ಮೋದಿಯ ಮೋಡಿ ಮಾಯವಾಗಿದೆ!

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಷಾ ಎಂಬ ‘ಮಹಾ ಅವಿವೇಕಿ’ ತಯಾರಿಸುತ್ತಿದ್ದ ಸುಳ್ಳಿನ ಬೀಜಗಳನ್ನು ಚೀಲಗಳಲ್ಲಿ ತುಂಬಿಕೊಂಡು ದೇಶವ್ಯಾಪಿ ತಿರುಗಾಡಿದ ನರೇಂದ್ರ ಮೋದಿ ಎಂಬ ಪ್ರಚಾರಕ ಸಿಕ್ಕಲ್ಲೆಲ್ಲ ಬಿತ್ತಿದರು. ಅವು ಸತ್ಯವಾಗಿದ್ದರೆ ಬಹುಬೇಗ ಸತ್ತು ಹೋಗುತ್ತಿದ್ದವು. ಸುಳ್ಳಿಗೆ ಆಯುಷ್ಯವಷ್ಟೇ ಹೆಚ್ಚಲ್ಲ; ಅವು ಮೊಳಕೆಯೊಡೆಯುವ ಕ್ರಿಯೆಯೂ ಅಷ್ಟೇ ಶೀಘ್ರ ಎಂಬುದು ಈ ಕರಟಕ-ದಮನಕರಿಗೆ ಚೆನ್ನಾಗಿಯೇ ತಿಳಿದಿತ್ತು.

ಮಸ್ಯೆ ಬಹಳ ದೊಡ್ಡದಿದೆ. ವಿಚಾರದ ಹರವೂ ವಿಶಾಲವಾಗಿದೆ. ಮೋದಿ ಮಾಡಿದ `ಮೋಡಿ’ಗಳಿಂದ ಭಕ್ತರು ಹೊರಬರದಿದ್ದರೂ, ಭಾರತದ ವಿವೇಕಿಗಳು, ಅವರನ್ನು ಒಂದಷ್ಟು ಮಟ್ಟಿಗಾದರೂ ಅರ್ಥ ಮಾಡಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅನರ್ಥಗಳನ್ನು ಸರಿಪಡಿಸಿಕೊಳ್ಳಬೇಕೆಂಬ ಇರಾದೆಯೂ ವ್ಯಕ್ತವಾಗುತ್ತಿದೆ. ಈ ಒಳಗುದಿ ಮತ್ತು ಒಳಕುದಿಗಳಿಗೆ ನಿಜವಾದ ಸ್ವರೂಪ ಸದ್ಯದಲ್ಲಿಯೇ ದೊರಕಲಿದೆ. ಇದಕ್ಕಾಗಿ ನಾವೆಲ್ಲರೂ ಮೇ 23ರವರೆಗೂ ಕಾಯಲೇಬೇಕಿದೆ. ಕಾಲಾಯ ತಸ್ಮೈ ನಮಃ!

ಹಿಂದೆಲ್ಲ ಊರು-ಕೇರಿಗಳಲ್ಲಿ ಆಗಾಗ ಅಪರೂಪಕ್ಕೆಂಬಂತೆ ಜಾದೂ ಮಾಡೋ ಮಂದಿ ಬಂದು, ಕೆಲಕಾಲ ಠಿಕಾಣಿ ಹೂಡಿ, ಅಲ್ಲಲ್ಲಿ ಮೋಡಿ ಮಾಡಿ, ಸುತ್ತ ನಿಂತಿದ್ದ ಜನರಿಂದ ದುಡ್ಡು ತಗೊಂಡು ಹೊಟ್ಟೆ ಹೊರೆಯೋ ಕೆಲಸ ಮಾಡ್ತಾ ಇದ್ದದ್ದು ಈತ್ತೀಚಿಚೆಗೆ ಕೇವಲ ನೆನಪಾಗಿತ್ತು. ನರೇಂದ್ರ ಮೋದಿ ಎಂಬ ರಾಜಕಾರಣಿ, ರಾಷ್ಟ್ರ ರಾಜಕಾರಣಕ್ಕೆ ನೇರಾನೇರ ಕಾಲಿಟ್ಟ ಘಳಿಗೆಯಿಂದ ಇಡೀ ದೇಶವಾಸಿಗಳು ಇಂಥ ಮೋಡಿಗಳನ್ನು ನೋಡುವ ವಾತಾವರಣವೊಂದು ನಿರ್ಮಾಣವಾಗಿಬಿಟ್ಟಿತು. ‘ಮೋದಿ ಬಂದು ಮೋಡಿ ಮಾಡಿದರು’ ಎಂಬ ಭಕ್ತಗಣದ ಮಾತುಗಳು ನಿಜವೆಂದು ವಿರೋಧಿಗಳಿಗೂ ಅನ್ನಿಸತೊಡಗಿತು.

