ರೈತ ಸಮುದಾಯಕ್ಕೆ ಮೋಸ!

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಯಾವುದೇ ಚರ್ಚೆ ಇಲ್ಲದೇ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದಿತು. ಸರಕಾರದ ಯೋಜನೆಗಳಿಗೆ ಮಾರ್ಗದರ್ಶಿ ಬೆಲೆಯನ್ನು ಮಾತ್ರ ಕೊಟ್ಟು ರೈತರ ಭೂಮಿಯನ್ನು ಪಡೆಯಬಹುದೆಂದು ಕಾಯ್ದೆಗೆ ತಿದ್ದುಪಡಿ ಮಾಡಿತು. ಇದು ರೈತ ಸಮುದಾಯಕ್ಕೆ ಮಾಡಿದ ಮೋಸವೇ ಆಗಿದೆ.

ಹಿಂದಿನ ಎಲ್ಲ ಸರಕಾರಗಳಿಗಿಂತ ಇದು ಅತ್ಯಂತ ನಿರಾಶಾದಾಯಕ ಸರಕಾರ. ಇದೊಂದು ಸಾಂದರ್ಬಿಕವಾಗಿ ರಚನೆಯಾದ ಸರಕಾರ. ಇಲ್ಲೊಂದು ಸರಕಾರ ಇದೆ ಎಂಬ ಬಾವನೆ ನಮಗೆ ಬರುತ್ತಿಲ್ಲ. ಒಂದು ಸರಕಾರ ಇದೆ ಎಂಬ ಬಾsವನೆ ಬರಬೇಕಾದರೆ ಸರಕಾರದಲ್ಲಿನ ಎಲ್ಲ ಮಂತ್ರಿಗಳು ಕೆಲಸ ಮಾಡಬೇಕು. ಇಲ್ಲಿ ಎಲ್ಲರೂ ಕೆಲಸ ಮಾಡುವ ಹಾಗೆ ಕಾಣಿಸುತ್ತಿಲ್ಲ. ಇನ್ನೊಂದು ವಿಷಯ ಅಂದರೆ ಅವರ ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಹಂಚಿಕೆ ಮಾಡುವುದಾದರೆ ಇಲ್ಲಿ ಸರಕಾರ ಇದೆ ಎಂದು ನಾವು ಬಾವಿಸಲಾದೀತೆ?

ನಿರಂತರ ಬರಗಾಲಕ್ಕೆ ತುತ್ತಾದ ಪ್ರದೇಶಗಳಿಗೆ ಯಾವುದೇ ಅನುದಾನ ಹಂಚಿಕೆ ಮಾಡುವುದಿಲ್ಲ. ತಮ್ಮ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತದೆ. ಹಾಗೆ ಮಾಡುವುದು ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲವೇ? ಉಳಿದ ಜನರಿಗೆ ಮಾಡಿದ ದ್ರೋಹವಲ್ಲವೇ?

