ವಿಷಮ ಕಲ್ಪನೆಗಳ ಕಳಚಿ ಪ್ರತಿಸಂಸ್ಕೃತಿ ಕಟ್ಟುವ ಅಗತ್ಯ

ಮಹಾಭಾರತದ ಕರ್ಣನ ಪಾತ್ರ ಆಗಿರಬಹುದು ಅಥವಾ ಏಕಲವ್ಯನೇ ಆಗಿರಬಹುದು, ಅವರು ಸಾಮರ್ಥ್ಯವನ್ನು ಮುಂದಿಟ್ಟುಕೊಡು ಹೋರಾಡುವ ಸಂದರ್ಭಗಳು ಬಂದಾಗ ಅವರ ಸಾಮರ್ಥ್ಯಕ್ಕೆ ಕವಡೆಕಾಸು ಬೆಲೆ ಕೊಡದೆ ಅವರನ್ನು ದೂರವಿಟ್ಟಿದ್ದನ್ನು ಇತಿಹಾಸ ಸಾರಿ ಹೇಳುತ್ತದೆ.

ಕನ್ನಡದ ದೈತ್ಯ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್ ಹೆಸರನ್ನು ಕೇಳಿದಾಕ್ಷಣ ಅದರ ಹಿಂದುಗಡೆ ಕೇಳಿಬರುವ ಇನ್ನೊಂದು ಶಬ್ಧವೆಂದರೆ ಅದುವೆ ಮೂರ್ತಿ. ಅದು ಸುಧಾ ಅಥವಾ ನಾರಾಯಣ ಆಗಿರಬಹುದು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದು, ಕೇವಲ ಹತ್ತು ಸಾವಿರ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಸಂಸ್ಥೆಯನ್ನು ಕಟ್ಟಿ ಜಗತ್ತಿಗೆ ಪರಿಚಯಿಸಿದ ಪರಿಶ್ರಮಿಗಳು ಇವರು. ಬದುಕಿನಲ್ಲಿ ಸಾಕಷ್ಟು ಅನುಭವದ ಏಳುಬೀಳುಗಳನ್ನು ಕಂಡ ನಾರಾಯಣಮೂರ್ತಿಯವರು ಒಬ್ಬ ಪ್ರಾಮಾಣಿಕ, ಚತುರ ಹಾಗೂ ದೂರದೃಷ್ಟಿಯುಳ್ಳ ವ್ಯಕ್ತಿ.

ಭವಿಷ್ಯದ ಕನಸುಗಳ ಗುರಿಯನ್ನೇ ಹೊತ್ತು ನಿಂತಿರುವ ಇಂಥÀವರ ಬಾಯಿಂದ ಬರುವ ಯಾವುದೇ ಮಾತುಗಳು ಬಹಳ ತೀಕ್ಷ್ಣ ಮತ್ತು ಗಂಭೀರವಾಗಿರುತ್ತವೆ. ಏಕೆಂದರೆ ರಾಷ್ಟ್ರ ಮತ್ತು ಜಾಗತಿಕ ಮಟ್ಟದಲ್ಲಿ ಹತ್ತಾರು ಹುದ್ದೆಗಳನ್ನು ಅನುಭವಿಸಿ ಹಲವು ದೇಶಗಳನ್ನು ಸುತ್ತಿ ಅಲ್ಲಿಯ ಸಂಸ್ಕೃತಿಯನ್ನು ಕಂಡು ಅರಿತವರು, ದೇಶವೊಂದು ಅಭಿವೃದ್ಧಿಗೆ ಯಾವ ಲಕ್ಷಣಗಳನ್ನು ಹೊಂದಿರಬೇಕು ಮತ್ತು ಹೊಂದಿರಬಾರದು ಎಂಬುದನ್ನು ಮನಗಂಡವರು.

