ರಾಷ್ಟ್ರೀಯತೆ ಮತ್ತು ಪೌರತ್ವದ ಹೊಸ ವ್ಯಾಖ್ಯೆಯ ಅಗತ್ಯವಿದೆಯೇ..?

ಪೌರತ್ವ (ತಿದ್ದುಪಡಿ) ಕಾಯಿದೆ 2019 ಎತ್ತಿರುವ ನಾಲ್ಕು ಮುಖ್ಯ ವಿಷಯಗಳ ಬಗ್ಗೆ ತಣ್ಣಗೆ ಯೋಚಿಸುವ ಪ್ರಯತ್ನವನ್ನು ಮಾಡಬಯಸುತ್ತೇನೆ. ಇದಕ್ಕೆ ಕಾರಣವಿಷ್ಠೆ; ಬಿಸಿಚರ್ಚೆ, ವಿವಾದಾತ್ಮಕ ಮಾತುಗಳ ನಡುವೆ ಗಂಭೀರ ವಿಚಾರಗಳು ಪರದೆಯಿಂದಾಚೆಗೆ ಸರಿಯುತ್ತಿವೆ.

ಪೃಥ್ವಿದತ್ತ ಚಂದ್ರಶೋಭಿ

17ನೆಯ ಲೋಕಸಭಾ ಚುನಾವಣೆಯ ಫಲಿತಾಂಶಗಳ ಗುಂಗಿನಲ್ಲಿಯೆ ಇದ್ದ ಭಾರತಕ್ಕೆ ಪೌರತ್ವ (ತಿದ್ದುಪಡಿ) ಕಾಯಿದೆ, 2019, ಹೊಸದೊಂದು ರಾಜಕೀಯ ವಾತಾವರಣವನ್ನು ಸೃಷ್ಟಿಸಿದೆ. ಒಂದೆಡೆ ಭಾರತೀಯ ಜನತಾ ಪಕ್ಷವು ರಾಷ್ಟ್ರ ರಾಜಕಾರಣದ ಮೇಲೆ ತನ್ನ ಹಿಡಿತವನ್ನು ಗಟ್ಟಿಗೊಳಿಸಿಕೊಂಡದ್ದು ಸ್ಪಷ್ಟವಾದರೆ, ಇನ್ನೊಂದೆಡೆ ಕಳೆದ ಐದೂವರೆ ವರ್ಷಗಳಿಂದ ಅಧಿಕಾರದಲ್ಲಿದ್ದರೂ ನರೇಂದ್ರ ಮೋದಿ ಸರ್ಕಾರವು ಭಾರತದ ಅರ್ಥವ್ಯವಸ್ಥೆಯ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಆಗಿಲ್ಲ ಹಾಗೂ ಜಿ.ಡಿ.ಪಿ. ಬೆಳವಣಿಗೆಯ ದರದಲ್ಲಿ ಕುಸಿತ ಮುಂದುವರೆದಿದೆ ಎನ್ನುವುದೂ ನಿಚ್ಚಳವಾಗಿ ಎದ್ದುಕಾಣುತ್ತಿದೆ. ಇಷ್ಠದರೂ ಸಹ, ಮೋದಿ ಸರ್ಕಾರದ ವಿರುದ್ಧ ರಾಜಕೀಯ ವಾದವೊಂದನ್ನು ದೇಶದ ಮುಂದೆ ಇಡುವಲ್ಲಿ ವಿರೋಧಪಕ್ಷಗಳನ್ನೂ ಸೇರಿದಂತೆ ಅದರ ವಿರೋಧಿಗಳು ವಿಫಲರಾಗಿದ್ದರು. ರಾಷ್ಟ್ರವ್ಯಾಪಿ ಜನಾಂದೋಲನವನ್ನು ಸಂಘಟಿಸಲು ಸಾಧ್ಯವಾಗಿರಲಿಲ್ಲ.

ಅಂತಹ ಅವಕಾಶವೊಂದನ್ನು ಮೋದಿ ಸರ್ಕಾರವೇ ಈಗ ತನ್ನ ರಾಜಕೀಯ ಎದುರಾಳಿಗಳಿಗೆ ಪೌರತ್ವ (ತಿದ್ದುಪಡಿ) ಕಾಯಿದೆ 2019ರ ಮೂಲಕ ಒದಗಿಸಿಕೊಟ್ಟಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಕಾಯಿದೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಹಲವು ವಿಶ್ವವಿದ್ಯಾನಿಲಯಗಳು ಹೊತ್ತಿ ಉರಿಯುತ್ತಿವೆ. ಅಲ್ಲಲ್ಲಿ ಹಿಂಸಾತ್ಮಕ ಘಟನೆಗಳು ಜರುಗಿವೆ. ಜೊತೆಗೆ ಈ ವಿಷಯದ ಬಗ್ಗೆಯೆ ಬಿಸಿಚರ್ಚೆ ದೇಶಾದ್ಯಂತ ಮತ್ತು ಮಾಧ್ಯಮಗಳಲ್ಲಿ ಜೋರಾಗಿಯೆ ನಡೆದಿದೆ. ತೀವ್ರ ಅಸಹನೆಯ ಮಾತುಗಳು ಹೆಚ್ಚಾಗಿ ಭಾಜಪದ ವಲಯಗಳಿಂದಲೆ ಕೇಳಿಬಂದಿವೆ. ಪ್ರತಿಭಟನೆಗಳನ್ನು ಹತ್ತಿಕ್ಕುವ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವವರ ಮೇಲೆ ದಂಡ ಹಾಕುವ ಕ್ರಮಗಳೂ ಕಾಣಬಂದಿವೆ. ಈ ವಿವಾದವು ಬಿಸಿಚರ್ಚೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಮತ್ತೊಮ್ಮೆ ಭಾರತಕ್ಕೆ ಸೇರಿದವರು ಯಾರು, ಇಲ್ಲಿನಿಂದ ಹೊರಗೆ ಹಾಕಬೇಕಾಗಿರುವುದು ಯಾರನ್ನು ಎನ್ನುವ ಗಂಭೀರ ಪರಿಣಾಮಗಳಿರುವ ಮಾತುಗಳು ಸಹ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರಿಂದ ನಾವು ಇಂದು ಕೇಳುತ್ತಿದ್ದೇವೆ.

ಏನನ್ನು ಮಾಡಲು ಬಯಸುತ್ತದೆ? ಎರಡನೆಯದಾಗಿ, ಈ ತಿದ್ದುಪಡಿಯು ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುತ್ತದೆಯೆ? ಮೂರನೆಯದಾಗಿ, ಎನ್.ಪಿ.ಆರ್. ಮತ್ತು ಎನ್.ಆರ್.ಸಿ. ಗಳ ಅನುಷ್ಠನ ಮತ್ತು ಪೌರತ್ವ (ತಿದ್ದುಪಡಿ) ಕಾಯಿದೆಗೂ ಇರುವ ಸಂಬಂಧಗಳೇನು?

ಈ ಎಲ್ಲ ವಿಷಯಗಳನ್ನು ಒಂದು ಕ್ಷಣ ನಿರ್ಲಕ್ಷಿಸಿ, ಪೌರತ್ವ (ತಿದ್ದುಪಡಿ) ಕಾಯಿದೆ 2019 ಎತ್ತಿರುವ ನಾಲ್ಕು ಮುಖ್ಯ ವಿಷಯಗಳ ಬಗ್ಗೆ ತಣ್ಣಗೆ ಯೋಚಿಸುವ ಪ್ರಯತ್ನವನ್ನು ಇಲ್ಲಿ ನಾನು ಮಾಡಬಯಸುತ್ತೇನೆ. ಇದಕ್ಕೆ ಕಾರಣವಿಷ್ಠೆ. ಬಿಸಿಚರ್ಚೆ, ವಿವಾದಾತ್ಮಕ ಮಾತುಗಳ ನಡುವೆ ಗಂಭೀರ ವಿಚಾರಗಳು ಪರದೆಯಿಂದಾಚೆಗೆ ಸರಿಯುತ್ತಿವೆ.

