ಜೈಮಿನಿ ಭಾರತದಲ್ಲಿ ರಾಮಾಯಣ

– ಆರ್.ತಾರಿಣಿ ಶುಭದಾಯಿನಿ

ಮರದೊಳಗೊಂದು ಮರಹುಟ್ಟುವರೀತಿಮಹಾಭಾರತದೊಳಗೆ ರಾಮಾಯಣ ಹುಟ್ಟುವುದು ಲಕ್ಷ್ಮೀಶನಜೈಮಿನಿ ಭಾರತದಲ್ಲಿ.

ಜೈಮಿನಿ ಭಾರತಮಧ್ಯಕಾಲದಒಂದುಜನಪ್ರಿಯಕೃತಿ. ‘ಕೇಳುವ’ಪರಂಪರೆಯಲ್ಲಿಬಂದಕಾವ್ಯಇದು. ಹಾಗಾಗಿ ಇದಕ್ಕೆಜನಮನ್ನಣೆ. ಕಥೆಗಳ ಮಹಾಸರಿತ್ಸಾಗರದಂತೆಇರುವಇದರಲ್ಲಿನ ಕಥೆಗಳನ್ನು ಎಷ್ಟು ಓದಿದರೂ, ಎಷ್ಟು ಕೇಳಿದರೂ ತಾಜಾತನ ಮಾಸದೇ ಉಳಿದಿರುವುದಕ್ಕೆ ಅದರೊಳಗಿನ ಜನಪರ ಮೌಲ್ಯಗಳೇ ಕಾರಣಎನ್ನಬಹುದು. ಈ ಕೃತಿಯಲ್ಲಿ ಬರೀ ಯುದ್ಧಗಳೇ! ಆದರೆ ಅವು ಮನುಷ್ಯನಅರಿವನ್ನು ಕಂಡುಕೊಳ್ಳಲು ಮಾಡುವ ಯತ್ನಗಳು. ಇದಕ್ಕೆ ಮೀರಿದೈವವು ಮನುಷ್ಯ ಪ್ರಯತ್ನಕ್ಕೆಜೊತೆ ನೀಡದಿದ್ದರೆಎಲ್ಲವೂ ವ್ಯರ್ಥಎನ್ನುವ ಭಕ್ತಿಯ ನಂಬಿಕೆ ಇದೆ. ಜನಪದರುತಮ್ಮಕಥೆ, ಹಾಡುಗಳಲ್ಲಿ ಯುದ್ಧವನ್ನುಇಷ್ಟಪಡುವುದಿಲ್ಲ. ಜೀವಕಾರುಣ್ಯವಿರುವ ಸಂಗತಿಗಳೇ ಅವರಿಗೆ ಪ್ರೀತಿ. ಹಾಗೆಂದೇಜೈಮಿನಿ ಜನಪದರಿಗೆಇಷ್ಟದಕಾವ್ಯ ಎನಿಸಿರಲಿಕ್ಕೆ ಸಾಕು.