ರಾಷ್ಟ್ರದ ಪ್ರಗತಿಗೆ, ಪಾಮಾಣಿಕತೆ, ಚುರುಕುತನ, ದೇಶಾಭಿಮಾನ ಮತ್ತು ಅರ್ಹತೆಯ ಮೇಲೆ ಕೆಲಸಕ್ಕೆ ಆಯ್ಕೆ ಈ ಎಲ್ಲವೂ ಮಹತ್ವದ್ದಾಗಿರುತ್ತದೆ ಎಂದು ಹೇಳುತ್ತಾ, ಅಪ್ರಾಮಾಣಿಕತೆ, ಉದಾಸೀನತೆ, ಅಸಡ್ಡೆ, ನಿರಭಿಮಾನದಿಂದ ಕೂಡಿರುವ ದೇಶ ಪ್ರಗತಿಯನ್ನು ಹೊಂದಲಾರದು; ಭಾರತೀಯ ಸಂಸ್ಕೃತಿಯು ಅರ್ಹತೆ, ಪ್ರಾಮಾಣಿಕತೆ, ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವಲ್ಲಿ ಸೋತಿದೆ ಎಂದು, ಪ್ರತಿಸಂಸ್ಕೃತಿಯ ನಿರ್ಮಾಣದ ಅವಶ್ಯಕತೆಯನ್ನು ಹೇಳುತ್ತಾರೆ. ಪ್ರತಿಸಂಸ್ಕೃತಿ ಎಂಬುದು ಕೆಡಹಿ ಇನ್ನೊಂದನ್ನು ಕಟ್ಟುವದಾಗಿರುತ್ತದೆ. ವಿಷಮ ಕಲ್ಪನೆಗಳನ್ನು ಕೆಡುಹುವುದರ ಅವಶ್ಯಕತೆಯ ಅರಿವು ನಮಗಾಗಬೇಕೆಂಬುದು ಅವರ ಚಿಂತನೆಯಾಗಿದೆ.

ಇಂತಹ ಹಲವು ಸಂಸ್ಕೃತಿಯ ಅವಲಕ್ಷಣಗಳು ದೇಶವನ್ನು ಬಾಧಿಸುತ್ತಿರುವುದು ಈಗಿನಿಂದಲ್ಲ ಎಂಬುದನ್ನು ಪೂರ್ತಿ ಒಪ್ಪಿಕೊಳ್ಳಲಾಗದಿದ್ದರೂ ಇದು ಸಹಸ್ರಾರು ವರ್ಷಗಳಿಂದ ಮುಂದುವರೆಯುತ್ತಿದೆ ಎಂಬುದರಲ್ಲಿ ಯಾವ ಸಂಶಯವಿಲ್ಲ. ಮಹಾಭಾರತದ ಕರ್ಣನ ಪಾತ್ರ ಆಗಿರಬಹುದು ಅಥವಾ ಏಕಲವ್ಯನೇ ಆಗಿರಬಹುದು, ಅವರು ಸಾಮರ್ಥ್ಯವನ್ನು ಮುಂದಿಟ್ಟುಕೊAಡು ಹೋರಾಟ ಮಾಡುವಂತಹ ಸಂದರ್ಭಗಳು ಬಂದಾಗ ಅವರ ಸಾಮರ್ಥ್ಯಕ್ಕೆ ಕವಡೆ ಕಾಸು ಬೆಲೆ ಕೊಡದೆ ಅವರನ್ನು ದೂರವಿಟ್ಟಿದ್ದನ್ನು ಇತಿಹಾಸ ಸಾರಿ ಹೇಳುತ್ತದೆ.

