ಮೊಟ್ಟಮೊದಲ ಕಪ್ಪು ಸೆನೇಟರ್ ಹಿರಾಮ್ ರಿವೆಲ್ಸ್

ಕೆಲ ದಿನಗಳ ಹಿಂದೆ ಹಿರಾಮ್ ರಿವೆಲ್ಸ್ ಅವರು ಅಮೆರಿಕೆಯ ಮೊದಲ ಕರಿಯ ಕಾಂಗ್ರೆಸ್ ಸದಸ್ಯರಾಗಿ ಚುನಾಯಿತರಾದ 150ನೆಯ ವರ್ಷಾಚರಣೆಯ ಅಂಗವಾಗಿ ಮುನ್ನೂರು ಮಂದಿ ಜಾಕ್ಸನ್ ನ ಓಲ್ಡ್ ಸ್ಟೇಟ್ ಕ್ಯಾಪಿಟೊಲ್ ನಲ್ಲಿ ಸೇರಿದರು. ಈ ವರ್ಷಾಚರಣೆಯ ಮಹತ್ವ ವಿವರಿಸುವ ಲೇಖನವಿದು.

ಮೂಲ: ಎರಿಕ್ ಫೋನರ್  ಅನುವಾದ: ಕಾದಂಬಿನಿ

ಎರಡು ಶತಮಾನಗಳಿಗೂ ಹೆಚ್ಚಿನ ಅವಧಿಯಲ್ಲಿ ಬರಾಕ್ ಒಬಾಮಾ ಅವರು ರಾಷ್ಟ್ರದಲ್ಲಿ ಏಕೈಕ ಕರಿಯ ಅಧ್ಯಕ್ಷರಾಗಿ ಹೊರಹೊಮ್ಮಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಸೆನೆಟ್ ನಲ್ಲಿ ಸೇವೆ ಸಲ್ಲಿಸಿದ 2000 ಪುರುಷರು ಮತ್ತು ಮಹಿಳೆಯರಲ್ಲಿ ಬರೇ ಹತ್ತು ಮಂದಿ ಕರಿಯರಾಗಿದ್ದರು ಎನ್ನುವುದು ಹೆಚ್ಚಿನವರಿಗೆ ಗೊತ್ತಿರದ ಸತ್ಯ. ಇವರಲ್ಲಿ, ರಿವೆಲ್ಸ್ ಮತ್ತು ಬ್ಲಾಂಚಿ ಕೆ.ಬ್ರೂಸ್ ಪುನರ್ನಿರ್ಮಾಣದ ಕಾಲಘಟ್ಟದಲ್ಲಿ ಮಿಸಿಸಿಪ್ಪಿಯಿಂದ ಚುನಾಯಿತರಾಗಿದ್ದವರು. ಈ ಅಂಕಿ-ಅಂಶಗಳು ಆಫ್ರಿಕನ್-ಅಮೆರಿಕನ್ನರಿಗೆ ಸರಕಾರದ ಉನ್ನತ ಹುದ್ದೆಗಳಿಗೇರಲು ಯಾವ ಪ್ರಮಾಣದ ಕಠಿಣ ಅಡೆತಡೆಗಳಿದ್ದವು ಮತ್ತು ಅಮೆರಿಕನ್ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಪುನರ್ನಿರ್ಮಾಣ ಎನ್ನುವುದು ಎಂಥ ಅಪೂರ್ವ ಅವಧಿಯಾಗಿತ್ತು ಎನ್ನುವುದನ್ನು ನೆನಪಿಸುತ್ತದೆ.

ಅಂತರ್ಯುದ್ಧಕ್ಕೂ ಮುನ್ನ ಬೆರಳೆಣಿಕೆಯಷ್ಟು ಕರಿಯ ಅಧಿಕಾರಿಗಳು ದೇಶದಲ್ಲಿದ್ದರಾದರೂ ಅವರು ಉತ್ತರದ ಅಸಹಕಾರ ಸಮುದಾಯಗಳ ಕೆಲವೇ ಶಾಂತಿಯ ನ್ಯಾಯಾಧೀಶರು ಮಾತ್ರ! ಆದರೆ ಪುನರ್ನಿರ್ಮಾಣದ ಸಂದರ್ಭದಲ್ಲಿ 2000 ಆಫ್ರಿಕನ್-ಅಮೆರಿಕನ್ನರು ಕಾಂಗ್ರೆಸ್ ಸದಸ್ಯತ್ವದಿಂದ ಹಿಡಿದು ರಾಜ್ಯದ ಶಾಸಕರು, ಶೆರಿಫ್, ಸಿಟಿ ಕೌನ್ಸಿನ್ ಮೆನ್ ಮತ್ತು ಇತರ ಸ್ಥಾನಗಳನ್ನು ಆಕ್ರಮಿಸಿಕೊಂಡರು.