ರೈತ ಸಮುದಾಯದ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಅವರೇ ಹೇಳಿದ್ದರು; ಅದರೆ ಇದುವರೆಗೆ ಮನ್ನಾ ಆಗಿಲ್ಲ. ಸಾಲಮನ್ನಾ ಘೋಷಣೆ ಮಾಡಿ ಆಗಾಗ ಬ್ಯಾಂಕುಗಳಿಗೆ ಹಣ ಕೊಡುವುದಾಗಿ ಇವರು ಹೇಳುತ್ತಿದ್ದಾರೆ. ಇದು ದೊಡ್ಡ ಅಪಾಯಕಾರಿ ನಡೆ. ಇದರಿಂದಾಗಿ ರೈತ ಬ್ಯಾಂಕಿನ ಬಾಗಿಲಿಗೆ ಹೋಗದಂತಹ ಸ್ಥಿತಿ ನಿರ್ಮಾಣ ಆಗಿದೆ. ಸರಕಾರ ಹಂತಹಂತವಾಗಿ ಬ್ಯಾಂಕುಗಳಿಗೆ ಹಣ ಕಟ್ಟುವುದರಿಂದ ಸಾಲದ ಬಡ್ಡಿ ತೀರಿಸುವುದರಲ್ಲೇ ಹಣ ಮುಗಿದುಹೋಗುತ್ತದೆ. ಇದರಿಂದ ರೈತರು ಋಣಮುಕ್ತರಾಗಲು ಸಾಧ್ಯವಿಲ್ಲ. ಸಾಲ ನವೀಕರಣವಾಗದೇ ಹೊಸ ಸಾಲವೂ ಸಿಗುವುದಿಲ್ಲ ಹಾಗಾಗಿ ಸಾಲ ಮನ್ನಾ ಯೋಜನೆ ದೊಡ್ಡ ವೈಪಲ ಎಂದೇ ಹೇಳಬೇಕು. ಆರಂಬಿಕ ದಿನಗಳಲ್ಲಿ ರೈತರ ಸಬೆ ಕರೆದು ಮಾತನಾಡಿದರು. ಅವರು ನಮ್ಮಿಂದ ನಿರೀಕ್ಷಣಾ ಜಾಮೀನು ಪಡೆಯುವ ಲೆಕ್ಕಕ್ಕೆ ಮಾಡಿದರೆ ಹೊರತು ನಿಜವಾಗಲೂ ರೈತರ ಹಿತ ಕಾಪಾಡುವ ಉದ್ದೇಶದಿಂದ ಕೆಲಸ ಮಾಡಲಿಲ್ಲ.

ರೈತರ ಖಾತೆಗಳಿಗೆ ಹಣ ಹಾಕಿದರೆ ವಂದಾವಧಿಗೆ ಲೆಕ್ಕ ಚುಕ್ತಾ ಮಾಡಿಕೊಳ್ಳಲು ಅನುಕೂಲವಾಗಲಿದೆ. ಹಾಗಾದರೂ ಸರಕಾರ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ . ಇಲ್ಲವಾದರೆ ಸರಕಾರದ ದುಡ್ಡು ವಿನಾಕಾರಣ ಪೋಲಾಗಲಿದೆ.

ಸಾಲ ಮನ್ನಾ ವಿಚಾರದಲ್ಲಿ ಸರಕಾರ ರೈತರಿಗೆ ಆಸೆ ತೋರಿಸಿಕೊಂಡು ಮುಂದಕ್ಕೆ ಹೋಗುತ್ತಲೇ ಇದೆ. ಇದರಿಂದ ರೈತರು ಮತ್ತು ವಾಣಿಜ್ಯ ಬ್ಯಾಂಕುಗಳ ಮದ್ಯೆs ಬಿರುಕು ಹೆಚ್ಚುತ್ತಲೇ ಇದೆ. ಕಂತುಕಂತಿನಲ್ಲಿ ಹಣ ಕಟ್ಟುವುದಾಗಿ ಸರಕಾರ ಹೇಳುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಹೀಗೆ ಮಾಡುವುದರಿಂದ ರೈತರ ಸಾಲ ತೀರುವ ಬದಲಾಗಿ ಬಡ್ಡಿಗೆ ಹೊಂದಿಕೆ ಆಗಲಿದೆ. ಅದರ ಬದಲಾಗಿ, ಸರಕಾರ ಭರವಸೆ ನೀಡಿದಂತೆ ಒಂದೇ ಬಾರಿಗೆ ವಾಣಿಜ್ಯ ಬ್ಯಾಂಕುಗಳಲ್ಲಿನ ಸಾಲಕ್ಕೆ 2 ಲಕ್ಷ ರೂ ಹಣ ಪಾವತಿಸಿದರೆ ರೈತ ಉಳಿದ ಮೊತ್ತವನ್ನು ತುಂಬಿಕೊಂಡು ಸಾಲ ನವೀಕರಿಸಿಕೊಳ್ಳುತ್ತಾನೆ. ಇಲ್ಲವಾದರೆ ರೈತರ ಖಾತೆಗಳಿಗೆ ಹಣ ಹಾಕಿದರೆ ಒಂದಾವಧಿಗೆ ಲೆಕ್ಕ ಚುಕ್ತಾ ಮಾಡಿಕೊಳ್ಳಲು ಅನುಕೂಲವಾಗಲಿದೆ. ಹಾಗಾದರೂ ಸರಕಾರ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ . ಇಲ್ಲವಾದರೆ ಸರಕಾರದ ದುಡ್ಡು ವಿನಾಕಾರಣ ಪೋಲಾಗಲಿದೆ.

