಿಗಳಾಗುತ್ತಿದ್ದೇವೆ ಎಂಬ ಪಾಪ ಪ್ರಜ್ಞೆ ಮೂಡುತ್ತಿದೆ.

ಮೀಸಲಾತಿ ಜಾರಿಗೆ ಬಂದ ಪರಿಣಾಮವಾಗಿ ಅನೇಕ ತಳ ಸಮುದಾಯಗಳು ಘನತೆಯ ಬದುಕನ್ನು ಬದುಕಲು ಸಾಧ್ಯವಾಯಿತು ಮತ್ತು ಅವಕಾಶ ವಂಚಿತ ಪ್ರತಿಭಾವಂತರು ಉದ್ಯೋಗ ಮತ್ತು ಶಿಕ್ಷಣ ಪಡೆಯಲು ಸಾಧ್ಯವಾಯಿತು ನಿಜ. ಆದರೆ, ಸ್ವಾತಂತ್ರö್ಯ ಬಂದು ಎಪ್ಪತ್ಮೂರು ವರ್ಷಗಳಾದರೂ ಸಹ ಭಾರತದ ಇನ್ನೂ ಅನೇಕ ತಳ ಸಮುದಾಯಗಳಿಗೆ ಇಂತಹ ಅವಕಾಶ ದೊರೆತಿಲ್ಲ. ಅರಣ್ಯದ ನಡುವೆ ಮತ್ತು ಅಂಚಿನಲ್ಲಿ ಬದುಕುತ್ತಿರುವ ಆದಿವಾಸಿಗಳು ಹಾಗೂ ಬುಡಕಟ್ಟು ನಿವಾಸಿಗಳು ಇಂದಿಗೂ ಅವಕಾಶ ವಂಚಿತರಾಗಿದ್ದಾರೆ. ಇಂತಹ ನೋವಿನ ಸ್ಥಿತಿಯಲ್ಲಿ ಕನಾಟಕದ ರಾಜಕಾರಣದಲ್ಲಿ ಮೀಸಲಾತಿ ಎಂಬುದು ಉಳ್ಳವರ ಹಾಗೂ ಮೇಲ್ಜಾತಿ ವರ್ಗದ ಬ್ಲಾಕ್ ಮೈಲ್ ತಂತ್ರವಾಗಿ ಇದೀಗ ಪರಿವರ್ತನೆಗೊಂಡಿದೆ.

ಕರ್ನಾಟಕದಲ್ಲಿ ಮೀಸಲಾತಿಯ ಪರಿಕಲ್ಪನೆಯನ್ನು ವಿಕೃತಿಗೊಳಿಸಿದ ಕುಖ್ಯಾತಿ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಬೇಕು. ಐವತ್ತು ವರ್ಷದ ರಾಜಕಾರಣ ಮಾಡಿದ್ದರೂ ಸಹ ಒಂದೇ ಪಕ್ಷದಲ್ಲಿ ಇರುವುದನ್ನು ಹೊರತು ಪಡಿಸಿದರೆ, ಅನೈತಿಕ ರಾಜಕಾರಣದಿಂದ ಮುಖ್ಯಮಂತ್ರಿ ಪಟ್ಟಕ್ಕೇರಿದ ಈ ಮಹಾನುಭಾವರು ತಮ್ಮ ಶಬ್ದಕೋಶದಲ್ಲಿ ಬದ್ಧತೆ, ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಅಳಿಸಿಹಾಕಿದವರು. 1990ರ ದಶಕದಲ್ಲಿ ಯಾವುದೇ ನಾಚಿಕೆ ಮತ್ತು ಸ್ವಾಭಿಮಾನವಿಲ್ಲದೆ ರೈತ ಸಂಘದ ಚಿಹ್ನೆಯಾದ ಹಸಿರು ಟವಲ್ ಅನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅನೈತಿಕತೆಯ ಮಾರ್ಗ ತುಳಿದವರು. ಇದೇ ಮಹಾಶಯ ಈಗ ಹಿಂದುಳಿದ ಹಾಗೂ ತಳಸಮುದಾಯದ ಮೀಸಲಾತಿಯ ಅವಕಾಶಕ್ಕೆ ಅಡ್ಡಿಯಾಗುವುದರ ಮೂಲಕ ಜೇನುಗೂಡಿಗೆ ಹೊಸ ಕಲ್ಲನ್ನು ಒಗೆದಿದ್ದಾರೆ.

ವೀರಶೈವ ಲಿಂಗಾಯಿತ ಅಭಿವೃದ್ಧಿ ಮಂಡಳಿ ಘೋಷಣೆ, ರಾತ್ರೋರಾತ್ರಿ ಐನೂರು ಕೋಟಿ ರೂಪಾಯಿ ಅನುದಾನ ಬಿಡುಗಡೆ, ಬಸವಕಲ್ಯಾಣದಲ್ಲಿ ರೂ.650 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ಇವೆಲ್ಲವೂ ಈ ಮನುಷ್ಯನ ಜಾತಿಯ ಮೇಲಿನ ಮಮಕಾರವನ್ನು ಅನಾವರಣಗೊಳಿಸುತ್ತಿವೆ. ಜೊತೆಗೆ ತಾನು ಬೆಳೆದುಬಂದ ಸಂಘಪರಿವಾರವನ್ನು ಮೆಚ್ಚಿಸುವುದಕ್ಕೆ ಬ್ರಾಹ್ಮಣ ಅಭಿವೃದ್ಧಿಮಂಡಳಿ ಘೋಷಣೆ ಮಾಡಿದ್ದಾರೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಉತ್ತರ ಕರ್ನಾಟಕದ ಎರಡು ಸಾವಿರ ಕುಟುಂಬಗಳಿಗೆ ವಸತಿ ವ್ಯವಸ್ಥೆ ಮಾಡಲಾಗದ ಈ ನಿಷ್ಕಿçಯ ಮುಖ್ಯಮಂತ್ರಿಗೆ ತನ್ನ ಜಾತಿ ಸಮುದಾಯಕ್ಕೆ ಧಾರಾಳವಾಗಿ ಹಣ ನಿಡಲು ಮನಸ್ಸಾದರೂ ಹೇಗೆ ಬಂತು? ಇಷ್ಟು ಮಾತ್ರವಲ್ಲದೆ ಹಣದ ಆಮಿಷದ ಮೂಲಕ ಕರ್ನಾಟಕದ ಅನೇಕ ಮಠಾಧೀಶರನ್ನು ಮುಠಾಳರನ್ನಾಗಿ ಮಾಡಿದ ಕೀರ್ತಿ ಈ ಯಡಿಯೂರಪ್ಪನವರಿಗೆ ಸಲ್ಲಬೇಕು.

