ಮೋದಿ 2.0 ಮುಂದಿರುವ ಆರ್ಥಿಕ ಸವಾಲುಗಳು

ಈ ಪುಸ್ತಕದಲ್ಲಿ ಇಲ್ಲದ ವಿಷಯಗಳು ಹಲವಿದೆ. ಆದರೆ ಇಲ್ಲಿ ಹೆಸರಿಸಿರುವ ಎಲ್ಲಾ ಸಮಸ್ಯೆಗಳು ಹಾಗೂ ಪರಿಹಾರಗಳು ನಮ್ಮ ಗಂಭೀರ ಚರ್ಚೆಗೆ ಗ್ರಾಸವಾಗಬೇಕಿದೆ.

ದೇಶದ ಪ್ರಸಕ್ತ ಆರ್ಥಿಕ ಪರಿಸ್ಥಿತಿಯನ್ನು ನೋಡಿದ ಮೇಲೆ ದೇಶದ ಮುದಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ದೇಶದ ಚುನಾವಣೆ ಎದುರಿಸುವುದೇ ಸುಲಭವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅನ್ನಿಸಿರಬಹುದು. ದೇಶದ ಆಂತರಿಕ ಹಾಗೂ ಬಾಹ್ಯ ಸನ್ನಿವೇಶಗಳೆರಡೂ ಆರ್ಥಿಕ ಪ್ರಗತಿಗೆ ತಡೆಗಾಲು ಹಾಕುವ ಗಂಭೀರ ಸಮಸ್ಯೆಗಳಾಗಿರುವುದು ಮತ್ತಷ್ಟು ತಲೆಶೂಲೆಯ ಸಂಗತಿಯಾಗಿದೆ. ಯಾವುದೇ ರಾಜಕೀಯ ಒತ್ತಡ ಅಥವಾ ಯಾವುದೇ ರಾಜಕೀಯ ಪಕ್ಷದ ಸವಾಲು ಇಲ್ಲದಿರುವ ಸಂದರ್ಭದಲ್ಲಿ ಪ್ರಧಾನಿಯವರು ಈ ಎಲ್ಲಾ ಆರ್ಥಿಕ ತೊಂದರೆಗಳನ್ನು ಎದುರಿಸಲು ಸಾಕಷ್ಟು ಸಮಯ ಹೊಂದಿದ್ದಾರೆ ಎಂಬುದೇ ಸದ್ಯದ ಸಮಯದಲ್ಲಿ ತುಸು ನೆಮ್ಮದಿಯ ಕಾರಣವೂ ಆಗಿದೆ.

ದೇಶದ ಹೂಡಿಕೆ ಹಾಗೂ ಕೈಗಾರಿಕೆ ವಲಯವು ನೆಲಕಚ್ಚಿದೆ. ಯಾವುದೇ ಹೊಸ ಬೃಹತ್ ಅಥವಾ ಮಧ್ಯಮಗಾತ್ರದ ಬಂಡವಾಳ ಹೂಡಿಕೆಯನ್ನು ನಾವು ಕಾಣುತ್ತಿಲ್ಲ. ಸೇವಾಕ್ಷೇತ್ರದ ಬೆಳವಣಿಗೆ ಸಮಾಧಾನಕರವಾಗಿದ್ದರೂ ಇದರ ಬೆಳವಣಿಗೆಗೆ ತನ್ನದೇ ಆದ ಮಿತಿಗಳಿವೆ. ರಫ್ತು ಆಧಾರಿತ ಕೈಗಾ ರಿಕೆ ವಲಯವೂ ಡೋಲಾಯಮಾನ ಸ್ಥಿತಿಯಲ್ಲಿದೆ. ಅವುಗಳೆಲ್ಲದರ ಸಗಟು ಪರಿಣಾಮವಾಗಿ ‘ಉದ್ಯೋಗಸೃಷ್ಟಿ’ ಗಗನಕುಸುಮವಾಗಿದೆ. ಹಣದುಬ್ಬರ ಕಡಿಮೆಯಾಗಿರುವ ಕಾರಣ ಸಂಬಳಕೂಲಿ ಹೆಚ್ಚಳವಾಗದಿರುವ ಪರಿಣಾಮ ಕಾಣುತ್ತಿಲ್ಲ. ಬ್ಯಾಂಕುಗಳು ಹೇರಳವಾಗಿ ಠೇವಣಿ ಪಡೆಯುತ್ತಿದ್ದು ತಮ್ಮ ಬಳಿಯಿರುವ ಹೆಚ್ಚುವರಿ ಹಣವನ್ನು ಯಾರಿಗೆ ನೀಡುವುದೆಂದು ತಿಳಿಯದೆ ಹೋಗಿವೆ.