ಹೇಳಿಕೇಳಿ ಇದು ಸ್ಪರ್ಧಾತ್ಮಕ ಯುಗ. ಒಂದನ್ನು ಎದುರಿಸದೆ ಇನ್ನೊಂದನ್ನು ಪಡೆಯಲಾಗದು. ಜೀವವಿಕಾಸವಾದಿ ಡಾರ್ವಿನ್ ಹೇಳಿದಂತೆ ಶಕ್ತಿಯುತವಾದದ್ದು ಮಾತ್ರ ಬದುಕುಳಿಯುತ್ತದೆ. ಹಾಗಾಗಿ ಬದುಕುಳಿಯಲು ಸ್ಪರ್ಧೆ ಅನಿವಾರ್ಯವಾಗಿದೆ. ಮುಂದುವರೆದ ಜಪಾನ್, ಜರ್ಮನಿ, ಚೀನಾದಂತಹ ರಾಷ್ಟ್ರಗಳು ತಮ್ಮ ಪ್ರಜೆಗಳಲ್ಲಿ ಸ್ಪರ್ಧಾಮನೋಭಾವನೆಯನ್ನು ಬಿತ್ತಿ ಸ್ಪರ್ಧೆಗೆ ಅಣಿಮಾಡುತ್ತಾರೆ. ಒಲಿಪಿಂಕ್ಸನಂತಹ ಕ್ರೀಡೆಗಳಲ್ಲಿ ಚೀನಾದಂತಹ ರಾಷ್ಟ್ರಗಳು ಮನೆಮನೆಗೆ ಹೋಗಿ ಪ್ರತಿಭಾವಂತರನ್ನು ಹುಡುಕಿ, ಎಲ್ಲಾ ಸವಲತ್ತುಗಳನ್ನು ನೀಡಿ ಅವರನ್ನು ಸ್ಪರ್ಧೆಗೆ ಸಿದ್ಧಗೊಳಿಸುವ ಪರಿ ಆ ದೇಶಕ್ಕೆ ಭವಿಷ್ಯದ ಬಗ್ಗೆ ಇರುವ ಚಿಂತನೆಯನ್ನು ತೋರಿಸುತ್ತದೆ. ಹಾಗಂತ ನಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬಿತ್ತುವ ಯೋಜನೆಗಳಿಗೆ ಬರವಿದೆ ಅಂತಲ್ಲ. ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿವೆ. ಉದಾಹರಣೆಗೆ, TARE (Teacher associateship for research  excellence) ಐಐಟಿ, ಐಐಎಸ್‌ಇ, ಸಿಎಸ್‌ಐಆರ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮತ್ತು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕೆಲಸ ಮಾಡುವ ಅಧ್ಯಾಪಕರಿಗೆ ಸಂಶೋಧನೆ ಕೈಗೊಳ್ಳಲು ರೂ.5 ಲಕ್ಷದಿಂದ ತಿಂಗಳಿಗೆ ರೂ.1.27 ಲಕ್ಷದವರೆಗೆ ಫೆಲೋಶಿಪ್ ಕೊಡುವುದನ್ನು ನೋಡಬಹುದು. ಹಾಗೆಯೇ ಸಾಕಷ್ಟು ಯುವ ವಿಜ್ಞಾನಿ ಪುರಸ್ಕಾರಗಳು, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು, ಸಾಕಷ್ಟು ವಸತಿಯೋಜನೆಗಳನ್ನು ಹಾಕಿಕೊಂಡಿವೆ. ಆದರೆ ಅವು ಇನ್ನಾವುದೊ ದಾರಿ ಹಿಡಿದಿವೆ.

ಈಗ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿಯವರು ಭಾರತವನ್ನು ಜಗತ್ತಿನ ಕೌಶಲ್ಯ ರಾಜಧಾನಿಯನ್ನಾಗಿ ಮಾಡಲು ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ sಞiಟಟ Iಟಿಜiಚಿ ಎಂಬ ಯೋಜನೆ ರೂಪಿಸಿದೆ. ಇದು ಒಟ್ಟು ರೂ.1,121 ಕೋಟಿ ಮೀಸಲಿರಿಸಿ 2022ರ ವೇಳೆಗೆ 40.2 ಕೋಟಿ ಯುವಕರಿಗೆ ಕೌಶಲ್ಯವನ್ನು ವೃದ್ಧಿಸುವ ಯೋಜನೆಯಾಗಿದೆ. ಅದಕ್ಕೆಂದೇ ರಾಷ್ಟಿಯ ಕೌಶಲ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಈ ಯೋಜನೆಯಡಿ 18 ಲಕ್ಷ ಯುವಕರಿಗೆ ತರಬೇತಿ ನೀಡಲಾಗಿದೆ. ಆದರೆ ಕೇವಲ ಶೇ.12.4 ಮಂದಿಗೆ ಉದ್ಯೋಗ ಸಿಕ್ಕಿದೆ. ಇದು ಯೋಜನೆಯ ವೈಫಲ್ಯವನ್ನು ತೋರಿಸುತ್ತದೆ. ಇದರ ವೈಫಲ್ಯವನ್ನು ಅಧ್ಯಯನ ಮಾಡಲು ಶಾರದಾಪ್ರಸಾದರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಲಾಗಿದ್ದು, ಅದು ಸಮಗ್ರ ಅಧ್ಯಯನ ಮಾಡಿ, ಸರ್ಕಾರಗಳ ಅಡ್ಡಕಸುಬಿ ಪ್ರವೃತ್ತಿ ಮತ್ತು ನಿರ್ಲಕ್ಷö್ಯಗಳ ಬೆರಳು ಮಾಡಿ ತೋರಿಸಿತು.