ಎಲ್ಲಕ್ಕೂ ಮುಖ್ಯವಾಗಿ ರೈತರಿಗೆ ಒಳ್ಳೆಯದನ್ನು ಮಾಡುವ ಬದಲು ಇವರು ದೊಡ್ಡ ಮೋಸ ಮಾಡಿದ್ದಾರೆ. ಅದು ಹೇಗೆಂದರೆ, ಮನಮೋಹನ್‍ಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರಕಾರ; ಸರಕಾರದ ಯೋಜನೆಗಳು ಸೇರಿದಂತೆ ಕೈಗಾರಿಕೆ, ವಸತಿ ಮುಂತಾದ ಉದ್ದೇಶಗಳಿಗೆ ಭೂಮಿಯನ್ನು ಬಿಟ್ಟುಕೊಡುವ ರೈತರಿಗೆ ಭೂಮಿಯ ಮಾರ್ಗದರ್ಶಿ ಬೆಲೆಯ ಮೂರು ಪಟ್ಟು ಹಣವನ್ನು ಕೊಡಬೇಕೆಂಬ ನಿರ್ಬಂದಗಳನ್ನು ಹಾಕಿ ಭೂಸುದಾರಣೆ ಕಾಯ್ದೆಯನ್ನು ಜಾರಿಗೆ ತಂದಿತ್ತು.

ದೊಡ್ಟ ಪ್ರಮಾಣದ ಆವರ್ತ ನಿಧಿಯನ್ನು ಮೀಸಲಿಟ್ಟರೆ ಮಾತ್ರ ಈ ಯೋಜನೆ ಯಶಸ್ವಿಯಾಗಲಿದೆ. ಆದರೆ ಅದನ್ನು ಮಾಡುವ ಬದ್ಧತೆ ಈ ಸರಕಾರಕ್ಕೆ ಇದೆ ಎಂದು ನನಗೆ ಕಾಣಿಸುತ್ತಿಲ್ಲ. 

ಈಗಿನ ಮೋದಿ ಸರಕಾರ ಈ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ಸಡಿಲಗೊಳಿಸಲು ಎರಡು ಬಾರಿಯತ್ನ ಮಾಡಿತ್ತು. ಆಗದಿದ್ದಾಗ ಆಯಾ ರಾಜ್ಯಗಳಿಗೆ ಹೊಣೆ ನೀಡಿತು. ಕಳೆದ ವಿದಾsನಸಬೆ  ಅದಿವೇಶನದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಯಾವುದೇ ಚರ್ಚೆ ಇಲ್ಲದೇ ಭೂಸ್ವಾದೀನ ಮಸೂದೆಗೆ ತಿದ್ದುಪಡಿ ತಂದಿತು. ಸರಕಾರದ ಯೋಜನೆಗಳಿಗೆ ಮಾರ್ಗದರ್ಶಿ ಬೆಲೆಯನ್ನು ಮಾತ್ರ ಕೊಟ್ಟು ರೈತರ  ಭೂಮಿಯನ್ನು ಪಡೆಯಬಹುದೆಂದು ಕಾಯ್ದೆಗೆ ತಿದ್ದುಪಡಿ ಮಾಡಿತು. ಇದು ರೈತ ಸಮುದಾಯಕ್ಕೆ ಮಾಡಿದ ಮೋಸವೇ ಆಗಿದೆ. ಮಣ್ಣಿನ ಮಕ್ಕಳು ಎಂದು ಹೇಳಿಕೊಂಡು ಎಚ್.ಡಿ.ಕುಮಾರಸ್ವಾಮಿ ರೈತರಿಗೆ ಮಾಡಿದ ಮೊಟ್ಟಮೊದಲ ದೊಡ್ಡ ಮೋಸ ಇದಾಗಿದೆ. ಈ ಸಂಧರ್ಭದಲ್ಲಿ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಯವರು ಸಹ ಆಪರೇಷನ್ ಕಮಲದಲ್ಲಿ ತೊಡಗಿ ರೈತರ ಹಿತ ಕಾಪಾಡುವುದನ್ನು ಮರೆತರು.

