ರಾಷ್ಟಿಯ ನಾಯಕತ್ವ ದೂಷಿಸಬೇಕಿಲ್ಲ

-ವಿ.ಆರ್.ಸುದರ್ಶನ್, ಮಾಜಿ ಸಭಾಪತಿಗಳು.

ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬುದು ಒಂದು ರಾಜಕಾರಣದ ಭಾಷೆಯೇ ಹೊರತು ಪ್ರಜಾಪ್ರಭುತ್ವದ ಭಾಷೆಯಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ವಿಚಾರಧಾರೆಗಳು, ಸಿದ್ಧಾಂತಗಳು ಮತ್ತು ಅಸ್ತಿತ್ವ ಇರುತ್ತದೆ.

ಆಡಳಿತ ಪಕ್ಷ ಎಷ್ಟು ಮುಖ್ಯವೋ ವಿರೋಧ ಪಕ್ಷವೂ ಅಷ್ಟೇ ಮುಖ್ಯವಾಗಿರುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿರೋಧ ಪಕ್ಷವೆಂದರೆ ಅದು ಜನರ ಧ್ವನಿಯಾಗಿರುತ್ತದೆ. ಆಡಳಿತ ಪಕ್ಷದ ಜವಾಬ್ದಾರಿ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸುವುದಾಗಿದೆ.

ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂಬುದು ಅಥವಾ ಬಿಜೆಪಿಯನ್ನು ನಿರ್ನಾಮ ಮಾಡುತ್ತೇವೆ ಎಂಬುದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗುತ್ತದೆ. ಕಾಂಗ್ರೆಸ್ ಪಕ್ಷದವರು ಎಂದಿಗೂ ಬಿಜೆಪಿಯನ್ನು ನಿರ್ನಾನ ಮಾಡುತ್ತೇವೆ ಎಂದು ಹೇಳುವುದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಒಂದು ಜವಾಬ್ದಾರಿ, ಪರಂಪರೆ, ಇತಿಹಾಸ, ಹಿನ್ನೆಲೆ ಇದೆ. ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ, ಅದಕ್ಕೊಂದು ಸಾಮಾಜಿಕ ಮತ್ತು ರಾಜಕೀಯವಾದ ಪರಂಪರೆ ಇದೆ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಈ ಪಕ್ಷ ಸಕ್ರಿಯವಾಗಿರಬೇಕೆಂದು ಜನರ ನಿರೀಕ್ಷೆ ಇದೆ. ತಪ್ಪುಗಳನ್ನು ಮಾಡಿದಾಗ ಯಾಕೆ ಈ ಪಕ್ಷದವರು ಸರಿ ಮಾಡಿಕೊಳ್ಳುತ್ತಿಲ್ಲ ಎಂದು ಜನ ಪ್ರಶ್ನೆ ಕೇಳುತ್ತಿರುತ್ತಾರೆ. ಇಂತಹ ಪರಿಸ್ಥಿತಿ ಇರುವಾಗ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂಬುದು ಒಂದು ಬಾಲಿಶವಾದ, ಅವೈಜ್ಞಾನಿಕವಾದ ಹೇಳಿಕೆ.

ಪಕ್ಷಕ್ಕೆ ಆಗುತ್ತಿರುವ ಹಿನ್ನೆಡೆಗೆ ಕಾರಣಗಳು ಏನು ಎಂಬುದರ ಆತ್ಮವಿಮರ್ಶೆ ರಾಷ್ಟç ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಗಬೇಕು. ಇದು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಬಯಕೆಯಾಗಿದೆ. ತಳಮಟ್ಟದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಬಹಳಷ್ಟು ಮುಗ್ಧರಿದ್ದಾರೆ. ಅವರು ತಮ್ಮೆಲ್ಲಾ ಶ್ರಮ ಹಾಕಿ ಪಕ್ಷವನ್ನು ಬೆಳೆಸುತ್ತಿದ್ದಾರೆ. ಅವರೆಲ್ಲಾ ಪಕ್ಷಕ್ಕೆ ನಿಷ್ಠೆಯನ್ನು ಹೊಂದಿದ್ದಾರೆ. ಆದರೆ, ಸಮಸ್ಯೆಗಳು ಇರುವುದು ಈ ಮಟ್ಟದಲ್ಲಿ ಅಲ್ಲ, ನಾಯಕರ ಮಟ್ಟದಲ್ಲಿ. ಪ್ರತಿ ರಾಜ್ಯದಲ್ಲಿಯೂ ನಾಯಕರ ಮಟ್ಟದಲ್ಲಿಯೇ ಸಮಸ್ಯೆಗಳು ಎದುರಾಗಿರುವುದು. ಈ ಸಮಸ್ಯೆಗಳ ನಿವಾರಣೆಗೆ ರಾಷ್ಟç ಮಟ್ಟದಿಂದ ಬೂತ್ ಮಟ್ಟದವರೆಗೆ ಆತ್ಮ ವಿಮರ್ಶೆಗಳಾಗಲೇಬೇಕಿದೆ. ನಾಯಕತ್ವ ಬದಲಾವಣೆಯಾದ ತಕ್ಷಣ ಎಲ್ಲವೂ ಸರಿ ಹೋಗುತ್ತದೆ ಎಂದಾಗುವುದಿಲ್ಲ. ಆದರೆ, ಎಲ್ಲಾ ಹಂತಗಳಲ್ಲಿಯೂ ಪಕ್ಷವನ್ನು ಪುನರ್ ರಚಿಸುವ ಅಗತ್ಯವಿದೆ.