18ಲಕ್ಷ ತರಬೇತಿ ಪಡೆದ ಯುವಕರಲ್ಲಿ ಕೇವಲ ಶೇ12.4 ಯುವಕರು ಮಾತ್ರ ಉದ್ಯೋಗವನ್ನು ಪಡೆಯಲು ಕಾರಣವೆಂದರೆ, ಯಾವುದೇ ಪ್ರಮಾಣ ಪತ್ರ, ತರಬೇತಿ ಇಲ್ಲದವರು ಯುವಕರಿಗೆ ತರಬೇತಿ ನೀಡಿದ್ದು. ಹೀಗಾದರೆ ಎಲ್ಲಿಂದ ಕೌಶಲ್ಯ ವಿಕಾಸವಾಗಬೇಕು?

ಇತ್ತೀಚೆಗೆ ಕೇಂದ್ರ ಸರ್ಕಾರವು ಯುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸಂಶೋಧನೆಯ ಪ್ರವೃತ್ತಿ ಬೆಳೆಸಿ ವಿಜ್ಞಾನಿಗಳನ್ನಾಗಿಸಲು ಸುಮಾರು 1500 ವಿದ್ಯಾಸಂಸ್ಥೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪಿಸಲು ಹೇಳಿದೆ. ಈಗಾಗಲೇ ಅರ್ಜಿ ಸಲ್ಲಿಸಿದ ಹಲವು ಸಂಸ್ಥೆಗಳು ಪ್ರಭಾವ ಬೀರಲು ಸಜ್ಜಾಗಿ ನಿಂತಿವೆ.

ಹಾಗೇನೆ ನಾರಾಯಣಮೂರ್ತಿಯವರು ಹೇಳಿದ ಇನ್ನೊಂದು ಪ್ರಮುಖ ವಿಚಾರ, ಒಬ್ಬರ ವಿಚಾರವನ್ನು ಇನ್ನೊಬ್ಬರು ಕದಿಯುವುದು. ಅದು ಇಂಥ ಆಧುನಿಕ ಯುಗದಲ್ಲಿ ಈ ಕದಿಯುವ ಕ್ರಿಯೆ ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ ಮೊದಲಾದ ಕ್ಷೇತ್ರದಲ್ಲಿ ನಡೆಯುತ್ತಿದೆ. ಇತ್ತೀಚಿಗೆ ಕನ್ನಡದ ಲೇಖಕರೊಬ್ಬರು ತಮ್ಮ ವಿದ್ಯಾರ್ಥಿಯ ಎಂ.ಫಿಲ್ ಪ್ರಬಂಧದ ಎಷ್ಟೋ ಪುಟಗಳನ್ನು ಯಥಾವತ್ತಾಗಿ ತಮ್ಮ ಕೃತಿಯಲ್ಲಿ ನಮೂದಿಸಿ ಕೊನೆಯಲ್ಲಿ ಕುಲಪತಿಗಳ ಕ್ಷಮಾಪಣೆ ಕೇಳುವ ಮುಖಾಂತರ ಸುಖಾಂತ್ಯ ಕಂಡಿದ್ದು ಎಲ್ಲರೂ ಗಮನಿಸಬಹುದು.

ಬಾಲಿವುಡ್‌ನ ಮಾದಕ ನಟಿಯಾದ ಸನ್ನಿ ಲಿಯೋನ್ ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡಲೆಂದು ತಮ್ಮದೆಂದು ಹೇಳಿ ಒಂದು ಕಲಾಕೃತಿಯನ್ನು ಹರಾಜಿಗೆ ಇಟ್ಟಿದ್ದರು. ಆದರೆ ಅದು ಫ್ರಾನ್ಸ್ ದೇಶದ ಪ್ರಸಿದ್ಧ ಚಿತ್ರಕಾರ ಮಲ್ಲಿಕಾ ಫಾವ್ರೆಯವರ ಕಲಾಕೃತಿಯ ಚೌರ್ಯವೆಂದು ಹೇಳಲಾಗಿ ಸಾಕಷ್ಟು ಆಕ್ಷೇಪಗಳು ಬಂದಿರುವದನ್ನು ಪತ್ರಿಕೆಯಲ್ಲಿ ಓದಿರುತ್ತೇವೆ. ಸಿನೇಮಾ ರಂಗಗಳಲ್ಲಂತೂ ಇದು ಸಾಕಷ್ಟು ರೇಜಿಗೆ ಹುಟ್ಟಿಸುವಂತೆ ಮಾಡಿವೆ. ಕೆಲವೇ ದಿನಗಳ ಹಿಂದಷ್ಟೇ ‘ಛಾಪಕ್’ ಚಿತ್ರದಲ್ಲಿ ನಟಿಸಿದ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಮೇಘನಾ ಗುಲ್ಜರ್ ಮೇಲೆ ರಾಕೇಶ ಭಾರ್ತಿ ಎಂಬವರು ತಮ್ಮ ಸ್ಕಿçಪ್ಟ್ ಅನ್ನು ಕದ್ದಿದ್ದಕ್ಕಾಗಿ ಕ್ರಿಮಿನಲ್ ಕೇಸನ್ನು ದಾಖಲಿಸಿರುವದು ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗಿರುವದನ್ನು ನೋಡಿದ್ದೇವೆ.

