‘ಶಾಸ್ತ್ರೀಯ ಸಂಗೀತದ ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’

ಮೈಸೂರಿನ ಕೊಳಲುವಾದಕ ಚಂದನ್ ಕುಮಾರ್ ಪ್ರಖ್ಯಾತ ಸಂಗೀತ ಪರಂಪರೆಯ ಕುಟುಂಬಕ್ಕೆ ಸೇರಿದವರು; ಪಿಟೀಲು ವಾದನದ ದಂತಕತೆ ಎನ್ನಿಸಿದ ಸಂಗೀತ ರತ್ನ ಟಿ.ಚೌಡಯ್ಯ ಅವರ ಮರಿಮೊಮ್ಮಗ. ಹಾಗಾಗಿ ಬಾಲ್ಯದಿಂದಲೇ ಸಂಗೀತದ ವಾತಾವರಣದಲ್ಲಿ ಬೆಳೆದ ಚಂದನ್ ಕುಮಾರ್ ಅವರದು ಕೊಳಲು ನುಡಿಸುವಿಕೆಯ ಹೊಸ ಸಾಧ್ಯತೆಗಳತ್ತ ಸದಾ ತುಡಿಯುವ ಸೃಜನಶೀಲ ಮನಸ್ಸು. ಹಾಗಾಗಿ ಅವರ ಪ್ರತಿಯೊಂದು ಸಂಗೀತ ಕಛೇರಿ ತಾಜಾತನದಿಂದ ಕೂಡಿರುತ್ತದೆ. ಮೈಸೂರು ವಿವಿಯಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಗೀತ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವುದು ಚಂದನ್ ಅವರ ಇನ್ನೊಂದು ವಿಶೇಷ. ಅವರನ್ನು ಲೇಖಕ ರಂಗಸ್ವಾಮಿ ಮೂಕನಹಳ್ಳಿ ಸಮಾಜಮುಖಿಗಾಗಿ ಸಂದರ್ಶಿಸಿದ್ದಾರೆ.

ಕರ್ನಾಟಕದ ಸಂಗೀತ ಕ್ಷೇತ್ರದಲ್ಲಿ ಹೊಸತೇನು? ಹೊಸಬರಾರು?

ಯಾವ ಕಲಾಪ್ರಕಾರವಾದರೂ ಸರಿ, ಅದು ಹರಿಯುವ ನದಿಯಂತೆ; ಕಾಲಕಾಲಕ್ಕೆ ಅದು ತನ್ನ ಸ್ವರೂಪವನ್ನು ತಾಳುತ್ತದೆ. ಹಾಗೆಯೇ, ನಮ್ಮ ಕರ್ನಾಟಕ ಸಂಗೀತವು ಸಹ ಈ 22ನೆಯ ಶತಮಾನಕ್ಕೆ ಸರಿದೂಗುವಂತೆ ಸ್ವರೂಪಗೊಂಡಿದೆ. ಕೆಲವು ಸ್ವಾಗತಾರ್ಹ, ಕೆಲವು disturbing.

ನಾವೆಲ್ಲರೂ ಒಳಗಾಗಿರುವ ಒತ್ತಡ, ಸಮಯದ ಅಭಾವ, ವೇಗದ ಜೀವನ, ಫಾಸ್ಟ್ ಮ್ಯೂಸಿಕ್, ಫಾಸ್ಟ್ ಫುಡ್ ಮುಂತಾದವುಗಳಂತೆ ನಮ್ಮ ಕರ್ನಾಟಕ ಸಂಗೀತ ಮಾರ್ಪಾಟಾಗಿದೆ. ಹಿಂದಿದ್ದ (ಅಂದರೆ ನನ್ನ ಬಾಲ್ಯದಲ್ಲಿ ನಾನು ವೀಕ್ಷಿಸಿ, ಕೇಳಿದ್ದ) ಮೂರು-ಮೂರೂವರೆ ಗಂಟೆಗಳ ಅವಧಿಯು ಈಗ ಎರಡು ಗಂಟೆಯ ಅವಧಿಗೆ ಇಳಿದಿದೆ. ಅದರಲ್ಲೂ ಸೌಂಡ್ ಚೆಕ್, ಕಲಾವಿದರ ಪರಿಚಯ, ವಂದನಾರ್ಪಣೆ ಇವುಗಳನ್ನು ಹೊರತುಪಡಿಸಿದರೆ, ಒಂದೂವರೆ-ಒಂದುಮುಕ್ಕಾಲು ಗಂಟೆಗಳ ಕಾರ್ಯಕ್ರಮ ಸ್ಟ್ಯಾಂಡರ್ಡ್ ಫಾರ್ಮೆಟ್ ಆಗಿದೆ.