ದೇಶದ ಬ್ಯಾಂಕಿಂಗ್ ಮತ್ತು ಸಾಲ-ಸೋಲದ ವಲಯ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿದೆ. ಅನುಪಯುಕ್ತ ಸಾಲಗಳ ಒಟ್ಟು ಮೊತ್ತ ಬೆಳೆಯುತ್ತಲೇ ಇದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಒಂದೊಂದಾಗಿ ದಿವಾಳಿಯಾಗುವ ಹವಣಿಕೆಯಲ್ಲಿವೆ. ದೇಶದ ಕಾರ್ಮಿಕ ಕಾನೂನು ಸುಧಾರಣೆಯ ಮಾತುಗಳು ಇನ್ನೂ ಶೈಶವಾವಸ್ಥೆಯಲ್ಲಿವೆ. ಕೈಗಾ ರಿಕೆ ಮತ್ತು ಮೂಲಭೂತ ಸೌಕರ್ಯ ವಲಯಕ್ಕೆ ಬೇಕಿರುವ ಜಮೀನು, ನೀರು ಮತ್ತಿತರ ಸವಲತ್ತುಗಳನ್ನು ಒದಗಿಸುವಲ್ಲಿ ನಾವು ಮತ್ತೆಮತ್ತೆ ಎಡವುತ್ತಿದ್ದೇವೆ.

ಇನ್ನು ಕೃಷಿಕ್ಷೇತ್ರದ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. 2022ನೇ ಇಸವಿಯೊಳಗೆ ಗ್ರಾಮೀಣ-ಕೃಷಿ ವಲಯದ ಆದಾಯ ದ್ವಿಗುಣಗೊಳ್ಳುವ ಬದಲು ಮತ್ತಷ್ಟು ಕುಸಿಯುವ ಸಾದ್ಯತೆಗಳೇ ಹೆಚ್ಚಿವೆ.

ಉತ್ತರಭಾರತದಲ್ಲಿ ಸ್ವಲ್ಪ ಮಟ್ಟಿಗಾದರೂ ಸುಧಾರಣೆ ಕಾಣುತ್ತಿದ್ದರೆ ಪ್ರಗತಿಗೆ ಪೂರಕವಾದ ದಕ್ಷಿಣ ಭಾತರದಲ್ಲಿ ಆರ್ಥಿಕ ಸುಧಾರಣೆಯ ಯಾವುದೇ ಗುಣಲಕ್ಷಣಗಳು ಕಾಣುತ್ತಿಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳೆರಡರಲ್ಲಿಯೂ ಕ್ಷಮತೆಯ ಕ್ಷಾಮ ಕಂಡುಬರುತ್ತಿದೆ. ಈ ಕ್ಷೇತ್ರಗಳಲ್ಲಿ ಸರ್ಕಾರಿಸ್ವಾಮ್ಯದ ಸಂಸ್ಥೆಗಳು ರೋಗಗ್ರಸ್ಥವಾಗಿವೆ. ಇದೇ ಕ್ಷೇತ್ರಗಳಲ್ಲಿ ಖಾಸಗಿಯವರ ಹೂಡಿಕೆಗೆ ಕಾನೂನು ವ್ಯವಸ್ಥೆ ಪೂರಕವಾಗಿಲ್ಲ. ಇನ್ನು ಕೃಷಿಕ್ಷೇತ್ರದ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. 2022ನೇ ಇಸವಿಯೊಳಗೆ ಗ್ರಾಮೀಣ-ಕೃಷಿ ವಲಯದ ಆದಾಯ ದ್ವಿಗುಣಗೊಳ್ಳುವ ಬದಲು ಮತ್ತಷ್ಟು ಕುಸಿಯುವ ಸಾದ್ಯತೆಗಳೇ ಹೆಚ್ಚಿವೆ. ಕೃಷಿಕ್ಷೇತ್ರದ ಈ ಬಿಕ್ಕಟ್ಟು ಹಲವಾರು ಸಾಮಾಜಿಕ ಸಮಸ್ಯೆಗಳ ರೂಪದಲ್ಲಿ ನಮ್ಮ ಮುಂದೆ ತಾಂಡವವಾಡುತ್ತಿದೆ.