ದ್ವಿಜಾತಿ ಪ್ರಜಾಪ್ರಭುತ್ವದಲ್ಲಿನ ಈ ಅಭೂತಪೂರ್ವ ಪ್ರಯೋಗವು ಬಿಳಿಯರ ಆಧಿಪತ್ಯದ  ಅನುಯಾಯಿಗಳಲ್ಲಿ ತೀವ್ರ ವಿರೋಧವನ್ನು ಹುಟ್ಟುಹಾಕಿತು, ಆ ಸಮಯದಲ್ಲಿ ಡೆಮೊಕ್ರಟಿಕ್ ಪಕ್ಷವು ಸಂಪೂರ್ಣವಾಗಿ ಕೇಂದ್ರೀಕೃತವಾಗಿ  ಹಿಂಸಾಚಾರದ ಮೂಲಕ ಪುನರ್ನಿರ್ಮಾಣವನ್ನು ದುರ್ಬಲಗೊಳಿಸಲು ಪ್ರಯತ್ನಿಸಿತು ಮತ್ತು ಕಪ್ಪು ಅಧಿಕಾರಿಗಳನ್ನು ಅಜ್ಞಾನಿಗಳು, ಭ್ರಷ್ಟರು ಮತ್ತು ಸಾರ್ವಜನಿಕ ಸೇವೆಗೆ ಅನರ್ಹರು ಎಂದು ಬಿಂಬಿಸುವ ಅಭಿಯಾನವನ್ನು ನಡೆಸಿತು. ರಾಷ್ಟ್ರದ ಪ್ರಮುಖ ಪ್ರಜಾಸತ್ತಾತ್ಮಕ ಪತ್ರಿಕೆಯಾದ ದ ನ್ಯೂಯಾರ್ಕ್ ವಲ್ರ್ಡ್ ರಿವೆಲ್ಸ್ ಅವರನ್ನು “ಒರಾಂಗುಟಾನ್ ಸಂತತಿಯವ” ಎಂದು ಹೀಯಾಳಿಸಿ ಬರೆಯಿತು.

ಕರಿಯರು ಅಧಿಕಾರ ಹಿಡಿಯುವ ಕುರಿತಾಗಿ, “ಬಿಳಿಯರ ನಾಗರಿಕ ಚರಿತ್ರೆಯಲ್ಲಿ ಗಮನಾರ್ಹ ಮತ್ತು ವಿಲಕ್ಷಣವಾದ ಬೆಳವಣಿಗೆ”, ಇದು “ತತ್ತರಿಸುವಂತೆ ಮತ್ತು ಶಾಪಗ್ರಸ್ತವಾಗಿ ಸುದೀರ್ಘ ಕಾಲದವರೆಗೂ ನೆನಪಿನಲ್ಲಿ ಉಳಿಯಲಿದೆ” ಎಂದು ಗುರುತಿಸುತ್ತಾರೆ.  

ಈ ತಾರತಮ್ಯದ ಪ್ರಚಾರವು ಬಹುಕಾಲದವರೆಗೂ ಅಮೆರಿಕಾದ ಇತಿಹಾಸಕಾರರ ಪಾಂಡಿತ್ಯಪೂರ್ಣ ನ್ಯಾಯಸಮ್ಮತಿಯನ್ನು ಪಡೆದಿತ್ತು. 1947ರ ವರೆಗಿನ ಸುದೀರ್ಘ ವಿಳಂಬದ ಬಳಿಕ ಜಾರ್ಜಿಯಾ ವಿಶ್ವವಿದ್ಯಾಲಯದ ‘ದಕ್ಷಿಣದ ಇತಿಹಾಸಕಾರರ ಸಂಘ’ದ ಅಧ್ಯಕ್ಷರಾದ ಇ.ಮರ್ಟನ್ ಕೌಲ್ಟರ್ ಪುನರ್ನಿರ್ಮಾಣ ಕಾಲದಲ್ಲಿ ಕರಿಯರು ಅಧಿಕಾರ ಹಿಡಿಯುವ ಕುರಿತಾಗಿ, “ಬಿಳಿಯರ ನಾಗರಿಕ ಚರಿತ್ರೆಯಲ್ಲಿ ಗಮನಾರ್ಹ ಮತ್ತು ವಿಲಕ್ಷಣವಾದ ಬೆಳವಣಿಗೆ”, ಇದು “ತತ್ತರಿಸುವಂತೆ ಮತ್ತು ಶಾಪಗ್ರಸ್ತವಾಗಿ ಸುದೀರ್ಘ ಕಾಲದವರೆಗೂ ನೆನಪಿನಲ್ಲಿ ಉಳಿಯಲಿದೆ” ಎಂದು ಗುರುತಿಸುತ್ತಾರೆ.  

ಇಂದು ಹಿರಾಮ್ ರಿವೆಲ್ಸ್ ಅವರನ್ನು ಕರಿಯರ ರಾಜಕೀಯ ಶಕ್ತಿಯ ಆದ್ಯ ಪ್ರವರ್ತಕರಾಗಿಯೂ ಜನಾಂಗೀಯ ರೂಢಿಗಳನ್ನು ಖಂಡಿಸುವವರಾಗಿಯೂ ಸ್ಮರಿಸುವ ಅಗತ್ಯವಿದೆ. ಇವರು 1827ರಲ್ಲಿ ಓ.ಅ. ಯ ಫಾಯೆಟ್ಟೆವಿಲ್ಲೆಯಲ್ಲಿ ಜನಿಸಿದರು. ಇಂಡಿಯಾನಾ, ಓಹಿಯೋ ಮತ್ತು ಇಲಿನಾಯ್ಸ್ ನ ನಾಕ್ ಕಾಲೇಜುಗಳ ಧಾರ್ಮಿಕ ಸೆಮಿನರಿಗಳಲ್ಲಿ ಅಧ್ಯಯನ ನಡೆಸಿದರು. 

1845ರಲ್ಲಿ ಆಫ್ರಿಕನ್ ಮೆಥಾಡಿಸ್ಟ್ ಎಪಿಸ್ಕೋಪಿಕಲ್ ಚರ್ಚಿನಲ್ಲಿ ದೀಕ್ಷೆ ಪಡೆದು ಮಂತ್ರಿಯಾದರು. ಸಂಚಾರಿ ಮಿಷನರಿಯಾಗಿ ಮಿಡ್ವೆಸ್ಟ್ ಗೆ ಪ್ರಯಾಣಿಸಿ ಗುಲಾಮರಿಗೆ ಧಾರ್ಮಿಕ ಬೋಧನೆ ನೀಡುವ ದುಸ್ಸಾಹಸಕ್ಕೆ ಕೈ ಹಾಕಿದರು. ಅಂತರ್ಯುದ್ಧ ಆರಂಭವಾಗುವಾಗ, ರಿವೆಲ್ಸ್ ಬಾಲ್ಟಿಮೋರಿನಲ್ಲಿ ಒ.ಇ. ಮಂತ್ರಿಯಾಗಿ ಕೆಲಸ ಮಾಡುತ್ತಾ ಕರಿಯ ವಿದ್ಯಾರ್ಥಿಗಳ ಹೈಸ್ಕೂಲಿನ ಪ್ರಾಂಶುಪಾಲರಾಗಿ ದುಡಿಯತೊಡಗಿದರು. 1864ರಲ್ಲಿ ಯೂನಿಯನ್ನಿನ ಹಿಡಿತದಲ್ಲಿರುವ ಮಿಸಿಸ್ಸಿಪ್ಪಿಗೆ ಬಂದು ಅಲ್ಲಿದ್ದ ಗುಲಾಮರಿಗೆ ಶಿಕ್ಷಣ ಕೊಡಲು ತಮ್ಮನ್ನು ತೊಡಗಿಸಿಕೊಂಡರು.