2014ರ ಲೋಕಸಭಾ ಚುನಾವಣೆಯಲ್ಲಿ ಸುಂಟರಗಾಳಿಯಂತೆ ಬಂದ ನರೇಂದ್ರ ಮೋದಿ ಎಂಬ ಅಪ್ಪಟ ಆರ್‍ಎಸ್‍ಎಸ್ ಪರಿಚಾರಕ, ಸಮಗ್ರ ಭಾರತವನ್ನೇ ತನ್ನ ಮೋಡಿಗೆ, ಮಾಯಾಜಾಲಕ್ಕೆ ಒಳಪಡಿಸಿದ್ದು, ರಾಷ್ಟ್ರ ರಾಜಕೀಯದ ಸಮಕಾಲೀನ ಇತಿಹಾಸದ ನಗ್ನ ಸತ್ಯ. ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂಬ ರಣ ಸಂಕಲ್ಪ ಹೊತ್ತ ನರೇಂದ್ರ ಮೋದಿ, ನಿಮಿಷಕ್ಕೊಂದು ಸುಳ್ಳು ಹೊಸೆದರು. ಆ ಸುಳ್ಳುಗಳನ್ನೇ ಸತ್ಯವೆಂಬಂತೆ ಬಿಂಬಿಸುವ ಕಲೆಯನ್ನು ಅವರಿಗೆ, ಅವರ ಸಂಘ ಬಹಳ ಹಿಂದಿನಿಂದಲೂ ಕಲಿಸಿಕೊಟ್ಟಿತ್ತು.

ಹೊಸ ತಲೆಮಾರಿನ ಯುವಕರನ್ನೇ ತಮ್ಮ ಪ್ರಧಾನ ಗುರಿಯನ್ನಾಗಿಸಿಕೊಂಡ ನರೇಂದ್ರ ಮೋದಿ, ‘ನಾವು ಅಧಿಕಾರಕ್ಕೆ ಬಂದರೆ ಈ ದೇಶದ ನಿರುದ್ಯೋಗ ಸಮಸ್ಯೆಯನ್ನೆಲ್ಲ ಪರಿಹರಿಸುತ್ತೇವೆ, ವರ್ಷಕ್ಕೆ ಕನಿಷ್ಠ ಎರಡು ಕೋಟಿ ಉದ್ಯೋಗವನ್ನು ಸೃಜಿಸುತ್ತೇವೆ. ಈ ಭಾರತದಲ್ಲಿ ಇನ್ನು ಮುಂದೆ ನಿರುದ್ಯೋಗಿಗಳೇ ಇರದಂತೆ ಮಾಡುತ್ತೇವೆ ಎಂದು ಹೋದಲ್ಲಿ-ಬಂದಲ್ಲೆಲ್ಲ ಗುಡುಗಿದರು. ಚಪ್ಪಾಳೆಗಳ ಸುರಿಮಳೆಯೇ ಸುರಿದುಹೋಯಿತು. ಈ ಭಾರತಕ್ಕೋರ್ವ ಮಹಾ ಪುರುಷ ಬಂದಿದ್ದಾನೆ, ಇನ್ನುಮುಂದೆ ಈ ದೇಶದಲ್ಲಿ ಸುಭಿಕ್ಷದ ಮಳೆಯೇ ಸುರಿಯುತ್ತದೆ ಎಂಬ ನಂಬಿಕೆಯನ್ನು ಬಲಪಡಿಸುವ ಕೆಲಸವನ್ನು ಮೋದಿ ಅವರ ಸಂಘ ಪರಿಚಾರಕರು ಸದ್ದಿಲ್ಲದೆ ರಾಷ್ಟ್ರವ್ಯಾಪಿ ಮಾಡಿದರು. ಅವರ ಮಾತಿನಲ್ಲಿದ್ದ ಪ್ರಖರತೆಯನ್ನು ಕಂಡ ಜನ, ‘ಹೌದೌದು, ಇನ್ನೇನು ಭಾರತದಲ್ಲಿ ಹೊಸ ಪ್ರಗತಿಯ ಪರ್ವವೇ ಆರಂಭವಾಗುತ್ತದೆ’ ಎಂದು ಹೊಸ ಬೆಳಕಿಗಾಗಿ ನಿರೀಕ್ಷಿಸತೊಡಗಿದರು.