ಪಟ್ಟಿ ಮಾಡುತ್ತಾ ಹೋದರೆ ಕೊನೆಯಿಲ್ಲ. ದೇಶದ ಮುಂದಿರುವ ಆರ್ಥಿಕ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಸಂಕೀರ್ಣಗೊಳ್ಳುತ್ತಲೇ ಹೋಗುತ್ತಿವೆ. ಹೇಗೆ ನಮ್ಮ ದೇಶದ ನಿರುದ್ಯೋಗ ಸಮಸ್ಯೆ ‘ಅರೆಉದ್ಯೋಗ’ದ ಸಮಸ್ಯೆಯಂತೆ ನಮಗೆ ಕಾಣುತ್ತಿದೆಯೋ ಅದೇ ರೀತಿಯಲ್ಲಿ ನಮ್ಮ ಆರ್ಥಿಕ ಸಮಸ್ಯೆಗಳು ಕೂಡಾ ಹಲವು ಹತ್ತು ಸಾಮಾಜಿಕ-ರಾಜಕೀಯ ರೂಪದಲ್ಲಿ ನಮಗೆ ಕಾಣಸಿಗುತ್ತಿವೆ.

ಚೆನ್ನೈ ನಗರದ ಕುಡಿಯುವ ನೀರಿನ ಸಮಸ್ಯೆ, ಬೆಂಗಳೂರಿನ ಸಂಚಾರ ಸಟ್ಟಣೆಯೆ ಸಮಸ್ಯೆ, ದೆಹಲಿಯ ವಾಯು ಮಾಲಿನ್ಯ ಸಮಸ್ಯೆ, ಉತ್ತರ ಭಾರತದ ರಾಜ್ಯಗಳ ಕಾನೂನು ಸುವ್ಯವಸ್ಥೆಯ ಸಮಸ್ಯೆ, ಪಂಜಾಬದ ಮಾದಕದ್ರವ್ಯ ಸಮಸ್ಯೆ ಅಥವಾ ಬಸ್ತರ್‍ನ ಮಾವೋವಾದಿ ಸಮಸ್ಯೆಗಳೆಲ್ಲವೂ ಮೂಲತಃ ದೇಶದ ಮುಂದಿರುವ ಆರ್ಥಿಕ ಸಮಸ್ಯೆಗಳ ಸಾಮಾಜಿಕ ರೂಪವಷ್ಟೇ. ಎಲ್ಲಿಯವರೆಗೆ ಇವುಗಳ ಮೂಲಸಮಸ್ಯೆಯನ್ನು ಇತ್ಯ ರ್ಥ ಮಾಡಲಾಗದೋ ಅಲ್ಲಿಯವರೆಗೆ ಈ ಮೂರ್ತರೂಪದ ರೋಗಲಕ್ಷಣಗಳನ್ನು ಗುಣ ಪಡಿಸಲಾಗದು.

ಇಂತಹುದೇ ಒಂದು ಪ್ರಯತ್ನ ಈಗಿನ ಐಎಮ್‍ಎಫ್ ಮುಖ್ಯ ಅರ್ಥ ಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹಾಗೂ ಹಿಂದಿನ ಆರ್‍ಬಿಐ ಗವರ್ನರ್ ರಘುರಾಮ್ ರಾಜನ್‍ರವರ ಸಂಪಾದಕತ್ವದಲ್ಲಿ ನಡೆದಿದೆ.