ನಾನು ಚರ್ಚಿಸಬಯಸುವ ನಾಲ್ಕು ವಿಷಯಗಳು ಹೀಗಿವೆ. ಕಾನೂನಿನ ಹಿನ್ನೆಲೆಯಲ್ಲಿ ನೋಡುವುದಾದರೆ ಪೌರತ್ವ (ತಿದ್ದುಪಡಿ) ಕಾಯಿದೆ, 2019, ಏನನ್ನು ಮಾಡಲು ಬಯಸುತ್ತದೆ? ಎರಡನೆಯದಾಗಿ, ಈ ತಿದ್ದುಪಡಿಯು ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುತ್ತದೆಯೆ? ಮೂರನೆಯದಾಗಿ, ಎನ್.ಪಿ.ಆರ್. ಮತ್ತು ಎನ್.ಆರ್.ಸಿ. ಗಳ ಅನುಷ್ಠನ ಮತ್ತು ಪೌರತ್ವ (ತಿದ್ದುಪಡಿ) ಕಾಯಿದೆಗೂ ಇರುವ ಸಂಬಂಧಗಳೇನು? ನಾಲ್ಕನೆಯದಾಗಿ, ಈ ತಿದ್ದುಪಡಿಯನ್ನು ತರುವಲ್ಲಿ ಇರಬಹುದಾದ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ದೇಶಗಳೇನಿರಬಹುದು? ಈ ಕಡೆಯ ಪ್ರಶ್ನೆಯ ಚರ್ಚೆಯುನಮ್ಮೆಲ್ಲರ ವೈಯಕ್ತಿಕವಾದ ರಾಜಕೀಯ ತಾತ್ವಿಕ ನಿಲುವುಗಳ ಮೇಲೆ ನಿರ್ಭರವಾದುದು ಎನ್ನುವ ಅರಿವು ನನಗಿದೆ. ಆದರೆ ಭಾರತದ ಭವಿಷ್ಯದ ಮೇಲೆ ಪರಿಣಾಮ ಬೀರುವ ವಿಷಯವೂ ಇದಾಗಿದೆ. ಹಾಗಾಗಿ ಅದರ ಬಗ್ಗೆ ಚರ್ಚೆ ಮಾಡುವ ಅನಿವಾರ್ಯತೆ ಕೂಡ ಇಂದು ನಮಗೆ ಒದಗಿ ಬಂದಿದೆ.

ಮೊದಲಿಗೆ, ಪೌರತ್ವ (ತಿದ್ದುಪಡಿ) ಕಾಯಿದೆ, 2019, ಏನನ್ನು ಬದಲಿಸುತ್ತಿದೆ ಎನ್ನುವುದನ್ನು ಗಮನಿಸೋಣ. ಈ ಲೇಖನದ ಜೊತೆಗೆ 1955ರ ಪೌರತ್ವ ಕಾಯಿದೆ ಮತ್ತು ಅದಕ್ಕೆ ಮಾಡಲಾಗಿರುವ ಬದಲಾವಣೆಗಳ ವಿವರಗಳನ್ನು ಒದಗಿಸಿದ್ದೇವೆ. ಇಲ್ಲಿ ನಮಗೆ 2019ರ ತಿದ್ದುಪಡಿಯ ಬಗ್ಗೆ ಸ್ಪಷ್ಟವಾಗಿ ಕಾಣುವ ಅಂಶ ಇಷ್ಠ. ಮೊದಲ ಬಾರಿಗೆ ಭಾರತದ ಪೌರತ್ವವನ್ನು ನೀಡಲು ಅರ್ಜಿದಾರನ ಧಾರ್ಮಿಕ ಸ್ಥಾನಮಾನವನ್ನು ಪರಿಗಣಿಸಲಾಗುತ್ತಿದೆ.

2019ರ ತಿದ್ದುಪಡಿಯ ಪ್ರಸ್ತಾವನೆಯಿದು: ನಮ್ಮ ನೆರೆಯಲ್ಲಿರುವ ಮೂರು ಮುಸ್ಲಿಮ್ ರಾಷ್ಟ್ರಗಳಾದ ಪಾಕಿಸ್ತಾನ, ಆಫ್ಘಾನಿಸ್ಥಾನ್ ಮತ್ತು ಬಾಂಗ್ಲಾದೇಶಗಳಿಂದ 2015ಕ್ಕೆ ಮೊದಲು ಭಾರತಕ್ಕೆ ಬಂದಿದ್ದ ಹಿಂದೂ, ಬೌದ್ಧ, ಸಿಖ್ ಮತ್ತು ಕ್ರೈಸ್ತ ಅಲ್ಪಸಂಖ್ಯಾತರಿಗೆ ಆರು ವರ್ಷಗಳ ನಂತರ ಭಾರತದ ಪೌರತ್ವವನ್ನು ನೀಡಬಹುದು. ಇದಕ್ಕೆ ಮೊದಲು ಭಾರತದ ಪೌರತ್ವವನ್ನು ಪಡೆಯಲು ಹನ್ನೆರಡು ವರ್ಷ ಕಾಯಬೇಕಿತ್ತು. ಈಗಲೂ ಇತರೆ ವರ್ಗಗಳ ಅರ್ಜಿದಾರರು ಹನ್ನೆರಡು ವರ್ಷ ಕಾಯುತ್ತಾರೆ. ಆದರೆ ಮೇಲಿನ ವರ್ಗಗಳ ಧಾರ್ಮಿಕ ಅಲ್ಪಸಂಖ್ಯಾತರು ಆರು ವರ್ಷಗಳಲ್ಲಿಯೆ ಪೌರತ್ವವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇಂತಹ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ, ಶಾಸಕಾಂಗಕ್ಕೆ ಎಲ್ಲ ಅಧಿಕಾರವೂ ಇದೆ ಎಂದು ಹರೀಶ್ ಸಾಳ್ವೆ ಮೊದಲಾದ ಕಾನೂನು ತಜ್ಞರು ವಾದಿಸಿದ್ದಾರೆ.

ಕೆಲವು ನಿರ್ದಿಷ್ಟ ವರ್ಗಗಳ ಅರ್ಜಿದಾರರಿಗೆ ಪೌರತ್ವ ಪಡೆಯಲು ಸುಲಭವಾದ ಪಥವನ್ನು, ವಿಶೇಷ ಸೌಕರ್ಯಗಳನ್ನು ಒದಗಿಸುವುದರಲ್ಲಿ ತಪ್ಪೇನಿಲ್ಲ. ಇಂತಹ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ, ಶಾಸಕಾಂಗಕ್ಕೆ ಎಲ್ಲ ಅಧಿಕಾರವೂ ಇದೆ ಎಂದು ಹರೀಶ್ ಸಾಳ್ವೆ ಮೊದಲಾದ ಕಾನೂನು ತಜ್ಞರು ವಾದಿಸಿದ್ದಾರೆ.

ಇಲ್ಲಿ ವಿವಾದಾತ್ಮಕ ಅಂಶವಿರುವುದು ಪೌರತ್ವ ನೀಡಲು ಧಾರ್ಮಿಕ ಸ್ಥಾನಮಾನಗಳನ್ನು ಪರಿಗಣಿಸಿರುವುದು. ಹಾಗಾಗಿಯೆ, ಈ ತಿದ್ದುಪಡಿಯು ಭಾರತೀಯ ಸಂವಿಧಾನದ ಧರ್ಮನಿರಪೇಕ್ಷತೆಯ ಪರೀಕ್ಷೆಯನ್ನು ಎದುರಿಸುವಲ್ಲಿ ವಿಫಲವಾಗುತ್ತದೆ ಎಂದೂ ಹಲವು

ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್.ಆರ್.ಸಿ.)

ಎನ್.ಆರ್.ಸಿ.ಯು ಭಾರತದ ಎಲ್ಲ ಪೌರರನ್ನೂ ದಾಖಲಿಸುವ ಒಂದು ನೋಂದಣಿ ದಾಖಲಾತಿ ಹೊತ್ತಿಗೆ. 1955ರ ಪೌರತ್ವ ಕಾಯಿದೆಗೆ 2003ರಲ್ಲಿ ಮಾಡಿದ ತಿದ್ದುಪಡಿಯಲ್ಲಿ ಇಂತಹ ನೋಂದಣಿ ದಾಖಲಾತಿ ಹೊತ್ತಿಗೆಯನ್ನು ಸಿದ್ಧಪಡಿಸಬೇಕೆನ್ನುವ ಪ್ರಸ್ತಾಪವಿತ್ತು. 2013-14ರಲ್ಲಿ ಅಸ್ಸಾಮಿನಲ್ಲಿ ಇಂತಹ ದಾಖಲಾತಿ ಹೊತ್ತಿಗೆಯನ್ನು ಸಿದ್ಧಪಡಿಸಲಾಯಿತು.

