ಮೊದಲು ನಾವು ಬದಲಾಗಬೇಕು

-ಡಾ.ಜ್ಯೋತಿ

ಬಹುಶಃ ವರ್ತಮಾನದ ಕಾಲಘಟ್ಟದಲ್ಲಿ ಕೊರೊನಾ ವೈರಾಣು ತಂದಿಟ್ಟ ಆಕಸ್ಮಿಕ ಮತ್ತು ಆಘಾತಕಾರಿ ಬದಲಾವಣೆಗಳು ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ಎಂದೂ ಮರೆಯಲಾಗದ ಸ್ಮöÈತಿಯಾಗಿ ಉಳಿಯಲಿವೆ. 2020ರಲ್ಲಿ, ವರ್ಷವಿಡೀ ನಮ್ಮ ಮನಸ್ಸನ್ನು ಆವರಿಸಿದ್ದ ಈ ಕೊರೊನಾ ಸಂಬAಧಿತ ಪರಿಕರಗಳು, ಸರಕಾರ ಜಾರಿಗೊಳಿಸಿದ ವಿನೂತನ ಮಾರ್ಗಸೂಚಿಗಳು, ಕೊರೊನಾ ಅಲೆಗಳು, ಆರ್ಥಿಕ ಸಂಕಷ್ಟಗಳು, ಭಯ ಉತ್ಪಾದಿಸಿದ ಸುದ್ದಿಮಾಧ್ಯಮಗಳು, ಎಲ್ಲಾ ಐಷಾರಾಮಗಳಿದ್ದೂ ಅನಾಥವಾದ ಹೆಣಗಳು, ಇತ್ಯಾದಿಗಳಿಂದ ಒಮ್ಮೆ ಹೊರಬಂದು ಸೂಕ್ಷ÷್ಮವಾಗಿ ಆಲೋಚಿಸಿದರೆ, ಜಗತ್ತನ್ನೆ ತಲ್ಲಣಗೊಳಿಸಿದ ಈ ಮಹಾನ್ ಪಲ್ಲಟದಿಂದ ಪ್ರಾಯಶಃ, ಮನುಷ್ಯ ಸಕಾರಾತ್ಮಕ ಪಾಠ ಕಲಿಯಬಹುದೆಂಬ ಆಶಾವಾದವೇನೋ ಮೂಡುತ್ತದೆ.

ಆದರೆ, ಇಲ್ಲಿ ತಕ್ಷಣ ಮೂಡುವ ಪ್ರಶ್ನೆ, ಮೂಲತಃ ನಾವ್ಯಾಕೆ ಪ್ರಪಂಚ ಬದಲಾಗಬಹುದೆಂದು ನಿರೀಕ್ಷಿಸುತ್ತೇವೆ? ಬಹುಶಃ, ನಮ್ಮ ಸಂಸ್ಕೃತಿ ಮತ್ತು ಪುರಾತನ ಸಾಹಿತ್ಯ ಎರಡೂ, ಕಷ್ಟಗಳ ನಂತರ ಸುಖಾಂತ್ಯದ ಪರಿಕಲ್ಪನೆಯನ್ನು ನಮ್ಮಲ್ಲಿ ಬೇರೂರಿಸಿರುವುದರಿಂದ, ಕೊರೊನಾ ತಂದಿಟ್ಟ ಸಂಕಷ್ಟಗಳ ಕಳೆದು, ಮುಂದಿನ ದಿನಗಳು ಚೆನ್ನಾಗಿರಬಹುದೆಂದು ಅಂದುಕೊಳ್ಳುತ್ತೇವೆ. ಹಾಗೆ ನೋಡಿದರೆ, ಮನುಷ್ಯ ಜೀವನದ ಭರವಸೆಯೇ, ಕಾಣದ ನಾಳೆಯ ಸುಂದರ ಕನಸು. ಈ ನಿಟ್ಟಿನಲ್ಲಿ ಮೊದಲ ಪ್ರಶ್ನೆ, ಅಂತಹ ವಿಶೇಷ ಮುನ್ಸೂಚನೆಗಳೇನಾದರೂ ನಮ್ಮೆದುರು ಪ್ರಕಟವಾಗುತ್ತಿವೆಯೇ? ಯಾಕೆಂದರೆ, ನಮ್ಮ ಕನಸಿನ ಹೊಸಪ್ರಪಂಚವನ್ನು ನಾವೇ ಕಟ್ಟಬೇಕಾಗಿದೆ. ಇಂತಹ ಸಾಮೂಹಿಕ ಇಚ್ಛಾಶಕ್ತಿ ಜನಸಾಮಾನ್ಯರಲ್ಲಿ ಪ್ರದರ್ಶನ ವಾಗುತ್ತಿದೆಯೇ? ಸಾಮಾನ್ಯವಾಗಿ, ಪ್ರಾಪಂಚಿಕ ಆಗುಹೋಗುಗಳಲ್ಲಿ ಕಂಡುಬರುತ್ತಿರುವ ಮೇಲ್ನೋಟದ ಬದಲಾವಣೆಗಳು ಸ್ವಾಭಾವಿಕ. ಇವುಗಳನ್ನು ಮೀರಿ ಮನುಷ್ಯನ ನಡವಳಿಕೆಯಲ್ಲಿ ಏನಾದರೂ ಮಹತ್ತರ ಬದಲಾವಣೆಯನ್ನು ಕಾಣುತ್ತಿದ್ದೇವೆಯೇ? ಖಂಡಿತವಾಗಿಯೂ ಇಲ್ಲವೆಂದೇ ಹೇಳಬಹುದು.

