ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಕೃಷಿ ತಜ್ಞ ಹೇಳುವುದೇನು?

ಸಿರಾಜ್ ಹುಸೇನ್

ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿರೋಧದ ಹಿನ್ನೆಲೆಯಲ್ಲೇ ಭಾರತದ ಕೃಷಿ ಕ್ಷೇತ್ರದ ಹಲವು ಸಮಸ್ಯೆಗಳು ಮುನ್ನೆಲೆಗೆ ಬಂದಿವೆ. ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿರಾಜ್ ಹುಸೇನ್ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕೇಂದ್ರ ಕೃಷಿ ಸಚಿವಾಲಯದ ಆಹಾರ ಸಂಸ್ಕರಣಾ ಘಟಕದಲ್ಲಿ ಕಾರ್ಯದರ್ಶಿಯಾಗಿ, ಕೃಷಿ ಸಚಿವಾಲಯದ ಕಾರ್ಯದರ್ಶಿಯಾಗಿ, ಭಾರತೀಯ ಆಹಾರ ನಿಗಮದ ಎಂ.ಡಿ. ಆಗಿ ಕಾರ್ಯನಿರ್ವಹಿಸಿರುವ ಲೇಖಕರು ಇದೀಗ ಭಾರತೀಯ ಸಂಶೋಧನಾ ಸಂಸ್ಥೆಯಲ್ಲಿ ಅಂತಾರಾಷ್ಟಿçÃಯ ಆರ್ಥಿಕ ಸಂಬAಧಗಳ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ.

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಮುಷ್ಕರ, ಪ್ರತಿಭಟನೆಗೆ ಎರಡು ತಿಂಗಳು ತುಂಬಿದೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಮಸೂದೆಗಳನ್ನು ರದ್ದುಪಡಿಸುವುದಿಲ್ಲ ಎಂದು ದೃಢ ನಿಶ್ಚಯ ಮಾಡಿದೆ. ಸೆಪ್ಟಂಬರ್ 2020ರಲ್ಲಿ ಯಾವುದೇ ಚರ್ಚೆ ಇಲ್ಲದೆ ಸಂಸತ್ತಿನಲ್ಲಿ ಅವಸರದಿಂದ ಜಾರಿಗೊಳಿಸಿದ ಈ ಮಸೂದೆಯನ್ನು ಅಮಾನತಿನಲ್ಲಿಡಲೂ ಸರ್ಕಾರ ಒಪ್ಪುತ್ತಿಲ್ಲ. ಈ ಕಾಯ್ದೆಯಿಂದ ರೈತರಿಗೆ ಉಂಟಾಗುವ ಉಪಯೋಗಗಳ ಬಗ್ಗೆ ಕೇಂದ್ರ ಸಚಿವರು ವಿವರಣೆ ನೀಡುತ್ತಿದ್ದರೆ, ಸಾಮಾಜಿಕ ತಾಣಗಳಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಹೇಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪದ್ಧತಿಯ ಮೂಲಕ ಲಾಭಗಳಿಸುತ್ತಿದ್ದಾರೆ ಎನ್ನುವ ಕಥನಗಳು ಹರಿದಾಡುತ್ತಿವೆ. ಪಂಜಾಬ್ ಮತ್ತು ಹರಿಯಾಣ ರೈತ ಪ್ರತಿಭಟನೆಯ ಕೇಂದ್ರ ಬಿಂದು ಆಗಿದ್ದು, ದೇಶದ ಇತರ ರಾಜ್ಯಗಳಲ್ಲೂ ಕೃಷಿ ಕ್ಷೇತ್ರದಲ್ಲಿ ಭರವಸೆ ಮೂಡಿಸುವಂತಹ ಲಕ್ಷಣಗಳು ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಕೃಷಿ ತಜ್ಞ ಸಿರಾಜ್ ಅಹಮದ್ ಕೆಲವು ಗಂಭೀರ ವಿಚಾರಗಳನ್ನು ಚರ್ಚೆಗೊಳಪಡಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಭೂ ಹಿಡುವಳಿಯ ಸನ್ನಿವೇಶ ಹೇಗಿದೆ?

ವ್ಯವಸಾಯ ಭೂಮಿಯ ಪ್ರಮಾಣ ಕುಸಿಯುತ್ತಲೇ ಇದೆ. 2010-11ರಲ್ಲಿ 159.5 ದಶಲಕ್ಷ ಹೆಕ್ಟೇರ್ ಇದ್ದ ವ್ಯವಸಾಯ ಭೂಮಿ 2015-16ರಲ್ಲಿ 157 ದಶಲಕ್ಷ ಹೆಕ್ಟೇರ್‌ಗೆ ಕುಸಿದಿತ್ತು. ಆದರೆ ಇದೇ ಅವಧಿಯಲ್ಲಿ ಕೃಷಿಚಟುವಟಿಕೆಗೆ ಒಳಪಟ್ಟಿರುವ ಭೂಮಿಯ ಪ್ರಮಾಣ 138.3 ದಶಲಕ್ಷ ಹೆಕ್ಟೇರ್‌ನಿಂದ 146 ದಶಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಅಂದರೆ ರೈತರ ಸರಾಸರಿ ಭೂಹಿಡುವಳಿಯ ಪ್ರಮಾಣ ಕುಸಿಯುತ್ತಿರುವುದು ಸ್ಪಷ್ಟವಾಗಿದ್ದು, ಪ್ರಸ್ತುತ ಸರಾಸರಿ ಭೂ ಹಿಡುವಳಿ 1.8 ಹೆಕ್ಟೇರ್‌ನಿಂದ 1.2 ಹೆಕ್ಟೇರ್‌ಗೆ ಕುಸಿದಿದೆ. ದೇಶದಲ್ಲಿ ಒಟ್ಟು ರೈತರ ಸಂಖ್ಯೆಯ ಬಗ್ಗೆ ನಿಖರ ಅಂಕಿಅAಶಗಳು ಇಲ್ಲದಿರುವುದರಿಂದ ಭೂ ಹಿಡುವಳಿಯ ಸಂಖ್ಯೆಯನ್ನು ಸಹ ಅಂದಾಜು ಮಾಡಬೇಕಾಗುತ್ತದೆ. ಅಂದರೆ ಭಾರತದಲ್ಲಿ ಒಟ್ಟು 14.6 ಕೋಟಿ ರೈತರು ಇರುವುದನ್ನು ಗುರುತಿಸಬಹುದು. ಶೇ 86ರಷ್ಟು ರೈತರು 2 ಹೆಕ್ಟೇರ್‌ಗಿಂತಲೂ ಕಡಿಮೆ ಭೂಮಿಯನ್ನು ಹೊಂದಿದ್ದು ಇವರನ್ನು ಸಣ್ಣ ಮತ್ತು ಅತಿಸಣ್ಣ ರೈತರು ಎಂದು ಪರಿಗಣಿಸಲಾಗುತ್ತದೆ. ಈ ಸಣ್ಣ ರೈತರು ಒಟ್ಟು ಕೃಷಿ ಭೂಮಿಯ ಶೇ 47.35ರಷ್ಟು ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಭಾರತದ ಶೇ 50ಕ್ಕಿಂತಲೂ ಹೆಚ್ಚು ರೈತರು ಉತ್ತರಪ್ರದೇಶ, ಬಿಹಾರ, ಮಹಾರಾಷ್ಟç, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ.

