ರಾಜಕೀಯ ಪಕ್ಷಗಳು ಜಾತಿಪ್ರಭಾವ ಹೆಚ್ಚಿಸುತ್ತಿವೆಯೇ..? ಜಾತಿಪ್ರಭಾವ ರಾಜಕೀಯ ಕುಲಗೆಡಿಸುತ್ತಿದೆಯೇ..?

ಇತ್ತೀಚಿನ ಘಟನೆಗಳು ಜಾತ್ಯತೀತ ಬಯಕೆಗೆ ವ್ಯತಿರಿಕ್ತವಾಗಿ ನಡೆಯುತ್ತಿವೆ. ಜಾತಿ-ಉಪಜಾತಿಗಳಿಗೊಂದು ಮಠ; ಆ ಮಠಕ್ಕೊಬ್ಬ ಮಠಾಧಿಪತಿ; ಆ ಮಠಾಧಿಪತಿಯ ಜೋರು, ದರ್ಬಾರು, ಎಚ್ಚರಿಕೆ ಹಾಗೂ ಬ್ಲಾಕ್‌ಮೇಲ್ ತಂತ್ರಗಾರಿಕೆಗಳು ಎಲ್ಲೆ ಮೀರಿ ನಿಂತಿವೆ. ಎಲ್ಲ ಜಾತಿ ಸಂಘಟನೆಗಳೂ ಹೆಚ್ಚಿನ ಮೀಸಲಾತಿ, ವರ್ಗ-ಪ್ರವರ್ಗ, ನಿಗಮ-ಮಂಡಳಿಗಳ ‘ಹಕ್ಕೊತ್ತಾಯ’ ಮಂಡಿಸುತ್ತಿವೆ. ಮೀಸಲಾತಿ ಬೆಂಕಿಗೆ ತುಪ್ಪ ಸುರಿಯುವಂತೆ ಸರ್ಕಾರಗಳು ಜಾತಿಗೊಂದು ನಿಗಮ-ಹಣ ವಿಂಗಡಣೆ-ಉತ್ಸವ ಘೋಷಿಸುತ್ತಿವೆ. ಹೀಗೇಕೆ ಆಗುತ್ತಿದೆ..?

  • ಆಧುನಿಕತೆ ಮತ್ತು ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿರುವ ಈ 21ನೇ ಶತಮಾನದಲ್ಲಿ ಜಾತಿಯಲ್ಲಿ ಗುರುತಿಸಿಕೊಳ್ಳುವಿಕೆ ಹಾಗೂ ಜಾತಿಪ್ರಭಾವ ಹೆಚ್ಚುತ್ತಿದೆಯೇ..? ಇದು ಹೌದಾದರೆ ಇದಕ್ಕೆ ಕಾರಣಗಳೇನು..?
  • ಈ ಜಾತಿಪ್ರಭಾವ ಪ್ರತಿನಿಧಿಸುತ್ತಿರುವ ವ್ಯಕ್ತಿಗಳು, ಸಂಘಟನೆಗಳು ಹಾಗೂ ಮಠಮಾನ್ಯರ ಉದ್ದೇಶವಾದರೂ ಏನು..? ಈ ಜಾತಿಪ್ರಭಾವ ನಮ್ಮ ರಾಜಕೀಯವನ್ನೂ ಕೆಡಿಸುತ್ತಿದೆಯೇ..?
  • ಅಥವಾ, ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿವಿಂಗಡಣೆಯ ಕುಮ್ಮಕ್ಕು ನೀಡುತ್ತಿವೆಯೇ..? ಇದು ಹೌದಾದರೆ ಈ ರಾಜಕೀಯ ವ್ಯಕ್ತಿಗಳ ಸ್ವಹಿತಾಸಕ್ತಿಯ ಬಣ್ಣ ಬಯಲು ಮಾಡುವುದು ಹೇಗೆ..?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದ ಭಾಗವಾಗಿ ಈ ಸಂಚಿಕೆಯ ಮುಖ್ಯಚರ್ಚೆಯನ್ನು ಸಂಯೋಜಿಸಿದ್ದೇವೆ.

Leave a Reply

Your email address will not be published.