1951ರಲ್ಲಿಯೆ ಅಸ್ಸಾಮಿನಲ್ಲಿ 1951ರ ಜನಗಣತಿಯ ಆಧಾರದ ಮೇರೆಗೆ ಎನ್.ಆರ್.ಸಿ.ಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಅದನ್ನು ಸರಿಯಾಗಿ ನಿರ್ವಹಿಸಲಿಲ್ಲ. ಮುಂದೆ ಅಸ್ಸಾಮಿನಲ್ಲಿ ಹೊರಗಿನವರ ಪ್ರಭಾವವನ್ನು ತಡೆಯಲು ಚಳುವಳಿಗಳು ಉಗ್ರರೂಪವನ್ನು ಪಡೆದುಕೊಂಡಂತೆ, ಮತ್ತೆ ಎನ್.ಆರ್.ಸಿ.ಯನ್ನು ತಯಾರಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು. 2005ರಿಂದ 2013ರ ನಡುವೆ ಈ ಯೋಜನೆಯು ವ್ಯವಸ್ಥಿತವಾಗಿ ನಡೆಯಲಿಲ್ಲ ಎನ್ನುವ ಕಾರಣದಿಂದ, ಸರ್ವೋಚ್ಛ ನ್ಯಾಯಾಲಯವು ತನ್ನ ಮೇಲ್ವಿಚಾರಣೆಯಲ್ಲಿ ಎನ್.ಆರ್.ಸಿ. ತಯಾರಿಯನ್ನು ಮಾಡಿಸಿತು. ಇದರ ಅನ್ವಯವಾಗಿ ಸುಮಾರು 3.1 ಕೋಟಿ ಜನರನ್ನು ಈ ಪಟ್ಟಿಯಲ್ಲಿ ಸೇರಿಸಿದರೆ, 19 ಲಕ್ಷ ಅರ್ಜಿದಾರರನ್ನು ಪಟ್ಟಿಯಿಂದ ಹೊರಬಿಡಲಾಯಿತು. ಈ ಅರ್ಜಿದಾರರು ತಮ್ಮ ಪೌರತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿ ಇದ್ದಾರೆ. ಇವರುಗಳ ಪೈಕಿ ಹಲವರು ಅಧಿಕೃತ ಪೌರರು ಇದ್ದಾರೆ. ಮಿಗಿಲಾಗಿ ಪೌರತ್ವವನ್ನು ಪಡೆದಿರುವವರ ಪೈಕಿ ಹಲವಾರು ಅಕ್ರಮ ವಲಸಿಗರೂ ಇದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಅಕ್ರಮ ವಲಸೆಯನ್ನು ತಡೆಯಲು ಎನ್.ಆರ್.ಸಿ. ಯನ್ನು ಸಿದ್ಧಪಡಿಸಲೇಬೇಕಾಗಿದೆ ಎನ್ನುವ ವಾದವನ್ನು ಕೇಂದ್ರ ಸರ್ಕಾರವು ಮುಂದಿಡುತ್ತಿದೆ. ಆದರೆ ಈ ದಾಖಲಾತಿ ನೋಂದಣಿ ಹೊತ್ತಿಗೆಯನ್ನು ತಯಾರಿಸುವ ಪ್ರಕ್ರಿಯೆಯು ಸುಗಮವಾಗಿ ಜರುಗುತ್ತದೆ ಎನ್ನುವುದು ಕಷ್ಟ. 130 ಕೋಟಿ ಜನಸಂಖ್ಯೆಯಿರುವ ಭಾರತದ ಎಲ್ಲ ಪೌರರ ನೋಂದಣಿ ದಾಖಲಾತಿಯನ್ನು ಸಿದ್ಧಪಡಿಸುವುದು ಒಂದೆಡೆ ಖರ್ಚಿನ ಬಾಬತ್ತು. ಮತ್ತೊಂದೆಡೆ, ಇಂತಹ ನೋಂದಣಿ ಪ್ರಕ್ರಿಯೆಯಲ್ಲಿ ತಮ್ಮ ಅಧಿಕೃತ ಪೌರತ್ವ ಸ್ಥಾನಮಾನವನ್ನು ಸಾಬೀತು ಮಾಡಲು ಅಗತ್ಯವಿರುವ ದಾಖಲೆಗಳನ್ನು ಕೋಟ್ಯಾಂತರ ಜನರು ಹೊಂದಿಲ್ಲ. ಬುಡಕಟ್ಟು ಜನಾಂಗಗಳು, ದೇಶಾದ್ಯಂತ ಗುಳೆಹೋಗುತ್ತ ಕೆಲಸ ಮಾಡುವವರು ಇತ್ಯಾದಿ ಹತ್ತಾರು ಬಡ ಮತ್ತು ಅಂಚಿನ ಸಮುದಾಯಗಳ ಜನರಿಗೆ ಆಗುವ ತೊಂದರೆಗಳನ್ನು ಹೇಗೆ ತಪ್ಪಿಸುವುದು ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಮಿಗಿಲಾಗಿ, ಈ ಪ್ರಕ್ರಿಯೆಯಲ್ಲಿ ಅಕ್ರಮ ವಲಸೆಗಾರರು ಲಂಚ ಕೊಟ್ಟು ನೋಂದಾವಣಿ ಮಾಡಿಕೊಳ್ಳಬಹುದು ಎನ್ನುವ ಅನುಮಾನ ಸಹಜವಾಗಿಯೆ ಇದೆ. ಈ ಎಲ್ಲ ಸಮಸ್ಯೆಗಳು ಎನ್. ಆರ್.ಸಿ. ವಿರುದ್ಧದ ವಾದಗಳಲ್ಲ. ಆದರೆ ಅನುಷ್ಠನದ ಸಮಯದಲ್ಲಿ ಎದುರಾಗುವ ಪರಿಹಾರವಿಲ್ಲದ ಸಮಸ್ಯೆಗಳು.

ಶ್ರೀಲಂಕಾದಲ್ಲಿ ತಮಿಳು ಹಿಂದೂಗಳು ಮತ್ತು ಕ್ರೈಸ್ತರಿಗೆ ಕಿರುಕುಳವಾಗುತ್ತಿದೆ. ಹಾಗಾಗಿ ಭೂತಾನ ಮತ್ತು ಶ್ರೀಲಂಕಾಗಳಿಂದ ವಲಸೆ ಬಂದಿರುವವರಿಗೂ ಈ ಸೌಲಭ್ಯ ಒದಗಿಸಿ ಎಂದು ಪೌರತ್ವ (ತಿದ್ದುಪಡಿ) ಕಾಯಿದೆಯ ಟೀಕಾಕಾರರು ವಾದಿಸುತ್ತಾರೆ.

ಕಾನೂನು ತಜ್ಞರು ವಾದಿಸಿದ್ದಾರೆ. ಇವರು ಹೇಳುವುದು ಇಷ್ಠೆ: ಧಾರ್ಮಿಕ ಶೋಷಣೆಗೆ ಒಳಗಾದ ಯಾರಿಗಾದರೂ ಪೌರತ್ವ ನೀಡುವ ಬಗ್ಗೆ ತಮ್ಮ ತಕರಾರಿಲ್ಲ. ಆದರೆ ಇದನ್ನು ಕೇವಲ ಕೆಲವೆ ಧರ್ಮಗಳಿಗೆ ಸೀಮಿತಗೊಳಿಸಬೇಡಿ. ಬರ್ಮಾದ ರೋಹಿಂಗ್ಯಾ ಮುಸ್ಲಿಮರು, ಆಫ್ಘಾನಿಸ್ಥಾನ್ ಮತ್ತು ಪಾಕಿಸ್ತಾನಗಳ ಸುನ್ನಿಯೇತರ ಮುಸ್ಲಿಮ ಅಲ್ಪಸಂಖ್ಯಾತರಿಗೆ ಸಹ ಹಿಂದೂಗಳು, ಬೌದ್ಧರು, ಸಿಖರು ಮತ್ತು ಕ್ರೈಸ್ತರು ಎದುರಿಸುತ್ತಿರುವ ರೀತಿಯ ಸಮಸ್ಯೆಗಳೆ ಇವೆ. ಇಂತಹವರಿಗೂ ಪೌರತ್ವ ಅಥವಾ ನಿವಾಸಿಯಾಗುವ ಅವಕಾಶ ನೀಡಬಹುದು ಎಂದು ಅವರು ವಾದಿಸುತ್ತಾರೆ.

