ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು..?

 

ಕಳೆದ ಎರಡು ದಶಕಗಳಲ್ಲಿ ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಮುಖ್ಯವೂ ಬೆಳೆದಿದೆ. ಆದರೆ ಹಿಂದುತ್ವ ವಿಚಾರಧಾರೆಯ ಸಂಘಟನೆಗಳ ಮೂಲಧಾತುವಾದ ಆರೆಸ್ಸೆಸ್ಸಿನ ಬಗ್ಗೆ ಮುಕ್ತ ಚರ್ಚೆಯಾಗಿಲ್ಲ. ವಿಚಾರವಾದಿಗಳಲ್ಲಿ ಬಹುತೇಕರು ಆರೆಸ್ಸೆಸ್ಸಿನ ತತ್ವಸಿದ್ಧಾಂತಗಳೇ ತಪ್ಪು ಮತ್ತು ದೇಶಕ್ಕೆ ಮಾರಕ ಎಂದು ತಳ್ಳಿಹಾಕುತ್ತಾರೆ. ಇದು ಹೌದೇ ಎಂಬುದು ಬೇರೊಂದು ಚರ್ಚೆಗೆ ವಿಷಯ ವಸ್ತುವಾಗಬಹುದು. ಆದರೆ ಆರೆಸ್ಸೆಸ್ ಸಂಘಟನೆ ತನ್ನ ಘೋಷಿತ ತತ್ವಸಿದ್ಧಾಂತಗಳಿಗೆ ಬದ್ಧವಾಗಿ ನೀತಿ-ನಿರ್ಣಯ ರೂಪಿಸುತ್ತಿದೆಯೇ ಎಂಬುದು ಕೂಡಾ ಪರಿಶೀಲಿಸಬೇಕಾದ ವಿಷಯವಾಗಿದೆ.

ಹಿಂದೂಗಳ ಅಸ್ಮಿತೆಯನ್ನು ಬಡಿದೆಬ್ಬಿಸುವುದರ ಮೂಲಕ ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣ ಆರೆಸ್ಸೆಸ್ಸಿನ ಘೋಷಿತ ಉದ್ದೇಶ. ಇದಕ್ಕೆ ಪೂರಕವಾಗಿ ಹಿಂದುತ್ವ, ಸ್ವದೇಶಿ, ಸ್ವಾಭಿಮಾನ ಮತ್ತು ಜಾತಿ ಮೀರಿದ ಧಾರ್ಮಿಕ ಐಕ್ಯತೆಯ ಪ್ರತಿಪಾದನೆ ಆರೆಸ್ಸೆಸ್ಸಿನ ಮೂಲಮಂತ್ರ. ಇದೇ ಡಾಕ್ಟರ್‍ಜೀ ಮತ್ತು ಗುರೂಜಿಯವರು ತೋರಿದ ಆಚಾರ-ವಿಚಾರ ಶುದ್ಧತೆಯ ನೀತಿಮಾರ್ಗ. ಆದರೆ ರಾಜಕೀಯ ಅಧಿಕಾರ ಮತ್ತು ಸರ್ವವ್ಯಾಪಿ ಪ್ರಭಾವ ಹೆಚ್ಚಿಸಿಕೊಳ್ಳುವ ಹಾದಿಯಲ್ಲಿ ಆರೆಸ್ಸೆಸ್ ತನ್ನ ಮೂಲ ಘೋಷಿತ ಉದ್ದೇಶಗಳಿಂದ ದೂರ ಸರಿದಿದೆಯೇ ಅಥವಾ ಆಯ್ಕೆಯಿಂದ ಕುರುಡಾಗಿದೆಯೇ..?

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಸಂಘಟನೆಯನ್ನು ಇಂದು ಗಂಭೀರವಾಗಿ ಪರಿಗಣಿಸಲೇಬೇಕಾದ ಅಗತ್ಯವಿದೆ. ಆರೆಸ್ಸೆಸ್ಸಿಗೂ ತನ್ನ ಸ್ವವಿಮರ್ಶೆ ಮಾಡಿಸಬೇಕಾದ ಜರೂರತ್ತು ಇದೆ. ಅಂತೆಯೇ ಈ ಚರ್ಚೆ.

*ಈ ಚರ್ಚೆಯ ಲೇಖನಗಳಲ್ಲಿ ವ್ಯಕ್ತವಾದ ಅಭಿಪ್ರಾಯ, ಆರೋಪ, ವಿಶ್ಲೇಷಣೆಗಳಿಗೆ ಆಯಾ ಲೇಖಕರು ಹೊಣೆ.

Leave a Reply

Your email address will not be published.