ರಿವೆಲ್ಸ್ ಅವರ ರಾಜಕೀಯ ವೃತ್ತಿಜೀವನವು 1868ರಲ್ಲಿ ಆರಂಭವಾಯಿತು. ಆಗ ರಾಜ್ಯದ ತಾತ್ಕಾಲಿಕ ರಾಜ್ಯಪಾಲರಾಗಿದ್ದ ಯೂನಿಯನ್ ಜನರಲ್ ಅಡೆಲ್ಬರ್ಟ್ ಏಮ್ಸ್ ಅವರನ್ನು ನಟ್ಚೆಸ್ಸ್ ನಲ್ಲಿ ಪುರಪ್ರಮುಖರಾಗಿ ನೇಮಿಸಿತು. ಆ ಕೂಡಲೇ ಅವರು ರಾಜ್ಯ ಸೆನೆಟ್ ಗೆ ಆಯ್ಕೆಯಾದರು. ಸುಮಾರು ಮೂರು ಡಜನ್ ಆಫ್ರಿಕನ್-ಅಮೆರಿಕನ್ನರನ್ನು ಒಳಗೊಂಡಿದ್ದ ಮಿಸಿಸಿಪ್ಪಿಯ ಶಾಸಕರು, ಯುನೈಟೆಡ್ ಸ್ಟೇಟ್ಸ್ ಸೆನೆಟಿನ ಬರೇ ಒಂದು ಅವಧಿಗೆ ಏಮ್ಸ್ ಅನ್ನು ಆರಿಸಿ, ಉಳಿದ ಒಂದು ವರ್ಷದವರೆಗೆ ರಿವೆಲ್ಸ್ ಅವರನ್ನು ಆಯ್ಕೆಮಾಡಿದರು.   

“ನಾನು ನನ್ನ ಅಗತ್ಯ ಇರುವವರಿಗಾಗಿ ಮತ್ತು ವಂಚನೆಗೊಳಗಾದ ಜನರಿಗಾಗಿ ಎಲ್ಲವನ್ನೂ ಮಾಡಿದೆ” ಎನ್ನುತ್ತಾರೆ. ಜಾರ್ಜಿಯದ ಸಾಮಾನ್ಯ ಸಭೆಯಿಂದ ಅಕ್ರಮವಾಗಿ ಬಹಿಷ್ಕೃತರಾದ ಕರಿಯ ಶಾಸಕರ ಮರುಹೇಳಿಕೆಗಾಗಿ ರಿವೆಲ್ಸ್ ಗಟ್ಟಿದನಿಯಲ್ಲಿ ಮಾತನಾಡಿದರು.

ಆದರೆ, ಈ ದಿನಗಳಲ್ಲಿ ಬರಾಕ್ ಒಬಾಮಾ ಅವರ ಪೌರತ್ವದ ಹಕ್ಕನ್ನು ನಿರಾಕರಿಸುವ ಪ್ರಯತ್ನಗಳಾದ ರೀತಿಯಲ್ಲೇ, ಸೆನೆಟ್ ನಲ್ಲಿದ್ದ ಡೆಮೊಕ್ರಾಟ್ ಗಳ ಸಣ್ಣ ಗುಂಪೊಂದು ಅಧಿಕಾರ ಹಿಡಿದ ರಿವೆಲ್ಸ್ ಅವರ ಪೌರತ್ವದ ಹಕ್ಕನ್ನು ಪ್ರಶ್ನಿಸಿತು. ಸಂವಿಧಾನದ ಪ್ರಕಾರ ಸೆನೆಟರ್ ಆಗಬೇಕಾದರೆ ಆ ವ್ಯಕ್ತಿ ನಾಗರಿಕ ಹಕ್ಕನ್ನು ಪಡೆದು ಕನಿಷ್ಠ ಒಂಬತ್ತು ವರ್ಷಗಳಾಗಿರಬೇಕು. ಆದರೆ ಡೆಮೋಕ್ರಾಟರು 1866ರ ಸಂವಿಧಾನದ ಅಧಿನಿಯಮ ಮತ್ತು 14 ನೆಯ ತಿದ್ದುಪಡಿಯು 1868ರಲ್ಲಿ ಕರಿಯರಿಗೆ ಪೌರತ್ವದ ಹಕ್ಕನ್ನು ಸ್ಥಾಪಿಸಿದೆ ಎಂದು ಪಟ್ಟುಹಿಡಿದರು. ಇಷ್ಟಾದರೂ ಕೆಲವರು ಯುದ್ಧಪೂರ್ವದ ಡ್ರೆಡ್ ಸ್ಕಾಟ್ ತೀರ್ಮಾನವು ದೇಶದ ಕಾನೂನಿನಲ್ಲಿ ಪೌರತ್ವ ಕಾನೂನನ್ನು ಬಿಳಿಯರಿಗೆಷ್ಟೇ ಸೀಮಿತಗೊಳಿಸಿದೆ ಎಂದು ವಾದಿಸಿದರು.  