ಮೂರೂವರೆ ಗಂಟೆಯ ಸಂಗೀತ ಕಛೇರಿಯನ್ನು ಒಂದೂವರೆ ಗಂಟೆಯ ಮಿತಿಗೆ ಅಳವಡಿಸಿಕೊಳ್ಳುವ ಸವಾಲು ಇಂದಿನ ಯುವ ಸಂಗೀತಗಾರರ ಮೇಲಿದೆ. ಈ ವಸ್ತುಸ್ಥಿತಿಯನ್ನು ನಿರ್ಲಕ್ಷಿಸಲಾಗದು.

ಹೊಸಬರ್ಯಾರು?

ಮಾಧ್ಯಮದ ಅತಿವೃಷ್ಟಿಯೆನ್ನಬಹುದು. ಹಿಂದಿನವರಂತೆ ಪ್ರಚಾರದ ಅಭಾವ ಈಗ ಇಲ್ಲ. ಯೂಟ್ಯೂಬ್, ಎಫ್‍ಬಿ, ಇನ್‍ಸ್ಟಾಗ್ರಾಮ್, ಟ್ವಿಟ್ಟರ್, ರಿಯಾಲಿಟಿ ಶೋ, ದಿನ/ಮಾಸಿಕ ಪತ್ರಿಕೆಗಳು ಸಾಕಷ್ಟು ಪ್ರಚಾರಕ್ಕೆ ಅನುವು ಮಾಡಿಕೊಡುತ್ತವೆ. ಪ್ರಚಾರ ಅಷ್ಟೇ ಸುಲಭ ಹಾಗೂ ಗೆಲ್ಲುವುದು ಅಷ್ಟೇ ಕಷ್ಟ. There is an abundent inflow of exceptionally talented youngsters. In this context, our artform will have a rich future, I think.

ಭಾರತೀಯ ಸಂಗೀತ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಅನನ್ಯ ಸ್ಥಾನವಿದೆ. ಬೇರೆಲ್ಲಿಗಿಂತ ಇಲ್ಲಿ ಅತ್ಯಂತ ವೈವಿಧ್ಯಮಯ ಜನಪದ ಮತ್ತು ಲಘು ಸಂಗೀತ ಪರಂಪರೆಗಳು ತಮ್ಮ ಶ್ರೀಮಂತಿಕೆಯನ್ನು ಮೆರೆದಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮೈಸೂರು ಮಹಾಸಂಸ್ಥಾನ, ರಾಜಮನೆತನವನ್ನು ನಾವು ಎಂದೆಂದಿಗೂ ಸ್ಮರಿಸಬೇಕು. ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಮಹಾಪ್ರಭುಗಳನ್ನು ಈ ನಿಟ್ಟಿನಲ್ಲಿ ವಿಶೇಷವಾಗಿ ನಾವು, ಸಂಗೀತಗಾರರು ಸ್ಮರಿಸಲೇಬೇಕು. ಅವರ ರಾಜಭಾರದಲ್ಲಿ ಸಂಗೀತ ಕಾರ್ಯಕ್ರಮಗಳ ಸರಣಿ ಯಾತ್ರೆಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಂ ಸಹೇಲ್ ಅವರನ್ನು ತಮ್ಮ ದರ್ಬಾರಿಗೆ ಆಹ್ವಾನಿಸಿ; ಅವರ ಸಂಗೀತ ರಸಧಾರೆಗೆ ತಲೆಬಾಗಿ, ಮಹಾಪ್ರಭುಗಳು ಉಸ್ತಾದರನ್ನು ಇಲ್ಲಿಯೇ ನೆಲೆಸಿ ನಮ್ಮವರಿಗೂ ಈ ವಿದ್ಯೆಯನ್ನು ಧಾರೆ ಎರೆಯಬೇಕಾಗಿ ವಿನಂತಿಸಿಕೊಂಡರಂತೆ. ಅವರಿಗೆ ಧಾರವಾಡದಲ್ಲಿ ಹಲವು ವರ್ಷಗಳ ರಾಜಾಶ್ರಯ ನೀಡಿದ್ದ ಕಾರಣವೇ, ಸವಾಯಿ ಗಂಧರ್ವ ಎಂದೇ ಖ್ಯಾತರಾಗಿದ್ದ ಪಂಡಿತ್ ರಾಮಚಂದ್ರ ಕುಂದಗೋಳ್ಕರ್, ಭಾರತರತ್ನ ಭೀಮಸೇನ ಜೋಶಿ, ಪದ್ಮವಿಭೂಷಣ ಶ್ರೀಮತಿ ಗಂಗೂಬಾಯಿ ಹಾನಗಲ್ ಮುಂತಾದವರು ನಮ್ಮ ಕನ್ನಡ ನಾಡಿನಲ್ಲಿ ಅವತರಿಸಿದರು. ಶಾಸ್ತ್ರೀಯ ಸಂಗೀತದ ಈ ಎರಡೂ ಪದ್ಧತಿಗಳು ನಮ್ಮ ರಾಜ್ಯದಲ್ಲಿ ಮಾತ್ರ ನೆಲೆ ಮಾಡುವುದಕ್ಕೆ ಇದು ಮುಖ್ಯವಾದ ಕಾರಣ.