ಜೈಮಿನಿ ಭಾರತದಕಥಾಸಾಗರದಲ್ಲಿರಾಮಾಯಣವೂಒಂದು ಭಾಗ. ತಂದೆಯಾದಅರ್ಜುನನನ್ನುಎದುರಿಸಲು ಸಜ್ಜಾಗಿರುವ ಬಭ್ರುವಾಹನನ ಹೋಲಿಕೆಗೆ ಉತ್ತರರಾಮಾಯಣದಲ್ಲಿ ಬರುವರಾಮ ಮತ್ತು ಕುಶಲವರ ಕಾಳಗದ ಕಥಾಭಾಗವನ್ನುಎತ್ತಿಕೊಂಡುಇಲ್ಲಿ ಹೇಳಲಾಗಿದೆ. ಹದಿನೆಂಟು ಮತ್ತು ಹತ್ತೊಂಬತ್ತನೆಯ ಸಂಧಿಗಳಲ್ಲಿ ಉತ್ತರರಾಮಾಯಣವನ್ನು ಲಕ್ಷ್ಮೀಶ ಕವಿ ಮಾಡಿದ್ದಾನೆ. ರಾಮಾಯಣವನ್ನು ಸಂಕ್ಷಿಪ್ತವಾಗಿ ವಿವರಿಸುವ ಈ ಭಾಗವು ಸೀತೆಯನ್ನು ಕಾಡಿಗೆಅಟ್ಟುವಕ್ರಿಯೆಯನ್ನುಒಂದು ಮಾನವೀಯ ಸನ್ನಿವೇಶವನ್ನಾಗಿ ನಿರೂಪಿಸಿ ಕರುಣಾರಸ ಉಕ್ಕುವ ಹಾಗೆ ಮಾಡಿದೆಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಸೀತೆಯ ಅಸಹಾಯಕ ಪರಿಸ್ಥಿತಿಯ ಮೂಲಕ ಕವಿ ಎತ್ತುವ ಸ್ತ್ರೀಪ್ರಶ್ನೆಯು ಸಮಕಾಲೀನ ಸಂದರ್ಭದಲ್ಲಿಯೂ ಸಾಮಯಿಕ ಎನ್ನಿಸುವಂತದ್ದು. ಸೀತೆಯ ಕಾಡಿನಲ್ಲಿ ಅಸಹಾಯಕಳಾಗುವ ಪರಿಸ್ಥಿತಿ ಹಾಗು ದ್ರೌಪದಿ ಸಭಾಮಧ್ಯಎಲ್ಲರೂಇದ್ದು ಅಸಹಾಯಕಳಾಗುವ ಪರಿಸ್ಥಿತಿ ಎರಡೂ ಸ್ತ್ರೀ ದೃಷ್ಟಿಕೋನದಿಂದಒಂದೇ ಬಗೆಯ ಸನ್ನಿವೇಶಗಳು. ಅವುಗಳನ್ನು ಇಬ್ಬರು ಹೇಗೆ ನಿಭಾಯಿಸುತ್ತಾರೆಎನ್ನುವುದನ್ನುಕನ್ನಡ ಸಾಹಿತ್ಯ ಸಂದರ್ಭದಲ್ಲಿ ವ್ಯಾಖ್ಯಾನಿಸಲಾಗುತ್ತಿರುತ್ತದೆ.

ರಾಮಾಯಣದಕಥೆಯುಇಲ್ಲಿ ಮುಗಿದಿದೆ. ಇದುಉತ್ತರರಾಮಾಯಣದ ಭಾಗ. ರಾಮಾಯಣದಲ್ಲಿ ನಾವು ನೋಡುವರಾಮ ಸೀತೆಯರು ಇಲ್ಲಿಲ್ಲ. ಅವರುಕಾಡಿನ ಸುತ್ತುವಿಕೆಯಿಂದಜೀವನಾನುಭವ ಪಡೆದುಕೊಂಡುÀಪರಿಪಕ್ವಗೊಂಡ ವ್ಯಕ್ತಿತ್ವಗಳು. ಅಲ್ಲಿನ ಸಾಹಸಮಯಜೀವನದ ಕಷ್ಟ ಒಂದೆಡೆಇದ್ದರೂಅದನ್ನು ಸ್ವಾತಂತ್ರ್ಯದ ಪರಿಪ್ರೇಕ್ಷ್ಯದಲ್ಲಿರಾಮ, ಲಕ್ಷ್ಮಣ ಸೀತೆಯರು ಅನುಭವಿಸಿದ್ದಾರೆ. ಜೀವನದ ನೈತಿಕ ಮೌಲ್ಯಗಳನ್ನು ಪ್ರಕೃತಿಗೆಎದುರಾಗಿ ನಿರೂಪಿಸಿಕೊಂಡಿದ್ದಾರೆ. ಆದರೆ ಈಗ ಅವರಎದುರಿಗಿರುವುದು ಪಟ್ಟಣದ ನೀತಿ ನಿಯಮಗಳ ಒಳಗೆ ನಿಂತು ನೈತಿಕತೆಯನ್ನು ರೂಪಿಸಿಕೊಳ್ಳಬೇಕಾದ ಸವಾಲು. ದಾಂಪತ್ಯ, ಪ್ರೀತಿ, ಸ್ನೇಹಗಳನ್ನು ನಾನಾ ಜನಾಂಗಗಳ ಜನರಲ್ಲಿಅವರುಕಂಡಿದ್ದಾರೆ. ಒಬ್ಬೊಬ್ಬರದುಒಂದುರೀತಿ. ಆದರೆಕಾಡು ಫಲಗಳನ್ನು ರಾಮಲಕ್ಷ್ಮಣ ಸೀತೆಯರು ಸವಿದಂತೆ ಅವುಗಳನ್ನು ಸವಿದಿದ್ದಾರೆ; ಕಹಿಯನ್ನೂಉಂಡು ಅರಗಿಸಿಕೊಂಡಿದ್ದಾರೆ. ಆದರೆ ನಾಡಿನ ನಾಜೂಕಿನ ನಡತೆಯು ಪ್ರಕೃತಿ ಪ್ರಮಾಣವಲ್ಲ. ರಾಮ ಇದೀಗ ರಾಜ. ಅವನ ಸುತ್ತರಾಜಕಾರಣದಕೃತಕಎನ್ನಿಸುವ ನಿಯಮಗಳಿವೆ. ಮಾನವಎಂದು ಅವನು ನಡೆಯುವುದಕ್ಕಿಂತ ಮನುಷ್ಯಕಟ್ಟಿಕೊಂಡ ಸಮಾಜಕ್ಕೆ ಅವನು ನಿಷ್ಠನಾಗಿರಬೇಕಾದಕಾಲದಲ್ಲಿ ಅವನು ಇದ್ದಾನೆಎಂದು ಕವಿ ಅವನನ್ನುಉತ್ತರರಾಮಾಯಣಕಾಲದಲ್ಲಿ ನಿಲ್ಲುವಂತೆ ಮಾಡಿದ್ದಾನೆ.

ಜೈಮಿನಿ ರಾಮಾಯಣಆರಂಭವಾಗುವುದು ಫಲವಂತಿಕೆಯವಿಷಯದಿಂದ. ರಾಮಸೀತೆಯರು ಈಗ ಸಂತಾನದಅಪೇಕ್ಷೆಯಲ್ಲಿದ್ದಾರೆ. ಏನೇ ಇದ್ದರೂಕಂದನಿಲ್ಲದೆ ಮನುಷ್ಯನ ಬಾಳು ಬೆಳಗದು ಎನ್ನುವಕೊರಗುರಾಮನಿಗಿದ್ದರೆ, ಸ್ತ್ರೀಜನ್ಮದ ಸಾರ್ಥಕತೆಯೇ ಮಗುವನ್ನು ಹೊತ್ತು ಹೆರುವುದರಲ್ಲಿದೆಎನ್ನುವ ಮಾತನ್ನು ಸೀತೆ ಹೇಳುತ್ತಾಳೆ. ಇಬ್ಬರ ಸಂತಾನಪೇಕ್ಷೆಗೆತಕ್ಕ ಹಾಗೆ ವಸಂತಕಾಲ ಬಂದುಅವರ ಸಮಾಗಮಕ್ಕೆ ಪ್ರಕೃತಿಯನ್ನು ಸಜ್ಜುಗೊಳಿಸಿದಂತಿದೆ. ಇಲ್ಲಿಂದ ಸೀತೆ ಪುಷ್ಪವತಿಯಾಗಿಆನಂತರ ಫಲವತಿಯಾಗುವುದನ್ನು ಕವಿ ಉತ್ಸಾಹದಿಂದ ವರ್ಣಿಸುತ್ತಾನೆ. ಇಲ್ಲಿಂದ ನಿಜವಾದಕಥೆಯಆರಂಭ. ಸೀತೆ ಗರ್ಭಿಣಿಯಾದ ಸಂತೋಷದಲ್ಲಿಒಂದು ವೈರುಧ್ಯದ ಬಯಕೆಯನ್ನು