ಆದರೂ 48-8 ಮತಗಳಿಂದ ರಿವೆಲ್ಸ್ ಸೆನೆಟ್ ಗೆ ಆಯ್ಕೆಯಾದರು. ರಿವೆಲ್ಸ್ ನಂತರದಲ್ಲಿ ಬರೆಯುತ್ತಾ ತಾವು ಅಧಿಕಾರದಲ್ಲಿ ಇದ್ದಾಗ, “ನಾನು ನನ್ನ ಅಗತ್ಯ ಇರುವವರಿಗಾಗಿ ಮತ್ತು ವಂಚನೆಗೊಳಗಾದ ಜನರಿಗಾಗಿ ಎಲ್ಲವನ್ನೂ ಮಾಡಿದೆ” ಎನ್ನುತ್ತಾರೆ. ಜಾರ್ಜಿಯದ ಸಾಮಾನ್ಯ ಸಭೆಯಿಂದ ಅಕ್ರಮವಾಗಿ ಬಹಿಷ್ಕೃತರಾದ ಕರಿಯ ಶಾಸಕರ ಮರುಹೇಳಿಕೆಗಾಗಿ ರಿವೆಲ್ಸ್ ಗಟ್ಟಿದನಿಯಲ್ಲಿ ಮಾತನಾಡಿದರು. ಬಾಲ್ಟಿಮೋರಿನ ನೌಕಾಪಡೆಯಲ್ಲಿ ಮೊದಲ ಬಾರಿಗೆ ಕರಿಯ ಮೆಕ್ಯಾನಿಕ್ ಗಳನ್ನು ಗುತ್ತಿಗೆಗೆ ಪಡೆಯಲು ವ್ಯವಸ್ಥೆ ಮಾಡುವಂತೆ ಯುದ್ಧದ ಕಾರ್ಯದರ್ಶಿ ವಿಲಿಯಂ ಡಬ್ಲ್ಯೂ.ಬೆಕ್ನ್ಯಾಪ್ ಅವರನ್ನು ಒಪ್ಪಿಸಿದರು. 

ರಾಷ್ಟ್ರದ ರಾಜಧಾನಿಯಿಂದ ಮುಕ್ತ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸುವ ಮಸೂದೆ ಸೆನೆಟ್ ಮುಂದೆ ಬಂದಾಗ, ಶಾಲಾ ಪ್ರವೇಶಾತಿಗಳಲ್ಲಿ ಜನಾಂಗೀಯ ವಿಂಗಡಣೆಗೆ ಅವಕಾಶ ಮಾಡಿಕೊಡುವ ತಿದ್ದುಪಡಿಯನ್ನು ಉಗ್ರವಾಗಿ ವಿರೋಧಿಸಿದರು. ಆದರೂ ಈ ತಿದ್ದುಪಡಿಯು ಅಂಗೀಕಾರವಾಯಿತು ಮತ್ತು ಕೊಲಂಬಿಯಾ ಜಿಲ್ಲೆಯ ಶಾಲಾ ಪದ್ಧತಿಯ 1950ರ ಮಧ್ಯಭಾಗದವರೆಗೂ ಏಕೀಕೃತವಾಗದೆ ಉಳಿದಿತ್ತು.       