ಸಂಸ್ಥಾನಗಳ ರೀತಿಯಲ್ಲಿ ಲೋಕಸಭಾ ಕ್ಷೇತ್ರಗಳು ಮತ್ತು ಜಿಲ್ಲೆಗಳನ್ನು ಕೆಲವೇ ಕೆಲವರು ತಮ್ಮ ಹಿಡಿತದಲ್ಲಿಟ್ಟುಕೊಂಡರೆ ಪಕ್ಷ ಬೆಳೆಯುವುದಿಲ್ಲ. ಕಾಂಗ್ರೆಸ್ ಜನರು ಬೆಳೆಸಿರುವ ಪಕ್ಷ, ಒಂದು ಚಳವಳಿಯಾಗಿ ರೂಪುಗೊಂಡಿರುವ ಪಕ್ಷ. ಜನರಿಗಾಗಿಯೇ ಅರ್ಪಣೆಯಾಗಿರುವ ಪಕ್ಷ. ಸಂಸ್ಥಾನದAತೆ ಮಾಡಿಕೊಂಡಿರುವ ನಾಯಕರು ನೆಹರೂ ಕುಟುಂಬದ ತ್ಯಾಗ ಬಲಿದಾನವನ್ನು ಟ್ರಂಪ್ ಕಾರ್ಡ್ ರೀತಿಯಲ್ಲಿ ಬಳಸಿಕೊಂಡು ಜನರನ್ನು ಓಲೈಸಲು ಸಾಧ್ಯವಿಲ್ಲ. ನೆಹರೂ ದೇಶದ ಸ್ವಾತಂತ್ರ÷್ಯಕ್ಕಾಗಿ ವರ್ಷಾನುಗಟ್ಟಲೇ ಜೈಲಿನಲ್ಲಿದ್ದವರು. ಇಂದಿರಾಗಾAಧಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದವರು. ಹೀಗಾಗಿ ಈಗಿನ ನಾಯಕರು ನೆಹರೂ, ಇಂದಿರಾಗಾAಧಿಯವರ ತ್ಯಾಗ ಬಲಿದಾನ ಮತ್ತು ಸೇವೆಯನ್ನು ತಮ್ಮದೇ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ.

ರಾಹುಲ್ ಗಾಂಧಿಯವರು ಇನ್ನೂ ಹೆಚ್ಚು ಅಗ್ರೆಸ್ಸಿವ್ ಆಗಿ ಹೋಗಬೇಕು. ಪಾದಯಾತ್ರೆಗಳನ್ನು ಮಾಡಬೇಕು. ಉತ್ತಮವಾಗಿ ಮಾಡುತ್ತಿದ್ದಾರೆ. ಜನ ಸಂಪರ್ಕವನ್ನು ಹೆಚ್ಚು ಮಾಡಿಕೊಳ್ಳಬೇಕು. ಅವರಿಗೆ ಪ್ರಪಂಚ ಗೊತ್ತಿದೆ, ಜ್ಞಾನವಿದೆ, ಸಿದ್ಧಾಂತದ ಪರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಿಜೆಪಿಗೆ ಪರ್ಯಾಯವನ್ನು ಕಾಂಗ್ರೆಸ್ ಪಕ್ಷ ಕೊಡಬೇಕು. ಪ್ರಾದೇಶಿಕ ಪಕ್ಷಗಳಿಂದ ಪರ್ಯಾಯವನ್ನು ಕೊಡಲು ಸಾಧ್ಯವಿಲ್ಲ.