ಹೊಂದಿದ್ದಾಳೆ. ಅದೇನೆಂದರೆ, “ಆಶ್ರಮದ ಋಷಿಪತ್ನಿಯರಸತ್ಸಂಗದೊಳ್ತನ್ನಬೇಸರಂತವಿಸುವ”ವಿಲಕ್ಷಣಬಯಕೆಅದು. ಅಂದರೆ ಮತ್ತೊಮ್ಮೆಕಾಡಿಗೆ ಹೋಗುವ ಬಯಕೆ! ಇದಾಗಿ ಕೆಲವೇ ದಿನಗಳಲ್ಲಿ ಅಗಸನೊಬ್ಬಆಡಿದ ಮಾತುಗಳನ್ನು ತಂದು ಸುದ್ದಿಗಾರರುರಾಮನಿಗೆ ತಿಳಿಸುತ್ತಾರೆ. ರವಿಕುಲದವನಾದತಾನುಅಪವಾದವನ್ನು ಸಹಿಸಲಾರೆಎನ್ನುವರಾಮಕೂಡಲೇ ಲಕ್ಷ್ಮಣನನ್ನು ಕರೆಸಿ ಸೀತೆಯನ್ನು ಕಾಡಿಗೆ ಬಿಟ್ಟು ಬರುವಂತೆ ಹೇಳುತ್ತಾನೆ. ಸೀತೆಗೆ ಈ ವಿಷಯವನ್ನುಯಾರೂ ಹೇಳುವುದೇ ಇಲ್ಲ. ಆಕೆ ಮುಗ್ಧಳಾಗಿ ತನ್ನ ಬಯಕೆಈಡೇರುವ ಸಂಭ್ರಮದಲ್ಲಿ ಋಷಿಮುನಿಗಳ ಪತ್ನಿಯರಿಗೆ ನೀಡಬೇಕಾದಬಾಗಿನ, ಮುತ್ತೈದೆ ಸಾಮಾನುಗಳನ್ನು ರಥದಲ್ಲಿ ಏರಿಸಿಕೊಂಡು ಹೊರಡುತ್ತಾಳೆ. ಅವಳು ಗರ್ಭಿಣಿಯಾದಾಗಲೇ ಕವಿ ಅವಳು ‘ಪರಸ್ಥಳದೊಳಣುಗರಂ ಪಡೆದಪಳದಂ ತಿಳಿಯದುತ್ಸವರೊಳಿರ್ದಳಾಕಾಂತೆ’ಎಂದುಮುಂದಾಗುವುದನ್ನುಸೂಚಿಸಿಬಿಟ್ಟಿದ್ದಾನೆ. ಇಲ್ಲಿಸೀತೆಯಮುಗ್ಧತೆಯುಕರುಣೆಯನ್ನುಹುಟ್ಟಿಸುತ್ತದೆ. ಈ ಸನ್ನಿವೇಶವನ್ನುಹೆಣ್ಣುಮತ್ತು ಗಂಡುಗಳತತ್ವದಲ್ಲಿಲಕ್ಷ್ಮೀಶ ಕವಿತಂದಿದ್ದಾನೆ. ಹೆಣ್ಣು ಬಂಧುತ್ವದ ಸಂಕೇತವಾಗಿ ಸಂತಾನ ಫಲವನ್ನು ಹೊಟ್ಟೆಯಲ್ಲಿ ಹೊತ್ತು ನಿಂತಿದ್ದರೆ, ಇನ್ನೊಂದೆಡೆ ಪ್ರಭುತ್ವದಕಾಠಿಣ್ಯವುಕೃತಕವಾದ ಸಂದರ್ಭವನ್ನು ಆರೋಪಿಸಿಕೊಂಡು ಬಂಧುತ್ವವನ್ನುತಿರಸ್ಕರಿಸುತ್ತದೆ. ಈ ಹಗ್ಗ ಜಗ್ಗಾಟವುಇಡೀಉತ್ತರರಾಮಾಯಣದ ಕೊನೆ ತನಕವೂ ನಡೆಯುತ್ತದೆ. ಕೊನೆಗೆ ಹೆಣ್ಣಾದ ಸೀತೆ ಭೂಮಿತತ್ವವನ್ನು ನಂಬಿ ರಾಮನನ್ನು ತಿರಸ್ಕರಿಸುತ್ತಾಳೆ. ಭೂಮಿಗೆಒಡೆಯನಾಗುವರಾಜಜನಕಜೆಯ ಮುಂದೆ ಆಳ್ವಿಕೆಯ ನಿಷ್ಠುರತೆಯನ್ನು ಮಾತ್ರ ಮೆರೆಯುತ್ತಾನೆ.

