ಯಡೂರು ಮಹಾಬಲ ಅವರ ನಿಗೂಢ ಟಿಬೆಟ್

ಟಿಬೆಟ್ ಹಾಗೂ ಅದರ ಭಾಗದ ಇತಿಹಾಸವನ್ನು ಲೇಖಕರು ಅನೇಕ ಸಮರ್ಥರ ಬರವಣಿಗೆಗಳನ್ನು ಕ್ರೂಢೀಕರಿಸಿ ನಮ್ಮ ಮುಂದಿಡುತ್ತಾರೆ.ಅದೇ ರೀತಿ ಅರುಣಾಚಲ ಭಾರತಕ್ಕೆ ಸೇರಿದ ವಿಚಾರವನ್ನು ವಿವರಿಸುತ್ತಾರೆ.

ಲೇಖಕರು ಈಶಾನ್ಯ ರಾಜ್ಯಗಳಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದವರು. ಲೋಹಿಯಾ, ಅರುಣಾಚಲ, ಕ್ವಿಟ್ ಇಂಡಿಯಾ, ದೋಕ್ಲಾ -ಇಂಥವು ಕುರಿತು ಸಾವಿರಾರು ಪುಟಗಳ ಒಳಚರಿತ್ರೆಗಳನ್ನು ಬಗೆದು ನಮ್ಮ ಮುಂದಿಟ್ಟಿದ್ದಾರೆ. ಇಂಥದೇ ಮತ್ತೊಂದು ಕೃತಿ 533 ಪುಟಗಳ `ನಿಗೂಢ ಟಿಬೆಟ್’.

`ಟಿಬೆಟನ್ನು ಭೂಮಿಯ ನೆತ್ತಿಭಾಗ ಅಥವಾ ಮೇಲ್ಛಾವಣೆ’ ಎಂದು ವಿವರಿಸುತ್ತಾ ಅದೊಂದು ಕೇವಲ 20 ಅಂಗುಲ ಮಳೆ ಬೀಳುವ ಬಹುತೇಕ ಬೀಳಾಗಿರುವ ನೆಲ ಹೊಂದಿರುವ ಹೊಟ್ಟೆಗಾಗುವಷ್ಟೆ ಬೆಳೆ ಬೆಳೆಯುವ ಕುರಿ ಮೇಯಿಸುವ ಅಲೆಮಾರಿ ಜನಾಂಗವಾಗಿರುವ, ಅನೇಕ ನದಿಗಳು ಹುಟ್ಟಿದರೂ ಝರಿಯಂತೆ ಹರಿದು ಆ ದೇಶಬಿಟ್ಟು ಹರಿದಾಗ ಬಹುದೊಡ್ಡ ನದಿಗಳಾಗುವ ವಿವರಗಳನ್ನು ನೀಡುತ್ತಾರೆ. ಆ ದೇಶ 7ನೇ ಶತಮಾನದವರೆಗೆ ಚರಿತ್ರೆಯಿಲ್ಲದ ನಿಗೂಢ ಜಗತ್ತಾಗಿತ್ತು.