ಒಂದು ಸದೃಢ ಪರ್ಯಾಯವಾಗಿ ಬೆಳೆಯಬೇಕೆಂದರೆ ಕಾಂಗ್ರೆಸ್ ಪಕ್ಷ ಆಯಾಯ ರಾಜ್ಯಗಳಲ್ಲಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು. ಇದು ಅನಿವಾರ್ಯವೂ ಹೌದು. ಕಾಂಗ್ರೆಸ್ ಪಕ್ಷ ಹಲವು ವರ್ಷಗಳವರೆಗೆ ಮುಖ್ಯ ಸ್ಥಾನದಲ್ಲಿತ್ತು. ಆದರೆ, ಈಗ ಬಿಜೆಪಿ ಬಹುತೇಕ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ.

ಜನರನ್ನು ಸೆಳೆದುಕೊಳ್ಳಲು ನಾವು ವಿಫಲರಾಗುತ್ತಿದ್ದೇವೆ. ಇನ್ನೂ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ವಂಶ ಪಾರಂಪರ್ಯದಿOದ ಹೊರಬರಬೇಕೆಂಬ ವಿಚಾರದಲ್ಲಿ ರಾಜ್ಯಗಳ ನಾಯಕರು ಹೊರಬರಬೇಕಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರತಿಯೊಂದು ಹಂತದಲ್ಲಿಯೂ ಸ್ಥಾನಮಾನ ದೊರೆಯಿತು. ಅದನ್ನು ಯಾರೂ ತಡೆಯಲಿಲ್ಲ. ಸಿದ್ಧರಾಮಯ್ಯನವರು ರಾಷ್ಟçಮಟ್ಟಕ್ಕೆ ಹೋಗುತ್ತೇವೆಂದು ಹೇಳಿದರೆ ಯಾರೂ ಬೇಡ ಎನ್ನುವುದಿಲ್ಲ. ವಂಶಪಾರAಪರ್ಯವನ್ನು ಬಿಟ್ಟು ತಳ ಮಟ್ಟದಿಂದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತಹವರನ್ನು ಗುರುತಿಸಬೇಕಾಗಿದೆ. ಅದನ್ನು ಬಿಟ್ಟು ಕೇವಲ ಪುಣ್ಯ ಜಯಂತಿ ದಿನದಂದು ಭಾಷಣ ಮಾಡಿದರೆ ಪಕ್ಷಕ್ಕೆ ಉಳಿಗಾಲವಿಲ್ಲ.

ನೆಹರೂ ಕುಟುಂಬ ಭಾವನಾತ್ಮಕ ವಿಚಾರವಾಗಿದೆ. ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಾಮಾನ್ಯರಿಗೂ ಬೆಳೆಯುವ ಅವಕಾಶ ನಮ್ಮ ಪಕ್ಷದಲ್ಲಿದೆ. ರಾಜ್ಯ ನಾಯಕರು ರಾಷ್ಟç ಮಟ್ಟಕ್ಕೆ ಹೋಗುವುದನ್ನು ಯಾರೂ ತಡೆಯುವುದಿಲ್ಲ. ರಾಜ್ಯ ಮಟ್ಟದಲ್ಲಿನ ನಾಯಕರ ಭಿನ್ನಾಭಿಪ್ರಾಯಗಳಿಂದಾಗಿ ಕೆಲವು ನಾಯಕರು ಹೊರ ಹೋಗುವಂತಾಗಿದೆ. ರಾಜ್ಯ ನಾಯಕರ ಕೆಲವು ತಪ್ಪು ನಿರ್ಧಾರಗಳಿಂದ ಪಕ್ಷಕ್ಕೆ ಹಿನ್ನೆಡೆಯಾಗುತ್ತಿದೆ. ಎಲ್ಲದಕ್ಕೂ ರಾಷ್ಟ್ರೀಯ ನಾಯಕತ್ವವನ್ನು ದೂಷಣೆ ಮಾಡುವುದು ತಪ್ಪು.

ರಾಜ್ಯ ಮಟ್ಟದಲ್ಲಿ ನಾಯಕರು ತಮ್ಮ ಕುಟುಂಬವನ್ನು ಬೆಳೆಸುವುದರಲ್ಲಿ ಮಗ್ನರಾಗಿದ್ದರೆ ಪಕ್ಷ ಬೆಳೆಯುವುದಾದರೂ ಹೇಗೆ? ಇವರೆಲ್ಲಾ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೆ ಪಕ್ಷ ಏಕೆ ಹಾಳಾಗುತ್ತದೆ? ಈ ಬಗ್ಗೆ ನಾಯಕರು ಚಿಂತನೆ ಮಾಡಿಕೊಳ್ಳಬೇಕು.

 

 

Leave a Reply

Your email address will not be published.