ಹಾಪ್ ಕಾಮ್ಸ್‍ಗಳನ್ನು ಬಲಪಡಿಸುವ ಮೂಲಕ ರೈತರಿಗೆ ಮತ್ತು ಗ್ರಾಹಕರಿಗೆ ನೆರವಾಗುವ ಕೆಲಸವನ್ನು ಈ ಸರಕಾರ ಮಾಡಬಹುದಿತ್ತು, ಈಗಿನ ವ್ಯವಸ್ಥೆಯಲ್ಲಿ ತರಕಾರಿಯನ್ನು ಬೆಳೆಯುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ಕೊಳ್ಳುವ ಗ್ರಾಹಕರು ಹೆಚ್ಚಿನ ಬೆಲೆ ತೆರುವುದು ತಪ್ಪಿಲ್ಲ. ಹಾಪ್‍ಕಾಮ್ಸ್ ಗಳನ್ನು ಬಲಪಡಿಸಿದರೆ ಇಬ್ಬರಿಗೂ ಸಹಾಯವಾಗಲಿದೆ. ಆದರೆ ಯಾವ ಸರಕಾರವೂ ಆ ಬಗ್ಗೆ ಯೋಚಿಸುತ್ತಿಲ್ಲ. ಈಗಲಾದರೂ ಸರಕಾರ ಮನಸ್ಸು ಮಾಡಿ ಹಾಪ್‍ಕಾಮ್ಸ್ ಗಳನ್ನು ಬಲಪಡಿಸಿದರೆ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ.

ಇನ್ನು ಸರಕಾರವೇ ನೇಮಿಸಿದ ಕೃಷಿ ಬೆಲೆ ಆಯೋಗ ಶಿಫಾರಸು ಮಾಡಿರುವ ಬೆಲೆ ಮತ್ತು ಹೆಚ್ಚುವರಿಯಾಗಿ ಶೇ. 50ರಷ್ಟು ಲಾಬಾಶವನ್ನು ನೀಡಿ ರೈತರ ಎಲ್ಲಾ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಕೆಲಸವನ್ನು ಸರಕಾರ ಮಾಡಬೇಕಿತ್ತು. ಅದನ್ನೂ ಮಾಡಿಲ್ಲ. ದೊಡ್ಟ ಪ್ರಮಾಣದ ಆವರ್ತ ನಿಧಿಯನ್ನು ಮೀಸಲಿಟ್ಟರೆ ಮಾತ್ರ ಈ ಯೋಜನೆ ಯಶಸ್ವಿಯಾಗಲಿದೆ. ಆದರೆ ಅದನ್ನು ಮಾಡುವ ಬದ್ಧತೆ ಈ ಸರಕಾರಕ್ಕೆ ಇದೆ ಎಂದು ನನಗೆ ಕಾಣಿಸುತ್ತಿಲ್ಲ. 

*ಲೇಖಕರು ರಾಜ್ಯ ಬಿಜೆಪಿ ವಕ್ತಾರರು, ಹಿರಿಯ ನಾಯಕರು;ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರು.

Leave a Reply

Your email address will not be published.