ಮೂಲ ಧರ್ಮ ಬೋನ್. ಅದರ ಸಂಸ್ಥಾಪಕ ಶೆನ್ರಾಬ್ ಮಿವೋಚೆ. ಮೊಗಲ್ ರಾಜರಿಗೆ ಕಪ್ಪ ಒಪ್ಪಿಸುತ್ತಿತ್ತು. 1846ರಲ್ಲಿ ಲಾಹೋರ್ ಮೇಲೆ ಯುದ್ಧ ಮಾಡಿದ ಬ್ರಿಟಿಷರು ಅದರ ವೆಚ್ಚಕ್ಕಾಗಿ ರಣಜಿತ್ಸಿಂಗ್ ನಿಂದ ಜಮ್ಮು ಕಾಶ್ಮೀರ ಪಡೆದರು. ಹಾಗೆಯೇ 1722ರಲ್ಲಿ ಟಿಬೆಟ್ ಬುಡಕಟ್ಟುಗಳ ರಾಜ್ಯ ಚೈನಾ ಆಡಳಿತಕ್ಕೆ ಬಂತು. ಟಿಬೆಟ್ ಭಾಗವಾಗಿದ್ದ ಸಿಕ್ಕಿಂ ಬ್ರಿಟಿಷ್ ವಲಯಕ್ಕೆ ಬಂತು. ಹೀಗೆ ಟಿಬ್ಟ್ ಹಾಗೂ ಅದರ ಭಾಗದ ಇತಿಹಾಸವನ್ನು ಲೇಖಕರು ಅನೇಕ ಸಮರ್ಥರ ಬರವಣಿಗೆಗಳನ್ನು ಕ್ರೂಢೀಕರಿಸಿ ನಮ್ಮ ಮುಂದಿಡುತ್ತಾರೆ. ಅದೇ ರೀತಿ ಅರುಣಾಚಲ ಭಾರತಕ್ಕೆ ಸೇರಿದ ವಿಚಾರವನ್ನು ವಿವರಿಸುತ್ತಾರೆ.

ಅದು ಚೈನಾ ರಕ್ಷಿತ ಪ್ರಭುತ್ವವಾಯಿತು. 1740ರಲ್ಲಿ ದಲಾಯಿ ಲಾಮಾರವರಿಗೆ ಪೂರ್ಣ ಅಧಿಕಾರ ಸಹಾ ನೀಡಲಾಯಿತು. ಈ ದಲೈ ಲಾಮಾಗಳಲ್ಲಿ 14ನೇಯವರೇ ಭಾರತಕ್ಕೆ ಓಡಿ ಬಂದವರು.

ಕಾಶ್ಮೀರದಲ್ಲಿ ಪ್ರಚಲಿತವಿದ್ದ ಬ್ರಾಹ್ಮಿ ಮತ್ತು ಗುಪ್ತಲಿಪಿಗಳ ಆಧಾರದ ಮೇಲೆ ಟಿಬೆಟ್ ಲಿಪಿ ತಯಾರಾದ ಬಗ್ಗೆ ಹೇಳುತ್ತಾರೆ. ಅನಂತರ ಬೌದ್ಧ ಧರ್ಮ ಅಲ್ಲಿ ಬೇರು ಬಿಡಲಾರಂಭಿಸಿದಾಗ ದೇಶವನ್ನು ಧರ್ಮದ ಹೆಸರಿನಲ್ಲಿ ವಹಿಸಿಕೊಂಡ ಲಾಮಾಗಳು ಚೈನಾಕ್ಕೆ ಗುರುಸ್ಥಾನದಲ್ಲಿದ್ದರು. ಬಲಿಷ್ಠ ಆಡಳಿತಗಾರರಾಗದ ಪುರೋಹಿತ ಸ್ಥಾನದಲ್ಲಿದ್ದರು. ಭೌಗೋಳಿಕವಾಗಿ ಚಾರಿತ್ರಿಕವಾಗಿ ಶಿಷ್ಯ ಚೈನಾದವರೊಡನೆ ಅನ್ಯೋನ್ಯವಾಗಿದ್ದರು. ನೆಂಟಸ್ಥಿಕೆ ಸುಗಮವಾಗಿ ನಡೆಯುತ್ತಿತ್ತು. 1720ರಲ್ಲಿ ಚೈನಾದ ಚಕ್ರಾಧಿಪತ್ಯದ ಭಾಗವಾಯಿತು ಟಿಬೆಟ್. ಅದು ಚೈನಾ ರಕ್ಷಿತ ಪ್ರಭುತ್ವವಾಯಿತು. 1740ರಲ್ಲಿ ದಲಾಯಿ ಲಾಮಾರವರಿಗೆ ಪೂರ್ಣ ಅಧಿಕಾರ ಸಹಾ ನೀಡಲಾಯಿತು. ಈ ದಲೈ ಲಾಮಾಗಳಲ್ಲಿ 14ನೇಯವರೇ ಭಾರತಕ್ಕೆ ಓಡಿ ಬಂದವರು. ಇದು ಅಮೆರಿಕೆಯ ಸಿ.ಐ.ಎ. ನೆರವನ್ನು ಪಡೆಯಲು ಹೋಗಿ ಸನ್ಯಾಸಿಗಳು ಮುಗ್ಗರಿಸಿದ ಚರಿತ್ರೆ. ಅಮೆರಿಕಾ ಚೈನಾ ಸಮತಾವಾದ ವಿರುದ್ಧ ಶೀತಲ ಯುದ್ಧಕ್ಕೆ ಟಿಬೆಟ್ ಸನ್ಯಾಸಿಗಳ ಕೈಗೆ ಬಂದೂಕು ನೀಡಿ ಸಹಕರಿಸಿದ ಹುನಾರ.