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಷಾ ಎಂಬ ‘ಮಹಾ ಅವಿವೇಕಿ’ ತಯಾರಿಸುತ್ತಿದ್ದ ಸುಳ್ಳಿನ ಬೀಜಗಳನ್ನು ಚೀಲಗಳಲ್ಲಿ ತುಂಬಿಕೊಂಡು ದೇಶವ್ಯಾಪಿ ತಿರುಗಾಡಿದ ನರೇಂದ್ರ ಮೋದಿ ಎಂಬ ಪ್ರಚಾರಕ ಸಿಕ್ಕಲ್ಲೆಲ್ಲ ಬಿತ್ತಿದರು.

ನಿರುದ್ಯೋಗದ ಪಿಶಾಚಿಯನ್ನು ತಮ್ಮ ಮಾತಿನ ಮಂತ್ರದಂಡದಿಂದಲೇ ಬಡಿದೋಡಿಸಿದ ನರೇಂದ್ರ ಮೋದಿಯವರು, ಬಡತನದ ಭೂತಕ್ಕೂ ಪೆಟ್ಟು ಕೊಟ್ಟರು. ಅದೂ ಅಂತಿಂಥ ಪೆಟ್ಟಲ್ಲ; ಮರ್ಮಾಘಾತ! ‘ಭಾರತದ ಪ್ರತಿಯೊಬ್ಬ ಪ್ರಜೆಯನ್ನೂ ನಾವು ಸಿರಿವಂತರನ್ನಾಗಿಸುತ್ತೇವೆ. ಪ್ರತಿಯೋರ್ವರ ಬ್ಯಾಂಕು ಖಾತೆಗಳಿಗೂ ತಲಾ ಹದಿನೈದು ಲಕ್ಷ ರೂಪಾಯಿಗಳನ್ನು ಜಮಾ ಮಾಡುತ್ತೇವೆ’ ಎಂದು ಬೊಬ್ಬಿರಿದರು. ಅವರ ಹಾವ-ಭಾವ, ಗತ್ತು-ಗೈರತ್ತು, ವೀರಾವೇಷದ ಭಾಷಣಗಳನ್ನು ಕೇಳಿದ ಮಂದಿ ಹದಿನೈದು ಲಕ್ಷ ರೂಪಾಯಿ ತಮ್ಮ ಖಾತೆಗೆ ಬಿದ್ದಂತೆ ಕನಸು ಕಂಡರು. ಮತಗಟ್ಟೆಗೆ ತೆರಳಿ ಸರತಿ ಸಾಲಲ್ಲಿ ನಿಂತು ಮೋದಿ ಅವರು ಹೇಳಿದ್ದ ‘ಕಮಲ’ದ ಗುರುತಿಗೆ ಒತ್ತಿದರು.

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಷಾ ಎಂಬ ‘ಮಹಾ ಅವಿವೇಕಿ’ ತಯಾರಿಸುತ್ತಿದ್ದ ಸುಳ್ಳಿನ ಬೀಜಗಳನ್ನು ಚೀಲಗಳಲ್ಲಿ ತುಂಬಿಕೊಂಡು ದೇಶವ್ಯಾಪಿ ತಿರುಗಾಡಿದ ನರೇಂದ್ರ ಮೋದಿ ಎಂಬ ಪ್ರಚಾರಕ ಸಿಕ್ಕಲ್ಲೆಲ್ಲ ಬಿತ್ತಿದರು. ಅವು ಸತ್ಯವಾಗಿದ್ದರೆ ಬಹುಬೇಗ ಸತ್ತು ಹೋಗುತ್ತಿದ್ದವು. ಸುಳ್ಳಿಗೆ ಆಯುಷ್ಯವಷ್ಟೇ ಹೆಚ್ಚಲ್ಲ; ಅವು ಮೊಳಕೆಯೊಡೆಯುವ ಕ್ರಿಯೆಯೂ ಅಷ್ಟೇ ಶೀಘ್ರ ಎಂಬುದು ಈ ಕರಟಕ-ದಮನಕರಿಗೆ ಚೆನ್ನಾಗಿಯೇ ತಿಳಿದಿತ್ತು.