ಭೂಮಿಯ ಛಿದ್ರೀಕರಣ ಒಂದು ಸಮಸ್ಯೆಯೇ?

ಸಣ್ಣ ಪ್ರಮಾಣದ ಭೂ ಹಿಡುವಳಿಗಳು ಸಣ್ಣ ಪ್ರಮಾಣದ ಉತ್ಪನ್ನ ಕೇಂದ್ರಗಳನ್ನು ಸೃಷ್ಟಿಸುತ್ತವೆ. ಎಪಿಎಂಸಿ ಮಾರುಕಟ್ಟೆಗೆ, ಸ್ಥಳೀಯ ಮಂಡಿಗಳಿಗೆ ಅಥವಾ ಹತ್ತಿರದ ಮಾರುಕಟ್ಟೆಗೆ ಈ ಉತ್ಪನ್ನಗಳನ್ನು ಕೊಂಡೊಯ್ಯಲು ಹಲವು ರೈತರ ಭೂಮಿಯಲ್ಲಿ ಬೆಳೆದ ಫಸಲನ್ನು ಒಂದು ಟ್ರಾಲಿಯಲ್ಲಿ ಕೊಂಡೊಯ್ಯಬೇಕಾಗುತ್ತದೆ. ಭೂ ವಿತರಣೆಯಿಂದ ಉಂಟಾಗುವ ಸಣ್ಣ ಪ್ರಮಾಣದ ಹಿಡುವಳಿಗಳ ಪರಿಣಾಮ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಹೊಲಗದ್ದೆಗಳ ಬಳಿಯಲ್ಲೇ ಫಸಲನ್ನು ಮಾರಾಟ ಮಾಡಬೇಕಾಗುತ್ತದೆ. ಎಪಿಎಂಸಿ ಮಂಡಿಗಳ ಜಾಲ ಶಿಥಿಲವಾಗಿರುವ ರಾಜ್ಯಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ದೇಶದ ದುಡಿಯುವ ವರ್ಗಗಳ ಪೈಕಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು ಎಷ್ಟಿದ್ದಾರೆ? ಈ ದುಡಿಮೆಗಾರರನ್ನು ಹೊರಹಾಕಬೇಕೇ? ಹೇಗೆ ಹೊರಹಾಕುವುದು?

ಕಾರ್ಮಿಕ ಬ್ಯೂರೋ ಮಾಡಿರುವ ಒಂದು ಅಂದಾಜಿನ ಪ್ರಕಾರ ಭಾರತದ ಶೇ 45ರಷ್ಟು ದುಡಿಮೆಗಾರರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. 2011ರ ಜನಗಣತಿಯ ಪ್ರಕಾರ ಕೃಷಿ ಕ್ಷೇತ್ರದಲ್ಲಿರುವ ದುಡಿಮೆಗಾರರ ಪೈಕಿ ಶೇ 55ರಷ್ಟು ಕೃಷಿ ಕಾರ್ಮಿಕರಾಗಿದ್ದಾರೆ. ಇವರಿಗೆ ಸ್ವಂತ ಭೂಮಿ ಇರುವುದಿಲ್ಲವಾಗಿ ಇತರರ ಜಮೀನಿನಲ್ಲಿ ದುಡಿಮೆ ಮಾಡುತ್ತಾರೆ. ಸ್ವಂತ ಭೂಮಿಯನ್ನು ಹೊಂದಿದ್ದು ವ್ಯವಸಾಯ ಮಾಡುವ ರೈತರ ಸಂಖ್ಯೆ ಶೇ 45ಕ್ಕೂ ಕಡಿಮೆ ಇದೆ. ಕೃಷಿ ಕ್ಷೇತ್ರವೊಂದರಲ್ಲೇ ಅಭಿವೃದ್ಧಿ ಸಾಧಿಸುವುದರಿಂದ ಈ ಬೃಹತ್ ಜನಸಂಖ್ಯೆಯನ್ನು ನಿರ್ವಹಿಸಲು ಭಾರತದ ಕೃಷಿ ಕ್ಷೇತ್ರಕ್ಕೆ ಸಾಧ್ಯವಾಗುವುದಿಲ್ಲ.

ಭತ್ತ ಒಂದೇ ಹೆಚ್ಚು ನೀರು ಬಳಸುವ ಬೆಳೆಯೇ?

ಒಂದು ಕಿಲೋ ಸಕ್ಕರೆ ಉತ್ಪಾದನೆಗೆ 1500 ರಿಂದ 2000 ಲೀಟರ್ ನೀರು ಬೇಕಾಗುತ್ತದೆ, ಹಾಗೆಯೇ ಒಂದು ಕಿಲೋ ಅಕ್ಕಿ ಬೆಳೆಯಲು 5000 ಲೀಟರ್ ನೀರು ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಇದು ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿ ಕಂಡುಬರುತ್ತದೆ. ಉತ್ತರಪ್ರದೇಶದಲ್ಲಿ ಬೆಳೆಯುವ ಕಬ್ಬಿನಿಂದ ಉತ್ಪಾದನೆಯಾಗುವ ಒಂದು ಕಿಲೋ ಸಕ್ಕರೆಗೆ 1044 ಲೀಟರ್ ನೀರು ಬೇಕಾಗುತ್ತದೆ, ಅದೇ ಮಹಾರಾಷ್ಟçದಲ್ಲಾದರೆ 2086 ಲೀಟರ್ ನೀರು ಬೇಕಾಗುತ್ತದೆ.

