ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಲಸಿಕೆ ರಾಷ್ಟçವಾದ ವ್ಯಾಕ್ಸಿನ್ ನ್ಯಾಶನಲಿಸಮ್

ಕೋವಿಡ್ ಸಾಂಕ್ರಾಮಿಕಕ್ಕೆ ನಾಲ್ಕೆöÊದು ಲಸಿಕೆಗಳು ಬಿಡುಗಡೆಯಾಗುತ್ತಲೇ ‘ವ್ಯಾಕ್ಸಿನ್ ನ್ಯಾಶನಲಿಸಮ್’ ಅಥವಾ ಲಸಿಕೆ ರಾಷ್ಟçವಾದ ಕೊರೊನಾ ನಿಯಂತ್ರಣಕ್ಕೆ ಅಡ್ಡಿಪಡಿಸುವಂತೆ ಕಾಣಿಸುತ್ತಿದೆ. ಇದರಿಂದ ಶ್ರೀಮಂತ ರಾಷ್ಟçಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಲಸಿಕೆ ಲಭ್ಯವಾಗಲಿದ್ದು ಏಷ್ಯಾ-ಆಫ್ರಿಕಾ-ಲ್ಯಾಟಿನ್ ಅಮೆರಿಕದ ಬಡದೇಶಗಳು ಇನ್ನೂ ಒಂದು ವರ್ಷ ಸಾಂಕ್ರಾಮಿಕದ ಕೆಂಗಣ್ಣಿಗೆ ಗುರಿಯಾಗಬೇಕಾದ ಸಾಧ್ಯತೆ ಕಾಣಿಸುತ್ತಿದೆ.

ಶ್ರೀಮಂತ ರಾಷ್ಟçಗಳು ಲಸಿಕೆ ಉತ್ಪಾದಕ ಕಂಪನಿಗಳೊAದಿಗೆ ಒಡಂಬಡಿಕೆ ಮಾಡಿಕೊಂಡು ಮೊದಲು ಉತ್ಪಾದನೆಯಾಗುವ ಲಸಿಕೆ ಸರಕು ಪೂರೈಕೆಯನ್ನು ತಮ್ಮ ರಾಷ್ಟçಗಳಿಗೆ ಸೀಮಿತ ಮಾಡಿಕೊಳ್ಳುವುದಕ್ಕೆ ‘ಲಸಿಕೆ ರಾಷ್ಟçವಾದ’ ಎಂದು ಹೇಳಲಾಗುತ್ತಿದೆ. ಒಟ್ಟು ಎಲ್ಲ ದೇಶಗಳಲ್ಲಿ 800 ಕೋಟಿ ಜನರಿದ್ದರೆ ಶ್ರೀಮಂತ ದೇಶಗಳ 100 ಕೋಟಿ ಜನರೇ ಮೊದಲ ಲಸಿಕೆ ಸರಕನ್ನು ಖರೀದಿಸಿದರೆ 2021ರ ಕಡೆಯವರೆಗೆ ಬಡ ದೇಶಗಳ ಜನರಿಗೆ ಯಾವುದೇ ಲಸಿಕೆ ಸಿಗದೆ ಇರಬಹುದು. ಅಂಕಿಅAಶಗಳ ಆಧಾರದಲ್ಲಿ ಈಗಾಗಲೇ ಅಮೆರಿಕ 80 ಕೋಟಿ ಲಸಿಕೆ ಪ್ರಮಾಣವನ್ನು ಖರೀದಿಸಲು ಒಡಂಬಡಿಕೆ ಮಾಡಿಕೊಂಡಿದ್ದರೆ ಯುಕೆ 28 ಕೋಟಿ ಲಸಿಕೆ ಪ್ರಮಾಣಕ್ಕೆ ಒಡಂಬಡಿಕೆ ಮಾಡಿಕೊಂಡಿದೆ. ಜಪಾನ್ ಹಾಗೂ ಯೂರೋಪ್ ಒಕ್ಕೂಟ ಕೂಡಾ ದೊಡ್ಡ ಪ್ರಮಣದಲ್ಲಿ ಲಸಿಕೆ ಖರೀದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಇದರಂತೆ ಈಗ ಲಸಿಕೆ ಉತ್ಪಾದನೆ ಮಾಡುತ್ತಿರುವ ಫೈಜರ್, ಮಾಡರ್ನಾ ಹಾಗೂ ಅಸ್ಟಾç ಜೆನಿಕ ಕಂಪನಿಗಳು ತಮ್ಮ ಮುಂದಿನ ಆರು ತಿಂಗಳ ಉತ್ಪಾದನೆಯ ಮಾರಾಟಕ್ಕೆ ಶ್ರೀಮಂತ ರಾಷ್ಟçಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ಈ ಲಸಿಕೆ ರಾಷ್ಟçವಾದವನ್ನು ತಡೆಯಲು ಯಾವುದೇ ಅಂತರರಾಷ್ಟಿçÃಯ ಕಾನೂನುಗಳಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಈ ಸಂಕುಚಿತ ಮನೋಭಾವದ ಪರಿಣಾಮಗಳನ್ನು ತಿಳಿಹೇಳುತ್ತಿದೆ. ವಿಶ್ವದೆಲ್ಲೆಡೆ ಸಾಂಕ್ರಾಮಿಕವನ್ನು ನಿಯಂತ್ರಣ ಮಾಡದಿದ್ದರೆ ಕೇವಲ ಶ್ರೀಮಂತ ರಾಷ್ಟçಗಳಲ್ಲಿ ರೋಗದ ನಿಯಂತ್ರಣ ಕೆಲಸಕ್ಕೆ ಬರದು. ಇಡೀ ವಿಶ್ವದಲ್ಲಿ ರೋಗ ನಿಯಂತ್ರಣ ಮಾಡಬೇಕೆಂದಿದ್ದರೆ ಎಲ್ಲಾ ರಾಷ್ಟçಗಳು ಒಗ್ಗೂಡಿ ಪರಸ್ಪರ ಹೊಂದಾಣಿಕೆಯಲ್ಲಿ ಲಸಿಕೆಯ ವಿತರಣೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದಕ್ಕಾಗೆ ‘ಕೊವ್ಯಾಕ್ಸ್’ ಎಂಬ ಕಾರ್ಯಕ್ರಮದಡಿ ವಿಶ್ವದ ಬಡರಾಷ್ಟçಗಳಿಗೆ ಲಸಿಕೆ ಪೂರೈಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ.