ಭಾರತದ ಬಹುತೇಕ ಮಾಧ್ಯಮಗಳನ್ನೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಲು, ತಾಳ-ಮದ್ದಲೆಗಳನ್ನು ತಯಾರಿಸಲಾಯಿತು. ಮೋದಿ ಆಪ್ತರ ಜೇಬಿನಲ್ಲಿಯೇ ಅನೇಕಾನೇಕ ಪ್ರಮುಖ ಮಾಧ್ಯಮ ಕಂಪನಿಗಳು ಅವಿತು ಕುಳಿತಿದ್ದವು. ಭಟ್ಟಂಗಿಗಳ ಪಡೆಯೇ ಇಡೀ ದೇಶಾದ್ಯಂತ ಕೆಲಸ ಮಾಡಿ, ಹೊಸ ಭ್ರಮೆಯೊಂದನ್ನು ಹುಟ್ಟುಹಾಕುವಲ್ಲಿ ಯಶ ಸಾಧಿಸಿತು.

ಇವರಿಗೆಲ್ಲ ಕೋಟ್ಯಾನು ಕೋಟಿಗಳನ್ನು ನೀಡಲು ಮೋದಿ ಮಿತ್ರರಾದ ಅಂಬಾನಿ, ಅದಾನಿಗಳ ಕಂಪನಿಗಳು ತುದಿಗಾಲಲ್ಲಿ ಸಿದ್ಧವಾಗಿದ್ದವು. ಸುಳ್ಳಿನ ಮೊಳಕೆ ಸಸಿಯಾಗಿ, ಹೆಮ್ಮರವಾಗಿ ಬೆಳೆಯಲು ಇವರೆಲ್ಲ ನಿರಂತರವಾಗಿ ನೀರನ್ನೆರೆದರು. ಇವರೆಲ್ಲರ ಸತತ ಸಹಭಾಗಿತ್ವದ ಫಲಶ್ರುತಿಯಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೂ ಅಸ್ವಿತ್ವಕ್ಕೆ ಬಂತು.

ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಸಿಕ್ಕಾಪಟ್ಟೆ ಹೆಚ್ಚಿಸಿ, ಜನ ಸಾಮಾನ್ಯರನ್ನು ಕೊಲ್ಲುತ್ತಿದೆ ಎಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಗುಡುಗಿದ್ದ ನರೇಂದ್ರ ಮೋದಿಯವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಎಲ್ಲವನ್ನೂ ಯದ್ವಾತದ್ವಾ ಹೆಚ್ಚಿಸಿದರು.

ಇವು ಕೇವಲ ಎರಡು ಸ್ಯಾಂಪಲ್ಲುಗಳಷ್ಟೇ. ಇಂಥ ಸುಳ್ಳುಗಳು ಅವರ ಅಧಿಕಾರವಧಿಯಲ್ಲಿ ನಿತ್ಯವೂ ಮುಂದುವರೆದವು. ಒಂದು ಅರ್ಥದಲ್ಲಿ ನರೇಂದ್ರ ಮೋದಿ ಅವರು ಸುಳ್ಳಿನ ಯಜ್ಞದ ಮಹಾ ಅಧ್ವರ್ಯುವಾದರು. ಮೋದಿ ಸಾಹೇಬರು ದಿನ, ನಿಮಿಷಗಳ ಲೆಕ್ಕವನ್ನೂ ಬಿಟ್ಟು, ಸೆಕೆಂಡಿಗೂ ಸುಳ್ಳು ಹೊಸೆಯಬೇಕೆಂಬ ಸಂಕಲ್ಪ ಮಾಡಿದಂತೆ ಜನರ ಮೇಲೆ ತಮ್ಮ ಸುಳ್ಳು-ಪೊಳ್ಳು ಭರವಸೆಯ ಅಸ್ತ್ರಗಳನ್ನು ಒಂದಾದ ಮೇಲೊಂದರಂತೆ ಪ್ರಯೋಗಿಸತೊಡಗಿದರು.

