ಮ್ಯಾನೇಜರ್ ನೇಣೇಸ್ಕುನ್ನಾಡಪೋ!

-ಎಸ್.ಎನ್.ಲಕ್ಷ್ಮೀನಾರಾಯಣ

ಚಾವಣಿಯಲ್ಲಿ ಶೇಂಗಾ ಒಣಹಾಕುತ್ತಿದ್ದ ಕೂಲಿ ಆಳುಗಳಲ್ಲಿ ಒಬ್ಬ ನನ್ನ ಅವತಾರವನ್ನು ನೋಡಿದವನೇ, ಗಾಬರಿಯಿಂದ ”ಬ್ಯಾಂಕ್ ಮ್ಯಾನೇಜರ್ ನೇಣೇಸ್ಕುನ್ನಾಡಪೋ” ಅಂಥ ಅರಚಿಕೊಂಡಿದ್ದಾನೆ. ಉಳಿದವರೂ ನೋಡಿ, ಗಾಬರಿಯಾಗಿ ಶ್ಯಾನುಭೋಗರಿಗೆ ಹೇಳಿದ್ದಾರೆ. ಎಲ್ಲಾ ಧಡಧಡ ಓಡ್ಕಂಡು ನಮ್ಮನೆಯತ್ತ ಧಾವಿಸಿದ್ದಾರೆ. ಮುಂದೆ…?!

“ಪ್ರಭು, ನಿನ್ ಕಾಲರ್ ಸ್ವಲ್ಪ ದಿನ ಕೊಟ್ಟಿರು. ಆಮೇಲ್ ವಾಪಸ್ ಕೊಡ್ತೀನಿ” ಅಂದ ನನ್ ಕಸಿನ್ನು.

ಬೆಳಿಗ್ಗೆ ಎಂಟು ಗಂಟೆಗೇ ಮನೇ ಹತ್ರ ಬಂದಿದ್ದ. ಆರ್ವಿಸಿಇ ಬ್ರಾಂಚ್ನಲ್ಲಿ ಕೆಲಸ ಮಾಡುತ್ತಿದ್ದ ನಾನಾಗ, ನವರಂಗ್ ಥಿಯೇಟರ್ ಸರ್ಕಲ್ ಹತ್ರ ಇದ್ದ ನಮ್ಮಕ್ಕನ ಮನೆಯಲ್ಲಿದ್ದೆ.

“ಯಾಕೆ?”

“ಒಂದ್ಸಲ್ಪ ದಿನ ರಜಾ ತಗೋಬೇಕು. ಅದಕ್ಕೆ”

“ಇದ್ರಿಂದೇನ್ ಉಪ್ಯೋಗ?” ಕುತೂಹಲದಿಂದ ಕೇಳಿದೆ.

“ನಮ್ ಮ್ಯಾನೇಜರ್ ಬಡ್ಡೀ ಮಗ ರಜನೇ ಕೊಡ್ತಿಲ್ಲ. ಇದನ್ನಾಕ್ಕಂಡೋಗಿ ಕತ್ತು ಅಲ್ಲಾಡ್ಸೋಕಾಗಲ್ಲ ಅಂಥ ಹೇಳಿದ್ರೆ ರಜ ಕೊಡ್ಬಹ್ದು. ಅದಕ್ಕೇ.”

ಅರೆ! ಒಳ್ಳೆ ಉಪಾಯ ಅಂತAದು ಕೊಟ್ಟೆ. ತಗೊಂಡೋದವನು, ವಾರದ ನಂತರ ಸಿಕ್ದ.