ಲಘು ಶಾಸ್ತ್ರೀಯ, ಭಾವಗೀತೆ, ಜನಪದ -ಈ ಎಲ್ಲ ಪ್ರಕಾರಗಳು ಆಯಾ ಪ್ರದೇಶದ ಸಂಸ್ಕೃತಿ ಜೊತೆಗೆ ಮೇಳೈಸಿವೆ.

ಬೆಂಗಳೂರಿನ ಪರಿಸರ ಪಾಶ್ಚಾತ್ಯ ಸಂಗೀತಗಳಿಗೂ ಆಸರೆ ನೀಡಿದೆ. ಕನ್ನಡದ ಸಿನಿಮಾ ಸಂಗೀತವೂ ತನ್ನ ನಾದಲಯಗಳಿಗೆ ಹೆಸರು ಮಾಡಿದೆ. ಇವುಗಳ ನಡುವೆ ಶಾಸ್ತ್ರೀಯ ಸಂಗೀತ ತನ್ನ ಹಿಂದಿನ ಛಾಪು ಕಳೆದುಕೊಳ್ಳುತ್ತಿದೆಯೆ?

ಪ್ರಸ್ತುತ ಬೆಂಗಳೂರು, ನಮ್ಮ ದೇಶದಲ್ಲೇ ನಾಗಲೋಟದಲ್ಲಿ ಬೆಳೆಯುತ್ತಿರುವ ನಗರಿ. ಹಿಂದೆ ದೆಹಲಿ, ಮುಂಬೈ, ಕಲ್ಕತ್ತ ಹಾಗೂ ಮದರಾಸುಗಳನ್ನು ಹೇಗೆ ಕಾಸ್ಮೊಪಾಲಿಟಿನ್ ನಗರಗಳೆಂದು ಕರೆಯಲ್ಪಡುತ್ತಿತ್ತೋ ಹಾಗೇನೇ ಅಥವಾ ಇನ್ನೂ ಒಂದು ಕೈ ಮೇಲಂತೆ ಬೆಂಗಳೂರಿನ ವ್ಯಾಪ್ತಿ. ಇದು ಜನಸಂಖ್ಯೆಯಲ್ಲಿ, ಉದ್ಯಮದಲ್ಲಿ, ವಾಣಿಜ್ಯದಲ್ಲಿ, ಸಂಸ್ಕೃತಿ (ಮಿಶ್ರ ಸಂಸ್ಕೃತಿ )ಯಲ್ಲಿ ಸಾಕಷ್ಟು ಪರಿವರ್ತನೆ ಹೊಂದಿದೆ. ಮೊದಲು ಹೇಳಿದ ನಾಲ್ಕು ರಾಜಧಾನಿಗಳಲ್ಲಿ ಮೊದಲಿನಿಂದಲೂ ಆ ಕಾಸ್ಮೊಪಾಲಿಟಿನ್ ಹಾಗೂ ಪ್ರಿಮಿಟಿವ್ ಆರ್ಟ್ ಫಾರ್ಮ್ ನ ಬೆಸುಗೆ ಇದ್ದುದರಿಂದಲೊ ಏನೋ ಅಲ್ಲಿ ಆಯಾ ಪ್ರಕಾರಗಳ ಮೂಲಸ್ವರೂಪ ಅಷ್ಟೊಂದು ಬದಲಾಗಿಲ್ಲ. ಪ್ರಾಯಶಃ ಈ ಎರಡು ದಶಕಗಳಿಂದ ಬೆಂಗಳೂರಿನ ಬೆಳವಣಿಗೆಯನ್ನು ಗಮನಿಸಿದರೆ ಸಾಕಷ್ಟು ಒಳ್ಳೆಯ ಬೆಳವಣಿಗೆಗಳೂ ಆಗಿದೆ. ಸಂಗೀತ ಸಮಾವೇಶ, ಸಭೆಗಳ ಸಂಖ್ಯೆಗಳೂ ಹೆಚ್ಚಾಗಿವೆ. ಇದು ಸ್ವಾಗತಾರ್ಹ. ಕಲೆ ಬೆಳೆಯಬೇಕಲ್ಲವೇ!