`ಹೋ ನಮ್ಮ ಭಾರತ ಬದಲಾಗುತ್ತಿದೆ’ ಎಂದು ಜನರೂ ಭ್ರಮೆಗೆ ಒಳಗಾಗತೊಡಗಿದರು. ಮೋದಿ ಮತ್ತು ಷಾ ಎಂಬ ಸುಳ್ಳುಗಳ ಸರದಾರರಿಗೆ ತಾವು ಮಾಡುತ್ತಿರುವ ಈ ಸಮೂಹ ಸನ್ನಿ ಎಂಥ ಭಾವಾವೇಷಗಳನ್ನು ಸೃಷ್ಟಿ ಮಾಡಬಲ್ಲುದೆಂಬ ಅರಿವಿತ್ತು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾಣಗಳನ್ನು ಪ್ರಯೋಗಿಸಲಾರಂಭಿಸಿದ ಮೋದಿ-ಷಾ, ಕಳೆದ ಅರವತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಕೇವಲ ಭ್ರಷ್ಟಾಚಾರಗಳಲ್ಲಿಯೇ ಮುಳುಗಿಹೋಗಿತ್ತು. ನಮ್ಮ ದೇಶದ ಹಣವನ್ನೆಲ್ಲ ಕೊಂಡೊಯ್ದು ವಿದೇಶಿ ಬ್ಯಾಂಕುಗಳಲ್ಲಿ ಇಡಲಾಯಿತು. ಆ ಕೋಟ್ಯಾನುಕೋಟಿ ಕಪ್ಪು ಹಣವನ್ನೆಲ್ಲ ನಾವು ಅಧಿಕಾರಕ್ಕೆ ಬಂದ ಕೂಡಲೇ ವಾಪಸ್ಸು ತರುತ್ತೇವೆ. ಅದು ನಿಮ್ಮದೇ ಹಣ, ಅದನ್ನು ಮತ್ತೆ ನಿಮಗೇ ಹಂಚುತ್ತೇವೆ. ಪ್ರತಿಯೊಬ್ಬರಿಗೂ ಹದಿನೈದು ಲಕ್ಷ ರೂಪಾಯಿಗಳನ್ನೇ ಕೊಡುತ್ತೇವೆ ಎಂದು ತಮಟೆ ಹೊಡೆದು ಸಾರಿದರು. ಅವರ ಮಾತಿನ ಶೈಲಿಯನ್ನು ಕಂಡ ಜನರೂ ನಂಬಿದರು.

ಭಾರತಕ್ಕೆ ಬುಲೆಟ್ ಟ್ರೈನ್ ಬಂತೆಂದು ರೈಲು ಬಿಟ್ಟರು. ಜನ ಕನಸುಗಣ್ಣಿನಿಂದಲೇ ದಿಟ್ಟಿಸಿದರು. ಬಂತು, ಬಂತು ಎಂದುಕೊಂಡರು. ರೈಲು ಬರುವುದಿರಲಿ, ಅದರ ಹಳಿಯೂ ಕಾಣಿಸಲಿಲ್ಲ.ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಸಿಕ್ಕಾಪಟ್ಟೆ ಹೆಚ್ಚಿಸಿ, ಜನ ಸಾಮಾನ್ಯರನ್ನು ಕೊಲ್ಲುತ್ತಿದೆ ಎಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಗುಡುಗಿದ್ದ ನರೇಂದ್ರ ಮೋದಿಯವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಎಲ್ಲವನ್ನೂ ಯದ್ವಾತದ್ವಾ ಹೆಚ್ಚಿಸಿದರು.  ಜನ ಒಳಗೊಳಗೇ ಹಿಡಿಶಾಪ ಹಾಕಿಕೊಂಡರಾದರೂ, ತುಟಿ ಬಿಚ್ಚಲಿಲ್ಲ. ಅವರ ಪಟಾಲಮ್ಮುಗಳು ದಿನಕ್ಕೊಂದು ಕಥೆ ಕಟ್ಟಿ, ಜನರಿಗೆ ಮಂಕುಬೂದಿ ಎರಚುವ ಕೆಲಸದಲ್ಲಿ ಮಗ್ನವಾದವು.