ಮಹಾರಾಷ್ಟçದ ಶೇ 4ರಷ್ಟು ವ್ಯವಸಾಯ ಯೋಗ್ಯ ಭೂಮಿಯಲ್ಲಿ ಕಬ್ಬು ಬೆಳೆಯಲಾಗುತ್ತದೆ. ಇದು ಶೇ 70ಕ್ಕೂ ಹೆಚ್ಚು ನೀರಾವರಿ ಜಲ ಸಂಪನ್ಮೂಲವನ್ನು ಬಳಸುತ್ತದೆ. ಇತರ ಬೆಳೆಗಳಿಗೆ ಹೋಲಿಸಿದರೆ ಕಬ್ಬಿನ ಬೆಳೆ ಹೆಚ್ಚು ಮೌಲ್ಯ ಗಳಿಸುವುದರಿಂದ ಮತ್ತು ಖಚಿತವಾದ ಮಾರುಕಟ್ಟೆ ಇರುವುದರಿಂದ, ಜಲಸಂಪನ್ಮೂಲ ಶಿಥಿಲವಾಗಿರುವ ಪ್ರದೇಶಗಳಲ್ಲೂ ಕಬ್ಬು ಬೆಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಪಂಜಾಬ್‌ನಲ್ಲಿ ಶೇ 10.2ರಷ್ಟು ನಿವ್ವಳ ವ್ಯವಸಾಯ ಭೂಮಿಯಲ್ಲಿ ಮಾತ್ರ ಕಬ್ಬು ಬೆಳೆಯಲಾಗುತ್ತದೆ. ಹಾಗಾಗಿ ಕಬ್ಬು ಬೆಳೆಗೆ ನೆರವಾಗುವಂತಹ ಕೃಷಿ ನೀತಿಗಳು ಇವರಿಗೆ ಉಪಯುಕ್ತವಾಗುವುದಿಲ್ಲ.

ರೈತರು ಕನಿಷ್ಟ ಬೆಂಬಲ ಬೆಲೆ ಪಡೆಯುವುದು ಭತ್ತ ಮತ್ತು ಗೋಧಿಗೆ ಮಾತ್ರವೇ?

ಸರ್ಕಾರ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ. ಆದರೂ ಗೋಧಿ ಮತ್ತು ಭತ್ತವನ್ನು ಮಾತ್ರವೇ ಬೃಹತ್ ಪ್ರಮಾಣದಲ್ಲಿ ಸರ್ಕಾರ ಖರೀದಿಸುತ್ತದೆ. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ವಿತರಣೆಗೆ ಅವಶ್ಯವಾಗಿ ಬೇಕಾಗುತ್ತದೆ. 65 ದಶಲಕ್ಷ ಟನ್ ಧಾನ್ಯ ಪಡಿತರದ ಮೂಲಕ ವಿತರಣೆಯಾಗುತ್ತದೆ.

ಸರ್ಕಾರದ ಆಹಾರಧಾನ್ಯ ಖರೀದಿಯಿಂದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಮಾತ್ರವೇ ಹೆಚ್ಚು ಉಪಯೋಗವಾಗುವುದೇ?

2019-20ರಲ್ಲಿ ಪಂಜಾಬ್ ಸರ್ಕಾರ ಒಟ್ಟು ಭತ್ತದ ಉತ್ಪಾದನೆಯಲ್ಲಿ ಶೇ 92.3ರಷ್ಟು ಖರೀದಿಸಿತ್ತು. ಹರಿಯಾಣ ಶೇ 89.2ರಷ್ಟು ಖರೀದಿಸಿತ್ತು. ತೆಲಂಗಾಣ ಶೇ 102ರಷ್ಟು ಖರೀದಿಸಿತ್ತು. ಗೋಧಿ ಖರೀದಿಯಲ್ಲಿ ಪಂಜಾಬ್ ಶೇ 72ರಷ್ಟು ಉತ್ಪನ್ನವನ್ನು ಖರೀದಿಸಿದೆ ಹರಿಯಾಣ ಮತ್ತು ಮಧ್ಯಪ್ರದೇಶ ಕ್ರಮವಾಗಿ ಶೇ 62 ಮತ್ತು ಶೇ 66ರಷ್ಟು ಖರೀದಿಸಿವೆ.

ವಿವಿಧ ಸರ್ಕಾರಿ ಕ್ರಮಗಳ ಮೂಲಕ ಮತ್ತಾವ ಬೆಳೆಗಳಿಗೆ ಸರ್ಕಾರ ರಕ್ಷಣೆ ನೀಡಿದೆ?

2015-16ರಿಂದ ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದ ಬೇಳೆ ಕಾಳುಗಳನ್ನು ಭಾರತದ ರಾಷ್ಟಿçÃಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್‌ಇಡಿ) ಮತ್ತು ಸಣ್ಣ ರೈತರ ಕೃಷಿ ವ್ಯಾಪಾರ ಸಹಕಾರ ಒಕ್ಕೂಟ (ಎಸ್‌ಎಫ್‌ಎಸಿ)ದ ಮೂಲಕ ಖರೀದಿಸಿದೆ. ಎರಡು ದಶಲಕ್ಷ ಟನ್ ಧಾನ್ಯವನ್ನು ದಾಸ್ತಾನು ಮಾಡಲು ಇದನ್ನು ಖರೀದಿಸಲಾಗಿದೆ. ಹತ್ತಿ ಬೆಳೆಯನ್ನು ಭಾರತೀಯ ಹತ್ತಿ ನಿಗಮ ಖರೀದಿಸುತ್ತದೆ. ಗುಜರಾತ್ ಮತ್ತು ಕೆಲವು ರಾಜ್ಯಗಳಲ್ಲಿ ಸೇಂಗಾ ಖರೀದಿಸಲಾಗುತ್ತದೆ. ಕೆಲವು ತೋಟಗಾರಿಕೆಯ ಬೆಳೆಗಳನ್ನೂ ಅಲ್ಲಲ್ಲಿ ಸರ್ಕಾರದ ಮೂಲಕ ಖರೀದಿಸಲಾಗುತ್ತದೆ.