ಕೆಲವು ಧರ್ಮಗಳಿಗೆ ಸೀಮಿತಗೊಳಿಸುವುದರಿಂದ ಭಾರತವೂ ತನ್ನ ಧರ್ಮನಿರಪೇಕ್ಷ ನೆಲೆಯನ್ನು ಕಳೆದುಕೊಂಡು, ಧಾರ್ಮಿಕ ದೇಶವಾಗುತ್ತದೆ. ಇದರ ಜೊತೆಗೆ ಭೂತಾನದಲ್ಲಿ ಹಿಂದೂಗಳೂ ಸೇರಿದಂತೆ ಬೌದ್ಧೇತರರ ಮೇಲೆ ಶೋಷಣೆಯಾಗುತ್ತಿದೆ. ಶ್ರೀಲಂಕಾದಲ್ಲಿ ತಮಿಳು ಹಿಂದೂಗಳು ಮತ್ತು ಕ್ರೈಸ್ತರಿಗೆ ಕಿರುಕುಳವಾಗುತ್ತಿದೆ. ಹಾಗಾಗಿ ಭೂತಾನ ಮತ್ತು ಶ್ರೀಲಂಕಾಗಳಿಂದ ವಲಸೆ ಬಂದಿರುವವರಿಗೂ ಈ ಸೌಲಭ್ಯ ಒದಗಿಸಿ ಎಂದು ಪೌರತ್ವ (ತಿದ್ದುಪಡಿ) ಕಾಯಿದೆಯ ಟೀಕಾಕಾರರು ವಾದಿಸುತ್ತಾರೆ. ಗೃಹಸಚಿವ ಅಮಿತ್ ಶಾ ಈ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ. ಮುಸ್ಲಿಮರಿಗೆ ವಲಸೆ ಹೋಗಲು ಬೇರೆ ದೇಶಗಳಿವೆ, ಆದರೆ ಹಿಂದೂ, ಬೌದ್ಧ ಮತ್ತು ಸಿಖರಿಗೆ ಇಂತಹ ಪರ್ಯಾಯಗಳಿಲ್ಲ. ಇದಕ್ಕಾಗಿ ಸೀಮಿತ ನೆಲೆಯಲ್ಲಿ ಮಾತ್ರ ತಿದ್ದುಪಡಿ ಮಾಡಿದ್ದೇವೆ ಎಂದು ಶಾ ವಾದಿಸಿದ್ದಾರೆ. 1947ರಲ್ಲಿ ಧರ್ಮದ ಆಧಾರದ ಮೇರೆಗೆ ದೇಶವಿಭಜನೆಯಾದ ಕಾರಣವಾಗಿ ಇಂದುಪೌರತ್ವ (ತಿದ್ದುಪಡಿ) ಕಾಯಿದೆಯನ್ನು ಜಾರಿಗೊಳಿಸಬೇಕಾಗಿದೆ. ಆ ಮೂಲಕ ಮಾತ್ರವೆ ನೆರೆಹೊರೆಯ ಮುಸ್ಲಿಮ್ ರಾಷ್ಟ್ರಗಳ ಶೋಷಿತ ಅಲ್ಪಸಂಖ್ಯಾತರಿಗೆ ಭಾರತವು ನೆಲೆ ಕಲ್ಪಿಸಲು ಸಾಧ್ಯ ಎಂದು ಅವರು ಹೇಳುತ್ತಾರೆ ಮತ್ತು ಆ ಮೂಲಕ ಕಾಂಗ್ರೆಸ್ಸನ್ನೆ ಇಂದಿನ ಪರಿಸ್ಥಿತಿಗೆ ನೇರ ಹೊಣೆಗಾರ ಎನ್ನುತ್ತಾರೆ. ಶ್ರೀಲಂಕಾ ಮತ್ತು ಭೂತಾನಗಳ ಬಗ್ಗೆ ಅವರು ಉತ್ತರಿಸುವುದಿಲ್ಲ.

ಪೌರತ್ವ (ತಿದ್ದುಪಡಿ) ಕಾಯಿದೆ, 2019ರ ವಿರುದ್ಧ ಅದರ ಟೀಕಾಕಾರರು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಾಯಿದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ನ್ಯಾಯಾಲಯವು ನಾಲ್ಕು ವಾರಗಳ ಅವಧಿಯನ್ನು ಕೇಂದ್ರಸರ್ಕಾರಕ್ಕೆ ನೀಡಿ, ತನ್ನ ಪ್ರತಿಕ್ರಿಯೆಯನ್ನು ನೀಡುವಂತೆ ಸೂಚಿಸಿದೆ. ಸರ್ವೋಚ್ಛ ನ್ಯಾಯಾಲಯವು ಈ ಕಾಯಿದೆಯನ್ನು ಸಂವಿಧಾನ ವಿರೋಧಿಯೆಂದು ಘೋಷಿಸುವುದೊ ಇಲ್ಲವೊ ಗೊತ್ತಿಲ್ಲ. ಒಂದು ವೇಳೆ ನ್ಯಾಯಾಲಯವು ಈ ಕಾಯಿದೆಯಿಂದ ಸಂವಿಧಾನದ ಉಲ್ಲಂಘನೆಯಾಗುತ್ತಿಲ್ಲ ಎಂದರೂ ಸಹ ಒಂದು ಮಾತಂತೂ ಸ್ಪಷ್ಟ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಧರ್ಮದ ಆಧಾರದ ಮೇರೆಗೆ ಪೌರತ್ವ ನೀಡಲಾಗುತ್ತಿದೆ.

ಇಂತಹ ಸಂದರ್ಭಗಳಲ್ಲಿ ಆ ಧಾರ್ಮಿಕ ಸಂಸ್ಕೃತಿಯ ಜನರು ತಮ್ಮ ಸಂಸ್ಕೃತಿಯನ್ನು ಪೋಷಿಸಲು ಒದಗಿಸಲಾಗುತ್ತದೆ ಹೊರತು ಅವರ ನಿವಾಸಿ ಅಥವಾ ಪೌರತ್ವದ ಸ್ಥಾನಮಾನಗಳನ್ನು ನಿರ್ಧರಿಸಲು ಅಲ್ಲ.

ಧರ್ಮ ಆಧಾರಿತ ಸಾರ್ವಜನಿಕ ನೀತಿಯು ಧರ್ಮನಿರಪೇಕ್ಷತೆ ಅಥವಾ ಸೆಕ್ಯುಲರಿಸಂನ ತತ್ವಗಳನ್ನು ನಿರ್ಲಕ್ಷಿಸುತ್ತದೆ ಎನ್ನುವುದು ನಿಜವೆ. ಈಗಲೂ ಅಲ್ಪಸಂಖ್ಯಾತರಿಗೆ ಹಲವು ವಿಶೇಷಗಳನ್ನು ಒದಗಿಸಲು ಅವರ ಧರ್ಮವನ್ನು ಪರಿಗಣಿಸಲಾಗುತ್ತಿದೆ ಎನ್ನುವುದೂ ಸತ್ಯವೆ. ಆದರೆ ಇಂತಹ ಸಂದರ್ಭಗಳಲ್ಲಿ ಆ ಧಾರ್ಮಿಕ ಸಂಸ್ಕೃತಿಯ ಜನರು ತಮ್ಮ ಸಂಸ್ಕೃತಿಯನ್ನು ಪೋಷಿಸಲು ಒದಗಿಸಲಾಗುತ್ತದೆ ಹೊರತು ಅವರ ನಿವಾಸಿ ಅಥವಾ ಪೌರತ್ವದ ಸ್ಥಾನಮಾನಗಳನ್ನು ನಿರ್ಧರಿಸಲು ಅಲ್ಲ.