ಜೈಮಿನಿ ಭಾರತದಲ್ಲಿಅತ್ಯಂತಆದ್ರ್ರವಾದ ಭಾಗವೆಂದರೆ ಸೀತಾ ಪರಿತ್ಯಾಗ. ಕಾಡಿನಲ್ಲಿಜಾನಕಿ ಒಬ್ಬಳನ್ನೇ ಬಿಟ್ಟು ಹಿಂದಿರುಗಬೇಕಾದಜವಾಬ್ದಾರಿ ಮೈದುನನಾದ ಲಕ್ಷ್ಮಣನದು. ಈ ಭಾಗದಲ್ಲಿ ಬರುವ ಪದ್ಯಗಳನ್ನು ಹಲವಾರು ಬಾರಿಓದಿಕೊಂಡರೆ ಅವು ಧ್ವನಿಸುವ ಅರ್ಥಗಳು ವೈವಿಧ್ಯಮಯವಾಗಿವೆಎನ್ನುವುದೇ ಕವಿ ಪ್ರತಿಭೆಯ ಸೂಚಕ. ಕಾಡಿನಲ್ಲಿ ನಿನ್ನ ಬಯಕೆಯನ್ನು ಪೂರೈಸಲುಅಣ್ಣ ನಿನ್ನನ್ನು ನನ್ನಜೊತೆಗೆ ಕಳಿಸಿಕೊಟ್ಟಿದ್ದೇನೆ ಎಂದು ಲಕ್ಷ್ಮಣ ಹೇಳುವ ಪ್ರಸಂಗ ಹಾಗೆಯೇ ಸೀತೆ ತನ್ನಅಸಹಾಯಕ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಳ್ಳುವ ಸಂದರ್ಭಗಳು ಈ ಪದ್ಯಭಾಗಗಳ ವಿಶೇಷ. ಸೀತೆ ತಾನು ಬಂದುದು ಮಹಾ ಅಡವಿಗೆಎಂದು ಕಳವಳ ಪಡುವ ಹೊತ್ತಿನಲ್ಲಿಯೇ ಲಕ್ಷ್ಮಣ‘ದೇವಿನಿನಗಿನ್ನೆಗಂಪೇಳ್ದುದಿಲ್ಲಪವಾದಮಾವರಿಸಿನಿನ್ನನೊಲ್ಲದೆರಘುಕುಲೋದ್ವಹಂಸೀವರಿಸಿಬಿಟ್ಟುಕಾಂತಾರಕ್ಕೆ ಕಳುಹಿಬಾಎಂದು ಎನಗೆನೇಮಿಸಿದೊಡೆ’ತಾನುಬಂದೆಎಂದುಲಕ್ಷ್ಮಣಆಘಾತಕಾರಿಯಾದಸುದ್ದಿಯನ್ನು ಅವಳಿಗೆ ತಿಳಿಸುತ್ತಾನೆ. ಇಲ್ಲಿಂದಮುಂದೆಸೀತೆ ಗಲಿಬಿಲಿಗೊಂಡು, ಶೋಕಾರ್ತಳಾಗಿ ತನ್ನ ವಿಧಿಗೆತಾನೇ ಮರುಗಿ ಹೇಳುವ ಪದ್ಯಗಳು ಹಲವು ಈ ಉತ್ತರರಾಮಾಯಣದಕೇಂದ್ರವಾಗುತ್ತವೆ. ಕೌಶಿಕಮುನಿಯೊಡನೆ ಮಿಥಿಲಾಪುರಕ್ಕೆ ಬಂದು ಶಿವಧನಸ್ಸನ್ನು ಮುರಿದು ಮದುವೆಯಾದಾಗಿನಿಂದಲೂರಾಮತನ್ನನ್ನು ರಮಿಸಿ ನೋಡಿಕೊಂಡವನು. ನನಗೇನಾದರೂಆದರೆತಾನು ನವೆದವನು. ಕಡಲನ್ನುದಾಟಿ ಶತ್ರು ಸಂಹಾರ ಮಾಡಿ ನನ್ನನ್ನುಕಾಪಾಡಿವನು. ಅಂತಹರಾಮನು