ಉದಾಹರಣೆಗೆ ಜಮ್ಮು ಕಾಶ್ಮೀರದಲ್ಲಿ 2019-20ರಲ್ಲಿ ಸೇಬು, ಮಹಾರಾಷ್ಟçದಲ್ಲಿ ಪ್ರತಿವರ್ಷ ಈರುಳ್ಳಿ ಇತ್ಯಾದಿ. ಕಬ್ಬನ್ನು ಸರ್ಕಾರ ಖರೀದಿಸುವುದಿಲ್ಲ. ಆದರೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಮರ್ಪಕವಾದ, ಲಾಭದಾಯಕ ಬೆಲೆ ನೀಡುವಂತೆ ಸರ್ಕಾರ ನಿರ್ವಹಿಸುತ್ತದೆ. ಕೆಲವು ರಾಜ್ಯಗಳಲ್ಲಿ ಸರ್ಕಾರವೇ ಈ ಸಮರ್ಪಕ ಬೆಲೆಗಿಂತಲೂ ಹೆಚ್ಚಿನ ಸಲಹಾ ಬೆಲೆಯನ್ನು ನಿಗದಿಪಡಿಸುವುದೂ ಉಂಟು. ನಾರಿನ ಬೆಳೆಯನ್ನು ಸರ್ಕಾರ ನೇರವಾಗಿ ಖರೀದಿಸುವುದಿಲ್ಲವಾದರೂ ಸರ್ಕಾರದ ರಕ್ಷಣೆಯನ್ನು ನೀಡಲಾಗುತ್ತದೆ. ಜೆಪಿಎಂ ಕಾಯ್ದೆ 1987ರ ಅನ್ವಯ ಸರ್ಕಾರ ಶೇ 100ರಷ್ಟು ಆಹಾರ ಧಾನ್ಯ ಮತ್ತು ಶೇ 20ರಷ್ಟು ಸಕ್ಕರೆಯನ್ನು ಕಡ್ಡಾಯವಾಗಿ ನಾರಿನ ಚೀಲದಲ್ಲೇ ಪ್ಯಾಕೇಜ್ ಮಾಡಲು ನೀತಿಯನ್ನು ರೂಪಿಸಲಾಗಿದೆ.

ತೋಟಗಾರಿಕೆ ಮತ್ತು ಹೈನು ಉತ್ಪನ್ನಗಳು ಹೆಚ್ಚು ಲಾಭದಾಯಕವಾಗಿದ್ದರೆ, ರೈತರು ಏಕೆ ಎಂಎಸ್‌ಪಿ ಬೆಳೆಗಳನ್ನು ತ್ಯಜಿಸಿ ಈ ಬೆಳೆಗಳನ್ನು ಬೆಳೆಯುವುದಿಲ್ಲ?

ಹಾಲಿನ ಉತ್ಪಾದಕರು ಮತ್ತು ಹಣ್ಣು ತರಕಾರಿ ಬೆಳೆಯುವ ರೈತರೂ ಸಹ ಮಾರುಕಟ್ಟೆ ಬೆಲೆಗಳ ವ್ಯತ್ಯಯವನ್ನು ಎದುರಿಸಲೇಬೇಕಾಗುತ್ತದೆ. ಗುಜರಾತ್‌ನ ಡೈರಿ ಸಹಕಾರ ಸಂಘಗಳನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಹಾಲಿನ ಮಂಡಲಿಗಳಿಗೂ ರಾಜ್ಯ ಸರ್ಕಾರಗಳೇ ಹಲವು ಮಾರ್ಗಗಳ ಮೂಲಕ ಬಂಡವಾಳ ಒದಗಿಸುತ್ತದೆ.

ಭಾರತದಲ್ಲಿ ಕೃಷಿಗೆ ನೀಡುವ ಸಹಾಯಧನಗಳು ಯಾವುವು?

ಭಾರತದಲ್ಲಿ ರೈತರಿಗೆ ವ್ಯವಸಾಯದ ಉಪಕರಣಗಳಿಗೆ ಮತ್ತು ಉತ್ಪಾದನೆಯ ಸರಕುಗಳಿಗೂ ಸಹಾಯಧನದ ಬೆಂಬಲ ಒದಗಿಸಲಾಗುತ್ತದೆ. ಉತ್ಪಾದನೆಯ ಸಲಕರಣೆಗಳಿಗೆ ಸಂಬAಧಿಸಿದAತೆ, ಭಾರತದ ರೈತರು ಸರಾಸರಿಯಾಗಿ ರಸಗೊಬ್ಬರ, ಬೀಜ, ಕೃಷಿ ಯಂತ್ರಗಳು ಮತ್ತು ಉಪಕರಣಗಳು, ವಿದ್ಯುತ್ ಮತ್ತು ಸಾರಿಗೆ ಉಪಕರಣಗಳಿಗೆ ಸಹಾಯಧನ ಪಡೆಯುತ್ತಾರೆ. ಉತ್ಪನ್ನಗಳಿಗೆ ಸಂಬAಧಿಸಿದAತೆ, ಕನಿಷ್ಠ ಬೆಂಬಲ ಬೆಲೆಯ ನೀತಿಯು ವ್ಯಾಪಕ ಖರೀದಿಯ ಮೂಲ ಸೌಕರ್ಯಗಳು ಇರುವ ರಾಜ್ಯಗಳಲ್ಲಿ ಹೆಚ್ಚು ನೆರವು ಒದಗಿಸುತ್ತದೆ. ಸಣ್ಣ ಮತ್ತು ಅತಿಸಣ್ಣ ರೈತರು ಈ ಸಹಾಯಧನದ ಅಲ್ಪ ಪ್ರಮಾಣವನ್ನು ಮಾತ್ರ ಪಡೆಯುತ್ತಾರೆ. ಕೃಷಿಗೆ ಸಂಬAಧಿಸಿದ ಅನೇಕ ಸಹಾಯಧನಗಳು ವ್ಯಾಪಾರಕ್ಕೂ ಹೋಗುತ್ತದೆ. ಉದಾಹರಣೆಗೆ ಆಹಾರ ಸಂಸ್ಕರಣಾ ಘಟಕಗಳಿಗೆ ನೀಡುವ ಅನುದಾನಗಳು ಮತ್ತು ಶೀತಲಾಗಾರ ಯೋಜನೆಗಳಿಗೆ ನೀಡುವ ಅನುದಾನಗಳು.