ನಮ್ಮ ದೈನಂದಿನ ಬದುಕು ಸಹಜ ಸ್ಥಿತಿಗೆ ಮರಳುತ್ತಿರುವ ಈ ಪ್ರಸ್ತುತತೆಯಲ್ಲಿ ನೆನಪಾಗುವುದು ಮಹಾಭಾರತದ ಯಕ್ಷಪ್ರಶ್ನೆ ಪ್ರಕರಣ. ಯುಧಿಷ್ಠಿರನಿಗೆ ಯಕ್ಷ ಕೇಳುತ್ತಾನೆ, ‘ಪ್ರಪಂಚದ ಅತ್ಯಂತ ಆಶ್ಚರ್ಯಕರ ಸಂಗತಿ ಏನು?’ ಅದಕ್ಕೆ ಉತ್ತರವಾಗಿ ಯುಧಿಷ್ಠಿರ ಮಾರ್ಮಿಕವಾಗಿ ಹೇಳುತ್ತಾನೆ, ‘ತನ್ನ ಸುತ್ತಲಿನ ಜನರು ಸಾಯುತ್ತಿದ್ದರೂ, ಆ ಸಾವು ತನಗೂ ಬರುತ್ತದೆ ಎನ್ನುವ ಸತ್ಯದರ್ಶನ ನಿರಂತರವಾಗಿದ್ದರೂ ಮನುಷ್ಯ ತನ್ನನ್ನು ಸುಧಾರಿಸಿಕೊಂಡು ವಿನಮ್ರನಾಗುವುದಿಲ್ಲ’. ಅದರಂತೆಯೇ, ವಸ್ತುನಿಷ್ಠ ಪ್ರಾಪಂಚಿಕ ದೈನಂದಿನ ಜಂಜಾಟಗಳಲ್ಲಿ ಕಳೆದು ಹೋಗಿರುವ ಮನುಷ್ಯ, ತನ್ನ ಬದುಕಿನ ನಿಜಾರ್ಥದ ಸೂಕ್ಷ÷್ಮ ಅಥವಾ ಗಾಢ ಚಿಂತನೆಗೆ ಪರಕೀಯನಾಗಿ ಶತಮಾನವೇ ಕಳೆದಿದೆಯೆಂದು ಹೇಳಬಹುದು.

ಅಲ್ಲೊಂದು ಇಲ್ಲೊಂದು ತತ್ವಜ್ಞಾನಿಗಳು/ಸಾಹಿತಿಗಳನ್ನು ಹೊರತುಪಡಿಸಿದರೆ ಬದುಕನ್ನು ಚಿಂತನೆಗೆ ಒರೆಹಚ್ಚಿ ಮುಖಾಮುಖಿಯಾಗಿರುವವರು ಅಪರೂಪವೆಂದೇ ಹೇಳಬಹುದು. ವಿಶೇಷವಾಗಿ, ಬೃಹತ್ ಕೈಗಾರೀಕರಣ ಪ್ರಾರಂಭವಾದAದಿನಿAದ, ಅದರ ಉಡುಗೊರೆಯಾದ ಪ್ರಾಪಂಚಿಕ ಸವಲತ್ತುಗಳಲ್ಲಿ ಮನುಷ್ಯ ಮುಳುಗಿ ಹೋಗಿದ್ದಾನೆ ಮತ್ತು ತನ್ನತನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ, ಕೊರೊನಾ ವೈರಾಣು ಸಮಸ್ತ ಮನುಷ್ಯ ಜಗತ್ತಿನ ಮಿಂಚಿನ ಓಟಕ್ಕೆ ಹಠಾತ್ ಬ್ರೇಕ್ ಕೊಟ್ಟು ಸಾಮೂಹಿಕವಾಗಿ ಸ್ವಚಿಂತನೆಗೆ ಹಚ್ಚಿದೆ. ಆದರೆ, ಈ ಚಿಂತನೆ ನಮ್ಮ ಜೀವನದ ಆದ್ಯತೆಗಳನ್ನು ಮರುಪರಿಶೀಲಿಸುವಷ್ಟು ಪ್ರಬಲ ವಾಗಿದೆಯೇ, ಎನ್ನುವುದು ಬಹಳ ಮುಖ್ಯ.