ನಮ್ಮ ಸಮಸ್ಯೆಗಳು ನಮಗೆ ಸರಿಯಾಗಿ  ಕಾಣದೇ ಹೋಗಬಹುದು. ದೂರದ ಊರಿನಿಂದ ನೋಡಿದರೆ ತುಲನಾತ್ಮಕ ದೃಷ್ಟಿಕೋನದಲ್ಲಿ ನಮ್ಮ ಓರೆಕೋರೆಗಳು ಇನ್ನೂ ಸ್ಪಷ್ಟವಾಗಿ ಕಾಣಬಹುದು. ನಮ್ಮಂತದೇ ಸಮಸ್ಯೆಗಳನ್ನು ಹೊಂದಿದ್ದ ಹಲವರು ಹೇಗೆ ತಮ್ಮ ತೊಂದರೆಗಳನ್ನು ಬಗೆಹರಿಸಿಕೊಂಡರು ಎಂಬುದೂ ತಿಳಿಯಬಹುದು. ಇಂತಹುದೇ ಒಂದು ಪ್ರಯತ್ನ ಈಗಿನ ಐಎಮ್‍ಎಫ್ ಮುಖ್ಯ ಅರ್ಥ ಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹಾಗೂ ಹಿಂದಿನ ಆರ್‍ಬಿಐ ಗವರ್ನರ್ ರಘುರಾಮ್ ರಾಜನ್‍ರವರ ಸಂಪಾದಕತ್ವದಲ್ಲಿ ನಡೆದಿದೆ. ಜೊತೆಗೆ ಆರೋಗ್ಯಕ್ಷೇತ್ರದಲ್ಲಿ ಪರಿಣತ ಅಭಿಜಿತ್ ಬ್ಯಾನರ್ಜಿ ಹಾಗೂ ಮಿಹಿರ್ ಶರ್ಮಾ ಕೂಡಾ ಈ ಸಂಪಾದನೆಯಲ್ಲಿ ತೊಡಗಿದ್ದಾರೆ. ಈ ನಾಲ್ವರೂ ಸೇರಿ ಇಂದಿನ ಭಾರತದ ಆರ್ಥಿಕ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಅದಕ್ಕೆ ಪರಿಹಾರಗಳನ್ನು ಹುಡುಕಲು ಹೊರಟಿದ್ದಾರೆ.

ಪೀಠಿಕೆ ಸೇರಿ ಒಟ್ಟು ಹದಿನಾರು ಅಧ್ಯಾಯಗಳಿರುವ ಈ ‘ವಾಟ್ ದಿ ಎಕಾನಮಿ ನೀಡ್ಸ್ ನೌ’ ಪುಸ್ತಕದಲ್ಲಿ ಈ ಕೆಳಕಂಡಂತೆ ವಿಷಯ ಪರಿಣತರು ಆರ್ಥಿಕ ವಲಯವೊಂದರ ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಅದಕ್ಕೆ ತುರ್ತು ಪರಿಹಾರಗಳನ್ನು ಸೂಚಿಸಿದ್ದಾರೆ.

ಅಭಿಜಿತ್ ಬ್ಯಾನರ್ಜಿ-ಆರೋಗ್ಯ ಕ್ಷೇತ್ರದ ಸಮಸ್ಯೆಗಳು; ಪ್ರಾಂಜಲ್ ಭಂಡಾರಿ-ಮೂಲಭೂತ ಸೌಕರ್ಯದ ನಿಧಾನ ನಡಿಗೆ; ಸಾಜಿದ್ ಚಿನಾಯ್-ವಿದೇಶಿ ವಿನಿಮಯ ಕ್ಷೇತ್ರದಲ್ಲಿ ರಿಸ್ಕ್ ಇಳಿಸುವ ಬಗ್ಗೆ; ಮೈತ್ರೇಶ್ ಘಾಟಕ್-ಸಾಮಾಜಿಕ ಕಲ್ಯಾಣ ಮತ್ತು ರಕ್ಷಣೆ; ಮೈತ್ರೇಶ್ ಘಾಟಕ್-ಭೂಪರಿವರ್ತನೆ ಮತ್ತು ಭೂ ಮಾರುಕಟ್ಟೆ ಅಗತ್ಯ; ಗೀತಾ ಗೋಪಿನಾಥ್ ಮತ್ತು ಅಮಾತ್ರ್ಯ ಲಹರಿ-ರಫ್ತು ಆರ್ಥಿಕತೆಯ ಬಗ್ಗೆ; ನೀಲಕಾಂತ್ ಮಿಶ್ರಾ-ಕೃಷಿ ಸುಧಾರಣೆಯ ಬಗ್ಗೆ; ನೀಲಕಾಂತ್ ಮಿಶ್ರಾಉರುವಲು ಶಕ್ತಿಯ ವಲಯದ ಬಗ್ಗೆ; ಪ್ರಾಚಿ ಮಿಶ್ರಾ-ಬಜೆಟ್ ಕೊರತೆ ಮತ್ತು ಸರ್ಕಾರಿ ಸಾಲಗಳ ಬಗ್ಗೆ; ರೋಹಿಣಿ ಪಾಂಡೆ-ಮಹಿಳೆಯರನ್ನು ಹೆಚ್ಚು ಉದ್ಯೋಗಸ್ಥರಾಗಿಸುವ ಬಗ್ಗೆ; ಈಶ್ವರ್ ಪ್ರಸಾದ್-ಹಣಕಾಸು ಕ್ಷೇತ್ರದ ಸುಧಾರಣೆಗಳ ಬಗ್ಗೆ; ರಘುರಾಮ್ ರಾಜನ್-ಬ್ಯಾಂಕಿಂಗ್ ಸುಧಾರಣೆಗಳ ಬಗ್ಗೆ; ಇ.ಸೋಮನಾಥನ್-ಪರಿಸರ ಮತ್ತು ಹವಾಮಾನ ಬದಲಾವಣೆಯ ಬಗ್ಗೆ.

ಲೇಖಕರು ಅಧ್ಯಯನಕ್ಕೆ ತೆಗೆದುಕೊಂಡ ವಿಷಯಗಳ ಬಗ್ಗೆಯೆಲ್ಲವೂ ಆಳವಾದ ಅರ್ಥಶಾಸ್ತ್ರದ ಮಾಪಕಗಳನ್ನು ಅಳವಡಿಸಿ ವಿಶ್ಲೇಷಣೆ ಮಾಡಿದ್ದಾರೆ. ಹಲವಾರು ಅತ್ಯಗತ್ಯ ಹಾಗೂ ತುರ್ತಾಗಿ ಬೇಕಿರುವ ಸುಧಾರಣೆಗಳನ್ನು ಸೂಚಿಸಿದ್ದಾರೆ.

ಮೇಲ್ಕಂಡ ಅಧ್ಯಾಯಗಳ ಹೊರತಾಗಿ ಸಂಪಾದಕರಾದ ರಘುರಾಮ್ ರಾಜನ್ ಹಾಗೂ ಅಭಿಜಿತ್ ಬ್ಯಾನರ್ಜಿಯವರು ತುರ್ತಾಗಿ ಪರಿಹಾರ ಕಂಡುಹಿಡಿಯಲೇಬೇಕಾದ ಎಂಟು ಸಮಸ್ಯೆಗಳು ಮತ್ತು ಅವಕ್ಕೆ ಪರಿಹಾರಗಳನ್ನು ಸೂಚಿಸಿದ್ದಾರೆ. ಲೇಖಕರು ಅಧ್ಯಯನಕ್ಕೆ ತೆಗೆದುಕೊಂಡ ವಿಷಯಗಳ ಬಗ್ಗೆಯೆಲ್ಲವೂ ಆಳವಾದ ಅರ್ಥಶಾಸ್ತ್ರದ ಮಾಪಕಗಳನ್ನು ಅಳವಡಿಸಿ ವಿಶ್ಲೇಷಣೆ ಮಾಡಿದ್ದಾರೆ. ಹಲವಾರು ಅತ್ಯಗತ್ಯ ಹಾಗೂ ತುರ್ತಾಗಿ ಬೇಕಿರುವ ಸುಧಾರಣೆಗಳನ್ನು ಸೂಚಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ನೀಡಿರುವ ಸುಧಾರಣೆಗಳನ್ನು ಉದಾಹರಣೆಯ ರೂಪದಲ್ಲಿ ಇಲ್ಲಿ ಪಟ್ಟಿ ಮಾಡಿದೆ.

1. ಸರ್ಕಾರವು ರೈತರಿಗೆ ಎಲ್ಲಾ ಮಾರುಕಟ್ಟೆಗಳಲ್ಲಿ ಮುಕ್ತ  ಅವಕಾಶ ನೀಡಬೇಕು. ಎಲ್ಲಾ ಮಧ್ಯವರ್ತಿಗಳು ಹಾಗೂ ಹಿತಾಸಕ್ತಿಗಳನ್ನು ಕಾನೂನು ಮುಖಾಂತರ ತಡೆಯಬೇಕು. ಕೃಷಿ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆಯೊಂದನ್ನು ನಿರ್ಮಿಸಿ ದೇಶಿ ಹಾಗೂ ವಿದೇಶಿ ಮಾರುಕಟ್ಟೆಗೆ ಅನುವು ಮಾಡಿಕೊಡಬೇಕು.