ದೇವರೇ ದುಃಖಿಸಿದ ಪ್ರಸಂಗ!

ಒಮ್ಮೆ ಅಮೆರಿಕ, ಜಪಾನ್, ಚೀನಾ ಮತ್ತು ಭಾರತ ದೇಶದ ಮುಖಂಡರೆಲ್ಲ ಕೂಡಿಕೊಂಡು ‘ಸಂಸ್ಕೃತಿಯ ಈ ಅವಲಕ್ಷಣಗಳು ದೇಶದಿಂದ ಎಂದು ದೂರವಾಗುತ್ತವೆ?’ ಎಂದು ದೇವರನ್ನು ಕೇಳಿದರಂತೆ.

ಆಗ ದೇವರು ಜಪಾನದವರಿಗೆ ‘ಒಂದು ವರ್ಷದಲ್ಲಿ’ ಎಂದು ಹೇಳಿ ಆಶೀರ್ವದಿಸಿದನಂತೆ. ಅದೇ ಪ್ರಶ್ನೆಗೆ ಅಮೆರಿಕಾದವರೆಗೆ ಎರಡು ವರ್ಷ ಎಂದು, ಚೀನಾದವರಿಗೆ ಮೂರು ವರ್ಷ ಎಂದು ಆಶೀರ್ವಾದ ಮಾಡಿದ.

ಕೊನೆಯಲ್ಲಿ ಭಾರತ ದೇಶದ ಪ್ರಧಾನಿ ಹೋಗಿ ಆಶೀರ್ವಾದ ಕೇಳಿದಾಗ ದೇವರು ಕಣ್ಣುಮುಚ್ಚಿ ಅಳುವುದಕ್ಕೆ ಪ್ರಾರಂಭಿಸಿದನಂತೆ. ಏಕೆಂದು ಪ್ರಶ್ನಿಸಿದರೆ ಈ ಸಮಸ್ಯೆಗಳು ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಹೇಳಿ ಮತ್ತೆ ದುಃಖಿಸುವದಕ್ಕೆ ಪ್ರಾರಂಭಿಸಿದನಂತೆ.

ಇದು ಹಾಸ್ಯವಾಗಿದ್ದರೂ ಮೂರ್ತಿಯವರು ಹೇಳಿದ ಮಾತಿಗೆ ಇಂಬು ಕೊಡುವಂತಿದೆ!

ಶಿಕ್ಷಣ ಸಂಸ್ಥೆಗಳೂ ಈ ದುಷ್ಕಾರ್ಯದಿಂದ ದೂರವಾಗಿಲ್ಲ. ಸಾಕಷ್ಟು ಬೋಧಕ ವರ್ಗವು ಕೃತಿ ಚೌರ್ಯದಲ್ಲಿ ಭಾಗಿಯಾಗಿದ್ದನ್ನು ಕಾಣುತ್ತೇವೆ. ಈ ವಿಷಯವನ್ನು ಕುರಿತು ಕಳೆದ ಸಾಲಿನ ಸಂಸತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸಂಸದರೂಬ್ಬರು ಪ್ರಸ್ತಾಪಿಸಿದ್ದರು. ಅಂತರರಾಷ್ಟಿçÃಯ ನಿಯತಕಾಲಿಕೆಗಳಿಗೆ ಕಳಿಸಿದ ಎಷ್ಟೋ ಲೇಖನಗಳು ಪ್ರಕಟವಾಗದೆ ವಾಪಸ್ಸಾಗಿ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ, ಕೃತಿಚೌರ್ಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದನ್ನು ನೆನೆಯಬಹುದು.