ಈ ಪ್ರಸ್ತುತತೆಯಲ್ಲಿ, ಕೊರೊನಾ ವೈರಾಣು ಕಲಿಸಿದ ಜೀವನ ದರ್ಶನದ ಬುನಾದಿಯೊಂದಿಗೆ, ಮುಂದಿನ ದಿನಗಳಲ್ಲಿ ಅರ್ಥಪೂರ್ಣವಾಗಿ ಬದುಕಲು ನಾವಿಂದು ಮರುಪರಿಶೀಲಿಸಬೇಕಾದ ಗಮನಾರ್ಹ ಅಂಶಗಳೆAದರೆ, ನಮ್ಮ ನಾಗಾಲೋಟದ ಜೀವನಶೈಲಿ, ಬದುಕಿನ ಮೂಲಭೂತ ಅಗತ್ಯಗಳು, ಮತ್ತು ಸಾಮಾಜಿಕ ಜವಾಬ್ದಾರಿ.

ಮೊದಲನೆಯದಾಗಿ, ನಮ್ಮ ಜೀವನಶೈಲಿ ಹೇಗಿದೆಯೆಂದರೆ, ಒಂದು ನಿರ್ದಿಷ್ಟ ಸಿದ್ಧಮಾದರಿಯ ಚೌಕಟ್ಟನ್ನು ಯಶಸ್ವಿಯಾಗಿ, ಸ್ಪರ್ಧಾತ್ಮಕವಾಗಿ ಮತ್ತು ವೇಗವಾಗಿ ತಲುಪುವುದಷ್ಟೇ ಮನುಷ್ಯ ಜೀವನದ ಏಕೈಕ ಗುರಿಯೆಂಬ ಹಿತೋಪದೇಶದ ಕೀಲಿ ಕೊಟ್ಟು, ನಮ್ಮ ಮಕ್ಕಳನ್ನು ಬದುಕಿನ ಮೈದಾನಕ್ಕೆ ಬಿಡುತ್ತೇವೆ. ಇದು ವರ್ತಮಾನದ ವಸ್ತುನಿಷ್ಠ ಜಗತ್ತು ವಿನ್ಯಾಸ ಮಾಡಿದ, ಅತ್ಯಧಿಕ ಉತ್ಪಾದನೆ ಮತ್ತು ಬಳಕೆ ಆಧಾರಿತ ಬದುಕಿನ ದೃಷ್ಟಿಕೋನ. ನಮ್ಮ ವಿವೇಕ ಕುರುಡಾಗಿಸಿ ಇದನ್ನು ಅನುಸರಿಸಿದರೆ, ಜಗತ್ತಿನ ಎಲ್ಲರೂ ಏಕಮಾದರಿಯ ಉತ್ಪನ್ನಗಳಂತೆ ಗೋಚರಿಸಿ, ಪರ್ಯಾಯ ಜೀವನ ಮಾರ್ಗಗಳು ಕಾಣಿಸುವುದಿಲ್ಲ. ಇದೊಂದು ಕೋಕೋ ಪಂದ್ಯದAತೆ, ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಿರುವ, ಮನುಷ್ಯ ಜೀವನವನ್ನು ಅನಗತ್ಯ ಕಾರ್ಯನಿರತವಾಗಿಡುವ ಮತ್ತು ಮಾನಸಿಕ ಒತ್ತಡ ಹೇರುವ, ಸಂಕುಚಿತ ಜೀವನ ಮಾರ್ಗ.