“ಕೊಟ್ನಾ ನಿಮ್ ಮ್ಯಾನೇರ‍್ರು ರಜಾನಾ” ಎಂದು ಕೇಳಿದವನಿಗೆ, ತನ್ನ ಕಾಲರ್‌ಲೆಸ್ ಕತ್ತನ್ನು ಅಲ್ಲಾಡಿಸುತ್ತ, “ಕೊಟ್ಟ, ಕೊಡ್ದಲೇ? ಕಾಲರ್ ನೋಡಿಯೇ ಸುಸ್ತಾಗ್ಬಿಟ್ಟ. ಲೇಡಿ ಸ್ಟಾö್ಯಫ್ ಸಹ ‘ಅಯ್ಯೋ ಪಾಪ’ ಅಂಥ ಲೊಚಗುಟ್ಟಿದ್ರು. ಎಲ್ರೂ ಏನಾಯ್ತು ಸಾರ್ ಅಂಥ ಕೇಳವ್ರೆ. ಸೀರಿಯಸ್ ಆಗಿ ನೀನು ಹೇಳ್ಕೊಟ್ಟಿದ್ದಲ್ಲ ‘ಸರ್ವೈಕಲ್ ಸ್ಪಾಂಡಿಲೈಟಿಸ್’ (Cervical Spondylitis)  ಅನ್ನೋ ಇಂಗ್ಲೀಷ್ ಪದ ಬಿಟ್ಟೆ ನೋಡು. ಲೈಫಲ್ಲಿ ಮೊಟ್ಟಮೊದಲ ಬಾರಿ ಕೇಳಿದ ಆ ಪದದಿಂದ ಗಾಬರಿ ಬಿದ್ದು, ಇದಕ್ಕೇನ್ ಟ್ರೀಟ್ಮೆಂಟ್ ಅಂಥ ಕೇಳಿದ್ರು. ಸರಿಯಾಗೋತನ್ಕ ಬರೀ ಟ್ರಾಕ್ಷನ್, ಫಿಸಿಯೋಥೆರಪಿ, ಎಲೆಕ್ಟೊçÃಥೆರಪಿ, ಮಸಾಜು, ಅಲ್ಲಾಡ್ಬಾರ್ದು, ಕತ್ತು ತಿರುಗಿಸ್ಬಾರದು, ಬಗ್ಬಾರ್ದು, ಬರೀ ರೆಸ್ಟು ಅಂದೆ. ಆಮೇಲೆ, ಎಲ್ಲಾ ಕೇಳಿಸ್ಕೋತಿದ್ದ ಮ್ಯಾನೇಜರ್ ಹತ್ರ ಹೋಗಿ, ಒಂದ್ವಾರ ರಜಾ ಬೇಕು ಸಾರ್ ಅಂದೆ. ಕಮಕ್ ಕಿಮಕ್ ಅನ್ಲಿಲ್ಲ. ಮುಚ್ಕಂಡ್ಕೊಟ್ಟ” ಎಂದು ತನ್ನ ವಿಜಯವನ್ನು ತಾನೇ ವಂದಿಮಾಗಧನAತೆ ಬಳಬಳ ಹೇಳತೊಡಗಿದ.

“ಏನಾದ್ರೂ ಆಗ್ಲಿ, ನಂಗೊAದ್ ಕಾಲರ್ ಕೊಡ್ಸು” ಅಂದ. ರೆಸಿಡೆನ್ಸಿ ರಸ್ತೆಲಿದ್ದ ಸರ್ಜಿಕಲ್ ಇನ್ಸು÷್ಟçಮೆಂಟ್ ಅಂಗಡಿಯಿAದ ಅವನಿಗೊಂದು ಕಾಲರ್ ತಂದ್ಕೊಟ್ಟೆ. ಅದನ್ನು ಆವಾಗಾವಾಗ ಆಫೀಸಿಗೆ ಹಾಕ್ಕೊಂಡೋಗಿ, ರಜೆ ಸ್ಯಾಂಕ್ಷನ್ ಮಾಡಿಸ್ಕೊಳ್ಳೋದನ್ನೇ ಪಾಠ ಮಾಡ್ಕೊಂಡ್ಬಿಟ್ಟ. ಕಾಲರ್‌ಧಾರಿಯಾಗಿದ್ದ ನನ್ನ ಜೊತೆ ಅವನೊಂದು ಬಾರಿ ಬಿಟಿಎಸ್ ಬಸ್ಸಿನಲ್ಲಿ ಬಂದಿದ್ದನAತೆ. ಅಲ್ಲಿ, ನನ್ನ ಭಯಂಕರ, ದಯನೀಯ ಅವತಾರ ನೋಡಿ, ಈ ಮನುಷ್ಯಂಗೆ ಆಗಬಾರದ್ದೇನೋ ಆಗಿದೆ ಎಂದುಕೊAಡು ಹೆಂಗುಸ್ರು-ಮುದುಕರು-ಮಕ್ಕಳಾದಿಯಾಗಿ ತಮ್ಮ ಸೀಟ್ ಅನ್ನು ನನಗೆ ಬಿಟ್ಕೊಟ್ಟಿದ್ದನ್ನು ನೋಡಿದಾಗ, ಅವನಿಗೆ ಈ ಅದ್ಭುತ ಪ್ಲಾನ್ ಹೊಳಿತಂತೆ!