`ನ ಖಾವೂಂಗಾ, ನ ಖಾನೇ ದೂಂಗಾ’ (ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ) ಎಂದು ದೇಶವಾಸಿಗಳ ಮುಂದೆ ಬಡಾಯಿ ಕೊಚ್ಚಿಕೊಂಡ ಮೋದಿ, ತಮ್ಮ ಸುತ್ತಲೂ ಭ್ರಷ್ಟರನ್ನೇ ಬಿಟ್ಟುಕೊಂಡರು. ಭಾರತದ ಪವಿತ್ರ ನದಿ ಗಂಗೆಯೂ ಸೇರಿದಂತೆ ಅನೇಕಾನೇಕ ಯೋಜನೆಗಳಲ್ಲಿ ಲಕ್ಷ-ಲಕ್ಷ ಕೋಟಿಗಳನ್ನು ಕೊಳ್ಳೆ ಹೊಡೆಯಲಾಯಿತು. ಅದಾನಿ, ಅಂಬಾನಿ, ನೀರವ್ ಮೋದಿ, ಲಲಿತ್ ಮೋದಿ, ಚೋಕ್ಸಿಯಂತಹ ಚೋರರಿಗೆ ಮಣೆ ಹಾಕಲಾಯಿತು.

ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದಿದ್ದ ಯೋಜನೆಗಳಿಗೆ ಹೊಸ ಬಣ್ಣ ಬಳಿದು, ಅವು ತಮ್ಮದೇ ಎಂದು ಭಾರೀ ಪ್ರಚಾರ ಮಾಡಲಾಯಿತು. ಕೇವಲ ಜಾಹೀರಾತಿಗಾಗಿಯೇ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಯಿತು. `ನ ಖಾವೂಂಗಾ, ನ ಖಾನೇ ದೂಂಗಾ’ (ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ) ಎಂದು ದೇಶವಾಸಿಗಳ ಮುಂದೆ ಬಡಾಯಿ ಕೊಚ್ಚಿಕೊಂಡ ಮೋದಿ, ತಮ್ಮ ಸುತ್ತಲೂ ಭ್ರಷ್ಟರನ್ನೇ ಬಿಟ್ಟುಕೊಂಡರು. ಭಾರತದ ಪವಿತ್ರ ನದಿ ಗಂಗೆಯೂ ಸೇರಿದಂತೆ ಅನೇಕಾನೇಕ ಯೋಜನೆಗಳಲ್ಲಿ ಲಕ್ಷ-ಲಕ್ಷ ಕೋಟಿಗಳನ್ನು ಕೊಳ್ಳೆ ಹೊಡೆಯಲಾಯಿತು. ಅದಾನಿ, ಅಂಬಾನಿ, ನೀರವ್ ಮೋದಿ, ಲಲಿತ್ ಮೋದಿ, ಚೋಕ್ಸಿಯಂತಹ ಚೋರರಿಗೆ ಮಣೆ ಹಾಕಲಾಯಿತು. ಕೊನೆ-ಕೊನೆಗೆ ಯುದ್ಧ ವಿಮಾನ ಖರೀದಿಯಲ್ಲೂ ಅವ್ಯವಹಾರ ನಡೆಸಲಾಯಿತು. ಯುದ್ಧ ವಿಮಾನ ತಯ್ಯಾರಿಯಲ್ಲಿ ಯಾವುದೇ ಅನುಭವವೂ ಇಲ್ಲದ ರಿಲಯನ್ಸ್ ಕಂಪನಿಗೆ ಮೂವತ್ತು ಸಾವಿರ ಕೋಟಿ ರೂಗಳ ಪ್ಯಾಕೇಜ್ ನೀಡಲಾಯಿತು. ವಿಶ್ವ ಶ್ರೇಷ್ಠ ದರ್ಜೆಯ ಯುದ್ಧ ವಿಮಾನಗಳ ನಿರ್ಮಾಣದಲ್ಲಿ ಹೆಸರುವಾಸಿಯಾದ ಹಾಗೂ ಭಾರತದ ಮಿಲಿಟರಿಗೆ ಕಾಯಾ ವಾಚಾ ಮನಸಾ ಸೇವೆ ನೀಡಿದ್ದ ನಮ್ಮ ಬೆಂಗಳೂರಿನ ಎಚ್‍ಎಎಲ್ ಕಾರ್ಖಾನೆಯನ್ನು ದಿವಾಳಿ ಮಾಡಲು ಸಂಚು ರೂಪಿಸಲಾಯಿತು. ಲೋಕಸಭೆಯಲ್ಲಿಯೇ ಸುಳ್ಳುಗಳನ್ನು ಹೇಳಲಾಯಿತು. ಎಚ್‍ಎಎಲ್ ನೌಕರರಿಗೆ ಸಂಬಳ ಪಡೆಯಲೂ ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆಯುವಂತಹ ವಾತಾವರಣವನ್ನು ಸೃಷ್ಟಿ ಮಾಡಲಾಯಿತು.