ರಿವೆಲ್ಸ್ ಅವರು ಜನಾಂಗೀಯ ತಾರತಮ್ಯದ ವಿರುದ್ಧ ನೀಡಿದ ಶಕ್ತಿಯುತವಾದ ಹೇಳಿಕೆಗಳ ಹೊರತಾಗಿಯೂ, ಅವರು ಮಿಸಿಸ್ಸಿಪ್ಪಿಯ ರಾಜಕೀಯ ಮುಖಂಡರಿಗಿಂತ ಹೆಚ್ಚು ಪೂರ್ವಾಚಾರ ಪ್ರಿಯರಾಗಿದ್ದರು. ಅವರು, ‘ಬಡ ಮತ್ತು ಉಪೇಕ್ಷೆಗೊಳಗಾದ ವರ್ಣದ ಜನರು’ ಕ್ರಮಬದ್ಧವಾದ ಮನೋಧರ್ಮದವರಾಗಿ ರೂಪಿತರಾದ ಬಿಳಿಯರಿಂದ ನೈತಿಕ ಮತ್ತು ಧಾರ್ಮಿಕ ಮಾರ್ಗದರ್ಶನ ಪಡೆಯಬೇಕು ಎನ್ನುವುದರಲ್ಲಿ ನಂಬಿಕೆ ಇರಿಸಿದ್ದರು.

ರಿವೆಲ್ಸ್ ಅವರು ಇದಕ್ಕೆ ಪ್ರತಿಕ್ರಿಯಿಸುತ್ತಾ “ತಮ್ಮ ಪರಿಶ್ರಮದಿಂದಲೇ ತಮ್ಮ ಗೌರವವನ್ನು ಗಳಿಸುತ್ತಾ, ತಮ್ಮನ್ನು ರಕ್ಷಿಸುವ ಪ್ರಭಾವ ಮತ್ತು ಶಕ್ತಿಯನ್ನು ಹೊಂದಿರುವ ಆ ಬಿಳಿಯರ ವಿಶ್ವಾಸ, ಗೌರವವನ್ನು ಗೆದ್ದುಕೊಂಡು ಅವರಿಂದ ರಕ್ಷಣೆಯನ್ನು ಪಡೆಯಬೇಕು” ಎಂದು ಕರಿಯರಿಗೆ ಕರೆ ನೀಡಿದರು.  

1890ರಲ್ಲಿ, ಮಿಸಿಸಿಪ್ಪಿಯ ಸಾಂವಿಧಾನಿಕ ಸಮಾವೇಶವು, ಮತದಾನದ ತೆರಿಗೆಯನ್ನು ಪಾವತಿ ಮಾಡುವ ಮತ್ತು ರಾಜ್ಯ ಸಂವಿಧಾನದ ಒಂದು ಭಾಗವನ್ನು ವಿವರಿಸುವ ಸಾಮಥ್ರ್ಯವನ್ನು ಒಳಗೊಳಿಸಿ, ರಾಜ್ಯದ ಕಪ್ಪು ಜನರನ್ನು ತಟಸ್ಥ-ಜನಾಂಗವೆಂದು ಪರಿಗಣಿಸಿ ಅವರ ಮತದಾನದ ಹಕ್ಕನ್ನು ಕಿತ್ತುಕೊಂಡಿತು. ರಿವೆಲ್ಸ್ ಅವರು ಇದಕ್ಕೆ ಪ್ರತಿಕ್ರಿಯಿಸುತ್ತಾ “ತಮ್ಮ ಪರಿಶ್ರಮದಿಂದಲೇ ತಮ್ಮ ಗೌರವವನ್ನು ಗಳಿಸುತ್ತಾ, ತಮ್ಮನ್ನು ರಕ್ಷಿಸುವ ಪ್ರಭಾವ ಮತ್ತು ಶಕ್ತಿಯನ್ನು ಹೊಂದಿರುವ ಆ ಬಿಳಿಯರ ವಿಶ್ವಾಸ, ಗೌರವವನ್ನು ಗೆದ್ದುಕೊಂಡು ಅವರಿಂದ ರಕ್ಷಣೆಯನ್ನು ಪಡೆಯಬೇಕು” ಎಂದು ಕರಿಯರಿಗೆ ಕರೆ ನೀಡಿದರು.  