ನನಗೆ ಈ ಕತ್ನೋವ್ ಬಂದಿದ್ದೇ ಯದ್ವಾತದ್ವಾ ವ್ಯಾಯಾಮ ಮತ್ತು ಬ್ಯಾಂಕಿನ ಕೆಲಸದ ಶೈಲಿಯಿಂದ. ತಡೆಯಕ್ಕಾಗದೆ, ಸೈಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತಗೊಂಡೆ. ‘ಆಫೀಸ್ಗೆ ರಜೆ ಹಾಕಂಗಿಲ್ಲ, ಬೇರೆ ಏನಾದ್ರೂ ದಾರಿತೋರ್ಸಿ ಡಾಕ್ಟೆçà ಅಂದಾಗ, this is a gift of the so-called civilization, common nowadays, with the rich & old  ಅಂಥ ಹೇಳ್ತಾ, ಕೆಲ ವ್ಯಾಯಾಮಗಳನ್ನು ಮಾಡಲು ಮತ್ತು ಕಾಲರ್ ಧರಿಸಲು ಸಲಹೆ ಕೊಟ್ಟಿದ್ರು ಡಾಕ್ಟುç. ನನಗೇನಾಶ್ಚರ್ಯ ಆಯ್ತು ಅಂದ್ರೆ ನಾನು ರಿಚ್ಚೂ ಆಗಿರ್ಲಿಲ್ಲ, ಓಲ್ಡೂ ಆಗಿರ್ಲಿಲ್ಲ. Not even married! ಡಾಕ್ಟುç ಅಪಾರ್ಥ ಮಾಡ್ಕಂಡಿದ್ರಿAದ ಕತ್ನೋವ್ ಇದ್ರೂ ಭಾರವಾದ ಬಿಲ್ ಎತ್ಬೇಕಾಯ್ತು!

ಆಗ, ಈ ಕಾಲರ್ ಹಾಕುವವರು ಲಕ್ಷಕ್ಕೊಬ್ಬರಿದ್ದರೇನೋ. ಒರೊಟೊರಟಾಗಿ ತಯಾರಿಸುತ್ತಿದ್ದರು. ಎಡಬಲಗಳೆರಡೂ ಕಡೆ ಸಣ್ಣ ಸಣ್ಣ ಸ್ಟೀಲ್ ಪಟ್ಟಿಗಳು, ಸ್ಪಂಜಿನ ತಳವಿರುವ ರೆಕ್ಸಿನ್ನು, ಫೈಬರ್ ತುಂಡುಗಳು, ವೆಲ್ಕೊçà ಪಟ್ಟಿಗಳಿಂದ ತಯಾರಿಸಿದ ಆ ಕಾಲರ್ ಹಾಕಿಕೊಂಡರೆ ಕತ್ತು ಸ್ಥಾವರ! ಪಕ್ಕದ ವಸ್ತುವನ್ನೇನಾದರೂ ನೋಡಬೇಕಿದ್ದರೆ, ಇಡೀ ದೇಹವನ್ನೇ ತಿರುಗಿಸಬೇಕಿತ್ತು. ಚಲನೆ ಎಷ್ಟು ನಿರ್ಬಂಧಿಸಲ್ಪಡುತ್ತಿತ್ತು ಅಂದ್ರೆ, ಪಕ್ಕದಲ್ಲಿ ಕ್ಲಿಯೋಪಾತ್ರಾ ನಡ್ಕೊಂಡೋದ್ರೂ, ನಡು ತಿರುಗಿಸೇ ನೋಡ್ಬೇಕು. ಕತ್ತು ತಿರುಗಿಸಂಗಿಲ್ಲ. ಪೂರ್ತಿ ದೇಹ ತಿರುಗಿಸುವಷ್ಟರಲ್ಲಿ, ಅವಳು ಜೂಲಿಯಸ್ ಸೀಝರನನ್ನೋ, ಮಾರ್ಕ್ ಆಂಟೋನಿಯನ್ನೋ ಸೇರಿಬಿಡುತ್ತಿದ್ದಳು! ಈಗ, ಈ ಕಷ್ಟ ನಿವಾರಿಸಲೆಂಬOತೇ, ನವನವೀನ ರೀತಿಯ ಕಾಲರುಗಳು ಮಾರುಕಟ್ಟೆಗೆ ಬಂದಿವೆ. ಬಹುಶಃ ಎಲ್ಲರ ಮನೆಯಲ್ಲೂ ಒಬ್ಬರಿಗಾದರೂ ಈ ಕತ್ನೋವ್ ಇದ್ದು, ಎಲ್ಲೆಂದರಲ್ಲಿ ಹತ್ತಾರು ಕಾಲರ್‌ಧಾರಿಗಳನ್ನು ಕಾಣಬಹುದು. ಅಂದರೆ, 25-30 ವರ್ಷಗಳಲ್ಲಿ So called civilization, ಬಹು ದೊಡ್ಡಕಾಣಿಕೆಯನ್ನೇ ನೀಡಿದೆ!