ಲೇಖಕರು ಟಿಬೆಟ್ ಧರ್ಮವು ಅನೇಕ ಮೌಢ್ಯಗಳನ್ನು ತುಂಬಿಕೊಂಡಿದ್ದ ವಿಚಾರವನ್ನು ಫುಟ್ಬಾಲ್ ಆಡಿದರೆ ಬುದ್ಧ ಗುರುವಿನ ತಲೆಗೆ ಒದ್ದಂತೆ ಎನ್ನುವ ನಂಬಿಕೆಯನ್ನು ಇಟ್ಟುಕೊಂಡಿದ್ದ ದೇಶವೆಂದು ಹೇಳುತ್ತಾರೆ. ಚೈನಾದ 1912ರ ಕ್ರಾಂತಿ ರಾಜಪ್ರಭುತ್ವವನ್ನು ಕೊನೆಗಾಣಿಸಿದಾಗಲೂ ಚೈನಾ ಟಿಬೆಟನ್ನು ಗುರುಸ್ಥಾನದಲ್ಲಿ ತನ್ನ ದೇಶದ ಅವಿಭಾಜ್ಯ ಅಂಗವೆಂದೇ ಭಾವಿಸಿತ್ತು. ಹಾಗಾಗಿ ಅಂತರಾಷ್ಟ್ರೀಯ ಮಾನ್ಯತೆ ದೊರೆಯಲೇ ಇಲ್ಲ. 1914ರ ಅನಂತರ ಸಿಮ್ಲಾ ಒಪ್ಪಂದಗಳು ಏರ್ಪಟ್ಟಾಗಲೂ ಬ್ರಿಟಿಷರು ಟಿಬೆಟ್ ಆಡಳಿತಗಾರರನ್ನು ಚೈನಾ ನೇತಾರರನ್ನು ಉದಾಸೀನ ಮಾಡಿ ಮೆಕ್ ಮೋಹನ್ ಗಡಿಯನ್ನು ಅಂದಾಜಿನಲ್ಲು ಭೂಪಟದ ಮೇಲೆ ನಿರ್ಧಾರ ಮಾಡಿದ ವಿಚಾರಗಳೆಲ್ಲವೂ ಈ ಪುಸ್ತಕದಲ್ಲಿ ಹಾಗೂ `ಅವಿಸ್ಮರಣೀಯ ಅರುಣಾಚಲ’ ಎಂಬ ಇದೇ ಲೇಖಕರ ಪುಸ್ತಕದಲ್ಲಿ ಸಿಗುತ್ತವೆ.

ಈ ಎಲ್ಲದರ ಅವ್ಯವಸ್ಥೆಯ ಸ್ವರೂಪವೇ ಇಂದಿನ ಚೈನಾ ಭಾರತ ಗಡಿ ವಿವಾದ. ಒಂದು ಹಂತದಲ್ಲಿ ಚೈನಾವು ಟಿಬೆಟ್‍ನಿಂದ ತೆಗೆದುಕೊಂಡ ಸಿಕ್ಕಿಂ, ಡಾರ್ಜಲಿಂಗ್, ಭೂತಾನ್, ತವಾಂಗ್, ನೇಫಾ (ಅರುಣಾವಲ) ಇತರೆ ಪ್ರದೇಶಗಳೆಲ್ಲವನ್ನು ಹಿಂದಕ್ಕೆ ಕೇಳಿದ್ದುಂಟು. ಇವೆಲ್ಲವೂ ಈ ಪುಸ್ತಕದಲ್ಲಿ ದಾಖಲಾಗಿವೆ.