ನನ್ನನ್ನುಕಾಡಿಗೆ ಕಳುಹಿಸಿದನೇ? ಎನ್ನುವಆಶ್ಚರ್ಯದು:ಖಗಳಿಂದ ಸೀತೆ ಪ್ರಶ್ನಿಸಿಕೊಳ್ಳುತ್ತಾಳೆ. ಇಲ್ಲಿಯವರೆಗಿನಓದು ಸೀತೆಯನ್ನು ಒಬ್ಬ ಅಸಹಾಯಕಳಾದ ಹೆಣ್ಣನ್ನಾಗಿ ಕಲ್ಪಿಸಿಕೊಳ್ಳುವಂತೆ ಮಾಡುತ್ತದೆ. ಕವಿ ಲಕ್ಷ್ಮೀಶನಾದರೋಉಪಮಾಲೋಲ. ಅವನು ‘ಫಲಿತ ಕದಳಿಮುರಿದುರುಳುವಂತೆ’ಎನ್ನುವ ಉಪಮೆಗಳನ್ನು ಈ ಸನ್ನಿವೇಶದಲ್ಲಿನೀಡಿಸೀತೆಯನ್ನುಹೆಣ್ಣಿನಆದ್ರ್ರತೆಯನ್ನುಹೆಚ್ಚಿಸುತ್ತಾನೆ. ಇಲ್ಲಿಂದಮುಂದಿನಪದ್ಯಗಳನ್ನು ಗಮನಿಸಬೇಕು. ಸೀತೆನೀರಲ್ಲಿಮುಖವೊರೆಸಿಕೊಂಡು ಸಾವರಿಸಿಕೊಳ್ಳುತ್ತಾಳೆ. ಆನಂತರ ಲಕ್ಷ್ಮಣನಿಗೆರಾಮನ ಗುಣಗಳನ್ನು ಎತ್ತಿ ನುಡಿಯತೊಡಗುತ್ತಾಳೆ. ಆ ಸಂದರ್ಭದಲ್ಲಿತತಕ್ಷಣಕ್ಕೆಅದುರಾಮನಗುಣ ವರ್ಣನೆಯಂತೆಕಂಡರೂ ಸಾಲುಗಳೊಳಗಿನ ಅರ್ಥಗಳನ್ನು ಓದಿಕೊಳ್ಳುವಾಗ ಸೀತೆ ಅಲ್ಲಿ ಅಸಹಾಯಕಳಾಗಿ ನಿಂತಿದ್ದಾಳೆ ಎನ್ನಿಸುವುದಿಲ್ಲ. ಬದಲಾಗಿ ಆಕೆ ಒಬ್ಬ ನ್ಯಾಯಕೇಳುವ, ತನಗಾದಅನ್ಯಾಯವನ್ನು ನಾಜೂಕಾಗಿ ಮಂಡಿಸುವಯತ್ನ ಮಾಡುತ್ತಿದ್ದಾಳೆ ಎನಿಸುತ್ತದೆ. ಆಕೆ ಮಾಡುವರಾಮನಕೀರ್ತನೆಯು ವಾಚ್ಯಾರ್ಥವನ್ನು ಮೀರಿ ವ್ಯಂಗ್ಯಾರ್ಥದೆಡೆಗೆಒಯ್ಯುವಂತೆಕಾಣುತ್ತದೆ. ‘ರಾಮನಂಭುವನಾಭಿರಾಮನಂಗುಣರತ್ನರಾಮನಂ….ಶರಣಜನವಾರ್ಧಿಯಂ.. ಸಂತತಂ ನಾ ಮನಂದಣಿಯೆರಮಿಸದೆ ಬಾಳ್ವೆನೆಂತೆಂದಳು”ಎಂದು ಶುರುವಾದ ವ್ಯಂಗಾರ್ಥವು‘ಹೋಗುಸೌಮಿತ್ರಿಕಾಕುತ್ಸ್ಥವಂಶಜರಾಮತಡಮಾಡಿದರೆನಿನ್ನಲ್ಲಿ ಕೋಪಿಸನೆ?’, ನನಗಾದರೂಇಲ್ಲಿ ಕ್ರೂರಜಂತುಗಳಜೊತೆಯಾದರೂಇದೆ, ಅಲ್ಲಿರಘುನಾಥಏಕಾಕಿಯಾಗಿರುವನು! ಹೋಗು ಬೇಗ ಎಂದು ಲಕ್ಷ್ಮಣನನ್ನು ಉದ್ದೇಶಿಸಿ ಹೇಳುವ ತನಕ ಮುಂದುವರೆಯುತ್ತದೆ. ಇನ್ನು ಲಕ್ಷ್ಮೀಶಕಾವ್ಯದಹೈಲೈಟ್‍ಎನ್ನಿಸುವ ಸಾಲುಗಳೆಂದರೆ; ‘ಕಡೆಗೆ ಕರುಣಾಳುರಾಘವನಲ್ಲಿತಪ್ಪಿಲ್ಲ/ ಕಡುಪಾತಕಂಗೈದುಪೆಣ್ಣಾಗಿಸಂಭವಿಸಿ/ದೊಡಲಂ ಪೊರೆವುದು ಎನ್ನೊಳ್ ಅಪರಾಧಮುಂಟು’ಎನ್ನುವಂತವು. ಸ್ತ್ರೀವಾದಕ್ಕೆ ಈ ಸಾಲುಗಳು ಒಂದುಕಾಲದಲ್ಲಿ ಎಷ್ಟು ಕೋಪಗೊಳಿಸಿದವೆಂದರೆ ಅಲ್ಲಿನ ವ್ಯಾಖ್ಯಾನವು ಪುರುಷಪ್ರಧಾನವಾದ ಸಮಾಜದಧೋರಣೆಯನ್ನುಎತ್ತಿಹಿಡಿಯುವಂತಹ ಸಾಲುಗಳಿವು ಎನ್ನುವುದನ್ನು ಸಾರಿ ಹೇಳಿದವು. ಸೀತೆಯ ದೈನ್ಯತೆಯು ಪುರುಷಪ್ರಧಾನ ಸಮಾಜತಿದ್ದಿದ ಭಾವಎಂದುಆರೋಪಿಸಲಾಯಿತು. ಆದರೆಕಾವ್ಯದ ಮತ್ತೊಂದುಓದು ನಮಗೆ ಇನ್ನೊಂದು ಮುಖವನ್ನುತೋರಿಸಬಲ್ಲಷ್ಟು ಶಕ್ತಿಶಾಲಿಯಾಗಿದೆ. ಕವಿಯನ್ನು ಮೀರಿಕಾವ್ಯವು ಬೆಳೆಯುತ್ತದೆ ಎನ್ನುವುದಾದರೆ ಹೌದು ಲಕ್ಷ್ಮೀಶನಆಶಯ, ಧೋರಣೆಗಳು ಸೀತೆಯನ್ನು ದೈನ್ಯಾವಸ್ಥೆಯಲ್ಲಿ ನಿಂತ, ಸದಾಕಾಲ ಇನ್ನೊಬ್ಬರಆಶ್ರಯ ಬೇಕಾಗುವ ಬಳ್ಳಿಯಂತಹ ಗುಣವನ್ನುಕಂಡರೆ, ಕವಿಗಿಂತ ಮಿಗಿಲಾಗಿ ಅವನು ಬರೆದ ಸಾಲುಗಳು ಸೀತೆಯನ್ನು ನಮಗಿಂದು ವ್ಯಂಗ್ಯದಲ್ಲಿರಾಮನ ಗುಣಗಳನ್ನು ಎತ್ತಿಆಡುವ, ತನ್ನ ಬದುಕನ್ನುತಾನೇ ಕಟ್ಟಿಕೊಳ್ಳಬಲ್ಲೆನೆಂಬ ಆತ್ಮವಿಶ್ವಾಸವನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ತುಂಬಿಕೊಳ್ಳುತ್ತಿರುವ ಹೆಣ್ಣನ್ನಾಗಿ ತೋರಿಸಿಕೊಡುವಂತಿವೆ. ಇದುಕಾವ್ಯದ ಓದಿನ ಸೋಜಿಗ. ಕಾಲಧರ್ಮಗಳು ಬದಲಾದಂತೆಇರುವ ಅರ್ಥಗಳು ಸ್ಥಿರವಾಗಿ ಉಳಿಯುವುದಿಲ್ಲ. ಯಹೂದಿಗಳ ಅಸಹಾಯಕ ಪರಿಸ್ಥಿತಿಯನ್ನು ಆಡೆನ್ ಕವಿ ‘ರೆಫ್ಯೂಜಿಬ್ಲೂಸ್’ಕವಿತೆಬರೆದ. ಆದರೆ ಈ ಹೊತ್ತು ಯಹೂದಿಗಳ ಪರಿಸ್ಥಿತಿಯಲ್ಲಿ ಪಾಲಸ್ಟೇನಿಯನ್ನರು ನಿಂತಿದ್ದಾರೆ. ಯಾರುಅಸಹಾಯಕರಾಗಿದ್ದರೋಅವರುಇಂದು ಶೋಷಕ ಸ್ಥಾನದಲ್ಲಿದ್ದಾರೆ. ಈ ಅಂಶವನ್ನುಗ್ರಹಿಸದಿದ್ದರೆ ಪದ್ಯಜಡವಾಗಿ ಬಿಡುತ್ತದೆ. ಅಂತೆಯೇ ಲಕ್ಷ್ಮೀಶನಕಾವ್ಯದರಾಮಾಯಣದ ಭಾಗ ಗಂಡಸಿನ ಪೆಡಸು ಸ್ವಭಾವವನ್ನೂ ಪ್ರಭುತ್ವಕ್ಕಾಗಿ ಸಂಬಂಧಗಳನ್ನು ಮರೆಯುವುದನ್ನೂತಮಗರಿವಿಲ್ಲದಂತೆ ಧ್ವನಿಸಿದೆ. ಅಲ್ಲದೆಕುಮಾರವ್ಯಾಸನದ್ರೌಪದಿಯು‘ಸ್ತ್ರೀಮತವನ್ನುತ್ತರಿಸಲಾಗದೇ?’ಎನ್ನುವಧರ್ಮಸೂಕ್ಞ್ಮಪ್ರಶ್ನೆಯನ್ನು ಕೇಳುವದಿಟ್ಟತನವೇಸೀತೆಯಲ್ಲಿ ಕೆಳದನಿಯಪ್ರಶ್ನೆಯಾಗಿ, ‘ಕಡೆಗೆ ಕರುಣಾಳುರಾಘವನಲ್ಲಿತಪ್ಪಿಲ್ಲ’ ಎಂಬವ್ಯಂಗ್ಯದಲ್ಲಿಮುಗಿತಾಯಕ್ಕೆಬಂದಿದೆ ಎನಿಸುತ್ತದೆ.

*ಲೇಖಕಿ ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದಿದ್ದು ತಂದೆಮನೆಚಿತ್ರದುರ್ಗದಲ್ಲಿ. ಕುವೆಂಪು ವಿಶ್ವವಿದ್ಯಾಲಯದಿಂದಇಂಗ್ಲಿಷ್ ಎಂ.ಎ. ಪದವಿ. ಸದ್ಯ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿಇಂಗ್ಲಿಷ್ ಸಹ ಪ್ರಾಧ್ಯಾಪಕಿ. ‘ತೋಡಿರಾಗ’, ‘ಚಿತ್ತಗ್ಲಾನಿಯಮಾತು’, ‘ಒಂದುತುಂಡುಬೆಲ್ಲ’, ‘ಪೂರ್ವಭಾಷಿ’. ‘ಹೆಡೆಯಂತಾಡುವಸೊಡರು’, ‘ಗಳಿಗೆಬಟ್ಟಲು’, ‘ಸಾಮಯಿಕ’ಕವಿತಾಸಂಕಲನಗಳುಮತ್ತು‘ಸನ್ನೆಗೋಲು’ವಿಮರ್ಶಾಕೃತಿ ಪ್ರಕಟಗೊಂಡಿವೆ.

Leave a Reply

Your email address will not be published.