ಈ ಕತ್ನೋವು ಸ್ವಲ್ಪ ವಾಸಿಯಾದ ಸಮಯದಲ್ಲೇ ಬಾಗೇಪಲ್ಲಿ ತಾಲ್ಲೂಕಿನ ಆಂಧ್ರ ಗಡಿಯ ಪಾತಪಾಳ್ಯವೆಂಬ ಹಳ್ಳಿಗೆ ವರ್ಗವಾಗಿಬಿಡ್ತು. ಅಲ್ಲೆಲ್ಲಾ ಕನ್ನಡ ಮಿಶ್ರಿತ ತೆಲುಗು. ಮದುವೆಯಾಗುವ ಸೂಚನೆಯಿದ್ದುದರಿಂದ ಮೊದಲನೇ ಮಹಡಿಯಲ್ಲಿದ್ದ ಒಂದು ಪುಟ್ಟ ಮನೆ ಬಾಡಿಗೆಗೆ ತೆಗೆದುಕೊಂಡಿದ್ದೆ. ಕೆಳಗಿನ ಮನೆಯಲ್ಲೇ ಇದ್ದ ಓನರ್ ತುಂಬಾ ಒಳ್ಳೆ ಶೆಟ್ರು. “ಚೂಡಂಡಿ. ಮೀರು ನಾನ್ವೆಜ್ ಚೇಯ್ಕೂಡ್ದು. ಅಯ್ತೆ ಮನೆ ಬಾಡ್ಗೆಗಿಸ್ತಾಮು” ಎಂದು ಕಂಡಿಷನ್ ಹಾಕೇ ಬಾಡಿಗೆಗೆ ಕೊಟ್ಟಿದ್ರು. ಓನರಮ್ಮ ಕೂಡಾ ಒಳ್ಳೆಯವರು. ಏನೇ ತಿಂಡಿ ಮಾಡಿದ್ದರೂ ನನಗೊಂದು ಪಾಲು ಇಟ್ಟಿರುತ್ತಿದ್ದರು. ಬ್ಯಾಂಕಿನಿAದ ಹಿಂತಿರುಗಿದ್ದು ಕಂಡರೆ, ‘ತೀಸ್ಕೋಂಡಿ’ ಅಂಥ ಕೊಡ್ತಿದ್ರು. ನಾನೂ ಅಲ್ಲಿರುವವರೆಗೆ ಯಾವುದೇ ಕಾರಣಕ್ಕೂ ಕುರಿ-ಕೋಳಿ ಬೇಯಿಸಲಿಲ್ಲ. ಆದರೆ, ನನಗೆ ಮುಗ್ಗುರು ಶಿಷ್ಯುಲು. ಒಬ್ಬ ಬಣಜಿಗ, ಇನ್ನೊಬ್ಬ ಮುಸ್ಲಿಮ್ಮು, ಮತ್ತೊಬ್ಬ ಬ್ರಾಹ್ಮಣ ಹುಡುಗರು. ಗಫೂರ್ ಮನೆಯಿಂದ, ಸಂಜೆ ಹೊತ್ತು ಒಳ್ಳೆ ಕೋಳಿ-ಕುರಿ ಐಟಮ್ ಮಾಡಿಸ್ಕಂಡು ಬರ್ತಿದ್ರು. ಎಲ್ರೂ ಬಡಿದು ತಿಂದು ಸೈಲೆಂಟಾಗಿ ತ್ಯಾಜ್ಯ ವಿಲೇವಾರಿ ಮಾಡ್ತಿದ್ವಿ! ಆ ಮೂವರಲ್ಲಿ, ಬ್ರಾಹ್ಮಣರ ಹುಡುಗ ಈಗ ಬೆಂಗಳೂರಿನ ಒಂದು ಪ್ರತಿಷ್ಠಿತ ದೇವಸ್ಥಾನದ ಪೂಜಾರಿ!

ಹೀಗೇ ಸುಖವಾಗಿರಬೇಕಾದರೆ, ಮತ್ತೆ ಶುರುವಾಯ್ತು ಸ್ಪಾಂಡಿಲೈಟಿಸ್!