ಹಾಗಾದಲ್ಲಿ ಭಾರತದ ರೈತರು ನಕಾರಾತ್ಮಕ ಬೆಂಬಲ ಪಡೆಯುತ್ತಿದ್ದಾರೆ (ಟಿeಣ ಣಚಿxeಜ) ಎಂದು ಏಕೆ ಹೇಳಲಾಗುತ್ತದೆ?

ಐಸಿಆರ್‌ಐಇಆರ್-ಒಇಸಿಡಿ ವರದಿಯ ಅನುಸಾರ, ಭಾರತದ ರೈತರಿಗೆ ಬೆಂಬಲ ನೀಡಲು ಅನೇಕ ಕಾರ್ಯನೀತಿಗಳು, ಯೋಜನೆಗಳು, ಬೆಂಬಲ ನೀತಿಗಳು ಇದ್ದರೂ ಮಾರುಕಟ್ಟೆಗೆ ಸಂಬAಧಿಸಿದAತೆ ಇರುವ ಕೆಲವು ಪ್ರತಿಗಾಮಿ ನೀತಿಗಳು, ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ವ್ಯಾಪಾರಿ ನೀತಿಗಳು, ಆಹಾರ ಸಂಗ್ರಹಣೆಯ ಮೂಲಕ ಸೌಕರ್ಯಗಳ ಕೊರತೆ, ಸಾರಿಗೆ ಮೂಲ ಸೌಕರ್ಯದ ಕೊರತೆ ಇವೆಲ್ಲಾ ಕಾರಣಗಳಿಂದ ಭಾರತದ ರೈತರು, ತಮ್ಮ ನಿವ್ವಳ ಆದಾಯದಲ್ಲಿ ಕಳೆದುಕೊಳ್ಳುವುದೇ ಹೆಚ್ಚು. ಹಾಗಾಗಿಯೇ ಸಹಾಯಧನ ಪಡೆದರೂ ಸಹ ಅವರಿಗೆ ಖೋತಾ ಉಂಟಾಗುತ್ತದೆ. 2014-16ರ ನಡುವೆ ಭಾರತದ ರೈತರ ನಿವ್ವಳ ಆದಾಯದ ಶೇ 6ರಷ್ಟು ಖೋತಾ ಆಗಿದೆ.

ಇತರ ದೇಶಗಳಲ್ಲಿ ಸಹಾಯಧನದ ಪ್ರಮಾಣ ಹೇಗಿದೆ?

ಇದೇ ಐಸಿಆರ್‌ಐಇಆರ್-ಒಇಸಿಡಿ ವರದಿಯ ಅನುಸಾರ, ಭಾರತದ ರೈತರು ನಕಾರಾತ್ಮಕ ಬೆಂಬಲ ಪಡೆಯುತ್ತಿದ್ದರೂ ಅಭಿವೃದ್ಧಿ ಹೊಂದಿದ ರಾಷ್ಟçಗಳಾದ ನಾರ್ವೆ, ಸ್ವಿಜರ್‌ಲೆಂಡ್, ಜಪಾನ್, ಕೊರಿಯಾ, ಅಮೆರಿಕ ಮತ್ತು ಆಸ್ಟೆçÃಲಿಯಾದ ರೈತರು ಅತಿ ಹೆಚ್ಚಿನ ಸಕಾರಾತ್ಮಕ ಬೆಂಬಲ ಪಡೆಯುತ್ತಿದ್ದಾರೆ. ಇಂಡೋನೇಷಿಯಾ ರೈತರೂ ಸಹ ಭಾರತದ ರೈತರಿಗಿಂತಲೂ ಹೆಚ್ಚಿನ ಸಕಾರಾತ್ಮಕ ಬೆಂಬಲ ಪಡೆಯುತ್ತಿದ್ದಾರೆ. ಉಕ್ರೇನ್‌ನಲ್ಲಿನ ರೈತರು ಭಾರತದ ರೈತರಂತೆಯೇ ನಕಾರಾತ್ಮಕ ಬೆಂಬಲ ಗಳಿಸುತ್ತಿದ್ದಾರೆ.

ಮಧ್ಯಮ ವರ್ಗದವರು ಮತ್ತು ಶ್ರೀಮಂತರು ಪಡೆಯುವ ಸಹಾಯಧನಗಳು ಯಾವುವು? ಆರ್ಥಿಕತೆಯ ಇತರ ಕ್ಷೇತ್ರಗಳಿಗೂ ಸಹಾಯಧನ ನೀಡಲಾಗುವುದೇ?

2014-15ರ ಆರ್ಥಿಕ ಸಮೀಕ್ಷೆಯಲ್ಲಿ ಒಂದು ಇಡೀ ಅಧ್ಯಾಯವನ್ನು ಮಧ್ಯಮ ವರ್ಗಗಳು ಅನುಭವಿಸುವ ಸಹಾಯಧನವನ್ನು ಕುರಿತ ಮಾಹಿತಿಗೆ ಮೀಸಲಿಡಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಉಳಿತಾಯದ ಮೇಲೆ ಹೆಚ್ಚಿನ ಬಡ್ಡಿ, ಆದಾಯ ತೆರಿಗೆ ವಿನಾಯಿತಿಗಳು, ರೈಲ್ವೆ, ವಿದ್ಯುತ್, ಅಡುಗೆ ಅನಿಲ, ಚಿನ್ನ ಮತ್ತು ವಿಮಾನ ಇಂಧನಕ್ಕೆ ನೀಡುವ ಸಹಾಯಧನಗಳು ಸೇರಿವೆ. ಸರ್ಕಾರಿ ಸಂಸ್ಥೆಗಳಲ್ಲಿನ ಉನ್ನತ ಶಿಕ್ಷಣಕ್ಕೆ ಅತಿ ಹೆಚ್ಚು ಸಹಾಯಧನ ಒದಗಿಸಲಾಗುತ್ತದೆ. ಸರ್ಕಾರವು ಉತ್ಪಾದಕೀಯತೆಗೆ ಸಂಬAಧಿಸಿದ ಸವಲತ್ತುಗಳನ್ನು ನೀಡುವ ಮೂಲಕ, ಹೆಚ್ಚಿನ ಆಮದು ಸುಂಕ ವಿಧಿಸುವ ಮೂಲಕ, ನಿಯಂತ್ರಣ ಕ್ರಮಗಳ ಮೂಲಕ ಕೈಗಾರಿಕೆಗಳಿಗೂ ಸಹಾಯಧನ ಒದಗಿಸುತ್ತದೆ.