ರಾಜಕಾರಣಿಗಳು ನೀಡುವ ಅಕ್ರಮ ಸಂಪಾದನೆಯ ಹಣದ ಆಸೆಗಾಗಿ ಇಂದು ಮಠ ಪರಂಪರೆಯೇ ಇಲ್ಲದ ಶೂದ್ರ ಮತ್ತು ತಳಸಮುದಾಯದ ಪ್ರತಿಯೊಂದು ಜಾತಿಯಲ್ಲಿ ಮಠಗಳು ನಾಯಿಕೊಡೆ ಅಣಬೆಗಳಂತೆ ಸೃಷ್ಟಿಯಾಗುವುದರ ಜೊತೆಗೆ ಮಠಾಧೀಶರು ಹುಟ್ಟಿಕೊಂಡಿದ್ದಾರೆ. ಕರ್ನಾಟಕದಲ್ಲಿ ಶತಮಾನದ ಇತಿಹಾಸವಿರುವ ಅನೇಕ ಮಠಗಳು ಅನ್ನದಾಸೋಹ ಮತ್ತು ಶಿಕ್ಷಣ ದಾಸೋಹ ನೀಡುವುದರ ಜೊತೆಗೆ ಜಾತಿ, ಧರ್ಮಗಳನ್ನು ಮೀರಿ ಅನೇಕ ಬಡಕುಟುಂಬಗಳಿಗೆ ಬೆಳಕಾಗಿದ್ದವು. ಎಲ್ಲಾ ಸಮುದಾಯದ ಒಳಿತನ್ನು ಬಯಸುವ ಇಂತಹ ಮಠಗಳ ಮಠಾಧೀಶರು ನಿಜವಾದ ಅಥÀðದಲ್ಲಿ ಜಗದ್ಗುರುಗಳಾಗಿದ್ದರು.

ಇತ್ತೀಚೆಗೆ ಹುಟ್ಟಿಕೊಂಡ ಮಠಾಧೀಶರ ವರ್ತನೆಗಳು ಮತ್ತು ಅವರ ಮಾತುಗಳು ನಗರದ ಪುಡಿ ರೌಡಿಗಳನ್ನು ಮೀರಿಸುವಂತಿವೆ. ಇವರ ಕಾಳಜಿ ತಮ್ಮನ್ನು ಪೋಷಿಸುವ ರಾಜಕಾರಣಿ ಮತ್ತು ಜಾತಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ. ಇಂತಹ ಅವಿವೇಕಿಗಳಿಂದ ಜಾತಿ ಮತ್ತು ಉಪಪಜಾತಿಗಳು ವಿಭಜನೆಗೊಂಡು ಪ್ರತಿ ಸಮುದಾಯವೂ ಮೀಸಲಾತಿಗಾಗಿ ಸರ್ಕಾರಕ್ಕೆ ಬೆದರಿಕೆ ಹಾಕುವ ಮಟ್ಟಕ್ಕೆ ಬೆಳೆದು ನಿಂತಿವೆ. ಜಾತಿಯೆಂಬುದು ಪ್ರತಿಯೊಬ್ಬ ರಾಜಕಾರಣಿಯ ಏಳಿಗೆಗೆ ಏಣಿ ಮೆಟ್ಟಿಲಾಗಿದೆ. ಇಂತಹ ಅಯೋಮಯವಾದ ಸ್ಥಿತಿಯಲ್ಲಿ ವರ್ತಮನದ ಸಮಾಜ ಮತ್ತು ದೇಶ ಎತ್ತ ಸಾಗುತ್ತಿದೆ ಎಂಬುದನ್ನು ಊಹಿಸಲು ಅಸಾಧ್ಯವಾಗಿದೆ. ಜಾತ್ಯಾತಿತ ಸಮಾಜ ಮತ್ತು ದೇಶ ಎಂಬ ಪರಿಕಲ್ಪನೆ ಈಗ ದೇಶದ ಸಂವಿಧಾನದಿAದ ಅಳಿಸಿಹೋದರೆ ನಾವು ಆಶ್ಚರ್ಯ ಪಡಬೇಕಿಲ್ಲ.

*ಲೇಖಕರು ಮಂಡ್ಯ ಜಿಲ್ಲೆ ಕೊಪ್ಪ ಗ್ರಾಮದವರು; ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಿದ ಅನುಭವೀ ಪತ್ರಕರ್ತರು, ಮೈಸೂರಿನಲ್ಲಿ ವಾಸ.

 

Leave a Reply

Your email address will not be published.