ಮೂಳೆ ತಜ್ಞರ ಹತ್ತಿರ ಟ್ರಾಕ್ಷನ್ ತಗೋಳ್ಳೋದು ದುಬಾರಿಯಾಗಿದ್ದುದೂ, ಬ್ಯಾಂಕಿಗೆ ರಜೆ ಹಾಕೋದೂ ಕಷ್ಟ ಆಗಿದ್ದರಿಂದ, ಅಲ್ಲಿಇಲ್ಲಿ ವಿಚಾರಿಸಿ ಒಂದು ಪೋರ್ಟಬಲ್ ಟ್ರಾಕ್ಷನ್ ಯೂನಿಟ್ ಅನ್ನೇ ಕೊಂಡೆ. ಅದನ್ನು ಬಾಗಿಲಿಗೆ ಸಿಕ್ಕಿಸಿ, ಡಾಕ್ಟರ್ ಸಲಹೆಯಂತೆ ನಿರ್ದಿಷ್ಟ ತೂಕದ ಮರಳಿನ ಚೀಲವನ್ನು ಚಕ್ರರಾಟೆಗೆ ಮತ್ತು ನೈಲಾನ್ ದಾರಗಳ ಸಹಾಯದಿಂದ ಬೆನ್ನ ಹಿಂದೆ ಸಿಕ್ಕಿಸಿ, 30 ರಿಂದ 45 ನಿಮಿಷ ಕುರ್ಚಿಯ ಮೇಲೆ ಕೂರಬೇಕಿತ್ತು. ಕತ್ತಿನ ಹಿಂದಿನ ಡಿಸ್ಕುಗಳ ಮಧ್ಯೆ ಸಿಲುಕಿದ ನರ ರಿಲೀಸ್ ಆಗಿ ಕತ್ನೋವ್ ಕಮ್ಮಿಯಾಗುತ್ತಿತ್ತು. ಇದನ್ನು ವಾರಗಟ್ಟಲೆ ಬೆಳಿಗ್ಗೆ-ಸಾಯಂಕಾಲ ಮಾಡಬೇಕಿತ್ತು. ಟ್ರಾಕ್ಷನ್ ಸ್ಥೂಲವಾದ ವಿವರವಿದು (ಚಿತ್ರ ನೋಡಿ).

ಒಂದು ಬೆಳಿಗ್ಗೆ, ಯೂನಿಟ್ ಅನ್ನು ಮುಂಬಾಗಿಲಿಗೆ ಸಿಕ್ಕಿಸಿ, ಕಣ್ಣು ಮುಚ್ಚಿಕೊಂಡು ಟ್ರಾಕ್ಷನ್ ತಗೋಳ್ತಾ ಇದ್ದೆ. ಕತ್ತು ನೂರು ಪರ್ಸೆಂಟ್ ಸ್ಥಿರ-ಸ್ಥಾವರ. ಮುಂದಿದ್ದ ಶ್ಯಾನುಭೋಗರ ಮನೆ ಚಾವಣಿಯಲ್ಲಿ ಶೇಂಗಾ ಒಣಹಾಕುತ್ತಿದ್ದ ಕೂಲಿ ಆಳುಗಳಲ್ಲಿ ಒಬ್ಬ ನನ್ನ ಅವತಾರವನ್ನು ನೋಡಿದವನೇ, ಗಾಬರಿಯಿಂದ “ಬ್ಯಾಂಕ್ ಮ್ಯಾನೇಜರ್ ನೇಣೇಸ್ಕುನ್ನಾಡಪೋ” ಅಂಥ ಅರಚಿಕೊಂಡಿದ್ದಾನೆ. ಉಳಿದವರೂ ನೋಡಿ, ಗಾಬರಿಯಾಗಿ ಶ್ಯಾನುಭೋಗರಿಗೆ ಹೇಳಿದ್ದಾರೆ. ಎಲ್ಲಾ ಧಡಧಡ ಓಡ್ಕಂಡು ನಮ್ಮನೆಯತ್ತ ಧಾವಿಸಿದ್ದಾರೆ. ಮುಂದೆಯೇ ರಂಗೋಲಿ ಹಾಕುತ್ತಿದ್ದ ಶೆಟ್ರಮ್ಮ ಏಮಿ? ಏಮಾಯಿಂದಿ? ಅಂದಿದ್ದಾರೆ. “ಮೀ ಮ್ಯಾನೇರ‍್ರು ನೇಣೇಸ್ಕುನ್ನಾಡಮ್ಮ” ಅಂತ ತೆಲುಗು ಮಿಶ್ರಿತ ಕನ್ನಡದಲ್ಲಿ ಕೂಗುತ್ತ ಮೇಲೆ ಹತ್ತಿ ಬಂದಿದ್ದಾರೆ.