ಹೊಸ ಕೃಷಿ ಕಾನೂನುಗಳು ರೈತರಿಗೆ ಉಪಯುಕ್ತವಾಗಿವೆ ಎಂದು ಸರ್ಕಾರ ಹೇಳುತ್ತಿದ್ದರೂ ರೈತರು ಏಕೆ ವಿರೋಧಿಸುತ್ತಿದ್ದಾರೆ? ಪ್ರತಿಭಟನೆಯಲ್ಲಿ ಪಂಜಾಬ್ ರೈತರು ಮುಂಚೂಣಿಯಲ್ಲಿರಲು ಕಾರಣವೇನು?

ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಎಪಿಎಂಸಿ ಮಂಡಿಗಳು ವ್ಯಾಪಕವಾಗಿದ್ದು, ಈ ರಾಜ್ಯಗಳಲ್ಲಿ ಸರ್ಕಾರದ ಧಾನ್ಯ ಖರೀದಿ ವ್ಯವಸ್ಥೆ ದಕ್ಷತೆಯಿಂದ ನಡೆಯುತ್ತಿದೆ. ಹಾಗಾಗಿ ಅಲ್ಲಿನ ರೈತರಲ್ಲಿ ಈ ಕಾನೂನುಗಳು ಆತಂಕ ಹೆಚ್ಚಿಸಿವೆ. ಈ ಕಾನೂನುಗಳು ಜಾರಿಯಾದರೆ ಭತ್ತ ಮತ್ತು ಗೋಧಿಯನ್ನು ಸರ್ಕಾರ ಖರೀದಿಸುವ ಪದ್ಧತಿಯೇ ಇಲ್ಲವಾಗುತ್ತದೆ ಎಂಬ ಆತಂಕ ಹೆಚ್ಚಾಗಿದೆ. ರಾಜ್ಯ ಸರ್ಕಾರಗಳು ಖರೀದಿ ಪ್ರಕ್ರಿಯೆಯನ್ನು ಬಲಪಡಿಸಿದಷ್ಟೂ ಕೇಂದ್ರ ಸರ್ಕಾರದ ಬೆಂಬಲ ಇಲ್ಲವಾಗುತ್ತದೆ ಎಂಬ ಭೀತಿ ಇಲ್ಲಿನ ರೈತರನ್ನು ಕಾಡುತ್ತಿದೆ.

ಕೃಷಿಯನ್ನು ಸಂಪೂರ್ಣ ಮಾರುಕಟ್ಟೆ ಶಕ್ತಿಗಳಿಗೆ ವಹಿಸಬಹುದೇ?

ರೈತರನ್ನು ಸಂಪೂರ್ಣವಾಗಿ ಮಾರುಕಟ್ಟೆ ಶಕ್ತಿಗಳ ನಿಯಂತ್ರಣಕ್ಕೆ ಬಿಟ್ಟುಕೊಡಲಾಗುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ದೊರೆಯದ ಬೆಳೆಗಳನ್ನು ಬೆಳೆಯುವ ರೈತರು, ವಿಶೇಷವಾಗಿ ಹಣ್ಣು ತರಕಾರಿ ಬೆಳೆಯುವ ರೈತರು ಇತ್ತೀಚಿನ ವರ್ಷಗಳಲ್ಲಿ ಬೆಲೆ ವ್ಯತ್ಯಯಗಳಿಂದ ಕಂಗಾಲಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಬೆಲೆ ಕೊರತೆಯನ್ನು ನೀಗಿಸುವ ಪದ್ಧತಿ ಜಾರಿಗೊಳಿಸಿದರೂ ಯಶಸ್ವಿಯಾಗಿಲ್ಲ. ಹಾಗಾಗಿ ರೈತರು ಭಾರಿ ನಷ್ಟ ಅನುಭವಿಸುವುದನ್ನು ತಪ್ಪಿಸಲು ಇರುವ ಏಕೈಕ ಮಾರ್ಗ ಎಂದರೆ ನೇರ ನಗದು ಪಾವತಿ ಮಾಡುವುದು. ಉತ್ತಮ ವಾಣಿಜ್ಯ ನೀತಿಯನ್ನು ರೂಪಿಸುವುದರ ಮೂಲಕ ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿ ಬೆಲೆ ವ್ಯತ್ಯಯಗಳಿಂದಾಗುವ ಅನಿಶ್ಚಿತತೆಯನ್ನು ಸರಿದೂಗಿಸಬಹುದು. ಭವಿಷ್ಯದ ಬೆಲೆ ನಿಗದಿಪಡಿಸುವ ಒಪ್ಪಂದಗಳೂ ಸಹ ಸ್ಥಿರತೆಯನ್ನು ಮೂಡಿಸಬಹುದು. ಆದರೆ ಬಹುಪಾಲು ರೈತರಿಗೆ ಭವಿಷ್ಯದ ಮಾರುಕಟ್ಟೆಯೊಡನೆ ವ್ಯವಹರಿಸುವ ವ್ಯವಧಾನ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಮಾರ್ಗದರ್ಶನ ಮತ್ತು ಬೆಂಬಲ ಅತ್ಯವಶ್ಯಕ.

ಸರ್ಕಾರದ ಧಾನ್ಯ ಖರೀದಿ ಪದ್ಧತಿಯನ್ನು ರದ್ದುಪಡಿಸಬಹುದೇ? ಆಗ ಪಡಿತರ ವ್ಯವಸ್ಥೆ ಏನಾಗಬಹುದು?