ಐದು ವರ್ಷಗಳ ತರುವಾಯ ಬೂಕರ್ ಟಿ.ವಾಷಿಂಗ್ಟನ್ ಅವರು ಇದೊಂದು ರಾಜಕೀಯ ತಂತ್ರಗಾರಿಕೆಯಾಗಿತ್ತೆಂದು ಅಟ್ಲಾಂಟಾ ಕಾಟನ್ ಸ್ಟೇಟ್ಸ್ ನಲ್ಲಿ ಮಾಡಿದ ಭಾಷಣದಲ್ಲಿ ಪ್ರತಿಪಾದಿಸಿದರು.

ರಿವೆಲ್ಸ್ 1901ರ ಜನವರಿ 16ರಂದು ನಿಧನರಾದರು. ಎರಡು ವಾರಗಳ ನಂತರ ಅಂತರ್ಯುದ್ಧಾನಂತರದ ಕೊನೆಯ ಕರಿಯ ಕಾಂಗ್ರೆಸ್ಸಿಗರೆನಿಸಿದ ಉತ್ತರ ಕೊರೊಲಿನಾದ ಜಾರ್ಜ್ ಎಚ್. ವೈಟ್ ರಿವೆಲ್ಸ್ ಅವರಿಗೆ ನುಡಿನಮನ ಸಲ್ಲಿಸಿದರು. 1928ರಲ್ಲಿ ಚಿಕಾಗೊ ಜಿಲ್ಲೆಯನ್ನು ಪ್ರತಿನಿಧಿಸಿದ ಆಸ್ಕರ್ ಡಿ ಪ್ರೀಸ್ಟ್ ನ ಚುನಾವಣೆ ಮುಗಿಯುವವರೆಗೂ, ಪ್ರತಿನಿಧಿಗಳ ಮನೆಯು ಸಂಪೂರ್ಣವಾಗಿ ಬಿಳಿಯಾಗಿಯೇ ಉಳಿಯಿತು. 

ಸೆನೇಟ್ ಗೆ ಸಂಬಂಧಿಸಿದಂತೆ, ಬ್ಲಾಂಚ್ ಕೆ. ಬ್ರೂಸ್ ಅವಧಿ 1881ರಲ್ಲಿ ಮುಗಿದ ನಂತರದಿಂದ 1966ರಲ್ಲಿ ಮಸಾಚುಸೆಟ್ಸ್ ನಲ್ಲಿ ಎಡ್ವರ್ಡ್ ಬ್ರೂಕ್ ಅವರನ್ನು ಚುನಾಯಿಸುವವರೆಗೆ ಮುಕ್ಕಾಲು ಶತಮಾನವೇ ಕಳೆದಿತ್ತು. ಇಂದು ಸೆನೆಟ್ ಕೊರಿ ಬೂಕರ್, ಕಮಲ ಹ್ಯಾರಿಸ್ ಮತ್ತು ಟಿಮ್ ಸ್ಕಾಟ್ ಸೇರಿ ಮೂವರು ಕರಿಯ ಸದಸ್ಯರನ್ನು ಹೊಂದಿದೆ.

ರಿವೆಲ್ಸ್ ಅವರ ಸೆನೆಟ್ ಅವಧಿ ಮುಗಿದ ನಂತರದಲ್ಲಿ, ಹೊಸ ರಾಷ್ಟ್ರೀಯ ಯುಗದ ಫ್ರೆಡೆರಿಕ್ ಡೌಗ್ಲಾಸ್ ಅವರ ಪತ್ರಿಕೆಯು, ರಿವೆಲ್ಸ್ ಅವರು ಕೆಲವೇ ಕೆಲವು ಶಾಸನಾತ್ಮಕ ಸಾಧನೆ ಮಾಡಿದ್ದಾರೆಂದು ವ್ಯಾಖ್ಯಾನಿಸಿತು. “ಒಟ್ಟಾರೆಯಾಗಿ ನಾವು ತೃಪ್ತರಿದ್ದೇವೆ. ಇದೊಂದು ಪೂರ್ವನಿದರ್ಶನವೇ ಇರಬಹುದು” ಎಂದೂ, ರಿವೆಲ್ಸ್ ಚುನಾವಣೆಯು “ಕರಿಯರ ಮತ್ತು ರಾಷ್ಟ್ರದ ಭವಿಷ್ಯ ಉಜ್ವಲವಾಗುವುದಕ್ಕೆ ಹಾಕಿದ ಅಡಿಪಾಯ” ಎಂದೂ “ಆಫ್ರಿಕನ್-ಅಮೆರಿಕನ್ನರು ಖುಷಿಯಿಂದ ಶ್ಲಾಘಿಸಿದ್ದಾರೆ” ಎಂದೂ ಬರೆಯಿತು.