“ಅಯ್ಯೋ ದೇವುಡಾ”- ಅಂತ ಇನ್‌ಸ್ಟಂಟ್ ಪ್ರತಿಕ್ರಿಯೆ ಕೊಟ್ಟು ಆ ಅಮಾಯಕ ಹೆಣ್ಣುಮಗಳು ಅಲ್ಲೇ ಕುಸಿದು ಬಿದ್ದು ಅಳೋಕೆ ಶುರುಮಾಡಿಬಿಟ್ಟಿದ್ದಾರೆ. ಬಾಗಿಲಿಗೆ ನೇತಾಕ್ಕಂಡು, ಅಲ್ಲಾಡದೆ, ಕಣ್ಣುಮುಚ್ಚಿ ಕುಳಿತಿದ್ದ ನನ್ನನ್ನು ನೋಡಿ, ಶ್ಯಾನುಭೋಗರು ಮೂಗಿನ ಹತ್ತಿರ ಬೆರಳಿಟ್ಟು ಪರೀಕ್ಷಿಸಿ, ಸಮಾಧಾನಗೊಂಡು, “ಸಾರ್! ಏನಾಯ್ತು ಸಾರ್!” ಎಂದು ಅತಂಕ-ಸAದೇಹ ಮಿಶ್ರ ಮಾಡಿ ಭುಜ ಅಲ್ಲಾಡಿಸಿದರು. ಜೊಂಪಿನಲ್ಲಿದ್ದ ನಾನೂ ಗಾಬರಿಯಿಂದ ಮೇಲೆದ್ದು, ಯೂನಿಟ್ಟನ್ನು ಬಿಚ್ಚುತ್ತ “ನನಗೇನಾಗಿಲ್ಲ. ನಿಮಗೆಲ್ಲ ಏನಾಗಿದೆ” ಎಂದೆ. ಅವರೇಳಿದ ನೇಣಿನಕತೆ ಕೇಳಿ, ನನ್ನ ಕತ್ತಿನ ವ್ಯಥೆ ಹಂಚಿಕೊAಡೆ. ಕಣ್ಣು, ಮೂಗು, ಬಾಯಿ, ಎಲ್ಲೆಲ್ಲೂ ನೀರು ಬರುವಷ್ಟು ನಕ್ಕೆವು. ಆ ಸಣ್ಣ ಹಳ್ಳಿಯಲ್ಲಿ ಈ ವಿಚಾರ ಎಲ್ಲರಿಗೂ ತಿಳಿದುಹೋಯ್ತು. ಕೆಲ ದಿನ, ಜನ ಯಾವ ಕಾರಣಕ್ಕೆ ನಕ್ಕರೂ, ಇದೇ ಕಾರಣಕ್ಕಿರಬೇಕು ಅನಿಸುತ್ತಿತ್ತು!

ಮದುವೆಯಾದ ಮೂರು ವರ್ಷಗಳ ನಂತರ ಕೊಡಿಗೇನಹಳ್ಳಿ ಶಾಖೆಗೆ ವರ್ಗವಾಯ್ತು. ಹೆಂಡತಿ, ಮತ್ತು ಎರಡು ವರ್ಷದ ಮಗನೊಡನೆ ಮನೆ ಖಾಲಿ ಮಾಡಿದ ದಿನ, ಆ ತಾಯಿ ಶೆಟ್ರಮ್ಮ ಸೀರೆ ಸೆರಗಿನಿಂದ ಕಣ್ಣಿರೊರೆಸಿಕೊಳ್ಳುತ್ತ “ಅಪ್ಪುಡಪ್ಪುಡು ವಸ್ತಾನೇ ಉಂಡAಡಿ” ಎಂದು ಹೇಳಿ, ನನ್ನ ಮಗನನ್ನು ಮುದ್ದಿಸಿ, ನನ್ನ ಗಂಟಲುಬ್ಬಿಸಿಬಿಟ್ಟರು; ಕಣ್ಣು ಮಂಜಾಗಿಸಿಬಿಟ್ಟರು. ಭಾವನೆಗಳೆಷ್ಟು ಸುಂದರ, ಮಧುರ! ಕಟ್ಟಲಾದೀತೇ ಬೆಲೆ ಅವಕ್ಕೆ?