ಆದರೆ ಈ ನಿಟ್ಟಿನಲ್ಲಿ, ಕಾಸ್ಮೊಪಾಲಿಟಿನ್ ಸಂಸ್ಕೃತಿಯಲ್ಲಿ ಬೆರೆತು, ಅನಘ್ರ್ಯರತ್ನವಾದ ನಮ್ಮ ಶಾಸ್ತ್ರೀಯ ಸಂಗೀತದ ಮೌಲ್ಯಗಳು dilute ಆಗಬಾರದೆಂಬುದೇ ನನ್ನ ಆಸೆ. ಆಯಾ ಕಲಾ ಪ್ರಕಾರಗಳು, ತನ್ನದೇ ಆದ ವ್ಯಕ್ತಿತ್ವವನ್ನು ಒಳಗೊಂಡಿವೆ. ಹಾಗೆಯೇ ಶತಮಾನಗಳಿಂದ ಬಂದ ಈ ಶ್ರೀಮಂತ ಶಾಸ್ತ್ರೀಯ ಕಲಾಪ್ರಕಾರವು ತನ್ನ ಶ್ರೀಮಂತಿಕೆಯನ್ನು ಕಲುಷಿತಗೊಳದೆ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು.

ಕಳೆದ ಎರಡು ದಶಕಗಳಲ್ಲಿ ಕರ್ನಾಟಕದ ಸಂಗೀತ ಕ್ಷೇತ್ರ ಬದಲಾವಣೆ ಕಂಡಿದೆ. ಹಿಂದೂಸ್ತಾನಿ-ಕರ್ನಾಟಕಿ ದಿಗ್ಗಜರೆಲ್ಲರೂ ಕಣ್ಮರೆಯಾಗಿದ್ದಾರೆ. ಆದರೆ ಹೊಸ ಪೀಳಿಗೆಯ ಅಷ್ಟೇ ಸಮರ್ಥ ಶಾಸ್ತ್ರೀಯ ಹಾಡುಗಾರ-ವಾದ್ಯಗಾರರನ್ನು ಗುರುತಿಸಿ ಬೆನ್ನುತಟ್ಟುವಲ್ಲಿ ನಾವು ಹಿಂಜರಿದಿದ್ದೇವೆಯೇ?

ತಾವು ಹೇಳುವುದು ಅಕ್ಷರಶಃ ಸತ್ಯ. ಕಳೆದ ಎರಡು ದಶಕಗಳಲ್ಲಿ; there has been a huge shift in the system, not only in music, but in every walk of life. With the invention of internet there has been tremendous change in the lives of mankind indeed. The huge magnitude of change came with the entry of mobile
phones. With the internet and mobile, its easier to track talents.
In past, it was difficult to get the contact of artists for various
resons. Now it’s easier.

ಈ ನಿಟ್ಟಿನಲ್ಲಿ ಸಂಗೀತದ ವ್ಯಾಪ್ತಿ, ತಿಳಿವಳಿಕೆ ಖಂಡಿತವಾಗಿಯೂ ಹೆಚ್ಚಿದೆ. ಆದರೆ ಅದರ ಸದುಪಯೋಗದ ಬದಲಾಗಿ ಶ್ರದ್ಧೆ, ಅರ್ಪಣೆ, ತಲ್ಲೀನತೆಗಳು ಅಷ್ಟೇ ಪಾತಾಳಕ್ಕೆ ಇಳಿದಿವೆ ಎನ್ನಬಹುದು.