ಇದು ಏನೇ ಇರಲಿ ಪ್ರಸ್ತುತ ಮಹಾಬಲ ಅವರ ಪುಸ್ತಕವು ಚೈನಾ-ಟಿಬೆಟ್-ಭಾರತ ಕುರಿತು ಬಹು ಮಾಹಿತಿ ನೀಡುವ ಕೋಶದಂತಿದೆ.

ಟಿಬೆಟನ್ನು ಅದರ ಅರಾಜಕತೆಯನ್ನು ಕಿತ್ತುಕೊಂಡ ಚೈನಾ ಒಂದು ಹಂತದಲ್ಲಿ ಆಕ್ಟ್ರಾಯ್ ಚಿನ್ ಎಂಬ ಮರಳುಗಾಡನ್ನು ಟಿಬೆಟ್ ಹಾಗೂ ಕ್ಲಿನ್ ಜಿಯಾಂಗ್ ಕೊಂಡಿಯಾಗಿರುವುದರಿಂದ ಇತ್ತೀಚೆಗೆ ಭಾರತದೊಡನೆ ಸಂಧಾನದಲ್ಲಿ ಮುಂದಿಟ್ಟಿದ್ದನ್ನು ಹೊರ ಚರಿತ್ರೆಯಿಂದ ಅರಿತುಕೊಳ್ಳಬಹುದು. ಇದು ಏನೇ ಇರಲಿ ಪ್ರಸ್ತುತ ಮಹಾಬಲ ಅವರ ಪುಸ್ತಕವು ಚೈನಾ-ಟಿಬೆಟ್-ಭಾರತ ಕುರಿತು ಬಹು ಮಾಹಿತಿ ನೀಡುವ ಕೋಶದಂತಿದೆ. `ಬ್ರಿಟಿಷ್ ಶತಮಾನಗಳು ಮುಗಿದವು ಅಮೆರಿಕಾ ಶತಮಾನ ಪ್ರಾರಂಭವಾಗಿದೆ’ (ಪು 213) ಎಂಬ ಚರಿತ್ರೆ ಹೇಳುವ ಲೇಖಕರು ಉಳ್ಳವರು ಶಕ್ತಿವಂತರು ಹೇಗೆ ಪರದೇಶದೊಳಗೆ ಕಾಲಿಟ್ಟು ಆಟವಾಡಿಸಬಲ್ಲರು ಎಂಬ ಸತ್ಯವನ್ನು ಸಾದರಪಡಿಸುತ್ತ ಹೋಗುತ್ತಾರೆ.

‘ರಸ್ತೆಗಳು ದೇಶದ ಅಂದವನ್ನು ಕೆಡಿಸಿ ದೈವಗಳಿಗೆ ಸಿಟ್ಟು ಬರಿಸುತ್ತವೆ (ಪು 224) ಎಂದು ನಂಬುವ ಆಧುನಿಕತೆಗೆ ಹಿಮ್ಮುಖ ಹಾಕುವ ಟಿಬೆಟ್ ಆಳ್ವಿಕೆಯಲ್ಲಿ ಚೈನಾವನ್ನೆ ನಂಬಿತ್ತು. ನಂಬಿದ ಟಿಬೆಟ್ ಲಾಮಾಗಳು ಹೊರಶಕ್ತಿಗಳಿಗೆ ಬಲಿಯಾಗಿದ್ದುಂಟು. 1ನೇ ಅಕ್ಟೋಬರ್ 1919 ರಲ್ಲಿ ಚಿಯಾಂಗ್ ಕೈ ಶೇಕ್ ಸರ್ಕಾರ ಉರುಳಿ ಕಮ್ಯೂನಿಸ್ಟ್ ಸರ್ಕಾರ ಚೈನಾದಲ್ಲಿ ಬೇರೂರಿದಾಗ ಟಿಬೆಟ್ ಬೇರೆಯಾಗಲು ಅನೇಕ ಪ್ರಯತ್ನ ಮಾಡುತ್ತದೆ. ಅಮೆರಿಕಾದಂತಹ ಕುತಂತ್ರಕ್ಕೂ ಬಲಿಯಾಗುತ್ತದೆ.