ಹಾಗಾಗಿಯೆ, ಭಾರತದ ಅಲ್ಪಸಂಖ್ಯಾತರಲ್ಲಿ, ಅದರಲ್ಲಿಯೂ ಮುಸ್ಲಿಮರಲ್ಲಿ, ಹೊಸ ಆತಂಕಗಳು ಮೂಡಿವೆ. ತಮ್ಮನ್ನೆ ಗುರಿಯಾಗಿಸಿಕೊಂಡು, ಭಾಜಪ ಮತ್ತು ಮೋದಿ ಸರ್ಕಾರಗಳು ಭಾರತೀಯ ಸಂವಿಧಾನ ಮತ್ತು ಸಮಾಜಗಳ ಮೂಲಸ್ವರೂಪವನ್ನು ಬದಲಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಅವರು ನಂಬಿದ್ದಾರೆ. ಸ್ವಾಭಾವಿಕವಾಗಿ, ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಇದರಿಂದ ಪೌರತ್ವ (ತಿದ್ದುಪಡಿ) ಕಾಯಿದೆ ವಿರೋಧಿ ಚಳುವಳಿಯು ಮುಸ್ಲಿಮರ ಹೋರಾಟ ಎನ್ನುವ ನಂಬಿಕೆಯೂ ಮೂಡಿದೆ.

ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟರ್ (ಎನ್.ಪಿ.ಆರ್.)

ಎನ್.ಪಿ.ಆರ್. ಭಾರತದಲ್ಲಿ ವಾಸಿಸುತ್ತಿರುವ ಎಲ್ಲ ವ್ಯಕ್ತಿಗಳ ಪಟ್ಟಿ. ಇದರಲ್ಲಿ ಪೌರರು ಮತ್ತು ಪೌರರಲ್ಲದಿರುವವರು (ಆದರೆ ಕ್ರಮಬದ್ಧ ನಿವಾಸಿಗಳು ಮಾತ್ರ) ಇಬ್ಬರೂ ಸೇರಿರುತ್ತಾರೆ. ಯಾವುದೆ ಬಡಾವಣೆಯಲ್ಲಿ ಕನಿಷ್ಠ ಆರು ತಿಂಗಳುಗಳಿಂದ ವಾಸ ಮಾಡುತ್ತಿದ್ದು ಹಾಗೂ ಮುಂದಿನ ಆರು ತಿಂಗಳುಗಳು ಅಲ್ಲಿಯೆ ಇರುವ ಉದ್ದೇಶವಿದ್ದರೆ, ಅಂತಹ ವ್ಯಕ್ತಿಗಳನ್ನು ಎನ್.ಪಿ.ಆರ್. ನಲ್ಲಿ ಸೇರಿಸಲಾಗುತ್ತದೆ. 2003ರ ಭಾರತೀಯ ಪೌರತ್ವ (ತಿದ್ದುಪಡಿ) ಕಾಯಿದೆಯನ್ನು ಅನುಸರಿಸಿ, ಕೇಂದ್ರಸರ್ಕಾರವು ಎನ್.ಪಿ.ಆರ್. ಸಿದ್ಧಪಡಿಸುವಂತೆ ಆದೇಶ ಹೊರಡಿಸಬಹುದು.

ಪ್ರತಿಯೊಬ್ಬ ಭಾರತೀಯ ನಿವಾಸಿಯೂ ಎನ್.ಪಿ.ಆರ್. ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನಿವಾಸಿಯ ಹೆಸರು, ಕೌಟುಂಬಿಕ ವಿವರಗಳು, ರಾಷ್ಟ್ರೀಯತೆ, ವಿಳಾಸ, ವೃತ್ತಿ ಮತ್ತು ಶೈಕ್ಷಣಿಕ ಅರ್ಹತೆಗಳೆಲ್ಲವೂ ಇಲ್ಲಿ ದಾಖಲಾಗಿರುತ್ತವೆ.

2011ರ ಜನಗಣತಿಯ ಅಂಗವಾಗಿ 2010ರಲ್ಲಿ ಎನ್.ಪಿ.ಆರ್.ಗೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸಲಾಯಿತು. 2015ರಲ್ಲಿ ಈ ಮಾಹಿತಿಯನ್ನು ಮತ್ತೆ ಕಲೆಹಾಕಿ, ಮಾಹಿತಿಯ ಡಿಜಟಲೀಕರಣವನ್ನು ಮಾಡಲಾಗಿದೆ. 2021ರ ಜನಗಣತಿಯ ಸಂದರ್ಭದಲ್ಲಿ ಮತ್ತೆ ಈ ಮಾಹಿತಿಯನ್ನು ಕಲೆಹಾಕಿ, ಎನ್.ಪಿ.ಆರ್. ಅನ್ನು ಹೊರತರುವ ಯೋಜನೆಯಿದೆ.

ಗಮನಿಸಿ. ಎನ್.ಪಿ.ಆರ್.ನ ಆಧಾರದ ಮೇರೆಗೆ ಎನ್. ಆರ್.ಸಿ.ಯನ್ನು ಸಿದ್ಧಪಡಿಸಲಾಗುವುದು.

ಮುಸ್ಲಿಮರು ಮತ್ತು ಇತರ ಅಂಚಿನ ಸಮುದಾಯಗಳು ಕೇವಲ ಈ ಕಾಯಿದೆಯ ಬಗ್ಗೆ ಮಾತ್ರ ಆತಂಕಿತರಾಗಿಲ್ಲ. ಇದಲ್ಲದೆ ಎನ್.ಪಿ.ಆರ್. (ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್) ಮತ್ತು ಎನ್.ಆರ್.ಸಿ. (ರಾಷ್ಟ್ರೀಯ ಪೌರರ ರಿಜಿಸ್ಟರ್) ಗಳ ಮೂಲಕ ಕೇಂದ್ರ ಸರ್ಕಾರವು ತನ್ನ ರಾಜಕೀಯ ವಿರೋಧಿಗಳ ಪೌರತ್ವ ಸ್ಥಾನಮಾನವನ್ನು ತೆಗೆದುಹಾಕಬಹುದು ಎನ್ನುವ ಸಂಶಯವೂ ಅವರಲ್ಲಿದೆ. ಇದು ನಾನು ಪ್ರಸ್ತಾಪಿಸುತ್ತಿರುವ ಮೂರನೆಯ ಅಂಶ. ಇವೆರಡರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಜೊತೆಗೆ ನೀಡಲಾಗಿದೆ. ಜನಗಣತಿಯ ಮಾಹಿತಿಯನ್ನು ಒಳಗೊಂಡಿರುವ ಎನ್.ಪಿ.ಆರ್. ಅನ್ನು ಸಿದ್ಧಪಡಿಸಲಾಗುತ್ತಿದೆಯಾದರೂ, ಅದರ ಆಧಾರದ ಮೇಲೆ ಸಿದ್ಧಪಡಿಸಬೇಕಿರುವ ಎನ್.ಆರ್.ಸಿ.ಯನ್ನು ಅನುಷ್ಠನ ಮಾಡುವ ಉದ್ದೇಶವಿಲ್ಲ ಎಂದು ಪ್ರಧಾನಿಗಳೂ ಸೇರಿದಂತೆ ಹಲವರು ಹೇಳುತ್ತಿದ್ದಾರೆ. ಆದರೆ ಅವರ ಮಾತನ್ನು ಅವರ ವಿರೋಧಿಗಳು ನಂಬುವ ಪರಿಸ್ಥಿತಿಯಲ್ಲಿ ಇಲ್ಲ.