ಹೀಗಿದ್ದೂ ಮತ್ತೆ ಹೊಸ ಸುಳ್ಳುಗಳೊಂದಿಗೆ ಹೊಸ ಚುನಾವಣೆ ಎದುರಿಸಲು ಮೋದಿ ಮತ್ತವರ ಅದೇ ಸುಳ್ಳುಗಾರರ ಟೀಂ ಸಿದ್ಧಗೊಂಡು, ದೇಹವನ್ನೆಲ್ಲ ಹುರಿ ಮಾಡಿಕೊಂಡು ಎದ್ದು ಕುಳಿತಿದೆ.

ಸ್ವಾತಂತ್ರ್ಯ ಸಿಕ್ಕಾಗ ಏನೇನೂ ಇಲ್ಲದೆ ಬೆಂಗಾಡಿನಂತಿದ್ದ ಈ ಭಾರತವನ್ನು ವಿಶ್ವಮಾನ್ಯವೆನ್ನುವಂತೆ ಮಾಡಿದ ಕಾಂಗ್ರೆಸ್ಸನ್ನು `ನೀವೇನು ಮಾಡಿದಿರಿ?’ ಎಂದು ಪ್ರಶ್ನಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕಾಂಗ್ರೆಸ್ ಸರ್ಕಾರ, ಸಾಕಷ್ಟು ಕ್ರಾಂತಿಕಾರಕ ಹೆಜ್ಜೆಗಳನ್ನು ಇಡುತ್ತಿದ್ದ ಸಂದರ್ಭದಲ್ಲಿ ಪಾಪ, ಈ `ಮೋದಿ’ ಹುಟ್ಟಿರಲೇ ಇಲ್ಲ. ಭಾರಿ ಕಾರ್ಖಾನೆಗಳು, ಅಣೆಕಟ್ಟೆಗಳು, ವೈಜ್ಞಾನಿಕ ಸಂಸ್ಥೆಗಳು, ಐಐಟಿ, ಐಐಎಂಗಳು, ವಿಶ್ವ ವಿದ್ಯಾನಿಲಯಗಳು ಎಲ್ಲವೂ ಹುಟ್ಟಿಕೊಂಡಿದ್ದು ಕಾಂಗ್ರೆಸ್ಸಿನ ತೆಕ್ಕೆಯಲ್ಲಿ ಎಂಬ ಸತ್ಯವನ್ನು ಮುಚ್ಚಿಡಲಾಗಿದೆ. ಹೊಸ ಸುಳ್ಳುಗಳ ಕೋಶ ನಿರ್ಮಿಸಿಕೊಂಡಿರುವ ಸನ್ಮಾನ್ಯ ಮೋದಿಯವರೇ, ನಿಮ್ಮ ಆಳ್ವಿಕೆಯಲ್ಲಿ ಈ ದೇಶಕ್ಕೆ ಯಾವ್ಯಾವ ಕೊಡುಗೆಗಳನ್ನು ನೀಡಿದ್ದೀರಿ ಎಂಬುದನ್ನಾದರೂ ಹೇಳಿ?

ನರೇಂದ್ರ ಮೋದಿ ಎಂಬ ಬಾಯಿ ಹರುಕ ಪ್ರಧಾನಿ, ಖಡಾಖಂಡಿತವಾಗಿಯೂ ಈ ದೇಶಕ್ಕೆ ಅನಿವಾರ್ಯವಲ್ಲ. ಇವರನ್ನು ಯಾವ ನಿಟ್ಟಿನಿಂದಲೂ ಅಭಿವೃದ್ಧಿಯ ಹರಿಕಾರನೆಂದು ಕರೆಯಲಾಗುವುದಿಲ್ಲ. ಬಡಾಯಿ ವೀರನೆಂದು ಕರೆಯಲಂತೂ ಯಾವುದೇ ಅಡ್ಡಿಯಿಲ್ಲ.

*ಲೇಖಕರು ಪ್ರಸ್ತುತ ವಿಧಾನ ಪರಿಷತ್ ಸದಸ್ಯರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

Leave a Reply

Your email address will not be published.