ಆನ್‌ಲೈನ್ ಕೃತಿಚೌರ್ಯವಂತೂ ಲೆಕ್ಕಕ್ಕೇ ಇಲ್ಲ. ಕೃತಿಚೌರ್ಯವನ್ನು ತಡೆಯಲು ‘ಆ್ಯಂಟಿ ಪ್ಲಜೇರಿಸಂ’ ಎಂಬ ತಂತ್ರಾಂಶವನ್ನು ಜಾರಿಗೆ ತಂದರೂ ಕೃತಿಚೌರ್ಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೆಯ ಸ್ಥಾನ ಹೊಂದಿದೆ. ಅಂದಮೇಲೆ ದೇಶದ ಜನತೆ ಮತ್ತು ಸರ್ಕಾರಗಳ ಬೌದ್ಧಿಕ ಚಟುವಟಿಕೆಗಳ ಕ್ರಿಯಾಶೀಲತೆ ಎಷ್ಟೆಂಬುದು ಗೊತ್ತಾಗುತ್ತದೆ. ಆದ್ದರಿಂದ ನಾರಾಯಣಮೂರ್ತಿಯವರ ಆಪಾದನೆಗಳಲ್ಲಿ ಯಾವ ಸಂಶಯವಿಲ್ಲ.

ಭಾರತದಲ್ಲಿ ದೇಶದ ಸಲುವಾಗಿ ಎಷ್ಟೋ ದೇಶಾಭಿಮಾನಿಗಳು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದನ್ನು ಸ್ಮರಿಸಬಹುದು. ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಭಾರತದ ಮೇಲೆ ದಾಳಿಮಾಡಿ ಪೋರಸ್‌ನನ್ನು ಸೋಲಿಸುತ್ತಾನೆ ಆಗ ಸೋತ ಪೋರಸನಿಗೆ ನಿನ್ನನ್ನು ಹೇಗೆ ನಡೆÀಸಿಕೊಳ್ಳಬೇಕು ಎಂದು ಕೇಳಿದಾಗ ಸೋತ ಪೋರಸ ಹೇಳಿದ್ದು, ‘ನನ್ನನ್ನು ರಾಜನಂತೆ ನಡೆಸಿಕೋ’ ಎಂದು. ಈ ಮಾತು ದೇಶದ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ.

ಪ್ರಾಚೀನ ಭಾರತದಲ್ಲಿ ದೇಶ ಮತ್ತು ತನ್ನ ಒಡೆಯನ ಸಲುವಾಗಿ ಪ್ರಾಣತ್ಯಾಗ ಮಾಡಿರುವದನ್ನು ಜೋಳವಾಳಿ, ವೇಳವಾಳಿ ಮತ್ತು ಗರುಡಪದ್ಧತಿಗಳ ಬಗ್ಗೆ ಹಲವಾರು ಶಾಸನಗಳ ಮೂಲಕ ತಿಳಿದುಕೊಳ್ಳುತ್ತೇವೆ. ಇಂತಹ ಸಂಸ್ಕೃತಿಗೆ ಅಪಚಾರವೆಸಗುವಂತೆ ಇಂದು ವಿಜಯ ಮಲ್ಯ, ನೀರವ್ ಮೋದಿಯಂಥವರು ಸಾವಿರಾರು ಕೋಟಿ ರೂಪಾಯಿಯನ್ನು ನುಂಗಿ ನೀರು ಕುಡಿದು ದೇಶ ಬಿಟ್ಟು ಪರಾರಿಯಾಗುತ್ತಿರುವದು ದೇಶದ ಮೇಲಿಟ್ಟಿರುವ ಅಭಿಮಾನ ಎಷ್ಟೆಂಬುದನ್ನು ತಿಳಿಸುತ್ತದೆ. ಇಂಥ ನಿರಭಿಮಾನಿಗಳಿಂದ ದೇಶದ ಪ್ರಗತಿಯ ಕನಸು ಕಾಣುವದಾದರೂ ಹೇಗೆ? ತತ್ಪರಿಣಾಮ ದೇಶದ ಪ್ರಗತಿ ಕುಂಠಿತ ಆಗಿದೆ, ಆಗುತ್ತಿದೆ.

ದೇಶದಲ್ಲಿ ತುಂಬಿರುವ ಅಸಡ್ಡೆ, ನಿರಭಿಮಾನ, ಕೃತಿಚೌರ್ಯ ಮತ್ತು ಅಪ್ರಾಮಾಣಿಕತೆ ಇವು ಮರೆಯಾಗಲು ಇನ್ನು ಎಷ್ಟೋ ವರ್ಷಗಳು ಉರುಳಬೇಕು!

 

Leave a Reply

Your email address will not be published.