 

ವಾಷಿಂಗ್ಟ್ನ್ ಡಿ.ಸಿ.ಯಲ್ಲಿ ಜನವರಿ 6ರ ದಂಗೆ

ಡಾನಲ್ಡ್ ಟ್ರಂಪ್‌ನ ಬೆಂಬಲಿಗರ ಸೈನ್ಯ ಎರಡು ತಿಂಗಳಿAದ ಈ ದಿನಕ್ಕಾಗಿ ತಯ್ಯಾರಿ ನಡೆಸುತ್ತಿತ್ತು. ಡೆಮಾಕ್ರೆಟಿಕ್ ಪಕ್ಷವು ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ತಮ್ಮಿಂದ ಕದ್ದಿದ್ದಾರೆ ಎಂದು ಈ ಸೈನ್ಯ ನಂಬಿತ್ತು. ಅಮೆರಿಕದ ಸುಪ್ರೀಮ್ ಕೋರ್ಟ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಟ್ರಂಪ್‌ನ ವಾದವನ್ನು ತಳ್ಳಿಹಕಿದ್ದವು. ಆದರೂ ಟ್ರಂಪ್ ಬೆಂಬಲಿಗರ ಸೈನ್ಯ ತಮ್ಮ ಪಕ್ಷದ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. 2021ರ ಜನವರಿ ಆರರಂದು ಅಮೆರಿಕದ ಸಂಸತ್ತು ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಅಂಗೀಕರಿಸಿ ಅಧಿಕೃತವಾಗಿ ಜೋ ಬೈಡೆನ್‌ರವರನ್ನು ಚುನಾಯಿತ ಅಧ್ಯಕ್ಷರೆಂದು ಘೋಷಣೆ ಮಾಡುವುದಿತ್ತು. ಇದನ್ನು ಹೇಗಾದರೂ ಮಾಡಿ ತಡೆಯಲು ಟ್ರಂಪ್ ಸಂಚು ಹೂಡಿದ್ದರು. ಮೊದಲು ಉಪಾಧ್ಯಕ್ಷ ಮೈಕ್ ಪೆನ್ಸ್ರವರಿಗೆ ಚುನಾವಣೆಯ ಫಲಿತಾಂಶವನ್ನು ನಿರಾಕರಿಸಲು ಹೇಳಿದ್ದರು. ಆದರೆ ಪೆನ್ಸ್ ಒಪ್ಪದಿದ್ದಾಗ ಜನವರಿ ಆರರಂದು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಬಹಿರಂಗ ಹೇಳಿಕೆ ನೀಡಿ ಫಲಿತಾಂಶದ ಅಂಗೀಕಾರವನ್ನು ಸಂಸತ್ತಿನಲ್ಲಿ ತಡೆಯುವಂತೆ ಪ್ರಚೋದನೆ ನೀಡಿದ್ದರು.

ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಟ್ರಂಪ್ ಬೆಂಬಲಿಗರನ್ನು ತಡೆಯಲು ವಾಷಿಂಗ್ಟ್ನ್ ಡಿ.ಸಿ.ಯಲ್ಲಿ ಅಗತ್ಯ ಪೊಲೀಸ್ ಪಡೆ ಇರಲಿಲ್ಲ. ನಗರದ ಪೊಲೀಸ್ ಮುಖ್ಯಸ್ಥ ನ್ಯಾಶನಲ್ ಗಾರ್ಡ್ ಕರೆಯಲು ವಿನಂತಿಸಿದ್ದರು. ಆದರೆ ಟ್ರಂಪ್ ಈ ನ್ಯಾಶನಲ್ ಗಾರ್ಡ್ಗೆ ಅನುಮತಿ ನೀಡಿರಲಿಲ್ಲ. ಕಡೆಗೆ ಟ್ರಂಪ್ ಸೇನೆಯ ಗಲಭೆಕೋರರು, ದೊಂಬಿಕೋರರು ಮತ್ತು ಕಿಡಿಗೇಡಿಗಳು ಲೀಲಾಜಾಲವಾಗಿ ಅಮೆರಿಕದ ಕಾಂಗ್ರೆಸ್ ಕಟ್ಟಡವನ್ನು ಪ್ರವೇಶಿಸಿದ್ದರು. ದೊಂಬಿಕೋರರು ಒಂದೆರೆಡು ಘಂಟೆಗಳ ಕಾಲ ಅಮೆರಿಕದ ಸಂಸತ್ತಿನಲ್ಲಿ ಅಕ್ಷರಶಃ ತಮ್ಮ ಬಾವುಟವನ್ನು ಹಾರಿಸಿದ್ದರು. ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಅಂಗೀಕಾರ ಪ್ರಕ್ರಿಯೆಯನ್ನು ನಿಲ್ಲಿಸಿ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು.

ಸAಸತ್ತಿನ ಮೇಲಿನ ದಾಳಿಯನ್ನು ತಹಬಂದಿಗೆ ತರಲು ಹಲವು ಘಂಟೆಗಳೇ ಬೇಕಾಗಿತ್ತು. ಐದು ಜನರ ಸಾವನ್ನೂ ಅದು ಅಪೇಕ್ಷಿಸಿತ್ತು. ಕಡೆಗೆ ಪೊಲೀಸರು ದೊಂಬಿಕೋರರನ್ನು ಸಂಸತ್ತಿನ ಆವರಣದಿಂದ ಹೊರಗೆ ಕರೆದೊಯ್ಯಲು (ಬಂಧಿಸಿ ಅಲ್ಲ) ಶ್ರಮ ವಹಿಸಬೇಕಾಯಿತು. ಅಮೆರಿಕದ ಪ್ರಜಾಪ್ರಭುತ್ವದ, ಕಾನೂನು ಸುವ್ಯವಸ್ಥೆಯ ಮತ್ತು ಅಧ್ಯಕ್ಷೀಯ ಹುದ್ದೆಯ ಗರಿಮೆ ಮಣ್ಣು ಪಾಲಾಗಿತ್ತು. ಇಡೀ ಜಗತ್ತೇ ಅಮೆರಿಕವನ್ನು ನೋಡಿ ಕನಿಕರದ ಅನುಕಂಪ ತೋರಿಸುವಂತಾಗಿತ್ತು.