ಈ ನಿಲ್ಲದ ಕೇಂದ್ರೀಕೃತ ಓಟದಲ್ಲಿ, ಸುತ್ತಲಿನ ಜಗತ್ತಿನ ಸ್ಪರ್ಶಾನುಭವ ದಕ್ಕದು. ಹಾಗಾಗಿಯೇ, ನಮ್ಮ ಸುತ್ತಮುತ್ತಲೂ ಕಿತ್ತುಹೋಗುತ್ತಿರುವ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ, ಜಾತಿ ದೌರ್ಜನ್ಯ, ಅನ್ಯಜೀವರಾಶಿಗಳ ಸಂಕಟ, ಕೋಮು ದಳ್ಳುರಿ, ಪರಿಸರ ಹಾನಿ, ಸಾವು-ನೋವು ಇತ್ಯಾದಿಗಳು ಕಣ್ಮುಂದೆ ನಡೆಯುತ್ತಿದ್ದರೂ ನಮಗೇನೂ ಅನ್ನಿಸುವುದಿಲ್ಲ. ಈ ಹಿನ್ನೆಲೆಯಲ್ಲಿ, ಒಂದು ವೇಳೆ ಪ್ರಸಕ್ತ ಸ್ವಚಿಂತನೆ ಈ ಅಸಂಬದ್ಧ ವೇಗದ ಜೀವನಶೈಲಿಗೆ ಬ್ರೇಕ್ ಕೊಡುವಲ್ಲಿ ಯಶಸ್ವಿಯಾದರೆ, ನಮ್ಮ ಜೀವನದ ಪ್ರತಿಕ್ಷಣವನ್ನು ಅರ್ಥಪೂರ್ಣವಾಗಿ ಅನುಭವಿಸಲು ಸಾಧ್ಯ.

ಪ್ರಸ್ತುತ ಕಾಲಘಟ್ಟದಲ್ಲಿ, ಇಂತಹ ಬಿಡುವಿಲ್ಲದ ಜೀವನಶೈಲಿಗೆ ಒಂದು ಅಲ್ಪವಿರಾಮ ಕೊಟ್ಟಿದ್ದು ಕೊರೊನಾ ವೈರಾಣು. ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ, ರಸ್ತೆ ಅಪಘಾತದಲ್ಲಿ ಬಿದ್ದು ಹೊರಳಾಡುವವರನ್ನು ನೋಡಿಯೂ ನೋಡದಂತೆ ಮುಂದುವರಿಯುತ್ತಿದ್ದ ನಾವು, ಕೊರೊನಾ ಸಂತ್ರಸ್ತ ವಲಸೆ ಕೂಲಿ ಕಾರ್ಮಿಕರು, ಸೋಂಕಿತರು, ಹಸಿದು ಕಂಗೆಟ್ಟ ಪ್ರಾಣಿವರ್ಗ, ದೈನಂದಿನ ಬದುಕು ಕಳೆದುಕೊಂಡವರು… ಹೀಗೆ ಕ್ಷಣ ಮಾತ್ರದಲ್ಲಿ ಬದುಕು ಸ್ತಬ್ಧಗೊಂಡವರನ್ನೆಲ್ಲಾ ನೋಡಿ ಮನದಾಳದಿಂದ ಕನಿಕರ ಪಟ್ಟೆವು. ಇವುಗಳ ನಡುವೆ, ಪ್ರಕೃತಿ ಕೊಂಚ ಸುಧಾರಿಸಿದಂತೆ ಕಂಡುಬAತು. ಜನರಿಗೆ ತಮ್ಮ ಮೂಲಭೂತ ಅಗತ್ಯಗಳ ಸ್ವಅರಿವು ಮೂಡಿತು. ಈ ಸ್ಥಿತ್ಯಂತರಗಳು, ಮನುಷ್ಯ ಜೀವನದ ಉದ್ದೇಶಗಳನ್ನು ಪುನರ್ ವಿಮರ್ಶೆಗೆ ಹಚ್ಚಿ ಜನರನ್ನು ಖಂಡಿತವಾಗಿಯೂ ಇನ್ನಷ್ಟು ವಿನಮ್ರಗೊಳಿಸುತ್ತದೆಯೆಂದು ಅಂದುಕೊAಡವರು ಬಹಳ ಮಂದಿ.