ಈ ವಿರೋಧಿಗಳ ಆತಂಕದ ಮೂಲಸೆಲೆ ಇರುವುದು ನಾನು ಪ್ರಸ್ತಾಪಿಸಬಯಸುವ ನಾಲ್ಕನೆಯ ಅಂಶದಲ್ಲಿ. ಪೌರತ್ವ (ತಿದ್ದುಪಡಿ) ಕಾಯಿದೆಯು ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಗುರುತಿಸಲು ಅಗತ್ಯವೆಂದು ಮೋದಿ ಸರ್ಕಾರದ ವಕ್ತಾರರು ಹೇಳುತ್ತಲೆ ಬಂದಿದ್ದಾರೆ. ಇದೇ ವಾದವನ್ನು ಹಿಂದೆ ಎನ್.ಪಿ.ಆರ್. ಮತ್ತು ಎನ್.ಅರ್. ಸಿ.ಗಳ ಸಂದರ್ಭದಲ್ಲಿಯೂ ಮಾಡಲಾಗಿತ್ತು. ಇಂದು ಎನ್.ಆರ್.ಸಿ.ಯನ್ನು ಅನುಷ್ಠನಗೊಳಿಸುವುದಿಲ್ಲ ಎಂದರೂ ಸಹ, ಆ ಮಾತನ್ನು ನಂಬಲು ಮೋದಿ ವಿರೋಧಿಗಳು ಸಿದ್ದರಿಲ್ಲ.

ಹಾಗಾಗಿಯೆ ಭಾಜಪ ಮತ್ತು ಮೋದಿ ಸರ್ಕಾರಗಳ ಪರೋಕ್ಷ ಉದ್ದೇಶಗಳ ಬಗ್ಗೆ ಸಾಕಷ್ಟು ಊಹಾಧಾರಿತ ಚರ್ಚೆಗಳು ನಡೆಯುತ್ತಿವೆ. ಆಧುನಿಕ ಭಾರತದ ಧರ್ಮನಿರಪೇಕ್ಷ ಆಯಾಮಗಳನ್ನು ಶಿಥಿಲಗೊಳಿಸುವ ಬಗ್ಗೆ ಭಾಜಪ ಮತ್ತು ಅದರ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ತಮ್ಮ ನಿಲುವುಗಳನ್ನು ಯಾವಾಗಲೂ ಮುಚ್ಚಿಟ್ಟಿಲ್ಲ. ಇಂದಿನ ಚರ್ಚೆಗಳಲ್ಲಿ ಹಲವಾರು ಭಾಜಪದ ಹಿರಿಯ ನಾಯಕರುಗಳು ಆಕ್ರಮಕ ಭಾಷೇಯನ್ನು ಬಳಸಲು, ತಮ್ಮ ವಿರೋಧಿಗಳ ರಾಷ್ಟ್ರಪ್ರೇಮ ಮತ್ತು ನಿಷ್ಠೆಗಳನ್ನು ಪ್ರಶ್ನಿಸಲು ಹಿಂಜರಿಯುತ್ತಿಲ್ಲ. ತಮ್ಮ ವಿರೋಧಿಗಳಿಗೆ ಭಾರತದಲ್ಲಿ ಸ್ಥಳವಿಲ್ಲ ಎಂದು ಪದೆಪದೆ ಹೇಳುತ್ತಿದ್ದಾರೆ. ಪ್ರಧಾನಿಗಳು ಮತ್ತು ಗೃಹ ಸಚಿವರು ಇಂತಹ ಹೇಳಿಕೆಗಳನ್ನು ಮಾಡದಿದ್ದರೂ, ತಮ್ಮ ನಿಕಟವರ್ತಿಗಳನ್ನು ಈ ಬಗೆಯ ಮಾತುಗಳನ್ನು ಆಡದಂತೆ ತಡೆಯುತ್ತಿಲ್ಲ. ಇಂತಹ ವಾಸ್ತವವು ನೆಲೆಗೊಳ್ಳುವುದಿಲ್ಲ ಎನ್ನುವ ಆಶ್ವಾಸನೆಯನ್ನು ನೀಡುತ್ತಿಲ್ಲ.

ಭಾರತದ ಸಂವಿಧಾನವನ್ನು, ಅದರಲ್ಲಿಯೂ ಅದರ ಧರ್ಮನಿರಪೇಕ್ಷ ಗುಣವನ್ನು, ಈಗಿರುವಂತೆ ಸಂರಕ್ಷಿಸಬೇಕು ಎನ್ನುವ ಗಟ್ಟಿಯಾದ ಸೈದ್ಧಾಂತಿಕ ನಿಲುವು ಇಂದು ಭಾರತದಲ್ಲಿ ಇದೆ ಎಂದು ನನಗೆ ಅನ್ನಿಸುತ್ತಿಲ್ಲ.

ಹಾಗಾಗಿಯೆ ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರಿಗೆ, ಹಿಂದುತ್ವದ ವಿರೋಧಿಗಳಿಗೆ ಭಾರತದಲ್ಲಿ ಸ್ಥಾನವಿಲ್ಲ ಎನ್ನುವ ಅಭಿಪ್ರಾಯ ದೇಶದಲ್ಲಿ ಮೂಡುತ್ತಿದೆ. ಇದು ಕಾಯಿದೆ ಸಮರ್ಥಕರು ಮತ್ತು ವಿರೋಧಿಗಳು ಇಬ್ಬರಲ್ಲಿಯೂ ಇರುವ ಒಮ್ಮತ. ಈ ಒಮ್ಮತಕ್ಕೆ ಸರಿಹೊಂದುವಂತೆ ಭಾರತದ ಸಂವಿಧಾನವನ್ನೆ ಬದಲಿಸಬೇಕು ಎನ್ನುವ ಮಾತುಗಳು ಸಹ ಆಗಾಗ ಆದರೆ ಸತತವಾಗಿಯೆ ಕೇಳಿಬರುತ್ತಿವೆ. ಭಾರತದ ಸಂವಿಧಾನವನ್ನು, ಅದರಲ್ಲಿಯೂ ಅದರ ಧರ್ಮನಿರಪೇಕ್ಷ ಗುಣವನ್ನು, ಈಗಿರುವಂತೆ ಸಂರಕ್ಷಿಸಬೇಕು ಎನ್ನುವ ಗಟ್ಟಿಯಾದ ಸೈದ್ಧಾಂತಿಕ ನಿಲುವು ಇಂದು ಭಾರತದಲ್ಲಿ ಇದೆ ಎಂದು ನನಗೆ ಅನ್ನಿಸುತ್ತಿಲ್ಲ. ಬದಲಿಗೆ ಇಂದು ಸಂವಿಧಾನದ ರಕ್ಷಣೆಗೆ (ದಲಿತ, ಹಿಂದುಳಿದ ವರ್ಗಗಳೂ ಸೇರಿದಂತೆ) ಕೆಲವು ಗುಂಪುಗಳು ಮುಂದಾದರೆ ಅದಕ್ಕೆ ಕಾರಣವೂ ಸರಳ. ತಮಗೆ ಇಂದು ದೊರಕುವ ವಿಶೇಷ ಸೌಲಭ್ಯಗಳನ್ನು ಕಳೆದುಕೊಳ್ಳಲು ಈ ಗುಂಪುಗಳು ಸಿದ್ಧವಿಲ್ಲ. ಈ ಗುಂಪುಗಳಿಗೆ ಸೇರಿದ ಎಲ್ಲರೂ ಹಿಂದುತ್ವವಾದಿಗಳ ಸಂವಿಧಾನ ವಿರೋಧಿ ವಾದವನ್ನು ಪ್ರಜ್ಞಾಪೂರ್ವಕವಾಗಿ ವಿರೋಧಿಸುತ್ತಾರೆ ಎಂದು ಸ್ಪಷ್ಟವಾಗಿಲ್ಲ. ಭಾರತವು ತನ್ನ ಧರ್ಮನಿರಪೇಕ್ಷ ನೆಲೆಯನ್ನು ಕಳೆದುಕೊಂಡು, ಸೀಮಿತ ನೆಲೆಯ ಹಿಂದು ರಾಷ್ಟ್ರವಾದರೆ ಅದರ ಬಗ್ಗೆ ಈ ಗುಂಪುಗಳ ಹಲವರಿಗೆ ಆಕ್ಷೇಪಣೆಯಿಲ್ಲ.