ಬ್ಯಾಂಕಲ್ಲಿದ್ರೂ ರೈತಸಂಘದ ಸಾಹಚರ್ಯ ಬಿಡದ ನಾನು, ಫ್ರೆಂಚ್ ಬಿಯರ್ಡ್ ಬಿಟ್ಕಂಡು ರೈತನಾಯಕ ಎನ್.ಡಿ.ಸುಂದರೇಶ್ ಮತ್ತು ಪ್ರೊ.ನಂಜುOಡಸ್ವಾಮಿಯವರ ಜೊತೆ ಹಲವಾರು ಜಿಲ್ಲೆಗಳನ್ನು ಸುತ್ತುತ್ತಿದ್ದೆ. ಸುಂದರೇಶ್ ಕೂಡಾ ಫ್ರೆಂಚ್ ಬಿಯರ್ಡ್ ಬಿಟ್ಟಿದ್ರು. ಅಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಅವರಿಗೂ ನನ್ನಂತೆಯೇ ಸರ್ವೈಕಲ್ ಸ್ಪಾಂಡಿಲೈಟಿಸ್ ಒಕ್ಕರಿಸಿಕೊಂಡುಬಿಟ್ಟಿತ್ತು! ಎಲ್ಲಾ ಕಡೆ ಬುಲ್ಗಾನಿ ಗಡ್ಡ ಬಿಟ್ಕಂಡು, ಕತ್ತಿಗೆ ಕಾಲರ್ ಹಾಕ್ಕೊಂಡು ನಾವಿಬ್ಬರೂ ಟಿನ್ಟಿನ್ ಕಾಮಿಕ್ಸ÷್ನಲ್ಲಿ ಬರೋ ಥಾಮ್ಸನ್ ಅಂಡ್ ಥಾಂಪ್ಸನ್ (Thomson & Thompson) ಎಂಬ ಏಕರೂಪಿ ಪತ್ತೇದಾರರಂತೆ ಓಡಾಡ್ತಿದ್ವು. ಎಷ್ಟೋ ಬಾರಿ ನನ್ನನ್ನೇ ಸುಂದರೇಶ್ ಎಂದು ತಪ್ಪು ತಿಳಿದುಕೊಂಡ ರೈತರು ಕೊಡುತ್ತಿದ್ದ ಮರ್ಯಾದೆಯನ್ನು ಕಾಲರೊಳಗೆ ಸಿಲುಕಿಕೊಂಡಿದ್ದ ಕತ್ತನ್ನು ಹೊರಗೆಳೆದು ಸ್ವೀಕರಿಸುತ್ತಿದ್ದೆ! ಒಮ್ಮೆ ಇಬ್ಬರಿಗೂ ಕತ್ನೋವು ಹೆಚ್ಚಾದಾಗ, ಕುವೆಂಪು ಅವರ ಅಳಿಯಂದಿರೂ, ಸುಂದರೇಶ್ ಅವರ ಹತ್ತಿರದ ನೆಂಟರೂ ಆಗಿದ್ದ ಪ್ರಸಿದ್ಧ ಮೂಳೆತಜ್ಞ ಡಾ.ಕೆ.ಟಿ.ಸುರೇಂದ್ರ ಅವರ ಮನೆಯಲ್ಲೇ ಟ್ರಾಕ್ಷನ್ ಹಾಕಿಸಿಕೊಂಡು, ನಂತರ ಬೆಳಗಾವಿಗೆ ಪ್ರಯಾಣಿಸಿದ್ದೆವು. ಬುಲ್ಗಾನಿ ಗಡ್ಡಧಾರಿಯಾದ ಹೊಸದರಲ್ಲಿ ಒಮ್ಮೆ ಹಾಸನಕ್ಕೂ ಹೋಗಿದ್ದೆ. ಸಣ್ಣ ಮನೆಯಾದ್ದರಿಂದ ನಮ್ಮಣ್ಣ ತಾರನಾಥನ ಜೊತೆಯೇ ಮಲಗಿದ್ದೆ. ಅವನು, ಬೆಳ್ಬೆಳಿಗ್ಗೇನೆ ನಮ್ಮ ತಾಯಿಯೊಡನೆ ಒಂದು ಕಂಪ್ಲೇOಟ್ ಲಾಡ್ಜ್ ಮಾಡ್ದ. “ಅಮ್ಮಾ, ರಾತ್ರಿ ಯಾವುದೋ ಹೋತದ್ ಜೊತೆ ಮಲಕ್ಕಂಡOಗಿತ್ತು ಕಣಮ್ಮಾ!”

ಅದೇ ಸಮಯಕ್ಕೆ ನನಗೆ ಬೆನ್ನು ನೋವು (ಲಂಬ್ರೋ ಸ್ಯಾಕ್ರಲ್ ಸ್ಪಾಂಡಿಲೈಟಿಸ್) ಕೂಡಾ ಬಂದು, ಸೊಂಟಕ್ಕೂ ಒಂದು ಬೆಲ್ಟ್ ಧರಿಸಲಾರಂಭಿಸಿದೆ. ಆಗ, ನನ್ನ ಹಾಸನದ ಸ್ನೇಹಿತರೆಲ್ಲಾ “ಅಲ್ಕಣ್ಲಾ? ಅಷ್ಟೊಂದು ಎಕ್ಸರ್ಸೈಜ್ ಮಾಡ್ತಿಯಾ. ಕತ್ಗೊಂದ್ ಬೆಲ್ಟು, ಸೊಂಟುಕ್ಕೊOದು ಬೆಲ್ಟು ಹಾಕ್ಕೊಂಡೋಡಾಡ್ತೀಯ. ನೆಕ್ಟ್ ಇನ್ಯಾವ್ ಪಾರ್ಟ್ಗಪ್ಪಾ ಬೆಲ್ಟು?!” ಅಂತ ರೇಗಿಸ್ತಿದ್ರು. ಅವರ ಮಾತು ವಿವಿಧಾರ್ಥಗಳನ್ನು ಹೊರಡಿಸುತ್ತಿದ್ದರಿಂದ, ಅವರೊಡನೆ ನಾನೂ ನಕ್ಕು ಹಗೂರಾಗುತ್ತಿದ್ದೆ.