ಆದರೆ, ನಾವು ಅಲ್ಪಾವಧಿಯ ನೆನಪಿನ ಶಕ್ತಿಯವರು ಎಂದು ಪುನಃ ಸಾಬೀತುಗೊಳಿಸಿದೆವು. ಇಂತಹ ತುರ್ತು ಪರಿಸ್ಥಿತಿಯಲ್ಲೂ ಕೆಲವರು ತಮ್ಮ ಸ್ವಾರ್ಥ ಸಾಧಿಸಲು ಪ್ರಯತ್ನಿಸಿದರು; ಕೊರೊನಾ ಸಂಬAಧಿತ ಸಲಕರಣೆಗಳ ಖರೀದಿಯಲ್ಲೂ ಹಗರಣವಾಯಿತು, ಅನಿವಾರ್ಯವಾಗಿ ಜೀವನ ನಿರ್ವಹಣೆಗಾಗಿ ಓಡಾಡಬೇಕಾದವರು ದುಪ್ಪಟ್ಟು ಖರ್ಚು ಮಾಡಬೇಕಾಯಿತು, ಖಾಸಗಿ ಆಸ್ಪತ್ರೆಗಳು ಮತ್ತು ಪರೀಕ್ಷಾ ಕೇಂದ್ರಗಳು ಜನರ ಸುಲಿಗೆ ಮಾಡಿದರು, ವನ್ಯಜೀವಿಗಳ ಕಳ್ಳ ಬೇಟೆ ಹೆಚ್ಚಾಯಿತು, ವೈರಾಣು ಸೋಂಕಿಗೂ ಧಾರ್ಮಿಕ ಬಣ್ಣ ಬಳಿಯಲಾಯಿತು, ಸರಕಾರಗಳು ಅಧಿಕಾರ ಕೇಂದ್ರೀಕರಿಸಿಕೊAಡು ಜನರನ್ನು ಇನ್ನೂ ಹೆಚ್ಚಾಗಿ ನಿಯಂತ್ರಿಸಲಾರAಭಿಸಿದವು…

ಈ ಎಲ್ಲಾ ಸಂಕಷ್ಟಗಳ ಮೀರಿ ನಿಧಾನವಾಗಿ ಜಗತ್ತು ಮರಳಿ ಸಹಜಸ್ಥಿತಿಗೆ ತೆರೆದುಕೊಳ್ಳುತ್ತಿದೆ. ಜನರ ಆರ್ಥಿಕ ಸಂಕಷ್ಟದ ನಿಜವಾದ ಅಂದಾಜು ಇನ್ನೂ ಸಿಕ್ಕಿಲ್ಲ. ಬಹುಶಃ, ಮುಂದಿನ ದಿನಗಳಲ್ಲಿ ಇದು ಜನಸಾಮಾನ್ಯರಿಗೆ ಕೊರೊನಾಕ್ಕಿಂತ ಹೆಚ್ಚಿನ ಪೆಟ್ಟು ಕೊಡಲಿದೆ. ಯಾಕೆಂದರೆ, ಉದ್ಯೋಗಗಳು ಕಣ್ಮರೆಯಾಗುತ್ತಿವೆ, ಉದ್ಯಮಗಳು ಸಂಕಷ್ಟದಲ್ಲಿವೆ, ಜನರು ಅತ್ಯಗತ್ಯ ವಸ್ತುಗಳನ್ನಷ್ಟೇ ಖರೀದಿಸುವ ಧೈರ್ಯಮಾಡುತ್ತಿದ್ದಾರೆ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ದಿಕ್ಕೆಟ್ಟಿದ್ದಾರೆ, ಬೆಲೆಯೇರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ, ದೈನಂದಿನ ಜೀವನದ ಆರ್ಥಿಕ ನಿರ್ವಹಣೆ ಕಷ್ಟದಿಂದಾಗಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಸವಾಲುಗಳು ಹಲವಾರು. ಜೊತೆಗೆ, ಪರಿಸರ ರಕ್ಷಣೆಯ ಹೊಣೆಗಾರಿಕೆ ಹಿಂದೆAದಿಗಿAತಲೂ ಈಗ ಹೆಚ್ಚಾಗಿದೆ.