ಇಷ್ಟೆಲ್ಲಾ ಆದರೂ ಟ್ರಂಪ್‌ಗೆ ಬುದ್ಧಿ ಬಂದಿರಲಿಲ್ಲ. ಟ್ವಿಟರ್‌ನಲ್ಲಿ ತಮ್ಮ ಬೆಂಬಲಿಗರನ್ನು ‘ವಿ ಲವ್ ಯು, ಗೋ ಹೋಮ್’ ಎಂದು ಹೇಳಿ ಪ್ರೋತ್ಸಾಹ ನೀಡಿದ್ದರು. ಈ ದಂಗೆಯ ಬಗ್ಗೆ ಇಡೀ ವಿಶ್ವ ಮತ್ತು ಅಮೆರಿಕದೆಲ್ಲೆಡೆ ಅಸಹನೆ ವ್ಯಕ್ತವಾದ ನಂತರದಲ್ಲಿ ಒಂದು ದಿನ ದಂಗೆಯನ್ನು ಖಂಡಿಸಿ ಟ್ರಂಪ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯೂ ಕಾಟಾಚಾರಕ್ಕೆ ಎಂದು ಯಾರಾದರೂ ಹೇಳುವಂತಾಗಿತ್ತು. ಅಮೆರಿಕದ ಹೆಸರನ್ನು ಬೀದಿಪಾಲು ಮಾಡಿದ ಕುಕೃತ್ಯಕ್ಕೆ ಟ್ರಂಪ್‌ಗೆ ಯಾವುದೇ ವಿಷಾದವಿರಲಿಲ್ಲ.

 

ಟೋಕಿಯೋ 2020 ಓಲಿಂಪಿಕ್ಸ್ ಅನಿಶ್ಚಿತವೇ..?

2020ರ ಜುಲೈನಲ್ಲಿ ಪ್ರಾರಂಭವಾಗಬೇಕಿದ್ದ ಟೋಕಿಯೋ ಓಲಿಂಪಿಕ್ಸ್ ಒಂದು ವರ್ಷ ಮುಂದೂಡಲಾಗಿ 2021ರ ಜುಲೈ 23ರಂದು ಶುರುವಾಗಬೇಕಿದೆ. ಆದರೆ ಜಪಾನ್‌ನಲ್ಲಿ ಏರುತ್ತಿರುವ ಕೋವಿಡ್ ಸೋಂಕಿನ ಕಾರಣದಿಂದ ಓಲಿಂಪಿಕ್ಸ್ ನಡೆಯುವುದೋ ಇಲ್ಲವೋ ಎನ್ನುವ ಅನಿಶ್ಚಿತತೆ ಕಾಡುತ್ತಿದೆ. ಅಂತರರಾಷ್ಟಿçÃಯ ಓಲಿಂಪಿಕ್ಸ್ ಸಮಿತಿ ಮತ್ತು ಸ್ಥಳೀಯ ಸಂಘಟಕರು ಓಲಿಂಪಿಕ್ಸ್ ನಡೆಸಿಯೇ ಸಿದ್ಧ ಎಂದು ಹೇಳುತ್ತಿದ್ದರೂ ಇದಕ್ಕೆ ಜಪಾನಿಯರ ಸಾರ್ವತ್ರಿಕ ಬೆಂಬಲ ಕಾಣಿಸುತ್ತಿಲ್ಲ. ಇನ್ನು ಎರಡು-ಮೂರು ತಿಂಗಳಲ್ಲಿ ಕೋವಿಡ್ ಸೋಂಕು ಉಲ್ಬಣಗೊಂಡರೆ ಓಲಿಂಪಿಕ್ಸ್ ನಡೆಸಲೇ ಬೇಕೆನ್ನುವ ಸರ್ಕಾರದ ನಿರ್ಧಾರವೂ ಸಡಿಲಗೊಳ್ಳಬಹುದು.