ಈ ಎರಡು ದಶಕಗಳ ನಾಗಾಲೋಟ ವೇಗವು ಕೊಂಚ ಸ್ಥಿಮಿತಗೊಂಡು, saturation ಆದನಂತರ ಸ್ವಲ್ಪ ಅನುಕೂಲವಾಗಬಹುದು! ಗೊತ್ತಿಲ್ಲ ಈ ಕೋವಿಡ್-19 ನಮ್ಮ ಮೂಲಭೂತ ಆತ್ಮಗಳಿಗೆ, ಭಾವನೆಗಳಿಗೆ, ಸಂಸ್ಕೃತಿಗೆ ನಮ್ಮನ್ನು ಮತ್ತೆ ಸೇರಿಸಿದಂತೆ ಇದೆ -ಇದನ್ನು ಒಳ್ಳೆಯ ರೀತಿಯಲ್ಲಿ ಭಾವಿಸಿದರೆ. ಅಗಲಿಹೋದ ಜೀವಗಳಿಗೆ ನನ್ನ ಹೃದಯ ಕರಗಿದೆ. ಜೀವನದ ಮೌಲ್ಯ ಕಲಿಸಿ ಆಯ್ತು. ಇನ್ನು ಹೊರಟುಹೋಗಲಿ!

ಹೊಸ ಸಂಗೀತ-ಸಂಗೀತಗಾರರನ್ನು ಮತ್ತು ಹೊಸ ಪ್ರಯೋಗ ಗಳನ್ನು ಮೆಚ್ಚುವ ಕೆಲಸದಲ್ಲಿ ನಾವು ಹಿಂದೆ ಬಿದ್ದಿದ್ದೇವೆಯೇ? ಶಾಸ್ತ್ರೀಯ ಸಂಗೀತ ಕಲಿಕೆಗೆ ಸೂಕ್ತ ವಾತಾವರಣ ಸೃಷ್ಟಿಸುವಲ್ಲಿ ನಾವು ಸೋತಿದ್ದೇವೆಯೇ?

ಸಾಕಷ್ಟು ಪ್ರತಿಭಾವಂತ ಕಲಾವಿದರು ನಮ್ಮಲ್ಲಿ ಬಂದಿದ್ದಾರೆ. ಅತ್ಯಂತ ಚಾಲ್ತಿಯಲ್ಲೂ ಇದ್ದಾರೆ. ಹಿಂದಿನಂತೆ ಅವಕಾಶಗಳಿಗೆ ಭಗೀರಥ ಪ್ರಯತ್ನದ ಅಗತ್ಯವಿಲ್ಲ. ಆದರೆ ನಮ್ಮ ಅಮೂಲ್ಯ ಶಾಸ್ತ್ರೀಯ ಸಂಗೀತವನ್ನು, ಅದರ ಶಾಸ್ತ್ರೀಯ ಕ್ರಮದಲ್ಲಿ ಅಧ್ಯಯನ, ಅಧ್ಯಾಪನ ಹಾಗೂ ಪ್ರದರ್ಶನ ಮಾಡಬೇಕು. ಬೇರೆ ಕಲಾ ಪ್ರಕಾರದ ರಸವನ್ನು ಇದಕ್ಕೆ ಮಿಶ್ರಿಸಿ, ಇದನ್ನು ವಾಣಿಜ್ಯವಸ್ತುವನ್ನಾಗಿ ಮಾಡದೆ, ಇದರ ಸ್ವಂತ ಶ್ರೀಮಂತಿಕೆಯ ಪ್ರಚಾರಕ್ಕೆ ನಾವು ದೃಷ್ಟಿ ವಹಿಸಬೇಕು. ಅತಿ ಆರಂಭದ ಕಲಿಕೆಯ ಅವಸ್ಥೆಯಲ್ಲಿಯೇ ಆನ್‍ಲೈನ್‍ಗೆ ಮಾರುಹೋಗದೆ ಗುರುಗಳಿಂದ ಮುಖಾಮುಖಿ ಪಾಠಗಳನ್ನು ಗಳಿಸಿ ನಂತರ ಆನ್‍ಲೈನ್‍ಗೆ ಹೋಗುವುದು ಒಳಿತು. ಲೈವ್ ಕಾರ್ಯಕ್ರಮಗಳನ್ನು ವೀಕ್ಷಿಸಬೇಕು. ಅದರಲ್ಲಿನ ತರಂಗಗಳನ್ನು ನಮ್ಮೊಳಗೆ ತೆಗೆದುಕೊಳ್ಳುವುದು ಒಂದು ಕಲಿಕೆಯ ಅಂಶ. ಗುರುಗಳಲ್ಲಿ ಶ್ರದ್ಧೆ, ಭಕ್ತಿ ಎಷ್ಟೇ out of fashion ಅನಿಸಿದರೂ, ಶ್ರುತಿ ಶುದ್ಧತೆ, ಸುಸ್ವರ, ಮಧುರತೆ ಯಾವಾಗಲೂ out of fashion ಅಲ್ಲ ಅಲ್ಲವೇ!

ಕನ್ನಡದ ಲಘು ಶಾಸ್ತ್ರೀಯ ಹಾಡುಗಾರಿಕೆ ಹೆಸರು ಪಡೆದಿದ್ದರೂ ಚಂದನವನದ ಸಂಗೀತ ಹಿಂದಿ-ತಮಿಳು ಸಿನಿಮಾ ಸಂಗೀತದ ವೈವಿಧ್ಯ-ಹಿರಿವಂತಿಕೆಯಿಂದ ಬಹಳಷ್ಟು ಹಿಂದಿದೆ. ಬೇರೆ ಭಾಷೆಗಳ ಟೆಲಿವಿಶನ್ ಸ್ಪರ್ಧೆಗಳಲ್ಲಿ ಕಂಡುಬರುವಷ್ಟು ಪ್ರತಿಭೆ ಕನ್ನಡದಲ್ಲಿ ಏಕಿಲ್ಲ?

ಯಾವ ಭಾಷೆಯ ಪ್ರಾದೇಶಿಕ-ಸಂಸ್ಕøತಿಯನ್ನು ನೋಡಿದರೂ, ನಾವು ಸ್ವಲ್ಪ ಮಟ್ಟಕ್ಕೆ ಇನ್ನೂ ಬೆಳೆಯಬೇಕೆನಿಸುತ್ತದೆ. ಅದು ಚಲನಚಿತ್ರವಾಗಲೀ, ಅಲ್ಲಿಯ ಪ್ರಾದೇಶಿಕ ಜನಪದ/ಭಾವಗೀತೆ/ಸಾಂಸ್ಕೃತಿಕ ಚಟುವಟಿಕೆ ವಹಿವಾಟುಗಳಾಗಲಿ, ಬಹಳ ದೊಡ್ಡ ಮಟ್ಟದಲ್ಲಿವೆ. ಹಾಗೆಯೇ ವಿದೇಶಗಳಲ್ಲಿಯೂ ಸಹ, ಪ್ರಾದೇಶಿಕ ಸಂಸ್ಥೆಗಳು (ಅಂದರೆ, ನಮ್ಮ ಭಾರತೀಯರೇ ಅಲ್ಲಿ ನೆಲೆಸಿ ತಮ್ಮ ಪ್ರಾಂತದ ಸಂಸ್ಥೆಗಳನ್ನು ಕಟ್ಟಿ ಹೆಮ್ಮರವಾಗಿಸಿದ್ದಾರೆ) ಈ ನಿಟ್ಟಿನಲ್ಲಿ ನಾವು ನಮ್ಮ ಪ್ರತ್ಯೇಕತೆಯನ್ನು ಕಳೆದುಕೊಂಡಿದ್ದೇವೋ ಅನಿಸುತ್ತದೆ.

ಈ ಕಾಸ್ಮೊಪಾಲಿಟಿನ್ ಸಂಸ್ಕøತಿಯು ನಮ್ಮನ್ನು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ ಎಂಬಂತೆ ಮಾಡಿದೆ ಎನಿಸುತ್ತದೆ.

ಸಂಗೀತವನ್ನ ಬದುಕಾಗಿ, ಕೆಲಸವನ್ನಾಗಿ ಆರಿಸಿಕೊಳ್ಳುವ ಯುವ ಜನತೆಗೆ ನಿಮ್ಮ ಕಿವಿ ಮಾತೇನು ?

ಧೈರ್ಯ, ಸಾಹಸ, ನಮ್ಮ ಮೇಲೆ ನಮಗೆ ಸ್ವವಿಶ್ವಾಸ ಇದ್ದರೆ ಸಂಗೀತವನ್ನು ವೃತ್ತಿಯಾಗಿ ಸ್ವೀಕರಿಸಬಹುದು. ಕೆಲವರು ಕೇವಲ ಗುರುಗಳಾಗಿ, ಕೆಲವರು ಕೇವಲ performers ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಎರಡರ ಬೆಸುಗೆ ಕೊಂಚ security of life ಅನ್ನು ಕೊಡುತ್ತದೆ.

ಸಂದರ್ಶನ: ರಂಗಸ್ವಾಮಿ ಮೂಕನಹಳ್ಳಿ

Leave a Reply

Your email address will not be published.