ಈ ನಿಟ್ಟಿನಲ್ಲಿ, ಕೊರೊನಾ ನಮಗೆ ಕೊಟ್ಟ ಒಂದು ಅತ್ಯುತ್ತಮ ಉಡುಗೊರೆಯೆಂದರೆ, ನಮ್ಮ ಬದುಕಿನ ಮೂಲಭೂತ ಅಗತ್ಯಗಳ ಪುನರ್ ವಿಮರ್ಶೆಗೆ ಹಚ್ಚಿದ್ದು. ಮನಶಾಸ್ತçಜ್ಞ ಅಬ್ರಹಾಂ ಮಾಸ್ಲೋ ಹೇಳುವಂತೆ, ಮನುಷ್ಯ ಜೀವನದ ಐದು ಅಗತ್ಯಗಳ ಕ್ರಮಾನುಗತ ವರ್ಗೀಕರಣ ಹೀಗಿದೆ; ದೈಹಿಕ, ಭದ್ರತೆ, ಸಾಮಾಜಿಕ, ಗೌರವ ಮತ್ತು ಆತ್ಮವಿಕಾಸ. ಮನುಷ್ಯ, ತನ್ನ ಜೀವನದ ಮೊದಲ ನಾಲ್ಕು ಅಗತ್ಯಗಳನ್ನು ಮೀರಿ, ಕೊನೆಯ ಹಂತದಲ್ಲಿ ತನ್ನ ಜೀವನದ ಹೆಚ್ಚಿನ ಸಮಯ ಕಳೆದು, ಉನ್ನತ ಸಾಧನೆ, ವೈಯಕ್ತಿಕ ಬೆಳವಣಿಗೆ, ಗರಿಷ್ಠ ಜ್ಞಾನಪ್ರಾಪ್ತಿ, ಅನುಭವ ವಿಸ್ತರಣೆ ಮತ್ತು ಸೃಜನಶೀಲತೆಯ ಉದ್ದೀಪನದಲ್ಲಿ ಜೀವನದ ಅರ್ಥ ಕಂಡುಕೊAಡರೆ, ಬದುಕು ಪರಿಪೂರ್ಣತೆ ಸಾಧಿಸಿದಂತೆ. ಆದರೆ, ಈ ವರ್ಣರಂಜಿತ ಜಾಹೀರಾತು ಪ್ರಪಂಚ ನಮ್ಮ ಬದುಕಿನ ಸಾಧ್ಯತೆಗಳನ್ನು, ಹೆಚ್ಚಾಗಿ ಕೇವಲ ನಾಲ್ಕನೇ ಹಂತದಲ್ಲಿಯೇ ಅಂತ್ಯಗೊಳಿಸುತ್ತವೆ. ಕೆಲವೇ ಮಂದಿ, ಈ ಮಾಯೆಯಿಂದ ಕಳಚಿಕೊಂಡು ಉನ್ನತ ಸಾಧನೆಗೈಯುತ್ತಾರೆ.

ಆದ್ದರಿಂದ, ಕೊರೊನಾ ಜಾಗೃತಿ ಮೂಡಿಸಿದ ಈ ಅನಗತ್ಯ ವಸ್ತುಸಂಗ್ರಹ ಶೋಕಿಯಿಂದ ಕಳಚಿಕೊಂಡು ಅರ್ಥಪೂರ್ಣವಾಗಿ ಬದುಕುವ ಇಚ್ಛಾಶಕ್ತಿ ವ್ಯಕ್ತಪಡಿಸಿದರೆ, ಅಲ್ಲಿ ಸ್ವಏಳ್ಗೆಯೂ ಇದೆ, ಮನುಷ್ಯ ಕುಲದ ಹಿತವೂ ಇದೆ. ಯಾಕೆಂದರೆ, ಮುಂದಿನ ದಿನಗಳಲ್ಲಿ, ನಮ್ಮ ಸುತ್ತಮುತ್ತಲು, ತಮ್ಮ ಮೂಲಭೂತ ಅಗತ್ಯಗಳ ಹಂತದಲ್ಲಿಯೇ ಹೆಣಗಾಡುವವರ ಸಂಖ್ಯೆ ಹೆಚ್ಚಾಗಲಿದೆ. ನಮ್ಮ ಬದಲಾದ ಸರಳ ಜೀವನ ಅವರಿಗೂ ಮನಸ್ಥೆöÊಯ ತುಂಬೀತು. ಇದು ನಮ್ಮ ಸಾಮಾಜಿಕ ಜವಾಬ್ದಾರಿಯೂ ಕೂಡ ಹೌದು.

ಈ ಹಿನ್ನೆಲೆಯಲ್ಲಿ, ಕೊರೊನಾ ಸಂಕಷ್ಟಗಳಿAದ ಹೊರಬರುತ್ತಾ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಪ್ರಪಂಚಕ್ಕೆ ಸಹಬಾಳ್ವೆ, ಸಮನ್ವಯ ಮತ್ತು ಮಾನವೀಯತೆಯ ಸ್ಪರ್ಶ ಕೊಡುವ ನಿಟ್ಟಿನಲ್ಲಿ, ಗಾಂಧಿತತ್ವಕ್ಕೆ ಮರುಪ್ರವೇಶ ಮಾಡಬೇಕಾದ ಅಗತ್ಯವಿದೆಯೆನಿಸುತ್ತದೆ. ಪ್ರಸಕ್ತ ನಾವೀಗ ಏನೆಲ್ಲಾ ಮಾಡಬೇಕಾಗಿದೆಯೋ, ಅದನ್ನೆಲ್ಲಾ ಗಾಂಧಿ ತನ್ನ ಮೇಲೆ ಜೀವನದುದ್ದಕ್ಕೂ ಪರೀಕ್ಷಾತ್ಮಕವಾಗಿ ಅಳವಡಿಸಿಕೊಂಡು ‘ಗಾಂಧಿ ಮಾರ್ಗ’ವನ್ನು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ.