ಆಹಾರ ಧಾನ್ಯಗಳನ್ನು ಸರ್ಕಾರದ ವತಿಯಿಂದ ಖರೀದಿಸುವ ಪದ್ಧತಿ ಎರಡು ಉದ್ದೇಶಗಳನ್ನು ಈಡೇರಿಸುತ್ತದೆ. ಮೊದಲನೆಯದು ಕನಿಷ್ಠ ಬೆಂಬಲ ಬೆಲೆಯನ್ನು ಆಧರಿಸಿ ಖರೀದಿಸುವುದರಿಂದ ರೈತರಿಗೆ ಬೆಂಬಲ ದೊರೆಯುತ್ತದೆ. ಎರಡನೆಯದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸರ್ಕಾರ ತಾನು ಖರೀದಿಸುವ ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುವುದರಿಂದ ಆರ್ಥಿಕವಾಗಿ ದುರ್ಬಲರಾದ ಜನರಿಗೆ ಅನುಕೂಲವಾಗುತ್ತದೆ.

ರಾಷ್ಟಿçÃಯ ಕುಟುಂಬ ಆರೋಗ್ಯ ಸಮೀಕ್ಷೆ, ಭಾರತದಲ್ಲಿ ಅಪೌಷ್ಟಿಕತೆಯನ್ನು ಕುರಿತು ಸಲ್ಲಿಸಿರುವ ವರದಿಯ ಅನುಸಾರ ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆಯ ಸೂಚ್ಯಂಕ ಸತತವಾಗಿ ಕ್ಷೀಣಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮುಂಬರುವ ವರ್ಷಗಳಲ್ಲೂ ಸಾರ್ವಜನಿಕ ವಿತರಣಾ ವ್ಯವಸ್ಥೆ ಮುಂದುವರೆಯುವ ಸಾಧ್ಯತೆಗಳಿವೆ. ಆದರೆ ಸರ್ಕಾರ ಈಗಲೇ 2030ರವರೆಗೆ 10 ವರ್ಷಗಳ ಅವಧಿಗೆ ಪಡಿತರ ವ್ಯವಸ್ಥೆಯ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಮೂಲಕ ಅಗತ್ಯವಿದ್ದಷ್ಟು ಭತ್ತ ಮತ್ತು ಗೋಧಿಯನ್ನು ಮಾತ್ರ ಖರೀದಿಸಬಹುದು.

ಅವಶ್ಯ ಪದಾರ್ಥಗಳ ಕಾಯ್ದೆಯ ತಿದ್ದುಪಡಿಯಿಂದ, ಆಹಾರ ವಹಿವಾಟಿನಲ್ಲಿ ಬೃಹತ್ ಕಾರ್ಪೋರೇಟ್ ಉದ್ಯಮಿಗಳ ಪ್ರವೇಶದಿಂದ, ಇ ವಾಣಿಜ್ಯ ಮತ್ತು ಆಧುನಿಕ ಚಿಲ್ಲರೆ ವ್ಯಾಪಾರ ಸಾಧನಗಳಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುವ ಭೀತಿ ಇದೆ. ಇದು ವಾಸ್ತವವೇ?

ಭಾರತದಲ್ಲಿ ದ್ವಿದಳ ಧಾನ್ಯಗಳ ಕೊರತೆ ಹೆಚ್ಚಾಗಿದೆ. ಹೆಚ್ಚುವರಿ ದಾಸ್ತಾನು ಇದ್ದರೂ ಗಣನೀಯವಾಗಿ ಕಾಣುವುದಿಲ್ಲ. ಇಂತಹ ಹೆಚ್ಚಿನ ಮೌಲ್ಯದ ಧಾನ್ಯಗಳನ್ನು ಕಾರ್ಪೋರೇಟ್ ಉದ್ಯಮಿಗಳು ಗೋದಾಮುಗಳಲ್ಲಿ ಶೇಖರಿಸಿ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಇ ವಾಣಿಜ್ಯ ಮತ್ತು ಆಧುನಿಕ ಚಿಲ್ಲರೆ ವ್ಯಾಪಾರ ಮಳಿಗೆಗಳಿಂದ ಇದು ಉಲ್ಬಣಿಸಬಹುದು. ಈ ಧಾನ್ಯಗಳನ್ನು ಅವಶ್ಯ ಪ್ರಮಾಣದಲ್ಲಿ ಸಂಗ್ರಹಿಸುವಾಗ ಗೋದಾಮು ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರದ ಮೂಲಕ ನೋಂದಣಿಯಾಗಿರುವ ಗೋದಾಮುಗಳಲ್ಲಿ ಮಾತ್ರವೇ ಸಂಗ್ರಹಿಸುವAತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆಗ ಸರ್ಕಾರಕ್ಕೆ ಖಾಸಗಿ ಗೋದಾಮುಗಳಲ್ಲಿರುವ ದಾಸ್ತಾನಿನ ನಿಖರ ಪ್ರಮಾಣ ತಿಳಿದಿರುತ್ತದೆ.

ರೈತರಿಗೆ ಸಮರ್ಪಕ ಬೆಲೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಯಾವ ರೀತಿ ಕ್ರಮ ಕೈಗೊಳ್ಳಬಹುದು?