ಆ ಸಂದರ್ಭದಲ್ಲಿ ಚೈನಾವು ಟಿಬೇಟಿನ ವಿಮೋಚನೆ ಎಂದರೆ ಭಾರತವು ಟಿಬೆಟ್‍ನ ಆಕ್ರಮಣ ಎಂದು ಕರೆಯುತ್ತದೆ. ರಷ್ಯಾ ತನ್ನ ವಿಟೋ ಚಲಾಯಿಸಿ ಚೈನಾ ಪರ ತಡೆ ಒಡ್ಡಿದ್ದುಂಟು. ಟಿಬೆಟ್ ಮಾವೋತ್ಸೆ ತುಂಗ್ ಅವರಿಗೆ ಪತ್ರ ಬರೆದು ಸ್ವಾಯತ್ತತೆ ಬಯಸಿದ್ದುಂಟು. ಇದೆಲ್ಲವನ್ನು ಚೈನಾ ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ಅಷ್ಟರಲ್ಲಿ ಆಗಲೇ ಸಮತಾವಾದಕ್ಕೂ ಅಮೆರಿಕಾ ಪ್ರಜಾರಾಜ್ಯಕ್ಕೂ ತಿಕ್ಕಾಟ ಪ್ರಾರಂಭವಾಗಿತ್ತು. 14ನೇ ಮಾರ್ಚ್ 1959ರಲ್ಲಿ ನರ್ಬುಲಿಂಗ್ ಅರಮನೆಯನ್ನು ಮುತ್ತಿಗೆ ಹಾಕಿದಾಗ ದಲೈಲಾಮ ಭಾರತ ಸೇರಿದ್ದುಂಟು. ನೆಲೆತಪ್ಪಿದ ಟಿಬೆಟಿಗರು ಭಾರತದಲ್ಲಿ ಆಶ್ರಯ ಪಡೆದಿರುವುದುಂಟು. ಇವೆಲ್ಲ ಚಾರಿತ್ರಿಕ ಸಂಗತಿಗಳನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.

`ಕಮಲದಲ್ಲಿರುವ ಆಭರಣ’ ಎಂದು ನೆಹರು ಸರ್ಕಾರ ದಲೈಲಾಮಾರನ್ನು ಬರಮಾಡಿಕೊಂಡ ವಿಚಾರವನ್ನು ಲೇಖಕರು ಹೇಳುತ್ತ ಶೀತಲ ಯುದ್ಧದಲ್ಲಿ ಟಿಬೆಟಿಗರು ಅನಾಥರಾದ ವಿಚಾರವನ್ನು ತಿಳಿಸುತ್ತಾರೆ. ಇದೆಲ್ಲವನ್ನು ಸಮರ್ಥಿಸಿಕೊಳ್ಳಲು ದಲೈ ಲಾಮರಿಗೆ ನೊಬೆಲ್ ನೀಡಿದ ಹುನ್ನಾರವನ್ನು ಸಹಾ ಲೇಖಕರು ನಮ್ಮ ಮುಂದಿಡುತ್ತಾರೆ. 1997ರಲ್ಲಿ ತೈವಾನ್ಗೆ ಹೋದ `ದಲೈ ಲಾಮಾ ಬಹಿರಂಗವಾಗಿ ತಾವು ಟಿಬೆಟ್ ಚೀನಾದ ಒಂದು ಭಾಗ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ’ ಎಂಬ ವಿಚಾರವನ್ನು ಸಹಾ ಲೇಖಕರು ಮುಂದಿಡುತ್ತಾರೆ.

Leave a Reply

Your email address will not be published.