ಪ್ರಸ್ತುತ ಕೊರೊನಾ ಪೀಡಿತ ಪ್ರಪಂಚದಲ್ಲಿ ನಾವು ಗಾಂಧಿತತ್ವವನ್ನು ಹೇಗೆ ಅಳವಡಿಸಿಕೊಳ್ಳಬಹುದೆಂದರೆ, ಗಾಂಧಿ ತನ್ನ ಸುತ್ತಲಿನ ಜಗತ್ತಿನ ಕಷ್ಟಗಳಿಗೆ ಸ್ಪಂದಿಸಿ ಸರಳತೆ ಮತ್ತು ಮಾನವೀಯತೆ ತನ್ನಲ್ಲಿ ಮೈಗೂಡಿಸಿಕೊಂಡAತೆ. ಗಾಂಧಿಯ ಸರಳತೆ ಕೇವಲ ಸಾಂಕೇತಿಕವಲ್ಲ, ಬದಲಾಗಿ ಅದು ಅವರನ್ನು ಬಾಹ್ಯ ಆಡಂಬರದಿAದ ಕಳಚಿಕೊಂಡು ಬದುಕಿನ ಮಹೋನ್ನತ ಸಾಧನೆಗಳತ್ತ ಕೊಂಡೊಯ್ದಿತು.

ಮೊದಲನೆಯದಾಗಿ, ಬೃಹತ್ ಕೈಗಾರೀಕರಣದ ತೀವ್ರ ವಿಮರ್ಶಕರಾಗಿದ್ದ ಗಾಂಧಿ ಅದಕ್ಕೆ ಪರ್ಯಾಯವಾಗಿ ಸ್ವಾವಲಂಬಿ ಬದುಕಿನ ಮಾರ್ಗಸೂಚಿಯಾಗಿ ಸ್ವರಾಜ್ಯದ ಕಲ್ಪನೆಯನ್ನು ಜನರಲ್ಲಿ ಬಿತ್ತಿದರು. ಆದರೆ, ನಾವದನ್ನು ಗಾಳಿಗೆ ತೂರಿ, ಸಂಭ್ರಮದಿAದ ಬರಸೆಳೆದುಕೊಂಡ ಕೈಗಾರೀಕರಣದಿಂದಾಗಿ, ಈಗ ಭೂಮಿಯ ಅಂತಿಮ ಕ್ಷಣಗಣನೆ ಪ್ರಾರಂಭವಾಗಿದೆ. 2020ರ ಡಿಸೆಂಬರ್ 9ರಂದು ವೈಜ್ಞಾನಿಕ ನಿಯತಕಾಲಿಕ ನೇಚರ್ ಪ್ರಕಟಿಸಿದ ವರದಿಯಲ್ಲಿ ಹೇಳಿರುವಂತೆ, ಪ್ರಸ್ತುತ ಭೂಮಿಯಲ್ಲಿ ಮಾನವಜನ್ಯ ನಿರ್ಜೀವ ವಸ್ತುಗಳ ತೂಕ, ಪ್ರಕೃತಿ ಮತ್ತು ಸಕಲ ಜೀವರಾಶಿಗಳ ಭಾರಕ್ಕಿಂತ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದು ಬೃಹತ್ ಕೈಗಾರೀಕರಣದ ಫಲಶ್ರುತಿ ಮತ್ತು ಭೂಮಿಯ ಅಂತ್ಯಕ್ಕೆ ಕೊನೆಯ ಮೊಳೆ.

ಇನ್ನು, ಜೀವನದ ಮೂಲಭೂತ ಅಗತ್ಯಗಳ ಅರಿವು ಮತ್ತು ಅದರ ಪರಿಪೂರ್ಣ ಅಳವಡಿಕೆಗೆ ಗಾಂಧಿಗಿAತ ಇನ್ನೊಂದು ಉತ್ತಮ ನಿದರ್ಶನ ಸಿಗಲಾರದು. ಉದಾಹರಣೆಗೆ, ತುಂಡು ಬಟ್ಟೆ ಉಟ್ಟು, ಅತ್ಯಂತ ಸರಳ ಜೀವನ ನಡೆಸಿದ ಗಾಂಧಿ ಪಡೆದಷ್ಟು ಖ್ಯಾತಿ ಮತ್ತು ಸಾರ್ವಕಾಲಿಕ ಪ್ರಸ್ತುತತೆ, ಜಗತ್ತಿನ ಯಾವ ಆಗರ್ಭ

