ವಾರದ-ಸಂಚಿಕೆ

ಸಮಾಜಮುಖಿ ಜಾಲತಾಣದ “ವಾರದ ಸಂಚಿಕೆ”ಯಲ್ಲಿ ಪ್ರಚಲಿತ ಸಂಗತಿಗಳನ್ನು ಕುರಿತು ಮುಕ್ತವಾಗಿ ಚರ್ಚಿಸಲು ಓದುಗರಿಗೆ ಅವಕಾಶ ಕಲ್ಪಿಸಲಾಗಿದೆ. ದಯವಿಟ್ಟು ನೀವೂ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯ ದಾಖಲಿಸಿ.

ಬರುವ ಫೆಬ್ರವರಿ 5, 6, 7ನೇ ತಾರೀಖು ಕಲಬುರ್ಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಆಯ್ಕೆಯಾಗಿದ್ದಾರೆ. ಇವರ ಆಯ್ಕೆ ಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ:

ಸಮ್ಮೇಳನ ಕಲ್ಯಾಣ ಕರ್ನಾಟಕದ ಕಲ್ಬುರ್ಗಿಯಲ್ಲಿ ನಡೆಯುತ್ತಿರುವುದರಿಂದ ಈ ಭಾಗದ ಸಾಹಿತಿಗೆ ಅಧ್ಯಕ್ಷತೆಯ ಮನ್ನಣೆ ದೊರೆಯಬೇಕಿತ್ತಲ್ಲವೇ?

ಸಾಹಿತ್ಯ ಪರಿಷತ್ತು ಇಂಥ ಮಹತ್ವದ ಆಯ್ಕೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಪಾಲಿಸಿದಂತೆ ನಾಟಕವಾಡಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತದೆಯೇ?

ಪರಿಷತ್ತು ಸಮ್ಮೇಳನದ ಖರ್ಚು-ವೆಚ್ಚಗಳಿಗೆ ರಾಜ್ಯ ಸರ್ಕಾರದ ನೆರವನ್ನು ಅವಲಂಬಿಸಿರುವುದರಿಂದ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ನಿಲುವು-ಒಲವಿಗೆ ಅನುಗುಣವಾಗಿ ಅಧ್ಯಕ್ಷರ ಆಯ್ಕೆ ನಡೆಯುತ್ತದೆಯೇ?

ಸಾಹಿತ್ಯ ಕ್ಷೇತ್ರದ ಇಂತಹ ಉನ್ನತ ಗೌರವಗಳಿಗೆ ಬ್ರಾಹ್ಮಣರಿಗೇ ಆದ್ಯತೆ ಸಿಗುವುದು ಏಕೆ?

ಈವರೆಗಿನ ಸಾಹಿತ್ಯ ಸಮ್ಮೇಳನಗಳಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರಿಗೆ ಮಾತ್ರ ಅಧ್ಯಕ್ಷತೆಯ ಅವಕಾಶ ಸಿಕ್ಕಿದೆ. ಪುರುಷಪ್ರಧಾನ ಸಮಾಜದ ಧೋರಣೆ ಬದಲಾಗುವುದು ಯಾವಾಗ?

ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ, ವಿಶ್ಲೇಷಣೆ, ಅಭಿಪ್ರಾಯ, ಭಿನ್ನಾಭಿಪ್ರಾಯ, ಟಿಪ್ಪಣಿ ಹಂಚಿಕೊಳ್ಳಬಹುದು.

13 Responses to "ವಾರದ-ಸಂಚಿಕೆ"

Leave a Reply

Your email address will not be published.