ಕಾಲ ಕಳೆದಂತೆ ಆಸ್ಪತ್ರೆಗಳು, ಡಾಕ್ಟರುಗಳು, ಫಿಸಿಯೋಥೆರಪಿಸ್ಟುಗಳು, ಯೋಗ ಮೇಷ್ಟುçಗಳು ಎಲ್ಲರ ಸಲಹೆ ತೆಗೆದುಕೊಂಡು, ಚರ್ಚೆ ಮಾಡಿ ಕತ್ನೋವ್-ಬೆನ್ನೋವ್ ಸ್ಪೆಷಲಿಸ್ಟ್ ಆಗಿಬಿಟ್ಟಿದ್ದೇನೆ. ಏನೇ ಆಗಲಿ ಹೊಸ ವೈದ್ಯರಿಗಿಂತ ಹಳೇ ರೋಗಿ ಮೇಲು ಅನ್ನೋದನ್ನ ರುಜುವಾತುಪಡಿಸುವ ಹಠ ಸೇರಿಕೊಂಡುಬಿಟ್ಟಿತ್ತು. ಅದರ ಜೊತೆಗೆ, `ಇಂಡಿಯಾ ಟುಡೆ’ ವಾರಪತ್ರಿಕೆಯ 1985ರ ಆವೃತ್ತಿಯೊಂದರಲ್ಲಿ, ಹಿರಿಯ ಪತ್ರಕರ್ತ ರಾಜ್ ಚೆಂಗಪ್ಪ ಅವರ ಸ್ಪಾ÷್ಪಂಡಿಲೈಟಿಸ್ ಬಗೆಗಿನ ಕವರ್ ಸ್ಟೋರಿಯ ಪ್ರಭಾವ ಬೇರೆ. ಯಾರಾದರೂ ಕತ್ನೋವ್-ಬೆನ್ನೋವ್ ಅಂಥ ಬಾಯ್ಬಿಟ್ರೋ ಮುಗೀತ್ ಅವರ ಕಥೆ. ಡೋಂಟ್ ವರಿ ಅಂಥ, ಒಂದು ಪೇರ‍್ರು-ಪೆನ್ನು ಹಿಡಿದು, ಕತ್ತು-ಬೆನ್ನುಗಳ ಹಿಂದಿರುವ ಡಿಸ್ಕ÷್ಗಳ ಒರಟೊರಟು ಚಿತ್ರ ಬರೆದು, ನರಗಳು ಹೇಗೆ ಡಿಸ್ಕ÷್ಗಳ ಮಧ್ಯೆ ಹಾದು ಹೋಗಿರುತ್ತವೆ; ಹೇಗೆ ಮತ್ತು ಏಕೆ ಸಿಲುಕಿಕೊಂಡಿರುತ್ತವೆ ಎಂದು ವಿವರಿಸಿ ಅಟಕಾಯಿಸಿಕೊಂಡುಬಿಡುತ್ತೇನೆ. ನೋವಿಗೆ ಕಾರಣ ಏನು ಎಂಬುದನ್ನೆಲ್ಲಾ ವಿವರವಾಗಿ ಹೇಳಿ, ಅವರತ್ರ ಸ್ವಲ್ಪ ವ್ಯಾಯಾಮವನ್ನೂ ಮಾಡಿಸಿಬಿಡ್ತೇನೆ. ಇದೆಲ್ಲ ಮಾಡುವುದು ಅವರು ತಮ್ಮ ಚಿಕಿತ್ಸಾ ವೆಚ್ಚ ಉಳಿಸಿಕೊಳ್ಳಲಿ ಎಂಬ ಉಪಕಾರ ಮತ್ತು ಸೇವೆ ಬೆರೆತ ನಿಷ್ಕಾಮ ಕಾಳಜಿಯಿಂದ. ಆದರೆ, ಈ ಬಿಟ್ಟಿ ತೊಂದರೆ ಅನುಭವಿಸಿದವರು, ಎಲ್ಲಾದರೂ ಸಿಕ್ಕಾಗ, ನಾನು ಕೇಳುವ ಮೊದಲೇ, “ಹ್ಹ…..ಹ್ಹ….ಹ್ಹ….ಎಲ್ಲಾ ಹುಷಾರಾಯ್ತು ಸಾರ್. ಈಗ ಒಂಚೂರೂ ನೋವಿಲ್ಲ” ಅಂತAದು ಆಂಟಿಸಿಪೇಟರಿ ಬೇಲ್ ಪಡೆದು ಬದುಕಿದೆಯಾ ಬಡಜೀವವೇ ಎಂದು ಪರಾರಿಯಾಗ್ತಿದ್ದಾರೆ.

ಇತ್ತೀಚೆಗೆ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡೋವ್ರಿಗೆ ಗಿರಾಕಿಗಳೇ ಸಿಕ್ತಿಲ್ಲ… ಛೇ!

Leave a Reply

Your email address will not be published.