ಶ್ರೀಮಂತನೂ ಪಡೆಯಲಾರ. ಇದರ ಅರ್ಥವಿಷ್ಟೇ, ಮನಸ್ಸಾರೆ ಒಪ್ಪಿಕೊಳ್ಳುವ ಸರಳತೆ ನಿಮ್ಮನ್ನು ಮಹೋನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು, ಬಾಹ್ಯ ಆಡಂಬರವಲ್ಲ. ತದ್ವಿರುದ್ಧವಾಗಿ, ನಾವು ಜೀವನದುದ್ದಕ್ಕೂ ಹೆಸರು ಮತ್ತು ಹಣಕ್ಕಾಗಿ ಮಾಡುವ ಹರಸಾಹಸ, ನಮ್ಮನ್ನು ಆಂತರಿಕವಾಗಿ ಒಂಟಿಯಾಗಿಸುತ್ತದೆಯೇ ಹೊರತು, ಗಾಂಧಿಯAತೆ ಸ್ಥಿತಪ್ರಜ್ಞನಾಗಿಸುವುದಿಲ್ಲ ಅಥವಾ ಸಮೃದ್ಧ ಮತ್ತು ತೃಪ್ತಿಕರ ಜೀವನ ಕೊಡುವುದಿಲ್ಲ.

ಅಂತಿಮವಾಗಿ, 20ನೇ ಶತಮಾನದಲ್ಲಿ ಜಗತ್ತಿಗೆ ಭಾರತ ಕೊಟ್ಟ ಶ್ರೇಷ್ಠ ಕೊಡುಗೆಯೆಂದರೆ ಗಾಂಧೀತತ್ವ. ಇದನ್ನು ಭಾರತೀಯರು ಹೆಮ್ಮೆಯಿಂದ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಜಗತ್ತಿನಾದ್ಯಂತ ಪ್ರಚುರಗೊಳಿಸಬೇಕಿತ್ತು. ಆದರೆ, ವರ್ಣರಂಜಿತ ವಸ್ತುನಿಷ್ಠ ಪ್ರಪಂಚದ ವ್ಯಾಮೋಹದಲ್ಲಿ, ನಮಗೆ ಗಾಂಧಿ ಹಳೆಯ ಜಮಾನದವರಂತೆ ಕಂಡದ್ದAತೂ ನಿಜ. ಆದರೆ, ಕೊರೊನಾ ವೈರಾಣು ನಮ್ಮೆಲ್ಲರ ಕಣ್ಣಿನ ಪೊರೆ ಕಳಚಿ, ಜೀವನದ ಸತ್ಯಾಸತ್ಯಗಳ ದರ್ಶನ ಮಾಡಿಸಿ ಸ್ವಲ್ಪ ಮಟ್ಟಿಗಾದರೂ ವಿಚಲಿತರನ್ನಾಗಿಸಿದಂತೂ ನಿಜ. ಈ ಕಷ್ಟಕರ ಸಮಯದಲ್ಲಿ, ಗಾಂಧಿ ಮತ್ತೊಮ್ಮೆ ನಮಗೆ ದಾರಿ ತೋರಿಸಬೇಕಿದೆ. ಇದೇ, ಕೊರೋನೋತ್ತರ ಜಗತ್ತಿನಲ್ಲಿ ಆಗಬೇಕಿರುವ ಸತ್ಯ, ಅಹಿಂಸೆ, ಸಹಬಾಳ್ವೆ, ಪರಿಸರ ಪ್ರೇಮ ಮತ್ತು ಶಾಂತಿ ಮಂತ್ರ ಒಳಗೊಂಡ ಮಹಾನ್ ಜಾಗತಿಕ ಪರಿವರ್ತನೆ. ಗಾಂಧಿ ಹೇಳಿದಂತೆ, ನಾವು ಬದಲಾದರೆ ಜಗತ್ತನ್ನೇ ಬದಲಾಯಿಸಿದಂತೆ. ಬಹುಶಃ, ಇಂತಹ ಸುವರ್ಣ ಅವಕಾಶ ನಮ್ಮ ಜೀವಿತಾವಧಿಯಲ್ಲಿ ಇನ್ನೊಮ್ಮೆ ಸಿಗಲಾರದು.

 ‘ಸೌಮ್ಯವಾಗಿಯೂ ನೀವು ಜಗತ್ತನ್ನು ಬದಲಾಯಿಸಬಹುದು’ -ಮಹಾತ್ಮಾ ಗಾಂಧಿ

Leave a Reply

Your email address will not be published.