ವಿಷಾದದ ದಾರಿಯೊಳಗೆ!

 

ಇಣುಕಿ ನೋಡಿದೆ
ಚದುರಿ ಹೋಗಿತ್ತು ನದಿಯ-
ಅಲೆಗಳಲಿ ನನ್ನದೆ ಬಿಂಬ
ಇರಲಿ ಬಿಡು ಇನ್ನೊಮ್ಮೆ ನೋಡಿಯೆ
ಬಿಡುವ ಎಂದು-
ಮತ್ತೊಮ್ಮೆ ಇಣುಕಿದೆ
ಮತ್ತೆ ಬಿಂಬ ಚದುರಿದೆ.
ತಲೆ ಕೆರೆದೆ
ಹೊಳೆಯಲಿಲ್ಲ, ಕಣ್ಣರಳಿಸಿದೆ ಕಾಣಿಸಲಿಲ್ಲ!
ಎದೆ ಭಾರದಲ್ಲಿ ಹೊರಳಿದೆ!

ನೆತ್ತಿಯ ಮೇಲೆ ನೇಸರನಿದ್ದ
ಕಾಲ ಬುಡದಲ್ಲಿ ನೆರೆಳಿತ್ತು.
ನನ್ನದೆ ನೆರೆಳು ಒದೆಯುತ್ತಾ ತುಳಿಯುತ್ತಾ ಹೊರಟೆ-
ಜನ ದಿನ ನಡೆದಾಡುವ ದಾರಿಯೊಳಕ್ಕೆ.
ವಾರದ ಹಿಂದೆಯೆ ಹಳಸಿದ ಅನ್ನ ಸಾರಿನ ವಾಸನೆ ಮೂಗಿಗೆ ಅಡರಿತು
ವಾಕರಿಕೆ ಬಂತು,ಆದರೆ ವಾಂತಿಯಾಗಲಿಲ್ಲ.
ತಡೆಯಲಾಗಲಿಲ್ಲ ಓಡಿದೆ ಆ ದಾರಿ ಪಾರಾಗಲು

ಅಟ್ಟಿಸಿ ಕೊಂಡು ಬರುತ್ತಿತ್ತು ಹಳಸಿದ ವಾಸನೆ
ಬೆನ್ನು ಹತ್ತಿದ ಬೇತಾಳದಂತೆ.
ಮೂಗು ಮುಚ್ಚಿಕೊಂಡಷ್ಟು ಹೊತ್ತು ಉಸಿರು ಬಿಗಿಯಾಗಿತ್ತು,
ಆದರೆ ವಾಸನೆ ದೂರವಿತ್ತು.
ಮತ್ತೆ ಹೊರಟು ಬಿಟ್ಟೆ ಬಿರ ಬಿರನೆ. ವಾಸನೆಯಿಂದ
ತಪ್ಪಿಸಿಕೊಳ್ಳಲು.
ಆದರೆ ಹೋದ ದಾರಿ ಯಾವುದಿತ್ತು?– ಎನ್.ಧೀರೇಂದ್ರ ನಾಗರಹಳ್ಳಿ

 

I’m Not OK, You’re OK
I’m Not OK, You’re Not OK
I’m OK, You’re Not OK
I’m OK, You’re OK
-Thomas Anthony Harris

ಸೂಜಿಗವನ

ಅವನ ಸೊತ್ತು ಆಗದ ನನ್ನನ್ನು ಅನೇಕರು
ಕಾಮುಕ ಕಣ್ಣಲ್ಲಿ ಕಂಡರೆ ಅವನಿಗೇಕೆ ಕೋಪ..?
ಅವನ ಸೊತ್ತು ಆಗಬಯಸಿದ ನನ್ನನ್ನು ಅನೇಕರು
ಒಪ್ಪಿಗೆಯ ಕಣ್ಣಲ್ಲಿ ಕಂಡರೆ ಅವನಿಗೇಕೆ ಕೋಪ..?

-ಸೂಜಿ

ಬಾಕಿ

ಒಂದೇ ಬಣ್ಣ ಹೊಂದಿರುವ ರಕ್ತ ಒಳಗಿಟ್ಟೆ
ಕಪ್ಪು ಬಿಳುಪು ಗೋದಿ ವರ್ಣದ ಚರ್ಮ ಸುತ್ತಿಬಿಟ್ಟೆ

ಜಗಕೆ ನುಡಿಯಲು ನಾಲಿಗೆ ಒಂದು ಕೊಟ್ಟೆ
ಪ್ರೀತಿ-ದ್ವೇಷಕೆ ಹಲವು ನುಡಿ ಗಳನಿಟ್ಟೆ

ಜೀವಜಾಲದ ವಿಹಾರಕ್ಕೆ ಅವಯವಗಳು- ಒಡ್ಡಿದರೆ ಕೈ,
ನಡೆದರೆ ಕಾಲು, ನೆಲ ಕಚ್ಚಿದರೆ ಪ್ರಾಣಿ, ಮುಂಚಾಚಿದರೆ ಮಾನವ

ಉಳಿಸಲಿಲ್ಲ ಒಂದನೂ, ಹೊತ್ತು ಬಿಟ್ಟೆ ‘ಸಾಕಿ’
ಉಸಿರನೂ ಒಯ್ದು ಬಿಡು ‘ದಮನ’ ಉಳಿದಿಲ್ಲ ಬಾಕಿ.

-ಡಿ.ಎಂ.ನದಾಫ್

Leave a Reply

Your email address will not be published.