ಸರ್ಕಾರದಿಂದ ಆಹಾರ ಧಾನ್ಯ ಖರೀದಿಸಲ್ಪಡುವ ಒಂದು ಬೆಂಬಲ ಪದ್ಧತಿ ಕೆಲವೇ ಬೆಳೆಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಪದ್ಧತಿಯಿಂದ ಭಾರತ ವಿಮುಖವಾಗಬೇಕಾದರೆ ಇನ್ನೂ ಹೆಚ್ಚು ಆಕರ್ಷಣೀಯವಾದ ಬೆಂಬಲ ಯೋಜನೆಗಳನ್ನು ಸರ್ಕಾರ ರೂಪಿಸಬೇಕಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದರೊಂದಿಗೆ ಕೃಷಿ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದೂ ಮುಖ್ಯವಾಗುತ್ತದೆ. ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯ ಮೂಲಕ ರಾಜ್ಯಗಳಿಗೆ ಉತ್ತೇಜನ ನೀಡಿದ್ದರಿಂದ ರಾಜ್ಯಗಳು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಾಯಿತು. ಕೇಂದ್ರ ಸರ್ಕಾರ ರಾಜ್ಯಗಳಿಗೆ ಒದಗಿಸುವ ಸಹಾಯ ಹೆಚ್ಚಾಗಬೇಕು. ಒಡಿಷಾ ಮತ್ತು ಛತ್ತಿಸ್‌ಘಡ್ ರಾಜ್ಯಗಳಲ್ಲಿ ವಿಕೇಂದ್ರೀಕೃತ ಖರೀದಿ ಪದ್ಧತಿಯನ್ನು ಅನುಸರಿಸಲಾಗುತ್ತಿದ್ದು, ರಾಜ್ಯ ಸರ್ಕಾರದ ವೆಚ್ಚವನ್ನು ಕೇಂದ್ರದಿAದ ಭರಿಸುತ್ತಿಲ್ಲ ಎಂಬ ಆಪಾದನೆಗಳೂ ಕೇಳಿಬರುತ್ತಿವೆ. ಇದರಿಂದ ರಾಜ್ಯ ಸರ್ಕಾರಗಳು ನಷ್ಟ ಅನುಭವಿಸುತ್ತಿದ್ದರೂ ನಷ್ಟದ ಪ್ರಮಾಣವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.

ಭಾರತದ ಕೃಷಿ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ತರಲು ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಬೇಕು?

ಈಗಾಗಲೇ ಭಾರತದ ಹಲವು ರಾಜ್ಯಗಳಲ್ಲಿ, ಅಭಿವೃದ್ಧಿ ಹೊಂದಿದ ರಾಷ್ಟçಗಳ ಮಟ್ಟಕ್ಕೆ ಉತ್ಪಾದಕೀಯತೆಯನ್ನು ಸಾಧಿಸಲಾಗಿದೆ. ಹಾಗೆಯೇ ಅತಿ ಕಡಿಮೆ ಉತ್ಪಾದಕೀಯತೆಯನ್ನು ಹೊಂದಿರುವ ರಾಜ್ಯಗಳೂ ಇವೆ. ಕಡಿಮೆ ಉತ್ಪಾದಕೀಯತೆ ಇರುವ ರಾಜ್ಯಗಳಲ್ಲಿ ಬೆಳೆಯುವ ಪದಾರ್ಥಗಳ ಬಗ್ಗೆ ಗಂಭೀರ ಸಂಶೋಧನೆ ನಡೆಸುವ ಮೂಲಕ, ಹವಾಮಾನ ಬದಲಾವಣೆ ಮತ್ತು ಹೆಚ್ಚಿನ ಉಷ್ಣಾಂಶವನ್ನು ತಡೆದುಕೊಳ್ಳುವಂತಹ ಉತ್ತಮ ಗುಣಮಟ್ಟದ ಬೀಜಗಳನ್ನು ಒದಗಿಸಬಹುದು. ಮಳೆ ಆಧಾರಿತ ಆಹಾರ ಪದಾರ್ಥಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಕ್ಷಾಮದ ಪರಿಸ್ಥಿತಿಯನ್ನು ತಡೆದುಕೊಳ್ಳುವಂತಹ ಬೀಜ ತಳಿಗಳನ್ನು ಒದಗಿಸಬಹುದು. ಉತ್ತಮ ಗುಣಮಟ್ಟದ ಬೀಜಗಳು ಉತ್ಪಾದಕೀಯತೆಯನ್ನು ಶೇ 15 ರಿಂದ 20ರಷ್ಟು ಹೆಚ್ಚಿಸುತ್ತವೆ. ಇತ್ತೀಚೆಗೆ ತರಕಾರಿ ಮತ್ತು ಜೋಳ ಉತ್ಪಾದನೆಯಲ್ಲಿ ಹೆಚ್ಚಿನ ಉತ್ಪಾದಕೀಯತೆ ಸಾಧಿಸುವುದೇ ಇದಕ್ಕೆ ಸಾಕ್ಷಿ.

2018ರಲ್ಲಿ ಡಾ.ಪ್ರಮೋದ್ ಕುಮಾರ್ ನೇತೃತ್ವದ ನೀತಿ ಆಯೋಗದ ಕಾರ್ಯಪಡೆಯು “2033ರ ಕಡೆಗೆ ಬೇಡಿಕೆ ಮತ್ತು ಸರಬರಾಜು ಅಂದಾಜು” ಪ್ರಕಟಿಸಿದ್ದು ಈ ವರದಿಯ ಅನ್ವಯ, ಭಾರತ ಈಗಲೂ ಸಹ ಭತ್ತ ಮತ್ತು ಗೋಧಿಯ ಹೆಚ್ಚುವರಿ ಉತ್ಪಾದನೆಯನ್ನು ಹೊಂದಿದೆ. ನಿತ್ಯ ಬಳಕೆಯ ಧಾನ್ಯಗಳು ದೇಶದ ಕೌಟುಂಬಿಕ ಅವಶ್ಯಕತೆಯನ್ನು ಪೂರೈಸಲು ಶಕ್ತವಾಗಿವೆ. ಆದರೆ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ 5 ರಿಂದ 7 ದಶಲಕ್ಷ ಟನ್ ಕೊರತೆ ಎದುರಿಸುತ್ತಿದೆ. ಎಣ್ಣೆ ಬೀಜಗಳ ಉತ್ಪಾದನೆಯಲ್ಲಿ 50 ದಶಲಕ್ಷ ಟನ್ ಕೊರತೆ ಉಂಟಾಗುವುದೆAದು ನಿರೀಕ್ಷಿಸಲಾಗಿದೆ. ಈ ಕೊರತೆಯನ್ನು ನೀಗಿಸಲು ಭಾರತ ಪಂಜಾಬ್ ಮತ್ತು ಹರಿಯಾಣದಲ್ಲಿ ಅನುಸರಿಸಲಾಗುವ ಕೃಷಿ ಪದ್ಧತಿಯನ್ನು ಅನುಸರಿಸುವುದು ಅನಿವಾರ್ಯ.

ಮೂಲ: ಇಂಡಿಯನ್ ಎಕ್ಸ್ಪ್ರೆಸ್

Leave a Reply

Your email address will not be published.