ಕಲಾವಿದ ಥಿಯೋಡೋರ್ ಕೌಫ್ಮನ್ ರಚಿಸಿದ ರಿವೆಲ್ಸ್ ಅವರ ಶಿಲಾಮುದ್ರಿತ ಭಾವಚಿತ್ರವನ್ನು ಪುನರ್ ನಿರ್ಮಾಣದ ಸಮಯದಲ್ಲಿ ಮತ್ತು ನಂತರ ವಿಶೇಷವಾಗಿ ಕಪ್ಪು ಕುಟುಂಬಗಳ ನಡುವೆ ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. “ಎಷ್ಟೋ ಸಲ ನಮ್ಮನ್ನು ನಾವು ಮಂಗಗಳಂತೆ ವರ್ಣಿಸಿ, ಚಿತ್ರೀಕರಿಸಿಕೊಳ್ಳುತ್ತೇವೆ. ಈ ಸಾಮಾನ್ಯ ನಿಯಮಕ್ಕೆ ಅಪವಾದ ಹುಡುಕುವುದು ಒಂದು ದೊಡ್ಡ ಭಾಗ್ಯ ಎಂದು ನಾವು ಭಾವಿಸಿದ್ದೇವೆ” ಎಂದು ಡೌಗ್ಲಾಸ್ ಅಭಿಪ್ರಾಯ ಪಡುತ್ತಾರೆ.

ಒಂದು ವೇಳೆ, ಹಿರಾಮ್ ರಿವೆಲ್ಸ್ ಅವರ ಚುನಾವಣೆಯು ಪ್ರಜಾಪ್ರಭುತ್ವದ ಶಾಶ್ವತ ಬದಲಾವಣೆಯ ಭವಿಷ್ಯವಾಣಿಯಾಗಿದ್ದರೆ, ರಾಷ್ಟ್ರದ ಸಮ್ಮತಿಯೊಂದಿಗೆ ದಕ್ಷಿಣದಲ್ಲಿ ಕರಿಯರ ಸಾಂವಿಧಾನಿಕ ಹಕ್ಕುಗಳನ್ನು ರದ್ದುಗೊಳಿಸಿದ್ದು, ತರುವಾಯ ಅವರು ಗಳಿಸಿದ ಸ್ವಾತಂತ್ರ್ಯ ಸುಲಭದ್ದಾಗಿರಲಿಲ್ಲವೆನ್ನುವುದನ್ನೂ ಮತ್ತು ಕಸಿದ ಹಕ್ಕುಗಳನ್ನು ಮರಳಿ ಪಡೆದ ಕಥೆ ಎಷ್ಟು ಜಟಿಲವಾಗಿತ್ತು ಎನ್ನುವುದನ್ನೂ ಇತಿಹಾಸವು ನೆನಪಿಸುತ್ತದೆ.

ಆದರೆ ನಂತರ ಎದುರಿಸಿದ ಎಲ್ಲ ಅಪಮಾನ, ನಿರಾಶೆಗಳ ಹೊರತಾಗಿಯೂ, ಹಿರಾಮ್ ರಿವೆಲ್ಸ್ ಅವರ ಚುನಾವಣೆಯ ವರ್ಷಾಚರಣೆಯು, ರಾಷ್ಟ್ರದಲ್ಲಿ ಮುಂದುವರೆದಿರುವ ಗುಲಾಮಗಿರಿಯ ಪರಂಪರೆಯ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಕ್ಷಣವಾಗಿ ಸಂಭ್ರಮಾಚರಣೆಗೆ ಯೋಗ್ಯವಾಗಿಯೇ ಉಳಿದಿದೆ.

ಸೌಜನ್ಯ: ದಿ ನ್ಯೂಯಾರ್ಕ್ ಟೈಮ್ಸ್

Leave a Reply

Your email address will not be published.