ಈಗಾಗಲೇ ಸಂಘಟಕರು ಓಲಿಂಪಿಕ್ಸ್ ಕೂಟದಲ್ಲಿ ಪ್ರೇಕ್ಷಕರನ್ನು ಸೇರಿಸದೇ ಇರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡAತೆ ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಸೋಕಿತರ ಸಂಖ್ಯೆ ಹಾಗೂ ಲಸಿಕೆ-ಆರೈಕೆಯ ಪ್ರಮಾಣ ಮತ್ತು ಫಲಿತಾಂಶಗಳು ಜುಲೈ 23 ಕ್ಕೆ ಓಲಿಂಪಿಕ್ಸ್ ದೀವಟಿಗೆ ಬೆಳಗುವುದೋ ಇಲ್ಲವೇ ಎಂಬುದನ್ನು ನಿರ್ಧರಿಸಲಿದೆ.

 

ಬೈಡೆನ್ ಮುಂದಿರುವ ಜಾಗತಿಕ ಸವಾಲುಗಳು

ನಾಲ್ಕು ವರ್ಷಗಳ ಟ್ರಂಪ್ ಆರಾಜಕತೆಯ ನಂತರ ಸರ್ವಸಮ್ಮತ ಡೆಮಾಕ್ರೆಟಿಕ್ ಅಭ್ಯರ್ಥಿಯಾಗಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್‌ರವರ ಮುಂದೆ ತುರ್ತು ದೇಶೀಯ ಸವಾಲುಗಳಿವೆ. ಕೋವಿಡ್ ನಿಯಂತ್ರಣ, ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು, ರಾಚನಿಕ (ಸಿಸ್ಟೆಮಿಕ್) ಜನಾಂಗೀಯ ಅಸಹನೆ ತಗ್ಗಿಸುವುದು ಮತ್ತು ಆರ್ಥಿಕ ಅಸಮತೋಲನ ನಿವಾರಣೆ ಈ ದೇಶಿ ಸವಾಲುಗಳಲ್ಲಿ ಮುಖ್ಯವಾದವು. ಆದರೆ ಈ ಬೆಟ್ಟದಷ್ಟು ಗಾತ್ರದ ದೇಶಿ ಸವಾಲುಗಳ ಜೊತೆಗೇ ಹಲವು ವಿದೇಶಿ ಕಂದಕಗಳೂ ಬೈಡೆನ್‌ರವರನ್ನು ಕಾಡಲು ತಯಾರಾಗಿ ನಿಂತಿವೆ.

 