2. ಕೃಷಿಯಲ್ಲಿ ನೀರು ಬಳಕೆಯ ಬಗ್ಗೆ ದೂರದರ್ಶಿ ಸೂತ್ರದ ನಿಯಮ ಬೇಕು. ಅತ್ಯಂತ ಹೆಚ್ಚು ನೀರಾವರಿ ಕೇಳುವ ಭತ್ತ ಮತ್ತು ಕಬ್ಬು ಬೆಳೆಗಳನ್ನು ಕೇವಲ ಯಥೇಚ್ಛ ನೀರಿರುವ ಪ್ರದೇಶಗಳಲ್ಲಿ ಮಾತ್ರ ಅನುವು ಮಾಡಬೇಕು. ನೀರಾವರಿ ಯೋಜನೆಗಳನ್ನು ಕಾಲುವೆಗಳ ಬದಲು ಪೈಪ್‍ಗಳ ಮೂಲಕ ಜಾರಿಗೊಳಿಸಬೇಕು.

3. ರೈತರಿಗೆ ಉತ್ತೇಜನಕಾರಿ ಸಹಾಯಧನ ನೀಡುವ ಯೋಜನೆಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೇ ಹಾಕಬೇಕು.

4. ಕೃಷಿಯಲ್ಲಿ ಹೆಚ್ಚಿನ ತಂತ್ರಜ್ಞಾನ ಹೂಡಿಕೆಗೆ ಅನುವಾಗಲು ಸರ್ಕಾರವು ದಾರಿ ತೋರಬೇಕು. ಕುಲಾಂತರಿ ಬೆಳೆಗಳು ಮತ್ತು ಹೊಸ ಬೀಜಗಳಿಗೆ ಬೌದ್ಧಿಕ ಆಸ್ತಿಯ ಹಕ್ಕನ್ನು ನೀಡುವ ನಿಟ್ಟಿನಲ್ಲಿ ಕೆಲಸವಾಗಬೇಕು.

ಮೇಲಿನ ತೆರದಲ್ಲಿ ಈ ಪುಸ್ತಕದಲ್ಲಿ ಚರ್ಚಿತವಾಗಿರುವ ಎಲ್ಲಾ ವಲಯಗಳ ಬಗ್ಗೆಯೂ ಲೇಖಕರು ಸುಧಾರಣೆಗಳ ಲಘು ಪಟ್ಟಿಯೊಂದನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಈ ಪುಸ್ತಕವು ಸಮಸ್ಯೆಯನ್ನು ಆಳವಾಗಿ ವಿಶ್ಲೇಷಿಸುವ ಗೋಜಿಗೆ ಹೋಗದೆ ಸಮಸ್ಯೆಗೆ ತುರ್ತು ಪರಿಹಾರ ಹುಡುಕಲು ನಿಗಾ ವಹಿಸಿದೆ. ಸದ್ಯಕ್ಕೆ ಭಾರತದ ಆರ್ಥಿಕ ಕ್ಷೇತ್ರವನ್ನು ಸುಧಾರಿಸಲು ಇಲ್ಲಿ ಹೆಸರಿಸಿರುವ ಬಹುತೇಕ ಎಲ್ಲಾ ಸುಧಾರಣೆಗಳನ್ನು ಅನುಷ್ಠಾನ ಮಾಡುವ ಅಗತ್ಯವಿದೆ.

ಈ ಪುಸ್ತಕದಲ್ಲಿ ಇಲ್ಲದ ವಿಷಯಗಳು ಹಲವಿದೆ. ಆದರೆ ಇಲ್ಲಿ ಹೆಸರಿಸಿರುವ ಎಲ್ಲಾ ಸಮಸ್ಯೆಗಳು ಹಾಗೂ ಪರಿಹಾರಗಳು ನಮ್ಮ ಗಂಭೀರ ಚರ್ಚೆಗೆ ಗ್ರಾಸವಾಗಬೇಕಿದೆ. ತನ್ನ ಕೊಡುಗೆಯಲ್ಲಿ ಈ ಪುಸ್ತಕವು ಅರ್ಥಶಾಸ್ತ್ರದ ಹಾಗೂ ಅರ್ಥಶಾಸ್ತ್ರಜ್ಞರ ಅಗತ್ಯ ಮತ್ತು ಘನತೆಯನ್ನು ಎತ್ತಿ ಹಿಡಿಯುವಲ್ಲಿಯೂ ಸಾಫಲ್ಯ ಕಂಡಿದೆ.

Leave a Reply

Your email address will not be published.