ಕುಸಿಯುತ್ತಿರುವ ಅರ್ಥವ್ಯವಸ್ಥೆಯೂ ಸೇರಿದಂತೆ ಹಲವು ಸವಾಲುಗಳನ್ನು ಭಾರತವು ಇಂದು ಎದುರಿಸುತ್ತಿರುವ ಸಂದರ್ಭದಲ್ಲಿ, ಮೋದಿ ಸರ್ಕಾರವು ಆ ಸವಾಲುಗಳತ್ತ ತನ್ನ ಎಲ್ಲ ಗಮನ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿಲ್ಲ. ಬದಲಿಗೆ ಪೌರತ್ವ (ತಿದ್ದುಪಡಿ) ಕಾಯಿದೆಯಂತಹ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಇದು ದೇಶದ ಗಮನವನ್ನು ಗಂಭೀರ ಸವಾಲುಗಳಿಂದ ಮತ್ತೆ ಇನ್ನೆಲ್ಲಿಯೊ ಸೆಳೆಯುವ ಪ್ರಯತ್ನವೆ ಇರಬಹುದು.

ಇವುಗಳ ನಡುವೆಯೆ ಮುಂದಿನ ದಶಕಗಳ ಭಾರತದ ಸ್ವರೂಪವನ್ನು ನಿರ್ಧರಿಸುವ ಗಂಭೀರ ಚರ್ಚೆಯೊಂದು ಇಂದು ಪ್ರಾರಂಭವಾಗಿದೆ ಎನ್ನುವುದನ್ನು ನಾವು ಯಾರೂ ನಿರ್ಲಕ್ಷಿಸುವಂತಿಲ್ಲ. ಭಾರತ ದೇಶ ಮತ್ತು ಸಂವಿಧಾನಗಳು ಎರಡನ್ನೂ ಸಹ ಭಾಜಪ ತನ್ನ ಇಮೇಜ್ (ಪ್ರತೀಕ) ಅಂತೆ ರೂಪಿಸುವ ಪ್ರಯತ್ನವನ್ನು ಆರಂಭಿಸಿದೆ. ನಮ್ಮ ರಾಜಕೀಯ ಒಲವುಗಳು ಮತ್ತು ಸೈದ್ಧಾಂತಿಕ ಬದ್ಧತೆಗಳು ಏನೆ ಇದ್ದರೂ ಇಂದಿನ ರಾಜಕೀಯ ಪ್ರಯತ್ನಗಳ ಸ್ವರೂಪ ಮತ್ತು ಪ್ರಾಮುಖ್ಯತೆಗಳ ಬಗ್ಗೆ ಮುಗ್ಧವಾಗಿರುವಂತಿಲ್ಲ. 

ಭಾರತವು ಯಾವ ಬಗೆಯ ಸಮಾಜ? ಎಂತಹ ರಾಷ್ಟ್ರ? ಅದಕ್ಕೆ ಸೇರಿದವರು ಯಾರು ಎನ್ನುವ ಚರ್ಚೆ ಇಂದು ಪ್ರಾರಂಭವಾಗಿದೆ.

ಭಾರತೀಯ ಪೌರತ್ವ ಕಾಯಿದೆ ಮತ್ತು ಅದಕ್ಕೆ ಮಾಡಲಾಗಿರುವ ತಿದ್ದುಪಡಿಗಳು

ಭಾರತೀಯ ಸಂವಿಧಾನದ ಎರಡನೆಯ ಭಾಗದಲ್ಲಿ ದೇಶದ ಪೌರತ್ವವನ್ನು ಪ್ರಧಾನ ಮಾಡುವುದಕ್ಕೆ ಸಂಬಂಧಿಸಿದ 5ರಿಂದ 11ರವರೆಗಿನ ಪರಿಚ್ಛೇದಗಳಿವೆ. ಇದಕ್ಕೆ ಸಂಬಂಧಿಸಿದ ಶಾಸನವೆಂದರೆ ಪೌರತ್ವ ಕಾಯಿದೆ, 1955. ಈ ಕಾಯಿದೆಯನ್ನು 1986, 1992, 2003, 2005 ಮತ್ತು 2019ರಲ್ಲಿ ತಿದ್ದುಪಡಿ ಮಾಡಲಾಗಿದೆ. 2019ರ ತಿದ್ದುಪಡಿಯ ಕಾರಣವಾಗಿಯೆ ಈಗ ನಡೆಯುತ್ತಿರುವ ಚರ್ಚೆಯು ಪ್ರಾರಂಭವಾಗಿದೆ.

ಸಂವಿಧಾನದ ಐದನೆಯ ಪರಿಚ್ಛೇದದ ಪ್ರಕಾರ, ಸಂವಿಧಾನವು ಅಂಗೀಕೃತವಾದಾಗ ಭಾರತದಲ್ಲಿ ಹುಟ್ಟಿದವರು ಇಲ್ಲವೆ ಕನಿಷ್ಠ ಐದು ವರ್ಷಗಳಿಂದ ವಾಸ ಮಾಡುತ್ತಿದ್ದವರು ಇಲ್ಲವೆ ಅಥವಾ ಭಾರತೀಯ ಮಾತಾಪಿತೃಗಳನ್ನು ಹೊಂದಿದ್ದ ಎಲ್ಲರನ್ನೂ ಭಾರತದ ಪ್ರಜೆಗಳು ಎಂದು ಪರಿಗಣಿಸಲಾಯಿತು. ಹೀಗೆ ಪರಿಗಣಿಸಲು ನವೆಂಬರ್ 26, 1949 ನಿಗದಿತ ದಿನಾಂಕವಾಗಿತ್ತು. ಇದಕ್ಕೆ ಮೊದಲಿನ ಅವಧಿಯಲ್ಲಿ ಭಾರತದ ನಿವಾಸಿಗಳೆಲ್ಲರೂ ಇಲ್ಲವೆ ಬ್ರಿಟಿಷ ಸಾಮ್ರಾಜ್ಯದ ಅಂಗವಾಗಿರುತ್ತಿದ್ದರು ಅಥವಾ ಭಾರತದೊಳಗಿದ್ದ 545 ದೇಶಿ ಸಂಸ್ಥಾನಗಳಲ್ಲಿ ಯಾವುದಾದರೊಂದರಲ್ಲಿ ವಾಸಿಸುತ್ತಿದ್ದರೆ, ಬ್ರಿಟಿಷ್ ರಕ್ಷಿತ ವ್ಯಕ್ತಿಯಾಗಿರುತ್ತಿದ್ದರು. 1858ರಲ್ಲಿ ಭಾರತವು ಬ್ರಿಟಿಷ್ ಸಾಮ್ರಾಜ್ಯದ ಅಂಗವಾದ ನಂತರದಲ್ಲಿ ಇಂತಹ ವ್ಯವಸ್ಥೆಯೊಂದು ರೂಪುಗೊಂಡಿತ್ತು.

1986ರಲ್ಲಿ ಮೊದಲುಗೊಂಡು ಪೌರತ್ವ (ತಿದ್ದುಪಡಿ) ಕಾಯಿದೆಗಳನ್ನು ಭಾರತೀಯ ಸಂಸತ್ತು ಅಂಗೀಕರಿಸಿದೆ. 1986ರ ತಿದ್ದುಪಡಿಯಲ್ಲಿ ಪೌರತ್ವ ಪಡೆಯಲು ತಂದೆ ಭಾರತೀಯ ಪ್ರಜೆಯಾಗಿರಬೇಕು ಎನ್ನುವ ಅಂಶವನ್ನು ಸೇರಿಸಲಾಯಿತು. 1992ರಲ್ಲಿ ಮಾಡಲಾದ ತಿದ್ದುಪಡಿಯಲ್ಲಿ ತಂದೆ ಇಲ್ಲವೆ ತಾಯಿಯರಲ್ಲಿ ಒಬ್ಬರಾದರೂ ಭಾರತೀಯರಾಗಿರಬೇಕು ಎನ್ನುವ ಕರಾರನ್ನು ಹಾಕಲಾಯಿತು. ಈ ಕರಾರುಗಳನ್ನು ಸೇರಿಸಲು ಅಸ್ಸಾಮ್ ಒಪ್ಪಂದವು ಕಾರಣವಾಗಿತ್ತು. 1980ರ ದಶಕದ ಪ್ರಾರಂಭದಲ್ಲಿ ಅಸ್ಸಾಮಿನಲ್ಲಿ ಬಂಗಾಳಿ ಭಾಷಿಕರ ಸಂಖ್ಯೆ ಹೆಚ್ಚುತ್ತ, ಅಸ್ಸಾಮಿ ಸಂಸ್ಕೃತಿಯು ನಶಿಸುತ್ತಿದೆ ಎನ್ನುವ ಆತಂಕವು ಹೆಚ್ಚಿತ್ತು. ಹೊರಗಿನವರು ಅಸ್ಸಾಮಿಗೆ ಬರಬಾರದು ಎಂದು ದೊಡ್ಡ ಚಳುವಳಿಯನ್ನೆ ಅಸ್ಸಾಮಿನ ವಿದ್ಯಾರ್ಥಿಗಳು ನಡೆಸಿದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