  1. ಚೀನಾದೊಂದಿಗಿನ ಪೈಪೋಟಿ ಇನ್ನಷ್ಟು ತಾರಕಕ್ಕೆ ಏರುವ ಸಾಧ್ಯತೆಯಲ್ಲಿ ಚೀನಾದೊಂದಿಗಿನ ಸ್ಫರ್ಧಾತ್ಮಕ ತೂಗುಯ್ಯಾಲೆಯ ಮೇಲೆ ಹತೋಟಿ ಸಾಧಿಸುವುದು ಬೈಡೆನ್‌ರವರ ಮುಂದಿರುವ ಪರೀಕ್ಷೆಗಳಲ್ಲಿ ಒಂದು. ದಕ್ಷಿಣ ಚೀನಾ ಸಮುದ್ರ, ಹಾಂಗ್‌ಕಾAಗ್, ಭಾರತ ಗಡಿ, ಟಿಬೆಟ್-ಉಯ್‌ಘುರ್ ಪರಿಸ್ಥಿತಿ, ವ್ಯಾಪಾರಿ ವಹಿವಾಟಿನ ಪೈಪೋಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಮೆರಿಕದ ಚೀನಾ ನೀತಿ ನಿರೂಪಕವಾಗಬೇಕಿದೆ.
  2. ಹಳೆಯ ವೈರಿ ರಷ್ಯಾವನ್ನು ಮತ್ತೆ ಕಟ್ಟಿಹಾಕುವುದು ಹೇಗೆಂಬ ಚಿಂತೆ ಬೈಡೆನ್ ಕಾಡಲಿದೆ. ಉಕ್ರೆöÊನ್ ಮತ್ತು ಸಿರಿಯಾಗಳಲ್ಲಿ ರಷ್ಯಾದ ಪಾತ್ರ ಮತ್ತು ಅಮೆರಿಕದ ಮೇಲಿನ ಸೈಬರ್ ದಾಳಿಯಂತಹ ಸೂಕ್ಷö್ಮ ವಿಷಯಗಳಲಿ ವ್ಲಾದಿಮಿರ್ ಪುಟಿನ್ ಅವರನ್ನು ಎದುರಿಸಬೇಕಾಗಿದೆ.
  3. ಕಿಮ್ ಜಾಂಗ್ ಉನ್ ಜೊತೆಯಲ್ಲಿ ಟ್ರಂಪ್ ಪ್ರಹಸನದ ನಂತರವೂ ಉತ್ತರ ಕೊರಿಯಾ ಅಣ್ವಸ್ತç ಮತ್ತು ಖಂಡಾAತರ ಕ್ರಿಪಣಿಯ ಸಂಶೋಧನೆ / ಉತ್ಪಾದನೆ ನಿಲ್ಲಿಸಿಲ್ಲ. ಈಗ ಹೇಗೆ ಈ ಹುಚ್ಚು ಮನುಷ್ಯ ಕಿಮ್‌ನನ್ನು ಎದುರಿಸುವುದು ಎಂಬುದೂ ಬೈಡೆನ್ ಕಾಡಲಿರುವ ಪ್ರಶ್ನೆಯಾಗಿದೆ,
  4. ಬರಾಕ್ ಓಬಾಮ ಇರಾನ್ ಜೊತೆಗೆ ಮಾಡಿದ ಶಾಂತಿಸAಧಾನವನ್ನು ಟ್ರಂಪ್ ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಿದ್ದರು. ಈ ಮಧ್ಯೆ ಇರಾನ್ ಕೂಡಾ ಅಣ್ವಸ್ತç ಸಂಶೋಧನೆ ನಿಲ್ಲಿಸಿಲ್ಲ. ಈಗ ಮತ್ತೆ ಇರಾನ್ ಜೊತೆಗಿನ ಸಂಬAಧ ಸುಧಾರಿಕೆ ಮಧ್ಯಪ್ರಾಚ್ಯದಲ್ಲಿ ಬೈಡೆನ್ ಮುಂದಿರುವ ಗುರುತರ ಸವಾಲಾಗಿದೆ.
  5. ಜಾಗತಿಕ ಹವಾಮಾನ ಒಪ್ಪಂದದಿAದ ಹೊರಬಂದು ಅಮೆರಿಕ ಮಾಡಿರುವ ಪ್ರಮಾದವನ್ನು ಸರಿಪಡಿಸುವುದು ಇನ್ನೊಂದು ಗುರುತರ ಜವಾಬ್ದಾರಿ. ಹೆಚ್ಚಿದ ಜಾಗತಿಕ ತಾಪಮಾನವನ್ನು ಈಗಿನ 1.2 ಡಿಗ್ರಿಯಿಂದ ಕೆಳಕ್ಕೆ ಇಳಿಸುವುದು ಮತ್ತು ಜಾಗತಿಕ ವಲಸೆಯ ಸಮಸ್ಯೆ ಎದುರಿಸುವುದು ಯಾರಿಗೂ ಕಷ್ಟಸಾಧ್ಯವಾದ ಸವಾಲೇ ಸರಿ.
  6. ಆಫ್ಘಾನಿಸ್ತಾನ ಮತ್ತು ಇರಾಖ್-ಸಿರಿಯಾಗಳಲ್ಲಿನ ಅಮೆರಿಕದ ಯುದ್ಧಗಳನ್ನು ನಿಭಾಯಿಸುವುದು ಬೈಡೆನ್‌ರ ಉಳಿಕೆ ಚಿಂತೆಗಳಲ್ಲಿ ಒಂದು. ಬೇಜವಾಬ್ದಾರಿಯಿಂದ ಟ್ರಂಪ್ ಈ ದೇಶಗಳಲ್ಲಿ ಕೇವಲ 2,500ಕ್ಕೆ ಇಳಿಸಿರುವ ಅಮೆರಿಕದ ಸೈನಿಕರ ಸಂಖ್ಯೆಯನ್ನು ಇಳಿಸುವ-ಏರಿಸುವ ಯಮಳ ಪ್ರಶ್ನೆ ಬೈಡೆನ್ ರಾಜತಾಂತ್ರಿಕ ಅನುಭವವನ್ನು ಪರೀಕ್ಷೆಗೆ ಒಡ್ಡಲಿದೆ.

Leave a Reply

Your email address will not be published.