2003ರ ತಿದ್ದುಪಡಿಯ ಪ್ರಕಾರ, ಭಾರತದಲ್ಲಿಯೆ ಹುಟ್ಟಿದ ಮಗುವೊಂದು ಪೌರತ್ವವನ್ನು ಪಡೆಯಬೇಕಾದರೆ, ತಂದೆ ಅಥವಾ ತಾಯಿಯರಲ್ಲಿ ಒಬ್ಬರೂ ಸಹ ಅಕ್ರಮ ವಲಸಿಗರಾಗಿರಬಾರದು. ಇಂತಹ ಅಕ್ರಮ ವಲಸಿಗರಿಗೆ ಪೌರತ್ವ ಪಡೆಯಲು ಯಾವುದೆ ದಾರಿಯಿಲ್ಲ ಎಂದೂ ಸಹ ಈ ತಿದ್ದುಪಡಿಯು ಸ್ಪಷ್ಟಪಡಿಸಿತು.

2005 ಮತ್ತು 2015ರ ತಿದ್ದುಪಡಿಗಳು ಪ್ರಾಥಮಿಕವಾಗಿ, ಭಾರತೀಯ ಮೂಲದ ಆದರೆ ಇತರೆ ದೇಶಗಳ ಪೌರತ್ವವನ್ನು ಪಡೆದಿರುವ ವ್ಯಕ್ತಿಗಳಿಗೆ ಕೆಲವು ಸೌಕರ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದವು. ಈ ವೇಳೆಗೆ ಅಮೆರಿಕ ಮತ್ತು ಯೂರೋಪಿನ ದೇಶಗಳಲ್ಲಿ ನೆಲಸಿದ್ದ ಭಾರತೀಯರು ಜಂಟಿ ಇಲ್ಲವೆ ಉಭಯ ಪೌರತ್ವ ಸೌಕರ್ಯವನ್ನು ನಿರೀಕ್ಷಿಸುತ್ತಿದ್ದರು. ಹೀಗೆ ಹೊರಗೆ ನೆಲಸಿದ್ದ ಭಾರತೀಯರಿಂದ ಬಂಡವಾಳ ಹೂಡಿಕೆ ಮತ್ತು ಹಣರವಾನೆಗಳ ಮೂಲಕ ಸಂಪನ್ಮೂಲಗಳನ್ನು ನಿರೀಕ್ಷಿಸುತ್ತಿದ್ದ ಭಾರತವು ಕೆಳಗಿನ ಎರಡು ಬಗೆಯ ಸೌಕರ್ಯಗಳನ್ನು ಒದಗಿಸಿತು: ಓವರಸೀಸ್ ಸಿಟಿಝನಶಿಪ್ ಆಫ್ ಇಂಡಿಯಾ (ಓಸಿಐ ಅಥವಾ ಸಾಗರೋತ್ತರ ಭಾರತೀಯ ನಾಗರಿಕರು) ಮತ್ತು ಪರ್ಸನ್ ಆಫ್ ಇಂಡಿಯನ್ ಆರಿಜನ್ (ಪಿಐಒ ಅಥವಾ ಭಾರತೀಯ ಮೂಲದ ವ್ಯಕ್ತಿ). ಇವೆರಡೂ ಸೌಕರ್ಯಗಳು ಪೂರ್ಣ ಪೌರತ್ವವನ್ನು ನೀಡದಿದ್ದರೂ ಸಹ ಅನಿವಾಸಿ ಭಾರತೀಯರಿಗೆ ತಮ್ಮ ಮೂಲದೇಶದೊಡನೆ ವಿಶೇಷ ಸಂಬಂಧವೊಂದನ್ನು ಕಟ್ಟಿಕೊಳ್ಳಲು ಸಹಕಾರಿಯಾಯಿತು.

ಈ ತಿದ್ದುಪಡಿಗಳ ಸಾಲಿಗೆ 2019ರ ಪೌರತ್ವ (ತಿದ್ದುಪಡಿ) ಕಾಯಿದೆಯೂ ಸೇರುತ್ತಿದೆ. ಇದು ಮೊದಲ ಬಾರಿಗೆ ಧಾರ್ಮಿಕವಾದ ಆಯಾಮವೊಂದನ್ನು ಪೌರತ್ವಕ್ಕೆ ಸಂಬಂಧಿಸಿದಂತೆ ಸೇರಿಸುತ್ತಿದೆ. ಈ ತಿದ್ದುಪಡಿಯನ್ನು ಮಾಡಲಾಗುತ್ತಿರುವುದು ಅಕ್ರಮ ವಲಸಿಗ ಎನ್ನುವುದರ ವ್ಯಾಖ್ಯೆಗೆ ಸಂಬಂಧಿಸಿದಂತೆ. ಅಂದರೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ನಿವಾಸಿಗಳಾಗಿದ್ದ ಹಿಂದು, ಸಿಖ್, ಪಾರ್ಸಿ, ಬೌದ್ಧ ಮತ್ತು ಕ್ರೈಸ್ತರುಗಳು ಭಾರತದಲ್ಲಿ ಯಾವುದೇ ದಾಖಲೆಗಳಿಲ್ಲದೆ ವಾಸವಾಗಿದ್ದರೆ, ಅವರುಗಳಿಗೆ ಆರು ವರ್ಷಗಳ ಒಳಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು. ಇದುವರೆಗೆ ಯಾರಿಗಾದರೂ ಸರಿಯೆ, ಭಾರತದ ಪೌರತ್ವ ದೊರಕಲು 12 ವರ್ಷಗಳ ಕಾಲ ಭಾರತದ ಕ್ರಮಬದ್ಧ ನಿವಾಸಿಯಾಗಿರಬೇಕಿತ್ತು. ಈಗ 2014ರ ಡಿಸೆಂಬರ್ 31ಕ್ಕಿಂತ ಮೊದಲು ಭಾರತವನ್ನು ಪ್ರವೇಶಿಸಿದ್ದ ಮತ್ತು ಮೇಲೆ ಗುರುತಿಸಿದಮೂರು ಮುಸ್ಲಿಮ್ ಬಹುಸಂಖ್ಯಾತ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಪಡೆಯುವ ಪಥವೊಂದನ್ನು 2019ರ ತಿದ್ದುಪಡಿಯು ಒದಗಿಸುತ್ತದೆ.

ಆದರೆ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಧಾರ್ಮಿಕ ಅಲ್ಪಸಂಖ್ಯಾತರುಗಳಿಗೆ (ಉದಾಹರಣೆಗೆ ಅಹ್ಮದಿಯಾ) ಅಥವಾ ಭೂತಾನದಲ್ಲಿನ ಹಿಂದೂಗಳು ಇಲ್ಲವೆ ಕ್ರೈಸ್ತರಿಗೆ ಅಥವಾ ಬರ್ಮಾದ ಹಿಂದೂಗಳು ಮತ್ತು ರೋಹಿಂಗ್ಯಾರುಗಳು ಮತ್ತು ಶ್ರೀಲಂಕಾದ ಹಿಂದೂ ಹಾಗೂ ಕ್ರೈಸ್ತ ತಮಿಳುರುಗಳು

– ಈ ಎಲ್ಲ ಹಿನ್ನೆಲೆಯ ಜನರಿಗೆ ಅವರುಗಳು ಧಾರ್ಮಿಕ ಕಿರುಕುಳವನ್ನು ಎದುರಿಸಿದರೂ ಸಹ, ಈ ತಿದ್ದುಪಡಿಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

Leave a Reply

Your email address will not be published.